Tag: Netizens

  • 10 ವರ್ಷ ದುಡಿದು SUV ಕಾರು ಖರೀದಿಸಿದ ಅಭಿಮಾನಿ – ಆನಂದ್ ಮಹೀಂದ್ರಾ ಮೆಚ್ಚುಗೆ ಮಾತು

    10 ವರ್ಷ ದುಡಿದು SUV ಕಾರು ಖರೀದಿಸಿದ ಅಭಿಮಾನಿ – ಆನಂದ್ ಮಹೀಂದ್ರಾ ಮೆಚ್ಚುಗೆ ಮಾತು

    10 ವರ್ಷ ಕಟ್ಟಪಟ್ಟು ದುಡಿದು ಒಂದೊಂದು ರೂಪಾಯಿಯನ್ನು ಕೂಡಿ ಹಾಕಿ ಎಸ್‍ಯುವಿ ಕಾರು ಕಾರಿದಿಸಿದ ಅಭಿಮಾನಿಗೆ ಮಹೀಂದ್ರಾ ಗ್ರೂಪ್‍ನ ಅಧ್ಯಕ್ಷರಾದ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಶುಭ ಕೋರಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಾವು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಕಾರು, ತಮ್ಮ ಕನಸಿನ ಮನೆ ಖರೀದಿಬೇಕು ಎಂಬ ಆಸೆ ಇರುತ್ತದೆ. ಆದರೆ ಮಾಧ್ಯಮವರ್ಗದ ಎಷ್ಟೋ ಜನರಿಗೆ ಇದು ದೂರದ ಕನಸಾಗಿಯೇ ಉಳಿದು ಬಿಡುತ್ತದೆ. ನಿತ್ಯ ಜೀವನದ ಖರ್ಚುಗಳನ್ನೇ ನಿಭಾಯಿಸಲು ಪರದಾಡುವಾಗ ಲಕ್ಷಗಟ್ಟಲೆ ಹಣ ನೀಡಿ ಕಾರು (SUV) ಖರೀದಿಸುವುದು ಬಹಳಷ್ಟು ಸಲ ಅವರ ಜೀವಮಾನದ ಪೂರ್ತಿ ಉಳಿಕೆಯಾಗಿರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ 10 ವರ್ಷ ಕಷ್ಟಪಟ್ಟು ಕೆಲಸ ಮಾಡಿ ಒಂದೊಂದು ರೂಪಾಯಿಯನ್ನು ಕೂಡಿ ಹಾಕಿ ಚಂದದೊಂದು ಎಸ್‍ಯುವಿ ಕಾರನ್ನು ಖರೀದಿಸಿ, ತಮ್ಮ ಕನಸ್ಸನ್ನು ನನಸಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥನ ಹತ್ಯೆಗೆ ಬಳಸಿದ್ದು ಬ್ಲೇಡ್ ಬಾಂಬ್ – ಇದು ಸ್ಫೋಟಿಸಲ್ಲ, ಛಿದ್ರಿಸುತ್ತೆ!

    ಹೌದು, ಅಶೋಕ್‍ಕುಮಾರ್ ಅವರು ತಮ್ಮ ಕನಸಿನ ಮಹೀಂದ್ರಾ ಎಸ್‍ಯುವಿ ಕಾರನ್ನು ಖರೀದಿಸಿದ್ದು, ಹೂವಿನ ಹಾರದಿಂದ ಅಲಂಕರಿಸಿದ್ದ ತಮ್ಮ ಹೊಚ್ಚಹೊಸ ಬಿಳಿ ಎಸ್‍ಯುವಿ ಕಾರಿನ ಪಕ್ಕ ನಿಂತು ಫೋಟೋವನ್ನು ಕ್ಲಿಕ್ಕಿಸಿಕೊಂಡು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 10 ವರ್ಷಗಳ ಕಠಿಣ ಪರಿಶ್ರಮದ ನಂತರ ಹೊಸ ಮಹೀಂದ್ರಾ ಎಕ್ಸ್‍ಯುವಿ 700 ಖರೀದಿಸಿದೆ, ಸರ್ ನನಗೆ ನಿಮ್ಮ ಆಶೀರ್ವಾದ ಬೇಕು ಎಂದು ಆನಂದ್ ಮಹೀಂದ್ರಾ ಅವರನ್ನು ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿದ್ದರು.

    ಇದೀಗ ಈ ಪೋಸ್ಟ್‌ಗೆ ಆನಂದ್ ಮಹೀಂದ್ರಾ ಅವರು ಪ್ರತಿಕ್ರಿಯಿಸಿದ್ದು, ಅವರ ಕಂಪನಿ ನಿರ್ಮಿಸಿದ ಕಾರನ್ನು ಆಯ್ಕೆ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಧನ್ಯವಾದಗಳು. ನಮ್ಮ ಕಾರು ಖರೀದಿಸಿ ನೀವೇ ನಮಗೆ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಯಶಸ್ಸಿಗೆ ಅಭಿನಂದನೆಗಳು. ಅದು ಕಠಿಣ ಪರಿಶ್ರಮದಿಂದ ಬಂದಿದೆ. ಹ್ಯಾಪಿ ಮೋಟಾರಿಂಗ್ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಆರೋಗ್ಯ ಸಚಿವರಿಂದ ಛೀಮಾರಿ – ಪಂಜಾಬ್ ಮಾಜಿ ಸಿಎಂ ಅತ್ತಿಗೆ ರಾಜೀನಾಮೆ

    ಸದ್ಯ ಆನಂದ್ ಮಹೀಂದ್ರಾ ಅವರ ಟ್ವೀಟ್ ನೋಡಿ ಸಂತಸಗೊಂಡ ಅಭಿಮಾನಿ ಪ್ರತ್ಯುತ್ತರವಾಗಿ, ಮಹೀಂದ್ರಾಗೆ ತುಂಬಾ ಧನ್ಯವಾದಗಳು ಸರ್ ಎಂದು ಟ್ವೀಟ್‍ನಲ್ಲಿ ಬರೆದಿದ್ದಾರೆ. ಇದೀಗ ಅಭಿಮಾನಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಆನಂದ್ ಮಹೀಂದ್ರಾ ಅವರ ಟ್ವೀಟ್ ನೆಟ್ಟಿಗರನ್ನು ಆಕರ್ಷಿಸುತ್ತಿದೆ.

    ಮಹೀಂದ್ರಾ ಅವರು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಹಿಂದಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಹಾಗೆಯೇ ಅವರ ಅನುಯಾಯಿಗಳೊಂದಿಗೂ ಕೂಡ ಸಂವಹನ ನಡೆಸುತ್ತಲೇ ಇರುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ಅಜ್ಜಂದಿರು ಬಳಸುವ ಪಟಾಪಟಿ ಚಡ್ಡಿಯ ಬೆಲೆ ಇಂಟರ್ನೆಟ್‍ನಲ್ಲಿ ಬರೋಬ್ಬರಿ 15,450 ರೂಪಾಯಿ!

    ಅಜ್ಜಂದಿರು ಬಳಸುವ ಪಟಾಪಟಿ ಚಡ್ಡಿಯ ಬೆಲೆ ಇಂಟರ್ನೆಟ್‍ನಲ್ಲಿ ಬರೋಬ್ಬರಿ 15,450 ರೂಪಾಯಿ!

    ಹಿಂದಿನ ಕಾಲದಿಂದಲೂ ಹಳ್ಳಿ ಕಡೆಗಳಲ್ಲಿ ಹೆಚ್ಚಾಗಿ ಅಜ್ಜಂದಿರು ಪಟಾಪಟಿ ಚಡ್ಡಿ ಧರಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಈಗ ಪುರುಷರಿಗೆಂದೇ ಕಲರ್‌ಫುಲ್, ವೆಸ್ಟ್ರನ್, ಸ್ಟೈಲಿಷ್, ವೆರೈಟಿ ಡಿಸೈನರ್ ಚಡ್ಡಿಗಳು ಮಾರುಕಟ್ಟೆಗೆ ಬಂದಿದೆ. ಅಲ್ಲದೇ ಇವುಗಳಿಗೆ ಹೆಚ್ಚಾಗಿ ಬೇಡಿಕೆ ಇದೆ. ಈ ಮಧ್ಯೆ ಆನ್‍ಲೈನ್‍ನಲ್ಲಿ ಪಟ್ಟಾಪಟ್ಟಿ ಚಡ್ಡಿ ಬೆಲೆ ಸಖತ್ ಸದ್ದು ಮಾಡುತ್ತಿದೆ.

    ಹೌದು, ಒಂದು ಸ್ಮಾರ್ಟ್ ಫೋನ್‍ನಷ್ಟೇ ದುಬಾರಿ ಬೆಲೆ ಇರುವ ಪಟ್ಟಾಪಟ್ಟಿ ಚಡ್ಡಿಯನ್ನು ಆನ್‍ಲೈನ್‍ನಲ್ಲಿ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಸಾಮಾನ್ಯವಾಗಿ ಒಂದು ಪಟಾಪಟಿ ಚಡ್ಡಿಯ ಬೆಲೆ 200-300 ರೂಪಾಯಿಯಷ್ಟಿರುತ್ತದೆ. ಆದರೆ ಆನ್‍ಲೈನ್‍ನಲ್ಲಿ ಇದಕ್ಕೆ 15,450 ರೂಪಾಯಿ ದರ ನಿಗದಿಪಡಿಸಲಾಗಿದ್ದು, ಈ ವಿಚಾರ ಇದೀಗ ಭಾರೀ ಟ್ರೋಲ್ ಆಗುತ್ತಿದೆ. ಇದನ್ನೂ ಓದಿ: ನಿರ್ಮಾಣ ಹಂತದ ಆಂಜನೇಯನ ದೇಗುಲದ ಮುಂದೆಯೇ ಬಂದು ಪ್ರಾಣಬಿಟ್ಟ ಕೋತಿ!

    ಪಟ್ಟಾಪಟ್ಟಿ ಚಡ್ಡಿ ಬೆಲೆಯ ಸ್ಕ್ರೀನ್‍ಶಾಟ್ ಅನ್ನು ಅರ್ಷದ್ ವಹೀದ್ ಎಂಬವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಅಷ್ಟೊಂದು ಬೆಲೆ ಏಕೆ ಎಂದು ಪ್ರಶ್ನಿಸಿದ್ದಾರೆ. ಫೋಟೋದಲ್ಲಿ ನೀಲಿ ಮತ್ತು ಹಸಿರು ಪಟ್ಟೆಗಳು ಕೆಂಪು ಬಣ್ಣದ ಗೆರೆಗಳಿದ್ದು, ಶರ್ಟ್ ಮೇಲೆ ಚೆಕ್ಕರ್ ಪ್ರಿಂಟ್ ಇದೆ. ಅಲ್ಲದೇ ಇದು ಅದೇ ಹಸಿರು ಚೆಕ್ಕರ್ ಪ್ರಿಂಟ್ ಶಾರ್ಟ್ರ್ ನೊಂದಿಗೂ ಲಭ್ಯವಿದೆ.

    ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಖತ್ ಟ್ರೋಲ್ ಆಗುತ್ತಿದೆ. ಅನೇಕ ಮಂದಿ ಇದಕ್ಕೆ 15 ಸಾವಿರ ರೂಪಾಯಿ ಕೊಟ್ಟು ಖರೀದಿಸುವುದು ಹುಚ್ಚುತನ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಖಿ ಕಟ್ಟಿದ ಸಹೋದರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಗಿಫ್ಟ್‌ ಕೊಡಲು ಕಳ್ಳತನ ಮಾಡುತ್ತಿದ್ದ ಯುವಕನ ಬಂಧನ

    Live Tv
    [brid partner=56869869 player=32851 video=960834 autoplay=true]

  • ಟ್ರಾಫಿಕ್‍ನಿಂದ ವಿಚ್ಛೇದನ ಆಗೋದಾದ್ರೆ ಬೆಂಗ್ಳೂರಿಗೆ ಮೊದಲ ಸ್ಥಾನ- ಅಮೃತಾ ಹೇಳಿಕೆಗೆ ನೆಟ್ಟಿಗರು ವ್ಯಂಗ್ಯ

    ಟ್ರಾಫಿಕ್‍ನಿಂದ ವಿಚ್ಛೇದನ ಆಗೋದಾದ್ರೆ ಬೆಂಗ್ಳೂರಿಗೆ ಮೊದಲ ಸ್ಥಾನ- ಅಮೃತಾ ಹೇಳಿಕೆಗೆ ನೆಟ್ಟಿಗರು ವ್ಯಂಗ್ಯ

    ಬೆಂಗಳೂರು: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರೊಂದು ಹೇಳಿಕೆ ನಿಡಿದ್ದು, ಇದೀಗ ಅವರ ಹೇಳಿಕೆಗೆ ಹಲವಾರು ರೀತಿಯ ಮೀಮ್ಸ್ ಗಳು ಹುಟ್ಟಿಕೊಂಡಿವೆ.

