Tag: Netherland

  • 4,000 ವರ್ಷಗಳ ಹಿಂದಿನ ಪುರಾತನ ಸಮಾಧಿ ಪತ್ತೆ – ಸಮಾಧಿಯಲ್ಲಿತ್ತು ಬೆಲೆ ಬಾಳುವ ವಸ್ತು

    4,000 ವರ್ಷಗಳ ಹಿಂದಿನ ಪುರಾತನ ಸಮಾಧಿ ಪತ್ತೆ – ಸಮಾಧಿಯಲ್ಲಿತ್ತು ಬೆಲೆ ಬಾಳುವ ವಸ್ತು

    ಆಂಸ್ಟರ್ಡ್ಯಾಮ್: ನೆದರ್ಲೆಂಡ್‌ನ ಸ್ಟೋನ್‌ಹೆಂಜ್ (Netherland Stonehenge) ಎಂದು ಕರೆಯಲ್ಪಟುವ 4,000 ವರ್ಷಗಳಷ್ಟು ಪುರಾತನವಾದ ರುದ್ರಭೂಮಿಯೊಂದನ್ನು ಡಚ್ ಪುರಾತತ್ವಶಾಸ್ತ್ರಜ್ಞರು (Archaeologists) ಪತ್ತೆ ಹಚ್ಚಿದ್ದಾರೆ.

    ಸಮಾಧಿಯ ದಿಬ್ಬಗಳನ್ನು (Burial Ground) ಒಳಗೊಂಡಿರುವ ಈ ಸ್ಥಳವು 65 ಅಡಿ ವಿಸ್ತೀರ್ಣವಿದೆ. 60 ಪುರುಷರು ಹಾಗೂ ಮಹಿಳೆಯರು ಮತ್ತು ಮಕ್ಕಳ ಅವಶೇಷಗಳನ್ನ ಒಳಗೊಂಡಿದೆ ಎಂದು ಡಚ್ ಸಂಶೋಧಕರು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಜಲಾಂತರ್ಗಾಮಿ ನಾಪತ್ತೆ – ಟೈಟಾನಿಕ್ ನೋಡಲು ತೆರಳಿದ್ದ ಪ್ರವಾಸಿಗರಲ್ಲಿದ್ರು ಪಾಕಿಸ್ತಾನದ ಶ್ರೀಮಂತ

    ಈ ಸಮಾಧಿಯ ಸ್ಥಳದಲ್ಲಿ ಪ್ರಾಣಿಗಳ ಅಸ್ಥಿಪಂಜರಗಳು, ಮಾನವನ ತಲೆಬುರುಡೆಗಳು, ಕಂಚಿನ ಈಟಿಯಂತಹ ಬೆಲೆಬಾಳುವ ವಸ್ತುಗಳನ್ನು ಕಂಡುಹಿಡಿದಿದ್ದಾರೆ. ಟೈಲ್ ನಗರಪಾಲಿಕೆಗೆ 70 ಕಿಮೀ ದೂರದಲ್ಲಿರುವ ರೂಟರ್‌ಡ್ಯಾಮ್‌ನ ಪೂರ್ವದಲ್ಲಿ ಈ ಸ್ಥಳವನ್ನ ಉತ್ಖನನ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಟೈಟಾನಿಕ್ ಅವಶೇಷ ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ

    ಇಂಗ್ಲೆಂಡ್‌ನ ಸ್ಟೋನ್‌ಹೆಂಜ್‌ನ (England Stonehenge) ಪ್ರಸಿದ್ಧ ಕಲ್ಲುಗಳಂತೆಯೇ ಅತಿದೊಡ್ಡ ದಿಬ್ಬವು ಸೂರ್ಯನ ಕ್ಯಾಲೆಂಡರ್ ಆಗಿ ಇದು ಕಾರ್ಯನಿರ್ವಹಿಸುತ್ತದೆ. ಈ ಅಭಯಾರಣ್ಯದಲ್ಲಿ ಜನರು ವರ್ಷದ ವಿಶೇಷ ದಿನಗಳನ್ನ ಆಚರಿಸುತ್ತಾರೆ, ಧಾರ್ಮಿಕ ಕ್ರಿಯೆಗಳನ್ನ ನೆರವೇರಿಸುತ್ತಾರೆ. ಜೊತೆಗೆ ಅಂತ್ಯಸಂಸ್ಕಾರ ನೆರವೇರಿಸುವ ಮಹತ್ವದ ಸ್ಥಳವಾಗಿರಬೇಕು ಎಂದು ಹೇಳಲಾಗಿದೆ. ಏಕೆಂದರೆ ಮೆರವಣಿಗೆಗಾಗಿ ಬಳಸುವ ಮಾರ್ಗಗಳ ಉದ್ದಕ್ಕೂ ಸಾಲುಗಂಬಗಳಿರುವುದು ಕಂಡುಬಂದಿದೆ.

    2017ರಲ್ಲಿ ಡಚ್ ಸಂಶೋಧಕರು ಉತ್ಖನನ ಮಾಡುವಾಗ ಅನೇಕ ಸಮಾಧಿಗಳನ್ನೂ ಸಹ ಕಂಡುಹಿಡಿದಿದ್ದಾರೆ. ಅದರಲ್ಲಿ ಇಂದಿನ ಇರಾಕ್‌ನ ಮೆಸಪಟೋಮಿಯಾದ ಮಹಿಳೆಯದ್ದಾಗಿತ್ತು. ಇದೀಗ ಮತ್ತೆ ನೆದರ್‌ಲ್ಯಾಂಡ್‌ನಲ್ಲಿ 4 ಸಾವಿರ ವರ್ಷಗಳ ಹಿಂದಿನ ಸಮಾಧಿಯನ್ನ ಪತ್ತೆಹಚ್ಚಿದ್ದು, ಇಲ್ಲಿನ ಪ್ರದೇಶದ ಜನರು ಸುಮಾರು 5,000 ಕಿಮೀ ವರೆಗಿನ ಜನರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಅಂದಾಜಿಸಿದ್ದಾರೆ.

