Tag: New dehli

  • ಅಭಿವೃದ್ಧಿ ಹೊಂದಿದ ಭಾರತಕ್ಕೆ ಪ್ರತಿ ವಲಯದಲ್ಲೂ ಅತ್ಯುತ್ತಮ ನಾಯಕತ್ವದ ಅಗತ್ಯವಿದೆ – ಮೋದಿ

    ಅಭಿವೃದ್ಧಿ ಹೊಂದಿದ ಭಾರತಕ್ಕೆ ಪ್ರತಿ ವಲಯದಲ್ಲೂ ಅತ್ಯುತ್ತಮ ನಾಯಕತ್ವದ ಅಗತ್ಯವಿದೆ – ಮೋದಿ

    ನವದೆಹಲಿ: 21ನೇ ಶತಮಾನದ `ಅಭಿವೃದ್ಧಿ ಹೊಂದಿದ ಭಾರತ’ಕ್ಕಾಗಿ ಪ್ರತಿಯೊಬ್ಬ ಭಾರತೀಯನು ಹಗಲಿರುಳು ಶ್ರಮಿಸುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ 140 ಕೋಟಿ ಜನರಿರುವ ದೇಶದಲ್ಲಿ ನಮಗೆ ಜೀವನದ ಪ್ರತಿಯೊಂದು ವಲಯದಲ್ಲಿ, ಪ್ರತಿಯೊಂದು ಕೋನದಲ್ಲಿ, ಪ್ರತಿಯೊಂದು ಅಂಶದಲ್ಲೂ ಅತ್ಯುತ್ತಮ ನಾಯಕತ್ವದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

    ಭಾರತ್ ಮಂಟಪದಲ್ಲಿ ಆಯೋಜಿಸಿದ್ದ ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್‌ಶಿಪ್ (ಸೋಲ್) (SOUL Conclave ) ಲೀಡರ್‌ಶಿಪ್ ಕಾನ್ಕ್ಲೇವ್‌ನ ಮೊದಲ ಆವೃತ್ತಿಯನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಮಾತನಾಡಿದರು. ಭೂತಾನಿನ ಪ್ರಧಾನಿ ತ್ಸೆರಿಂಗ್ ಟೋಬ್ಗೆ ಕೂಡ ಈ ವೇಳೆ ಇದ್ದರು.ಇದನ್ನೂ ಓದಿ: ಯೂಟ್ಯೂಬರ್ ರಣವೀರ್‌ ಅಲಹಬಾದಿಯಾ ಕೀಳು ಹೇಳಿಕೆ ಕೇಸ್‌ – ರಾಖಿ ಸಾವಂತ್‌ಗೆ ಸಮನ್ಸ್

    ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ನಾಗರಿಕರ ಅಭಿವೃದ್ಧಿ ಅಗತ್ಯ, ವೈಯಕ್ತಿಕ ಅಭಿವೃದ್ಧಿಯ ಮೂಲಕ ರಾಷ್ಟ್ರ ನಿರ್ಮಾಣ, `ಜನರಿಂದ ಜಗತ್ತು’, ಯಾವುದೇ ಎತ್ತರವನ್ನು ಸಾಧಿಸಲು, ಅದು ಜನರಿಂದ ಮಾತ್ರ ಪ್ರಾರಂಭವಾಗುತ್ತದೆ. ಇದಕ್ಕಾಗಿ ಉತ್ತಮ ನಾಯಕರ ಅಭಿವೃದ್ಧಿ ಅಗತ್ಯವಾಗಿದೆ, ಆದ್ದರಿಂದ `ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್‌ಶಿಪ್’ ಸ್ಥಾಪನೆಯು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಒಂದು ಪ್ರಮುಖ ಮತ್ತು ದೊಡ್ಡ ಹೆಜ್ಜೆಯಾಗಿದೆ ಎಂದರು.

    ಸ್ವಾಮಿ ವಿವೇಕಾನಂದರು ಭಾರತವನ್ನು ಗುಲಾಮಗಿರಿಯಿಂದ ಹೊರತರಲು ಬಯಸಿದ್ದರು ಮತ್ತು ಅವರಿಗೆ 100 ನಾಯಕರು ಇದ್ದರೆ, ಅವರು ಭಾರತಕ್ಕೆ ಸ್ವಾತಂತ್ರ‍್ಯ ನೀಡುವುದಲ್ಲದೆ, ವಿಶ್ವದ ನಂಬರ್ ಒನ್ ದೇಶವನ್ನಾಗಿ ಮಾಡಬಹುದು ಎಂದು ನಂಬಿದ್ದರು. ನಾವೆಲ್ಲರೂ ಈ ಮಂತ್ರದೊಂದಿಗೆ ಮುಂದುವರಿಯಬೇಕು ಎಂದು ಹೇಳಿದರು.

    ಮುಂಬರುವ ದಿನಗಳಲ್ಲಿ ಭಾರತದ ಪ್ರಭಾವವು ಎಲ್ಲಾ ವಲಯಗಳಲ್ಲಿ ಹಲವು ಪಟ್ಟು ಹೆಚ್ಚಾಗುತ್ತದೆ. ಒಂದು ರೀತಿಯಲ್ಲಿ ಭಾರತದ ಸಂಪೂರ್ಣ ದೃಷ್ಟಿಕೋನ ಮತ್ತು ಭವಿಷ್ಯವು ಬಲವಾದ ನಾಯಕತ್ವ ಪೀಳಿಗೆಯ ಮೇಲೆ ಅವಲಂಬಿತವಾಗಿರುತ್ತದೆ, ಆದ್ದರಿಂದ ನಾವು ಜಾಗತಿಕ ಚಿಂತನೆ ಮತ್ತು ಸ್ಥಳೀಯ ಪಾಲನೆಯೊಂದಿಗೆ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟರು.

    ಭೂತಾನಿನ ಪ್ರಧಾನಿ ದಾಸೋ ತ್ಸೆರಿಂಗ್ ಟೋಗ್ಬೇ ಮಾತನಾಡಿ, ಈ ಎರಡು ದಿನಗಳ ಸಮ್ಮೇಳನದಲ್ಲಿ ರಾಜಕೀಯ, ಕ್ರೀಡೆ, ಕಲೆ, ಮಾಧ್ಯಮ, ಆಧ್ಯಾತ್ಮಿಕತೆ, ಸಾರ್ವಜನಿಕ ನೀತಿ, ವ್ಯವಹಾರ ಮತ್ತು ಸಾಮಾಜಿಕ ಕ್ಷೇತ್ರದ ವ್ಯಕ್ತಿಗಳು ತಮ್ಮ ಯಶೋಗಾಥೆಗಳನ್ನು ಹಂಚಿಕೊಳ್ಳಲಿದ್ದಾರೆ ಎಂದರು.ಇದನ್ನೂ ಓದಿ: ಕನ್ನಡ ಚಲನಚಿತ್ರ ರಂಗದ ಯಶಸ್ವಿ ಚಿತ್ರ ನಿರ್ದೇಶಕ ಎಸ್.ಉಮೇಶ್ ನಿಧನ

     

  • ಮುಂದಿನ 24 ಗಂಟೆಯಲ್ಲಿ ದೆಹಲಿ ಗದ್ದುಗೆಗೆ ನೂತನ ಸಾರಥಿ – ಸಿಎಂ ರೇಸ್‌ನಲ್ಲಿರುವ ಟಾಪ್‌ -5 ಕಲಿಗಳು ಯಾರು?

