Tag: New Cinema

  • ಶಿವರಾಜ್ ಕುಮಾರ್ ಹೊಸ ಚಿತ್ರಕ್ಕೆ ‘ಅವನೇ ಶ್ರೀಮನ್ನಾರಾಯಣ’ನ ನಿರ್ದೇಶಕ

    ಶಿವರಾಜ್ ಕುಮಾರ್ ಹೊಸ ಚಿತ್ರಕ್ಕೆ ‘ಅವನೇ ಶ್ರೀಮನ್ನಾರಾಯಣ’ನ ನಿರ್ದೇಶಕ

    ವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ರವಿ ಇದೀಗ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಸ್ಪೈ ಥ್ರಿಲ್ಲರ್ ಕಥೆಯೊಂದನ್ನು ಸಿನಿಮಾ ಮಾಡುತ್ತಿದ್ದು, ಈ ಚಿತ್ರಕ್ಕೆ ಶಿವರಾಜ್ ಕುಮಾರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದೊಂದು ಪಕ್ಕಾ ಆಕ್ಷನ್ ಸಿನಿಮಾವಾಗಿರಲಿದೆ ಎಂದಿದ್ದಾರೆ ಸಚಿನ್. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ರಕ್ಷಿತ್ ಶೆಟ್ಟಿ  ನಟನೆಯ ಅವನೇ ಶ್ರೀಮನ್ನಾರಾಯಣ ಸಿನಿಮಾಗೆ ಕೇವಲ ನಿರ್ದೇಶಕರಾಗಿದ್ದ ಸಚಿನ್, ಈ ಹೊಸ ಸಿನಿಮಾಗೆ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರಂತೆ. ತಮ್ಮದೇ ಹೋಮ್ ಬ್ಯಾನರ್ ಜೊತೆಗೆ ಕಾರ್ಪೊರೇಟ್ ಕಂಪೆನಿಯೊಂದು ಇವರ ಜೊತೆ ಕೈ ಜೋಡಿಸುತ್ತಿರುವುದು ವಿಶೇಷ. ಈ ಹಿಂದೆ ಹೊಸ ಚಿತ್ರಕ್ಕೆ ಅಶ್ವತ್ಥಾಮ ಎಂದು ಹೆಸರಿಡಲು ಹೊರಟಿತ್ತು, ಇದೀಗ ಆ ಶೀರ್ಷಿಕೆ ಕೂಡ ಬದಲಾಗಲಿದೆ.

    ಟೈಟಲ್ ಬದಲಾದರೂ, ಅಶ್ವತ್ಥಾಮನ ಆಶಯ ಮತ್ತು ಅವನ ಹಿನ್ನೆಲೆಯನ್ನೇ ಕಥೆಯಲ್ಲಿ ಬಳಸಿಕೊಂಡಿದ್ದಾರಂತೆ ನಿರ್ದೇಶಕರು. ಅಶ್ವತ್ಥಾಮನು ಹಾದು ಬಂದ ದಾರಿಯೇ ಸಿನಿಮಾದ ಕಥಾ ನಾಯಕನ ಕಥೆಗೆ ಸ್ಪೂರ್ತಿ ಕೂಡ ಎಂದಿದ್ದಾರೆ. ಹಾಗಾಗಿ ಸಿನಿಮಾದ ಕಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ಸದ್ಯ ಶಿವರಾಜ್ ಕುಮಾರ್ ವೇದ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರೆ, ಈ ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ನಟಿಸಲಿದ್ದಾರೆ. ಈ ಮಧ್ಯೆ ಸಚಿನ್ ಅವರ ಸಿನಿಮಾಗೂ ಡೇಟ್ಸ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಅಂದುಕೊಂಡಂತೆ ಆದರೆ, ಸೆಪ್ಟಂಬರ್ ಹೊತ್ತಿಗೆ ಸಚಿನ್ ಸಿನಿಮಾ ಸೆಟ್ಟೇರಲಿದೆ.

  • ರಕ್ತಸಿಕ್ತ ಅಧ್ಯಾಯಕ್ಕೆ ನಾಯಕನಾಗಲಿದ್ದಾರಾ ನೀನಾಸಂ ಸತೀಶ್?: 20 ಕೋಟಿ ಬಜೆಟ್, ಪ್ಯಾನ್ ಇಂಡಿಯಾ ಸಿನಿಮಾ

    ರಕ್ತಸಿಕ್ತ ಅಧ್ಯಾಯಕ್ಕೆ ನಾಯಕನಾಗಲಿದ್ದಾರಾ ನೀನಾಸಂ ಸತೀಶ್?: 20 ಕೋಟಿ ಬಜೆಟ್, ಪ್ಯಾನ್ ಇಂಡಿಯಾ ಸಿನಿಮಾ

    ನ್ನಡದ ಸೆನ್ಸಿಬಲ್ ನಾಯಕ ಎಂದೇ ಖ್ಯಾತರಾಗಿರುವ ಹೆಸರಾಂತ ನಟ ನೀನಾಸಂ ಸತೀಶ್, ಅಭಿಮಾನಿಗಳಿಗೆ ಹೊಸದೊಂದು ಸುದ್ದಿ ಕೊಟ್ಟಿದ್ದಾರೆ. ಇದೇ ಮೇ 15ರಂದು ಅವರು ಹೊಸ ಸಿನಿಮಾದ ಟೈಟಲ್ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹೊಸ ಸಿನಿಮಾದ ಟೈಟಲ್ ಲಾಂಚ್ ಆಮಂತ್ರಣ ಪತ್ರಿಕೆಯಲ್ಲಿ ರಕ್ತದಲ್ಲಿ ಮಿಂದೆದ್ದ ಬ್ಲೇಡ್ ಅನ್ನು ಬಳಸಿಕೊಂಡಿದ್ದು, ಇದು ರಕ್ತಸಿಕ್ತ ಅಧ್ಯಾಯದ ಕುರುಹು ಇರಬಹುದಾ? ಎನ್ನುವ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ : ಲೇಡಿ ಸೂಪರ್ ಸ್ಟಾರ್ ನಯನತಾರಾ ಚಿತ್ರದ ಮೂಲಕ ಖ್ಯಾತ ಕ್ರಿಕೆಟಿಗೆ ಧೋನಿ ಸಿನಿ ರಂಗಕ್ಕೆ ಎಂಟ್ರಿ

    ಇದೇ ಪೋಸ್ಟರ್ ನಲ್ಲಿಯೇ ‘ಎಲ್ಲಾ ಯುದ್ಧಗಳು, ಯುದ್ಧ ಭೂಮಿಯಲ್ಲೇ ನಡೆಯೊಲ್ಲ’ ಎನ್ನುವ ಟ್ಯಾಗ್ ಲೈನ್ ಕೂಡ ಬರೆದಿದ್ದು, ಅದು ಮನುಕುಲದ ಮಧ್ಯ ನಡೆದ ಯುದ್ಧದ ಕಥೆಯಾ ಎಂಬ ಪ್ರಶ್ನೆ ಕೂಡ ಮೂಡುವಂತೆ ಮಾಡಿದ್ದಾರೆ. ಬ್ಲೇಡ್ ಮತ್ತು ರಕ್ತ ಹಾಗೂ ಯುದ್ಧ ಪದಗಳ ಬಳಕೆಯಿಂದಾಗಿ ಈ ಸಿನಿಮಾ ಯಾವುದರ ಸುತ್ತ ಹೆಣೆದಿರುವ ಕಥೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಮೇ15 ರಂದು ನಡೆಯಲಿರುವ ಮುಹೂರ್ತ ಮತ್ತು ಟೈಟಲ್ ಲಾಂಚ್ ದಿನ ಈ ಕುರಿತು ಒಂದಷ್ಟು ಮಾಹಿತಿ ಸಿಗಬಹುದು. ಇದನ್ನೂ ಓದಿ : ಕಂಗನಾಗೆ ಹುಡುಗರನ್ನು ಕಂಡರೆ ಆಗಲ್ಲವಂತೆ: ಅದಕ್ಕೆ ಮದುವೆ ಆಗಿಲ್ಲವಂತೆ

    ಈ ಸಿನಿಮಾದ ವಿಶೇಷ ಅಂದರೆ, ವೃದ್ಧಿ ಕ್ರಿಯೇಷನ್ ಮತ್ತು ಸತೀಶ್ ಪಿಕ್ಚರ್ ಹೌಸ್ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ವಿನೋದ್ ದೋಂಡಾಳೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸತೀಶ್ ಯಾವ ರೀತಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನುವುದು ಕುತೂಹಲ. ಇದನ್ನೂ ಓದಿ : ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ

    ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ ಸತೀಶ್, ‘ಸಿನಿಮಾದ ಟೈಟಲ್ ತುಂಬಾ ವಿಶೇಷವಾಗಿದೆ. ಅಲ್ಲದೇ, ನಮ್ಮದೇ ನೆಲದ ಕಥೆಯನ್ನು ಹೇಳುತ್ತಿದ್ದೇವೆ. ಈವರೆಗೂ ನಿರ್ವಹಿಸದೇ ಇರುವ ಪಾತ್ರ ಅದಾಗಿದೆ. ಈ ಸಿನಿಮಾಗಾಗಿ ಲುಕ್ ಕೂಡ ಬದಲಾಗಲಿದೆ. ಈಗಲೇ ಸಿನಿಮಾದ ಬಗ್ಗೆ ಮಾತನಾಡುವುದು ಸರಿಯಾದದ್ದು ಅಲ್ಲ. ತೆರೆಯ ಮೇಲೆಯೇ ಕಥೆ ಮತ್ತು ಪಾತ್ರಗಳು ಪರಿಚಯವಾಗಲಿ’ ಎಂದರು. ಇದನ್ನೂ ಓದಿ : ಕಾಂಗ್ರೆಸ್‍ನಿಂದಲೇ ಟ್ರೋಲ್‍ಗೆ ಕರೆ – ನನ್ನನ್ನು ನಾನೇ ಟ್ರೋಲ್ ಮಾಡ್ಕೋತಿನಿ ಎಂದ ರಮ್ಯಾ

    ಈವರೆಗೂ ಕನ್ನಡದಲ್ಲಿ ನಾನಾ ರೀತಿಯ ಕಥೆಗಳು ಬಂದಿವೆ. ಆದರೆ, ಇದೇ ಮೊದಲ ಬಾರಿಗೆ ಇಂಥದ್ದೊಂದು ಕಥೆಯು ಭಾರತೀಯ ಸಿನಿಮಾ ರಂಗದಲ್ಲಿ ಬರುತ್ತಿರುವುದು ಸಿನಿಮಾಗಳ ವಿಶೇಷಗಳಲ್ಲಿ ಒಂದು. ಆದಷ್ಟು ನೈಜತೆಗೆ ಹತ್ತಿರವಾಗುವಂತೆ ಕಥೆಯನ್ನು ಹೇಳುತ್ತಿರುವುದಾಗಿ ಸಿನಿಮಾ ತಂಡದಿಂದ ಬಂದ ಮಾಹಿತಿ. ಹಾಗಾಗಿ ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾನಾ? ಎನ್ನುವುದಕ್ಕೆ ಚಿತ್ರತಂಡವೇ ಉತ್ತರ ಕೊಡಬೇಕಿದೆ.

    ಪ್ಯಾನ್ ಇಂಡಿಯಾ ಸಿನಿಮಾ?

    ಸಿನಿಮಾ ತಂಡದಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಸುಮಾರು 20 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಸಿನಿಮಾ ಮೂಡಿ ಬರಲಿದೆಯಂತೆ. ಭಾರೀ ಬಜೆಟ್ ಬೇಡುವಂತಹ ದೃಶ್ಯಗಳು ಸಿನಿಮಾದಲ್ಲಿ ಇರಲಿದ್ದು, ಯುದ್ಧ ಸನ್ನಿವೇಶವನ್ನು ಕ್ರಿಯೇಟ್ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಕೂಡ ಇದೆ.

  • ರಾಜಮೌಳಿ ಮುಂದಿನ ಚಿತ್ರಕ್ಕೆ ಮಹೇಶ್ ಬಾಬು ಹೀರೋ

    ರಾಜಮೌಳಿ ಮುಂದಿನ ಚಿತ್ರಕ್ಕೆ ಮಹೇಶ್ ಬಾಬು ಹೀರೋ

    ಆರ್.ಆರ್.ಆರ್ ಯಶಸ್ಸಿನಲ್ಲಿ ತೇಲುತ್ತಿರುವ ರಾಜಮೌಳಿ ಮುಂದಿನ ಸಿನಿಮಾ ಯಾವುದು  ಎಂಬ ಚರ್ಚೆ ಶುರುವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಈ ಕುರಿತು ರಾಜಮೌಳಿ ಅವರು ಏನೂ ಹೇಳದೇ ಇದ್ದರೂ, ಅವರ ತಂದೆ ವಿಜಯೇಂದ್ರ ಪ್ರಸಾದ್ ಈ ಕುರಿತು ಮಾತನಾಡಿದ್ದಾರೆ. ಅಂದುಕೊಂಡಂತೆ ಆದರೆ, ರಾಜಮೌಳಿ ನಿರ್ದೇಶನದ ಮುಂದಿನ ಸಿನಿಮಾ 2023ರಲ್ಲಿ ಸೆಟ್ಟೇರಲಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

    ರಾಜಮೌಳಿ ಅವರ ಮುಂದಿನ ಚಿತ್ರಕ್ಕೆ ಅವರ ತಂದೆಯೇ ಚಿತ್ರಕತೆ ಬರೆಯುತ್ತಿದ್ದಾರೆ. ಈಗಾಗಲೇ ಕಥೆ ಸಿದ್ದಗೊಂಡಿದ್ದು, ಸ್ಕ್ರೀನ್ ಪ್ಲೇ ಹೆಣೆಯುವಲ್ಲಿ ವಿಜಯೇಂದ್ರ ಪ್ರಸಾದ್ ಬ್ಯುಸಿಯಾಗಿದ್ದಾರಂತೆ. 2023ರ ಜೂನ್‍ನಿಂದ ಚಿತ್ರೀಕರಣ ಮಾಡುವುದಾಗಿ ಅವರು ತಿಳಿಸಿದ್ದಾರೆ. ಇದು ಕೂಡ ಭಾರೀ ಬಜೆಟ್ ಸಿನಿಮಾವಾಗಿರಲಿದೆಯಂತೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಅಂದಹಾಗೆ ಈ ಚಿತ್ರಕ್ಕೆ ಮಹೇಶ್ ಬಾಬು ಹೀರೋ. ಐತಿಹಾಸಿಕ ಕಥಾವಸ್ತುವನ್ನು ಈ ಸಿನಿಮಾ ಹೊಂದಿದ್ದು, ಮಹೇಶ್ ಬಾಬು ಈ ಪಾತ್ರಕ್ಕಾಗಿ ಕನಿಷ್ಠ ಆರು ತಿಂಗಳ ಕಾಲ ತಯಾರಿ ಮಾಡಿಕೊಳ್ಳಬೇಕಂತೆ. ಸದ್ಯ ಮಹೇಶ್ ಬಾಬು ಅವರು  ‘ಸರ್ಕಾರು ವಾರಿ ಪಾಟ’ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದು, ರಾಜಮೌಳಿ ಅವರ ಕಥೆಯನ್ನು ಒಪ್ಪಿಕೊಂಡಿದ್ದಾರಂತೆ. ಅಲ್ಲದೇ, ವಿಶೇಷ ಪಾತ್ರಕ್ಕೆ ತಯಾರಿ ಮಾಡಿಕೊಳ್ಳುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿತ್ತು. ಈ ಹಿಂದಿನ ಅವರ ಬಾಹುಬಲಿ ಚಿತ್ರ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಬಿರುದಾಂಕಿತಗೊಂಡಿತ್ತು. ಮಹೇಶ್ ಬಾಬುಗಾಗಿ ಬರೆದ ಕಥೆಯು, ಈ ಎರಡೂ ಸಿನಿಮಾಗಳನ್ನೂ ಮೀರಿಸಲಿದೆ ಎಂದು ಸಿನಿಪಂಡಿತರ ಲೆಕ್ಕಾಚಾರ.

  • ‘ಗಾರ್ಗಿ’ ಸಿನಿಮಾದ ಮೂಲಕ ಕನ್ನಡಕ್ಕೆ ಬಂದ ಸಾಯಿ ಪಲ್ಲವಿ

    ‘ಗಾರ್ಗಿ’ ಸಿನಿಮಾದ ಮೂಲಕ ಕನ್ನಡಕ್ಕೆ ಬಂದ ಸಾಯಿ ಪಲ್ಲವಿ

    ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶನದ ಸಿನಿಮಾದ ಮೂಲಕ ಸಾಯಿ ಪಲ್ಲವಿ ಕನ್ನಡಕ್ಕೆ ಬರಲಿದ್ದಾರೆ ಎಂದು ಸುದ್ದಿಯಾಗಿತ್ತು. ಮಂಸೋರೆ ಕೂಡ ಸಾಯಿ ಪಲ್ಲವಿಯನ್ನು ಭೇಟಿ ಮಾಡಿ ಕಥೆ ಹೇಳಿದ್ದಾರೆ ಎನ್ನುವ ಸುದ್ದಿಯೂ ಇತ್ತು. ಆದರೆ, ಅದಕ್ಕೂ ಮುನ್ನ ಸಾಯಿ ಪಲ್ಲವಿ ಹೊಸ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಲಿದ್ದಾರೆ. ಈ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲ, ನಾಲ್ಕು ಭಾಷೆಗಳಲ್ಲಿ ತಯಾರಾಗಲಿದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಇಂದು ಸಾಯಿ ಪಲ್ಲವಿ ಅವರ ಹುಟ್ಟು ಹಬ್ಬ. ಈ ಬರ್ತಡೇಗಾಗಿ ಅವರ ನಟನೆಯ ಹೊಸ ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು, ಈ ಚಿತ್ರಕ್ಕೆ ಗಾರ್ಗಿ ಎಂದು ಹೆಸರಿಡಲಾಗಿದೆ. ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ನಿರ್ಮಾಣವಾಗಲಿದೆಯಂತೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ನ್ಯಾಯಕ್ಕಾಗಿ ಹೋರಾಟ ಮಾಡುವ ಮಹಿಳೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ.  ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    ಗಾರ್ಗಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಸ್ವತಃ ಸಾಯಿ ಪಲ್ಲವಿ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಿದ್ದು, ಹೊಸ ಚಿತ್ರಕ್ಕೆ ಹಾರೈಸಿ ಎಂದು ಕೇಳಿಕೊಂಡಿದ್ದಾರೆ. ಈ ಫಸ್ಟ್ ಲುಕ್ ವಿಶೇಷ ಅರ್ಥ ನೀಡುತ್ತಿದ್ದು, ನ್ಯಾಯ ದೇವತೆಯ ಮುಂದೆ ಬ್ಯಾಗ್ ಹಾಕಿಕೊಂಡು ಅಸಹಾಯಕ ಮಹಿಳೆಯಂತೆ ಸಾಯಿ ಪಲ್ಲವಿ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜತೆ ಇರೋ ಹುಡುಗ ಯಾರು?

    ಸಾಯಿ ಪಲ್ಲವಿ ಸಿನಿಮಾ ರಂಗದಿಂದಲೇ ದೂರವಾಗುತ್ತಾರೆ ಎನ್ನುವ ಮಾತಿತ್ತು. ಕೆಲವೇ ದಿನಗಳಲ್ಲೇ ಅವರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೂ ಹರಡಿತ್ತು. ಅದಕ್ಕೆ ಅವರು ಬೇರೆ ರೀತಿಯಲ್ಲೇ ಉತ್ತರ ಕೊಟ್ಟಿದ್ದರು. ಇದೀಗ ಮದುವೆ ಮತ್ತು ಸಿನಿಮಾ ರಂಗದಿಂದ ದೂರವಾಗುವ ಪ್ರಶ್ನೆಗಳಿಗೆ ‘ಗಾರ್ಗಿ’ ಮೂಲಕ ಉತ್ತರಿಸಿದ್ದಾರೆ ಸಾಯಿ ಪಲ್ಲವಿ.

  • ಜೋಗಿ ಪ್ರೇಮ್ ಸಿನಿಮಾದಲ್ಲಿ ಧ್ರುವ ಸರ್ಜಾ 70ರ ದಶಕದ ರೌಡಿ

    ಜೋಗಿ ಪ್ರೇಮ್ ಸಿನಿಮಾದಲ್ಲಿ ಧ್ರುವ ಸರ್ಜಾ 70ರ ದಶಕದ ರೌಡಿ

    ಜೋಗಿ ಪ್ರೇಮ್ ರೌಡಿಸಂ ಹಿನ್ನೆಲೆಯ ಸಿನಿಮಾ ಕೈಗೆತ್ತಿಕೊಂಡಿದ್ದಾರೆ ಅಂದರೆ, ಅಲ್ಲೊಂದು ಸನ್ಸೇಷನ್ ಇರುತ್ತದೆ. ಜೋಗಿ, ಜೋಗಯ್ಯ, ಕರಿಯಾ ಹೀಗೆ ಸಾಲು ಸಾಲು ರೌಡಿಸಂ ಚಿತ್ರಗಳನ್ನೇ ಪ್ರೇಮ್ ನೀಡಿದ್ದಾರೆ. ಆ ಸಿನಿಮಾಗಳ ಮೂಲಕ ಗೆದ್ದಿದ್ದಾರೆ. ಇದೀಗ ಮತ್ತೆ ಅಂಥದ್ದೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಇದನ್ನೂ ಓದಿ : ಸ್ಯಾಂಡಲ್‌ವುಡ್‌ ಕ್ವೀನ್ ಚಿತ್ರರಂಗಕ್ಕೆ ಬಂದು ನಿನ್ನೆಗೆ 19 ವರ್ಷ: ಸದ್ಯದಲ್ಲೇ ರೀ ಎಂಟ್ರಿ

    ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ಹೊಸ ಚಿತ್ರದ ಕಥೆಯೂ ರೌಡಿಸಂ ಹಿನ್ನೆಲೆಯಲ್ಲೇ ಬರೆದದ್ದಾಗಿದೆ. ಅದು 70ರ ದಶಕದಲ್ಲಿನ ಬೆಂಗಳೂರು ರೌಡಿಸಂ ಕಥೆಯನ್ನು ತಮ್ಮ ಹೊಸ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು. ಈ ಕಥೆಯಲ್ಲಿ ಬರುವ ಬಹುತೇಕ ಪಾತ್ರಗಳು ನೈಜ ಘಟನೆಗಳಿಗೆ ಸಾಕ್ಷಿ ಆಗಿವೆಯಂತೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಬೆಂಗಳೂರಿನ ಭೂಗತ ಜಗತ್ತಿಗೆ ಅನೇಕ ಕಥೆಗಳನ್ನು ಈಗಾಗಲೇ ಸಿನಿಮಾ ಮಾಡಲಾಗಿದೆ. ಭೂಗತ ದೊರೆಗಳು ಕೂಡ ಸಿನಿಮಾವಾಗಿದ್ದಾರೆ. ಹಾಗಾಗಿ ಇನ್ನ್ಯಾವ ಘಟನೆಯನ್ನು ಪ್ರೇಮ್ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಕುತೂಹಲ ಸಹಜವಾಗಿಯೇ ಮೂಡಿದೆ. 70 ರ ದಶಕದ ರೌಡಿಸಂ ಅಂದರೆ, ಕೆಲವು ವ್ಯಕ್ತಿಗಳು ನೆನಪಾಗುತ್ತಾರೆ. ಆದರೆ, ಪ್ರೇಮ್ ಅವರೇ ಈ ವಿಷಯವನ್ನು ಬಹಿರಂಗ ಪಡಿಸುವುದು ಉತ್ತಮ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ಮೊನ್ನೆಯಷ್ಟೇ ಮೈಸೂರಿನಲ್ಲಿ ಈ ಚಿತ್ರದ ಮುಹೂರ್ತ ನಡೆದಿದೆ. ಮುಂದಿನ ತಿಂಗಳು ಅರಮನೆ ಮುಂದೆ ಅದ್ಧೂರಿ ಕಾರ್ಯಕ್ರಮ ಮಾಡಿ ಟೈಟಲ್ ಲಾಂಚ್ ಮಾಡುತ್ತಾರಂತೆ ನಿರ್ದೇಶಕರು. ಅವತ್ತು ಕೆಲವು ಮಾಹಿತಿಗಳನ್ನು ಅವರು ನೀಡಲಿದ್ದಾರಂತೆ. ಧ್ರುವ ಸರ್ಜಾ ಮಾಡುತ್ತಿರುವ ಪಾತ್ರವು ಬಹುಶಃ ಅಂದೇ ರಿವೀಲ್ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ಈ ಸಿನಿಮಾಗಾಗಿ ಅನೇಕ ಸೆಟ್ ಗಳನ್ನು ಹಾಕಲಿದ್ದಾರಂತೆ ನಿರ್ಮಾಪಕರು. 70 ರ ದಶಕದ ಬೆಂಗಳೂರನ್ನು ಮರುಸೃಷ್ಟಿ ಮಾಡಲಾಗುತ್ತದೆಯಂತೆ. ಹಾಗಾಗಿ ಸಿನಿಮಾ ಕೊಂಚ ದುಬಾರಿಯೂ ಆಗಲಿದೆ. ಬಜೆಟ್ ಬಗ್ಗೆ ತಲೆಕೆಡಿಸಿಕೊಳ್ಳದೇ ಉತ್ತಮ ಸಿನಿಮಾ ಮಾಡುವುದೇ ಅವರ ಉದ್ದೇಶವಾಗಿದೆಯಂತೆ.

  • ಜೋಗಿ ಪ್ರೇಮ್ ಹೊಸ ಸಿನಿಮಾ ಘೋಷಣೆ : ಧ್ರುವ ಸರ್ಜಾ ಹೀರೋ, ಏ.24 ಮುಹೂರ್ತ

    ಜೋಗಿ ಪ್ರೇಮ್ ಹೊಸ ಸಿನಿಮಾ ಘೋಷಣೆ : ಧ್ರುವ ಸರ್ಜಾ ಹೀರೋ, ಏ.24 ಮುಹೂರ್ತ

    ಮೊನ್ನೆಯಷ್ಟೇ ‘ಏಕ್ ಲವ್ ಯಾ’ ಸಿನಿಮಾವನ್ನು ಅಭಿಮಾನಿಗಳಿಗೆ ಅರ್ಪಿಸಿದ್ದ ನಿರ್ದೇಶಕ ಜೋಗಿ ಪ್ರೇಮ್ ಇದೀಗ ಮತ್ತೊಂದು ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಹಿಂದೆಯೇ ಅವರು ಹೇಳಿದ್ದಂತೆ ಧ್ರುವ ಸರ್ಜಾಗಾಗಿ ಈ ಸಿನಿಮಾವನ್ನು ಅವರು ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಮುಹೂರ್ತ ಇದೇ ಏ.24ರಂದು ಮೈಸೂರಿನಲ್ಲಿ ನಡೆಯಲಿದೆ. ಇದನ್ನೂ ಓದಿ : ಭಾವಿ ಪತಿಯ ತಂದೆ ನಿಧನ: ನಟಿ ಕಾವ್ಯ ಶಾ ಮದುವೆ ಮುಂದೂಡಿಕೆ

    ಅಂದು ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬ. ಈ ಸಂದರ್ಭದಲ್ಲಿಯೇ ಪ್ರೇಮ್ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಈ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದ್ದು ಸದ್ಯ ಚಿತ್ರಕ್ಕೆ ಕೆವಿಎನ್ 4 ಎಂದು ಟೈಟಲ್ ಇಡಲಾಗಿದೆ. ಮುಂದೆ ಈ ಶೀರ್ಷಿಕೆ ಬದಲಾಗಲಿದೆ. ಇದನ್ನೂ ಓದಿ : ನಾನೇಕೆ ಡ್ರಗ್ಸ್ ತಗೆದುಕೊಳ್ಳುತ್ತಿದ್ದೆ? ಅಸಲಿ ಕಾರಣ ಬಿಚ್ಚಿಟ್ಟ ಸಂಜಯ್ ದತ್

    ಮೈಸೂರಿನಲ್ಲಿ ಬೆಳಗ್ಗೆ 9.30ಕ್ಕೆ ಚಾಮುಂಡಿ ಬೆಟ್ಟದಲ್ಲಿ ಮುಹೂರ್ತ ನಡೆಲಿದ್ದು, ನಾಯಕ ಧ್ರುವ ಸರ್ಜಾ ಮತ್ತು ಇತರ ಕಲಾವಿದರು ಹಾಗೂ ಚಿತ್ರತಂಡ ಅಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದೆ. ಅಲ್ಲದೇ, ಸ್ಯಾಂಡಲ್ ವುಡ್ ನ ಕೆಲವು ಸಿಲೆಬ್ರಿಟಿಗಳು ಕೂಡ ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: 29 ದಾಖಲೆಗಳನ್ನು ಬರೆದು ರಾಕೆಟ್ ವೇಗದಲ್ಲಿ ಮುನ್ನುಗ್ತಿದೆ ಕೆಜಿಎಫ್ 2: ದಾಖಲೆಗಳ ಪಟ್ಟಿ ಇಲ್ಲಿದೆ

    ಧ್ರುವ ಮತ್ತು ಪ್ರೇಮ್ ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಹಾಗಾಗಿಯೇ ಚಿತ್ರಕ್ಕೆ ಅವರು ಯುದ್ದದ ಮುನ್ನುಡಿ ಇಲ್ಲಿಂದ ಆರಂಭ ಎಂಬ ಟ್ಯಾಗ್ ಲೈನ್ ಕೂಡ ಕೊಟ್ಟಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪ್ರೇಮ್, ‘ಮುಹೂರ್ತಕ್ಕೆ ನೀವೇ ಮುಖ್ಯ ಅತಿಥಿ. ಒಟ್ಟಿಗೆ ಹಬ್ಬ ಮಾಡೋಣ ಬನ್ನಿ’ ಎಂದು ಬರೆದುಕೊಂಡಿದ್ದಾರೆ.

  • ಪುನೀತ್ ಅಭಿಮಾನಿಗಳ ಕನಸು ಈಡೇರಿಸಿದ ಸಂತೋಷ್ ಆನಂದ್ ರಾಮ್: ಯುವರಾಜ ಸಿನಿಮಾ ಫಿಕ್ಸ್

    ಪುನೀತ್ ಅಭಿಮಾನಿಗಳ ಕನಸು ಈಡೇರಿಸಿದ ಸಂತೋಷ್ ಆನಂದ್ ರಾಮ್: ಯುವರಾಜ ಸಿನಿಮಾ ಫಿಕ್ಸ್

    ಪುನೀತ್ ರಾಜ್ ಕುಮಾರ್ ನಿಧನದ ನಂತರ ಅವರು ಮಾಡಬೇಕಿದ್ದ ಹಲವು ಚಿತ್ರಗಳು ಹಾಗೆಯೇ ನಿಂತು ಹೋಗಲಿವೆ ಎನ್ನಲಾಗಿತ್ತು. ಅಲ್ಲದೇ, ಸಂತೋಷ್ ಆನಂದ್ ರಾಮ್ ಜತೆ ಅಪ್ಪು ಮಾಡಬೇಕಿದ್ದ ನಿರೀಕ್ಷಿತ ಚಿತ್ರದ ಬಗ್ಗೆಯೂ ಸಾಕಷ್ಟು ಚರ್ಚೆ ಆಗಿತ್ತು. ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಮನವಿಯೊಂದನ್ನು ಮಾಡಿದ್ದರು. ನೀವು ಪುನೀತ್ ರಾಜ್ ಕುಮಾರ್ ಅವರಿಗೆ ಮಾಡಬೇಕಿದ್ದ ಚಿತ್ರವನ್ನು ಯುವರಾಜ ಕುಮಾರ್ ಗಾಗಿ ಮಾಡಬೇಕೆ ಎನ್ನುವುದು ಅವರೆಲ್ಲರ ಒತ್ತಾಸೆಯಾಗಿತ್ತು. ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಚಿತ್ರಕ್ಕೆ ಮತ್ತೆರಡು ಪುರಸ್ಕಾರ

