Tag: New Cinema

  • ಗಣೇಶ್ ಮತ್ತು ಪ್ರೀತಂ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ

    ಗಣೇಶ್ ಮತ್ತು ಪ್ರೀತಂ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ

    ನಿರ್ದೇಶಕ ಪ್ರೀತಂ ಗುಬ್ಬಿ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಕಾಂಬಿನೇಷನ್ ನ 4ನೇ ಸಿನಿಮಾ ಇದಾಗಿದೆ. ಇದನ್ನೂ ಓದಿ : ದಿ ಕೇರಳ ಸ್ಟೋರಿ ಸಿನಿಮಾ ಶುರು: ಸ್ಫೂರ್ತಿಯಂತೆ ದಿ ಕಾಶ್ಮೀರ್ ಫೈಲ್ಸ್

    ‘ಮಳೆಯಲಿ ಜೊತೆಯಲಿ’ ಸಿನಿಮಾದ ಮೂಲಕ ಈ ಜೋಡಿ ಒಂದಾಗಿತ್ತು. ಆನಂತರ ‘ದಿಲ್  ರಂಗೀಲಾ’ ಆಗಿ ತೆರೆಯ ಮೇಲೆ ಕಾಣಿಸಿಕೊಂಡಿತ್ತು. ಈ ಕಾಂಬಿನೇಷನ್ ನ ಕೊನೆಯ ಸಿನಿಮಾ ‘99’. ಇದಾದ ನಂತರ ಪ್ರೀತಂ ಮತ್ತು ಗಣೇಶ್ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಇದನ್ನೂ ಓದಿ : ಕಾಲೇಜು ದಿನಗಳಲ್ಲಿ ಅಮೀರ್‌ ಮೇಲೆ ಕ್ರಷ್‌ ಆಗಿತ್ತು.. ಲವ್‌ ಲೆಟರ್‌ ಕೂಡ ಬರೆದಿದ್ದೆ: ಬಾಲಿವುಡ್‌ ನಟಿ

    ಸಾಮಾನ್ಯವಾಗಿ ಪ್ರೀತಂ ಸಿನಿಮಾಗಳೆಂದರೆ, ಅಲ್ಲೊಂದು ಲವ್ ಸ್ಟೋರಿ ಇದ್ದೇ ಇರುತ್ತದೆ. ಹಾಗಾಗಿ ಈ ಸಿನಿಮಾದಲ್ಲೂ ಅಪರೂಪದ ಪ್ರೇಮಕಥೆಯನ್ನು ಹೇಳಲಿದ್ದಾರಂತೆ ನಿರ್ದೇಶಕರು. ‘ಮುಂಗಾರು ಮಳೆ’ ಸಿನಿಮಾದ ಮೂಲಕ ಈ ಜೋಡಿ ಒಂದಾಗಿ ಕೆಲಸ ಮಾಡುತ್ತಿದ್ದರೂ, ಮುಂಗಾರು ಮಳೆಗೆ ಪ್ರೀತಂ ಕೇವಲ ಕಥೆಗಾರ ಆಗಿದ್ದರು. ಇದನ್ನೂ ಓದಿ: ಮಾಧುರಿ ದೀಕ್ಷಿತ್ ಇರೋದು ಮನೇಲಿ ಅಲ್ಲ, ಅರಮನೆಯಲ್ಲಿ: ಹೊಸ ಮನೆಗೆ ದೇವದಾಸ್ ಬೆಡಗಿ

    ಇತ್ತ ಗಣೇಶ್ ಕೂಡ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೇ, ಟಾಕ್ ಶೋ  ಒಂದನ್ನು ನಡೆಸಿಕೊಡುತ್ತಿದ್ದಾರೆ. ಗಾಳಿಪಟ2 ಸಿನಿಮಾ ರಿಲೀಸ್ ಗೆ ಸಿದ್ಧವಾಗಿದ್ದರೆ, ತ್ರಿಬಲ್ ರೈಡಿಂಗ್ ಕೂಡ ಶೂಟಿಂಗ್ ಮುಗಿಸಿಕೊಂಡಿದೆ. ಹೀಗಾಗಿ ಹೊಸ ಸಿನಿಮಾ ಅತೀ ಶೀಘ್ರದಲ್ಲೇ ಸೆಟ್ಟೇರಿದೆ ಅಚ್ಚರಿ ಪಡಬೇಕಿಲ್ಲ.

  • ತಮಿಳಲ್ಲ, ಬಾಲಿವುಡ್ ಗೆ ಹಾರಿದ ರಜನಿಕಾಂತ್ ಪುತ್ರಿ ಐಶ್ವರ್ಯಾ

    ತಮಿಳಲ್ಲ, ಬಾಲಿವುಡ್ ಗೆ ಹಾರಿದ ರಜನಿಕಾಂತ್ ಪುತ್ರಿ ಐಶ್ವರ್ಯಾ

    ಸ್ಟಾರ್ ನಟ ಧನುಷ್ ಅವರ ಮಾಜಿಪತ್ನಿ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯ ಮೊನ್ನೆಷ್ಟೇ ಹೊಸ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಈಗಾಗಲೂ ಮೂರು ಚಿತ್ರಗಳನ್ನು ತಮಿಳಿನಲ್ಲೇ ನಿರ್ದೇಶನ ಮಾಡಿರುವ ಅವರು, ಮುಂದಿನ ಚಿತ್ರವನ್ನು ಅದೇ ಭಾಷೆಯಲ್ಲೇ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಈಗ ಅಂದಾಜ ಸುಳ್ಳಾಗಿದೆ. ಇದೇ ಮೊದಲ ಬಾರಿಗೆ ಅವರು ಬಾಲಿವುಡ್ ನಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.

    ‘ನಾನೀಗ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದೇನೆ. ನನ್ನ ಮೊದಲ ಬಾಲಿವುಡ್ ಸಿನಿಮಾದ ಟೈಟಲ್ ಘೋಷಣೆ ಮಾಡುವುದಕ್ಕೆ ಹೆಮ್ಮೆ ಆಗುತ್ತಿದೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಚೊಚ್ಚಲು ಹಿಂದಿ ನಿರ್ದೇಶನದ ಚಿತ್ರಕ್ಕೆ ಅವರು ‘ಓ ಸಾತಿ ಚಲ್’ ಎಂದು ಟೈಟಲ್ ಇಟ್ಟಿದ್ದಾರೆ. ಇದು ಅವರ ಬಾಲಿವುಡ್ ನ ಮೊದಲ ಸಿನಿಮಾವಾಗಿದ್ದರಿಂದ ಎಲ್ಲರ ಹಾರೈಕೆಯನ್ನೂ ಅವರು ಕೇಳಿದ್ದಾರೆ. ಇದನ್ನೂ ಓದಿ : ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?