    ಈ ಸಮಾಧಿಯನ್ನ ಪತ್ತೆಹಚ್ಚಿದ ಸಂಶೋಧಕರು, ಕಳೆದ 6 ವರ್ಷಗಳಲ್ಲಿ ಶಿಲಾಯುಗ, ಕಂಚಿನ ಯುಗ, ಕಬ್ಬಿಣಯುಗ, ರೋಮನ್ ಸಾಮ್ರಾಜ್ಯ ಮತ್ತು ಮಧ್ಯಯುಗಗಳಿಂದ ಉತ್ಖನನಗೊಂಡ ಮಿಲಿಯನ್‌ಗಿಂತಲೂ ಹೆಚ್ಚು ವಸ್ತುಗಳನ್ನ ಸಂಶೋಧಿಸಿದ್ದಾರೆ ಎಂದು ವರದಿಯಾಗಿದೆ.

  • ವಿದೇಶಿ ಪ್ರಜೆ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆಸಿದ್ದ ಪುಂಡ ಅರೆಸ್ಟ್‌

    ವಿದೇಶಿ ಪ್ರಜೆ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆಸಿದ್ದ ಪುಂಡ ಅರೆಸ್ಟ್‌

    ಬೆಂಗಳೂರು: ಭಾರತದ ಪ್ರವಾಸಕ್ಕೆ (India Tour) ಬಂದಿರುವ ವಿದೇಶಿ ಪ್ರವಾಸಿಗನ ಮೇಲೆ ಕಿರುಕುಳ ನೀಡಿದ್ದ ಪುಂಡನನ್ನು ಬೆಂಗಳೂರು ಪೊಲೀಸರು (Bengaluru Police) ಬಂಧಿಸಿದ್ದಾರೆ.

    ನವಾಬ್ ಹಯಾತ್ ಶರೀಫ್ ಬಂಧಿತ ಆರೋಪಿ. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸ್‌, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿದೇಶಿ ಪ್ರವಾಸಿಗರೊಂದಿಗೆ ಇಂತಹ ಅನುಚಿತ ವರ್ತನೆಯನ್ನು ಸಹಿಸುವುದಿಲ್ಲ ಎಂದು ಹೇಳಿದೆ.

    ಏನಿದು ಪ್ರಕರಣ?
    ನೆದರ್‌ಲ್ಯಾಂಡ್‌ ಮೂಲದ ಮ್ಯಾಡ್ಲಿ ರೋವರ್ (Madly Rover) ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವೀಡಿಯೋ ಮಾಡುತ್ತಾ ಸುತ್ತುತ್ತಿದ್ದರು. ಸಂಡೇ ಬಜಾರ್‌ನಲ್ಲಿ ಸೆಲ್ಫಿ ವಿಡಿಯೋ ಮಾಡುತ್ತಿದ್ದಾಗ ನವಾಬ್ ಹಯಾತ್ ಶರೀಫ್ ವಿಡಿಯೋ ಮಾಡದಂತೆ ಹಲ್ಲೆಗೆ ಯತ್ನಿಸಿದ್ದಾನೆ.  ಇದನ್ನೂ ಓದಿ: ಜೊತೆಯಾಗಿ ಸ್ನಾನಕ್ಕೆ ಹೋದವರು ಹೆಣವಾದ್ರು – ಹಸೆಮಣೆ ಏರಬೇಕಿದ್ದ ಜೋಡಿಯ ದುರಂತ ಅಂತ್ಯ

     

    ಸಾಮಾಜಿಕ ಜಾಲತಾಣದಲ್ಲಿ (Social Meida) ವೀಡಿಯೋ ಹರಿದಾಡುತ್ತಿದ್ದಂತೆ ಬಹಳ ಟೀಕೆ ವ್ಯಕ್ತವಾಗಿತ್ತು. ನೆಟ್ಟಿಗರು ಖಂಡನೆ ವ್ಯಕ್ತಪಡಿಸಿ ಬೆಂಗಳೂರು ಪೊಲೀಸರಿಗೆ (Bengaluru Police) ಟ್ಯಾಗ್‌ ಮಾಡಿ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವೀಟ್‌ ಮಾಡಿದ್ದರು.

    ಅತಿಥಿ ದೇವೋ ಭವ ಎಂಬ ಪರಿಕಲ್ಪನೆ ಇರುವ ದೇಶದಲ್ಲಿ ದೌರ್ಜನ್ಯ ನಡೆದಿದೆ. ಪೊಲೀಸರು ಕೂಡಲೇ ಎಚ್ಚೆತ್ತು ಈ ರೀತಿ ಕಿರುಕುಳ ನೀಡುವ ಪುಂಡರಿಗೆ ಬಿಸಿ ಮುಟ್ಟಿಸಬೇಕೆಂದು ಜನ ಕಮೆಂಟ್‌ ಮಾಡಿ ಆಗ್ರಹಿಸಿದ್ದರು.

  • ವೀಡಿಯೋ ಮಾಡದಂತೆ ವಿದೇಶಿ ಪ್ರಜೆ ಮೇಲೆ ಬೆಂಗಳೂರಿನಲ್ಲಿ ಹಲ್ಲೆಗೆ ಯತ್ನಿಸಿದ ಪುಂಡ

    ವೀಡಿಯೋ ಮಾಡದಂತೆ ವಿದೇಶಿ ಪ್ರಜೆ ಮೇಲೆ ಬೆಂಗಳೂರಿನಲ್ಲಿ ಹಲ್ಲೆಗೆ ಯತ್ನಿಸಿದ ಪುಂಡ

    ಬೆಂಗಳೂರು: ಭಾರತದ ಪ್ರವಾಸಕ್ಕೆ (India Tour) ಬಂದಿರುವ ವಿದೇಶಿ ಪ್ರವಾಸಿಗರೊಬ್ಬರಿಗೆ ಬೆಂಗಳೂರಿನಲ್ಲಿ (Bengaluru) ಪುಂಡನೊಬ್ಬ ಕಿರುಕುಳ ನೀಡಿದ ಘಟನೆ ನಡೆದಿದೆ.