    ಅಮೃತಾ ಅವರು ನಿನ್ನೆ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಟ್ರಾಫಿಕ್ ನಿಂದ ನಿಮ್ಮ ಕುಟುಂಬಗಳಿಗೆ ನಿಮಗೆ ಸಮಯ ಕೊಡಲು ಅಸಾಧ್ಯವಾಗುತ್ತೆ. ಹೀಗಾಗಿ ವಿಚ್ಛೇದನಕ್ಕೆ ಇದೂ ಒಂದು ಕಾರಣವಾಗುತ್ತೆ ಎಂದು ಹೇಳಿದ್ದರು. ಅಮೃತಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಅಮೃತಾ ಹೇಳಿಕೆಗೆ ನೆಟ್ಟಿಗರು ಕೂಡ ವ್ಯಂಗ್ಯವಾಡಿದ್ದು, ಹಲವಾರು ರೀತಿಯ ಮೀಮ್ಸ್ ಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಸಾಮಾನ್ಯವಾಗಿ ಸಡನ್ ಆಗಿ ಪತಿ ಅಥವಾ ಪತ್ನಿ ಮನೆಗೆ ಬಂದಾಗ ಎಷ್ಟೋ ಅಕ್ರಮ ಸಂಬಂಧಗಳು ಬಯಲಾಗಿ, ಡಿವೋರ್ಸ್ ಆಗಿರುವ ಬಗ್ಗೆ ಕೆಲವೊಂದು ಸ್ಟೋರಿಗಳನ್ನು ಓದಿದ್ದೇನೆ. ಹೀಗಾಗಿ ನೀವು ಉತ್ತಮ ಟ್ರಾಫಿಕ್ ಅನ್ನು ದೂಷಿಸಬೇಕೋ ಹೊರತು ಟ್ರಾಫಿಕ್ ಜಾಮ್ ಅಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್‌ ಹಾಡು ಕೇಳಿ ವೇದಿಕೆಯಲ್ಲಿ ಕಣ್ಣೀರು ಹಾಕಿದ್ರು ಜವಾಹರ್‌ಲಾಲ್‌ ನೆಹರೂ

    ಇನ್ನೊಬ್ಬರು, ವಾವ್..! ಈಗ ಮುಂಬೈನಲ್ಲಿ ಆಗಿರುವ ಒಟ್ಟು ಡಿವೋರ್ಸ್ ಗಳಲ್ಲಿ ಶೇ.3ರಷ್ಟು ಪ್ರಕರಣಕ್ಕೆ ಟ್ರಾಫಿಕ್ ಕಾರಣ ಎಂದು ಹೇಳಲಾಗುತ್ತಿದೆ. ಹಾಗಾದರೆ ಬೆಂಗಳೂರು, ಕೋಲ್ಕತ್ತಾ ಮಂದಿಯ ಕಥೆ ಏನಾಗಬೇಡ ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ಇದರಿಂದ ವಿಚ್ಛೇದನಗಳಾಗೋದಾದ್ರೆ ಅದಕ್ಕೆ ಟ್ರಾಫಿಕ್ ವಿಚ್ಛೇದನ ಅಥವಾ ಜಾಮ್ ವಿಚ್ಛೇದನ ಅಂತ ಕರೆಯಬಹುದೇ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್‌ರ ಮೊದಲ ಹಾಡನ್ನು ಸಿನಿಮಾದಿಂದ ತೆಗೆಯಲಾಗಿತ್ತು – ನೀವು ತಿಳಿಯಲೇಬೇಕಾದ 10 ಸಂಗತಿಗಳು ಇಲ್ಲಿವೆ!

    ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ ಎಂಬುದು ತುಂಬಾ ಆಸಕ್ತಿದಾಯಕ ವಿಚಾರವಾಗಿದೆ. ಒಂದು ವೇಳೆ ಟ್ರಾಫಿಕ್ ಕಾರಣವೆಂದಾದರೆ ಬೆಂಗಳೂರಿನಲ್ಲಿ ಶೆ.10 ರಷ್ಟು ವಿಚ್ಛೇದನಗಳಾಗಬಹುದು ಎಂದು ಮತ್ತೊಬ್ಬರು ಟೀಕಿಸಿದ್ದಾರೆ. ಅಲ್ಲದೆ ಅನಿಲಬ್ ಸಿಂಗ್ ಎಂಬವರು, ಟ್ರಾಫಿಕ್ ಕಾರಣವೆಂದಾದರೆ ಸದ್ಯ ಬೆಂಗಳೂರಿನ ಪ್ರತಿಯೊಬ್ಬರು ಇಷ್ಟೊತ್ತಿಗೆ ಸಿಂಗಲ್ ಆಗಿ ಇರುತ್ತಿದ್ದರು ಎಂದಿದ್ದಾರೆ.

    ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಅಮೃತಾ, ನಾನು ಮಾಜಿ ಸಿಎಂ ಪತ್ನಿಯಾಗಿ ಅಲ್ಲ, ಬದಲಿಗೆ ಸಾಮಾನ್ಯ ನಾಗರಿಕಳಾಗಿ ಹೇಳುತ್ತಿದ್ದೇನೆ. ನಾನು ಒಮ್ಮೆ ಹೊರಗೆ ಹೋದಾಗ ಗುಂಡಿಗಳು, ಟ್ರಾಫಿಕ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತೇನೆ. ಟ್ರಾಫಿಕ್ ನಿಂದ ಜನ ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಡಿವೋರ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಮುಂಬೈನಲ್ಲಿ ಶೇ.3ರಷ್ಟು ವಿಚ್ಛೇದನಗಳು ಟ್ರಾಫಿಕ್ ಸಮಸ್ಯೆಯಿಂದಲೇ ಉಂಟಾಗುತ್ತಿವೆ ಎಂದು ಹೇಳಿಕೆ ನೀಡಿದ್ದರು. ಒಟ್ಟಿನಲ್ಲಿ ಅಮೃತಾ ಫಡ್ನವೀಸ್ ಅವರ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    https://twitter.com/codenamedeb/status/1489961471203151873

