Tag: New Look

  • ದರ್ಶನ್ ಪತ್ನಿಯ ಹೊಸ ಲುಕ್ ವೈರಲ್

    ದರ್ಶನ್ ಪತ್ನಿಯ ಹೊಸ ಲುಕ್ ವೈರಲ್

    ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijaylakshmi Darshan) ಇನ್ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಕಡು ನೀಲಿ ಬಣ್ಣದ ಉಡುಗೆಯಲ್ಲಿ ವಿಜಯಲಕ್ಷ್ಮಿ ಮಿಂಚಿದ್ದಾರೆ. ದರ್ಶನ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ವಿಜಯಲಕ್ಷ್ಮಿಯವರನ್ನ ಭೂಮಿ ತೂಕದ ಹೆಣ್ಣು ಎಂದು ವರ್ಣಿಸುತ್ತಿದ್ದಾರೆ ಫ್ಯಾನ್ಸ್.ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ದಕ್ಷಿಣದ ಹೆಸರಾಂತ ನಟ ಶ್ರೀಮನ್ ಎಂಟ್ರಿ

    ಇನ್ಸ್ಟಾಗ್ರಾಂನಲ್ಲಿ ಹೊಸ ಫೋಟೋ ಶೇರ್ ಮಾಡಿರುವ ವಿಜಯಲಕ್ಷ್ಮಿ ಮಗನೊಟ್ಟಿಗೆ ಕೂಡ ಪೋಸ್ ಕೊಟ್ಟಿದ್ದಾರೆ. ಪುತ್ರ ವಿನೀಶ್ ಕೈಯಲ್ಲಿ ಸಾಕುನಾಯಿಯನ್ನು ಎತ್ತಿಕೊಂಡಿದ್ದು, ನಾಯಿಗೆ ತೊಡಿಸಿರುವ ಉಡುಗೆ ಮೇಲೆ `ಬಾಸ್’ ಎಂದು ಹೆಸರು ಇರುವುದು ವಿಶೇಷ. ಈ ಮೂಲಕ ದರ್ಶನ್‌ರಂತೆ ಮಗ ವಿನೀಶ್ ಕೂಡ ಪ್ರಾಣಿಪ್ರೇಮಿ ಎನ್ನುವುದು ಗೊತ್ತಾಗಿದೆ. ಸದ್ಯ ಫೋಟೋಸ್ ಸಕತ್ ವೈರಲ್ ಆಗುತ್ತಿದೆ.

    ಜೈಲು ಸೇರಿದ್ದ ದರ್ಶನ್‌ರನ್ನು (Actor Darshan) ಜಾಮೀನು ಕೊಡಿಸಿ ಬಿಡಿಸಿಕೊಂಡು ಬರುವಲ್ಲಿ ವಿಜಯಲಕ್ಷ್ಮಿಯವರ ಪಾತ್ರ ಮಹತ್ವದ್ದು. ಹೀಗಾಗಿ ದರ್ಶನ್ ಅಭಿಮಾನಿಗಳಂತೂ ವಿಜಯಲಕ್ಷ್ಮಿಯವರನ್ನು ದೇವತೆ ಎಂದು ಹೊಗಳುತ್ತಾರೆ. ಅದೇ ರೀತಿಯಾಗಿ ವಿಜಯಲಕ್ಷ್ಮಿಯವರ ಹೊಸ ಪೋಸ್ಟ್‌ಗೆ ಹೊಗಳಿಕೆಯ ಕಾಮೆಂಟ್ಸ್ ಬರುತ್ತಿವೆ. ಅದರಲ್ಲೊಂದು ಕಾಮೆಂಟ್‌ನಲ್ಲಿ `ಭೂಮಿ ತೂಕದ ಹೆಣ್ಣು’ ಎಂದು ಬಿರುದು ನೀಡಲಾಗಿದೆ. ಒಟ್ನಲ್ಲಿ ಇನ್ಸ್ಟಾಗ್ರಾಂನಲ್ಲಿ ಆಕ್ವೀವ್ ಆಗಿರುವ ವಿಜಯಲಕ್ಷ್ಮಿ ಆಗಾಗ ಹೊಸ ಫೋಟೋಶೂಟ್‌ಗಳನ್ನ ಹಂಚಿಕೊಳ್ಳುತ್ತಲೇ ಇರುತ್ತಾರೆ.ಇದನ್ನೂ ಓದಿ: ರಾಷ್ಟ್ರಪತಿ ಭೇಟಿ ವೇಳೆ ಸಿದ್ದರಾಮಯ್ಯ, ಆಮೀರ್ ಖಾನ್ ಮುಖಾಮುಖಿ

  • ಹೊಸ ಲುಕ್‍ನಲ್ಲಿ ಕಾಣಿಸಿಕೊಂಡ ಪ್ರಣೀತಾ

    ಹೊಸ ಲುಕ್‍ನಲ್ಲಿ ಕಾಣಿಸಿಕೊಂಡ ಪ್ರಣೀತಾ

    ಬೆಂಗಳೂರು: ಸ್ಯಾಂಡಲ್‍ವುಡ್‍ನಿಂದ ಬಾಲಿವುಡ್‍ಗೆ ಕಾಲಿಟ್ಟಿರುವ ಕನ್ನಡದ ಬೆಡಗಿ ಪ್ರಣೀತಾ ಸುಭಾಷ್ ತೆಲುಗು, ತಮಿಳಿನಲ್ಲೂ ಸಿನಿಮಾಗಳನ್ನು ಮಾಡಿದ್ದು, ಈ ಮೂಲಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಪ್ರಣೀತಾ, ಇದೀಗ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಶೂಟಿಂಗ್‍ಗೆ ಸಿದ್ಧವಾಗುತ್ತಿದ್ದಾರಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

     

    View this post on Instagram

     

