Tag: new hairstyle

  • ಹಾರ್ದಿಕ್ ಪಾಂಡ್ಯ ಹೇರ್​ಸ್ಟೈಲ್​ಗೆ ಅಭಿಮಾನಿಗಳು ಫಿದಾ

    ಹಾರ್ದಿಕ್ ಪಾಂಡ್ಯ ಹೇರ್​ಸ್ಟೈಲ್​ಗೆ ಅಭಿಮಾನಿಗಳು ಫಿದಾ

    ಮುಂಬೈ: ಭಾರತ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಹೊಸ ಹೇರ್​ಸ್ಟೈಲ್​ಗೆ ಅಭಿಮಾನಿಗಳು ಫಿದಾ ಆಗಿ ನನಗೂ ಬೇಕು ಎಂದು  ಹೇಳುತ್ತಿದ್ದಾರೆ.

    ಭಾರತ ತಂಡದ ಕ್ರಿಕೆಟಿಗರು ಹೊಸ ಹೊಸ ಹೇರ್ ಸ್ಟೈಲ್ಸ್ ಮಾಡ್ಕೊಳೋದ್ರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಕ್ಯಾಪ್ಟನ್ ಕೂಲ್ ಧೋನಿ ಹೊಸ ಹೇರ್ ಸ್ಟೈಲ್ ಮಾಡಕ್ಕೋಂಡು ಸುದ್ದಿಯಾಗಿದ್ದರು. ಇದೀಗ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಹೊಸ ಹೇರ್ ಕಟ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ನನಗೂ ಇದೆ ಹೇರ್ ಕಟ್ ಬೇಕು ಎಂದು ಹೇಳುವಂತೆ ಕ್ರೇಜ್ ಹುಟ್ಟು ಹಾಕಿದ್ದಾರೆ.

    ಹಾರ್ದಿಕ್ ಪಾಂಡ್ಯ ಮುಂಬೈನ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲೀಮ್ ಹಕಿಮ್ ಬಳಿ ಸೂಪರ್ ಆಗಿರುವ ಹೇರ್ ಸ್ಟೈಲ್  ಮಾಡಿಸಿಕೊಂಡಿದ್ದಾರೆ. ಅದನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಂಚಿಕೊಂಡು ಯಾವಾಗಲ್ಲೂ ನೀವು ಬೆಸ್ಟ್ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿದ ಹಾರ್ದಿಕ್ ಪತ್ನಿ ನತಾಶ ಬೆಂಕಿ ಎಂದಿ ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:  ಪತಿಗೆ ದೇವಸ್ಥಾನ ನಿರ್ಮಿಸಿದ ಪತ್ನಿ

    ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಹೊಸ ಹೇರ್​ಸ್ಟೈಲ್​ಗೆ ಮೆಚ್ಚುಗೆ ಸೂಚಿಸಿ ನನಗೂ ಇದೇ ಹೇರ್ ಸ್ಟೈಲ್ ಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ.