Tag: New Cinema

  • ರಮ್ಯಾ ಬ್ಯಾನರ್ ನಿಂದ ಮೊದಲ ಅವಕಾಶಗಿಟ್ಟಿಸಿಕೊಂಡ ನಿರ್ದೇಶಕ ಯಾರು? ಕರಾವಳಿ ಹುಡುಗನಿಗೆ ಒಲಿದ ಅವಕಾಶ

    ರಮ್ಯಾ ಬ್ಯಾನರ್ ನಿಂದ ಮೊದಲ ಅವಕಾಶಗಿಟ್ಟಿಸಿಕೊಂಡ ನಿರ್ದೇಶಕ ಯಾರು? ಕರಾವಳಿ ಹುಡುಗನಿಗೆ ಒಲಿದ ಅವಕಾಶ

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮೊನ್ನೆಯಷ್ಟೇ ತಮ್ಮ ಹೊಸ ಬ್ಯಾನರ್ ಘೋಷಣೆ ಮಾಡಿದ್ದಾರೆ. ಅದಕ್ಕೆ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ಅಂತ ಹೆಸರು ಇಟ್ಟಿದ್ದಾರೆ. ಪ್ರೊಡಕ್ಷನ್ ಹೆಸರು ಘೋಷಣೆ ಮಾಡುವ ದಿನವೇ ಎರಡು ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ವಿಷಯವನ್ನೂ ಬಹಿರಂಗ ಪಡಿಸಿದ್ದರು. ಆ ಎರಡು ಸಿನಿಮಾಗಳನ್ನು ಯಾರೆಲ್ಲ ಮಾಡಲಿದ್ದಾರೆ ಎನ್ನುವ ಕುತೂಹಲ ಮೂಡಿತ್ತು. ಮೂಲಗಳ ಪ್ರಕಾರ ಕರಾವಳಿ ಹುಡುಗ ರಾಜ್ ಬಿ ಶೆಟ್ಟಿ ಮೊದಲ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

    ರಮ್ಯಾ ಅವರಿಗೆ ಸಿನಿಮಾ ಮಾಡುತ್ತಿಲ್ಲ ಎಂದು ರಾಜ್ ಬಿ ಶೆಟ್ಟಿ ಹೇಳುತ್ತಿದ್ದರೂ, ಆ್ಯಪಲ್ ಬಾಕ್ಸ್ ನಿರ್ಮಾಣ ಸಂಸ್ಥೆಯಿಂದ ರಾಜ್ ಬಿ ಶೆಟ್ಟಿ ಅವರೇ ಮೊದಲ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ, ಈ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿಲ್ಲ. ಹಾಗಾಗಿ ರಮ್ಯಾಗೆ ಸಿನಿಮಾ ಮಾಡುತ್ತಿಲ್ಲವೆಂದು ಮಾತು ಬದಲಿಸುತ್ತಿದ್ದಾರಂತೆ ರಾಜ್ ಬಿ. ಶೆಟ್ಟಿ. ಆದರೆ, ಇವರೇ ಮೊದಲ ಸಿನಿಮಾ ನಿರ್ದೇಶನ ಮಾಡುವುದು ಪಕ್ಕಾ ಎನ್ನುತ್ತಿವೆ ಬಲ್ಲ ಮೂಲಗಳು. ಇದನ್ನೂ ಓದಿ: ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

    ಈಗಾಗಲೇ ರಮ್ಯಾ ಮತ್ತು ರಾಜ್ ಬಿ ಶೆಟ್ಟಿ ಎರಡು ಹಂತದಲ್ಲಿ ಮಾತುಕತೆ ಕೂಡ ಮಾಡಿದ್ದಾರೆ. ಸ್ವತಃ ರಮ್ಯಾ ಮನೆಗೆ ಹೋಗಿ ಶೆಟ್ಟಿ ಅವರು ಕಥೆ ಕೂಡ ಹೇಳಿ ಬಂದಿದ್ದಾರೆ. ಮುಂದಿನ ಹಂತದ ಕೆಲಸಗಳಲ್ಲೂ ಅವರು ತೊಡಗಿದ್ದಾರೆ. ರಮ್ಯಾ ಅವರೇ ಈ ವಿಷಯವನ್ನು ಬಹಿರಂಗ ಪಡಿಸಲಿ ಎಂದು ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ರಮ್ಯಾ ಅವರ ಮೊದಲ ನಿರ್ಮಾಣದ ಸಿನಿಮಾ ರಾಜ್ ಬಿ ಶೆಟ್ಟಿ ಅವರದ್ದೇ ಆಗಿರಲಿದೆ.

    Live Tv
    [brid partner=56869869 player=32851 video=960834 autoplay=true]

  • ಮುಂದಿನ ಚಿತ್ರಕ್ಕಾಗಿ 15 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ ಯಶ್

    ಮುಂದಿನ ಚಿತ್ರಕ್ಕಾಗಿ 15 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ ಯಶ್

    ಕೆಜಿಎಫ್ 2 ಸೂಪರ್ ಹಿಟ್ ನಂತರ ಯಶ್ ಕುರಿತು ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಸುದ್ದಿಗಳು ಎಷ್ಟೇ ದೊಡ್ಡದಾಗಿ ಸದ್ದು ಮಾಡಿದರೂ, ಯಶ್ ಆಗಲಿ ಅಥವಾ ಅವರ ಟೀಮ್ ಆಗಲಿ ಯಾವುದನ್ನೂ ಖಚಿತಪಡಿಸುವುದಿಲ್ಲ. ಹಾಗಾಗಿ ಮತ್ತೆ ಮತ್ತೆ ಹೊಸ ಹೊಸ ಸುದ್ದಿಗಳು ಹುಟ್ಟುತ್ತಲೇ ಇವೆ. ಮೊನ್ನೆಯಷ್ಟೇ ಯಶ್ ಬಳಿ ಐದು ಸಿನಿಮಾಗಳಿಗೆ ಎಂದು ಸುದ್ದಿ ಆಗಿತ್ತು. ಶಂಕರ್ ಸೇರಿದಂತೆ ಹಲವು ನಿರ್ದೇಶಕರು ಯಶ್ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ ಎಂದೂ ಹೇಳಲಾಗಿದೆ.