    A post shared by Pranitha Subhash ???? (@pranitha.insta) on

    ಪ್ರಣೀತಾ ಕೈಯ್ಯಲ್ಲಿ ಈಗಾಗಲೇ ಹಲವು ಸಿನಿಮಾಗಳಿದ್ದು, ಆ್ಯಕ್ಟಿಂಗ್‍ನಲ್ಲಿ ಫುಲ್ ಬ್ಯುಸಿಯಾಗಿದ್ದರು. ಇದೇ ಸಂದರ್ಭದಲ್ಲಿ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿ ಸಹ ತೊಡಗಿಕೊಂಡಿದ್ದು, ಲಾಕ್‍ಡೌನ್‍ನಿಂದಾಗಿ ಸಂಕಷ್ಟ ಎದುರಿಸುತ್ತಿದ್ದ ವಲಸೆ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ಸಹಾಯ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಇದೀಗ ಲಾಕ್‍ಡೌನ್ ಸಡಿಲಗೊಳಿಸಲಾಗಿದೆ, ಮನರಂಜನೆ ಹೊರತುಪಡಿಸಿ ಉಳಿದೆಲ್ಲ ವಲಯಗಳು ಮತ್ತೆ ಕಾರ್ಯಾರಂಭಿಸಿವೆ. ಸಿನಿಮಾ ಚಿತ್ರೀಕರಣಕ್ಕೂ ಇನ್ನೇನು ಅನುಮತಿ ಸಿಗಬೇಕಿದೆ. ಹೀಗಾಗಿ ಪ್ರಣೀತಾ ಸಿದ್ಧತೆ ನಡೆಸುತ್ತಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಪ್ರಣೀತಾ ಸಲೂನ್‍ಗೆ ಹೋಗಿ ಮೇಕ್‍ಒವರ್ ಮಾಡಿಸಿಕೊಂಡಿದ್ದಾರೆ. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಲ್ಲಿ ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.

    ಹೇರ್ ಕಟಿಂಗ್ ಸಹ ಮಾಡಿಸಿಕೊಂಡಿರುವ ಪ್ರಣೀತಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಶೂಟಿಂಗ್ ಪ್ರಾರಂಭವಾದರೆ ಹಾಜರಾಗಲು ತಯಾರಿದ್ದೇನೆ ಎಂಬ ಮುನ್ಸೂಚನೆ ನೀಡಿದ್ದಾರೆ. ಬಹುತೇಕ ಎಲ್ಲ ವಲಯಗಳು ತರೆದಿದ್ದು, ಧಾರಾವಾಹಿ ಚಿತ್ರೀಕರಣಕ್ಕೂ ಅವಕಾಶ ಕಲ್ಪಿಸಲಾಗಿದೆ. ಆದರೆ ಸಿನಿಮಾ ಶೂಟಿಂಗ್‍ಗೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣಕ್ಕೂ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ.

     

    View this post on Instagram

     

    Post Covid world salon experience was nothing less than embarking on a space mission!

    A post shared by Pranitha Subhash ???? (@pranitha.insta) on

    ಪ್ರಣೀತಾ ಸದ್ಯ ಸ್ಯಾಂಡಲ್‍ವುಡ್‍ನ ರಾಮನ ಅವತಾರ ಹಾಗೂ ಬಾಲಿವುಡ್‍ನ ಭುಜ್: ದಿ ಪ್ರೈಡ್ ಆಫ್ ಇಂಡಿಯಾ, ಹಂಗಾಮಾ 2 ಚಿತ್ರಗಳಲ್ಲಿ ಬ್ಯಸಿಯಾಗಿದ್ದಾರೆ. ಹೀಗಾಗಿ ಮತ್ತೆ ಶೂಟಿಂಗ್‍ಗೆ ತೆರಳಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆ ಇದೀಗ ಮೂಡಿದೆ.

  • ‘ನನ್ನ ಮಗನಿಗೆ ಅಷ್ಟು ವಯಸ್ಸಾಗಿಲ್ಲ’- ವೈರಲ್ ಫೋಟೋಗೆ ಧೋನಿ ತಾಯಿ ಪ್ರತಿಕ್ರಿಯೆ

    ‘ನನ್ನ ಮಗನಿಗೆ ಅಷ್ಟು ವಯಸ್ಸಾಗಿಲ್ಲ’- ವೈರಲ್ ಫೋಟೋಗೆ ಧೋನಿ ತಾಯಿ ಪ್ರತಿಕ್ರಿಯೆ

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕಳೆದ 10 ತಿಂಗಳಿನಿಂದ ಕ್ರಿಕೆಟ್‍ನಿಂದ ದೂರ ಉಳಿದಿದ್ದಾರೆ. 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ ಬಾರಿಗೆ ಆಡಿದ್ದ ಧೋನಿ ಮತ್ತೆ 2020ರ ಐಪಿಎಲ್ ಟೂರ್ನಿಯ ತರಬೇತಿ ವೇಳೆ ಮತ್ತೆ ಅಭಿಮಾನಿಗಳಿಗೆ ಕ್ರಿಕೆಟ್ ಬ್ಯಾಟ್‍ನೊಂದಿಗೆ ಕಾಣಿಸಿಕೊಂಡಿದ್ದರು. ಆದರೆ ಕೊರೊನಾ ಕಾರಣದಿಂದ ಐಪಿಎಲ್ ಮುಂದೂಡುವುದರಿಂದ ಧೋನಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.

    ಧೋನಿ ಇತ್ತೀಚೆಗೆ ಪುತ್ರಿಯೊಂದಿಗೆ ಸೇರಿ ಮನೆಯ ಗಾರ್ಡನ್ ಪ್ರದೇಶದಲ್ಲಿ ಆಟವಾಡುತ್ತಿದ್ದ ವಿಡಿಯೋವನ್ನು ಸಾಕ್ಷಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಕೂಡ ಆಗಿತ್ತು. 38 ವರ್ಷದ ಧೋನಿ ಹೊಸ ಲುಕ್‍ನಲ್ಲಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಆದರೆ ವಿಡಿಯೋದಲ್ಲಿ ಧೋನಿ ಲುಕ್ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