    ನೆದರ್ಲ್ಯಾಂಡ್ ಮೂಲದ ಮ್ಯಾಡ್ಲಿ ರೋವರ್ (Madly Rover) ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವೀಡಿಯೋ ಮಾಡುತ್ತಾ ಸುತ್ತುತ್ತಿದ್ದರು. ಸಂಡೇ ಬಜಾರ್‌ನಲ್ಲಿ ಸೆಲ್ಫಿ ವಿಡಿಯೋ ಮಾಡುತ್ತಿದ್ದಾಗ ಸ್ಥಳೀಯ ವ್ಯಕ್ತಿಯೊಬ್ಬ ವಿಡಿಯೋ ಮಾಡದಂತೆ ಹಲ್ಲೆಗೆ ಯತ್ನಿಸಿದ್ದಾನೆ. ಇದನ್ನೂ ಓದಿ: ʼಶಕ್ತಿʼ ಯೋಜನೆ ಉದ್ಘಾಟನೆ ಜೋಶ್‌ನಲ್ಲಿ ಸರ್ಕಾರಿ ಬಸ್ ಚಲಾಯಿಸಿ ಸ್ವಾಮೀಜಿ ಅಚಾತುರ್ಯ

    ಸಾಮಾಜಿಕ ಜಾಲತಾಣದಲ್ಲಿ (Social Meida) ವೀಡಿಯೋ ಹರಿದಾಡುತ್ತಿದ್ದಂತೆ ಬಹಳ ಟೀಕೆ ವ್ಯಕ್ತವಾಗಿದೆ. ನೆಟ್ಟಿಗರು ಖಂಡನೆ ವ್ಯಕ್ತಪಡಿಸಿ ಬೆಂಗಳೂರು ಪೊಲೀಸರಿಗೆ (Bengaluru Police) ಟ್ಯಾಗ್‌ ಮಾಡಿ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವೀಟ್‌ ಮಾಡಿದ್ದಾರೆ.

    ಅತಿಥಿ ದೇವೋ ಭವ ಎಂಬ ಪರಿಕಲ್ಪನೆ ಇರುವ ದೇಶದಲ್ಲಿ ದೌರ್ಜನ್ಯ ನಡೆದಿದೆ. ಪೊಲೀಸರು ಕೂಡಲೇ ಎಚ್ಚೆತ್ತು ಈ ರೀತಿ ಕಿರುಕುಳ ನೀಡುವ ಪುಂಡರಿಗೆ ಬಿಸಿ ಮುಟ್ಟಿಸಬೇಕೆಂದು ಜನ ಕಮೆಂಟ್‌ ಮಾಡುತ್ತಿದ್ದಾರೆ.

  • ಕಡಲತೀರದಲ್ಲಿ ಸೆಕ್ಸ್ ಮಾಡೋದು ಬೇಡ – ಪ್ರವಾಸಿಗರಿಗೆ ಮನವಿ

    ಕಡಲತೀರದಲ್ಲಿ ಸೆಕ್ಸ್ ಮಾಡೋದು ಬೇಡ – ಪ್ರವಾಸಿಗರಿಗೆ ಮನವಿ

    ಆಂಸ್ಟರ್ಡ್ಯಾಮ್: ದಯವಿಟ್ಟು ಕಡಲತೀರದಲ್ಲಿ ಸೆಕ್ಸ್ ಮಾಡೋದು ಬೇಡ ಎಂದು ನೆದರ್ಲೆಂಡ್‌ನ (Netherland) ಆಂಸ್ಟರ್ಡ್ಯಾಮ್ ಪಟ್ಟಣ ಪ್ರವಾಸಿಗರಿಗೆ (Tourists) ಮನವಿ ಮಾಡಿದೆ. ಇದೇ ಮೊದಲಬಾರಿಗೆ ನೆದರ್‌ ಲ್ಯಾಂಡ್‌ನ ನಗರವೊಂದು ಬೀಚ್‌ ಮತ್ತು ದಿಬ್ಬಗಳಲ್ಲಿ ಸೆಕ್ಸ್‌ ಮಾಡುವುದನ್ನು ನಿಷೇಧಿಸಿದೆ. ದಕ್ಷಿಣ ನೆದರ್‌ಲ್ಯಾಂಡ್‌ನ ವೀರೆ ಎಂಬ ಪಟ್ಟಣವು No Sex On The Beach (ಬೀಚ್‌ನಲ್ಲಿ ಸೆಕ್ಸ್‌ ಬೇಡ) ಎಂಬ ಅಭಿಯಾನ ಕೈಗೊಂಡಿದೆ.

    ವೀರೆ ಮುನ್ಸಿಪಾಲಿಟಿಯು (Veere Municipality) ಬೀಚ್‌ನಲ್ಲಿ ಸೆಕ್ಸ್‌ ನಿಷೇಧದ ಫಲಕಗಳನ್ನ ಅಳವಡಿಸುವ ಮೂಲಕ ಪ್ರವಾಸಿಗರಿಗೂ ತಿಳಿಸಲಾಗುತ್ತಿದೆ. ವಿಶೇಷವಾಗಿ ಮರಳಿನ ದಿಬ್ಬಗಳಲ್ಲಿ ರತಿಕ್ರೀಡೆಗೆ ಅವಕಾಶವಿಲ್ಲ. ಅವುಗಳನ್ನ ಕಾನೂನುಬದ್ಧಗೊಳಿಸಲಾಗಿದೆ. ಮೀಸಲು ಅರಣ್ಯ ಮತ್ತು ಬೀಚ್‌ಗಳಲ್ಲಿ ಸೆಕ್ಸ್‌ ಮಾಡೋದನ್ನ ತಪ್ಪಿಸಲು ಮೇಲ್ವಿಚಾರಣೆ ಹೆಚ್ಚಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಗುರುವಾರ ವೀರೆ ಮುನ್ಸಿಪಾಲಿಟಿ (Netherland Veere Municipality) ಈ ನಿರ್ಣಯ ಕೈಗೊಂಡಿದ್ದು, ಕಡಲ ತೀರಗಳು, ನೈಸರ್ಗಿಕ ಪ್ರದೇಶಗಳು ಹಾಗೂ ಮರಳಿನ ದಿಬ್ಬಗಳಲ್ಲಿ ಸಾರ್ವಜನಿಕ ಲೈಂಗಿಕತೆಯನ್ನ ನಿಷೇಧಿಸಿದೆ. ಇದನ್ನೂ ಓದಿ: ಸೆಕ್ಸ್ ಕೂಡ ಒಂದು ಕೆಲಸ – ಕಾನೂನುಬದ್ಧಗೊಳಿಸಲು ಹೊಸ ಮಸೂದೆ ಮಂಡನೆ