    ಈ ನಡುವೆ ತಮ್ಮ ಪಾಡಿಗೆ ತಾವು ದೇಹವನ್ನು ಉರಿಗೊಳಿಸಿಕೊಳ್ಳುವಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಮುಂದಿನ ಸಿನಿಮಾವನ್ನು ಕನ್ನಡದಲ್ಲೇ ಮಾಡುವುದು ಪಕ್ಕಾ ಆಗಿರುವುದರಿಂದ ಮತ್ತು ಆ ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡುತ್ತಿರುವುದರಿಂದ ಆ ಚಿತ್ರಕ್ಕಾಗಿ ಯಶ್ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಜಿಮ್ ತರಬೇತುದಾರ ಪಾನಿಪುರಿ ಕಿಟ್ಟ ಅವರ ಗರಡಿಯಲ್ಲಿ ಯಶ್ ದೇಹ ಹುರಿಗೊಳಿಸಿಕೊಳ್ಳುತ್ತಿದ್ದು 15 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಬಹಿರಂಗವಾಗಿ ಕ್ಷಮೆ ಕೇಳಿದ ಮಲಯಾಳಂ ಖ್ಯಾತ ನಟ ಪೃಥ್ವಿ ಸುಕುಮಾರನ್

    ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಯಶ್ ಮತ್ತೊಂದು ಬಗೆಯ ಪಾತ್ರವನ್ನು ಮಾಡಬೇಕಾಗಿರುವುದರಿಂದ ಕೆಜಿಎಫ್ ರಾಕಿಭಾಯ್ ತರಹವೇ ಈ ಪಾತ್ರವು ಕಾಣಬಾರದು ಎನ್ನುವ ಉದ್ದೇಶದಿಂದ ತೂಕವನ್ನು ಇಳಿಸಿಕೊಳ್ಳುವ ಕಸರತ್ತಿಗೆ ಕೈ ಹಾಕಿದ್ದಾರಂತೆ ಯಶ್. ಈಗಾಗಲೇ ಹಲವು ದಿನಗಳಿಂದ ಇದೇ ಕೆಲಸದಲ್ಲಿ ಯಶ್ ನಿರತರಾಗಿದ್ದಾರೆ ಎಂದು ಹೇಳುತ್ತಾರೆ ಅವರು ಆಪ್ತರು.

    Live Tv
    [brid partner=56869869 player=32851 video=960834 autoplay=true]

  • ‘ಯಾಕೋ ಬೇಜಾರು’ ಅಂತಿದ್ದಾರೆ ಮಾತಿನ ಮಲ್ಲಿ ಸಂಹಿತಾ ವಿನ್ಯಾ

    ‘ಯಾಕೋ ಬೇಜಾರು’ ಅಂತಿದ್ದಾರೆ ಮಾತಿನ ಮಲ್ಲಿ ಸಂಹಿತಾ ವಿನ್ಯಾ

    ಬಲ್ ಮೀನಿಂಗ್ ಡೈಲಾಗ್ ಮೂಲಕ ಸ್ಯಾಂಡಲ್ ವುಡ್ ಗಮನ ಸೆಳೆದಿರುವ ಗಾಲಿ ಲಕ್ಕಿ ಇದೀಗ ಮತ್ತೊಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಯಾಕೋ ಬೇಜಾರು ಎಂದು ಹೆಸರಿಡಲಾಗಿದ್ದು, ಈ ಸಿನಿಮಾದಲ್ಲಿ ಮಾಡಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಸಂಹಿತಾ ವಿನ್ಯಾ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇದೇ ಜುಲೈ ಒಂದರಂದು ಬಿಡುಗಡೆಯಾಗಲಿದೆ.

    ಗಾಲಿ ಲಕ್ಕಿ ನಿರ್ದೇಶನದ ಈ ಚಿತ್ರದ ನಾಯಕಿಯಾಗಿ ಸಂಹಿತಾ ವಿನ್ಯಾ ಅಭಿನಯಿಸಿದ್ದಾರೆ.  ಈ ಚಿತ್ರದಲ್ಲಿ ಸಂಹಿತಾ, ಆರ್ ಜೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಆರಂಭದಿಂದ ಕೊನೆಯತನಕ ಚುರುಕಾದ ಸಂಭಾಷಣೆ ಮೂಲಕ ಸಂಹಿತಾ ವಿನ್ಯಾ ಎಲ್ಲರ ಗಮನ ಸೆಳೆಯುತ್ತಾರೆ. ಮಾತಿನಮಲ್ಲಿಯಾಗಿ ನೋಡುಗರನ್ನು ರಂಜಿಸಲಿದ್ದಾರೆ. ಲವ್ ಜಾನರ್ ನ ಈ ಚಿತ್ರದ ಟ್ರೇಲರ್ ಜುಲೈ ಒಂದರಂದು ಬಿಡುಗಡೆಯಾಲಿದ್ದು, ಸದ್ಯದಲ್ಲೇ ಚಿತ್ರ ಕೂಡ ತೆರೆಗೆ ಬರಲಿದೆ. ಖ್ಯಾತ ವಸ್ತ್ರ ವಿನ್ಯಾಸಕಾರ ಫಾರೆವರ್ ನವೀನ್ ಕುಮಾರ್ ಸಂಹಿತಾ ವಿನ್ಯಾ ಅವರಿಗೆ ವಸ್ತ್ರವಿನ್ಯಾಸ ಮಾಡಿದ್ದಾರೆ. ಇದನ್ನೂ ಓದಿ:ನಿರೂಪಕಿ ಅನುಶ್ರೀಗೆ ಗಿಫ್ಟ್ ನೀಡಿದ ಶಿವರಾಜ್‌ಕುಮಾರ್