    ಸಾಮಾಜಿಕ ಜಾಲತಾಣದಲ್ಲಿ ಧೋನಿರ ವಯಸ್ಸಿನ ಕುರಿತು ಹಲವು ಟ್ರೋಲ್‍ಗಳು ಹರಿದಾಡಿತ್ತು. ಪರಿಣಾಮ ಧೋನಿರ ತಾಯಿ ದೇವಕಿ ದೇವಿ ಪ್ರತಿಕ್ರಿಯೆ ನೀಡಿದ್ದು, ನಾನು ಧೋನಿ ಲುಕ್ ನೋಡಿದ್ದೇನೆ. ವಿಡಿಯೋದಲ್ಲಿ ಧೋನಿಗೆ ಅಷ್ಟು ವಯಸ್ಸಾಗಿದೆ ಎಂದು ಎನಿಸುವುದಿಲ್ಲ. ಯಾವುದೇ ತಾಯಿಗೂ ಕೂಡ ತಮ್ಮ ಮಗನಿಗೆ ವಯಸ್ಸಾಗಿಲ್ಲ ಎನ್ನಿಸಬಹುದೆನೋ? ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಆಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಸದ್ಯ ಕೊರೊನಾ ವೈರಸ್ ಅಂತ್ಯವಾಗಬೇಕಿದೆ. ನಿವೃತ್ತಿಯ ಕುರಿತು ಧೋನಿ ಒಳ್ಳೆಯ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

  • ನ್ಯೂ ಲುಕ್‍ನಲ್ಲಿ ಕಾಣಿಸಿಕೊಂಡ ಧೋನಿ

    ನ್ಯೂ ಲುಕ್‍ನಲ್ಲಿ ಕಾಣಿಸಿಕೊಂಡ ಧೋನಿ

    ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕೊರೊನಾ ವೈರಸ್ ಮತ್ತು ಲಾಕ್ ಡೌನ್‍ನಿಂದಾಗಿ ನ್ಯೂ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

    ಎಂ.ಎಸ್.ಧೋನಿ ಅವರು ಲಾಕ್‍ಡೌನ್‍ನಿಂದಾಗಿ ಕುಟುಂಬದ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲೂ ಕಾಣಿಸಿಕೊಳ್ಳದ ಧೋನಿ ನ್ಯೂ ಲುಕ್‍ನಲ್ಲಿ ಕಾಣಿಸಿಕೊಂಡು, ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ.

    ಧೋನಿ ಅವರ ಪುತ್ರಿ ಝೀವಾ ತಂದೆಯೊಂದಿಗೆ ಕಾಲ ಕಳೆಯುತ್ತಿರುವ ವಿಡಿಯೋವನ್ನು ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾಳೆ. ಇದರಲ್ಲಿ ಧೋನಿ ಕಪ್ಪು ಕೂದಲು ಮತ್ತು ಬಿಳಿ ಗಡ್ಡದ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಎಂಎಸ್‍ಡಿ ತಮ್ಮ ಫಾರ್ಮ್ ಹೌಸ್‍ನಲ್ಲಿ ಮಗಳು ಮತ್ತು ನಾಯಿಯ ಜೊತೆ ಆಟ ಆಡುತ್ತಿದ್ದಾರೆ.

    ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ ಏಕದಿನ ವಿಶ್ವಕಪ್ 2019ರ ಬಳಿಕ ಕ್ರಿಕೆಟ್‍ನಿಂದ ದೂರ ಉಳಿದಿದ್ದಾರೆ. ಅವರು ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಯೋಜಿಸಿದ್ದರು. ಆದರೆ ಇದೀಗ ಅದು ಸಾಧ್ಯವೆಂದು ತೋರುತ್ತಿಲ್ಲ. ಏಕೆಂದರೆ ಕೊರೊನಾ ಮತ್ತು ಲಾಕ್‍ಡೌನ್ ಕಾರಣ ಐಪಿಎಲ್ ಅನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಈ ಮಧ್ಯೆ ಧೋನಿ ನಿವೃತ್ತಿಯ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.

    https://www.instagram.com/tv/B_7eILdnn1v/?utm_source=ig_embed

    ಧೋನಿ ಐಪಿಎಲ್‍ನಲ್ಲಿ ಫ್ರ್ಯಾಂಚೈಸ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ತಂಡದ ನಾಯಕರಾಗಿದ್ದಾರೆ. ಸಿಎಸ್‍ಕೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಧೋನಿ ಮತ್ತು ಸುರೇಶ್ ರೈನಾ ಅವರ ವಿಡಿಯೋವನ್ನು ಮಾರ್ಚ್ 9ರಂದು ಟ್ವೀಟ್ ಮಾಡಿತ್ತು. ಇದರಲ್ಲಿ ಧೋನಿ ಕಟ್ಟಿಂಗ್, ಸೇವಿಂಗ್ ಮಾಡಿಸಿಕೊಂಡಿದ್ದರು. ಆದರೆ ರೈನಾ ಗಡ್ಡ ಬಿಟ್ಟಿದ್ದರು. ಈ ವೇಳೆ ಧೋನಿಯನ್ನು ಅಪ್ಪಿಕೊಂಡ ರೈನಾ, ನಿಮ್ಮ ಗಡ್ಡದ ಕೂದಲು ಬಿಳಿಯಾಗಿವೆ ಎಂದು ಗೇಲಿ ಮಾಡಿದ್ದರು.

  • 2019ರಲ್ಲಿ ಹೊಸ ಲುಕ್‍ನಲ್ಲಿ ಮಿಂಚಿದ ಹೀರೋಗಳು

    2019ರಲ್ಲಿ ಹೊಸ ಲುಕ್‍ನಲ್ಲಿ ಮಿಂಚಿದ ಹೀರೋಗಳು

    ಬೆಂಗಳೂರು: ಇನ್ನೇನು ಕೆಲ ದಿನಗಳು ಮುಗಿದರೆ 2020 ಆರಂಭವಾಗುತ್ತೆ. ಹೊಸ ವರ್ಷದ ಇದೇ ಖುಷಿಯಲ್ಲಿ 2019ರಲ್ಲಿ ಸ್ಯಾಂಡಲ್‍ವುಡ್ ಅಂಗಳದಲ್ಲಿ ಹೊಸ ತಾರೆಯರು, ಸಿನಿಮಾಗಳು, ಹೀರೋಗಳ ಹೊಸ ಲುಕ್ ಸಖತ್ ಸದ್ದು ಮಾಡಿರೋದನ್ನ ಮರಿಯಲು ಆಗಲ್ಲ. ಹೀಗೆ 2019ರಲ್ಲಿ ಸ್ಟಾರ್ ಹೀರೋಗಳು ಹೊಸ ಲುಕ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಗೊಲ್ಡನ್ ಸ್ಟಾರ್ ಗಣೇಶ್, ಜೊತೆ ಜೊತೆಯಲಿ ಧಾರಾವಾಹಿ ನಟ ಅನಿರುದ್ಧ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ರಿಷಬ್ ಶೆಟ್ಟಿ ಹೀಗೆ ಹಲವು ನಟರ ಹೊಸ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು.

