Tag: New couple

  • ಮದ್ವೆಯಾಗಿ ದೇವಸ್ಥಾನದಿಂದ ನೇರ ಎಸ್ಪಿ ಕಚೇರಿಗೆ ಬಂದ ನವ ದಂಪತಿ

    ಮದ್ವೆಯಾಗಿ ದೇವಸ್ಥಾನದಿಂದ ನೇರ ಎಸ್ಪಿ ಕಚೇರಿಗೆ ಬಂದ ನವ ದಂಪತಿ

    ಚಿಕ್ಕಮಗಳೂರು: ನವಜೀವನಕ್ಕೆ ಕಾಲಿಟ್ಟ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಮೂಲದ ದಂಪತಿ ಮದುವೆಯಾಗಿ ದೇವಸ್ಥಾನದಿಂದ ಸೀದಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಬಂದಿದ್ದಾರೆ.

    ಎಸ್ಪಿ ಕಚೇರಿಗೆ ಬಂದ ನವಜೋಡಿ ನಮಗೆ ಹುಡುಗಿ ಮನೆಯವರಿಂದ ಜೀವ ಬೆದರಿಕೆ ಇದೆ ಎಂದು ರಕ್ಷಣೆ ಕೋರಿದ್ದಾರೆ. ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಕಬ್ಳಿ ಗ್ರಾಮದ ಯೋಗಾನಂದ್ ಹಾಗೂ ಜಿ.ಕೊಪ್ಪಲು ಗ್ರಾಮದ ಚಂದನ ಕಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುವಾಗಲೇ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದನ್ನೂ ಓದಿ: ಕರ್ನಾಟಕದಲ್ಲೂ ಬಿಜೆಪಿಗೆ ಮತ್ತೆ ಅಧಿಕಾರ: ಅರುಣ್ ಸಿಂಗ್

    ಪದವಿ ಮುಗಿದು ಯೋಗನಾಂದ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಚಂದನ ಸೆಕೆಂಡ್ ಇಯರ್ ಬಿಕಾಂ ಓದುತ್ತಿದ್ದಾಳೆ. ಇಬ್ಬರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೀತಿ ವಿಚಾರ ಚಂದನ ಮನೆಯವರಿಗೆ ತಿಳಿದು ಆಕೆಯನ್ನು ಗೌಪ್ಯ ಸ್ಥಳದಲ್ಲಿ ಇಟ್ಟಿದ್ದನು. ಆಕೆಗೆ ಬೇರೆ ಹುಡುಗನನ್ನ ನೋಡಿ ಮದುವೆಗೆ ಎಲ್ಲಾ ಸಿದ್ಧತೆ ನಡೆಸಿದ್ದರು. ಆಗ ಪ್ರೇಮಿ ಯೋಗಾನಂದ್ ಚಂದನಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾನೆ. ಆದರೆ, ಆಕೆ ಎಲ್ಲೂ ಸಿಕ್ಕಿಲ್ಲ. ಕೊನೆಗೂ ಹೇಗೋ ಆಕೆ ಇರುವ ಜಾಗವನ್ನು ಪತ್ತೆ ಹಚ್ಚಿದ ಪ್ರೇಮಿ ಆಕೆಯನ್ನ ಕರೆದುಕೊಂಡು ಬಂದು ಸ್ನೇಹಿತರ ಸಮ್ಮುಖದಲ್ಲಿ ತರಾತುರಿಯಲ್ಲಿ ಮದುವೆಯಾಗಿದ್ದಾನೆ.