    ಪುನೀತ್ ಅವರ ಅಭಿಮಾನಿಗಳ ಆಸೆಯನ್ನು ಕೊನೆಗೂ ಸಂತೋಷ್ ಆನಂದ್ ರಾಮ್ ಈಡೇರಿಸಿದ್ದಾರೆ ಎನ್ನಲಾಗುತ್ತಿದೆ. ತಾವು ಅಪ್ಪು ಅವರಿಗಾಗಿ ಮಾಡಿಕೊಂಡಿದ್ದ ಕಥೆಯನ್ನು ಕೊಂಚ ಬದಲಾಯಿಸಿಕೊಂಡು ಯುವರಾಜ್ ಕುಮಾರ್ ಗಾಗಿ ಸಿನಿಮಾ ಮಾಡುತ್ತಿದ್ದಾರಂತೆ. ಈ ಸಿನಿಮಾದ ಅಧಿಕೃತ ಮಾಹಿತಿ ಏ.24 ರಂದು ಹೊರ ಬೀಳಲಿದೆ. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

    ಏ.24 ಡಾ.ರಾಜ್ ಕುಮಾರ್ ಜನ್ಮದಿನ. ಅಂದು ಸಂತೋಷ್ ಆನಂದ್ ರಾಮ್ ಮತ್ತು ಯುವರಾಜ್ ಕುಮಾರ್ ಕಾಂಬಿನೇಷನ್ ನ ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಚಿತ್ರತಂಡ ಹಂಚಿಕೊಳ್ಳಲಿದೆಯಂತೆ. ಅಂದುಕೊಂಡಂತೆ ಆಗಿದ್ದರೆ, ಯುವರಾಜ್ ಕುಮಾರ್ ರ ಚೊಚ್ಚಲ ಸಿನಿಮಾ ‘ಯುವ ರಣಧೀರ ಕಂಠೀರವ’  ಇಷ್ಟೊತ್ತಿಗೆ ಸಿದ್ಧವಾಗಬೇಕಿತ್ತು. ಅದೇ ಯುವ ರಾಜ್ ಕುಮಾರ್ ಅವರ ಮೊದಲ ಸಿನಿಮಾನೂ ಆಗಬೇಕಿತ್ತು. ಆದರೆ, ಸದ್ಯ ಆ ಸಿನಿಮಾದ ಕೆಲಸಗಳನ್ನು ನಿಲ್ಲಿಸಲಾಗಿದೆಯಂತೆ. ಈ ಕಾರಣದಿಂದಾಗಿಯೇ ಸಂತೋಷ್ ಆನಂದ್ ರಾಮ್ ಅವರ ಸಿನಿಮಾ ಯುವ ಅವರಿಗೆ ಚೊಚ್ಚಲು ಚಿತ್ರವಾಗಲಿದೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?

     

    ಸಂತೋಷ್ ಅವರ ಈ ಹಿಂದಿನ ಚಿತ್ರವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೂ ಬಂಡವಾಳ ಹೂಡಲಿದೆ. ಅದ್ಧೂರಿಯಾಗಿಯೇ ಯುವ ರಾಜ್ ಕುಮಾರ್ ಅವರನ್ನು ಲಾಂಚ್ ಮಾಡುವ ಪ್ಲ್ಯಾನ್ ಹೊಂಬಾಳೆಯವರದ್ದು. ಈ ಚಿತ್ರಕ್ಕಾಗಿ ಆಗಲೇ ಕೆಲವು ಕೆಲಸಗಳು ನಡೆದಿದ್ದು, ಇಪ್ಪತ್ತು ದಿನ ಕಳೆದರೆ, ಸ್ಪಷ್ಟ ಮಾಹಿತಿ ಸಿಗಲಿದೆ.

  • ಕೊರಟಾಲ ಶಿವ ಸಿನಿಮಾದಲ್ಲಿ ಒಂದಾಗ್ತಾರಾ ದಕ್ಷಿಣದ ಸ್ಟಾರ್ಸ್ ?

    ಕೊರಟಾಲ ಶಿವ ಸಿನಿಮಾದಲ್ಲಿ ಒಂದಾಗ್ತಾರಾ ದಕ್ಷಿಣದ ಸ್ಟಾರ್ಸ್ ?

    ಬ್ಬರು ಟಾಲಿವುಡ್‌ನ ಐಕಾನ್ ಸ್ಟಾರ್, ಇನ್ನೊಬ್ಬರು ತಮಿಳಿನ ಮಾಸ್ ಮಾರಿ, ಈ ಇಬ್ಬರು ಸ್ಟಾರ್‌ಗಳು ಒಂದೇ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡರೆ, ಅಭಿಮಾನಿಗಳ ಕಣ್ಣಿಗೆ ಹಬ್ಬವೋ ಹಬ್ಬ. ಯೆಸ್..`ಪುಷ್ಪ’ ಸ್ಟಾರ್ ಅಲ್ಲು ಅರ್ಜುನ್ ಮತ್ತು ತಮಿಳಿನ ರೌಡಿ ಬೇಬಿ ಖ್ಯಾತಿಯ ಧನುಷ್ ಈ ಇಬ್ಬರೂ ನಟರು ಸೌತ್ ಸಿನಿರಂಗದ ಬಹುಬೇಡಿಕೆಯ ನಟರು. ಈ ಇಬ್ಬರೂ ಸ್ಟಾರ್‌ಗಳು ಒಂದೇ ಚಿತ್ರದಲ್ಲಿ ಒಟ್ಟಿಗೆ ನಟಿಸುವುದಕ್ಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸಿದ್ದಾರೆ. ಹಾಗಾಗಿ ಬರಲಿರುವ ಅವರ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ದುಪ್ಪಟಾಗಿದೆ. ಇದನ್ನೂ ಓದಿ : ಸಿನಿಮಾ ಶೀರ್ಷಿಕೆ ಮೂಲಕ ಅಪ್ಪುನ ನೆನಪಿಸಿಕೊಂಡ ಗೋಲ್ಡನ್ ಸ್ಟಾರ್ : ಗಣಿ-ಗುಬ್ಬಿ ಕಾಂಬಿನೇಷನ್ ಚಿತ್ರಕ್ಕೆ ‘ಬಾನದಾರಿಯಲ್ಲಿ’ ಟೈಟಲ್

    ಸದ್ಯ, ಈ ಇಬ್ಬರೂ ಸ್ಟಾರ್‌ಗಳು ಒಟ್ಟಿಗೆ ಚಿತ್ರ ಮಾಡೋ ಸುದ್ದಿಯಂತೂ ಟಾಲಿವುಡ್ ಗಲ್ಲಿ ಗಲ್ಲಿಯಲ್ಲೂ ಸೌಂಡ್ ಮಾಡುತ್ತಿದೆ. ಬಾಕ್ಸ್ಆಫೀಸ್ ಉಡೀಸ್ ಮಾಡೋ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಮತ್ತು ಬಾಲಿವುಡ್, ಹಾಲಿವುಡ್ ಅಂತಾ ಸೌಂಡ್ ಮಾಡ್ತಿರೋ ಧನುಷ್ ಒಂದೇ ಚಿತ್ರದಲ್ಲಿ ತೋರಿಸೋಕೆ ಹೊರಟಿದ್ದಾರೆ ನಿರ್ದೇಶಕ ಕೊರಟಾಲ ಶಿವ. ಈ ನಟರಿಗಾಗಿಯೇ ಅವರು ಡಿಫರೆಂಟ್ ಸಬ್‌ಜೆಕ್ಟ್ ಹುಡುಕಿದ್ದಾರಂತೆ. ಹಾಗಂತ ಚಿತ್ರತಂಡದಿಂದ ಟೈಟಲ್ ಆಗಲಿ, ಈ ಚಿತ್ರದ ಬಗ್ಗೆ ಮಾಹಿತಿ ಆಗಲಿ ಅಧಿಕೃತವಾಗಿ ರಿವೀಲ್ ಆಗಿಲ್ಲ. ಆದ್ರೆ ಈ ಇಬ್ಬರೂ ಸ್ಟಾರ್‌ಗಳು ಒಟ್ಟಿಗೆ ಬರೋ ಸುದ್ದಿಯಂತೂ ಅವರವರ ಫ್ಯಾನ್ಸ್ ಗೆ ಥ್ರಿಲ್ ನೀಡಿದೆ. ಇದನ್ನೂ ಓದಿ : ಜುಲೈ 28ರಂದು ಗುಮ್ಮನ ಕಥೆ – ಯುಗಾದಿ ದಿನ ಡಬಲ್ ಖುಷಿ ಕೊಟ್ಟ ‘ವಿಕ್ರಾಂತ್ ರೋಣ’ ಟೀಮ್

    ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರ ಆಗಿರಲಿದ್ದು, ಈ ಮಲ್ಟಿಸ್ಟಾರ್ ಮೂವ್ಹಿ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಲಿದೆ. ನಿರ್ದೇಶಕ ಕೊರಟಾಲ ಶಿವ ಸದ್ಯ `ಆಚಾರ್ಯ’ ಚಿತ್ರದ ರಿಲೀಸ್‌ನಲ್ಲಿ ಬ್ಯುಸಿ ಆಗಿದ್ದರೆ, ಅತ್ತ ಅಲ್ಲು ಅರ್ಜುನ್ `ಪುಷ್ಪ ಪಾರ್ಟ್ ೨’ನಲ್ಲಿ ಬ್ಯುಸಿಯಾಗಿದ್ದಾರೆ. ನಟ ಧನುಷ್ ಕೂಡ ಬಾಲಿವುಡ್, ಹಾಲಿವುಡ್ ಚಿತ್ರ ಅಂತಾ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಒಟ್ನಲ್ಲಿ ಈ ಸುದ್ದಿ ಕೇಳಿರೋ ಅಭಿಮಾನಿಗಳಂತೂ ಸುದ್ದಿ ನಿಜವಾಗಲಿ ಎಂದು ಹಾರೈಸಿದ್ದಾರೆ.

  • ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

    ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

    ಣೇಶ್ ಮತ್ತು ಪ್ರೀತಂ ಗುಬ್ಬಿ ಕಾಂಬಿನೇಷನ್ ನಲ್ಲಿ ಮತ್ತೊಂದು ಹೊಸ ಸಿನಿಮಾ ಬರಲಿದೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿ ಬ್ರೇಕ್ ಮಾಡಿತ್ತು. ಇದೀಗ ಆ ಸಿನಿಮಾದ ಟೈಟಲ್ ಲಾಂಚ್ ಗೆ ಸಿದ್ಧತೆ ನಡೆದಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ತಮ್ಮ ಹೊಸ ಸಿನಿಮಾದ ಶೀರ್ಷಿಕೆ ರಿವಿಲ್ ಮಾಡುವುದಾಗಿ ಸ್ವತಃ ಗಣೇಶ್ ಅವರೇ ಟ್ವಿಟ್ ಮಾಡಿದ್ದಾರೆ. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ‘ನವ ಸಂವತ್ಸರ ಯುಗಾದಿಯಂದು ಹೊಸ ಚಿತ್ರದ ಟೈಟಲ್ ಲಾಂಚ್. ನಾನು, ಪ್ರೀತಮ್ ಗುಬ್ಬಿ ಮುಂಗಾರು ಮಳೆಯಿಂದ ಸಿನಿ ಪಯಣದಲ್ಲಿ ಜೊತೆಯಾದವರು. ನಮ್ಮ ಜೋಡಿಯ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಮತ್ತು 99 ಚಿತ್ರಗಳನ್ನು ನೋಡಿ ತಾವು ಹರಿಸಿದ್ದೀರಿ. ಈಗ ಶ್ರೀವಾರಿ ಟಾಕೀಸ್ ನೊಂದಿಗೆ ಮತ್ತೊಂದು ಹೊಸ ಕನಸಿನ ಪಯಣ ಪ್ರಾರಂಭ. ಹರೆಯದ ಹೃದಯಗಳೇ ಹರಸಿ’ ಎಂದು ಗಣೇಶ್ ಹೊಸ ಸಿನಿಮಾದ ಬಗ್ಗೆ ಬರೆದುಕೊಂಡಿದ್ದಾರೆ.