    ಈ ಕುರಿತು ಪ್ರಕಟಣೆ ನೀಡಿರುವ ವೀರೆ ಪಟ್ಟಣದ ಮೇಯರ್ ಫ್ರೆಡೆರಿಕ್ ಶೌವೆನಾರ್‌, ಸ್ಥಳೀಯ ಸಮುದಾಯಕ್ಕೆ ಈ ಮರಳಿನ ದಿಬ್ಬಗಳು ತುಂಬ ಮಹತ್ವದ್ದಾಗಿವೆ. ಹಾಗಾಗಿ ನೈಸರ್ಗಿಕ ಪರಿಸರ ಹಾನಿಗೊಳಿಸುವಂತಹ ಅನಪೇಕ್ಷಿತ ನಡವಳಿಕೆಯಿಂದ ರಕ್ಷಿಸಬೇಕಾದ ಅಗತ್ಯವಿದೆ. ಪ್ರವಾಸಿಗರ ಸೆಕ್ಸ್ ಚಟುವಟಿಕೆಯು ರಜೆ ಆಸ್ವಾದಿಸಲು ಬರುವ ಇತರರಿಗೂ ತೊಂದರೆಯಾಗಬಹುದು. ಈ ನಿರ್ಧಾರವು ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒಂದು ಪ್ರಮುಖ ಹೆಜ್ಜೆಯಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರ ಇನ್ನುಮುಂದೆ ಎಚ್ಚರಿಕೆಗಳನ್ನು ನೀಡುವುದಿಲ್ಲ ಬದಲಿಗೆ, ತ್ವರಿತ ಮೌಖಿಕವಾಗಿ ತಿಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಪ್ರವಾಸಿಗರಿಗೆ ಮಾಹಿತಿ ಒದಗಿಸುವ ಎಂಟು ಹೊಸ ಮಾಹಿತಿ ಫಲಕಗಳನ್ನು ಸ್ಥಾಪಿಸಲಾಗಿದೆ. ಈ ಮಧ್ಯೆ ಸ್ಥಳೀಯ ಆಡಳಿತದ ನಿರ್ಧಾರಕ್ಕೆ ಆಕ್ಷೇಪ ಕೂಡ ವ್ಯಕ್ತವಾಗಿದೆ. ಲೈಂಗಿಕ ನಡವಳಿಕೆಯಿಂದ ಬೆತ್ತಲೆ ಸೂರ್ಯ ಸ್ನಾನ ಪ್ರಕ್ರಿಯೆಯನ್ನು ಪ್ರತ್ಯೇಕಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

    ಬೆತ್ತಲೆ ಸೂರ್ಯ ಸ್ನಾನವು ಲೈಂಗಿಕತೆಯಲ್ಲ ಅದು ಸ್ವಾತಂತ್ರ್ಯದ ಭಾವನೆಯನ್ನು ನೀಡುತ್ತದೆ, ಫೋಟೋಶಾಪ್ ಮಾಡದ ನೈಜ, ಬೆತ್ತಲೆ ದೇಹಗಳನ್ನು ನೋಡುವುದು ತುಂಬಾ ಆರೋಗ್ಯಕರ. ಆದರೆ ನಾವು ಹೊರಾಂಗಣದಲ್ಲಿ ಲೈಂಗಿಕತೆಯಿಂದ ದೂರವಿರುತ್ತೇವೆ ಎಂದು ಸಂಘಟನೆಯೊಂದು ತಿಳಿಸಿದೆ.

  • ನೆದರ್‌ಲ್ಯಾಂಡ್‌ನಲ್ಲಿ ಹಳಿ ತಪ್ಪಿದ ಪ್ಯಾಸೆಂಜರ್ ರೈಲು – ಒಂದು ಸಾವು, 30 ಮಂದಿಗೆ ಗಾಯ

    ನೆದರ್‌ಲ್ಯಾಂಡ್‌ನಲ್ಲಿ ಹಳಿ ತಪ್ಪಿದ ಪ್ಯಾಸೆಂಜರ್ ರೈಲು – ಒಂದು ಸಾವು, 30 ಮಂದಿಗೆ ಗಾಯ

    ಆಮ್ಸ್ಟರ್ಡ್ಯಾಮ್: ಸುಮಾರು 50 ಜನರನ್ನು ಹೊತ್ತೊಯ್ಯುತ್ತಿದ್ದ ಪ್ಯಾಸೆಂಜರ್ ರೈಲೊಂದು (Passenger Train) ಹಳಿಗಳ ನಿರ್ಮಾಣ ಉಪಕರಣಗಳಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿರುವ ಘಟನೆ ನೆದರ್‌ಲ್ಯಾಂಡ್‌ನಲ್ಲಿ ನಡೆದಿದೆ.

    ನೆದರ್‌ಲ್ಯಾಂಡ್‌ನ (Netherland) ವೂರ್‌ಸ್ಕೊಟೆನ್‌ನಲ್ಲಿ (Voorschoten) ಈ ಘಟನೆ ನಡೆದಿದ್ದು, ಒಬ್ಬರು ಸಾವನ್ನಪ್ಪಿ 30 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 19 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಉಳಿದವರಿಗೆ ಸ್ಥಳದಲ್ಲಿಯೇ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ಡಚ್ ತುರ್ತು ಸೇವೆಗಳು ತಿಳಿಸಿವೆ. ಇದನ್ನೂ ಓದಿ: ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ ಮಾಡಿದ ಚೀನಾ 

    ರೈಲು ಸೋಮವಾರ ರಾತ್ರಿ ಲೈಡೆನ್ (Leiden) ನಗರದಿಂದ ಹೇಗ್‌ಗೆ (Hague) ಹೊರಟಿತ್ತು. ಮಂಗಳವಾರ ಮುಂಜಾನೆ ಸುಮಾರು 3:25ರ ವೇಳೆಗೆ ರೈಲಿನ ಮುಂಭಾಗ ಹಳಿಗಳ ನಿರ್ಮಾಣಕ್ಕೆಂದು ಇರಿಸಿದ್ದ ಉಪಕರಣಗಳಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದೆ. ಅಲ್ಲದೇ ರೈಲಿನ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ನಂದಿಸಲಾಗಿದೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಚಿನ್ನದ ಗಣಿ ಕುಸಿದು 15 ಕಾರ್ಮಿಕರು ಸಾವು 