    ವಿ.ನಂದಿ ಸಹ ನಿರ್ದೇಶನ ಹಾಗೂ ಸುಬ್ರಹ್ಮಣ್ಯ ಜೆ ವೈದ್ಯ ಅವರ  ಛಾಯಾಗ್ರಹಣ “ಯಾಕೋ ಬೇಜಾರು” ಚಿತ್ರಕ್ಕಿದೆ. “ಯಾಕೋ ಬೇಜಾರು” ಚಿತ್ರ ಹಾಗೂ  ನನ್ನ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ ಎನ್ನುತ್ತಾರೆ ಸಂಹಿತಾ ವಿನ್ಯಾ. ಇದು ಸಂಹಿತಾ ಅವರು ನಾಯಕಿಯಾಗಿ ನಟಿಸಿರುವ ಹನ್ನೊಂದನೆಯ ಸಿನಿಮಾ. “ವಿಷ್ಣು ಸರ್ಕಲ್”, ” ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು”  ಸೇರಿದಂತೆ ಕನ್ನಡದಲ್ಲಿ ಇವರು ಅಭಿನಯಿಸಿರುವ ಆರು ಚಿತ್ರಗಳು ಈಗಾಗಲೇ ತೆರೆ ಕಂಡಿದೆ. ತಮಿಳು, ತೆಲುಗಿನಲ್ಲೂ ಇವರ ಚಿತ್ರ ಬಿಡುಗಡೆಯಾಗಿದೆ.ಇತ್ತೀಚೆಗೆ ತೆರೆಗೆ ಬಂದ ಪ್ಯಾನ್ ಇಂಡಿಯಾ ಸಿನಿಮಾ “ಯೂ ಆರ್ ಮೈ ಹೀರೋ” ಚಿತ್ರ ಸಂಹಿತಾ ವಿನ್ಯಾ ಅವರಿಗೆ ಮತ್ತಷ್ಟು ಹೆಸರು ತಂದುಕೊಟ್ಟಿದೆ. ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿದೆ.

    ಮಾಡಲಿಂಗ್ ಕ್ಷೇತ್ರದಲ್ಲೂ ಸಂಹಿತಾ ವಿನ್ಯಾ ಅವರ ಹೆಸರು ಪ್ರಸಿದ್ದಿಯಲ್ಲಿದೆ. ಫಾರೆವರ್ ನವೀನ್  ಕುಮಾರ್ ಅವರ ಅನೇಕ ಫ್ಯಾಷನ್ ಶೋಗಳ ಮೂಲಕ ಸಂಹಿತಾ ವಿನ್ಯಾ ಜನಪ್ರಿಯರಾಗಿದ್ದಾರೆ. ಬಾಲಿವುಡ್ ನ ಹೆಸರಾಂತ ನಟಿಯರು ಭಾಗವಹಿಸಿದ್ದ ಮೆಟ್ ಗಾಲದಲ್ಲೂ ಸಂಹಿತಾ ವಿನ್ಯಾ ಭಾಗವಹಿಸಿದ್ದಾರೆ. ಏಕಕಾಲಕ್ಕೆ ಮಾಡಲಿಂಗ್ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಹಿತಾ ವಿನ್ಯಾ ಎರಡು ಕ್ಷೇತ್ರಗಳಲ್ಲೂ ಪ್ರಸಿದ್ದಿ ಪಡೆಯುತ್ತಿದ್ದಾರೆ.

    Live Tv

  • ತಮಿಳು ಸಿನಿಮಾ ಮಾಡ್ತಾರಾ ಅಥವಾ ಕನ್ನಡದ ನಿರ್ದೇಶಕನಿಗೆ ಮಣೆ ಹಾಕ್ತಾರಾ ಯಶ್?

    ತಮಿಳು ಸಿನಿಮಾ ಮಾಡ್ತಾರಾ ಅಥವಾ ಕನ್ನಡದ ನಿರ್ದೇಶಕನಿಗೆ ಮಣೆ ಹಾಕ್ತಾರಾ ಯಶ್?

    ಶ್ ಸಿನಿಮಾ ವಿಚಾರದಲ್ಲಿ ದಿನಕ್ಕೊಂದು ಸುದ್ದಿ ಹರಿದಾಡುತ್ತಿವೆ. ಮೊನ್ನೆಯಷ್ಟೇ ಯಶ್ ಗಾಗಿ ಖ್ಯಾತ ನಿರ್ಮಾಪಕ ದಿಲ್ ರಾಜು ಸಿನಿಮಾವೊಂದನ್ನು ನಿರ್ಮಾಣ ಮಾಡಲು ಮುಂದೆ ಬಂದಿದ್ದು, 100 ಕೋಟಿ ರೂಪಾಯಿ ಆಫರ್ ಮಾಡಿದ್ದಾರೆ ಎಂದು ಸುದ್ದಿ ಆಯಿತು.  ಅದಕ್ಕೂ ಮುನ್ನ ಕೆವಿಎನ್ ಪ್ರೊಡಕ್ಷನ್ ಹೌಸ್ ಕಡೆಯಿಂದ  ಯಶ್ ಮುಂದಿನ ಸಿನಿಮಾ ನಿರ್ಮಾಣ ಅಂತಾಯಿತು. ತೆಲುಗು ಸಿನಿಮಾ ನಿರ್ದೇಶಕರಿಗೂ ಯಶ್ ಕಾಲ್ ಶೀಟ್ ಕೊಟ್ಟಿದ್ದಾರೆ  ಅನ್ನುವ ಸುದ್ದಿಯೂ ಹರಡಿತ್ತು. ಸದ್ಯ ನರ್ತನ್ ಜೊತೆ ಸಿನಿಮಾ ಮಾಡುವ ವಿಚಾರವೂ ಚಾಲ್ತಿಯಲ್ಲಿದೆ. ಇದೀಗ ಮತ್ತೊಂದು ಹೊಸ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ.

    ರಜನಿಕಾಂತ್ ಸೇರಿದಂತೆ ಹಲವು ಖ್ಯಾತ ನಟರಿಗೆ ಅದ್ಭುತವಾದ ಸಿನಿಮಾಗಳನ್ನು ಕಟ್ಟಿಕೊಟ್ಟಿರುವ ಖ್ಯಾತ ನಿರ್ದೇಶಕ ಶಂಕರ್ ಜೊತೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಶಂಕರ್ ಕೂಡ ತಮ್ಮ ಸಿನಿಮಾದ ಮೂಲಕ ಸಾವಿರಾರು ಕೋಟಿ ಬಾಚಿದವರು. ಯಶ್ ನಟನೆಯ ಕೆಜಿಎಫ್ 2 ಚಿತ್ರ ಕೂಡ ಸಾವಿರ ಕೋಟಿ ಹಣ ಗಳಿಸಿದೆ. ಹಾಗಾಗಿ ಸಾವಿರದ ಸರದಾರರು ಒಟ್ಟಾಗಿ ಸಿನಿಮಾ ಮಾಡಲಿದ್ದಾರೆ ಎನ್ನುವುದು ಲೆಟೆಸ್ಟ್ ನ್ಯೂಸ್. ಇದನ್ನೂ ಓದಿ:ಶಾರುಖ್ ಖಾನ್ ನಟನೆಯ `ಜವಾನ್’ ಚಿತ್ರೀಕರಣದಲ್ಲಿ ನಯನತಾರಾ

