Tag: New Liquor Policy

  • ಪಕ್ಷ ಸೇರಿದರೆ ಪ್ರಕರಣ ಖುಲಾಸೆ – ಬಿಜೆಪಿಯಿಂದ ಆಫರ್‌ ಬಂದಿತ್ತು ಎಂದ ಸಿಸೋಡಿಯಾ

    ಪಕ್ಷ ಸೇರಿದರೆ ಪ್ರಕರಣ ಖುಲಾಸೆ – ಬಿಜೆಪಿಯಿಂದ ಆಫರ್‌ ಬಂದಿತ್ತು ಎಂದ ಸಿಸೋಡಿಯಾ

    ನವದೆಹಲಿ: ಬಿಜೆಪಿ ಪಕ್ಷವನ್ನು ಸೇರಿದರೇ ತಮ್ಮ ಮೇಲಿನ ಇಡಿ, ಸಿಬಿಐ ಪ್ರಕರಣಗಳಿಂದ ಮುಕ್ತಗೊಳಿಸುವ ಆಫರ್ ನೀಡಲಾಗಿದೆ ಎಂದು ದೆಹಲಿಯ ಡಿಸಿಎಂ, ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಆರೋಪ ಮಾಡಿದ್ದಾರೆ.

    ಹೊಸ ಮದ್ಯನೀತಿಗೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ನಿವಾಸ ಮತ್ತು ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ಬೆನ್ನಲೆ ಆಮ್ ಅದ್ಮಿ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ವ್ಯಕ್ತಿಯ ಗುದದ್ವಾರಕ್ಕೆ ಸ್ಟೀಲ್ ಗ್ಲಾಸ್ ತುರುಕಿದ ಸ್ನೇಹಿತರು – ಮಲ ವಿಸರ್ಜನೆ ಮಾಡಲಾಗದೇ ಪರದಾಡಿದ

    ಇಂದು ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿಯ ಸಂದೇಶ ನನಗೆ ಬಂದಿದೆ. “ಎಎಪಿ” ಬಿಟ್ಟು ಬಿಜೆಪಿಗೆ ಸೇರಿಕೊಳ್ಳಿ, ಎಲ್ಲಾ ಸಿಬಿಐ ಇಡಿ ಪ್ರಕರಣಗಳನ್ನು ಮುಕ್ತಾಯಗೊಳಿಸುತ್ತೇವೆ. ಬಿಜೆಪಿಗೆ ನನ್ನ ಉತ್ತರ – ನಾನು ರಜಪೂತ, ಮಹಾರಾಣಾ ಪ್ರತಾಪ್ ವಂಶಸ್ಥ. ನನ್ನ ತಲೆಯನ್ನು ಕತ್ತರಿಸುತ್ತೇನೆ. ಆದರೆ ಭ್ರಷ್ಟ-ಪಿತೂರಿಗಾರರ ಮುಂದೆ ತಲೆಬಾಗುವುದಿಲ್ಲ. ನನ್ನ ಮೇಲಿರುವ ಕೇಸುಗಳೆಲ್ಲಾ ಸುಳ್ಳು, ಏನು ಬೇಕಾದರೂ ಮಾಡಿ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ತಿಳಿದ್ದಾರೆ. ಇದನ್ನೂ ಓದಿ: ಸಂಜಯ್ ರಾವತ್‍ಗೆ ಸೆ.5ರ ವರೆಗೆ ಜೈಲೇ ಗತಿ

    ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿವಾದಾತ್ಮಕ ಅಬಕಾರಿ ನೀತಿಯು ದೇಶದಲ್ಲಿಯೇ ಅತ್ಯುತ್ತಮವಾಗಿದೆ. ನಾನು ಅದಕ್ಕೂ ಬದ್ಧನಾಗಿದ್ದೇನೆ. ಕೇಜ್ರಿವಾಲ್ ಮಾದರಿಯ ಆಡಳಿತ ಮತ್ತು ಎಷ್ಟು ಸಚಿವರನ್ನು ತನಿಖೆ ಮಾಡಿ ಜೈಲಿಗೆ ಹಾಕಿದರೂ ಕೆಲಸ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]