  • ಸೈಕಲ್ ಏರಿ ತೇಜಸ್ವಿಸೂರ್ಯ ಸಿಟಿ ರೌಂಡ್ಸ್- ಮಾಸ್ಕ್ ಎಲ್ಲಿ ಎಂದ ನೆಟ್ಟಿಗರು

    ಸೈಕಲ್ ಏರಿ ತೇಜಸ್ವಿಸೂರ್ಯ ಸಿಟಿ ರೌಂಡ್ಸ್- ಮಾಸ್ಕ್ ಎಲ್ಲಿ ಎಂದ ನೆಟ್ಟಿಗರು

    ಬೆಂಗಳೂರು: ಸಂಸದ ತೇಜಸ್ವಿಸೂರ್ಯ ಸೈಕಲ್ ಏರಿ ಬೆಂಗಳೂರು ಸುತ್ತಿದ್ದು, ಈ ವೇಳೆ ಮಾಸ್ಕ್ ಹಾಕಿಲ್ಲ. ಕೇವಲ ಸೈಕಲ್ ಓಡಿಸುವಾಗ ಮಾತ್ರವಲ್ಲ ಜನರೊಂದಿಗೆ ಮಾತನಾಡುವಾಗಲೂ ಸಂಸದರು ಮಾಸ್ಕ್ ಹಾಕಿಲ್ಲ. ಹೀಗಾಗಿ ನೆಟ್ಟಿಗರು ಮಾಸ್ಕ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.

     

    View this post on Instagram

     

    A post shared by Tejasvi Surya (@tejasvisurya)

    ಸೈಕಲ್‍ನಲ್ಲಿ ನಗರ ಸುತ್ತಿರುವ ಫೋಟೋ ಹಾಗೂ ವೀಡಿಯೋಗಳನ್ನು ಸಂಸದ ತೇಜಸ್ವಿಸೂರ್ಯ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಂಸದರ ಪೋಸ್ಟ್ ಗೆ ಜನರು ಕಮೆಂಟ್ ಮಾಡಿ ಮಾಸ್ಕ್ ಎಲ್ಲಿ ಸರ್ ಎಂದು ಪ್ರಶ್ನಿಸಿದ್ದಾರೆ. ಮಾಸ್ಕ್ ಎಲ್ಲಿ, ಮಾಸ್ಕ್ ಧರಿಸಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

     

    View this post on Instagram

     

    A post shared by Tejasvi Surya (@tejasvisurya)

    ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಇತರರಿಗೆ ಮಾದರಿಯಾಗಬೇಕಾದ ಜನಪ್ರತಿನಿಧಿಗಳೇ ಹೀಗೆ ಮಾಡಿದರೆ ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ರಾಜ್ಯದಲ್ಲಿ 2ನೇ ಅಲೆ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ. ಬೆಂಗಳೂರಿನಲ್ಲಿ ಪ್ರತಿ ದಿನ 400 ರಿಂದ 600 ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಿದ್ದರೂ ಸಂಸದರು ಎಚ್ಚರ ವಹಿಸಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

    View this post on Instagram

     

    A post shared by Tejasvi Surya (@tejasvisurya)

    ಚಿತ್ರ ಹಾಗೂ ವೀಡಿಯೋದಲ್ಲಿ ತೇಜಸ್ವಿಸೂರ್ಯ ಅವರು ಕೇವಲ ಸೈಕಲ್ ಓಡಿಸುವಾಗ ಮಾತ್ರವಲ್ಲ, ಜನರೊಂದಿಗೆ ಮಾತನಾಡುವಾಗಲೂ ಮಾಸ್ಕ್ ಧರಿಸಿಲ್ಲ. ಹೀಗಾಗಿ ಜನ ಕಮೆಂಟ್ ಮಾಡಿ ಪ್ರಶ್ನಿಸಿದ್ದಾರೆ.