    ಇಬ್ಬರು ಈಗ ರಕ್ಷಣೆ ಕೋರುವಂತೆ ಎಸ್ಪಿಗೆ ಮನವಿ ಮಾಡಿದ್ದಾರೆ. ಓಡಿ ಹೋಗಿ ಮದುವೆಯಾದ ಇಬ್ಬರಿಗಾಗಿ ಹುಡುಗಿ ಮನೆಯವರು ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೆ, ಅವರು ಸಿಕ್ಕಿಲ್ಲ. ಎಸ್ಪಿ ಕಚೇರಿಗೆ ಬಂದು ಮನವಿ ಸಲ್ಲಿಸಿರುವ ನವದಂಪತಿ, ನಮಗೆ ಓಡಿ ಹೋಗಿ ಮದುವೆಯಾಗಬೇಕೆಂಬ ಬಯಕೆ ಇರಲಿಲ್ಲ. ಆದರೆ, ನಮ್ಮ ಮನೆಯರು ಒಪ್ಪಲಿಲ್ಲ. ಕೊಲೆ ಬೆದರಿಕೆ ಹಾಕಿದರು. ಅದಕ್ಕೆ ಓಡಿ ಹೋಗಿ ಮದುವೆಯಾಗಿದ್ದೇವೆ. ಈಗ ನಮಗೆ ನಮ್ಮ ಮನೆಯವರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ, ನಮಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗಂಡಸ್ತನ ಎಂದು ವಿವಾದ ಹುಟ್ಟಿಹಾಕುವುದು ಗಂಡಸ್ತನ ಅಲ್ಲ: ರೇಣುಕಾಚಾರ್ಯ

    ನಮಗೆ ಏನಾದರೂ ಆದರೆ ನಮ್ಮ ಮಾವಂದಿರೇ ಕಾರಣ ಎಂದು ಚಂದನಾ ಹೇಳಿದ್ದಾಳೆ. ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ನವಜೋಡಿ ಎಸ್ಪಿಗೆ ಮನವಿ ಮಾಡಿದ್ದಾರೆ. ಮಗಳ ಮದುವೆ ಬಗ್ಗೆ ಹೆತ್ತವರು ನೂರಾರು ಕನಸು ಕಟ್ಟಿಕೊಂಡಿರುತ್ತಾರೆ ನಿಜ. ಆದರೆ, ನಾವು ಇಂತವರ ಜೊತೆ ಇದ್ದರೆ ಚೆನ್ನಾಗಿರುತ್ತೇವೆ ಅನ್ನುವುದಾದರೆ ಇರಲಿ ಅನ್ನೋದು ಯೋಗಾನಂದ್ ಸ್ನೇಹಿತರ ಮಾತು.

     

  • ಫ್ರೆಂಡ್ಸ್ ಜೊತೆಗೆ ಊರು ಸುತ್ತೋಕೆ ಬಂದು ಪೊಲೀಸರ ಕೈಗೆ ತಗ್ಲಾಕೊಂಡ ನವದಂಪತಿ

    ಫ್ರೆಂಡ್ಸ್ ಜೊತೆಗೆ ಊರು ಸುತ್ತೋಕೆ ಬಂದು ಪೊಲೀಸರ ಕೈಗೆ ತಗ್ಲಾಕೊಂಡ ನವದಂಪತಿ

    ಯಾದಗಿರಿ: ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆ ಅಂತರ್ ಜಿಲ್ಲೆಯ ಪ್ರಯಾಣ ನಿಷೇಧವಿದೆ. ಹೀಗಿದ್ದರೂ ಹೊಸದಾಗಿ ಮದುವೆಯಾದ ನವದಂಪತಿ ಫ್ರೆಂಡ್ಸ್ ಜೊತೆಗೆ ಊರು ಸುತ್ತೋಕೆ ಬಂದು, ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾರೆ. ಇದನ್ನೂ ಓದಿ: ಬೈಕ್ ಬಿಟ್ಟು ಬಿಡಿ – ಡಿವೈಎಸ್ಪಿ ಕಾಲಿಗೆ ಬಿದ್ದು ಮಹಿಳೆ ಕಣ್ಣೀರು

