Tag: Net Profit

  • 4ನೇ ತ್ರೈಮಾಸಿಕದಲ್ಲಿ ಎಲ್‌ಐಸಿಗೆ ಬರೋಬ್ಬರಿ 13,762 ಕೋಟಿ ರೂ. ಲಾಭ

    4ನೇ ತ್ರೈಮಾಸಿಕದಲ್ಲಿ ಎಲ್‌ಐಸಿಗೆ ಬರೋಬ್ಬರಿ 13,762 ಕೋಟಿ ರೂ. ಲಾಭ

    ಮುಂಬೈ: ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮವೂ (LIC) 2024ರ ಮಾರ್ಚ್‌ 31ಕ್ಕೆ ಅಂತ್ಯಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ 13,762 ಕೋಟಿ ರೂ. ನಿವ್ವಳ ಲಾಭ (Net Profit) ಗಳಿಸಿದೆ.

    ಕಳೆದ ಹಣಕಾಸು ವರ್ಷದ ಈ ಅವಧಿಯಲ್ಲಿ ಎಲ್‌ಐಸಿ 13,191 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಕಳೆದ ಅವಧಿಗೆ ಹೋಲಿಸಿದರೆ ನಿವ್ವಳ ಲಾಭದ ಪ್ರಮಾಣದಲ್ಲಿ 4.5% ಏರಿಕೆ ಕಂಡಿದೆ. ಲಾಭ ಬಂದ ಹಿನ್ನೆಲೆಯಲ್ಲಿ ಒಂದು ಷೇರಿಗೆ (Share) 6 ರೂ. ಮಧ್ಯಂತರ ಡಿವಿಡೆಂಡ್ (Dividend) ನೀಡುವುದಾಗಿ ಘೋಷಿಸಿದೆ. ಇದನ್ನೂ ಓದಿ: ದಸರಾ ಆನೆ ಅರ್ಜುನ ಸ್ಮಾರಕ ನಿರ್ಮಾಣಕ್ಕೆ ದರ್ಶನ್ ಹೆಸರ‍್ಹೇಳಿ ಲಕ್ಷಾಂತರ ರೂ. ದೋಖಾ

    ಮಾರ್ಚ್ 31, 2023 ಕ್ಕೆ ಕೊನೆಗೊಂಡ ವರ್ಷದಲ್ಲಿ ವೈಯಕ್ತಿಕ ವಿಭಾಗದಲ್ಲಿ ಒಟ್ಟು 2,04,28,937 ಪಾಲಿಸಿಗಳು ಮಾರಾಟವಾದರೆ ಮಾರ್ಚ್ 31,2024ಕ್ಕೆ ಕೊನೆಗೊಂಡ ವರ್ಷದಲ್ಲಿ ಒಟ್ಟು 2,03,92,973 ಪಾಲಿಸಿಗಳನ್ನು ಮಾರಾಟ ಮಾಡಿದೆ.

    ಇಂದು ಎಲ್‌ಐಸಿ ಷೇರು ಬೆಲೆ 7.90 ರೂ. ಏರಿಕೆಯಾಗಿ 1,037.65 ರೂ.ಗೆ ಕೊನೆಯಾಗಿದೆ. ಬೆಳಗ್ಗೆ 10:45ಕ್ಕೆ ವೇಳೆಗೆ 1,054 ರೂ.ಗೆ ಏರಿಕೆಯಾಗಿ ನಂತರ ಇಳಿಕೆಯಾಗಿತ್ತು. ಇದನ್ನೂ ಓದಿ: ಚನ್ನಗಿರಿ ಗಲಭೆ ಕೇಸ್‌ – ಮತ್ತೆ 3 ಎಫ್‌ಐಆರ್‌ ಸೇರ್ಪಡೆ, ಎಸ್‌ಐ ಸಸ್ಪೆಂಡ್‌

     

  • ಎಲ್‌ಐಸಿಗೆ ಬರೋಬ್ಬರಿ 9544 ಕೋಟಿ ರೂ. ಲಾಭ

    ಎಲ್‌ಐಸಿಗೆ ಬರೋಬ್ಬರಿ 9544 ಕೋಟಿ ರೂ. ಲಾಭ

    ನವದೆಹಲಿ: ದೇಶದ ಅತಿ ದೊಡ್ಡ ವಿಮಾ ಕಂಪನಿ ಭಾರತೀಯ ಜೀವ ವಿಮಾ ನಿಗಮ (LIC) ಜೂನ್‌ ತ್ರೈಮಾಸಿಕದಲ್ಲಿ ಬರೋಬ್ಬರಿ 9,544 ಕೋಟಿ ರೂ. ನಿವ್ವಳ ಲಾಭಗಳಿಸಿದೆ.

    ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಸಂಸ್ಥೆಯ ಲಾಭದ (Net Profit ) ಪ್ರಮಾಣ 14 ಪಟ್ಟು ಏರಿಕೆಯಾಗಿದೆ. ಕಳೆದ ವರ್ಷದ ಈ ಅವಧಿಯಲ್ಲಿ ಎಲ್‌ಐಸಿ 682 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಇದನ್ನೂ ಓದಿ: PublicTV Explainer: ನೀಲಿ ಆರ್ಥಿಕತೆ ಎಂದರೇನು? – ಭಾರತದಲ್ಲಿ ಹೇಗೆ ಕೆಲಸ ಮಾಡುತ್ತಿದೆ; ಕರ್ನಾಟಕದಲ್ಲಿ ನಿರೀಕ್ಷೆ ಏನು?

    ಏಪ್ರಿಲ್‌ – ಜೂನ್ ಅವಧಿಯಲ್ಲಿ ತನ್ನ ಹೂಡಿಕೆಗಳಿಂದ 90,309 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಸಂಸ್ಥೆ 69,570 ಕೋಟಿ ರೂ. ಆದಾಯ ಗಳಿಸಿತ್ತು. ಇದನ್ನೂ ಓದಿ: ರಿಲಯನ್ಸ್‌ ಹಿಂದಿಕ್ಕಿ ಲಾಭಾಂಶದಲ್ಲಿ ದೇಶದಲ್ಲಿ ನಂ.1 ಕಂಪನಿಯಾಗಿ ಹೊರಹೊಮ್ಮಿದ ಎಸ್‌ಬಿಐ

    ಭರ್ಜರಿ ನಿವ್ವಳ ಲಾಭಗಳಿಸಿದರೂ ತ್ರೈಮಾಸಿಕದಲ್ಲಿ ಕಂಪನಿಯ ಮೊದಲ ವರ್ಷದ ಪ್ರೀಮಿಯಂ ಮೊತ್ತ 8.3% ರಷ್ಟು ಕುಸಿತ ಕಂಡು 6,810 ಕೋಟಿ ರೂ.ಗೆ ಇಳಿಕೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಪ್ರೀಮಿಯಂ ಮೊತ್ತ 7,429 ಕೋಟಿ ರೂ.ನಷ್ಟಿತ್ತು.  ಇದನ್ನೂ ಓದಿ: ಭಾರತದಲ್ಲಿ ಏಕೆ ಮುಸ್ಲಿಮರನ್ನ ಕಂಡ್ರೆ ಇಷ್ಟೊಂದು ದ್ವೇಷ, ನಮ್ಮ ಮನದ ಮಾತನ್ನೂ ಕೇಳಿ – ಮೋದಿಗೆ ಮೌಲ್ವಿ ಮನವಿ

    ಜೂನ್ ತ್ರೈಮಾಸಿಕದಲ್ಲಿ ಒಟ್ಟು ಆದಾಯ 1,88,749 ಕೋಟಿ ರೂ.ಗೆ ಏರಿಕೆಯಾಗಿದ್ದು, ಹಿಂದಿನ ವರ್ಷದ ಅವಧಿಯಲ್ಲಿ 1,68,881 ಕೋಟಿ ರೂ. ಇತ್ತು. ಎಲ್‌ಐಸಿಯ ನಿರ್ವಹಣೆಯಲ್ಲಿರುವ ಒಟ್ಟು ಆಸ್ತಿ ಕಳೆದ ವರ್ಷ ಜೂನ್ 30 ರಂದು 41.02 ಲಕ್ಷ ಕೋಟಿ ರೂ. ಇದ್ದರೆ ಈ ಬಾರಿ 5.09 ಲಕ್ಷ ಕೋಟಿ ರೂ. ವೃದ್ಧಿಸಿ 46.11 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾರುತಿಗೆ ಬಂಪರ್‌ – ನಿವ್ವಳ ಲಾಭ 4 ಪಟ್ಟು ಏರಿಕೆ, ಇನ್ನೂ 4.12 ಲಕ್ಷ ವಾಹನಗಳ ಆರ್ಡರ್‌ ಬಾಕಿ

    ಮಾರುತಿಗೆ ಬಂಪರ್‌ – ನಿವ್ವಳ ಲಾಭ 4 ಪಟ್ಟು ಏರಿಕೆ, ಇನ್ನೂ 4.12 ಲಕ್ಷ ವಾಹನಗಳ ಆರ್ಡರ್‌ ಬಾಕಿ

    ನವದೆಹಲಿ: ಸೆಪ್ಟೆಂಬರ್‌ಗೆ ಅಂತ್ಯಗೊಂಡ ಎರಡನೇ ತ್ರೈಮಾಸಿಕದಲ್ಲಿ(Q2 Results) ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಕಂಪನಿಯ(Maruti Suzuki) ನಿವ್ವಳ ಲಾಭ 4 ಪಟ್ಟು ಹೆಚ್ಚಳವಾಗಿದೆ.