    ಮುಂದಿನ 24 ಗಂಟೆಯಲ್ಲಿ ದೆಹಲಿ ಗದ್ದುಗೆಗೆ ನೂತನ ಸಾರಥಿ – ಸಿಎಂ ರೇಸ್‌ನಲ್ಲಿರುವ ಟಾಪ್‌ -5 ಕಲಿಗಳು ಯಾರು?

    ನವದೆಹಲಿ: ಆಮ್‌ ಆದ್ಮಿ ಪಕ್ಷದ ನಾಯಕರೂ ಆಗಿರುವ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. 48 ಗಂಟೆಗಳ ಒಳಗಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಇನ್ನೂ 24 ಗಂಟೆ ಬಾಕಿ ಉಳಿದಿದೆ. ಈ ನಡುವೆ ದೆಹಲಿಯ ಸಿಎಂ ಗದ್ದುಗೆಗೆ ಪೈಪೋಟಿ ಶುರುವಾಗಿದೆ.

    ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ (Liquor Policy Case) ಬರೋಬ್ಬರಿ 6 ತಿಂಗಳು ಜೈಲಿನಲ್ಲಿದ್ದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಇದೇ ಸೆಪ್ಟೆಂಬರ್‌ 13ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆ ಬಳಿಕ ಮೊದಲ ಭಾಷಣ ಮಾಡಿದ ಕೇಜ್ರಿವಾಲ್‌ ರಾಜೀನಾಮೆ ಘೋಷಿಸಿದರು. ಅಲ್ಲದೇ ಜನತೆ ತೀರ್ಪು ನೀಡುವವರೆಗೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಈ ನಡುವೆ ಆಪ್‌ನಲ್ಲೇ ಇರುವ ದಿಗ್ಗಜ ನಾಯಕರ ನಡುವೆ ಪೈಪೋಟಿ ಶುರುವಾಗಿದೆ.

    ಸದ್ಯ ಸಿಎಂ ರೇಸ್‌ನಲ್ಲಿ ಸಚಿವೆ ಅತಿಶಿ (Atishi), ಮೂರು ಬಾರಿ ಶಾಸಕರಾಗಿರುವ ಸೌರಭ್ ಭಾರದ್ವಾಜ್, ರಾಘವ್‌ ಛಡ್ಡಾ, ಕೈಲಾಶ್‌ ಗೆಹ್ಲೋಟ್‌ ಹಾಗೂ ಸಂಜಯ್‌ ಸಿಂಗ್‌ ಅವರ ಹೆಸರು ಕೇಳಿಬಂದಿದೆ. ಸಚಿವ ಸಂಪುಟ ಸಭೆಯ ಬಳಿಕ ದೆಹಲಿಗೆ ನೂತನ ಸಿಎಂ ಹೆಸರು ಘೋಷಣೆ ಮಾಡಲಾಗುತ್ತದೆ ಎಂದು ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: Viral Video | ಜಮ್ಮು-ಕಾಶ್ಮೀರದಲ್ಲಿ ಉಗ್ರರು ಸೇನೆ ನಡುವೆ ಗುಂಡಿನ ಚಕಮಕಿ – ರಕ್ಷಣೆಗಾಗಿ ಓಡಿದ ಭಯೋತ್ಪಾದಕ!

    2025ರ ಫೆಬ್ರವರಿಯಲ್ಲಿ ದೆಹಲಿ ಚುನಾವಣೆ:
    ಮುಂದಿನ ನವೆಂಬರ್‌ನಲ್ಲೇ ಮಹಾರಾಷ್ಟ್ರ ಚುನಾವಣೆಯ ಜೊತೆಗೆ ದೆಹಲಿ ಚುನಾವಣೆ ನಡೆಸುವಂತೆ ಕೇಜ್ರಿವಾಲ್‌ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಆದ್ರೆ ಆಯೋಗ ಮನವಿ ತಿರಸ್ಕರಿಸಿದ್ದು, 2025ರ ಫೆಬ್ರವರಿಯಲ್ಲಿ ದೆಹಲಿಯ ವಿಧಾನಸಭಾ ಚುನಾವಣೆ ನಡೆಯಲಿದೆ.

    ಈ ನಡುವೆ ಮಾತನಾಡಿರುವ ಸಿಎಂ ಕೇಜ್ರಿವಾಲ್‌, ಮಾಡಿ ಡಿಸಿಎಂ ಮನೀಶ್ ಸಿಸೋಡಿಯಾ ಅವರೊಂದಿಗೆ ನಾನು ಜನರ ಬಳಿಗೆ ಹೋಗುತ್ತೇನೆ. ಜನರ ತೀರ್ಪು ಪಡೆದ ನಂತರವೇ ಕಚೇರಿಗೆ ಮರಳುತ್ತೇನೆ ಎಂದು ಗುಡುಗಿದ್ದಾರೆ. ಇದನ್ನೂಓದಿ: Breaking – ಸಿಎಂ ಹುದ್ದೆಗೆ ರಾಜೀನಾಮೆ ಘೋಷಿಸಿದ ಅರವಿಂದ್‌ ಕೇಜ್ರಿವಾಲ್‌!

    ಕೇಸ್‌ ಹಾಕಿದ್ರೆ ರಾಜೀನಾಮೆ ಕೊಡಬೇಡಿ:
    ಭಾನುವಾರ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಕೇಜ್ರಿವಾಲ್‌, ಪ್ರಜಾಪ್ರಭುತ್ವ ಉಳಿಸುವ ಉದ್ದೇಶದಿಂದ ಈ ಹಿಂದೆ ಬಂಧನಕ್ಕೊಳಗಾಗಿದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ ಎಂದ ಅವರು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಉಲ್ಲೇಖಿಸಿದ್ದರು. ನಾನು ಬಿಜೆಪಿಯೇತರರಿಗೆ ಮನವಿ ಮಾಡಲು ಬಯಸುತ್ತೇನೆ, ಅವರು ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿದರೆ ರಾಜೀನಾಮೆ ನೀಡಬೇಡಿ. ಇದು ಅವರ ಹೊಸ ಆಟ ಎಂದು ಕರೆ ನೀಡಿದ್ದರು.

    ಇದು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಗಿಂತ ಹೆಚ್ಚು ಸರ್ವಾಧಿಕಾರಿ ಆಡಳಿತವಾಗಿದೆ. ಕೇಂದ್ರ ಸರ್ಕಾರ ಏನೇ ಪಿತೂರಿ ಮಾಡಿದರೂ ನಮ್ಮ ಸಂಕಲ್ಪ ಮುರಿಯಲು ಸಾಧ್ಯವಿಲ್ಲ, ರಾಷ್ಟ್ರಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಮುಂಬೈ ಮೂಲದ ಮಾಡೆಲ್‍ಗೆ ಕಿರುಕುಳ – ಆಂಧ್ರದ ಮೂವರು ಐಪಿಎಸ್ ಅಧಿಕಾರಿಗಳು ಸಸ್ಪೆಂಡ್

  • ಹಣ ನೀಡಲಿಲ್ಲವೆಂದು ವೃದ್ಧ ತಂದೆಯನ್ನೇ ಕೊಲೆ ಮಾಡಿದ ಪಾಪಿ ಮಗ- ತಾಯಿ ಸ್ಥಿತಿ ಗಂಭೀರ

    ಹಣ ನೀಡಲಿಲ್ಲವೆಂದು ವೃದ್ಧ ತಂದೆಯನ್ನೇ ಕೊಲೆ ಮಾಡಿದ ಪಾಪಿ ಮಗ- ತಾಯಿ ಸ್ಥಿತಿ ಗಂಭೀರ

    ನವದೆಹಲಿ: ಹಣ (Money) ನೀಡಲಿಲ್ಲವೆಂದು ಪಾಪಿ ಮಗನೇ (Son) ವೃದ್ಧ ತಂದೆಯನ್ನು (Father) ಕೊಲೆ ಮಾಡಿ, ತಾಯಿಯ (Mother) ಮೇಲೆ ಹಲ್ಲೆ ನಡೆಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

    ನವದೆಹಲಿಯ (NewDehli) ಫತೇ ನಗರದ ನಿವಾಸಿಗಳಾದ ಸ್ವರ್ಣಜೀತ್ ಸಿಂಗ್ (65) ಮೃತ ದುರ್ದೈವಿ ಹಾಗೂ ಪತ್ನಿ ಅಜೀಂದರ್ ಕೌರ್ (60) ತೀವ್ರ ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಇವರ ಮಗ ಜಸ್ದೀಪ್ ಸಿಂಗ್ (34) ಷೇರು ಮಾರುಕಟ್ಟೆಯಲ್ಲಿ ಲಕ್ಷಗಟ್ಟಲೇ ಹಣವನ್ನು ಕಳೆದುಕೊಂಡಿದ್ದ. ಈ ಹಿನ್ನೆಲೆಯಲ್ಲಿ ತನ್ನ ತಂದೆಯಿಂದ ಹಣ ಕೊಡಲು ಬೇಡಿಕೆಯಿಟ್ಟಿದ್ದಾನೆ. ಇದಕ್ಕೆ ಆತನ ತಂದೆ ಸ್ವರ್ಣಜೀತ್‌ ಹಣ ನೀಡಲು ನಿರಾಕರಿಸಿದ್ದಾನೆ.

    ಇದರಿಂದ ಕೋಪಗೊಂದ ಜಸ್ಪೀದ್‌ ಸಿಂಗ್‌ ಹಾಗೂ ಆತನ ಪತ್ನಿ ಸೇರಿ ಸ್ವರ್ಣಜೀತ್ ಸಿಂಗ್ ಹಾಗೂ ಅಜೀಂದರ್ ಕೌರ್ ಮೇಲೆ ಸುತ್ತಿಗೆ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡ ಸ್ವರ್ಣಜೀತ್ ಸಿಂಗ್ ಹಾಗೂ ಅಜೀಂದರ್ ಕೌರ್ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಸ್ವರ್ಣಜೀತ್‌ ಸಿಂಗ್‌ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಹಾಗೂ ಆತನ ಪತ್ನಿ ಅಜೀಂದರ್ ಕೌರ್ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಮೋದಿಯಂತೆ ಬೊಮ್ಮಾಯಿ ಸಿಎಂ ಹುದ್ದೆ ಬಿಟ್ಟು ಉಳಿದೆಲ್ಲ ಖಾತೆಗಳನ್ನ ಹಂಚಿಕೆ ಮಾಡ್ಬೇಕು – ಯತ್ನಾಳ್

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಜಸ್ದೀಪ್ ಸಿಂಗ್‌ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಬಗ್ಗೆ ಮಾತನಾಡುತ್ತಿರೋ ಯತ್ನಾಳ್‍ರನ್ನ ಹೈಕಮಾಂಡ್ ಗಮನಿಸ್ತಿದೆ: ನಾರಾಯಣಸ್ವಾಮಿ

    Live Tv
    [brid partner=56869869 player=32851 video=960834 autoplay=true]

  • ಡಿಜಿಟಲ್ ವಿಶ್ವವಿದ್ಯಾಲಯವು ಭಾರತದ ಶಿಕ್ಷಣ ನೀತಿಯಲ್ಲಿ ಅಭೂತಪೂರ್ವ ಹೆಜ್ಜೆ: ಮೋದಿ

    ಡಿಜಿಟಲ್ ವಿಶ್ವವಿದ್ಯಾಲಯವು ಭಾರತದ ಶಿಕ್ಷಣ ನೀತಿಯಲ್ಲಿ ಅಭೂತಪೂರ್ವ ಹೆಜ್ಜೆ: ಮೋದಿ

    ನವದೆಹಲಿ: ಡಿಜಿಟಲ್ ವಿಶ್ವವಿದ್ಯಾನಿಲಯವು ಭಾರತದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಭೂತಪೂರ್ವ ಹೆಜ್ಜೆಯಾಗಿದ್ದು, ದೇಶದಲ್ಲಿ ಸೀಟುಗಳ ಕೊರತೆಯ ಸಮಸ್ಯೆಯನ್ನು ಕೊನೆಗೊಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

    2022ರ ಕೇಂದ್ರ ಬಜೆಟ್‍ನಲ್ಲಿ ಮಾಡಲಾದ ಘೋಷಣೆಗಳ ಅನುಷ್ಠಾನದ ಕುರಿತು ಶಿಕ್ಷಣ ಸಚಿವಾಲಯದ ವೆಬಿನಾರ್‍ನ ಸಮಗ್ರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, 2022-23ರ ಕೇಂದ್ರ ಬಜೆಟ್ ಹೊಸದನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೋಂದು ಆಳವಾದ ಶಿಕ್ಷಣ ನೀತಿಯಾಗಿದೆ ಎಂದರು. ಇದನ್ನೂ ಓದಿ: ಇಂಟಲಿಜೆನ್ಸ್ ಈಶ್ವರಪ್ಪ ಹತ್ರ ಇದೆಯಾ..?- ಪ್ರಿಯಾಂಕ್ ಖರ್ಗೆ ಕಿಡಿ

    ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಡಿಜಿಟಲ್ ಸಂಪರ್ಕವು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ಚಾಲನೆಯಲ್ಲಿಟ್ಟಿತು ಎಂಬುದನ್ನು ಸಹ ಪ್ರಧಾನಿಯವರು ವೆಬಿನಾರ್‍ನಲ್ಲಿ ಭಾಗವಹಿಸಿದ ಸಭಿಕರಿಗೆ ತಿಳಿಸಿದರು.

    ಯುವ ಪೀಳಿಗೆಯನ್ನು ಭಾರತದ ಭವಿಷ್ಯ ಅಂತ ವಿವರಿಸಿದ ಅವರು ಸೋಮವಾರ ಭಾರತದ ಭವಿಷ್ಯದ ನಾಯಕರನ್ನು ಸಬಲೀಕರಣಗೊಳಿಸಲು ಕರೆ ನೀಡಿದರು. ನಮ್ಮ ಯುವ ಪೀಳಿಗೆ ದೇಶದ ಭವಿಷ್ಯದ ನಾಯಕರು. ಆದ್ದರಿಂದ ಇಂದಿನ ಯುವ ಪೀಳಿಗೆಯನ್ನು ಸಶಕ್ತಗೊಳಿಸುವುದು ಎಂದರೆ ಭಾರತದ ಭವಿಷ್ಯವನ್ನು ಸಶಕ್ತಗೊಳಿಸುವುದಾಗಿದೆ ಎಂದರು.

    2022ರ ಕೇಂದ್ರ ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ 5 ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮೊದಲನೆಯದು ಗುಣಮಟ್ಟದ ಶಿಕ್ಷಣದ ಸಾರ್ವತ್ರೀಕರಣ, ಎರಡನೆಯದು ಕೌಶಲ್ಯ ಅಭಿವೃದ್ಧಿ, ಮೂರನೆಯದು ನಗರ ಯೋಜನೆ ಮತ್ತು ವಿನ್ಯಾಸ. ನಾಲ್ಕನೆಯದು ಅಂತರಾಷ್ಟ್ರೀಕರಣ – ಭಾರತದಲ್ಲಿ ವಿಶ್ವ ದರ್ಜೆಯ ವಿದೇಶಿ ವಿಶ್ವವಿದ್ಯಾಲಯಗಳು ಮತ್ತು ಐದನೆಯದು ಎವಿಜಿಸಿ – ಆನಿಮೇಷನ್ ವಿಷುಯಲ್ ಎಫೆಕ್ಟ್ಸ್ ಗೇಮಿಂಗ್ ಕಾಮಿಕ್ ಆಗಿದೆ ಎಂದರು.

    ರಾಷ್ಟ್ರೀಯ ಡಿಜಿಟಲ್ ವಿಶ್ವವಿದ್ಯಾಲಯವು ಭಾರತದಲ್ಲಿ ಸೀಟುಗಳ ಕೊರತೆಯ ಸಮಸ್ಯೆಯನ್ನು ಪರಿಹರಿಸುತ್ತದೆ. ಈ ನೀತಿಯಲ್ಲಿ ಅನಿಯಮಿತ ಸೀಟುಗಳಿರುತ್ತವೆ. ಡಿಜಿಟಲ್ ವಿಶ್ವವಿದ್ಯಾನಿಲಯವು ಸಾಧ್ಯವಾದಷ್ಟು ಬೇಗ ಪ್ರಾರಂಭಿಸಲು ನಾನು ಎಲ್ಲಾ ಮಧ್ಯಸ್ಥಗಾರರನ್ನು ಕೋರುತ್ತೇನೆ ಎಂದು ಆಗ್ರಹಿಸಿದರು.

    ಮಾತೃಭಾಷೆಯಲ್ಲಿ ಶಿಕ್ಷಣವು ಮಕ್ಕಳ ಮಾನಸಿಕ ಬೆಳವಣಿಗೆಗೆ ಸಂಬಂಧಿಸಿದೆ. ಹಲವಾರು ವೈದ್ಯಕೀಯ, ಟೆಕ್-ಎಡ್ಯೂ ಸ್ಟಾರ್ಟ್‍ಅಪ್‍ಗಳು ಅನೇಕ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಪ್ರಾರಂಭವಾಗಿವೆ. ಇ-ವಿದ್ಯಾ, ಒನ್ ಕ್ಲಾಸ್ ಒನ್ ಚಾನೆಲ್, ಡಿಜಿಟಲ್ ಲ್ಯಾಬ್‍ಗಳು, ಡಿಜಿಟಲ್ ಯೂನಿವರ್ಸಿಟಿಯಂತಹ ಶೈಕ್ಷಣಿಕ ಮೂಲಸೌಕರ್ಯಗಳು ಯುವಕರಿಗೆ ಬಹಳಷ್ಟು ಸಹಾಯ ಮಾಡಲಿವೆ ಎಂದರು. ಇದನ್ನೂ ಓದಿ: 2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಹೇಳಿಕೆ

    ಶಿಕ್ಷಣ ಮತ್ತು ಕೌಶಲ್ಯ ವಲಯದ ಕುರಿತು ವೆಬಿನಾರ್ ಅನ್ನು ಆಯೋಜಿಸುತ್ತಿರುವ ಶಿಕ್ಷಣ ಸಚಿವಾಲಯವು ಪ್ರಸ್ತುತತೆಯ ವಿವಿಧ ವಿಷಯಗಳ ಕುರಿತು ಅಧಿವೇಶನಗಳನ್ನು ನಡೆಸುತ್ತದೆ. ವಿವಿಧ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ಸರ್ಕಾರಿ ಅಧಿಕಾರಿಗಳು, ಉದ್ಯಮ ಪ್ರತಿನಿಧಿಗಳು, ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಹಾಗೂ ಇತರ ತಜ್ಞರು ಈ ವೆಬಿನಾರ್‍ನಲ್ಲಿ ಭಾಗವಹಿಸುತ್ತಾರೆ.