    ಪತಿ ಧನುಷ್ ಮತ್ತು ಶ್ರುತಿ ಹಾಸನ್ ಕಾಂಬಿನೇಷನ್ ನ ‘3’ ಸಿನಿಮಾದ ಮೂಲಕ ನಿರ್ದೇಶಕಿಯಾಗಿ ತಮಿಳು ಸಿನಿಮಾ ರಂಗಕ್ಕೆ ಪ್ರವೇಶ ಪಡೆದವರು ಐಶ್ವರ್ಯ. ಆನಂತರ ಅವರು ಎರಡು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಸ್ವಲ್ಪ ವರ್ಷಗಳ ಬಿಡುಗಡೆ ತಗೆದುಕೊಂಡು ಮತ್ತೆ ನಿರ್ದೇಶನಕ್ಕೆ ಐಶ್ವರ್ಯ ಮುಂದಾಗಿದ್ದಾರೆ. ಇದನ್ನೂ ಓದಿ : ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾ

    ಮೊನ್ನೆಯಷ್ಟೇ ಇವರ ನಿರ್ದೇಶನದಲ್ಲಿ ಸಿಂಗಲ್ ವಿಡಿಯೋ ಆಲ್ಬಂ ಒಂದು ಮೂಡಿ ಬಂದಿತ್ತು. ಅದು ರಿಲೀಸ್ ಆದ ವೇಳೆಯಲ್ಲಿ ಧನುಷ್ ವಿಶ್ ಮಾಡಿದ್ದರು. ‘ಸ್ನೇಹಿತೆ ನಿಮಗೆ ಒಳ್ಳೆಯದಾಗಲಿ’ ಎಂದು ಸಂದೇಶ ಹಾಕಿ ಅಚ್ಚರಿ ಮೂಡಿಸಿದ್ದರು. ಧನುಷ್ ಅವರ ವಿಶ್ ಗೂ ಐಶ್ವರ್ಯ ಪ್ರತಿಕ್ರಿಯೆ ನೀಡಿದ್ದರು.

  • ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?

    ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?

    ನೆನ್ನೆಯಷ್ಟೇ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ, ಸ್ಯಾಂಡಲ್ ವುಡ್ ಪ್ರತಿಭಾನ್ವಿತ ತಲೆಗಳಿಗೆ ಹುಳ ಬಿಟ್ಟಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. ಬಿಡುಗಡೆ ಆಗಿರುವ ಪೋಸ್ಟರ್ ಚಂದನವನದಲ್ಲಿ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪೋಸ್ಟರ್ ಕುರಿತು ಹೇಳುತ್ತಿದ್ದಾರೆ. ಆದರೆ, ಉಪ್ಪಿ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಪಾಡಿಗೆ ತಾವು ನಗ್ತಾ ಸಿನಿಮಾದ ಶೂಟಿಂಗೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ : ಸಮಂತಾ ಯಾಕಿಂಗ್ ಆದೆ? ಗರಂ ಆದ ಅಭಿಮಾನಿಗಳು

    ಹೊಸ ಸಿನಿಮಾದ ಟೈಟಲ್ ಇಂಥದ್ದೇ ಅಂತ ಹೇಳುವುದು ಕಷ್ಟವಾದರೂ, ಸದ್ಯಕ್ಕೆ ‘ಯುಐ’ ಎಂದು ಹೇಳುವ ಆ ಸಿನಿಮಾ ಹುಟ್ಟಿಗೆ ಕಾರಣ ದಕ್ಷಿಣದ ಖ್ಯಾತ ನಟಿ ನಯನತಾರಾ ಎನ್ನುವುದು ವಿಶೇಷ. ಉಪೇಂದ್ರ ಜತೆ ಉಪ್ಪಿ 2 ಚಿತ್ರದಲ್ಲಿ ನಟಿಸಿದ್ದ ನಯನತಾರಾ, ಇಂಥದ್ದೊಂದು ಸಿನಿಮಾ ಹುಟ್ಟಿಗೆ ಕಾರಣವಾಗಿದ್ದನ್ನು ಸ್ವತಃ ಉಪೇಂದ್ರ ಅವರೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ಕ್ಷಮೆ ಕೋರಿದ ಪ್ರಕಾಶ್ ಬೆಳವಾಡಿ

    “ಸಿನಿಮಾದ ಎಳೆ ನನ್ನನ್ನು ತುಂಬಾ ಕಾಡುತ್ತಿತ್ತು. ಉಪ್ಪಿ 2 ಸಿನಿಮಾದ ಶೂಟಿಂಗ್ ವೇಳೆ ಅದನ್ನು ನಯನತಾರಾ ಅವರ ಬಳಿ ಹೇಳಿಕೊಂಡೆ. ಇಂತಹ ಥಾಟ್ಸ್ ನಿಮ್ಮಲ್ಲಿಯೇ ಉಳಿಯಬಾರದು, ಅದನ್ನು ಜನರಿಗೂ ನೀವು ಹೇಳಬೇಕು ಅಂತ ಒತ್ತಾಯಿಸಿದರು. ಅಲ್ಲಿಂದಲೇ ಈ ಎಳೆಯ ಮೇಲೆ ಸೀರಿಯಸ್ ಆಗಿ ವರ್ಕ್ ಮಾಡೋಕೆ ಶುರು ಮಾಡಿದೆ’ ಎಂದಿದ್ದಾರೆ ಉಪೇಂದ್ರ. ಇದನ್ನೂ ಓದಿ : ‘ಪುಷ್ಪ ಪಾರ್ಟ್ 10’ ಸಿನಿಮಾಗೆ ನಟ ಮಾಸ್ಟರ್ ಆನಂದ್ ಮಗಳು ಹೀರೋಯಿನ್

    ಉಪೇಂದ್ರ ಮತ್ತು ನಯನತಾರ ಒಂದೇ ರೀತಿಯಲ್ಲಿ ಯೋಚಿಸುವಂಥವರು. ಈ ಜೋಡಿಯ ಸಿನಿಮಾ ಕೂಡ ಸಾಕಷ್ಟು ಸದ್ದು ಮಾಡಿತ್ತು. ಹಾಗಾಗಿ ಹೊಸ ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಮೇ ತಿಂಗಳಲ್ಲಿ ಈ ಸಿನಿಮಾದ ಶೂಟಿಂಗ್ ಶುರುವಾಗಲಿದ್ದು, ಅಷ್ಟರಲ್ಲಿ ಕಲಾವಿದರ ಆಯ್ಕೆಯನ್ನೂ ಮಾಡಿಕೊಳ್ಳುತ್ತಾರಂತೆ ಉಪೇಂದ್ರ. ಇದನ್ನೂ ಓದಿ : ಪುನೀತ್ ಹುಟ್ಟುಹಬ್ಬಕ್ಕೆ ಹೊಸ ಸಾಂಗ್: ಒಂದಾಯಿತು ‘ಗೊಂಬೆ ಹೇಳತೈತೆ’ ಕಾಂಬಿನೇಷನ್

    ಲಹರಿ ಫಿಲ್ಮ್ಸ್ ಲಾಂಛನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಕೆ.ಪಿ.ಶ್ರೀಕಾಂತ್ ಕೂಡ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

  • ಉಪೇಂದ್ರ ಸಿನಿಮಾದ ಹೊಸ ಪೋಸ್ಟರ್ ವಿಶ್ಲೇಷಣೆ: ಏನೇನೆಲ್ಲ ಇದೆ, ತಲೆ ಕೆಟ್ಟು ಹೋಗತ್ತೆ!