    ಹಾಗಂತ ಯಾವುದೇ ತಂಡದಿಂದ ಬಂದಿರುವ ಹೇಳಿಕೆ ಇವಲ್ಲ. ಗಾಸಿಪ್ ರೀತಿಯಲ್ಲೂ ಹರಡಿರಬಹುದು. ಅಥವಾ ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರಲಿರುವ ಚಿತ್ರಕ್ಕೆ ಶಂಕರ್ ನಿರ್ದೇಶನ ಮತ್ತು ಯಶ್ ನಟ ಅಂತಾನೂ ಆಗಬಹುದು. ಒಟ್ಟಿನಲ್ಲಿ ಯಶ್ ಅವರ ಸಿನಿಮಾ ವಿಚಾರದಲ್ಲಿ ದಿನಕ್ಕೊಂದು ಸುದ್ದಿಗಳು ಹರಡುತ್ತಿವೆ. ಅಭಿಮಾನಿಗಳಿಗಂತೂ ಆ ಸುದ್ದಿಗಳು ಥ್ರಿಲ್ ನೀಡುತ್ತಿವೆ.

    Live Tv

  • ಬಾಲಿವುಡ್ ನಟಿಯರ ಮೇಲೆ ತೆಲುಗು ನಟ ಮಹೇಶ್ ಬಾಬುಗೇಕೆ ಮುನಿಸು?

    ಬಾಲಿವುಡ್ ನಟಿಯರ ಮೇಲೆ ತೆಲುಗು ನಟ ಮಹೇಶ್ ಬಾಬುಗೇಕೆ ಮುನಿಸು?

    ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಬಾಲಿವುಡ್ ಕಂಡರೆ ಕೆಂಡಕಾರುತ್ತಾರೆ. ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆಯೂ ಈ ಹಿಂದೆ ಮಾತನಾಡಿದ್ದ ಅವರು, ನನ್ನ ಸಿನಿಮಾಗಳು ದಕ್ಷಿಣದಲ್ಲೇ ಓಡಿದರೆ ಸಾಕು. ಹಿಂದಿ ಏನೂ ಬೇಕಿಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ, ಹಿಂದಿ ಸಿನಿಮಾಗಳಲ್ಲಿ ಅವಕಾಶ ಸಿಕ್ಕರೂ ತಾವು ನಟಿಸುವುದಿಲ್ಲವೆಂದೂ ಮಾತನಾಡಿದ್ದರು. ಇದೀಗ ಮತ್ತೆ ಬಾಲಿವುಡ್ ಮೇಲೆ ಮುನಿಸಿನಿಂದಲೇ ಮಾತನಾಡಿದ್ದಾರೆ. ತಮ್ಮ ಸಿನಿಮಾದಲ್ಲಿ ಬಾಲಿವುಡ್ ನಟಿಯರಿಗೆ ಅವಕಾಶ ನೀಡಬೇಡಿ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.

    ಮಹೇಶ್ ಬಾಬುಗಾಗಿ ಖ್ಯಾತ ನಿರ್ದೇಶಕ ರಾಜಮೌಳಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಈ ಸಿನಿಮಾದ ನಾಯಕಿಯ ಆಯ್ಕೆ ಕೂಡ ಈಗ ನಡೆದಿದೆ. ಬಾಲಿವುಡ್ ನಿಂದ ನಾಯಕಿಯನ್ನು ಕರೆತರಲು ರಾಜಮೌಳಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ತಮ್ಮ ಸಿನಿಮಾದಲ್ಲಿ ಬಾಲಿವುಡ್ ನಟಿಯರಿಗೆ ಅವಕಾಶ ನೀಡಬೇಡಿ ಎಂದು ರಾಜಮೌಳಿ ಅವರಿಗೆ ಮಹೇಶ್ ಬಾಬು ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಸಖತ್ ಸದ್ದು ಕೂಡ ಮಾಡಿದೆ. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

    ಬಾಲಿವುಡ್ ಸಿನಿಮಾವನ್ನು ರೀಮೇಕ್ ಮಾಡಲ್ಲವೆಂದು ಹಾಗೂ ಹಿಂದಿಯಲ್ಲಿ ತಾವು ನಟಿಸುವುದಿಲ್ಲವೆಂದು ಈಗಾಗಲೇ ತೊಡೆತಟ್ಟಿರುವ ಮಹೇಶ್ ಬಾಬು, ಈ ಬಾರಿ ಅಲ್ಲಿಂದ ನಟಿಯರನ್ನೂ ಕರೆಯಿಸಿಕೊಳ್ಳುವುದಿಲ್ಲವೆಂದು ಶಪಥ ಮಾಡಿದ್ದಾರೆ. ಅಲ್ಲಿಗೆ ಬಾಲಿವುಡ್ ಗಿಂತಲೂ ತಾವು ಯಾವುದರಲ್ಲೂ ಕಡಿಮೆಯಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಮಹೇಶ್ ಬಾಬು ಈ ಮೂಲಕ ರವಾಣಿಸಿದ್ದಾರೆ. ಈ ಮಾತಿಗೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.

    Live Tv

  • ತೆಲುಗು ಸಿನಿಮಾದಲ್ಲಿ ನಟಿಸಲು ಯಶ್ ಗೆ 100 ಕೋಟಿ ಆಫರ್ ಕೊಟ್ಟ ದಿಲ್ ರಾಜು?

    ತೆಲುಗು ಸಿನಿಮಾದಲ್ಲಿ ನಟಿಸಲು ಯಶ್ ಗೆ 100 ಕೋಟಿ ಆಫರ್ ಕೊಟ್ಟ ದಿಲ್ ರಾಜು?

    ಶ್ ಮುಂದಿನ ಸಿನಿಮಾ ಬಗ್ಗೆ ಏನೆಲ್ಲ ಸುದ್ದಿಗಳು ಹರಡಿದರೂ, ಅವರು ಮಾತ್ರ ಯಾವುದೇ ಮಾಹಿತಿ ಕೊಡದೇ ಕುತೂಹಲದ ಮೇಲೆ ಕುತೂಹಲ ಹುಟ್ಟಿಸುತ್ತಿದ್ದಾರೆ. ಮುಂದಿನ ಚಿತ್ರವನ್ನು ಅವರು ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್ ಜೊತೆ ಮಾಡುವುದು ಪಕ್ಕಾವಾದರೂ, ಅಧಿಕೃತವಾಗಿ ಅವರು ಯಾವುದೇ ಮಾಹಿತಿ ನೀಡಿಲ್ಲ. ಈ ಸಿನಿಮಾದ ನಿರ್ಮಾಪಕರು ಕೆವಿಎನ್ ಪ್ರೊಡಕ್ಷನ್ ಎಂದು ಗೊತ್ತಾಗಿದ್ದರೂ, ಅವರು ಕೂಡ ಮಾಹಿತಿ ಬಿಟ್ಟು ಕೊಡುತ್ತಿಲ್ಲ.