    ಹಲವಾರು ವಿಷಯಗಳ ಅಡಿಯಲ್ಲಿ ಏಳು ಸಮಾನಾಂತರ ವಿರಾಮವಿಲ್ಲದ ಸೆಷನ್‍ಗಳನ್ನು ನಡೆಸಲಾಗುತ್ತದೆ. ಶಿಕ್ಷಣದ ಸುಲಭತೆ ಮತ್ತು ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳುವುದರ ಮೇಲೆ ಗಮನಹರಿಸುವ ತತ್ವಗಳಿಗೆ ಅನುಗುಣವಾಗಿ ಕಾರ್ಯಗತಗೊಳಿಸಲು ಕ್ರಮದ ಅಂಶಗಳು, ವಿಶಾಲವಾದ ಕಾರ್ಯತಂತ್ರಗಳು ಮತ್ತು ಟೈಮ್‍ಲೈನ್‍ಗಳಂತಹ ವಿಷಯಗಳ ಕುರಿತು ಈ ವೆಬಿನಾರ್‍ನಲ್ಲಿ ಚರ್ಚಿಸಲಾಗುತ್ತದೆ.

    ಡಿಜಿಟಲ್ ಯೂನಿವರ್ಸಿಟಿ, ದಿ ಡಿಜಿಟಲ್ ಟೀಚರ್, ಒನ್ ಕ್ಲಾಸ್ ಒನ್ ಚಾನೆಲ್‍ನ ವಿಸ್ತರಣೆ, ನಗರ ಯೋಜನೆ ಮತ್ತು ವಿನ್ಯಾಸದಲ್ಲಿ ಭಾರತದ ನಿರ್ದಿಷ್ಟ ಜ್ಞಾನ, ಬಲವಾದ ಉದ್ಯಮ-ಕೌಶಲ್ಯ ಸಂಪರ್ಕವನ್ನು ಬೆಳೆಸುವ ಕಡೆಗೆ ಅಭಿವೃದ್ಧಿಪಡಿಸುವುದು. ಸಿಟಿಯಲ್ಲಿನ ಶಿಕ್ಷಣ ಸಂಸ್ಥೆಗಳು ಮತ್ತು ಎವಿಜಿಸಿಯಲ್ಲಿ ಉದ್ಯಮ-ಕೌಶಲ್ಯ ಸಂಪರ್ಕವನ್ನು ಬಲಪಡಿಸುವುದು ವೆಬ್‍ನಾರ್‍ನ ವಿಷಯಗಳಾಗಿವೆ.

    ಬಜೆಟ್ ಘೋಷಣೆಗಳ ಸಮರ್ಥ ಮತ್ತು ತ್ವರಿತ ಅನುಷ್ಠಾನಕ್ಕೆ ಅನುಕೂಲವಾಗುವಂತೆ, ಭಾರತ ಸರ್ಕಾರವು ವಿವಿಧ ಪ್ರಮುಖ ವಲಯಗಳಲ್ಲಿ ವೆಬಿನಾರ್‍ಗಳ ಸರಣಿಯನ್ನು ನಡೆಸುತ್ತದೆ. ಸಾರ್ವಜನಿಕ ಮತ್ತು ಖಾಸಗಿ ವಲಯಗಳು, ಶೈಕ್ಷಣಿಕ ಮತ್ತು ಉದ್ಯಮದ ತಜ್ಞರೊಂದಿಗೆ ಚರ್ಚೆ ಮಾಡುವುದು. ವಿವಿಧ ಕ್ಷೇತ್ರಗಳ ಅಡಿಯಲ್ಲಿ ವಿವಿಧ ಸಮಸ್ಯೆಗಳ ಅನುಷ್ಠಾನಕ್ಕೆ ಹೇಗೆ ಉತ್ತಮವಾಗಿ ಮುಂದುವರಿಯುವುದು ಎಂಬುದರ ಕುರಿತು ಕಾರ್ಯತಂತ್ರಗಳನ್ನು ಗುರುತಿಸುವುದು ಇದರ ಉದ್ದೇಶವಾಗಿದೆ ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

  • ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ – ಯೆಲ್ಲೋ ಅಲರ್ಟ್ ಜಾರಿ

    ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ – ಯೆಲ್ಲೋ ಅಲರ್ಟ್ ಜಾರಿ

    ಶಿಮ್ಲಾ: ಮುಂದಿನ 48 ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ ಜನಪ್ರಿಯ ಪ್ರವಾಸಿ ತಾಣಗಳಾದ ಚಂಬಾ, ಸ್ಪಿತಿ, ಕುಲು, ಶಿಮ್ಲಾ ಸೇರಿದಂತೆ ಹಿಮಾಚಲ ಪ್ರದೇಶದ ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಜಾರಿ ಮಾಡಿದೆ.

    ಕಳೆದ ವರ್ಷಕ್ಕೆ ಹೊಲೀಸಿ ನೋಡಿದರೆ ಈ ವರ್ಷ ರಾಜ್ಯದಲ್ಲಿ ಅತೀಯಾದ ಹಿಮಪಾತವಾಗಿದೆ. ಇನ್ನೂ ಮುಂಬರುವ 48 ಗಂಟೆಗಳಲ್ಲಿ ಹಿಮಾಚಲ ಪ್ರದೇಶದ ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ನಗರದ ಐಎಮ್‍ಡಿ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಸುರೇಂದರ್ ಪಾಲ್ ಅವರು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ದುಬಾರಿ ಬೆಲೆಗೆ ಮನೆಯನ್ನು ಮಾರಾಟ ಮಾಡಿದ ಬಿಗ್ ಬಿ

    ಹವಾಮಾನ ಇಲಾಖೆಯು ಸೋಮವಾರ ತನ್ನ ಮುನ್ಸೂಚನೆಯಲ್ಲಿ ಭಾರೀ ಹಿಮಪಾತದಿಂದಾಗಿ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಶೀತದ ಅಲೆಗಳು ಬರುವ ನಿರೀಕ್ಷೆಯಿದ್ದು, ದೇಶದ ಬಹುತೇಕ ಭಾಗಗಳಲ್ಲಿ ಫೆಬ್ರವರಿಯಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆಯಿರುತ್ತದೆ. ಆದರೆ ಪಂಜಾಬ್ ಮತ್ತು ಹರಿಯಾಣದಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ. ಇದನ್ನೂ ಓದಿ: ಅಜ್ಮೀರ್ ದರ್ಗಾಕ್ಕೆ ಚಾದರ ಕಳಿಸಿಕೊಟ್ಟ ಪ್ರಧಾನಿ ಮೋದಿ

    ಭಾರತದ ಪರ್ಯಾಯ ದ್ವೀಪದ ಪೂರ್ವ ಮತ್ತು ನೈಋತ್ಯ ಕರಾವಳಿ ಪ್ರದೇಶಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ತಿಳಿಸಿದೆ.