    ಉಪೇಂದ್ರ ಸಿನಿಮಾದ ಹೊಸ ಪೋಸ್ಟರ್ ವಿಶ್ಲೇಷಣೆ: ಏನೇನೆಲ್ಲ ಇದೆ, ತಲೆ ಕೆಟ್ಟು ಹೋಗತ್ತೆ!

    ಟ, ನಿರ್ದೇಶಕ, ನಿರ್ಮಾಪಕ ಉಪೇಂದ್ರ ಆತ್ಮವಿಶ್ವಾಸದಿಂದಲೋ, ಅಹಂಕಾರದಿಂದಲೋ ಹೇಳಿಕೊಂಡಿರುವ ‘ಉಪ್ಪಿಗಿಂತ ರುಚಿ ಬೇರೆ ಇಲ್ಲ’ ಎನ್ನುವ ಮಾತು ಅಕ್ಷರಶಃ ರಿಯಲ್ ಸ್ಟಾರ್ ಗೆ ಒಪ್ಪುತ್ತದೆ. ಕಾರಣ ಉಪ್ಪಿ ಯಾವಾಗಲೂ ವಿಭಿನ್ನ, ಯಾವತ್ತಿಗೂ ಭಿನ್ನ.

    ಸಾಮಾನ್ಯವಾಗಿ ಸಿನಿಮಾಗಳು ಮನಸ್ಸಿಗೆ ಉಲ್ಲಾಸ ನೀಡುತ್ತವೆ, ನೀಡಬೇಕು. ಆದರೆ, ಉಪ್ಪಿ ಚಿತ್ರಗಳು ಮಾತ್ರ ಮನಸ್ಸಿನ ಜತೆ ಮೆದುಳಿಗೂ ಕೆಲಸ ಕೊಡುತ್ತವೆ. ಪರಪರ ಅಂತ ತಲೆಕೆರೆದುಕೊಳ್ಳುವಂತೆ ಮಾಡುತ್ತವೆ. ಹಾಗಾಗಿಯೇ ಪ್ರೀತಿಯಿಂದ ಉಪ್ಪಿದಾದಾನ ‘ಬುದ್ಧಿವಂತ’ ನಿರ್ದೇಶಕ ಎಂದಿದೆ ಚಿತ್ರರಂಗ. ಇದನ್ನೂ ಓದಿ : ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ

    ಉಪ್ಪಿ 2 ಸಿನಿಮಾದ ನಂತರ  ಉಪೇಂದ್ರ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಬರೋಬ್ಬರಿ ಏಳು ವರ್ಷಗಳ ನಂತರ ಆಕ್ಷನ್ ಕಟ್ ಹೇಳುತ್ತಿರುವುದರಿಂದ ಸಿನಿಮಾ ವಿಭಿನ್ನವಾಗಿ ಇರಲೇಬೇಕು ಎನ್ನುವುದು ಅವರ ಪಾಲಿಸಿ. ಅದರಂತೆ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಆ ಫೋಸ್ಟರೇ ಹೊಸದೊಂದು ಕಥೆ ಹೇಳುವಂತಿದೆ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾದಂತೆ ಮಜಾ ಕೊಡುತ್ತದೆ. ನೀವೂ ಒಂದ್ ಸಲ ಪೋಸ್ಟರ್ ಅನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ, ನಿಮ್ಮ ತಲೆಗೂ ಮತ್ತೊಂದು ಹೊಳವು ಕಾಣಬಹುದು.

    ಮೇಲ್ನೋಟಕ್ಕೆ ಪೋಸ್ಟರ್ ನೋಡಿದಾಗ ಕುದುರೆ ಮೇಲೆ ಕೂತಿರುವ ಉಪೇಂದ್ರ, ಸಿನಿಮಾದ ಶೀರ್ಷಿಕೆ, ನಿರ್ದೇಶಕರ ಹೆಸರು, ನಿರ್ಮಾಪಕರ ಹೆಸರು ಇವಿಷ್ಟು ಕಾಣುತ್ತದೆ. ಆದರೆ, ಪೋಸ್ಟರ್ ಅನ್ನು ಆಳವಾಗಿ ಗಮನಿಸಿದಾಗ ದೊಡ್ಡದೊಂದು ಜಗತ್ತೇ ಅಲ್ಲಿದೆ.  ಇದನ್ನೂ ಓದಿ : ಮಾರ್ಚ್ 14ಕ್ಕೆ ಆರ್.ಆರ್.ಆರ್ ‘ಎತ್ತುವ ಜಂಡಾ’ ಸಾಂಗ್ ರಿಲೀಸ್

    ಏನು ಹೇಳತ್ತೆ ಟೈಟಲ್ ?

    ಸಡನ್ನಾಗಿ ಧಾರ್ಮಿಕ ಚಿಹ್ನೆ ಅಂತ ಕಾಣುವ ಸಿನಿಮಾದ ಟೈಟಲ್, ಅವರವರ ಭಾವಕ್ಕೆ ತಕ್ಕಂತೆ ಅದು ದಕ್ಕುತ್ತದೆ. ‘ಯು’ ಮತ್ತು ‘ಐ’ ಎಂದೂ ಓದಿಕೊಳ್ಳಬಹುದು. ನಾನು ಮತ್ತು ನೀನು ಎರಡೇ ಕಾನ್ಸೆಪ್ಟ್ ಇಟ್ಟುಕೊಂಡು ಉಪ್ಪಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ‘ಎ’, ‘ಉಪೇಂದ್ರ’, ಮತ್ತು ‘ಉಪ್ಪಿ2’ ಸಿನಿಮಾದ ಕಥೆ ‘ನಾನು ಮತ್ತು ನೀನು’ ಎನ್ನುವ ಆಧ್ಯಾತ್ಮದ ತುದಿಯೊಂದಿಗೆ ಸಾಗಿದ್ದರು. ಹೀಗಾಗಿ ಅದರ ಮುಂದುವರೆಕೆಯ ಭಾಗವಾ ಹೊಸ ಸಿನಿಮಾ ಅನಿಸುತ್ತದೆ. ಇನ್ನೊಂದು ರೀತಿಯಲ್ಲಿ ಟೈಟಲ್ ಕುದುರೆ ಲಾಳದಂತೆಯೂ ಕಾಣುತ್ತದೆ. ‘ಯು’ ಮತ್ತು ‘ಎ’ ಅಂತಾನೇ ಅಂದುಕೊಳ್ಳುವುದಾದರೆ, ಹಾರ್ಸ್ಶೋ ಮತ್ತು ಹಾರ್ಸ್ ಮ್ಯಾನ್ ಅಂತಾನೂ ಆಗತ್ತದೆ. ಇದನ್ನೂ ಓದಿ : ತಮಿಳಿಗೆ ಹೊರಟ ಬಸಣ್ಣಿ ಖ್ಯಾತಿಯ ತಾನ್ಯ ಹೋಪ್ : ಪ್ರಶಾಂತ್ ರಾಜ್ ಚಿತ್ರಕ್ಕೆ ತಾನ್ಯ ನಾಯಕಿ