    ಕೆಜಿಎಫ್-1 2018ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿದ್ದರೂ ಅದರಲ್ಲಿ ಯಶ್ ಅವರ ರಾಕಿಭಾಯ್ ಲುಕ್ 2019ರಲ್ಲಿ ಸಖತ್ ಕ್ರೇಜ್ ಹುಟ್ಟಿಸಿತ್ತು. ರಾಕಿಭಾಯ್ ರೀತಿಯೇ ಅಭಿಮಾನಿಗಳು ಹೇರ್‌ಸ್ಟೈಲ್‌, ಗಡ್ಡ ಬಿಡುವುದೇ ಒಂದು ರೀತಿ ಟ್ರೆಂಡ್ ಆಗಿಬಿಟ್ಟಿತ್ತು. ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ರಾಕಿಭಾಯ್‍ಗೆ ರೀನಾ ಆಗಿ ಸಾಥ್ ಕೊಟ್ಟಿದ್ದರು. ಕೋಲಾರದ ಚಿನ್ನದ ಗಣಿಯಲ್ಲಿ ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ತಯಾರಾದ ಕೆಜಿಎಫ್-1 ಭಾರತ ಚಿತ್ರರಂಗವೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿತ್ತು.

    ಇನ್ನೂ ನಟಸಾರ್ವಭೌಮನಾಗಿ ಮಿಂಚಿದ ಪುನೀತ್ ರಾಜ್‍ಕುಮಾರ್ ಸೈಡ್ ಕಟ್ ಹೇರ್‌ಸ್ಟೈಲ್‌, ಸಿನಿಮಾದಲ್ಲಿ ಕನ್ನಡಕ ಧರಿಸಿ ಮಿಂಚಿದ ಹೊಸ ಲುಕ್ ಅಭಿಮಾನಿಗಳ ಮನಗೆದ್ದಿತ್ತು. ಅವರ ರೀತಿಯೇ ಅಭಿಮಾನಿಗಳು ಲುಕ್ ಚೇಂಜ್ ಮಾಡಿಕೊಂಡು ಖುಷಿಪಟ್ಟಿದ್ದರು. ಈ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಪವರ್ ಸ್ಟಾರ್‌ಗೆ ನಾಯಕ ನಟಿಯರಾಗಿ ಸಾಥ್ ಕೊಟ್ಟಿದ್ದರು. ಗೂಗ್ಲಿ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

    ಇತ್ತ 99 ಸಿನಿಮಾದಲ್ಲಿ ರಾಮಚಂದ್ರ ಪಾತ್ರದಲ್ಲಿ ಅಭಿಮಾನಿಗಳ ಮನಕದ್ದ ಗಣೇಶ್ ಅವರ ಲುಕ್ ಕೂಡ ಎಲ್ಲರ ಗಮನ ಸೆಳೆದಿತ್ತು. ಗಡ್ಡ ಬಿಟ್ಟುಕೊಂಡ ಗಣೇಶ್ ಅವರ ಹೊಸ ಲುಕ್ ಫ್ಯಾನ್ಸ್‌ಗೆ ಅಚ್ಚುಮೆಚ್ಚು ಆಗಿಬಿಟ್ಟುತ್ತು. ಈ ಚಿತ್ರದಲ್ಲಿ ರಾಮಚಂದ್ರನ ಜಾನು ಆಗಿ ಭಾವನ ಮಿಂಚಿದ್ದರು. ಎಷ್ಟೇ ವರ್ಷವಾದ್ರು ಸ್ಕೂಲ್ ಲವ್ ಮಾತ್ರ ಮನಸಲ್ಲಿ ಹಚ್ಚೆ ಹಾಕಿರುತ್ತೆ ಎನ್ನೋದನ್ನ ಪ್ರೀತಮ್ ಗುಬ್ಬಿ ಚೆನ್ನಾಗಿ ನಿರ್ದೇಶಿಸಿದ್ದಾರೆ. ಈ ಚಿತ್ರ ತಮಿಳಿನ 96 ಚಿತ್ರದ ರಿಮೇಕ್ ಆಗಿದ್ದರೂ ಕನ್ನಡ ಸಿನಿ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

    ವಯಸ್ಸು ನನಗೆ ಮ್ಯಾಟರ್ ಅಲ್ಲ ಎನ್ನುವಂತೆ ರುಸ್ತುಮ್‍ನಲ್ಲಿ ಖಡಕ್ ಪೊಲೀಸ್ ಆಫಿಸರ್ ಆಗಿ ಗರ್ಜಿಸಿದ ಶಿವಣ್ಣನ ಮೀಸೆ ಲುಕ್ ಎಲ್ಲರ ಗಮನ ಸೆಳೆದಿತ್ತು. ಮೀಸೆ ತಿರುವುತ್ತಾ ಪೊಲೀಸ್ ಬೇಬಿ ಆದ ಶಿವರಾಜ್‍ಕುಮಾರ್ ಲುಕ್ ಸಿಕ್ಕಪಟ್ಟೆ ಸದ್ದು ಮಾಡಿತ್ತು. ರುಸ್ತುಮ್‍ನಲ್ಲಿ ಶ್ರದ್ಧಾ ಶ್ರೀನಾಥ್ ಹ್ಯಾಟ್ರಿಕ್ ಹೀರೋಗೆ ನಟಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರ ರವಿ ವರ್ಮಾ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ.