    ಇದರ ಮಧ್ಯೆ ದೆಹಲಿಯಲ್ಲಿ ಬುಧವಾರ ಬೆಳಗ್ಗೆ ಮಂಜು ಕಾಣಿಸಿಕೊಂಡಿದ್ದು, ಕನಿಷ್ಠ ತಾಪಮಾನವು 11.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ರಾಜಧಾನಿಯ ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅತ್ಯಂತ ಕಳಪೆ ವರ್ಗದಲ್ಲಿದೆ. ಏಕೆಂದರೆ ಬುಧವಾರ ಬೆಳಗ್ಗೆ 7.05 ಕ್ಕೆ ವಾಯು ಗುಣಮಟ್ಟ ಸೂಚ್ಯಂಕ 341 ಆಗಿತ್ತು. ಆದರೆ ದೆಹಲಿಯ ನೆರೆಯ ಪ್ರದೇಶಗಳಲ್ಲಿ ಫರಿದಾಬಾದ್ (283), ಗಾಜಿಯಾಬಾದ್ (356), ಗ್ರೇಟರ್ ನೋಯ್ಡಾ (216), ಗುರುಗ್ರಾಮ್ (274) ಮತ್ತು ನೋಯ್ಡಾ (327) ರಷ್ಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳು ತೋರಿಸಿವೆ.

  • ದುಬಾರಿ ಬೆಲೆಗೆ ಮನೆಯನ್ನು ಮಾರಾಟ ಮಾಡಿದ ಬಿಗ್ ಬಿ

    ದುಬಾರಿ ಬೆಲೆಗೆ ಮನೆಯನ್ನು ಮಾರಾಟ ಮಾಡಿದ ಬಿಗ್ ಬಿ

    ಮುಂಬೈ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಮುಂಬೈನಲ್ಲಿ ಅನೇಕ ಬೆಲೆಬಾಳುವ ಆಸ್ತಿಗಳನ್ನು ಹೊಂದಿದ್ದಾರೆ. ಆದರೆ ಇತ್ತೀಚೆಗೆ ಅವರು ಗುಲ್ಮೊಹರ್ ಪಾರ್ಕ್‍ನಲ್ಲಿರುವ ತಮ್ಮ ದಕ್ಷಿಣ ದೆಹಲಿಯಲ್ಲಿರುವ ‘ಸೋಪಾನ್’ ಹೆಸರಿನ ಮನೆಯನ್ನು 23 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.

    ನೆಜೋನ್ ಗ್ರೂಪ್ ಆಫ್ ಕಂಪನಿಗಳ (ಸಿಇಒ) ಅವ್ನಿ ಬೇಡರ್ ಅವರಿಗೆ ಬಚ್ಚನ್ ಮನೆಯನ್ನು ಮಾರಾಟ ಮಾಡಿದ್ದಾರೆ. ಇದನ್ನೂ ಓದಿ: ಅಜ್ಮೀರ್ ದರ್ಗಾಕ್ಕೆ ಚಾದರ ಕಳಿಸಿಕೊಟ್ಟ ಪ್ರಧಾನಿ ಮೋದಿ

    ಬಚ್ಚನ್ ಅವರು ಈ ಮನೆಯುನ್ನು ಕಟ್ಟಿಸಿ ತುಂಬಾ ವರ್ಷಗಳಾಗಿದ್ದು, ಇದು ಹಳೆಯ ನಿರ್ಮಾಣವಾಗಿದೆ. ಆದ್ದರಿಂದ ನಾವು ಸೋಪಾನ್ ಮನೆಯನ್ನು ಕೆಡವುತ್ತೇವೆ. ನಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಆ ಮನೆಯನ್ನು ಹೊಸದಾಗಿ ನಿರ್ಮಿಸುತ್ತೇವೆ. ನಾವು ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ನಾನು ಹೆಚ್ಚುವರಿ ಆಸ್ತಿಗಾಗಿ ದೆಹಲಿಯಲ್ಲಿ ಒಂದು ಮನೆಯನ್ನು ಹುಡುಕುತ್ತಿದ್ದೆ. ಆಗ ಅಮಿತಾಬ್ ಅವರ ಮನೆ ಮಾರಾಟಕ್ಕಿರುವುದು ತಿಳಿದುಬಂದಿದ್ದು, ತಕ್ಷಣ ಆ ಮನೆಯನ್ನು ಖರೀದಿಸಿದ್ದೇವೆ ಎಂದು ಅವ್ನಿ ಅವರು ಮಾಧ್ಯಮದ ಮೂಲಕ ತಿಳಿಸಿದರು.

    ಈ ಹಿಂದೆ ಸೋಪಾನ್ ಮನೆಯಲ್ಲಿ ಅಮಿತಾಭ್ ಬಚ್ಚನ್ ಅವರ ತಂದೆ ಪ್ರಸಿದ್ಧ ಕವಿ ಹರಿವಂಶ್ ರಾಯ್ ಬಚ್ಚನ್ ಮತ್ತು ಅವರ ತಾಯಿ ದಿವಂಗತ ತೇಜಿ ಬಚ್ಚನ್‍ರವರು ವಾಸಿಸುತ್ತಿದ್ದರು. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳ ಜೊತೆ ಪ್ರವಾಸಕ್ಕೆ ಬಂದ ನಟ ಶಿವಣ್ಣ

    ಈ ಮನೆಯು 418.5 ಚದರ ಮೀಟರ್ ಜಾಗದಲ್ಲಿದ್ದು, ಡಿಸೆಂಬರ್ 7 ರಂದು ಇದರ ನೊಂದಣಿಯನ್ನು ಪೂರ್ಣಗೊಳಿಸಲಾಗಿತ್ತು. ಹರಿವಂಶ್ ರಾಯ್ ಬಚ್ಚನ್ ಅವರು ಈ ಮನೆಯಲ್ಲಿ ವಾಸವಾಗಿದ್ದಾಗ ಕವಿಗೋಷ್ಠಿಯನ್ನು ಆಯೋಜಿಸಿದ್ದರು. ಬಚ್ಚನ್‍ರವರ ಅನೇಕ ನೆನಪುಗಳನ್ನು ಮನೆ ಹೊಂದಿದೆ. ಅಲ್ಲದೆ, ಎರಡು ಅಂತಸ್ತಿನ ಸೋಪಾನ್ ಅನ್ನು ತಾಯಿ ತೇಜಿ ಬಚ್ಚನ್ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ಈ ಬಗ್ಗೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಆಭರಣ ತಯಾರಿಕಾ ಕಂಪನಿಯ ಮೇಲೆ ಐಟಿ ದಾಳಿ-500 ಕೋಟಿ ಕಪ್ಪು ಹಣ ವಶ