    ಕುದುರೆ ಮೇಲೆ ಉಪೇಂದ್ರ

    ಅದು ಸಾಮಾನ್ಯ ಕುದುರೆಯಲ್ಲ. ಎರಡು ಕೊಂಬಿರುವ ಕುದುರೆ. ಒಂದು ರೀತಿಯಲ್ಲಿ ಅದು ಕೆರಿಬಿಯನ್ಸ್ ಕಥೆಯಲ್ಲಿ ಬರುವಂತಹ ಕುದುರೆ. ಹಾಗಾಗಿ ಅದು ಆ ಕಾಲದ ಕಥೆಯಾ ಅಂತ ಕುತೂಹಲ ಮೂಡಿಸಬಹುದು. ಕುದುರೆ ಕಾಲದ ಸಂಕೇತ, ಕೋಣನ ಕೊಂಬು ಕಾಲನ ಸಂಕೇತ. ಹಾಗಾಗಿ ಹುಟ್ಟು ಸಾವಿನ ಬಗೆಗಿನ ಸಿನಿಮಾ ಇರಬಹುದಾ? ಎನ್ನುವ  ಪ್ರಶ್ನೆ ಕೂಡ ಮೂಡುತ್ತದೆ. ಕಲ್ಕಿಯ ಕೊನೆಯ ಅವತಾರ ಬಿಳಿ ಕುದುರೆ ಏರಿ ಬರುವುದು. ಆ ಅವತಾರದ ಲಿಂಕ್ ಏನಾದ್ರೂ ಕಥೆಯಲ್ಲಿ ಇರಬಹುದು. ಇದನ್ನೂ ಓದಿ : ಸೋಲೊ ಟ್ರಿಪ್ ನಲ್ಲಿ ಪ್ಯಾರ್ಗೆ ಹುಡುಗಿ ಪಾರುಲ್ ಯಾದವ್

    ಐದು ಭಾಷೆಗಳಲ್ಲಿ ಚಿತ್ರ

    ಪೋಸ್ಟರ್ ನಲ್ಲಿಯೇ ಐದು ಭಾಷೆಗಳನ್ನು ಬಳಸಿಕೊಂಡು ಒಂದು ವಾಕ್ಯವನ್ನು ಸೃಷ್ಟಿಸಿದ್ದಾರೆ ಉಪೇಂದ್ರ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಸೇರಿಸಿ ಅವರು ಬರೆದಿರುವ ವಾಕ್ಯ ‘’ಇವನು ಯಾವಾಗ ಬರ್ತಾನೋ ಗೊತ್ತಿಲ್ಲ, ಆದರೆ, ನಿಶ್ಚಿತವಾಗಿ ಬಂದೇ ಬರ್ತಾನೆ” ಎನ್ನವ ಅರ್ಥ ಬರುತ್ತದೆ. ಈ ಪದಗಳ ಹಿಂದಿರುವ ಅರ್ಥವನ್ನು ಗಮನಿಸಿದರೆ, “ಸಾವು ಯಾವಾಗ ಬರತ್ತೋ ಗೊತ್ತಿಲ್ಲ. ಆದರೆ, ಯಾವತ್ತೋ ಒಂದು ದಿನ ನಿಶ್ಚಿತಾಗಿಯೂ ಅದು ಬರುತ್ತದೆ” ಎಂಬ ಸಂದೇಶವನ್ನು ಈ ಸಿನಿಮಾ ಸಾರಲಿದೆಯಾ, ನೋಡಬೇಕು. ಕೋಣನ ಕೊಂಬು ಕೂಡ ಈ ವಾಕ್ಯಕ್ಕೆ ಸಾಥ್ ಕೊಡುತ್ತದೆ. ಇದನ್ನೂ ಓದಿ : ಸದ್ಯ ಡೇಟಿಂಗ್, ಮುಂದೆ ಮದ್ವೆ, ಹೃತಿಕ್ –ಸಬಾ ಜೋಡಿ ಪ್ರೇಮ್ ಕಹಾನಿ

    ಅಳಿದುಳಿದ ಅವಶೇಷಗಳು

    ಪೋಸ್ಟರ್ ನಲ್ಲಿ ಮಸೀದಿ, ದೇವಾಲಯ, ಚರ್ಚ್ ಗಳ ಅವಶೇಷಗಳಿವೆ. ರೈಲಿದೆ, ಸ್ಯಾಟ್ ಲೈಟ್ ಕೂಡ ಕಾಣುತ್ತದೆ.  ನಶಿಸಿದ ನಾಗರೀಕತೆ ಮತ್ತು ಆಧುನಿಕತೆಯ ಸವಾಲುಗಳನ್ನು ಈ ಸಿನಿಮಾದಲ್ಲಿ ಹೇಳುತ್ತಿರಬಹುದಾ ಎಂಬ ಅನುಮಾನವನ್ನು ಈ ಪೋಸ್ಟರ್ ಹುಟ್ಟು ಹಾಕುತ್ತದೆ. ಎರಡು ಕಾಲ ಘಟ್ಟವನ್ನು ಬೆಸೆಯುವಂತಹ ಧೀರನಾಗಿ ಕಲ್ಕಿ ಅವತಾರದಲ್ಲಿ ನಾಯಕ ಧರೆಗೆ ಬರುತ್ತಾನಾ ಎನ್ನುವ ಪ್ರಶ್ನೆ ಕೂಡ ಮೂಡುತ್ತದೆ.

