Tag: New Education Policy

  • ಮಹಾರಾಷ್ಟ್ರದಲ್ಲಿ ಹೊಸ ಶಿಕ್ಷಣ ನೀತಿ ಜಾರಿ – ಹಿಂದಿ 3ನೇ ಕಡ್ಡಾಯ ಭಾಷೆ

    ಮಹಾರಾಷ್ಟ್ರದಲ್ಲಿ ಹೊಸ ಶಿಕ್ಷಣ ನೀತಿ ಜಾರಿ – ಹಿಂದಿ 3ನೇ ಕಡ್ಡಾಯ ಭಾಷೆ

    ಮುಂಬೈ: ಮಹಾರಾಷ್ಟ್ರ (Maharashtra) ಸರ್ಕಾರವು ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ ಎಂದು ಘೋಷಿಸಿದೆ. ಹಿಂದಿಯನ್ನು ಮೂರನೇ ಕಡ್ಡಾಯ ಭಾಷೆಯಾಗಿ ಅನುಷ್ಠಾನ ಮಾಡುವುದು ಯೋಜನೆಯ ಪ್ರಮುಖ ಅಂಶವಾಗಿದೆ.

    2025-26ನೇ ಶೈಕ್ಷಣಿಕ ವರ್ಷದಿಂದ ಎನ್‌ಇಪಿ (New Education Policy) ಜಾರಿಯಾಗಿದೆ. ಮರಾಠಿ ಮತ್ತು ಇಂಗ್ಲಿಷ್‌ ಬಳಿಕ 3ನೇ ಕಡ್ಡಾಯ ಭಾಷೆಯಾಗಿದೆ. 1ನೇ ತರಗತಿಯಿಂದ ಪ್ರಾರಂಭವಾಗಿ 2028-29 ರ ವೇಳೆಗೆ ಎಲ್ಲಾ ಶ್ರೇಣಿಗಳಿಗೆ ವಿಸ್ತರಿಸುತ್ತದೆ. ಹೊಸ ನೀತಿಯಡಿಯಲ್ಲಿ, ಮಹಾರಾಷ್ಟ್ರವು 5+3+3+4 ಶೈಕ್ಷಣಿಕ ರಚನೆಯನ್ನು ಅಳವಡಿಸಿಕೊಳ್ಳಲಿದೆ. ಇದನ್ನೂ ಓದಿ: ಖಾಸಗಿ ಶಾಲೆಗಳ ದಾಖಲಾತಿಗೆ ಸರ್ಕಾರದಿಂದ ರೂಲ್ಸ್ – ಪೋಷಕರ ಸಂದರ್ಶನ, ಮನಸೋ ಇಚ್ಛೆ ಫೀಸ್‌ಗೆ ಬ್ರೇಕ್

    ಮಹಾರಾಷ್ಟ್ರ ಸರ್ಕಾರವು 2025-26ರ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುವ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅನ್ನು ಜಾರಿಗೆ ತರಲು ವಿವರವಾದ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯ ಪ್ರಮುಖ ಅಂಶವೆಂದರೆ ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಹಿಂದಿಯನ್ನು ಕಡ್ಡಾಯ ಮೂರನೇ ಭಾಷೆಯಾಗಿ ಪರಿಚಯಿಸಲಾಗಿದೆ.

    2025-26 ಶೈಕ್ಷಣಿಕ ವರ್ಷದಲ್ಲಿ 1 ನೇ ತರಗತಿಯಿಂದ ಪ್ರಾರಂಭವಾಗಿ 2028-29 ರ ವೇಳೆಗೆ ಎಲ್ಲಾ ಶ್ರೇಣಿಗಳಿಗೆ ವಿಸ್ತರಿಸುತ್ತದೆ. ಭಾಷಾ ನೀತಿಯ ಭಾಗವಾಗಿ, ಆರಂಭಿಕ ತರಗತಿಯ ವಿದ್ಯಾರ್ಥಿಗಳಿಗೆ ಹಿಂದಿಯನ್ನು ಕಡ್ಡಾಯ ಮೂರನೇ ಭಾಷೆಯಾಗಿ ಪರಿಚಯಿಸಲಾಗುವುದು. ಈ ಪರಿವರ್ತನೆಯನ್ನು ಬೆಂಬಲಿಸಲು, ರಾಜ್ಯ ಸರ್ಕಾರವು 2025 ರ ವೇಳೆಗೆ 80% ಶಿಕ್ಷಕರಿಗೆ ಹೊಸ ಶಿಕ್ಷಣ ವಿಧಾನಗಳು ಮತ್ತು ಡಿಜಿಟಲ್ ಪರಿಕರಗಳಲ್ಲಿ ತರಬೇತಿ ನೀಡಲು ಯೋಜಿಸಿದೆ. ಇದನ್ನೂ ಓದಿ: UK | ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ನ 123ನೇ ಅಧ್ಯಕ್ಷರಾಗಿ ಭಾರತೀಯ ಮೂಲದ ಮುಮ್ತಾಜ್‌ ಆಯ್ಕೆ