    ಇನ್ನೊಂದೆಡೆ ನಿರ್ದೇಶನಕ್ಕೂ ಸೈ, ಆ್ಯಕ್ಟಿಂಗ್‍ಗೂ ಜೈ ಎನ್ನುವಂತೆ ರಿಷಬ್ ಶೆಟ್ಟಿ ಡಿಟೆಕ್ವಿವ್ ದಿವಾಕರ್ ಆಗಿ ಬೆಲ್‍ಬಾಟಂನಲ್ಲಿ ಸಖತ್ ಸದ್ದು ಮಾಡಿದ್ದರು. ರಿಷಬ್ ಶೆಟ್ಟಿ ರೆಟ್ರೊ ಲುಕ್‍ನಲ್ಲಿ ಮಿಂಚಿದ್ದರು. ಡಿಟೆಕ್ವಿವ್ ದಿವಾಕರನಿಗೆ ಕುಸುಮಾ ಆಗಿ ಹರಿಪ್ರಿಯಾ ಸಾಥ್ ಕೊಟ್ಟಿದ್ದರು. ಈ ಚಿತ್ರ ಜಯತೀರ್ಥ ನಿರ್ದೇಶನದಲ್ಲಿ ಮೂಡಿಬಂದಿದ್ದು, ರಿಷಬ್ ರೆಟ್ರೋ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು.

    ಕೇವಲ ಸಿನಿಮಾ ನಟರು ಮಾತ್ರವಲ್ಲಿ ಕಿರುತೆರೆ ನಟರು ಕೂಡ 2019ರಲ್ಲಿ ಹೊಸ ಲುಕ್‍ನಲ್ಲಿ ಮಿಂಚಿ ಸಖತ್ ಫೇಮಸ್ ಆಗಿದ್ದಾರೆ. ಖಾಸಗಿ ಚಾನೆಲ್‍ನಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್(ಅನಿರುದ್ಧ್) ಅವರ ಪೆಪ್ಪರ್ ಸಾಲ್ಟ್ ಹೇರ್ ಸ್ಟೈಲ್, ಬಿಯರ್ಡ್ ಲುಕ್ ಕೂಡ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದೆ. ಸಾಕಷ್ಟು ಮಂದಿ ಅನಿರುದ್ಧ್ ಲುಕ್‍ಗೆ ಫಿದಾ ಆಗಿದ್ದಾರೆ. ಅದರಲ್ಲೂ ಧಾರವಾಹಿ ವೀಕ್ಷಿಸುವ ಯುವತಿಯರಿಗೆ ಅನಿರುದ್ ಹಾಟ್ ಫೆವರೆಟ್ ಆಗಿಬಿಟ್ಟಿದ್ದಾರೆ. ಈ ಧಾರವಾಹಿಯಲ್ಲಿ ಆರ್ಯವರ್ಧನ್‍ಗೆ ಅನು ಆಗಿ ಮೇಘಾ ಶೆಟ್ಟಿ ಸಾಥ್ ಕೊಡುತ್ತಿದ್ದಾರೆ. ಈ ಕ್ಯೂಟ್ ಜೋಡಿ ನಾವೆಂದು ಜೊತೆ ಜೊತೆಯಲಿ ಅಂತ ಮೋಡಿ ಮಾಡುತ್ತಿರುವುದಂತೂ ಸುಳ್ಳಲ್ಲ.

    ಹೀಗೆ 2019ರಲ್ಲಿ ಸಾಕಷ್ಟು ಸಿನಿಮಾ ನಟರು, ಕಿರುತೆರೆ ನಟರು ಹೊಸ ಲುಕ್ ಮೂಲಕ ಮಿಂಚಿದ್ದಾರೆ. ಇದಿಷ್ಟು ಈ ವರ್ಷದಲ್ಲಿ ಹೊಸ ಲುಕ್ ಮೂಲಕ ಸಖತ್ ಸದ್ದು ಮಾಡಿದ್ದ ನಟರು. ಇನ್ನು 2020ರಲ್ಲಿ ಇನ್ನು ಯಾವ್ಯಾವ ನಟರು ಹೊಸ ಲುಕ್ ಮೂಲಕ ಅಭಿಮಾನಿಗಳ ಮನ ಗೆಲ್ಲಲಿದ್ದಾರೆ ಎನ್ನೋದನ್ನು ಕಾದು ನೋಡಬೇಕು.

  • ದೀಪಿಕಾ ಹೊಸ ಲುಕ್ ನೋಡಿ ಅಭಿಮಾನಿಗಳು ಶಾಕ್!

    ದೀಪಿಕಾ ಹೊಸ ಲುಕ್ ನೋಡಿ ಅಭಿಮಾನಿಗಳು ಶಾಕ್!

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರ ಹೊಸ ಲುಕ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

    ದೀಪಿಕಾ ಪಡುಕೋಣೆ ಮದುವೆ ನಂತರ ‘ಚಪಾಕ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮಿ ಅಗರ್‍ವಾಲ್ ಜೀವನಚರಿತ್ರೆ ಆಗಿದ್ದು, ದೀಪಿಕಾ ಮಾಲತಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಲಕ್ಷ್ಮಿ ಅಗರ್‍ವಾಲ್ ಈಗ ಟಿವಿ ನಿರೂಪಕಿ ಹಾಗೂ ಆ್ಯಸಿಡ್ ದಾಳಿ ತಡೆಯ ಪ್ರಚಾರಕಿ ಆಗಿದ್ದಾರೆ.

    ದೀಪಿಕಾ ಪಡುಕೋಣೆ ಚಪಾಕ್ ಚಿತ್ರದ ಫಸ್ಟ್ ಲುಕ್ ಅನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ “ಈ ಒಂದು ಪಾತ್ರ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಮಾಲತಿ ಇಂದಿನಿಂದ ಚಿತ್ರೀಕರಣ ಪ್ರಾರಂಭ” ಚಪಾಕ್ ಎಂದು ಹ್ಯಾಶ್‍ಟ್ಯಾಗ್ ಬಳಸಿ ಬಿಡುಗಡೆಯ ದಿನಾಂಕ ಜನವರಿ 10, 2020″ ಎಂದು ಟ್ವೀಟ್ ಮಾಡಿದ್ದಾರೆ.

    https://twitter.com/deepikapadukone/status/1110022041950920710

    ಚಿತ್ರದ ನಿರ್ದೇಶಕಿ ಮೇಘನಾ ಗುಲ್ಜಾರ್ ಮಾಲತಿ ಪಾತ್ರವನ್ನು ವರ್ಣಿಸಿದ್ದಾರೆ. ಅವಳು ಧೈರ್ಯ, ಅವಳು ಭರವಸೆ, ಅವಳು ದೀಪಿಕಾ ಪಡುಕೋಣೆ ಚಾಪಕ್ ಚಿತ್ರದಲ್ಲಿ ಮಾಲತಿ ಪಾತ್ರ ನಿರ್ವಹಿಸುತ್ತಿದ್ದಾಳೆ. ಇಂದಿನಿಂದ ಚಿತ್ರೀಕರಣ ಪ್ರಾರಂಭವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

    ದೀಪಿಕಾ ಪಡುಕೋಣೆ ಮದುವೆಯಾದ ನಂತರ ಚಪಾಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಅವರು ಫಾಕ್ಸ್ ಸ್ಟಾರ್ ಸ್ಟುಡಿಯೋ ಜೊತೆ ಸೇರಿ ನಿರ್ಮಿಸುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷದ ಜನವರಿ 10ರಂದು ಬಿಡುಗಡೆ ಆಗಲಿದೆ.

  • ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದ ಅನುಷ್ಕಾ ಶೆಟ್ಟಿ

    ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದ ಅನುಷ್ಕಾ ಶೆಟ್ಟಿ

    ಹೈದರಾಬಾದ್: ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ರೀ-ಎಂಟ್ರಿ ನೀಡಿದ್ದಾರೆ.

    ಅನುಷ್ಕಾ ಶೆಟ್ಟಿ ಒಂದು ವರ್ಷದ ಹಿಂದೆ ‘ಭಾಗಮತಿ’ ಚಿತ್ರದಲ್ಲಿ ಕೊನೆಯದಾಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದರು. ಈಗ ಅನುಷ್ಕಾ ಅವರ ಹೊಸ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಆಹಾರ ತಜ್ಞ ಆದ ಲ್ಯೂಕ್ ಕೌಟಿನ್ಹೂ ಅವರು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಅನುಷ್ಕಾ ಶೆಟ್ಟಿ ಅವರ ಜೊತೆಗೆ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ “ಅತೀ ಶೀಘ್ರದಲ್ಲೇ ಏನೋ ಬರಲಿದೆ” ಎಂದು ಬರೆದುಕೊಂಡಿದ್ದಾರೆ.

    ಈ ಫೋಟೋದಲ್ಲಿ ಅನುಷ್ಕಾ ದೇಹದ ತೂಕ ಕಡಿಮೆ ಆಗಿದೆ. ಅನುಷ್ಕಾ ಈ ಹಿಂದೆ ತೆಲುಗಿನ ‘ಸೈಜ್ ಝೀರೋ’ ಚಿತ್ರಕ್ಕಾಗಿ ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಬಳಿಕ ಅವರು ತೂಕ ಕಡಿಮೆ ಮಾಡಿಕೊಳ್ಳಲು ಹೆಚ್ಚು ಶ್ರಮವಹಿಸಿದ್ದಾರೆ. ಅನುಷ್ಕಾ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಸರ್ಜರಿ ಮೊರೆ ಹೋಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

    ಅನುಷ್ಕಾ ಶೀಘ್ರದಲ್ಲೇ ‘ಸೈಲೆನ್ಸ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದು ಥ್ರಿಲ್ಲರ್ ಸಿನಿಮಾ ಆಗಿದ್ದು, ಈ ಸಿನಿಮಾದಲ್ಲಿ ಆರ್. ಮಾದವನ್ ಹಾಗೂ ಅಂಜಲಿ ನಟಿಸಲಿದ್ದಾರೆ. ಈ ಚಿತ್ರವನ್ನು ಹೇಮಂತ್ ಮಧುಕರ್ ನಿರ್ದೇಶನ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ಲುಕ್‍ನಲ್ಲಿ ರಕ್ಷಿತ್ ಶೆಟ್ಟಿ ಮಿಂಚಿಂಗ್

    ಹೊಸ ಲುಕ್‍ನಲ್ಲಿ ರಕ್ಷಿತ್ ಶೆಟ್ಟಿ ಮಿಂಚಿಂಗ್

    ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹೊಸ ಲುಕ್‍ನಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಸದ್ಯ ಈಗ ಅವರ ಹೊಸ ಸಿನಿಮಾದ ಹೊಸ ಲುಕ್ ರಿವಿಲ್ ಆಗಿದೆ.

    ರಕ್ಷಿತ್ ಶೆಟ್ಟಿ ಅವರ ಮುಂದಿನ ಚಿತ್ರಕ್ಕೆ `ತೆನಾಲಿ’ ಅಂತ ಟೈಟಲ್ ಇಡಲಾಗಿದೆ. ಹೇಮಂತ್ ರಾವ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದು, ಸ್ವತಂತ್ರ ಪೂರ್ವದ ಕಥೆಯನ್ನು ಹೇಳಲು ಚಿತ್ರತಂಡ ಹೊರಟಿದೆ. ರಕ್ಷಿತ್ ಶೆಟ್ಟಿ ಹೊಸ ಲುಕ್ ಅವರ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿದೆ. ಇಂಚರ ಮತ್ತು ವಿನಯ್ ಸ್ಟೈಲಿಂಗ್ ಮಾಡಿದ್ದು, ಶರತ್ ಕ್ಯಾಮರಾ ಕೈಚಳಕದಲ್ಲಿ ಈ ಫೋಟೋ ಸೆರೆ ಸಿಕ್ಕಿದೆ.

    ಹೇಮಂತ್ ರಾವ್ ಈಗಾಗಲೇ ರಕ್ಷಿತ್ ನಟನೆಯ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಲ್ಲದೇ ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣ ಮಾಡಿದ್ದರು. ಇದೀಗ ಮತ್ತೇ ಈ ಜೋಡಿ ತೆನಾಲಿ ಚಿತ್ರದಲ್ಲಿ ಒಂದಾಗಿ ಜನರಿಗೆ ಮನೋರಂಜನೆ ನೀಡಲಿದ್ದಾರೆ. ಸದ್ಯ ಚಿತ್ರದ ನಿರ್ದೇಶಕ ಹೇಮಂತ್ ರಾವ್ ತಮ್ಮ ಟ್ವಟ್ಟರಿನಲ್ಲಿ ರಕ್ಷಿತ್ ಶೆಟ್ಟಿ ಅವರ ಹೊಸ ಲುಕ್ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ನಾನು ಯಾವಾಗಲೂ ಇತಿಹಾಸಗಳ ದೊಡ್ಡ ಅಭಿಮಾನಿಯಾಗಿದ್ದೇನೆ. ಈ ಚಿತ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಆದ ಘಟನೆಯನ್ನು ತೋರಿಸುವ ಐಡಿಯಾವನ್ನು ಹೊಂದಿದ್ದೇನೆ. ನಂತರ ನಾನು ಈ ಐಡಿಯಾ ಹಾಗೂ ಪಾತ್ರವನ್ನು ರಕ್ಷಿತ್ ಅವರೊಂದಿಗೆ ಹಂಚಿಕೊಂಡೆ. ಅವರು ಕೂಡ ಈ ಕತೆಯನ್ನು ಇಷ್ಟಪಟ್ಟಿದ್ದಾರೆ. ಕೆಲವು ಹೊಸ ಲುಕ್‍ಗಳನ್ನು ಪ್ರಯತ್ನಿಸಲು ನಾವು ನಿರ್ಧರಿಸಿದ್ದೇವೆ. ಹಾಗಾಗಿ ಕೆಲವು ಹೊಸ ಲುಕ್‍ಗಳನ್ನು ಮೋಜಿಗಾಗಿ ಟ್ರೈ ಮಾಡೋಣ ಎನ್ನಿಸಿತ್ತು ಎಂದು ಹೇಮಂತ್ ರಾವ್ ಟ್ವೀಟ್ ಮಾಡಿದ್ದಾರೆ.

    ತೆನಾಲಿ ಚಿತ್ರ ನನ್ನದೊಂದು ಐಡಿಯಾ ಅಷ್ಟೇ. ಈ ಚಿತ್ರ ತೆರೆಗೆ ಬರಲು ಇನ್ನೂ ಸಾಕಷ್ಟು ಸಮಯವಿದೆ. ಸದ್ಯ ನಾನು ಈಗ ‘ಕವಲುದಾರಿ’ ಚಿತ್ರದಲ್ಲಿ ಬ್ಯುಸಿ ಇದ್ದೇನೆ. ಕವಲುದಾರಿ ಚಿತ್ರ ಮುಗಿದ ನಂತರ ತೆನಾಲಿ ಚಿತ್ರಕ್ಕೆ ಕತೆ ಬರೆಯಲು ಶುರು ಮಾಡುತ್ತೇನೆ. ಆದರೆ ತೆನಾಲಿ ಚಿತ್ರ ಯಾವಾಗ ಸೆಟ್ಟೇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅದು ಶುರುವಾದಾಗ ನನ್ನ, ಪುಷ್ಕರ್ ಹಾಗೂ ರಕ್ಷಿತ್ ಶೆಟ್ಟಿಯನ್ನು ಮತ್ತೇ ತೆರೆ ಮೇಲೆ ನೋಡುತ್ತೀರಿ. ನಾವು ಮೂವರು ಮತ್ತೇ ಒಟ್ಟಿಗೆ ಕೆಲಸ ಮಾಡಲಿದ್ದೇವೆ ಎಂದು ಹೇಮಂತ್ ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೊಸ ಲುಕ್‍ನಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಮಿಂಚಿಂಗ್!

    ಹೊಸ ಲುಕ್‍ನಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಮಿಂಚಿಂಗ್!

    ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ಕೂದಲುಗಳಿಗೆ ಕತ್ತರಿ ಹಾಕಿಸಿ ಹೊಸ ಲುಕ್‍ನಲ್ಲಿ ಮಿಂಚುತ್ತಿದ್ದಾರೆ.

    ರಶ್ಮಿಕಾ ತಮ್ಮ ಅಂದವಾದ ಕೂದಲಿಗೆ ಕತ್ತರಿ ಹಾಕಿ ಹೊಸ ಪ್ರಯೋಗ ಮಾಡಿದ್ದಾರೆ. ಇಷ್ಟು ದಿನ ಉದ್ದನೆಯ ಸಿಲ್ಕಿ ಕೂದಲಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಕೂದಲನ್ನು ತುಂಬಾ ಶಾರ್ಟ್ ಮಾಡಿಸಿಕೊಂಡಿದ್ದಾರೆ.

    ರಶ್ಮಿಕಾ ತಮ್ಮ ಮುಂದಿನ ತೆಲುಗು ಚಿತ್ರಕ್ಕಾಗಿ ತಮ್ಮ ಹೇರ್ ಕಟ್ ಮಾಡಿಸಿದ್ದಾರೆ. ‘ಗೀತಾ ಗೋವಿಂದಂ’ ಚಿತ್ರದ ನಟ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ಡಿಯರ್ ಕಾಮ್ರೇಡ್ ಚಿತ್ರದಲ್ಲಿ ರಶ್ಮಿಕಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವಿಶೇಷ ಪಾತ್ರಕ್ಕಾಗಿ ರಶ್ಮಿಕಾ ಮಂದಣ್ಣ ತಮ್ಮ ಕೂದಲುಗಳಿಗೆ ಕತ್ತರಿ ಹಾಕಿ ಹೊಸ ಪ್ರಯೋಗ ಮಾಡಿದ್ದಾರೆ. ಸದ್ಯ ರಶ್ಮಿಕಾ ತಮ್ಮ ಶಾರ್ಟ್ ಹೇರ್ ನಿಂದಲ್ಲೂ ಸಾಕಷ್ಟು ಮಿಂಚುತ್ತಿದ್ದಾರೆ.

    ರಶ್ಮಿಕಾ ಇವರೆಗೂ ನಟಿಸಿದ ಕಿರಿಕ್ ಪಾರ್ಟಿ, ಅಂಜನಿಪುತ್ರ, ಚಮಕ್, ಚಲೋ ಹಾಗೂ ಈಗ ಬಿಡುಗಡೆಗೆ ಸಿದ್ಧವಾಗಿರುವ ಗೀತಾ ಗೋವಿಂದಂ ಚಿತ್ರದಲ್ಲಿ ಉದ್ದನೆಯ ಕೂದಲಲ್ಲೇ ಮಿಂಚಿದ್ದಾರೆ. ಸದ್ಯ ಮೊದಲ ಬಾರಿಗೆ ಹೇರ್ ಶಾರ್ಟ್ ಮಾಡಿಸಿದ ರಶ್ಮಿಕಾ ತೆರೆ ಮೇಲೆ ಹೇಗೆ ಕಾಣುತ್ತಾರೆ ಎಂಬ ಕೂತುಹಲ ಎಲ್ಲರಿಗೂ ಮೂಡಿದೆ.