    ಕಲಬುರಗಿ ಜಿಲ್ಲೆಯ ರಾಮತೀರ್ಥದ ನವ ಜೋಡಿಯೊಂದು ಯಾದಗಿರಿ ಮಲ್ಲಯ್ಯನ ದರ್ಶನಕ್ಕೆ ಅವರ ಗೆಳೆಯರು ಜೊತೆಗೆ ಬಂದಿದ್ದರು. ಯಾದಗಿರಿ ಸಂಪೂರ್ಣ ಲಾಕ್‍ಡೌನ್ ಆಗಿರುವ ಹಿನ್ನೆಲೆ ನಗರದಲ್ಲಿ ಪೊಲೀಸರ ಫುಲ್ ರೌಂಡ್ಸ್ ನಡೆಸುತ್ತಿದ್ದರು. ಈ ವೇಳೆ ಯಾದಗಿರಿ ನಗರದ ಡಿಗ್ರಿ ಕಾಲೇಜು ವೃತ್ತದಲ್ಲಿ ಪೊಲೀಸರ ಕೈಯಲ್ಲಿ ಈ ನವದಂಪತಿ ಸಿಕ್ಕಿದ್ದಾರೆ. ಪೊಲೀಸರ ಕಂಡ ಕೂಡಲೇ ಹೈಡ್ರಾಮಾ ಶುರು ಮಾಡಿದ ದಂಪತಿ, ಕಾರಿನಲ್ಲಿ ವಧುವಿನ ಗೆಟಪ್‍ನಲ್ಲಿದ್ದವಳು ಅಪ್ರಾನ್ ಧರಿಸಿದ ಸ್ಟಾಪ್ ನರ್ಸ್ ಆಗಿ ಬದಲಾಗಿ ಬಿಟ್ಟಿದ್ದಾಳೆ. ಇದನ್ನೂ ಓದಿ: ಮದ್ಯದಂಗಡಿಗೆ ಮುಗಿಬಿದ್ದ ಜನ

    ಈ ಬಗ್ಗೆ ವಿಚಾರಣೆ ನಡೆಸಿದಾಗ. ಪೊಲೀಸರಿಗೆ ದಾರಿ ತಪ್ಪಿಸಲು ಮುಂದಾದ ಪತಿ,ಸಾರ್ ನನ್ನ ಹೆಂಡತಿ ಸ್ಟಾಪ್ ನರ್ಸ್ ಡ್ಯೂಟಿಗೆ ಬಿಡಲು ಮತ್ತು ಜೊತೆಗೆ ನಾನು ವ್ಯಾಕ್ಸಿನ್ ಹಾಕಿಕೊಳ್ಳಲು ಬಂದೆ ಅಂತ ಕಲರ್‍ಕಲರ್ ಕಾಗೆ ಹಾರಿಸೋಕೆ ಶುರು ಮಾಡಿದ್ದಾನೆ. ಗಂಡ-ಹೆಂಡತಿ ಡ್ರಾಮಾ ಕಂಡು ಕೆಂಡಾಮಂಡಲವಾದ, ಎಸ್ಪಿ ವೇದಮೂರ್ತಿ, ಸಂಚಾರಿ ಪಿಎಸ್ ಐ ಪ್ರದೀಪ್, ತಹಶಿಲ್ದಾರ ಚನ್ನಮಲ್ಲಪ್ಪ ಘಂಟಿ ಬೈದು ಬುದ್ಧಿವಾದ ಹೇಳಿದರು. ಕಾರು ವಶಕ್ಕೆ ಪಡೆದು ದಂಡ ಹಾಕಿ ನವದಂಪತಿಗಳಿಗೆ ಮತ್ತು ಸ್ನೇಹಿತರಿಗೆ ಪೊಲೀಸರು ಖಡಕ್ ವಾನಿರ್ಂಗ್ ಕೊಟ್ಟಿದ್ದಾರೆ.  ಇದನ್ನೂ ಓದಿ: ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಅದ್ಧೂರಿ ಜಾತ್ರೆ

  • ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ – ತೆಪ್ಪ ಮುಳುಗಿ ನವಜೋಡಿ ಸಾವು

    ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ – ತೆಪ್ಪ ಮುಳುಗಿ ನವಜೋಡಿ ಸಾವು

    ಮೈಸೂರು: ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಹೋದ ನವಜೋಡಿ ತೆಪ್ಪ ಮುಳಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ತಲಕಾಡಿನಲ್ಲಿ ನಡೆದಿದೆ.