    ಈ ಮಧ್ಯೆ ತೆಲುಗು ಸಿನಿಮಾ ರಂಗದಿಂದ ಮತ್ತೊಂದು ಖಡಕ್ ಸುದ್ದಿ ಬಂದಿದೆ. ದಕ್ಷಿಣದ ಖ್ಯಾತ ನಿರ್ಮಾಪಕ, ಬಹುಕೋಟಿ ಬಜೆಟ್ ಸಿನಿಮಾ ಮಾಡುವ ದಿಲ್ ರಾಜು ಅವರು ಯಶ್ ಗಾಗಿ ಒಂದು ಸಿನಿಮಾ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಈ ಸಿನಿಮಾವನ್ನು ತೆಲುಗು ನಿರ್ದೇಶಕರೇ ನಿರ್ದೇಶನ ಮಾಡಿದರೂ, ಅದೊಂದು ಪ್ಯಾನ್ ಇಂಡಿಯಾ ಸಿನಿಮಾವಂತೆ. ಹಾಗಾಗಿ ಈ ಚಿತ್ರದಲ್ಲಿ ನಟಿಸಲು ಯಶ್ ಅವರಿಗೆ ದಿಲ್ ರಾಜು 100 ಕೋಟಿ ರೂಪಾಯಿ ಸಂಭಾವನೆಯ ಆಫರ್ ನೀಡಿದ್ದಾರಂತೆ. ಇದನ್ನೂ ಓದಿ: ಹಿರಿಯನಟ ರೈ ಮೋಹನ್ ಶವವಾಗಿ ಮನೆಯಲ್ಲಿ ಪತ್ತೆ

    ಈ ಹಿಂದೆಯೂ ಕೂಡ ಯಶ್ ಅವರು ನೂರಾರು ಕೋಟಿ ರೂಪಾಯಿಯ ಬಾಲಿವುಡ್ ಆಫರ್ ತಿರಸ್ಕರಿಸಿದರು ಎಂಬ ಸುದ್ದಿ ಹರಿದಾಡುತ್ತಿತ್ತು. ಆ ಪ್ರಮಾಣದ ಸಿನಿಮಾವನ್ನು ಅವರು ಬಿಡಲು ಕಾರಣ ಏನು? ಎಂಬ ಪ್ರಶ್ನೆ ಕೂಡ ಮೂಡಿತ್ತು. ಈಗ ಮತ್ತೆ ನೂರು ಕೋಟಿ ರೂಪಾಯಿ ಸಂಭಾವನೆ ವಿಚಾರ ಮುನ್ನೆಲೆಗೆ ಬಂದಿದೆ. ಅಂದುಕಂಡಂತೆ ಆದರೆ, ದಕ್ಷಿಣದಲ್ಲೇ ಈ ಪ್ರಮಾಣದಲ್ಲಿ ಸಂಭಾವನೆ ಪಡೆಯುವ ಬೆರಳಣಿಕೆಯ ನಟರಲ್ಲಿ ಯಶ್ ಕೂಡ ಒಬ್ಬರಾಗಲಿದ್ದಾರೆ. ಆದರೆ, ನರ್ತನ್ ಸಿನಿಮಾವಾದ ನಂತರ ದಿಲ್ ರಾಜು ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

    Live Tv

  • ಪೃಥ್ವಿ ಅಂಬರ್ ಮತ್ತು ಪ್ರಮೋದ್ ಕಾಂಬಿನೇಷನ್ ಚಿತ್ರಕ್ಕೆ ಚಾಲನೆ

    ಪೃಥ್ವಿ ಅಂಬರ್ ಮತ್ತು ಪ್ರಮೋದ್ ಕಾಂಬಿನೇಷನ್ ಚಿತ್ರಕ್ಕೆ ಚಾಲನೆ

    ನ್ನಡದ ಪ್ರತಿಭಾವಂತ ಯುವ ನಟರಾದ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಮತ್ತು ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಕಾಂಬಿನೇಷನ್ ಹೊಸ ಚಿತ್ರಕ್ಕೆ  ಚಾಲನೆ ಸಿಕ್ಕಿದೆ. ಕನ್ನಡ ಚಿತ್ರರಂಗದ ಇಬ್ಬರು ಪ್ರತಿಭಾನ್ವಿತ ನಾಯಕರಿಗೆ ನಿರ್ಮಾಣ ಮಾಡುವ ಕೆಲಸಕ್ಕೆ ಎಂ ಮುನೇಗೌಡ ಮುಂದಾಗಿದ್ದಾರೆ. ಇವತ್ತು ಎಸ್ ವಿಸಿ ಫಿಲ್ಮಂಸ್ ಪ್ರೊಡಕ್ಷನ್ ನ ಮೊದಲ ಚಿತ್ರದ ಮುಹೂರ್ತ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ರತ್ನನ್ ಪ್ರಪಂಚ ಖ್ಯಾತಿಯ ಪ್ರಮೋದ್ ನಾಯಕರಾಗಿ ನಟಿಸ್ತಿರುವ ಸಿನಿಮಾಗೆ ಭುವನಂ ಗಗನಂ ಎಂಬ ಟೈಟಲ್ ಇಡಲಾಗಿದ್ದು,  ಈ ಹಿಂದೆ ರಾಜರು ಎಂಬ ಚಿತ್ರ ಮಾಡಿದ್ದ ಗಿರೀಶ್ ಮೂಲಿಮನಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

    ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಪ್ರಮೋದ್, ಕ್ಲಾಸ್ ಲವ್ ಸ್ಟೋರಿ ಸಿನಿಮಾ ಹುಡುಕುತ್ತಿದ್ದೇ. ಈ ಕಥೆ ಕೇಳಿ ಏನೋ ಇಷ್ಟ ಆಗಿದೆ. ನಾನು ಈ ಸಿನಿಮಾದಲ್ಲಿ ಬೇರೆ ರೀತಿ ಕಾಣಿಸ್ತೇನೆ. ಇಡೀ ಸಿನಿಮಾ ನನಗೆ ಬೇರೆ ಮಜಲು ಕ್ರಿಯೇಟ್ ಮಾಡುತ್ತದೆ ಅನ್ನೋ ನಂಬಿಕೆ ಈ ಚಿತ್ರ ಒಪ್ಪಿಕೊಂಡಿದ್ದೇನೆ. ಈ ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದ. ಒಳ್ಳೆ ಸಿನಿಮಾವಾಗುತ್ತದೆ. ಎಲ್ಲರೂ ಸೇರಿ ಕೆಲಸ ಮಾಡೋಣಾ ಎಂದರು. ಪೃಥ್ವಿ ಅಂಬಾರ್, ಯಾವುದೇ ಸಿನಿಮಾವಾಗಲಿ ಫ್ಯಾಷನೇಟೇಡ್ ನಿರ್ಮಾಪಕರು, ನಿರ್ದೇಶಕರು ಬೇಕು. ಈ ಸಿನಿಮಾದಲ್ಲಿ ಎರಡು ಇದೆ. ನಿರ್ದೇಶಕರ ಜೊತೆ ಈ ಹಿಂದೆ ಕೆಲಸ ಮಾಡಿದ್ದೇನೆ. ನನಗೆ ಟೈಟಲ್ ಬಹಳ ಇಷ್ಟವಾಯ್ತು. ನನ ಹೆಸ್ರು ಅರ್ಥ ಕೂಡ ಭುವನಂ ಗಗನಂ. ಕಥೆ ಕೇಳಿದಾಗ ನನಗೆ ಬಹಳ ಕನೆಕ್ಟ್ ಆಗಿತ್ತು. ಪ್ರಮೋದ್ ಅದ್ಭುತ ಕಲಾವಿದ. ಇಡೀ ತಂಡದ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಖುಷಿ ಎಂದು ಅಭಿಪ್ರಾಯ ಹಂಚಿಕೊಂಡರು. ಇದನ್ನೂ ಓದಿ: ಡಿಸೆಂಬರ್ ನಲ್ಲಿ ಮದುವೆ ಆಗಲಿದ್ದಾರೆ ತಿಥಿ ಸಿನಿಮಾ ಖ್ಯಾತಿಯ ಪೂಜಾ

    ನಿರ್ದೇಶಕ ಗಿರೀಶ್ ಮೂಲಿಮನಿ, ಈ ಹಿಂದೆ ರಾಜರು ಎಂಬ ಸಿನಿಮಾ ಮಾಡಿದ್ದೇನೆ. ಇದು ನನ್ನ ಎರಡನೇ ಸಿನಿಮಾ. ಎಸ್ ವಿಸಿ ಬ್ಯಾನರ್ ಅಂದ್ರೆ ಅದು ಡ್ರೀಮ್. ಸಿನಿಮಾ ಮಾಡೋದು ಅವರ ಕನಸು. ಎಸ್ ವಿಸಿ ಬ್ಯಾನರ್ ನಡಿ ನನಗೆ ಮೊದಲ ಸಿನಿಮಾ ಮಾಡಲು ಅವಕಾಶ ಸಿಕ್ಕಿರೋದು ಖುಷಿ. ನನ್ನ ಹೊಸ ಜರ್ನಿ ಸಕ್ಸಸ್ ಆಗುತ್ತೇ, ಫೀಲ್ ಗುಡ್ ಮೂವೀ ಮಾಡುತ್ತೇವೆ ಎಂಬ ನಂಬಿಕೆ ಇದೆ ಎಂದರು. ಎಂ ಮುನೇಗೌಡ, ಇದು ನನ್ನ ಮೊದಲ ಸಿನಿಮಾ. ನಿರ್ದೇಶಕರು  ಹೇಳಿದ ಕಥೆ ವಿಭಿನ್ನ ಅನಿಸಿತು. ಒಳ್ಳೆ ಕಲಾವಿದರ ದಂಡೇ ಇದೆ. ಪ್ರತಿಯೊಬ್ಬರು ಸಿನಿಮಾಗೆ ಬೆಂಬಲ ನೀಡಿ ಎಂದರು.

    ಭುವನಂ ಗಗನಂ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾವಾಗಿದ್ದು, ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಕಥೆಯಾಗಿದ್ದು, ಪ್ರಮೋದ್ ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ವಾಮನ ಸಿನಿಮಾದ ನಾಯಕಿ ರಚನಾ ರೈ ನಟಿಸ್ತಿದ್ದಾರೆ. ಬರುವ ಜುಲೈ 1ರಿಂದ ಸಿನಿಮಾದ ಶೂಟಿಂಗ್ ಶುರುವಾಗ್ತಿದ್ದು, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುಜಯ್ ಕುಮಾರ್ ಬಾವಿಕಟ್ಟಿ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಕಿಕ್, ಸುನೀಲ್ ಕಶ್ಯಪ್ ಸಂಕಲನ ಸಿನಿಮಾಕ್ಕಿದೆ.

    Live Tv

  • ರಕ್ಷಿತ್ ಶೆಟ್ಟಿ ಸಿನಿಮಾ ಮೂಲಕ ರಮ್ಯಾ ಕಮ್ ಬ್ಯಾಕ್?

    ರಕ್ಷಿತ್ ಶೆಟ್ಟಿ ಸಿನಿಮಾ ಮೂಲಕ ರಮ್ಯಾ ಕಮ್ ಬ್ಯಾಕ್?

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ಆಗಾಗ್ಗೆ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಇತ್ತೀಚೆಗಂತೂ ಈ ವಿಷಯ ಮತ್ತಷ್ಟು ಸದ್ದು ಮಾಡುತ್ತಿದೆ. ಸದ್ಯ ಸಿಕ್ಕಿರುವ ಮಾಹಿತಿ  ಪ್ರಕಾರ ರಕ್ಷಿತ್ ಶೆಟ್ಟಿ ಅವರ ಸಿನಿಮಾದ ಮೂಲಕ ರಮ್ಯಾ ಸಿನಿಮಾ ರಂಗಕ್ಕೆ ವಾಪಸ್ಸಾಗುತ್ತಿದ್ದಾರಂತೆ. ಹಾಗಾಗಿ ರಕ್ಷಿತ್ ಶೆಟ್ಟಿ ಅವರ  ಎಲ್ಲ ಪ್ರಾಜೆಕ್ಟ್ ಗಳಿಗೂ ರಮ್ಯಾ ಹಾರೈಕೆಗಳನ್ನು ಸಲ್ಲಿಸುತ್ತಲೇ ಇದ್ದಾರೆ ಎನ್ನುವುದು ಹೊಸ ಸುದ್ದಿ.