    ಅಪಘಾತದ (Accident) ಕಾರಣದಿಂದಾಗಿ ಲೈಡೆನ್ ಮತ್ತು ಹೇಗ್ ಭಾಗಕ್ಕೆ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಡಚ್ ರೈಲ್ವೇಸ್ (Dutch Railways) ಟ್ವೀಟ್ ಮುಖಾಂತರ ತಿಳಿಸಿದೆ. ಇದನ್ನೂ ಓದಿ: ಇಟಲಿಯಲ್ಲಿ ಇಂಗ್ಲಿಷ್ ಭಾಷೆ ಬ್ಯಾನ್ – ಸಂವಹನ ನಡೆಸಿದರೆ ಭಾರೀ ದಂಡ

  • ಅತ್ತ ಕೊಹ್ಲಿ, ಸೂರ್ಯ ಪಾರ್ಟ್‌ನರ್‌ಶಿಪ್ ಆಟ – ಇತ್ತ ಲೈಫ್ ಪಾರ್ಟ್‌ನರ್‌ಗೆ ಪ್ರಪೋಸ್

    ಅತ್ತ ಕೊಹ್ಲಿ, ಸೂರ್ಯ ಪಾರ್ಟ್‌ನರ್‌ಶಿಪ್ ಆಟ – ಇತ್ತ ಲೈಫ್ ಪಾರ್ಟ್‌ನರ್‌ಗೆ ಪ್ರಪೋಸ್

    ಸಿಡ್ನಿ: ಟಿ20 ವಿಶ್ವಕಪ್‍ನಲ್ಲಿ (T20 World Cup) ಭಾರತ (India) ಹಾಗೂ ನೆದರ್‌ಲ್ಯಾಂಡ್‌ (Netherland) ನಡುವಿನ ಪಂದ್ಯ ಮೈದಾನದಲ್ಲಿ ಕಿಚ್ಚು ಹೆಚ್ಚಿಸಿದ್ದರೆ, ಇತ್ತ ಯುವ ಜೋಡಿಯೊಂದು ಸ್ಟೇಡಿಯಂನಲ್ಲಿ ಪ್ರಮೋಸ್ (Propose) ಮಾಡಿ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.

    ಒಂದು ಕಡೆ ಭಾರತ ನೀಡಿದ ದೊಡ್ಡ ಮೊತ್ತವನ್ನು ಬೆನ್ನಟ್ಟಲು ನೆದರ್‌ಲ್ಯಾಂಡ್‌ ಮುಂದಾಗಿತ್ತು. ಈ ವೇಳೆ ಸ್ಟೇಡಿಯಂನಲ್ಲಿ ಹುಡಗನೊಬ್ಬ ತನ್ನ ಪ್ರೇಯಸಿಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದಾನೆ. ಇದನ್ನು ಕಂಡು ಬೆರಗಾದ ಹುಡುಗಿ ಬಳಿಕ ರಿಂಗ್ ಕೈಗೆ ತೊಡಿಸಲು ಬಿಟ್ಟು ಹುಡುಗನನ್ನು ತಂಬಿಕೊಂಡು ಸಂತೋಷದಿಂದಲೇ ಹುಡುಗನ ಪ್ರಪೋಸ್ ಒಪ್ಪಿಕೊಂಡಿದ್ದಾಳೆ. ಈ ಮೂಲಕ ಮೈದಾನದಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು ಸೂರ್ಯಕುಮಾರ್ ಯಾದವ್‌ (Suryakumar Yadav) ಪಾರ್ಟ್‌ನರ್‌ಶಿಪ್ ಮೂಲಕ ಗಮನಸೆಳೆದರೆ, ಇತ್ತ ಪ್ರಣಯ ಪಕ್ಷಿಗಳು ಪ್ರಪೋಸ್ ಮಾಡುವ ಮೂಲಕ ಲೈಫ್ ಪಾರ್ಟ್‌ನರ್‌ಗಳಾಗುವ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಡಚ್ಚರಿಗೆ ಸೋಲಿನ ಡಿಚ್ಚಿ – ಮೊದಲ ಸ್ಥಾನಕ್ಕೆ ಜಿಗಿದ ಭಾರತ

     

    View this post on Instagram

     

    A post shared by ICC (@icc)

    ನೆದರ್‌ಲ್ಯಾಂಡ್‌ ಬ್ಯಾಟಿಂಗ್ ಮಾಡುತ್ತಿದ್ದಾಗ 7ನೇ ಓವರ್ ಸಂದರ್ಭ ಈ ಸ್ವಾರಸ್ಯಕರ ಘಟನೆ ನಡೆದಿದೆ. ಕೂಡಲೇ ಕ್ಯಾಮೆರಾಮ್ಯಾನ್ ಈ ದೃಶ್ಯವನ್ನು ಸೆರೆಹಿಡಿದಿದ್ದಾನೆ. ಆ ಬಳಿಕ ಐಸಿಸಿ (ICC) ತನ್ನ ಸಾಮಾಜಿಕ ಜಾಲತಾಣದಲ್ಲೂ ಈ ವೀಡಿಯೋವನ್ನು ಹಾಕಿಕೊಂಡಿದೆ. ಇದನ್ನೂ ಓದಿ: ಮಹಿಳಾ ಕ್ರಿಕೆಟ್‌ ಆಟಗಾರ್ತಿಯರಿಗೆ ಪುರುಷರಷ್ಟೇ ಸಮಾನ ಶುಲ್ಕ : ಬಿಸಿಸಿಐ ಘೋಷಣೆ