    ಇತ್ತೀಚೆಗೆ ಮದುವೆಗೂ ಮುಂಚೆ ವಧು ಮತ್ತು ವರ ಸ್ಟೈಲಿಶ್ ಆಗಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸುವ ಹೊಸ ಟ್ರೆಂಡ್ ಹುಟ್ಟಿಕೊಂಡಿದೆ. ಫೋಟೋ ವಿಭಿನ್ನವಾಗಿ ಮತ್ತು ಚೆನ್ನಾಗಿ ಬರಬೇಕು ಎಂದು ಹುಚ್ಚು ಸಾಹಸಕ್ಕೆ ಕೈಹಾಕಿ ಜೋಡಿಗಳು ಫೋಟೋ ಶೂಟ್ ಮಾಡಿಸುತ್ತಾರೆ. ಹೀಗೆ ಫೋಟೋ ಶೂಟ್ ಮಾಡಿಸಲು ಹೋಗಿ ನವಜೋಡಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

    ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾಗಿದ್ದ ಚಂದ್ರು ಮತ್ತು ಶಶಿಕಲಾ ಮದುವೆ ನಿಶ್ಚಯವಾಗಿತ್ತು. ಅಂತೆಯೇ ನವೆಂಬರ್ 22ರಂದು ಮದುವೆ ಮಾಡಲು ಕುಟುಂಬಸ್ಥರು ತಯಾರಿ ಕೂಡ ನಡೆಸಿದ್ದರು. ಆದರೆ ಚಂದ್ರು ಮತ್ತು ಶಶಿಕಲಾ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಮನೆಯವರಿಗೆ ಹೇಳದೇ ಮೈಸೂರಿನ ತಲಕಾಡಿನ ಮುಡುಕುತೊರೆ ಗ್ರಾಮದಲ್ಲಿ ಹರಿಯುವ ಕಾವೇರಿ ನದಿಗೆ ಹೋಗಿದ್ದಾರೆ.

    ಮುಡುಕುತೊರೆಯ ಕಾವೇರಿ ನದಿಯಲ್ಲಿ ತೆಪ್ಪವನ್ನು ತೆಗೆದುಕೊಂಡು ಮಧ್ಯಭಾಗದಲ್ಲಿ ಫೋಟೋಶೂಟ್ ಮಾಡಿಸಲು ತೆರೆಳಿದ್ದಾರೆ. ಈ ವೇಳೆ ತೆಪ್ಪ ಮುಳುಗಿ ನವಜೋಡಿಗಳಿಬ್ಬರು ನೀರುಪಾಲಾಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಾಚರಣೆ ಮಾಡಿ ಇಬ್ಬರ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಾಸ್ಕ್ ಧರಿಸಿ ಮದುವೆ ಮಾಡಿಕೊಂಡ ವಧು-ವರ

    ಮಾಸ್ಕ್ ಧರಿಸಿ ಮದುವೆ ಮಾಡಿಕೊಂಡ ವಧು-ವರ

    ಹುಬ್ಬಳ್ಳಿ: ಲಾಕ್‍ಡೌನ್ ವೇಳೆ ಹುಬ್ಬಳ್ಳಿಯ ಹುಡುಗ ಸಿಂಧನೂರಿನ ಯುವತಿಯನ್ನು ಕೈ ಹಿಡಿಯುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಹೌದು ಲಾಕ್‍ಡೌನ್ ಸಂದರ್ಭದಲ್ಲಿ ಮದುವೆಗಳಿಗೆ ಷರತ್ತುಬದ್ಧ ಅನುಮತಿ ನೀಡಿ, ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಆದರೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿಕೊಂಡೆ ಸಿಂಧನೂರಿನ ವಧುವನ್ನು ಹುಬ್ಬಳ್ಳಿಯ ಹುಡುಗ ಮದುವೆಯಾಗಿದ್ದಾರೆ.

