Tag: New Delhi: Mother

  • ಮಗಳಿಗೆ ನಿಶ್ಚಯವಾಗಿದ್ದ ಹುಡುಗನನ್ನ ಮನೆಗೆ ಕರೆಸಿದ್ಲು- ಫೋನ್ ಕಸಿದ್ಕೊಂಡು ತಾಯಿ ಪರಾರಿ

    ಮಗಳಿಗೆ ನಿಶ್ಚಯವಾಗಿದ್ದ ಹುಡುಗನನ್ನ ಮನೆಗೆ ಕರೆಸಿದ್ಲು- ಫೋನ್ ಕಸಿದ್ಕೊಂಡು ತಾಯಿ ಪರಾರಿ

    ನವದೆಹಲಿ: ಮಹಿಳೆಯೊಬ್ಬಳು ತನ್ನ ಮಗಳಿಗೆ ನಿಶ್ಚಯವಾಗಿದ್ದ ಮಾಜಿ ಹುಡುಗನನ್ನು ಮನೆಗೆ ಕರೆಸಿಕೊಂಡಿದ್ದು, ಆತ ಬಂದ ಕೂಡಲೇ ಫೋನ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ದೆಹಲಿಯ ಮದನ್‍ಪುರ ಖಾದರ್ ಪ್ರದೇಶದಲ್ಲಿ ನಡೆದಿದೆ.

    ಉಷಾ ಮಗಳಿಗೆ ನಿಶ್ಚಯವಾಗಿದ್ದ ಅಲೋಕ್ ಕುಮಾರ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದಳು. ಈ ಕುರಿತು ಅಲೋಕ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಉಷಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ತಾಯಿ ಉಷಾ ಮಗಳ ಮದುವೆಯನ್ನು ಅಲೋಕ್ ಕುಮಾರ್ ಜೊತೆ ನಿಶ್ಚಯ ಮಾಡಿದ್ದಳು. ಆದರೆ ಕೆಲವು ವಾದಗಳಿಂದ ಆ ಸಂಬಂಧ ಮುರಿದು ಬಿದ್ದಿದೆ. ಆದರೂ ಅಲೋಕ್ ಕುಮಾರ್ ಮೊಬೈಲ್‍ನಲ್ಲಿ ಉಷಾ ಮಗಳು ಫೋಟೋಗಳು ಇದ್ದವು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

    ಅಲೋಕ್ ಕುಮಾರ್ ನನ್ನ ಮಗಳ ಫೋಟೋಗಳನ್ನು ಮೊಬೈಲ್ ಫೋನ್‍ನಲ್ಲಿ ಇಟ್ಟುಕೊಂಡಿದ್ದನು. ಹೀಗಾಗಿ ಅವುಗಳನ್ನು ಡಿಲೀಟ್ ಮಾಡಲು ಫೋನ್ ಕಸಿದುಕೊಂಡಿದ್ದೆ ಎಂದು ಉಷಾ ಪೊಲೀಸರಿಗೆ ತಿಳಿಸಿದ್ದಾಳೆ.

    ಪೊಲೀಸರು ಆರೋಪಿ ಉಷಾ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಅಲೋಕ್ ಕುಮಾರ್‌ನನ್ನು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಕುಮಾರ್ ಕೂಡ ಉಷಾ ಹೇಳಿರುವುದು ಸತ್ಯ ಎಂದು ಹೇಳಿದ್ದಾನೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.