  • ಶ್ವಾನಕ್ಕಾಗಿ ಕಾರು ಗ್ಲಾಸ್ ಒಡೆದ ವ್ಯಕ್ತಿ – ನೆಟ್ಟಿಗರಿಂದ ಮೆಚ್ಚುಗೆ

    ಶ್ವಾನಕ್ಕಾಗಿ ಕಾರು ಗ್ಲಾಸ್ ಒಡೆದ ವ್ಯಕ್ತಿ – ನೆಟ್ಟಿಗರಿಂದ ಮೆಚ್ಚುಗೆ

    ಲಂಡನ್: ಕಾರಿನಲ್ಲಿ ಬಿಟ್ಟು ಹೋಗಿದ್ದ ಶ್ವಾನಕ್ಕಾಗಿ ವ್ಯಕ್ತಿಯೋರ್ವ ಶಾಪಿಂಗ್ ಮಾಲ್ ಮುಂದೆ ಪಾರ್ಕ್ ಮಾಡಿದ್ದ ಬೇರೆಯವರ ಕಾರಿನ ಗ್ಲಾಸ್ ಒಡೆದು ಹಾಕಿರುವ ಘಟನೆ ಲಂಡನ್‍ನಲ್ಲಿ ನಡೆದಿದೆ.

    ಶಾಪಿಂಗ್‍ಗೆಂದು ಕಾರಿನಲ್ಲಿ ಬಂದ ಮಾಲೀಕ ನಾಯಿಯ ಮರಿಯನ್ನು ಕಾರಿನಲ್ಲೇ ಬಿಟ್ಟು ಮಗಳ ಜೊತೆ ಶಾಪಿಂಗ್ ಮಾಡಲು ಹೋಗಿದ್ದಾನೆ. ಈ ವೇಳೆ ಕಾರಿನಲ್ಲಿದ್ದ ಶ್ವಾನ ಹೊರಗೆ ಬರಲಾಗದೆ ಉಸಿರಾಡಲೂ ಆಗದೇ ಕಷ್ಟಪಟ್ಟಿದೆ. ಕಾರು ಕೂಡ ಬಿಸಿಲಿನಲ್ಲಿ ನಿಂತಿದ್ದು, ಬಿಸಿಲ ಝಳಕ್ಕೆ ನಾಯಿ ಬೊಗಳಲು ಆರಂಭಿಸಿದೆ.

    ಸುಮಾರು 45 ನಿಮಿಷ ನಾಯಿ ಕಾರಿನಲ್ಲಿ ಕಷ್ಟಪಟ್ಟಿದೆ. ಆ ನಂತರ ಸ್ಥಳದಲ್ಲಿ ಇದ್ದ ಜನರು ನಾಯಿಯನ್ನು ಹೊರತೆಗೆಯಲು ಮಾಲೀಕನನ್ನು ಹುಡುಕಿದ್ದಾರೆ. ಆದರೆ ಮಾಲೀಕ ಸಿಕ್ಕಿಲ್ಲ. ಆ ನಂತರ ಸ್ಥಳಕ್ಕೆ ಬಂದ ವ್ಯಕ್ತಿಯೋರ್ವ ತನ್ನ ಬಳಿಯಿದ್ದ ಕೊಡಲಿಯಿಂದ ಕಾರಿನ ಗ್ಲಾಸ್ ಅನ್ನು ಒಡೆದು ಹಾಕಿ ನಾಯಿಯನ್ನು ಹೊರ ತೆಗೆದಿ ದ್ದಾನೆ. ಬರೋಬ್ಬರಿ 8 ಬಾರಿ ಕೊಡಲಿಯಿಂದ ಗ್ಲಾಸ್‍ಗೆ ಒಡೆದು ಅದನ್ನು ಬ್ರೇಕ್ ಮಾಡಲಾಗಿದೆ. ನಂತರ ನಾಯಿಯನ್ನು ಪೆಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

    ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಗ್ಲಾಸ್ ಒಡೆದು ಹಾಕಿದ ವ್ಯಕ್ತಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ನಾಯಿಯನ್ನು ಕಾರಿನಲ್ಲಿ ಬಿಟ್ಟು ಹೋದ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ನಾಯಿ ಸಾಕಲೂ ಕೂಡ ಅರ್ಹವಾಗಿಲ್ಲ. ಅವರನ್ನು ಜೈಲಿಗೆ ಹಾಕಿ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ನಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

  • ಚೋರ್ ಎಂದು ಕರೆಯುವುದನ್ನು ನಿಲ್ಲಿಸಿ: ನೆಟ್ಟಿಗರ ವಿರುದ್ಧ ಮಲ್ಯ ಕಿಡಿ

    ಚೋರ್ ಎಂದು ಕರೆಯುವುದನ್ನು ನಿಲ್ಲಿಸಿ: ನೆಟ್ಟಿಗರ ವಿರುದ್ಧ ಮಲ್ಯ ಕಿಡಿ

    ನವದೆಹಲಿ: ನನ್ನನ್ನು ಚೋರ್ ಎಂದು ಕರೆಯುವುದನ್ನು ನಿಲ್ಲಿಸಿ. ಮೊದಲು ಸತ್ಯ ಹಾಗೂ ವಾಸ್ತವ ಅರ್ಥ ಮಾಡಿಕೊಳ್ಳಿ ಎಂದು ಮದ್ಯದ ದೊರೆ, ಉದ್ಯಮಿ ವಿಜಯ ಮಲ್ಯ ನೆಟ್ಟಿಗರ ವಿರುದ್ಧ ಕಿಡಿಕಾರಿದ್ದಾರೆ.