    ಸಿಂಧನೂರಿನಲ್ಲಿ ಸಚೇತಿಯವರ ಮನೆಯಲ್ಲಿ ಸರಳವಾಗಿ ಮದುವೆಯ ಸಮಾರಂಭ ಜರುಗಿದ್ದು, ವಧು ಪೂನಂ ಸಚೇತಿ, ವರ ಹಸ್ಮುಖ ಜೈನ್ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಯಾಗುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ.

    ಬಿಇ ಸಿವಿಲ್ ಓದಿರುವ ಹಸ್ಮುಖ ಜೈನ್ ಹುಬ್ಬಳ್ಳಿಯಲ್ಲಿ ಒಂದು ಖಾಸಗಿ ಕಂಪನಿ ನಡೆಸುತ್ತಿದ್ದು, ಜಿಲ್ಲಾಧಿಕಾರಿಗಳ ಅನುಮತಿ ಪಡೆದುಕೊಂಡು ಹುಬ್ಬಳ್ಳಿಯಿಂದ ಹತ್ತು ಜನರು ಮದುವೆ ಕಾರ್ಯಕ್ಕೆ ತೆರಳಿದ್ದರು. ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ವಧು ವರರ ಕಡೆಯಿಂದ 20 ಜನರು ಭಾಗಿಯಾಗಿದ್ದರು. ಮದುವೆ ಕಾರ್ಯದ ನಂತರ ವಧು-ವರರು ಹುಬ್ಬಳ್ಳಿಗೆ ಆಗಮಿಸಿದ್ದಾರೆ.

  • ಹೊಂದಾಣಿಕೆ ಕೊರತೆ – ಮದುವೆಯಾದ 6 ತಿಂಗಳಲ್ಲಿ ಬಾವಿಗೆ ಹಾರಿದ ನವದಂಪತಿ

    ಹೊಂದಾಣಿಕೆ ಕೊರತೆ – ಮದುವೆಯಾದ 6 ತಿಂಗಳಲ್ಲಿ ಬಾವಿಗೆ ಹಾರಿದ ನವದಂಪತಿ

    ಬೀದರ್: ಮದುವೆಯಾದ 6 ತಿಂಗಳಲ್ಲಿಯೇ ನವ ದಂಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಡೋಳಾ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

    ಗ್ರಾಮದ ಅಂಜಲಿ (25) ಹಾಗೂ ಅವರ ಪತಿ ಉಮೇಶ ಮಡಿವಾಳ (28) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಕಳೆದ ಮೇ ತಿಂಗಳಲ್ಲಿ ತಾಲೂಕಿನ ಮಂಠಾಳ ಗ್ರಾಮದ ಅಂಜಲಿಯನ್ನು ತಡೋಳ ಗ್ರಾಮದ ಉಮೇಶನಿಗೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾದಾಗಿನಿಂದ ದಂಪತಿ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಆಗಾಗ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.

    ಗುರುವಾರ ತಡ ರಾತ್ರಿ ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದ್ದು, ಇಬ್ಬರು ಕೂಡಿಯೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿದು ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರ ಸಹಾಯದೊಂದಿಗೆ ಬಾವಿಯಿಂದ ಶವಗಳನ್ನು ಮೇಲೆತ್ತಿದ್ದಾರೆ. ಸ್ಥಳಕ್ಕೆ ಮಂಠಾಳ ಸಿಪಿಐ ಮಹೇಶಗೌಡ ಪಾಟೀಲ, ಪಿಎಸ್‍ಐ ಅರುಣಕುಮಾರ ಆಗಮಿಸಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಅದ್ಧೂರಿಯಾಗಿ ನಡೆದ ಆಷಾಢದಲ್ಲಿ ನವದಂಪತಿ ಸೇರುವ ಜಾತ್ರಾ ಮಹೋತ್ಸವ