    ಆಭರಣ ತಯಾರಿಕಾ ಕಂಪನಿಯ ಮೇಲೆ ಐಟಿ ದಾಳಿ-500 ಕೋಟಿ ಕಪ್ಪು ಹಣ ವಶ

    ನವದೆಹಲಿ: ರಾಜಸ್ಥಾನದ ಜೈಪುರ ಮೂಲದ ಆಭರಣ ತಯಾರಿಕೆ ಮತ್ತು ರಫ್ತು ಸಮೂಹವೊಂದರ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ದಾಳಿ ನಡೆಸಿ 500 ಕೋಟಿ ರೂ. ಕಪ್ಪು ಹಣ ವಶಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

    ತೆರಿಗೆ ವಂಚಿಸಿದ ಕಂಪನಿ ಯಾವುದು ಎಂದು ಇನ್ನೂ ಬಹಿರಂಗವಾಗಿಲ್ಲ. ದೇಶಾದ್ಯಂತ ಏಕಕಾಲದಲ್ಲಿ 50 ಕಡೆ ನಡೆದ ದಾಳಿಯಲ್ಲಿ ತೆರಿಗೆ ವಂಚಿಸಿದ ಹಣ ಪತ್ತೆಯಾಗಿದೆ.

    ದಾಳಿ ವೇಳೆ 4 ಕೋಟಿ ರೂ. ನಗದು ಹಾಗೂ 9 ಕೋಟಿ ರೂ. ಮೌಲ್ಯದ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಅನೇಕ ದಾಖಲೆ ಪತ್ರಗಳು ದೊರೆತಿದೆ. ಕಂಪನಿಯವರು 72 ಕೋಟಿ ರೂ.ನಷ್ಟು ಹಣಕ್ಕೆ ತೆರಿಗೆ ಪಾವತಿಸದೆ ವಂಚಿಸಲಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿ ತೀರ್ಮಾನಕ್ಕೆ ಬದ್ಧ: ಎಸ್.ಆರ್ ವಿಶ್ವನಾಥ್

    ಆಫ್ರಿಕನ್ ದೇಶದಿಂದ ಈ ಕಂಪನಿ ಕಚ್ಚಾ ರೂಪದ ಅಮೂಲ್ಯ ಆಭರಣ ಹರಳುಗಳನ್ನು ತಂದು ಜೈಪುರದಲ್ಲಿ ಸಂಸ್ಕರಣೆ ಮಾಡುತ್ತಿತ್ತು. ಅದರಿಂದ ಬಂದ ಆದಾಯವನ್ನು ಬಚ್ಚಿಡುತ್ತಿತ್ತು ಎಂಬುದಾಗಿ ವರದಿಯಾಗಿದೆ. ಇದನ್ನೂ ಓದಿ: ನಡುರಸ್ತೆಯಲ್ಲಿ ಅಮ್ಮ, ಮಗಳಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ಯಾಂಗ್

  • ಉಮರ್ ಖಾಲಿದ್ ಮೇಲೆ ಶೂಟೌಟ್ ಕೇಸ್- ಕೊಲೆಗೆ ಮುಂದಾಗಿದ್ದ ಯುವಕರ ವಿಡಿಯೋ ವೈರಲ್

    ಉಮರ್ ಖಾಲಿದ್ ಮೇಲೆ ಶೂಟೌಟ್ ಕೇಸ್- ಕೊಲೆಗೆ ಮುಂದಾಗಿದ್ದ ಯುವಕರ ವಿಡಿಯೋ ವೈರಲ್

    ನವದೆಹಲಿ: ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‍ಯು) ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಮೇಲೆ ಗುಂಡು ಹಾರಿಸಿ, ಕೊಲೆಗೆ ಯತ್ನಿಸಿದ್ದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಆರೋಪಿಗಳು ಸೆಲ್ಫಿ ವಿಡಿಯೋ ಮಾಡಿಕೊಂಡು, ತಾವೇ ಕೊಲೆಗೆ ಯತ್ನಿಸಿದ್ದು, ಕೊಲೆ ಮಾಡಿದ್ದು ಏಕೆ ಎನ್ನುವುದನ್ನು ತೆರೆದಿಟ್ಟಿದ್ದಾರೆ.

    ದರ್ವೇಶ್ ಶಾಪುರ್ ಹಾಗೂ ನವೀನ್ ದಲಾಲ್ ಎಂಬವರು ಪ್ರಕರಣದ ಹೊಣೆ ಹೊತ್ತಿದ್ದು, ಒಟ್ಟು 4 ನಿಮಿಷ 31 ಸೆಕೆಂಡ್ ಇರುವ ವಿಡಿಯೋದಲ್ಲಿ ಆರೋಪಿಗಳು ತಮ್ಮ ಹೆಸರನ್ನು ಹೇಳಿಕೊಂಡಿದ್ದಾರೆ. ಉಮರ್ ಖಾಲಿದ್ ಕೊಲೆ ಮಾಡಿ ಸ್ವಾತಂತ್ರ್ಯ ದಿನಾಚರಣೆಗೆ ಗಿಫ್ಟ್ ನೀಡುವ ಉದ್ದೇಶವಿತ್ತು ಎಂದು ತಿಳಿಸಿದ್ದಾರೆ.

    ಜೆಎನ್‍ಯು ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಮೇಲೆ ದೆಹಲಿಯ ಸಂಸತ್ ಬಳಿಯಿರುವ ಸಂವಿಧಾನದ ಭವನದ ಹತ್ತಿರ ಆಗಸ್ಟ್ 13 ರಂದು ಗುಂಡಿನ ದಾಳಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ವ್ಯಕ್ತಿಯೊಬ್ಬ ಪರಾರಿಯಾಗುತ್ತಿರುವ ದೃಶ್ಯ ಸೆರೆಯಾಗಿತ್ತು. ಆರೋಪಿಗಳ ಬಂಧನಕ್ಕೆ ಚುರುಕು ಕಾರ್ಯಾಚರಣೆ ನಡೆಸಿದ್ದ ಪೊಲೀಸರಿಗೆ ವಿಡಿಯೋ ಮತ್ತಷ್ಟು ಶಾಕ್ ನೀಡಿದೆ.