    ಹೊಸ ನೀತಿಯಡಿಯಲ್ಲಿ, ಮಹಾರಾಷ್ಟ್ರವು 5+3+3+4 ಶೈಕ್ಷಣಿಕ ರಚನೆಯನ್ನು ಅಳವಡಿಸಿಕೊಳ್ಳಲಿದ್ದು, ಪಠ್ಯಕ್ರಮ ಅಭಿವೃದ್ಧಿಯನ್ನು ಸ್ಥಳೀಯವಾಗಿ SCERT ಮತ್ತು ಬಾಲಭಾರತಿ ನಿರ್ವಹಿಸುತ್ತವೆ.

  • ನೂತನ ಶಿಕ್ಷಣ ನೀತಿ ಜಾರಿಗೆ ಕರ್ನಾಟಕದ ವೇಗದ ಕ್ರಮ: ಕಸ್ತೂರಿ ರಂಗನ್ ಶ್ಲಾಘನೆ

    ನೂತನ ಶಿಕ್ಷಣ ನೀತಿ ಜಾರಿಗೆ ಕರ್ನಾಟಕದ ವೇಗದ ಕ್ರಮ: ಕಸ್ತೂರಿ ರಂಗನ್ ಶ್ಲಾಘನೆ

    ಬೆಂಗಳೂರು: 21ನೇ ಶತಮಾನದಲ್ಲಿ ಕರ್ನಾಟಕ ಸೇರಿ ಇಡೀ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ  ಬಹುದೊಡ್ಡ ಕ್ರಾಂತಿಕಾರಕ ಬದಲಾವಣೆಗಳಾಗುತ್ತವೆ. ಆ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಅಧ್ಯಕ್ಷರೂ ಆದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ಹೇಳಿದ್ದಾರೆ.

    ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ಡೆನ್ಮಾರ್ಕ್ ನ ಅಲ್ಬೋರ್ಗ್ ವಿವಿಯ ಯುನೆಸ್ಕೊ ಸೆಂಟರ್ ಫಾರ್ ಪ್ರಾಬ್ಲಮ್ ಬೇಸ್ಡ್ ಲನಿರ್ಂಗ್ ಇನ್ ಎಂಜಿನಿಯರಿಂಗ್ ಸೈನ್ಸ್ ಮತ್ತು ಸಸ್ಟೈನಬಿಲಿಟಿ ಸಹಯೋಗದಲ್ಲಿ  ‘ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಲಿಕಾ ಪದ್ಧತಿ’ ಬಗೆಗಿನ ಪ್ರಾದೇಶಿಕ ಸಂಶೋಧನಾ ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡಿದರು.

    “ರಾಷ್ಟ್ರೀಯ ಶಿಕ್ಷಣ ನೀತಿ ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಜಾರಿಗೆ ಬರುತ್ತಿದೆ. ನೂತನ ಶಿಕ್ಷಣ ನೀತಿಯ ಕರಡು ಲಭ್ಯವಾದ ಕೂಡಲೇ ಹಾಗೂ ಕೇಂದ್ರ ಸರಕಾರ ಈ ನೀತಿಯನ್ನು ಪ್ರಕಟಿಸಿದ ಮೊದಲ ದಿನದಿಂದಲೇ ಸರಕಾರ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗಿದ್ದನ್ನು ಕಂಡಿದ್ದೇನೆ” ಎಂದು ಕಸ್ತೂರಿರಂಗನ್ ಮೆಚ್ವುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ನೂತನ ಶಿಕ್ಷಣ ನೀತಿ ಈ ವರ್ಷದಿಂದ್ಲೇ ಜಾರಿ: ಅಶ್ವಥ್ ನಾರಾಯಣ್