     

    ರಮ್ಯಾ ಅವರು ನಟಿಸುವಂತಹ ಕಥೆಗಳು ಸದ್ಯ ನನ್ನಲ್ಲಿ ಇಲ್ಲ. ನಾನು ಒಪ್ಪಿಕೊಂಡಿರುವ ಪ್ರಾಜೆಕ್ಟ್ ಗಳಲ್ಲಿ ಅವರು ಇಲ್ಲ ಎಂದು ಈ ಹಿಂದೆ ರಕ್ಷಿತ್ ಶೆಟ್ಟಿ ಹೇಳಿದ್ದರೂ, ಅದು ಸುಳ್ಳು ಎನ್ನಲಾಗುತ್ತಿದೆ. ರಕ್ಷಿತ್ ಶೆಟ್ಟಿ ಅವರು ಹೊಂಬಾಳೆ ಬ್ಯಾನರ್ ನಲ್ಲಿ ಮಾಡುವ ಸಿನಿಮಾದಲ್ಲಿ ರಮ್ಯಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಯಾರೂ ಈ ಸುದ್ದಿಯನ್ನು ಹಂಚಿಕೊಳ್ಳುತ್ತಿಲ್ಲ. ಈ ಪ್ರಾಜೆಕ್ಟ್ ಶುರುವಾಗಲು ಇನ್ನೂ ಟೈಮ್ ಇದೆ. ಹಾಗಾಗಿ ಈ ವಿಷಯವನ್ನು ಬಹಿರಂಗಪಡಿಸುತ್ತಿಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ: ಬಿಗ್‌ಬಿ ಮೊಮ್ಮಗಳ ಜೊತೆ `ಗಲ್ಲಿಬಾಯ್’ ನಟನ ಡೇಟಿಂಗ್ ಸ್ಟೋರಿ

     

    ರಮ್ಯಾ ಅವರ ಜೊತೆ ನಟಿಸಲು ಅವಕಾಶ ಸಿಕ್ಕರೆ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ರಕ್ಷಿತ್ ಈಗಾಗಲೇ ಹೇಳಿ ಆಗಿದೆ. ರಮ್ಯಾ ಅವರು ಕೂಡ ರಕ್ಷಿತ್ ಜೊತೆ ನಟಿಸಲು ರೆಡಿ ಇದ್ದಾರೆ. ಇಬ್ಬರ ಅಭಿಮಾನಿಗಳು ಕೂಡ ಈ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಆದಷ್ಟು ಬೇಗ ಈ ಕನಸು ಈಡೇರಲಿದೆ ಎನ್ನುವುದು ಮಾಹಿತಿ. ಈ ಸುದ್ದಿ ನಿಜವಾದರೆ, ಸ್ಯಾಂಡಲ್ ವುಡ್ ನಲ್ಲಿ ಮತ್ತೆ ರಮ್ಯಾ ಪರ್ವ ಶುರುವಾಗಲಿದೆ. 

  • ತಂದೆಯ ಬ್ಯಾನರ್‌ನಲ್ಲೇ ಮತ್ತೆ ನಟಿಸಲಿದ್ದಾರಾ ನಿಖಿಲ್ ಕುಮಾರಸ್ವಾಮಿ?: ಯದುವೀರ ಡ್ರಾಪ್?

    ತಂದೆಯ ಬ್ಯಾನರ್‌ನಲ್ಲೇ ಮತ್ತೆ ನಟಿಸಲಿದ್ದಾರಾ ನಿಖಿಲ್ ಕುಮಾರಸ್ವಾಮಿ?: ಯದುವೀರ ಡ್ರಾಪ್?

    ರಾಜಕೀಯ ಒತ್ತಡಗಳಲ್ಲಿ ಸಿಲುಕಿರುವ ನಿಖಿಲ್ ಕುಮಾರಸ್ವಾಮಿ ವಿಧಾನಸಭೆ ಚುನಾವಣೆ ಮುಗಿಯುವತನಕ ಮತ್ತೆ ಸಿನಿಮಾ ರಂಗಕ್ಕೆ ಬರುವುದಿಲ್ಲ ಎನ್ನಲಾಗಿತ್ತು. ಇದಕ್ಕೆ ಪುಷ್ಠಿ ಎನ್ನುವಂತೆ ಅವರು ಮಾಡಬೇಕಿದ್ದ ಮತ್ತು ಈಗಾಗಲೇ ಘೋಷಣೆಯಾಗಿದ್ದ ಯದುವೀರ ಸಿನಿಮಾದ ಶೂಟಿಂಗ್ ನಡೆಯಬೇಕಿತ್ತು. ಆದರೆ, ಈ ಸಿನಿಮಾ ಈವರೆಗೂ ಟೇಕಾಫ್ ಆಗಲಿಲ್ಲ. ಹಾಗಾಗಿ ಚುನಾವಣೆ ಮುಗಿಯುವ ತನಕ ನಿಖಿಲ್ ಬಣ್ಣ ಹಚ್ಚುವುದು ಅನುಮಾನ ಎನ್ನುವ ಸುದ್ದಿ ಇತ್ತು.

    ನಿಖಿಲ್, ಯದುವೀರ ಸಿನಿಮಾದ ಬದಲು ತಮ್ಮದೇ ಬ್ಯಾನರ್‌ನಲ್ಲಿ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನುವುದು ಸದ್ಯದ ತಾಜಾ ನ್ಯೂಸ್. ಈಗಾಗಲೇ ಇವರ ತಂದೆಯ ಬ್ಯಾನರ್ ಚೆನ್ನಾಂಬಿಕಾ ಫಿಲ್ಮ್ಸ್ ಅಡಿಯಲ್ಲೇ ಜಾಗ್ವರ್ ಮತ್ತು ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಟಿಸಿದ್ದರು. ಮೂರನೇ ಸಿನಿಮಾ ಕೂಡ ಇದೇ ಬ್ಯಾನರ್ ನಲ್ಲಿಯೇ ತಯಾರಾಗಲಿದೆಯಂತೆ. ಈ ಸಿನಿಮಾ ಮುಗಿದ ನಂತರ ಯದುವೀರ ಚಿತ್ರವನ್ನು ಕೈಗೆತ್ತಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬಾಹುಬಲಿ ಪ್ರಭಾಸ್ ಗೆ ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ: ಹುಡುಗಿ ಯಾರು?