    ಅದ್ಧೂರಿಯಾಗಿ ನಡೆದ ಆಷಾಢದಲ್ಲಿ ನವದಂಪತಿ ಸೇರುವ ಜಾತ್ರಾ ಮಹೋತ್ಸವ

    ರಾಮನಗರ: ಆಷಾಢ ಮಾಸದಲ್ಲಿ ನೂತನ ದಂಪತಿಗಳನ್ನು ಬೇರೆ ಮಾಡಿ, ಹೆಣ್ಣನ್ನು ತವರು ಮನೆಗೆ ಕಳಿಸುವುದು ವಾಡಿಕೆ. ಯಾಕೆಂದರೆ ಆಷಾಢ ಮಾಸದಲ್ಲಿ ಅತ್ತೆ-ಸೊಸೆ ಒಂದೇ ಬಾಗಿಲಿನಲ್ಲಿ ಓಡಾಡಿದರೆ ಕೇಡಾಗುತ್ತೆ ಎನ್ನಲಾಗುತ್ತದೆ.

    ಆದರೆ ದಂಪತಿಗಳನ್ನು ಆಷಾಢದಲ್ಲಿ ಒಂದೆಡೆ ಸೇರಿಸುವಂತಹ ಜಾತ್ರಾ ಮಹೋತ್ಸವ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೇವರ ಹೊಸಹಳ್ಳಿಯಲ್ಲಿ ನಡೆಯುತ್ತದೆ. ನೂತನ ದಂಪತಿಗಳನ್ನು ಒಂದೆಡೆ ಸೇರಿಸುವ ಸಂಜೀವರಾಯಸ್ವಾಮಿಯ ಜಾತ್ರಾ ಮಹೋತ್ಸವ ಇಂದು ಅದ್ಧೂರಿಯಾಗಿ ನಡೆಯಿತು.

    ದೇವರ ಹೊಸಹಳ್ಳಿಯ ಪುರಾತನವಾದ ಸಂಜೀವರಾಯ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಹೊಸ ದಂಪತಿಗಳು ಇಲ್ಲಿಗೆ ಬಂದು ದೇವರಲ್ಲಿ ಇಷ್ಟಾರ್ಥವನ್ನು ನೆನೆದು ಪೂಜೆ ಸಲ್ಲಿಸುತ್ತಾರೆ. ಅಲ್ಲದೇ ನೂತನ ದಂಪತಿಗಳು ಈ ದೇವರ ಸನ್ನಿಧಿಯಲ್ಲಿ ಸಂತಾನ ಬಯಸಿ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ನೆರವೇರುತ್ತೆ ಎಂಬ ಪ್ರತೀತಿ ಸಹ ಇದೆ. ಬೇರೆಯಾಗಿರುವ ದಂಪತಿಗಳಿಗೆ ಈ ಜಾತ್ರೆ ವೇದಿಕೆಯಾಗಿದ್ದು ರಾಮನಗರ ಜಿಲ್ಲೆ ಅಲ್ಲದೇ ಸುತ್ತಮುತ್ತಲ ಜಿಲ್ಲೆಯ ನೂತನ ದಂಪತಿಗಳು ಸಹ ಇಂದು ನಡೆದ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

    ಆಷಾಢದ ವಿರುದ್ಧವಾಗಿ ನಡೆಯುವ ಜಾತ್ರೆಗಳಲ್ಲಿ ಸಂಜೀವರಾಯ ಸ್ವಾಮಿಯ ಜಾತ್ರೆಯೂ ಕೂಡಾ ಒಂದಾಗಿದ್ದು, ಬ್ರಹ್ಮರಥೋತ್ಸವದಲ್ಲಿ ನೂತನ ದಂಪತಿಗಳು ಇಷ್ಟಾರ್ಥವನ್ನು ನೆನೆದು ರಥವನ್ನು ಎಳೆದು ಜಾತ್ರೆಯಲ್ಲೆಲ್ಲ ದಂಪತಿಗಳು ಕೈ ಕೈ ಹಿಡಿದು ಓಡಾಡಿದ್ದು ವಿಶೇಷವಾಗಿತ್ತು.