    ಇತ್ತ ಪಂದ್ಯದಲ್ಲಿ ಭಾರತ ನೀಡಿದ 180 ರನ್‍ಗಳ ಬಿಗ್ ಸ್ಕೋರ್ ಬೆನ್ನಟ್ಟಿದ ನೆದರ್‌ಲ್ಯಾಂಡ್‌ ಬ್ಯಾಟ್ಸ್‌ಮ್ಯಾನ್‌ಗಳಿಗೆ ಭಾರತದ ಬೌಲರ್‌ಗಳು ನೆಲೆಯೂರಲು ಅವಕಾಶ ನೀಡದೆ ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಶಕ್ತರಾಗಿ ಸೋಲುಂಡರು. ಭಾರತ 56 ರನ್‍ಗಳ ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಭಾರತದ ಪರ ಬ್ಯಾಟಿಂಗ್‍ನಲ್ಲಿ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಜೊತೆಯಾಟ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಕೊಹ್ಲಿ, ಸೂರ್ಯ ಜೋಡಿ 3ನೇ ವಿಕೆಟ್‍ಗೆ ಅಜೇಯ 95 ರನ್ (48 ಎಸೆತ) ಜೊತೆಯಾಟವಾಡಿ ಮಿಂಚಿತು. ಇಲ್ಲಿ ಕೊಹ್ಲಿ ಅಜೇಯ 62 ರನ್ (44 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಸೂರ್ಯಕುಮಾರ್ ಯಾದವ್ 51 ರನ್ (25 ಎಸೆತ, 7 ಬೌಂಡರಿ, 1 ಸಿಕ್ಸ್) ಚಚ್ಚಿ ಇನ್ನಿಂಗ್ಸ್ ಮುಗಿಸಿದರು. ಭಾರತ 20 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 179 ರನ್‍ಗಳ ಉತ್ತಮ ಮೊತ್ತ ಪೇರಿಸಿತು.

    Live Tv
    [brid partner=56869869 player=32851 video=960834 autoplay=true]

  • ಡಚ್ಚರಿಗೆ ಸೋಲಿನ ಡಿಚ್ಚಿ – ಮೊದಲ ಸ್ಥಾನಕ್ಕೆ ಜಿಗಿದ ಭಾರತ

    ಡಚ್ಚರಿಗೆ ಸೋಲಿನ ಡಿಚ್ಚಿ – ಮೊದಲ ಸ್ಥಾನಕ್ಕೆ ಜಿಗಿದ ಭಾರತ

    ಸಿಡ್ನಿ: ನೆದರ್‌ಲ್ಯಾಂಡ್‌ (Netherland) ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ (India) 56 ರನ್‍ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಸತತ 2ನೇ ಜಯ ಸಾಧಿಸಿ ಪಾಯಿಂಟ್‌ ಟೇಬಲ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿದೆ.

    ಭಾರತ ನೀಡಿದ 180 ರನ್‍ಗಳ ಬಿಗ್ ಸ್ಕೋರ್ ಬೆನ್ನಟ್ಟಿದ ನೆದರ್‌ಲ್ಯಾಂಡ್‌ ಬ್ಯಾಟ್ಸ್‌ಮ್ಯಾನ್‌ಗಳಿಗೆ ಭಾರತದ ಬೌಲರ್‌ಗಳು ನೆಲೆಯೂರಲು ಅವಕಾಶ ನೀಡದೆ ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಶಕ್ತರಾಗಿ ಸೋಲುಂಡರು. ಇದನ್ನೂ ಓದಿ: ಮಹಿಳಾ ಕ್ರಿಕೆಟ್‌ ಆಟಗಾರ್ತಿಯರಿಗೆ ಪುರುಷರಷ್ಟೇ ಸಮಾನ ಶುಲ್ಕ : ಬಿಸಿಸಿಐ ಘೋಷಣೆ

    ಬೌಲರ್‌ಗಳ ಭರ್ಜರಿ ಭೇಟೆ:
    ಡಚ್ಚರು ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಾಗಿದರು. ಮ್ಯಾಕ್ಸ್ ಒ’ಡೌಡ್ 16 ರನ್ (10 ಎಸೆತ 3 ಬೌಂಡರಿ), ಬಾಸ್ ಡಿ ಲೀಡೆ 16 ರನ್ (23 ಎಸೆತ), ಕಾಲಿನ್ ಅಕರ್ಮನ್ 17 ರನ್ (21 ಎಸೆತ, 1 ಬೌಂಡರಿ) ಮತ್ತು ಟಿಮ್ ಪ್ರಿಂಗಲ್ 20 ರನ್ (15 ಎಸೆತ, 1 ಸಿಕ್ಸ್, 1 ಬೌಂಡರಿ) ಸಿಡಿಸಿದ್ದನ್ನು ಹೊರತು ಪಡಿಸಿ ಉಳಿದ ಬ್ಯಾಟ್ಸ್‌ಮ್ಯಾನ್‌ಗಳು ಭಾರತದ ಬೆಂಕಿ ಬೌಲರ್‌ಗಳ ದಾಳಿಗೆ ಸಿಲುಕಿ ಒದ್ದಾಡಿದರು. ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 123 ರನ್‌ ಹೊಡಿಯಲಷ್ಟೇ ಶಕ್ತರಾದರು. ಭಾರತದ ಪರ ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ಅಶ್ವಿನ್ ತಲಾ 2 ವಿಕೆಟ್ ಕಿತ್ತು ಮಿಂಚಿದರು. ಶಮಿ 1 ವಿಕೆಟ್ ಪಡೆಯಲು ಯಶಸ್ವಿಯಾದರು.

    ಈ ಮೊದಲು ಟೂರ್ನಿಯ ಎರಡನೇ ಪಂದ್ಯವಾಡುತ್ತಿರುವ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ತಮ್ಮ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದರು. ರಾಹುಲ್ ಕೇವಲ 9 ರನ್ (12 ಎಸೆತ, 1 ಬೌಂಡರಿ) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು. ಇದನ್ನೂ ಓದಿ: ವಿಶ್ವಕಪ್‌ನಲ್ಲಿರೋ ಆಟಗಾರರಿಗೆ ಸರಿಯಾಗಿ ಊಟ ಸಿಗ್ತಿಲ್ಲ- ಟೀಂ ಇಂಡಿಯಾ ಬೇಸರ