    ನನ್ನ ನೆಚ್ಚಿನ ಗೆಳೆಯ ಹಾಗೂ ಯೂನಿವರ್ಸಲ್ ಬಾಸ್ ಎಂದು ವಿಜಯ್ ಮಲ್ಯ ವೆಸ್ಟ್ ಇಂಡೀಸ್‍ನ ಕ್ರಿಕೆಟರ್ ಕ್ರಿಸ್ ಗೇಲ್ ಜೊತೆಗಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಕ್ರಿಸ್ ಗೇಲ್ ಅವರು ಕೂಡ ಅದೇ ಫೋಟೋವನ್ನು ತಮ್ಮ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡು, ಬಿಗ್ ಬಾಸ್ ಗ್ರೇಟ್ ವಿಜಯ್ ಮಲ್ಯ ಅವರೊಂದಿಗಿನ ಅದ್ಭುತ ಕ್ಷಣ ಎಂದು ಬರೆದುಕೊಂಡಿದ್ದಾರೆ.

    ಈ ಫೋಟೋಗೆ ಅನೇಕ ನೆಟ್ಟಿಗರು ಚೋರ್ ಎಂದು ರೀ ಟ್ವೀಟ್ ಮಾಡಿದ್ದಾರೆ. ವಿಜಯ್ ಮಲ್ಯಗೆ ನಿಮ್ಮ ಖಾತೆಯ ಮಾಹಿತಿ ನೀಡಬೇಡಿ. ಅವರೊಂದಿಗೆ ಯಾವುದೇ ವಹಿವಾಟು ನಡೆಸಬೇಡಿ. ಭಾವನಾತ್ಮಕವಾಗಿ ನಿಮ್ಮ ಬಳಿಗೆ ಬಂದು ಸಾಲ ಕೇಳಿದರೆ ಕೊಡಬೇಡಿ ಎಂದು ಹಿರೆನ್ ಎಂಬವರು ರೀ ಟ್ವೀಟ್ ಮಾಡಿದ್ದಾರೆ.

    ವಿಜಯ್ ಮಲ್ಯ ಮೋಸಗಾರನೆಂದು ನಿಮಗೆ ತಿಳಿದಿದೆ. 9 ಸಾವಿರ ಕೋಟಿ ರೂ. ಸಾಲ ಮಾಡಿ ಭಾರತ ಬಿಟ್ಟು ಬಂದು ತಲೆಮರೆಸಿಕೊಂಡಿದ್ದಾರೆ. ಅವರನ್ನು ಬಿಗ್ ಬಾಸ್ ಎಂದು ಕರೆಯುವ ಮುನ್ನ ನಮ್ಮ ಭಾವನೆ ಅರ್ಥ ಮಾಡಿಕೊಳ್ಳಬೇಕು ಎಂದು ಸಮೀಂ ರಾಜಾ ಎಂಬವರು ಗೇಲ್ ಅವರನ್ನು ಕುಟುಕಿದ್ದಾರೆ.

    https://twitter.com/tige7r_/status/1150072213686476800

    ನೆಟ್ಟಿಗರ ಟ್ವೀಟ್‍ನಿಂದ ಬೇಸತ್ತು ರೀಟ್ವೀಟ್ ಮಾಡಿರುವ ವಿಜಯ್ ಮಲ್ಯ, ನನ್ನನ್ನು ಚೋರ್ ಎಂದು ಕರೆಯುವವರು ಮೊದಲು ಸತ್ಯ ಹಾಗೂ ವಾಸ್ತವತೆಯನ್ನು ಅರಿತು ಮಾತನಾಡಿದರೆ ಒಳ್ಳೆಯದು. ನಿಮ್ಮ ಬ್ಯಾಂಕುಗಳಿಗೆ ಪೂರ್ತಿ ಸಾಲ ಮರುಪಾವತಿ ಮಾಡುತ್ತೇನೆ ಎಂದು ಕಳೆದ ಒಂದು ವರ್ಷದಿಂದ ಹೇಳುತ್ತಾ ಬಂದಿದ್ದೇನೆ. ಆದರೆ ಅದನ್ನು ಅವರು ಪಡೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಬ್ಯಾಂಕ್‍ಗಳನ್ನು ಪ್ರಶ್ನಿಸಿ. ನಂತರ ಯಾರು ಚೋರ್ ಎಂದು ನಿರ್ಧರಿಸಿ ಎಂದು ಗುಡುಗಿದ್ದಾರೆ.