  • ಪ್ರೀತಿಸಿ ಮದ್ವೆಯಾಗಿ, ಏಳೇ ತಿಂಗಳಿಗೆ ನವದಂಪತಿ ಆತ್ಮಹತ್ಯೆ-ಡೆತ್ ನೋಟ್ ನಲ್ಲಿ ಮನಕಲಕುವ ಮಾತು

    ಪ್ರೀತಿಸಿ ಮದ್ವೆಯಾಗಿ, ಏಳೇ ತಿಂಗಳಿಗೆ ನವದಂಪತಿ ಆತ್ಮಹತ್ಯೆ-ಡೆತ್ ನೋಟ್ ನಲ್ಲಿ ಮನಕಲಕುವ ಮಾತು

    ಮುಂಬೈ: ಏಳು ತಿಂಗಳ ಹಿಂದೆ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟ ನವದಂಪತಿ, ಜೊತೆಯಾಗಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಧೂಲೆ ಜಿಲ್ಲೆಯ ಥಾಡಣೆ ಗ್ರಾಮದಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡಿರುವ ನವದಂಪತಿಗಳನ್ನು ಸಚಿನ್ ಬಾಗುಲ್, ದಿಪಾಲಿ ಚವ್ಹಾನ್ ಎಂದು ಗುರುತಿಸಲಾಗಿದೆ.

    ಮೃತರಿಬ್ಬರು ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಸಚಿನ್ ಹಾಗೂ ದಿಪಾಲಿ ಇಬ್ಬರು ಬೇರೆ ಬೇರೆ ಜಾತಿಗೆ ಸೇರಿದ ಕಾರಣದಿಂದ ಇಬ್ಬರ ಮದುವೆಗೆ ಕುಟುಂಬ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅದರೂ ಕಳೆದ ಮೇ 4 ರಂದು ಸ್ನೇಹಿತರ ಸಹಾಯದಿಂದ ಯಾರಿಗೂ ತಿಳಿಯದಂತೆ ವಿವಾಹವಾಗಿದ್ದರು.

    ಮದುವೆಯಾದ ಬಳಿಕ ಇಬ್ಬರೂ ತಮ್ಮ ಮನೆಯಲ್ಲಿ ಯಾವುದೇ ವಿಷಯವನ್ನು ತಿಳಿಸದೇ, ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಆದರೂ ಪೋಷಕರಿಗೆ ಮೂರನೇ ವ್ಯಕ್ತಿಯಿಂದಾಗಿ ಮಕ್ಕಳ ಮದುವೆ ವಿಷಯ ಗೊತ್ತಾಗಿತ್ತು. ವಿವಾಹದ ನಂತರ ಕುಟುಂಬ ಸದಸ್ಯರಿಗೆ ಮಾಹಿತಿ ತಿಳಿದು ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಬ್ಬರಿಗೂ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಕುರಿತು ಪತ್ರ ಬರೆದಿರುವ ನವದಂಪತಿ, ಇಬ್ಬರನ್ನು ಒಂದಾಗಿ ಜೀವನ ನಡೆಸಲು ನಮ್ಮ ಕುಟುಂಬಗಳು ಬಿಡುತ್ತಿಲ್ಲ. ಬೇರೆ ಮಾಡಲು ಪ್ರಯತ್ನಿಸಿ ಒತ್ತಡ ಹಾಕುತ್ತಿದ್ದಾರೆ. ಕುಟುಂಬ ಸದ್ಯಸರ ಒತ್ತಡವನ್ನು ತಡೆಯಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ, ಕೊನೆಗೆ ಪೋಷಕರಿಗೆ ನೀವಾದರೂ ಚೆನ್ನಾಗಿರಿ ಎಂದು ಮನಕಲಕುವ ಸಾಲುಗಳನ್ನು ಬರೆದಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ತಾವು ವಾಸಿಸುತ್ತಿರುವ ಗ್ರಾಮ ಹೊರವಲಯದಲ್ಲಿರುವ ಮರಕ್ಕೆ ನವದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಮೃತ ದೇಹಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನವದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಧವಿಸಿ ಪರಿಶೀಲನೆ ನಡೆಸಿದ್ದಾರೆ.