    ನಾಯಕನಿಗೆ ಜೊತೆಯಾದ ಮಾಜಿ ಕ್ಯಾಪ್ಟನ್:
    ರಾಹುಲ್ ಔಟ್ ಆದ ಬಳಿಕ ರೋಹಿತ್ ಜೊತೆಯಾದ ವಿರಾಟ್ ಕೊಹ್ಲಿ (Virat Kohli) ನಿಧಾನವಾಗಿ ರನ್ ಏರಿಸುವತ್ತ ಗಮನ ಹರಿಸಿದರು. ನೆದರ್‌ಲ್ಯಾಂಡ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಬ್ಯಾಟಿಂಗ್‍ನಲ್ಲಿ ಎಕ್ಸಲೇಟರ್ ಹೆಚ್ಚಿಸಿ ರನ್ ಗುಡ್ಡೆಹಾಕಿತ್ತು. ರೋಹಿತ್ ಶರ್ಮಾ 53 ರನ್ (39 ಎಸೆತ, 4 ಬೌಂಡರಿ, 3 ಸಿಕ್ಸ್) ಚಚ್ಚಿ ಔಟ್ ಆದರು. ಈ ಮೊದಲು ಕೊಹ್ಲಿ ಜೊತೆ 2ನೇ ವಿಕೆಟ್‍ಗೆ 73 ರನ್ (56 ಎಸೆತ) ಜೊತೆಯಾಟವಾಡಿದರು. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ಅಂಪೈರಿಂಗ್ ಮಾಡಿದ ಫುಟ್‍ಬಾಲ್ ದಿಗ್ಗಜ ಮೆಸ್ಸಿ! – ಫೋಟೋ ವೈರಲ್

    ಒಂದಾದ ಕೊಹ್ಲಿ, ಸೂರ್ಯ:
    ರೋಹಿತ್ ಬಳಿಕ ಸೂರ್ಯಕುಮಾರ್ ಯಾದವ್ (SuryaKumar Yadav), ಕೊಹ್ಲಿ ಜೊತೆ ಸೇರಿಕೊಂಡು ಅಬ್ಬರಿಸಲು ಆರಂಭಿಸಿದರು. ಇಬ್ಬರು ನೆದರ್‌ಲ್ಯಾಂಡ್‌ ಬೌಲರ್‌ಗಳ ಬೆಂಡೆತ್ತಿದರು. ಸಾಧಾರಣ ಮೊತ್ತದತ್ತ ಮುನ್ನುಗ್ಗುತ್ತಿದ್ದ ಭಾರತ ಸ್ಕೋರ್ 170ರ ಗಡಿದಾಟುವಂತೆ ನೋಡಿಕೊಂಡರು. ಈ ಜೋಡಿ ಅಜೇಯ 3ನೇ ವಿಕೆಟ್‍ಗೆ 95 ರನ್ (48 ಎಸೆತ) ಜೊತೆಯಾಟವಾಡಿ ಮಿಂಚಿತು. ಇಲ್ಲಿ ಕೊಹ್ಲಿ ಅಜೇಯ 62 ರನ್ (44 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಸೂರ್ಯಕುಮಾರ್ ಯಾದವ್ 51 ರನ್ (25 ಎಸೆತ, 7 ಬೌಂಡರಿ, 1 ಸಿಕ್ಸ್) ಚಚ್ಚಿ ಇನ್ನಿಂಗ್ಸ್ ಮುಗಿಸಿದರು. ಭಾರತ 20 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 179 ರನ್‍ಗಳ ಉತ್ತಮ ಮೊತ್ತ ಪೇರಿಸಿತು.

    ನೆದರ್‌ಲ್ಯಾಂಡ್‌ ಪರ ಫ್ರೆಡ್ ಕ್ಲಾಸೆನ್ ಮತ್ತು ಪಾಲ್ ವ್ಯಾನ್ ಮೀಕೆರೆನ್ ತಲಾ 1 ವಿಕೆಟ್ ಪಡೆಯಲಷ್ಟೇ ಶಕ್ತರಾದರು.

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ವಿರುದ್ಧ ಹೋರಾಡಿ ಗೆದ್ದ 107ರ ವೃದ್ಧೆ

    ಕೊರೊನಾ ವಿರುದ್ಧ ಹೋರಾಡಿ ಗೆದ್ದ 107ರ ವೃದ್ಧೆ

    ಆಮ್‌ಸ್ಟರ್‌ಡ್ಯಾಮ್: ನೆದರ್ಲ್ಯಾಂಡ್‍ನಲ್ಲಿ 107 ವರ್ಷದ ವೃದ್ಧೆಯೊಬ್ಬರು ಕೊರೊನಾ ವೈರಸ್ ವಿರುದ್ಧ ಹೋರಾಡಿ ಗೆದ್ದಿದ್ದಾರೆ.

    ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನೆದರ್ಲ್ಯಾಂಡ್‍ನ ಕಾರ್ನೆಲಿಯಾ ರಾಸ್ (107) ಅವರು ಗುಣಮುಖರಾಗಿದ್ದು, ಸದ್ಯ ತಮ್ಮ ಮನೆಯಲ್ಲಿ ಆರಾಮವಾಗಿ ತಿರುಗಾಡುತ್ತಿದ್ದಾರೆ. ಕಾರ್ನೆಲಿಯಾ ರಾಸ್ ಮೊಣಕಾಲೂರಿ ದೇವರಿಗೆ ಹಾಗೂ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

    ತನ್ನದೇ ದೇಶದ ದ್ವೀಪವೊಂದಕ್ಕೆ ಭೇಟಿ ನೀಡಿದಾಗ ಕಾರ್ನೆಲಿಯಾ ರಾಸ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಅವರೊಟ್ಟಿಗೆ 40 ಜನ ಪ್ರವಾಸ ಕೈಗೊಂಡಿದ್ದರು. ಈ ಪೈಕಿ 12 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಕಾರ್ನೆಲಿಯಾ ಅವರು ಯಾವುದಕ್ಕೂ ಹೆದರದೇ ಧೈರ್ಯವಾಗಿ ಕೊರೊನಾ ವಿರುದ್ಧ ಹೋರಾಡಿ ಸಾವು ಜಯಿಸಿದ್ದಾರೆ.

    ಚಿಕಿತ್ಸೆ ನೀಡಿದ ವೈದ್ಯರು ಕಾರ್ನೆಲಿಯಾ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ವೃದ್ಧೆಯ ಸೋದರ ಸೊಸೆ ಮೇಹ್ಯೂ ಡಿ ಗ್ರೂಟ್ ಅವರು, ಕಾರ್ನೆಲಿಯಾ ರಾಸ್ ಅವರು ಕೊರೊನಾ ವಿರುದ್ಧ ಹೋರಾಡಿ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ನಮಗೆ ಇರಲಿಲ್ಲ. ಅವರಿಗೆ ಮೊದಲು ಜ್ವರ ಮತ್ತು ಕೆಮ್ಮಿನ ಗುಣಲಕ್ಷಣಗಳು ಕಂಡು ಬಂದಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಚಿಕಿತ್ಸೆಯ ಸಮಯದಲ್ಲಿ ಅವರು ಸಾಕಷ್ಟು ಶಾಂತವಾಗಿದ್ದರು. ಈಗ ಅವರು ಆರೋಗ್ಯವಾಗಿದ್ದು, ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ.