    ಶಿಕ್ಷಣ ನೀತಿಯ ಬಗ್ಗೆ ರಾಜ್ಯ ಸರಕಾರಕ್ಕೆ ಇರುವ ಬದ್ಧತೆ, ದೂರದೃಷ್ಟಿ ಶ್ಲಾಘನೀಯ. ಡಾ.ಅಶ್ವತ್ಥನಾರಾಯಣ ಅವರು ಹೋಗುತ್ತಿರುವ ವೇಗ ನನಗೆ ಅಚ್ಚರಿ ಉಂಟು ಮಾಡಿದೆ ಎಂದು ಕಸ್ತೂರಿ ರಂಗನ್ ಹೇಳಿದರು.

    ಈ ವರ್ಷವೇ ಜಾರಿಗೆ ಸಿದ್ಧತೆ
    ಉನ್ನತ ಶಿಕ್ಷಣ ಸಚಿವ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಮಾತನಾಡಿ, “ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಜಾರಿ ಮಾಡಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ” ಎಂದರು.

    ರಾಜ್ಯವು ಉದ್ಯಮಶೀಲತೆ, ಆವಿಷ್ಕಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವುದರಿಂದ ಶಿಕ್ಷಣ ನೀತಿಯೂ ರಾಜ್ಯದ ಶೈಕ್ಷಣಿಕ ವ್ಯವಸ್ಥೆಗೆ ಹೊಸ ಹುರುಪು ನೀಡಲಿದೆ. ಸಮಸ್ಯೆಗೆ ಪರಿಹಾರ ಕಲ್ಪಿಸುವ ಶಿಕ್ಷಣ ನೀಡುವ ಮೂಲಕ ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಶೀಘ್ರದಲ್ಲೇ ಸಾಕಾರವಾಗಲಿದೆ ಎಂದೇ ಡಿಸಿಎಂ ಹೇಳಿದರು.

    ಶಿಕ್ಷಣ ನೀತಿ ಜಾರಿ ಮಾಡುವ ನಿಟ್ಟಿನಲ್ಲಿ ನನಗೆ ಅವಕಾಶ ಸಿಕ್ಕಿದ್ದು, ನನ್ನ ಜೀವಮಾನದಲ್ಲಿ ಸಿಕ್ಕಿದ ಸುವರ್ಣಾವಕಾಶ ಎಂದ ಡಿಸಿಎಂ, ನಮ್ಮ ಜ್ಞಾನ ಸಂಪತ್ತು ಹೆಚ್ಚಿಸಿಕೊಳ್ಳಲು ನೀತಿಯೂ ಹೆಚ್ಚು ಪರಿಣಾಮಕಾರಿ. ಎಲ್ಲ ಸಮಸ್ಯೆಗಳಿಗೂ ಇದೊಂದೇ ಪರಿಹಾರ ಎಂದರು.

    ಯುನೆಸ್ಕೋದ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕಲಿಕಾ ಶಿಕ್ಷಣ ವಿಭಾಗದ ಮುಖ್ಯಸ್ಥೆ ಪ್ರೊ ಅನೆಟ್ ಕೊಲ್ಮಾಸ್ ಅವರು ಮಾತನಾಡಿ, ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ತಾಂತ್ರಿಕ ಮತ್ತು ಆವಿಷ್ಕಾರ ಶಿಕ್ಷಣಕ್ಕೆ ಯುನೆಸ್ಕೋ ಹೆಚ್ಚು ಒತ್ತು ನೀಡುತ್ತಿದೆ. ಆ ನಿಟ್ಟಿನಲ್ಲಿ ನಾವು ಎಲ್ಲ ದೇಶಗಳ ಜತೆ, ಮುಖ್ಯವಾಗಿ ಭಾರತದ ಜತೆ ನಿಕಟವಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದರು.

    ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ ಸೇರಿದಂತೆ ದೇಶ- ವಿದೇಶಗಳ ತಜ್ಞರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

  • ಇನ್ನು ಮುಂದೆ 10+2 ಅಲ್ಲ, 5+3+3+4 ಶಿಕ್ಷಣ ವ್ಯವಸ್ಥೆ ಜಾರಿ

    ಇನ್ನು ಮುಂದೆ 10+2 ಅಲ್ಲ, 5+3+3+4 ಶಿಕ್ಷಣ ವ್ಯವಸ್ಥೆ ಜಾರಿ

    – ಜಾರಿಯಾಗಲಿದೆ ಹೊಸ ರಾಷ್ಟ್ರೀಯ ರಾಷ್ಟ್ರೀಯ ಶಿಕ್ಷಣ ನೀತಿ
    – 6ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಕೋಡಿಂಗ್‌
    – 34 ವರ್ಷದ ಬಳಿಕ ಮಹತ್ವದ ಬದಲಾವಣೆ

    ನವದೆಹಲಿ: ಇನ್ನು ಮುಂದೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಭಾರತದಲ್ಲಿ ಜಾರಿಯಾಗಲಿದೆ. ಈಗ ಇರುವ 10+2 ಶಿಕ್ಷಣ ವ್ಯವಸ್ಥೆ 5+3+3+4 ಮಾದರಿಯಾಗಿ ಬದಲಾವಣೆಯಾಗಲಿದೆ.

    ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಕೇಂದ್ರ ಸರ್ಕಾರ ಈ ಹಿಂದೆ ಪ್ರಕಟಿಸಿತ್ತು. ಸಾರ್ವಜನಿಕರಿಂದ ಸಲಹೆಗಳನ್ನು ಪಡೆದು ಈಗ ಈ ಹೊಸ ಎನ್‌ಇಪಿಗೆ ಕೇಂದ್ರ ಕ್ಯಾಬಿನೆಟ್‌ ಒಪ್ಪಿಗೆ ನೀಡಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್ ಸುದ್ದಿಗೋಷ್ಠಿ ನಡೆಸಿ ಹೊಸ ನೀತಿಯ ವಿವರಗಳನ್ನು ನೀಡಿದರು.

    2015ರಿಂದ ಎನ್‌ಇಪಿ ಜಾರಿ ಸಂಬಂಧ ಚರ್ಚೆ ನಡೆಯುತ್ತಿತ್ತು. ಈಗ ಹೊಸ ನೀತಿ ಜಾರಿಯಾಗಿದೆ. 34 ವರ್ಷದ ಹಿಂದೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಿತ್ತು. ಆದಾದ ಬಳಿಕ ಈಗ ಬದಲಾವಣೆ ಆಗುತ್ತಿದೆ.

    ಎನ್‌ಇಪಿಯಲ್ಲಿ ಏನಿದೆ?
    – ಇನ್ನು ಮುಂದೆ 10+2 ಶಿಕ್ಷಣ ವ್ಯವಸ್ಥೆ ಇರುವುದಿಲ್ಲ. ಇದನ್ನು 5+3+3+4 ರಂತೆ ವಿಂಗಡನೆ ಮಾಡಲಾಗಿದೆ. ಇದರರ್ಥ ಶಾಲೆಯ ಮೊದಲ ಐದು ವರ್ಷಗಳು ಅಡಿಪಾಯ ಹಂತ, 3 ರಿಂದ 5 ನೇ ತರಗತಿಯವರೆಗಿನ ಮೂರು ವರ್ಷಗಳನ್ನು ಪೂರ್ವಸಿದ್ಧತಾ ಹಂತವಾಗಿ ವಿಂಗಡಿಸಲಾಗಿದೆ. ನಂತರ ಮೂರು ವರ್ಷಗಳು ಮಧ್ಯಮ ಹಂತವಾಗಿ ವಿಂಗಡಿಸಲಾಗಿದೆ. ನಂತರದ ನಾಲ್ಕು ವರ್ಷವನ್ನು ದ್ವಿತೀಯ ಹಂತವನ್ನಾಗಿ ವಿಂಗಡಿಸಲಾಗಿದೆ. ಶಾಲೆಗಳು ಶಾಲೆಗಳು ಕಲೆ, ವಾಣಿಜ್ಯ, ವಿಜ್ಞಾನದ ಹೊಳೆಗಳ ಯಾವುದೇ ಕಟ್ಟುನಿಟ್ಟಿನ ರಚನೆಯನ್ನು ಹೊಂದಿರುವುದಿಲ್ಲ, ವಿದ್ಯಾರ್ಥಿಗಳು ತಾವು ಬಯಸುವ ಯಾವುದೇ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು.