    https://www.facebook.com/naveen.dalal.9406/videos/2198919687054592/

    ಆರೋಪಿಗಳು ಹೇಳಿದ್ದು ಏನು?
    ನಾವು ದೇಶದ ಸುಪ್ರಿಂ ಕೋರ್ಟ್ ಹಾಗೂ ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದರೆ ಕೆಲವರು ದೇಶಕ್ಕೆ ಮಾರಕವಾಗಿ ಬೆಳೆಯುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಂವಿಧಾನದಲ್ಲಿ ಯಾವುದೇ ಅವಕಾಶಗಳಿಲ್ಲ. ಇಂತವರಿಗೆ ಸೂಕ್ತ ಶಿಕ್ಷೆ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ವಿನಂತಿ ಮಾಡಿಕೊಳ್ಳುತ್ತಿದ್ದವೆ. ಜೆಎನ್‍ಯು ವಿದ್ಯಾರ್ಥಿ ಸಂಘಟನೆ ದೇಶಕ್ಕೆ ಮಾರಕವಾಗಿ ಬೆಳೆಯುತ್ತಿದೆ. ಅಲ್ಲದೆ ಇವರು ಸಂಘಟನೆಯನ್ನು ಹೆಚ್ಚಿಸಿ ಅನೇಕರನ್ನು ದೇಶ ವಿರೋಧಿಗಳಾಗಿ ಸೃಷ್ಟಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳಿಗೆ ಶಿಕ್ಷೆ ನೀಡಬೇಕು ಎಂದು ಹರ್ಯಾಣದ ನಮ್ಮ ಹಿರಿಯರು ಹೇಳಿದ್ದರು ಎಂದು ದರ್ವೇಶ್ ಶಾಪುರ್ ಹೇಳಿದ್ದಾನೆ.

    ನಮ್ಮನ್ನು ಬಂಧಿಸಲು ಯಾವುದೇ ಪರಿಶ್ರಮ ಪಡಬೇಕಾಗಿಲ್ಲ. ಆಗಸ್ಟ್ 17 ರಂದು ನಾವೇ ನಿಮಗೆ ಶರಣಾಗುತ್ತೇವೆ. ನೀವು ಒಂದು ವೇಳೆ ಬಂಧನಕ್ಕೆ ಮುಂದಾದರೆ ನಾವು ನಮ್ಮ ದಾರಿಯನ್ನು ಬರಲಿಸಬೇಕಾಗುತ್ತದೆ ಎಂದು ದರ್ಮೇಶ್, ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾನೆ.

    ನವೀನ್ ದಲಾಲ್ ಮಾತನಾಡಿ, ನಮಗಾಗಿ ಈ ಕೃತ್ಯ ಎಸಗಿಲ್ಲ. ದೇಶದ ಜನತೆಗಾಗಿ ಹೀಗೆ ಮಾಡಿದ್ದೇವೆ. ಆತಂಕವಾದಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ. ಭಾರತದಲ್ಲಿ ಉಮರ್ ನಂತಹ ವ್ಯಕ್ತಿ ಇದ್ದರೆ ದೇಶ ಇಬ್ಬಾಗವಾಗುತ್ತದೆ. ಪಾಕಿಸ್ತಾನ ಜಿಂದಾಬಾದ್ ಎಂದು ಅವರು ಹೇಳುತ್ತಾರೆ. ಇದನ್ನು ನಾವು ಸಹಿಸುವುದಿಲ್ಲ ಎಂದಿದ್ದಾನೆ.

    ಉಮರ್ ಪ್ರತಿಕ್ರಿಯೆ ಏನು?
    ವಿಡಿಯೋದಲ್ಲಿ ಕೇಸರಿ ಬಣ್ಣದ ಬಟ್ಟೆ ಧರಿಸಿರುವ ವ್ಯಕ್ತಿಯೇ ನನ್ನ ಮೇಲೆ ಗುಂಡಿನ ದಾಳಿಗೆ ಯತ್ನಿಸಿದವನು. ಆತ ಈಗ ಕ್ಷೌರ ಮಾಡಿಸಿಕೊಂಡಿದ್ದಾನೆ ಅಷ್ಟೇ. ಪೊಲೀಸರು ಅವವನ್ನು ಹಿಡಿದು ತಂದರೆ ಆತನನ್ನು ಗುರುತಿಸುತ್ತೇನೆ ಎಂದು ಮೆಸೇಜ್ ಮೂಲಕ ಉಮರ್ ಖಾಲಿದ್ ಪೊಲೀಸರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆರೋಪಿಗಳು ಹರಿಯಾಣ ಇಲ್ಲವೇ ಪಂಜಾಬ್ ಮೂಲದವರಾಗಿದ್ದು, ಅವರನ್ನು ಕೂಡಲೇ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಲೆಯಲ್ಲಿಯೇ 2ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!

    ಶಾಲೆಯಲ್ಲಿಯೇ 2ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!

    ನವದೆಹಲಿ: ಮುನ್ಸಿಪಲ್ ಕೌನ್ಸಿಲ್ ಶಾಲೆಯ 2ನೇ ತರಗತಿ ವಿದ್ಯಾರ್ಥಿಯನ್ನು ವಿದ್ಯುತ್ ಕೆಲಸಗಾರನೊಬ್ಬ ಅತ್ಯಾಚಾರಗೈದಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.

    ನವದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಸಿಬ್ಬಂದಿ ರಾಮ್ ಅರ್ಸೆ (37) ಎಂಬಾತನೇ ಅತ್ಯಾಚಾರಗೈದ ಆರೋಪಿ. ರಾಮ್ ಅರ್ಸೆ ಕಳೆದ ಒಂದು ತಿಂಗಳಿನಿಂದ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದನಂತೆ. ದೆಹಲಿನ ಗೋಲ್ ಮಾರ್ಕೆಟ್ ಪ್ರದೇಶದ ಶಾಲೆಯ ಆವರಣದಲ್ಲಿಯೇ ಘಟನೆ ನಡೆದಿದೆ.

    ಗುರುವಾರ ಬಾಲಕಿಯನ್ನು ಶಾಲೆಯ ಪಂಪ್ ರೂಮ್‍ಗೆ ಎಳೆದುಕೊಂಡು ಹೋದ ರಾಮ್ ಅರ್ಸೆ, ಬಾಲಕಿ ಮೇಲೆ ಅತ್ಯಾಚಾರವೆಸಗಿ, ಬಳಿಕ ಯಾರಿಗೂ ಹೇಳದಂತೆ ಎಚ್ಚರಿಕೆ ನೀಡಿದ್ದ. ಹೀಗಾಗಿ ಬಾಲಕಿ ಯಾರಿಗೂ ಹೇಳಿರಲಿಲ್ಲ. ಶಾಲೆಯಿಂದ ಬಾಲಕಿ ಮನೆಗೆ ಬಂದಾಗ, ಮಗಳ ಗುಪ್ತಾಂಗದಿಂದ ರಕ್ತಸ್ರಾವ ಆಗುತ್ತಿರುವುದನ್ನು ತಾಯಿ ಗಮನಿಸಿದ್ದಾರೆ. ಬಾಲಕಿಯನ್ನು ವಿಚಾರಿಸಿದಾಗ ನಡೆದ ಘಟನೆ ವಿವರಿಸಿದ್ದಾಳೆ ಎಂದು ವರದಿಯಾಗಿದೆ.

    ಆರೋಪಿ ರಾಮ್ ಅರ್ಸೆನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.