  • Breaking- ಉಪೇಂದ್ರ ಹೊಸ ಚಿತ್ರದ ಪೋಸ್ಟರ್ : ನೀವು ಏನ್ ಬೇಕಾದ್ರೂ ಅಂದ್ಕೊಳ್ಳಿ ಎಂದ ಉಪ್ಪಿದಾದ

    Breaking- ಉಪೇಂದ್ರ ಹೊಸ ಚಿತ್ರದ ಪೋಸ್ಟರ್ : ನೀವು ಏನ್ ಬೇಕಾದ್ರೂ ಅಂದ್ಕೊಳ್ಳಿ ಎಂದ ಉಪ್ಪಿದಾದ

    ರಡು ದಿನಗಳ ಹಿಂದೆ 11.03 : 12.46 ಇದನ್ನು ಸೇವ್ ಮಾಡ್ಕೊಳ್ಳಿ ಎಂದು ತಲೆಗೆ ಹುಳು ಬಿಟ್ಟಿದ್ದ ಉಪೇಂದ್ರ ಅಭಿಮಾನಿಗಳಿಗೆ ಹೊಸ ಸುದ್ದಿಯನ್ನೇ ಕೊಟ್ಟಿದ್ದಾರೆ. ಹೊಸ ಸಿನಿಮಾದ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಕುದುರೆ ಮೇಲೆ ಸವಾರಿ ಮಾಡುವ ಹೋರಾಟಗಾರನ ಗೆಟಪ್ ನಲ್ಲಿಉಪ್ಪಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟೈಟಲ್ ಕೂಡ ವಿಚಿತ್ರವಾಗಿದ್ದು, ‘ಯು’ ಮತ್ತು ‘ಐ’ ಅಂತಲೋ ಅಥವಾ ಧಾರ್ಮಿಕ ಚಿಹ್ನೆಯೊಂದನ್ನು ಹೋಲುವಂತೆ ಕೊಟ್ಟಿದ್ದಾರೆ. ಹಾಗಾಗಿ ಪ್ರೇಕ್ಷಕರೇ ಟೈಟಲ್ ಅನ್ನು ತಮ್ಮಿಷ್ಟ ಬಂದಂತೆ ಹೇಳಿಕೊಳ್ಳಬಹುದಾಗಿದೆ. ಇದನ್ನೂ ಓದಿ : ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ

    ಪೋಸ್ಟರ್ ಹಂಚಿಕೊಳ್ಳುವುದರ ಜತೆಗೆ “ಚಿತ್ರರಂಗದಲ್ಲಿ ಉಪೇಂದ್ರ ಅನ್ನೋ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ, ಸಂಭಾಷಣೆ ಹೇಳಿಸಿ, ಶಿಳ್ಳೆ ಚಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿಗ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ’ ಎಂದು ಮಾರ್ಮಿಕವಾಗಿ ಅಭಿಮಾನಿಗಳಿಗೆ ಈ ಪೋಸ್ಟರ್ ಅರ್ಪಿಸಿದ್ದಾರೆ ಉಪೇಂದ್ರ. ಇದನ್ನೂ ಓದಿ : ಮಾರ್ಚ್ 14ಕ್ಕೆ ಆರ್.ಆರ್.ಆರ್ ‘ಎತ್ತುವ ಜಂಡಾ’ ಸಾಂಗ್ ರಿಲೀಸ್

    ಪೋಸ್ಟರ್ ನಲ್ಲಿ ಬರೆದುಕೊಂಡಂತೆ ಇದು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ಚಿತ್ರ ಮೂಡಿ ಬರಲಿದೆ. ನಿರ್ದೇಶನದ ಜತೆ ನಟನೆಯನ್ನೂ ಉಪ್ಪಿ ಮಾಡುತ್ತಿದ್ದು, ಲಹರಿ ಫಿಲ್ಮಸ್ ಲಾಂಛನದ ಅಡಿಯಲ್ಲಿ ಸಿನಿಮಾ ಮೂಡಿ ಬರಲಿದೆ. ಇದನ್ನೂ ಓದಿ : ತಮಿಳಿಗೆ ಹೊರಟ ಬಸಣ್ಣಿ ಖ್ಯಾತಿಯ ತಾನ್ಯ ಹೋಪ್ : ಪ್ರಶಾಂತ್ ರಾಜ್ ಚಿತ್ರಕ್ಕೆ ತಾನ್ಯ ನಾಯಕಿ

    ಭಾರೀ ಬಜೆಟ್ ನಲ್ಲೇ ಈ ಸಿನಿಮಾ ಮೂಡಿ ಬರಲಿದ್ದು, ಸಾವಿರಾರು ಕಲಾವಿದರು ಈ ಸಿನಿಮಾಗೆ ಬೇಕಾಗಿದ್ದರಿಂದ ಆಡಿಷನ್ ಕೂಡ ಮಾಡುತ್ತಿದ್ದಾರೆ.

  • ಮೆಗಾಸ್ಟಾರ್ ಚಿರಂಜೀವಿ ಹೊಸ ಚಿತ್ರದಲ್ಲಿ ಕಮಲ್ ಹಾಸನ್ ಪುತ್ರಿ ಶ್ರುತಿ

    ಮೆಗಾಸ್ಟಾರ್ ಚಿರಂಜೀವಿ ಹೊಸ ಚಿತ್ರದಲ್ಲಿ ಕಮಲ್ ಹಾಸನ್ ಪುತ್ರಿ ಶ್ರುತಿ

    ತೆಲುಗಿನ ಖ್ಯಾತ ನಟರ ಜತೆ ತೆರೆ ಹಂಚಿಕೊಳ್ಳುವ ಮೂಲಕ ಬಹುಬೇಡಿಕೆಯ ನಟಿಯಾಗುತ್ತಿದ್ದಾರೆ ಶ್ರುತಿ ಹಾಸನ್. ಸದ್ಯ ಭಾರೀ ಬಜೆಟ್ ಸಿನಿಮಾ ಸಲಾರ್ ದಲ್ಲಿ ಪ್ರಭಾಸ್ ಜತೆ ನಟಿಸಿದ್ದಾರೆ. ಬಾಲಯ್ಯ ಅವರು ಹೊಸ ಚಿತ್ರಕ್ಕೂ ಶ್ರುತಿಯೇ ಹೀರೋಯಿನ್. ಈ ಹಿಂದೆ ಪವನ್ ಕಲ್ಯಾಣ್ ಅವರ ಚಿತ್ರದಲ್ಲೂ ಶ್ರುತಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಇದೀ ಮೆಗಾಸ್ಟಾರ್ ಚಿರಂಜೀವಿ ಅವರ ಹೊಸ ಚಿತ್ರಕ್ಕೂ ಇವರೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ : ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆ

    ಚಿರಂಜೀವಿ ಅವರ ಹೊಸ ಚಿತ್ರಕ್ಕೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಹೆಸರಾಂತ ನಟಿಯರ ಹೆಸರುಗಳೇ ಕೇಳಿ ಬಂದಿದ್ದರೂ, ಚಿರಂಜೀವಿ ಅವರ ಎದುರು ನಿಂತು ನಟಿಸಲು ಯಾರಿಗೆ ಅವಕಾಶ ಸಿಗಲಿದೆ ಎನ್ನುವ ಚರ್ಚೆ ಶುರುವಾಗಿತ್ತು. ಅದಕ್ಕೀಗ ಫುಲ್ ಸ್ಟಾಪ್ ಬಿದ್ದಿದೆ. ಇದನ್ನೂ ಓದಿ : ಮಾ.13ಕ್ಕೆ ಅರಮನೆ ಮೈದಾನದಲ್ಲಿ ಜೇಮ್ಸ್ ಪ್ರೀ ಇವೆಂಟ್, ಹೊಸಪೇಟೆಯಲ್ಲಿ ಸಕ್ಸಸ್ ಸಂಭ್ರಮ

    ಶ್ರುತಿ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರ ಮಾಡಲಿದ್ದಾರೆ. ಒಂದು ರೀತಿಯಲ್ಲಿ ರಗಡ್ ಆಗಿಯೇ ಆ ಪಾತ್ರ ಇರಲಿದೆಯಂತೆ. ಕೆ.ಎಸ್. ರವೀಂದ್ರ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಮೈತ್ರಿ ಮೋವಿ ಮೇಕರ್ಸ್ ಬ್ಯಾನರ್ ನಲ್ಲಿ ಚಿತ್ರ ಮೂಡಿ ಬರಲಿದೆ. ಇದನ್ನೂ ಓದಿ : ಬೆಂಗಳೂರಿನಿಂದ ಗಡಿಭಾಗಕ್ಕೆ ಆರ್.ಆರ್.ಆರ್ ಅದ್ಧೂರಿ ಕಾರ್ಯಕ್ರಮ ಶಿಫ್ಟ್

    ಚಿರಂಜೀವಿ ಅವರ 154ನೇ ಸಿನಿಮಾ ಇದಾಗಿದ್ದು, ಮಹಿಳಾ ದಿನಚರಣೆಯ ದಿನದಂದೇ ಶ್ರುತಿ ಅವರನ್ನು ಚಿತ್ರತಂಡಕ್ಕೆ ಬರಮಾರಿಕೊಂಡಿದ್ದಾರಂತೆ ಚಿರಂಜೀವಿ. ಈ ಮೂಲಕ ಅವರು ಮಹಿಳಾ ದಿನಾಚರಣೆಯನ್ನು ಆಚರಿಸಿದ್ದಾರೆ.

  • ಮಾ.11ರ  12:46 ವೇಳೆ ಸೇವ್ ಮಾಡ್ಕೊಳ್ಳಿ: ಕನ್ ಫ್ಯೂಸ್ ಮಾಡಿದ ಉಪೇಂದ್ರ

    ಮಾ.11ರ 12:46 ವೇಳೆ ಸೇವ್ ಮಾಡ್ಕೊಳ್ಳಿ: ಕನ್ ಫ್ಯೂಸ್ ಮಾಡಿದ ಉಪೇಂದ್ರ

    ನರನ್ನು ಕನ್ ಫ್ಯೂಸ್ ಮಾಡುವುದರಲ್ಲಿ ನಂಬರ್ ಒನ್ ಸ್ಥಾನ ಉಪೇಂದ್ರ ಅವರಿಗೆ ಕೊಡಲೇಬೇಕು. ಯಾವುದನ್ನೂ ಈ ರಿಯಲ್ ಸ್ಟಾರ್ ನೆಟ್ಟಗೆ ಹೇಳುವುದಿಲ್ಲ. ಮೊದಲ ಸಿನಿಮಾದಿಂದ ಈವರೆಗೂ ಅವರು ಪ್ರೇಕ್ಷಕರ ತಲೆಗೆ ಹುಳು ಬಿಡುತ್ತಲೇ ಬಂದಿದ್ದಾರೆ. ಈಗ ಮತ್ತೆ ಅದನ್ನೇ ಮಾಡಿದ್ದಾರೆ. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

    11.03, 12:46 ಸೇವ್ ದಿಸ್ ಡೇಟ್ ಎಂದು ಮಸೇಜ್ ಕಳುಹಿಸಿ ಸುಮ್ಮನೆ ಕೂತು ಬಿಟ್ಟಿದ್ದಾರೆ. ಹೀಗೆ ಪೋಸ್ಟರ್ ವೊಂದನ್ನು ಹರಿಬಿಡುತ್ತಿದ್ದಂತೆಯೇ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದಾರೆ. ರಿಯಲ್ ಸ್ಟಾರ್ ಎರಡು ದೋಣೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಒಂದು ದೋಣೆ ಸಿನಿಮಾದ ಸಮುದ್ರದಲ್ಲಿ ಸಾಗುತ್ತಿದ್ದರೆ, ಮತ್ತೊಂದು ದೋಣಿ ಪ್ರಜಾಕೀಯದಲ್ಲಿ ತೇಲುತ್ತಿದೆ. ಮಾರ್ಚ್ 11ರಂದು ಇವರು ಸಾಗುತ್ತಿರುವ ವಿಷ್ಯ ಹೇಳ್ತಾರಾ? ಅಥವಾ ತೇಲುತ್ತಿರುವ ಕುರಿತು ಮಾತಾಡ್ತಾರಾ ಎನ್ನುವುದು ಸಸ್ಪೆನ್ಸ್. ಇದನ್ನೂ ಓದಿ : ಟ್ರೋಲಿಗರ ಚಳಿ ಬಿಡಿಸಿದ ಸನ್ನಿ ಲಿಯೋನ್

    ಪ್ರಜಾಕೀಯದಲ್ಲಿ ಉಪೇಂದ್ರ ತುಂಬಾ ಸೀರಿಯಸ್ ಆಗಿ ಕೆಲಸ ಮಾಡುತ್ತಿಲ್ಲ. ಕೇವಲ ಸಂದೇಶಗಳನ್ನು ಹರಿಬಿಡುವುದರಲ್ಲೇ ಬ್ಯುಸಿಯಾಗಿದ್ದಾರೆ. ಚುನಾವಣೆ ಇನ್ನೂ ದೂರವಿದೆ. ಬಿಬಿಎಂಪಿ ಚುನಾವಣೆ ಬಗ್ಗೆ ಏನಾದರೂ ಹೇಳುತ್ತಾರಾ ಅಂದರೆ, ಅಸಲಿಯಾಗಿ ಉಪೇಂದ್ರ ಅವರಿಗೆ ಬಿಬಿಎಂಪಿ ಚುನಾವಣೆಯ ಬಗ್ಗೆ ಅಷ್ಟೇನೂ ಆಸಕ್ತಿ ಕಾಣುತ್ತಿಲ್ಲ. ಹಾಗಾಗಿ ಅವರ ನಿರ್ದೇಶನದ ಸಿನಿಮಾ ಬಗ್ಗೆ ಏನಾದರೂ ಅಪ್ ಡೇಟ್ ಕೊಡಬಹುದು ಎನ್ನಬಹುದು. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

    ಉಪೇಂದ್ರ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೂ ಈ ಕುರಿತು ಅವರು ಕೆಲ ಮಾಹಿತಿಯನ್ನೂ ಕೊಟ್ಟಿದ್ದಾರೆ. ಒಂದು ಪೋಸ್ಟರ್ ಕೂಡ ರಿಲೀಸ್ ಆಗಿದೆ. ಸಾವಿರಾರು ಕಲಾವಿದರು ಈ ಸಿನಿಮಾಗೆ ಬೇಕಾಗಿದ್ದರಿಂದ ಆಡಿಷನ್ ಕೂಡ ಮಾಡುತ್ತಿದ್ದಾರೆ. ಕನ್ನಡದ್ದೇ ಎರಡು ದೊಡ್ಡ ನಿರ್ಮಾಣ ಸಂಸ್ಥೆಗಳು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿವೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ. ಈ ಸಿನಿಮಾ ಕುರಿತು ಅವರು ಮಾಹಿತಿ ಕೊಡುತ್ತಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಆ ಏರಿಯಾದಲ್ಲಿ ಪುನೀತ್ ನಟನೆಯ ಜೇಮ್ಸ್ ರಿಲೀಸ್ ಗೆ 12 ಕೋಟಿ ಕೇಳಿದ್ರಾ ವಿತರಕರು?

    ಇವೆಲ್ಲದರ ಮಧ್ಯೆ ಅವರ ಮತ್ತೊಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅದರ ಮಾಹಿತಿ ಏನಾದರೂ ಕೊಟ್ಟು, ಇವೆಲ್ಲವನ್ನೂ ಸುಳ್ಳು ಮಾಡುತ್ತಾರಾ ಎನ್ನುವ ಗೊಂದಲ ಕೂಡ ಮೂಡಿದೆ. ಏನೇ ಆಗಲಿ ಎರಡು ರಾತ್ರಿ ಕಳೆದರೆ, ಉಪ್ಪಿ ಏನ್ ಹೇಳ್ತಾರೆ ಎನ್ನುವುದನ್ನು ನೋಡಬಹುದು.

  • ಅನೂಪ್ ಭಂಡಾರಿ ಜತೆ 3 ಸಿನಿಮಾ ಮಾಡ್ತಾರಾ ಸುದೀಪ್? : ಬರಲಿದೆ ವಿಕ್ರಾಂತ್ ರೋಣ 2

    ಅನೂಪ್ ಭಂಡಾರಿ ಜತೆ 3 ಸಿನಿಮಾ ಮಾಡ್ತಾರಾ ಸುದೀಪ್? : ಬರಲಿದೆ ವಿಕ್ರಾಂತ್ ರೋಣ 2

    ಕಿಚ್ಚ ಸುದೀಪ್ ಅಂಗಳದಿಂದ ಭರ್ಜರಿ ಸುದ್ದಿಯೊಂದು ಬಂದಿದೆ. ವಿಕ್ರಾಂತ್ ರೋಣ ಸಿನಿಮಾದ ನಂತರ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಸುದೀಪ್ ಕಾಂಬಿನೇಷನ್ ನಲ್ಲಿ ಮೂರು ಚಿತ್ರಗಳು ಬರಲಿವೆ. ಕಿಚ್ಚನಿಗಾಗಿಯೇ ಅನೂಪ್ ಭಂಡಾರಿ ಮೂರು ಕಥೆಗಳನ್ನು ಸಿದ್ಧ ಮಾಡಿಕೊಂಡಿದ್ದಾರಂತೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

    ಸದ್ಯ ವಿಕ್ರಾಂತ್ ರೋಣ ಚಿತ್ರ ಬಿಡುಗಡೆಯ ಬ್ಯುಸಿಯಲ್ಲಿರುವ ಅನೂಪ್ ಈ ನಡುವೆಯೇ ‘ಬಿಲ್ಲ ರಂಗಾ ಬಾಷಾ’, ‘ಅಶ್ವತ್ಥಾಮ’ ಮತ್ತು ‘ವಿಕ್ರಾಂತ್ ರೋಣ 2’ ಸಿನಿಮಾದ ಕಥೆಗಳನ್ನೂ ರೆಡಿ ಮಾಡಿಕೊಂಡಿದ್ದಾರಂತೆ. ಆದರೆ, ಈ ಚಿತ್ರಗಳು ಯಾವಾಗ ಶುರುವಾಗುತ್ತವೆ ಎನ್ನುವ ಮಾಹಿತಿ ಸದ್ಯಕ್ಕಿಲ್ಲ. ಇದನ್ನೂ ಓದಿ : ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

    ಅಂದುಕೊಂಡಂತೆ ಆಗಿದ್ದರೆ, ವಿಕ್ರಾಂತ್ ರೋಣಕ್ಕಿಂತಲೂ ಮೊದಲು ಬಿಲ್ಲ ರಂಗ ಬಾಷಾ ಕಥೆ ಸೆಟ್ಟೇರಬೇಕಿತ್ತು.  ಅದು ಆಗಲಿಲ್ಲ. ಈಗಲಾದರೂ ಈ ಸಿನಿಮಾ ಸೆಟ್ಟೇರತ್ತಾ ಅಥವಾ ಅಶ್ವತ್ಥಾಮ ಚಿತ್ರದ ನಂತರ ಆಗತ್ತಾ ನೋಡಬೇಕಿದೆ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ

    ಕಿಚ್ಚ ಸುದೀಪ್ ಅವರಿಗಾಗಿಯೇ ಸಿನಿಮಾ ಮಾಡಬೇಕು ಎಂದು ಚಿತ್ರರಂಗಕ್ಕೆ ಬಂದವರು ಅನೂಪ್ ಭಂಡಾರಿ. ಆದರೆ, ಆಗ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಸಹೋದರನನ್ನೇ ಹಾಕಿಕೊಂಡು ರಂಗಿತರಂಗ ಚಿತ್ರ ಮಾಡಿದ್ದರು. ಇದೀಗ ಅವರಿಗೆ ಅದೃಷ್ಟ ಹುಡುಕಿಕೊಂಡು ಬಂದಿದೆ. ಅತೀ ಕಡಿಮೆ ಸಮಯದಲ್ಲಿ ಹೆಸರಾಂತ ನಟನ ಜತೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುವ ಅವಕಾಶ ಇವರ ಪಾಲಾಗಿದೆ.

  • ದುನಿಯಾ ವಿಜಯ್ ಹೊಸ  ಚಿತ್ರಕ್ಕೆ ಟೈಟಲ್ ಫಿಕ್ಸ್

    ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

    ಲಗ ಸಿನಿಮಾದ ನಂತರ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಸಿನಿಮಾದ ಟೈಟಲ್ ಇಂದು ಲಾಂಚ್ ಆಗಿದೆ. ತಮ್ಮ ನಿರ್ದೇಶನದ ಎರಡನೇ ಚಿತ್ರಕ್ಕೆ ವಿಜಯ್ “ಭೀಮ” ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ : ಸಿಂಪಲ್ ಸುನಿ ನಿರ್ದೇಶನದ ಸಿನಿಮಾದಲ್ಲಿ ವಾಸ್ಕೋಡಿಗಾಮನ ಕಥೆ