    ನ್ಯೂಜಿಲೆಂಡ್ ಪತ್ರಿಕೆಯೊಂದರ ವರದಿಯ ಪ್ರಕಾರ, 107ನೇ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಕಾರ್ನೆಲಿಯಾ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರು ಕ್ವಾರಂಟೈನ್‍ನಲ್ಲಿ ಒಂಟಿಯಾಗಿ ಬರ್ತ್ ಡೇ ಆಚರಿಸಿಕೊಂಡಿದ್ದರು.

    ಕಾರ್ನೆಲಿಯಾ ಅವರಿಗಿಂತ ಮೊದಲು 104 ವರ್ಷದ ಅಮೆರಿಕದ ಲ್ಯಾಪೀಸ್ ಅವರನ್ನು ಕೊರೊನಾ ವಿರುದ್ಧ ಹೋರಾಡಿ ಗೆದ್ದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ  ಎಂದು ಘೋಷಿಸಲಾಗಿತ್ತು. ಅವರು 1918ರಲ್ಲಿ ಎರಡನೇ ಮಹಾಯುದ್ಧ ಮತ್ತು ಸ್ಪ್ಯಾನಿಷ್ ಜ್ವರದಲ್ಲಿಯೂ ಹೋರಾಡಿ ಬದುಕುಳಿದಿದ್ದರು. ಸ್ಪ್ಯಾನಿಷ್ ಜ್ವರವು ವಿಶ್ವಾದ್ಯಂತ ಸುಮಾರು 5 ಕೋಟಿ ಜನರನ್ನು ಬಲಿ ಪಡೆದಿತ್ತು. 1916ರಲ್ಲಿ ಜನಿಸಿದ ಲ್ಯಾಪೀಸ್ ಅವರಿಗೆ 2020ರ ಮಾರ್ಚ್ ನಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು.

  • ನೆದರ್‌ಲ್ಯಾಂಡ್‌ನಲ್ಲಿ ಗುಂಡಿನ ದಾಳಿ: ಓರ್ವ ಸಾವು, ಹಲವರ ಸ್ಥಿತಿ ಗಂಭೀರ

    ನೆದರ್‌ಲ್ಯಾಂಡ್‌ನಲ್ಲಿ ಗುಂಡಿನ ದಾಳಿ: ಓರ್ವ ಸಾವು, ಹಲವರ ಸ್ಥಿತಿ ಗಂಭೀರ

    ಆಂಸ್ಟಡ್ರ್ಯಾಮ್: ಕಳೆದ ಕೆಲ ದಿನಗಳ ಹಿಂದೆಯಷ್ಟೇ ನ್ಯೂಜಿಲೆಂಡ್‍ನ ಮಸೀದಿಯಲ್ಲಿ ನಡೆದ ದಾಳಿಯ ಬೆನ್ನಲ್ಲೇ ನೆದರ್ ಲ್ಯಾಂಡ್‍ನ ಉಟ್ರೆಶ್ ಎಂಬ ನಗರದಲ್ಲಿ ಗುಂಡಿನ ದಾಳಿ ನಡೆಸಲಾಗಿದೆ.

    ಬಂದೂಕುದಾರಿ ವ್ಯಕ್ತಿ ಟ್ರಾಮ್ ರೈಲಿನ ಒಳಗಡೆ ದಾಳಿ ನಡೆಸಿದ್ದು, ಈ ಕೃತ್ಯದ ಹಿಂದೆ ಭಯೋತ್ಪಾದಕರ ಪ್ರೇರಣೆ ಇರುವ ಅನುಮಾನ ವ್ಯಕ್ತವಾಗಿದೆ. ಆದರೆ ಘಟನೆಗೆ ಖಚಿತ ಕಾರಣ ಏನು ಎನ್ನುವುದು ಸ್ಪಷ್ಟವಾಗಿಲ್ಲ.

    https://twitter.com/PolitieUtrecht/status/1107636046685188096

    ಸಾರ್ವಜನಿಕರ ಮೇಲೆ ದಾಳಿ ನಡೆಸಿದ ಶೂಟರ್ ಸ್ಥಳದಿಂದ ತಪ್ಪಿಸಿಕೊಂಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಓರ್ವನಿಗಿಂತ ಹೆಚ್ಚಿನ ಸಂಖ್ಯೆಯ ಬಂದೂಕುದಾರಿಗಳು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸ್ ಅನುಮಾನ ವ್ಯಕ್ತಪಡಿಸಿದ್ದಾರೆ. ಉಟ್ರೆಶ್ ನಗರದಲ್ಲಿ ನಾಗರಿಕರಿಗೆ ಮನೆಯಿಂದ ಹೊರ ಬರದಂತೆ ಸೂಚನೆ ನೀಡಲಾಗಿದ್ದು, ಸಾರಿಗೆ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ. ಘಟನೆ ನಡೆದ ಪ್ರದೇಶ ಸೇರಿದಂತೆ ಎಲ್ಲೆಡೆ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.

    ಘಟನೆಯಲ್ಲಿ ಗಾಯಗೊಂಡವರ ರಕ್ಷಣಾ ಕಾರ್ಯವೂ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಸೇರಿದಂತೆ, ಹೆಲಿಕಾಪ್ಟರ್ ಅಂಬುಲೆನ್ಸ್ ನಿಂದ ರಕ್ಷಣಾ ಕಾರ್ಯ ನಡೆಸಲಾಗಿದೆ. ನೆದರ್ ಲ್ಯಾಂಡ್ ಪ್ರಧಾನಿ ಮಾರ್ಕ್ ರುಟ್ಟೆ, ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ ಸಂತಾಪ ಸೂಚಿಸಿದ್ದು, ಸರ್ಕಾರ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾಗಿ ತಿಳಿಸಿದ್ದಾರೆ.

    https://twitter.com/TwitterMoments/status/1107592075384668160

    https://twitter.com/NBbreaking/status/1107621773946863617