    – 5ನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು
    – 6ನೇ ತರಗತಿಯಿಂದಲೇ ಕೋಡಿಂಗ್‌ ಪಾಠವನ್ನು ಹೇಳಿಕೊಡಬೇಕು

    – ಸಂಶೋಧನೆ ಸಂಬಂಧ ಇನ್ನು ಮುಂದೆ ಯಾವುದೇ ಎಂಪಿಎಲ್‌ ಇರುವುದಿಲ್ಲ.
    – ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವನ್ನು ಶಿಕ್ಷಣ ಸಚಿವಾಲಯ ಎಂದು ಮರು ನಾಮಕರಣ
    – ಬೋರ್ಡ್ ಪರೀಕ್ಷೆಗಳ ಮಹತ್ವ ಕಡಿಮೆ ಮಾಡುವುದು, ಪರೀಕ್ಷೆಗಳನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುವುದು

    – ಮಾರ್ಕ್ಸ್ ಕಾರ್ಡ್‌ಗಳು ಕೇವಲ ಅಂಕಗಳು ಮತ್ತು ಹೇಳಿಕೆಗಳಿಗೆ ಬದಲಾಗಿ ಕೌಶಲ್ಯ ಮತ್ತು ಸಾಮರ್ಥ್ಯಗಳ ಕುರಿತು ಸಮಗ್ರ ವರದಿ ನೀಡುವುದು
    – ಪ್ರತಿ ವಿದ್ಯಾರ್ಥಿ ಒಂದು ಕೌಶಲ್ಯವನ್ನು ಕಲಿಯಲೇಬೇಕು
    – ವಯಸ್ಕರಿಗೆ ಆ್ಯಪ್ ,ಆನ್ ಲೈನ್, ಟಿವಿ , ಆನ್ ಲೈನ್ ಬುಕ್ ಗಳ ಮೂಲಕ ಕಲಿಕೆಗೆ ಅವಕಾಶ
    – ಪ್ರಾದೇಶಿಕ ಭಾಷೆಗಳಲ್ಲಿ ಇ- ಕಂಟೆಂಟ್ ಪೂರೈಕೆ

    – ಮಧ್ಯದಲ್ಲಿ ಕೋರ್ಸ್ ಬಿಡಲು ಬಯಸುವರಿಗೆ ಪ್ರವೇಶ ಮತ್ತು ನಿರ್ಗಮನ ಆಯ್ಕೆ
    – ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಏಕರೂಪದ ಪರೀಕ್ಷೆ
    – ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಸರ್ಕಾರದಿಂದಲೇ ಶುಲ್ಕ ನಿಗದಿ

    – ಉನ್ನತ ಶಿಕ್ಷಣದ ನೀಡುವ ಕಾಲೇಜುಗಳಲ್ಲಿ ಸಾಹಿತ್ಯ, ಸಂಗೀತ, ತತ್ವಶಾಸ್ತ್ರ, ಕಲೆ, ನೃತ್ಯ, ರಂಗಭೂಮಿ, ಶಿಕ್ಷಣ, ಗಣಿತ, ಅಂಕಿಅಂಶ, ಶುದ್ಧ ಮತ್ತು ಅನ್ವಯಿಕ ವಿಜ್ಞಾನ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಕ್ರೀಡೆ, ಅನುವಾದ ಮತ್ತು ವ್ಯಾಖ್ಯಾನ ಇತ್ಯಾದಿ ವಿಭಾಗಗಳು ಇರಬೇಕು.
    – ಉನ್ನತ ಶಿಕ್ಷಣದಲ್ಲೂ ಮೂರು ರೀತಿಯ ಭಾಷೆ ಕಲಿಕೆಗೆ ಅವಕಾಶ.