    ಕಳೆದ ವರ್ಷ ಈ ಅವಧಿಯಲ್ಲಿ 475.3 ಕೋಟಿ ರೂ. ನಿವ್ವಳ ಲಾಭ(Net Profit) ದಾಖಲಿಸಿದರೆ ಈ ಹಣಕಾಸು ವರ್ಷದಲ್ಲಿ 2,061 ಕೋಟಿ ರೂ. ಲಾಭ ದಾಖಲಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.46 ರಷ್ಟು ಏರಿಕೆಯಾಗಿ 29,931 ಕೋಟಿ ರೂ. ಆದಾಯ ದಾಖಲಿಸಿದೆ. ಹಿಂದಿನ ತ್ರೈಮಾಸಿಕದಲ್ಲಿ 487 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

    ಮಾರುತಿ ಕಂಪನಿಯಿಂದ ಷೇರು ಪೇಟೆಗೆ ಈ ಮಾಹಿತಿ ಸಿಗುತ್ತಿದ್ದಂತೆ ಬಾಂಬೆ ಷೇರು ಮಾರುಕಟ್ಟೆಯಲ್ಲಿ ಷೇರು ಮೌಲ್ಯ ಶೇ.5 ರಷ್ಟು ಏರಿಕೆಯಾಗಿದೆ. ಷೇರು ಮೌಲ್ಯ ಒಂದೇ ದಿನ 506.65 ರೂ. ಏರಿಕೆಯಾಗಿದ್ದು ದಿನದ ಅಂತ್ಯಕ್ಕೆ ಒಂದು ಷೇರು ಬೆಲೆ 9,548 ರೂ.ನಲ್ಲಿ ಕೊನೆಯಾಗಿದೆ. ಇದನ್ನೂ ಓದಿ: ಏರ್‌ಬಸ್‌ ಜೊತೆಗೂಡಿ ವಾಯುಸೇನೆಗೆ ವಿಮಾನ ತಯಾರಿಸಲಿದೆ ಟಾಟಾ ಸಮೂಹ

    ಈ ಅವಧಿಯಲ್ಲಿ 5.17 ಲಕ್ಷ ಕಾರುಗಳನ್ನು ಮಾರಾಟ ಮಾಡಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.36ರಷ್ಟು ಬೆಳವಣಿಗೆ ಸಾಧಿಸಿದೆ. ಈ ಪೈಕಿ ದೇಶದಲ್ಲಿ 4.54 ಲಕ್ಷ, ವಿದೇಶಕ್ಕೆ 63,195 ಕಾರುಗಳನ್ನು ಮಾರಾಟ ಮಾಡಲಾಗಿದೆ. ತ್ರೈಮಾಸಿಕ ಒಂದರರಲ್ಲಿ ಆಗಿರುವ ಗರಿಷ್ಠ ಮಾರಾಟ ಇದಾಗಿದೆ.

    ಎಲೆಕ್ಟ್ರಾನಿಕ್‌ ಬಿಡಿಭಾಗಗಳ ಕೊರತೆಯಿಂದಾಗಿ ಸುಮಾರು 35 ಸಾವಿರ ವಾಹನಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಎಂದು ಕಂಪನಿ ಹೇಳಿದೆ.

    ಈ ತ್ರೈಮಾಸಿಕದ ಅಂತ್ಯಕ್ಕೆ ಸುಮಾರು 4.12 ಲಕ್ಷ ವಾಹನಗಳ ಆರ್ಡರ್‌ ಬಾಕಿ ಉಳಿದಿವೆ. ಈ ಪೈಕಿ 1.3 ಲಕ್ಷ ವಾಹನಗಳ ಬುಕ್ಕಿಂಗ್‌ಗಳು ಇತ್ತೀಚಿಗೆ ಬಿಡುಗಡೆ ಮಾಡಲಾದ ಮಾದರಿಗಳಿಗೆ ಬಂದಿದೆ ಎಂದು ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]