    ಈ ಸಿನಿಮಾದಲ್ಲಿ ವಿಜಯ್, ಕೇವಲ ನಟನೆಯನ್ನು ಮಾಡುತ್ತಾರಾ ಅಥವಾ ನಿರ್ದೇಶನದ ಜೊತೆ ಜೊತೆಗೆ ನಟಿಸುತ್ತಾರೆ ಎನ್ನುವ ಪ್ರಶ್ನೆ ಇತ್ತು. ಅದಕ್ಕೂ ಇದೀಗ ಉತ್ತರ ಸಿಕ್ಕಿದೆ. ನಟನೆಯ ಜತೆಗೆ ನಿರ್ದೇಶನವನ್ನೂ ಅವರು ಮಾಡಲಿದ್ದಾರೆ. ಸದ್ಯಕ್ಕೆ ಶೀರ್ಷಿಕೆ ಮಾತ್ರ ಅನಾವರಣಗೊಂಡಿದೆ. ನಿರ್ಮಾಪಕರ ಹೊರತಾಗಿ ಉಳಿದಂತೆ ಯಾವುದೇ ಮಾಹಿತಿಯನ್ನೂ ಅವರು ಹೊರಹಾಕಿಲ್ಲ. ಇದನ್ನೂ ಓದಿ : ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜತೆ ನಟಿಸಲ್ಲ ಅಂದ ಕನ್ನಡತಿ

    ಸದ್ಯ ತೆಲುಗಿನ ಬಾಲಯ್ಯ ನಟನೆಯ ಹೊಸ ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದಾರೆ. ಈ ಮಧ್ಯೆಯೇ ಅವರು ಹೊಸ ಸಿನಿಮಾದ ಸ್ಕ್ರೀಪ್ಟ್ ಕೆಲಸದಲ್ಲೂ ತೊಡಗಿದ್ದಾರೆ. ತಾಂತ್ರಿಕ ತಂಡದಲ್ಲಿ ಬಹುತೇಕ ಸಲಗ ಟೀಮ್ ಇರಲಿದೆಯಂತೆ. ಇದನ್ನೂ ಓದಿ : ಮಹಾಶಿವರಾತ್ರಿಗೆ ಶಿವಾಜಿ ಸುರತ್ಕಲ್ ಪೋಸ್ಟರ್

    ದುನಿಯಾ ವಿಜಯ್ ಅಂದಾಕ್ಷಣ ಸಾಮಾನ್ಯವಾಗಿ ಸಾಹಸ ಪ್ರಧಾನ ಅಥವಾ ಭೂಗತ ಜಗತ್ತಿನ ಕಥೆಗಳ ಸಿನಿಮಾಗಳೇ ನೆನಪಿಗೆ ಬರುತ್ತವೆ. ಹೊಸ ಸಿನಿಮಾದಲ್ಲೂ ಅದೇ ಇದೆ. ಮೊನ್ನೆಯಷ್ಟೇ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ರಕ್ತ, ಲಾಂಗ್ ಮಚ್ಚುಗಳ ಆರ್ಭಟವೇ ಇದೆ. ಅಲ್ಲದೇ, 80ರ ದಶಕದ ಪಾಪ್ಯುಲರ್ ಬೈಕ್ ಇರುವುದರಿಂದ, ಆ ಕಾಲದ ಕಥೆಯನ್ನು ಅವರು ಹೇಳಲಿದ್ದಾರಾ ಎಂದು ಕಾದು ನೋಡಬೇಕಿದೆ.

  • ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ಅನೌನ್ಸ್

    ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ಅನೌನ್ಸ್

    ದುನಿಯಾ ವಿಜಯ್ ಮತ್ತೊಂದು ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ ಎಂದು ಎರಡು ದಿನಗಳ ಹಿಂದೆಯಷ್ಟೇ ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಇದೀಗ ಸ್ವತಃ ವಿಜಯ್ ಅವರೇ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ, ಅಧಿಕೃತಗೊಳಿಸಿದ್ದಾರೆ. ತಮ್ಮ ಎರಡನೇ ಸಿನಿಮಾ ಕುರಿತು ಅತೀ ಶೀಘ್ರದಲ್ಲೇ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳಲಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ರಾಮ್ ಗೋಪಾಲ್ ವರ್ಮಾ ಭೇಟಿ ಮಾಡಿ ಕುತೂಹಲ ಮೂಡಿಸಿದ ಉಪ್ಪಿ

    ಸದ್ಯಕ್ಕೆ ‘ವಿಕೆ 28’ ಹೆಸರಿನಲ್ಲಿ ಪೋಸ್ಟರ್ ಬಿಡುಗಡೆ ಮಾಡಿರುವ ದುನಿಯಾ ವಿಜಯ್, ಈ ಸಿನಿಮಾ ಕೂಡ ರಕ್ತಸಿಕ್ತ ಅಧ್ಯಾಯವೊಂದನ್ನು ತೆರೆದಿಡಲಿದೆ ಎನ್ನುವಂತೆ ಪೋಸ್ಟರ್. ಲವ್ ಸ್ಟೋರಿಗಳಿಗಿಂತಲೂ ಲಾಂಗು ಮಚ್ಚುಗಳ ಚಿತ್ರಗಳನ್ನೇ ಮಾಡುತ್ತಾ ಬಂದಿರುವ ದುನಿಯಾ ವಿಜಯ್, ಆ ಸರಣಿಯನ್ನು ಇಲ್ಲಿಯೂ ಮುಂದುವರೆಸಿದ್ದಾರೆ. ಇದನ್ನೂ ಓದಿ : ಉಕ್ರೇನ್ ನಲ್ಲಿ ಸಿಲುಕಿಕೊಂಡ ನಟಿ ಶ್ವೇತಾ ಚೆಂಗಪ್ಪ ಗೆಳತಿ

    ವಿಜಯ್ ಚೊಚ್ಚಲು ನಿರ್ದೇಶನದ ಸಲಗ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಬಂದರೂ, ನಿರ್ಮಾಪಕರ ಜೇಬು ತುಂಬಿಸುವಲ್ಲಿ ಸೋಲಲ್ಲಿ. ಹಾಗಾಗಿ ಈ ವರ್ಷದ ಗೆಲುವಿನ ಸಿನಿಮಾಗಳ ಪಟ್ಟಿಯಲ್ಲಿ ಅದು ಸ್ಥಾನ ಪಡೆದುಕೊಂಡಿತು. ಸಲಗ ಸಕ್ಸಸ್ ಆಗುತ್ತಿದ್ದಂತೆಯೇ ವಿಜಯ್ ಮನೆಯ ಮುಂದೆ ನಿರ್ಮಾಪಕರು ಸಾಲುಗಟ್ಟಿದರು. ಈಗದು ಎರಡನೇ ಸಿನಿಮಾವಾಗಿ ಬದಲಾಗಿದೆ. ಇದನ್ನೂ ಓದಿ : ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್

    ಅಂದಹಾಗೆ ಸಲಗ ಸಿನಿಮಾ ಮಾಡಿದ್ದ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಬದಲು ಈ ಸಿನಿಮಾವನ್ನು ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಉಳಿದ ವಿವರವನ್ನು ಮುಂದಿನ ದಿನಗಳಲ್ಲಿ ನೀಡುತ್ತಾರಂತೆ ದುನಿಯಾ ವಿಜಯ್.