    ನಿಖಿಲ್ ಅವರ ಹುಟ್ಟುಹಬ್ಬದ ದಿನದಂದು ಯದುವೀರ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿತ್ತು ಕೆ.ವಿ.ಎನ್ ಪ್ರೊಡಕ್ಷನ್. ಈ ಸಿನಿಮಾವನ್ನು ಮಂಜು ಅಥರ್ವ ಅವರು ನಿರ್ದೇಶನ ಮಾಡಬೇಕಿತ್ತು. ಆದರೆ, ಈವರೆಗೂ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯುಗಾದಿಯಿಂದ ಶೂಟಿಂಗ್ ಅಂದವರು, ಈವರೆಗೂ ಒಂದೇ ಒಂದು ದಿನ ಚಿತ್ರೀಕರಣ ಮಾಡಿಲ್ಲ. ಹೀಗಾಗಿ ಯದವೀರನಿಗೆ ಸ್ವಲ್ಪ ವಿರಾಮ ಹೇಳಿ, ತಮ್ಮ ತಂದೆಯ ಬ್ಯಾನರ್‌ನಲ್ಲೇ ಮುಂದುವರೆದಿದ್ದಾರೆ ಎನ್ನಲಾಗುತ್ತಿದೆ.

  • ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

    ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

    ಕೆಜಿಎಫ್ 2 ಸಿನಿಮಾದ ನಂತರ ಯಶ್ ಯಾರ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಚರ್ಚೆ ಹಲವು ತಿಂಗಳಿಂದ ನಡೆಯುತ್ತಿದೆ. ಕನ್ನಡದಲ್ಲಿ ಮಾಡುತ್ತಾರಾ? ಅಥವಾ ಬೇರೆ ಭಾಷೆ ಚಿತ್ರಗಳಿಗೆ ಮಣೆ ಹಾಕುತ್ತಾರೆ ಎನ್ನುವ ಲೆಕ್ಕಾಚಾರ ಕೂಡ ನಡೆದಿದೆ. ಈ ಚಿತ್ರಕ್ಕೆ ನಿರ್ದೇಶಕರು ಯಾರು ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಈ ನಡುವೆ ಖುಷಿ ವಿಷಯವೊಂದು ಸಿಕ್ಕಿದೆ. ಆದಷ್ಟು ಬೇಗ ಅಭಿಮಾನಿಗಳಿಗೆ ಯಶ್ ಶುಭ ಸುದ್ದಿ ಕೊಡಲಿದ್ದಾರೆ. ಇನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ

    ಕೆಜಿಎಫ್ 2 ನಂತರ ಯಶ್ ಅವರ ಚಿತ್ರಕ್ಕೆ ‘ಮಫ್ತಿ’ ಸಿನಿಮಾ ಖ್ಯಾತಿಯ ನರ್ತನ್ ನಿರ್ದೇಶನ ಮಾಡಲಿದ್ದಾರೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಬ್ರೇಕ್ ಮಾಡಿತ್ತು. ಆನಂತರವು ಹಲವು ನಿರ್ದೇಶಕರ ಹೆಸರು ಕೇಳಿ ಬಂದವು. ಇದೀಗ ಮತ್ತೆ ಪಬ್ಲಿಕ್ ಟಿವಿ ಡಿಜಿಟಲ್ ಮತ್ತೊಂದು ಸುದ್ದಿಯನ್ನು ಬ್ರೇಕ್ ಮಾಡುತ್ತಿದೆ, ಮುಂದಿನ ಸಿನಿಮಾವನ್ನು ನರ್ತನ್ ಮಾಡುವುದೇ ಪಕ್ಕಾ ಆಗಿದೆ. ಸದ್ಯದಲ್ಲೇ ಚಿತ್ರತಂಡದಿಂದಲೇ ಈ ಸುದ್ದಿ ಅಧಿಕೃತಗೊಳ್ಳಲಿದೆ. ಇದನ್ನೂ ಓದಿ: ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರ

    ನರ್ತನ್ ಈಗಾಗಲೇ ಸ್ಕ್ರಿಪ್ಟ್ ಅನ್ನು ಅಂತಿಮಗೊಳಿಸಿದ್ದಾರೆ. ಯಶ್ ಕೂಡ ಅದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಮುಂದಿನ ಹಂತದ ತಯಾರಿ ಕೂಡ ನಡೆದಿದೆ. ಕೆಜಿಎಫ್ 2 ಭಾರೀ ಯಶಸ್ಸು ಕಂಡ ಹಿನ್ನೆಲೆಯಲ್ಲಿ ನರ್ತನ್ ಮತ್ತು ಯಶ್ ಮೇಲೆ ಗುರುತರ ಜವಾಬ್ದಾರಿ ಇರುವುದರಿಂದ, ಈ ಸಿನಿಮಾವನ್ನು ಹೆಚ್ಚಿನ ಕಾಳಜಿ ತಗೆದುಕೊಂಡು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ಬೇಬಿ ಶವರ್‌ನಲ್ಲಿ ಮಿಂಚಿದ ಪ್ರಣೀತಾ ಸುಭಾಷ್

    ಕೆಜಿಎಫ್ 2 ಸಿನಿಮಾ ಐವತ್ತು ದಿನ ಪೂರೈಸಿದ ಹಿನ್ನೆಲೆಯಲ್ಲಿ ಯಶ್ ಅವರ ಹೊಸ ಸಿನಿಮಾ ಘೋಷಣೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಪಾರ್ಟಿ ಹೊರತಾಗಿ ಏನೂ ಆಗಲಿಲ್ಲ. ಯಶ್ ಅಭಿಮಾನಿಗಳಿಗೆ ಸಹಜವಾಗಿಯೇ ನಿರಾಸೆ ಆಗಿತ್ತು. ಅತೀ ಶೀಘ್ರದಲ್ಲೇ ಅಭಿಮಾನಿಗಳು ಖುಷಿ ನೀಡುವಂತಹ ಸುದ್ದಿಯನ್ನು ನೀಡಲಿದೆಯಂತೆ ಟೀಮ್ ಯಶ್.