    ‘ಗೀತಾ ಗೋವಿಂದಂ’ ಚಿತ್ರ ಈ 15ರಂದು ಬಿಡುಗಡೆಯಾಗಲಿದೆ. ಸದ್ಯ ಈ ಚಿತ್ರದ ಹಾಡು ಹಾಗೂ ಟೀಸರ್ ಸಾಕಷ್ಟು ಹಿಟ್ ಆಗಿದೆ.

  • ಸಮ್ಮರ್ ಗೆ  ಗ್ಲಾಮರ್ ಲುಕ್ ಕೊಡುವ 5 ವಿವಿಧ ಹೇರ್ ಸ್ಟೈಲ್ ಗಳು!

    ಸಮ್ಮರ್ ಗೆ ಗ್ಲಾಮರ್ ಲುಕ್ ಕೊಡುವ 5 ವಿವಿಧ ಹೇರ್ ಸ್ಟೈಲ್ ಗಳು!

    ಬೆಂಗಳೂರು: ಬೇಸಿಗೆಯಲ್ಲಿ ಕೂದಲು ಬಿಟ್ಟುಕೊಂಡರೆ ಕಿರಿಕಿರಿಯಾಗುತ್ತದೆ. ಹೀಗಾಗಿ ಉರಿಬಿಸಿಲಿಗೆ ಹೊರಹೋಗುವಾಗ ಸಖತ್ ಗ್ಲಾಮರ್ ಆಗಿ ಕಾಣಲು ಹೊಸ ಹೊಸ ಹೇರ್ ಸ್ಟೈಲ್ ಗಳನ್ನ ನೀವು ಟ್ರೈ ಮಾಡಬಹುದು. ಹೀಗಾಗಿ ಯುವತಿಯರ ಕೂದಲ ವಿನ್ಯಾಸವನ್ನು ಇನ್ನಷ್ಟು ಆಕರ್ಷಕಗೊಳಿಸಲು ಇಲ್ಲಿ 5 ಟಿಪ್ಸ್ ನೀಡಲಾಗಿದೆ.

    1. ಬ್ರೈಡೆಡ್ ಪೋನಿಟೇಲ್: ಈ ಲುಕ್ ನಿಮ್ಮ ಕಾಲೇಜ್, ಆಫೀಸ್ ಮತ್ತು ಶಾಪಿಂಗ್ ಗೆ ಹೋಗುವಾಗ ಟ್ರೈ ಮಾಡಬಹುದು. ಎರಡೂ ಕಡೆಯಿಂದ ಸಣ್ಣದಾದ ಜಡೆಯನ್ನ ಹೆಣೆದು ಒಂದು ಪೋನಿಟೇಲ್ ಹಾಕಿದರೆ ಸಾಕು. ತುಂಬಾ ಸೊಗಸಾಗಿ ಕಾಣುವ ಈ ಹೇರ್ ಸ್ಟೈಲ್ ಬೋಲ್ಡ್ ಮತ್ತು ಯಂಗ್ ಲುಕ್ ಕೊಡುತ್ತದೆ.

    2. ಕ್ಲಾಸಿಕ್ ನೀಟ್ ಆಂಡ್ ಸ್ಟ್ರೈಟ್ ಪೋನಿಟೇಲ್: ಉದ್ದವಾದ ಕೂದಲಿರುವವರು ಈ ರೀತಿಯ ಪೋನಿಟೇಲ್ ಅನ್ನು ಬಳಸಿದರೆ ಎಷ್ಟು ಚೆಂದವಾಗಿ ಕಾಣಿಸುತ್ತಾರೆ. ಸ್ಟ್ರೈಟ್ ಹೇರ್‍ನವರು ಈ ಹೇರ್ ಸ್ಟೈಲ್ ಮಾಡಿದರೆ ಸಖತ್ ಹಾಟ್ ಆಗಿ ಕಾಣಿಸುತ್ತಾರೆ.

    3. ಫಾಲಿಂಗ್ ಡೌನ್ ಅಪ್‍ಡು: ಈ ಲುಕ್ ಎಲ್ಲಾ ಪಾರ್ಟಿಗಳು, ಮದುವೆಯ ಸಮಾರಂಭಗಳು ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ಟ್ರೆಡೀಶನಲ್ ಲುಕ್ ನೀಡುತ್ತದೆ.

    4. ಟಾಸ್ಲೆಡ್ ಪಿಕ್ಸಿ ಹೇರ್ ಸ್ಟೈಲ್: ಕೂದಲು ಕಮ್ಮಿ ಇರುವ ಯುವತಿಯರು ಮತ್ತು ಹೇರ್ ಸ್ಟೈಲ್ ಮಾಡೋಕೆ ಸಮಯ ಇಲ್ಲ ಎಂದು ಗೊಣಗುವವರಿಗೆ ಈ ಹೇರ್ ಸ್ಟೈಲ್ ಸುಲಭ ಮತ್ತು ಅಂದವಾಗಿ ಕಾಣುವಲ್ಲಿ ಎರಡು ಮಾತಿಲ್ಲ.

    5. ಶಾರ್ಟ್ ಬಾಬ್ ಕಟ್: ಚಿಕ್ಕ ಮಕ್ಕಳು ಸೇರಿದಂತೆ ಹದಿಹರೆಯದ ಯುವತಿಯರು, ಮಹಿಳೆಯರು ಮತ್ತು ವಯಸ್ಸಾದ ವೃದ್ಧೆಯರಿಗೂ ಈ ಹೇರ್ ಸ್ಟೈಲ್ ಎಂದೆಂದಿಗೂ ಅಚ್ಚು ಮೆಚ್ಚು. ಈ ಲುಕ್ ನಿಮ್ಮ ಬಾಲ್ಯದ ನೆನಪನ್ನು ಮರುಕಳಿಸುತ್ತದೆ.