    ಗಣೇಶ್ ಅವರೇ ಹೇಳಿಕೊಂಡಂತೆ ಪ್ರೀತಮ್ ಗುಬ್ಬಿ ಮತ್ತು ಗಣೇಶ್ ಸ್ನೇಹಿತರು. ಆರಂಭದ ದಿನಗಳಲ್ಲಿ ಒಟ್ಟಿಗೆ ಒಂದೇ ರೂಮ್ ನಲ್ಲಿ ಕಾಲಕಳೆದವರು. ಗಣೇಶ್ ಅವರ ಮುಂಗಾರು ಮಳೆ ಚಿತ್ರಕ್ಕೆ ಪ್ರೀತಮ್ ಕಥೆ ಬರೆದದ್ದು. ಅಲ್ಲದೇ ಗಣೇಶ್ ಜತೆಗೆ ಈವರೆಗೂ ಮೂರು ಸಿನಿಮಾಗಳಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಗೆಳೆಯನಿಗಾಗಿಯೇ ಗಣೇಶ್ ಮಳೆಯಲಿ ಜೊತೆಯಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    ಗಣೇಶ್ ಮತ್ತು ಪ್ರೀತಮ್ ಕಾಂಬಿನೇಷನ್ ನ ‘99’ ಸಿನಿಮಾದ ನಂತರ ಈ ಹೊಸ ಸಿನಿಮಾ ಲಾಂಚ್ ಆಗುತ್ತಿದೆ. ಈ ಕಾಂಬಿನೇಷನ್ ನಲ್ಲಿ ಈವರೆಗೂ ಲವ್ ಸ್ಟೋರಿಗಳನ್ನೇ ಸಿನಿಮಾ ಮಾಡುತ್ತಾ ಬಂದಿದ್ದಾರೆ. ಹಾಗಾಗಿ ಹೊಸ ಸಿನಿಮಾದಲ್ಲೂ ಪ್ರೇಮಕಥೆಯೇ ಇರಲಿದೆ ಎನ್ನಲಾಗುತ್ತಿದೆ. ಏಪ್ರಿಲ್ 2 ರಂದು ಕೆಲವು ಸುದ್ದಿಗಳು ಹೊರ ಬೀಳಲಿವೆ.

  • ಮತ್ತೆ ನೈಜಘಟನೆಯ ಬೆನ್ನುಹತ್ತಿದ ನಿರ್ದೇಶಕ ಮಂಸೋರೆ

    ಮತ್ತೆ ನೈಜಘಟನೆಯ ಬೆನ್ನುಹತ್ತಿದ ನಿರ್ದೇಶಕ ಮಂಸೋರೆ

    ರಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಿರ್ದೇಶಕ ಮಂಸೋರೆ, ಇದೀಗ ಮತ್ತೊಂದು ಸಿನಿಮಾಗೆ ಆಕ್ಸನ್ ಕಟ್ ಹೇಳುತ್ತಿದ್ದು, ಈ ಸಿನಿಮಾ ಇಂದಿನಿಂದ ಚಿತ್ರೀಕರಣ ಆರಂಭಿಸಿದೆ. ಇವರ ಚೊಚ್ಚಲು ಸಿನಿಮಾ ‘ಹರಿವು’ ಕೂಡ ನೈಜಘಟನೆಯನ್ನೇ ಆಧರಿಸಿತ್ತು. ಇದೀಗ ನಾಲ್ಕನೇ ಚಿತ್ರಕ್ಕೂ ಅವರು ನಡೆದ ಘಟನೆಯನ್ನೇ ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

    ಹರಿವು ಸಿನಿಮಾದಲ್ಲಿ ಮಗನನ್ನು ಕಳೆದುಕೊಂಡ ಅಸಹಾಯಕ ತಂದೆಯೊಬ್ಬರು ಬೆಂಗಳೂರಿನಿಂದ ಉತ್ತರ ಕರ್ನಾಟಕದ ಹಳ್ಳಿಗೆ ತಮ್ಮ ಮಗನ ಶವವನ್ನು ಪೆಟ್ಟಿಗೆಯಲ್ಲಿ  ತಗೆದುಕೊಂಡು ಹೋದ ಅಮಾನವೀಯ ಘಟನೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಬಾರಿ ಅವರು ಘಟನೆಯ ಬಗ್ಗೆ ಹೇಳಿಕೊಳ್ಳದೇ ‘ಈ ನೆಲದ ಮಣ್ಣಿನ ಜನರ ಆರ್ದ್ರ ಬದುಕಿನ ನೈಜ ಘಟನೆಯೊಂದನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದಷ್ಟೇ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಸಿನಿಮಾದ ಶೀರ್ಷಿಕೆಯೇ ಆಕರ್ಷಕವಾಗಿದೆ ಮತ್ತು ಕುತೂಹಲ ಮೂಡಿಸುತ್ತದೆ. ತಮ್ಮ ನಾಲ್ಕನೇ ಸಿನಿಮಾಗೆ ಅವರು ’19, 20, 21’ ಎಂದು ಹೆಸರಿಟ್ಟಿದ್ದಾರೆ. ಈ ಟೈಟಲ್ ನಾನಾ ಅರ್ಥಗಳನ್ನು ಹೇಳುತ್ತಿದೆ. ಈ ಮೂರು ತಾರೀಖಿನ ದಿನಗಳಲ್ಲಿ ನಡೆದ ಘಟನೆಯಾ? ಅಥವಾ ಆರ್ಟಿಕಲ್ 19, 20, 21ರ ಬಗೆಗಿನ ಕಥಾನಕವಾ ಎನ್ನುವುದು ಸದ್ಯ ಚರ್ಚೆಯ ವಿಷಯವಾಗಿದೆ. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    ಎರಡ್ಮೂರು ದಿನಗಳ ಹಿಂದೆಯೇ ಇಡೀ ಟೀಮ್ ಕಟ್ಟಿಕೊಂಡು ಮಲೆನಾಡಿನ ಸೆರೆಗಿನಲ್ಲಿ ಬೀಡುಬಿಟ್ಟಿದ್ದಾರೆ ಮಂಸೋರೆ. ಉತ್ತರ ಕರ್ನಾಟಕದ ಕೆಲ ಕಡೆ ಮತ್ತು ಕರಾವಳಿ ಭಾಗದಲ್ಲೂ ಒಂದಷ್ಟು ದಿನಗಳ ಕಾಲ ಚಿತ್ರೀಕರಣ ನಡೆಸಲಿದೆ ತಂಡ. ಎಂದಿನಂತೆ ಬಹುತೇಕ ಆಕ್ಟ್ 1978 ಸಿನಿಮಾದಲ್ಲಿ ಕೆಲಸ ಮಾಡಿದವರೇ ಈ ಟೀಮ್ ನಲ್ಲೂ ಮುಂದುವರೆದಿದ್ದಾರೆ. ಸತ್ಯಾ ಹೆಗಡೆ ಅವರ ಸಿನಿಮಾಟೋಗ್ರಫಿ, ದೇವರಾಜ್ ಅವರ ನಿರ್ಮಾಣ ಚಿತ್ರಕ್ಕಿದೆ.