  • ಇದು ದೇಶದ ಮನಸ್ಥಿತಿ, ಕ್ವಿಟ್ ಇಂಡಿಯಾ ಕಾಂಗ್ರೆಸ್ – ಎಕ್ಸಿಟ್ ಪೋಲ್ ಬಣ್ಣಿಸಿದ್ದ ನಾಯ್ಡು ಕಾಲೆಳೆದ ನೆಟ್ಟಿಗರು

    ಇದು ದೇಶದ ಮನಸ್ಥಿತಿ, ಕ್ವಿಟ್ ಇಂಡಿಯಾ ಕಾಂಗ್ರೆಸ್ – ಎಕ್ಸಿಟ್ ಪೋಲ್ ಬಣ್ಣಿಸಿದ್ದ ನಾಯ್ಡು ಕಾಲೆಳೆದ ನೆಟ್ಟಿಗರು

    ಬೆಂಗಳೂರು: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಎಕ್ಸಿಟ್ ಪೋಲ್ ಅನ್ನು 2014ರಲ್ಲಿ ಒಪ್ಪಿಕೊಂಡಿದ್ದರು. ಆದರೆ ಈಗ ಏಕ್ಸಿಟ್ ಪೋಲ್ ಸತ್ಯವಲ್ಲ ಎಂದು ಹೇಳುತ್ತಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

    2014ರಲ್ಲಿ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಸಮೀಕ್ಷೆ ಹೊರ ಬೀಳುತ್ತಿದ್ದಂತೆ ಚಂದ್ರಬಾಬು ನಾಯ್ಡು ಅವರು, “ಎಕ್ಸಿಟ್ ಪೋಲ್ ದೇಶದ ಮನಸ್ಥಿತಿಯನ್ನು ತೋರಿಸುತ್ತಿದೆ. ಕ್ವಿಟ್ ಇಂಡಿಯಾ ಕಾಂಗ್ರೆಸ್” ಎಂದು ಟ್ವೀಟ್ ಮಾಡಿದ್ದರು.

    ಚಂದ್ರಬಾಬು ನಾಯ್ಡು ಅವರು ಈ ಬಾರಿ ಎಕ್ಸಿಟ್ ಪೋಲ್ ಸುಳ್ಳು ಎಂದು ದೂರಿದ್ದಾರೆ. ಹೀಗಾಗಿ ನಾಯ್ಡು ಅವರ 2014ರ ಟ್ವೀಟ್ ಅನ್ನು ರೀ ಟ್ವೀಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ.

    ಎಂತಹ ಭವಿಷ್ಯ ನುಡಿದ್ದೀರಿ ಚಂದ್ರಬಾಬು ನಾಯ್ಡು ಸರ್. ಇದನ್ನು 2024ರಲ್ಲಿ ನೀವು ರೀ ಟ್ವೀಟ್ ಮಾಡುತ್ತಿರಾ ಎಂಬ ಬಲವಾದ ನಂಬಿಕೆ ನಮಗಿದೆ ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.

    ಆಂಧ್ರಪ್ರದೇಶದಿಂದ ತೊಲಗಿ ಎಂದು ಅಲ್ಲಿ ಮತದಾರರು ತೆಲಗು ದೇಶಂ ಪಕ್ಷ (ಟಿಡಿಪಿ)ಗೆ ಹೇಳಿದ್ದಾರೆ ಎಂದು ಪಿಂಕು ಎಂಬವರು ಚಂದ್ರಬಾಬು ನಾಯ್ಡು ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಲೋಕಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಿ ಸರ್ಕಾರ ರಚಿಸಲು ಚಂದ್ರಬಾಬು ನಾಯ್ಡು ಸಿದ್ಧತೆ ನಡೆಸಿದ್ದಾರೆ. ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಎಸ್‍ಪಿ ನಾಯಕಿ ಮಾಯಾವತಿ, ಎಸ್‍ಪಿ ನಾಯಕ ಅಖಿಲೇಶ್ ಯಾದವ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಸೇರಿದಂತೆ ಅನೇಕ ನಾಯಕರನ್ನು ಭೇಟಿಯಾಗಿದ್ದಾರೆ.

    2018ರ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೇ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಆಗ ಬಿಜೆಪಿಗೆ ಒಂದು ಕ್ಷಣವೂ ಅವಕಾಶ ಕೊಡದಂತೆ ಕಾರ್ಯಾಚರಣೆಗಿಳಿದ ಕಾಂಗ್ರೆಸ್ ನಾಯಕರು, ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. ಈಗ ಕೇಂದ್ರದಲ್ಲಿ ಇದೇ ಮಾದರಿಯನ್ನು ಅನುಸರಿಸುವ ತಯಾರಿ ನಡೆದಿದೆ.

    https://twitter.com/imPk_Lucknowi/status/1130415735707058176