Tag: Neptoism

  • ನನ್ನ ವಿರುದ್ಧ ಇಡೀ ಗ್ಯಾಂಗ್ ಕೆಲಸ ಮಾಡ್ತಿದೆ: ಎ.ಆರ್.ರೆಹಮಾನ್

    ನನ್ನ ವಿರುದ್ಧ ಇಡೀ ಗ್ಯಾಂಗ್ ಕೆಲಸ ಮಾಡ್ತಿದೆ: ಎ.ಆರ್.ರೆಹಮಾನ್

    -ಸ್ವಜನಪಕ್ಷಪಾತದ ಬಗ್ಗೆ ರೆಹಮಾನ್ ಮಾತು

    ಮುಂಬೈ: ಮ್ಯೂಸಿಕ್ ಮಾಂತ್ರಿಕ ಎ.ಆರ್. ರಹಮಾನ್ ಮೊದಲ ಬಾರಿಗೆ ಬಾಲಿವುಡ್ ನಲ್ಲಿಯ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದ್ದಾರೆ.

    ಆಸ್ಕರ್ ಪ್ರಶಸ್ತಿ ವಿಜೇತ ರೆಹಮಾನ್ ಅವರನ್ನ ಸಹ ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತವನ್ನು ಎದುರಿಸಿದ್ದಾರೆ. ಇಡೀ ಗ್ಯಾಂಗ್ ನನ್ನ ವಿರುದ್ಧ ಕೆಲಸ ಮಾಡುತ್ತಿತ್ತು. ಹಾಗಾಗಿ ನಾನು ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಇದನ್ನೂ ಓದಿ:  ಓ ನನ್ನ ಕಂದ, ಬಂಗಾರವೇ ಕ್ಷಮಿಸು ಬಿಡು: ಸುಶಾಂತ್‍ಗೆ ಅಕ್ಕನ ಪತ್ರ

    ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಕೇಳುಗರೊಂದಿಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಾನು ಸಂಗೀತ ನೀಡಿರುವ ಸಿನಿಮಾಗಳು ಚೆನ್ನಾಗಿಲ್ಲ ಎಂದು ಹೇಳಲಾರೆ. ನನ್ನ ವಿರುದ್ಧ ಷಡ್ಯಂತ್ರ ರಚಿಸುತ್ತಿದ್ದ ಗುಂಪು ತಪ್ಪು ಸಂದೇಶಗಳನ್ನು ರವಾನಿಸುತ್ತಿತ್ತು. ನನ್ನ ಬಗ್ಗೆ ಅಪಪ್ರಚಾರ ಮಾಡೋದರಲ್ಲಿ ಆ ಗುಂಪು ಕೆಲಸ ಮಾಡುತ್ತಿತ್ತು. ಒಮ್ಮೆ ಮುಖೇಶ್ ಛಾಬ್ರಾ ಹಾಡುಗಳಿಗಾಗಿ ನನ್ನ ಬಳಿ ಬಂದಿದ್ದರು. ಎರಡು ದಿನಗಳಲ್ಲಿ ನಾಲ್ಕು ಹಾಡುಗಳನ್ನು ನೀಡಿದೆ. ನನ್ನ ಜೊತೆ ಮಾತನಾಡುತ್ತಾ, ನಿಮ್ಮ ಬಳಿ ಹೋಗಬಾರದು ಅಂತ ಹಲವರು ಒತ್ತಡ ಹಾಕಿರುವ ವಿಷಯ ತಿಳಿಸಿದರು. ಇದನ್ನೂ ಓದಿ:

    ಅಂದು ದೀಪಕ್ ಛಾಬ್ರಾ ಮಾತು ಕೇಳಿದಾಗ ಇದೇ ಕಾರಣಕ್ಕೆ ನಾನು ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಕೆಲಸ ಮಾಡಲು ಆಗಲಿಲ್ಲ ಎಂಬ ವಿಷಯ ಮನವರಿಕೆ ಆಯ್ತು. ಒಂದು ಗುಂಪು ನನ್ನ ವಿರುದ್ಧ ಕೆಲಸ ಮಾಡುತ್ತಿದ್ದ ಪರಿಣಾಮ ಕಡಿಮೆ ಬಜೆಟ್ ಚಿತ್ರ (ಡಾರ್ಕ್ ಮೂವಿ)ಗಳಿಗೆ ಸಂಗೀತ ನೀಡಿದ್ದೇನೆ. ಅವರು ತಮಗೆ ಗೊತ್ತಿಲ್ಲದೇ ಬೇರೆಯವರಿಗೆ ನೋವುಂಟು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ನನ್ನ ಆರೋಪ ಸುಳ್ಳೆಂದರೆ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡ್ತೇನೆ: ಕಂಗನಾ

    ಇತ್ತೀಚೆಗೆ ನಿಧನವಾಗಿರುವ ಸುಶಾಂತ್ ಸಿಂಗ್ ರಜಪೂತ್ ನಟನೆಯ ದಿಲ್ ಬೇಚೇರಾ ಸಿನಿಮಾದ ಹಾಡಿಗೆ ಸಂಗೀತ ಸಂಯೋಜನೆ ಮಾಡಲು ರೆಹಮಾನ್ ಒಪ್ಪಿಕೊಂಡಿದ್ದಾರೆ.

  • ನಾನು ಬದುಕುಳಿದೆ, ಆದ್ರೆ ಸುಶಾಂತ್‍ಗೆ ಆಗಲಿಲ್ಲ: ಪ್ರಕಾಶ್ ರೈ

    ನಾನು ಬದುಕುಳಿದೆ, ಆದ್ರೆ ಸುಶಾಂತ್‍ಗೆ ಆಗಲಿಲ್ಲ: ಪ್ರಕಾಶ್ ರೈ

    -ನೆಪಟಿಸಂ ಬಗ್ಗೆ ರೈ ಮಾತು

    ಬೆಂಗಳೂರು: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಟ ಪ್ರಕಾಶ್ ರೈ ಸಂತಾಪ ಸೂಚಿಸಿ, ನೆಪಟಿಸಂ ಬಗ್ಗೆ ಮಾತನಾಡಿದ್ದಾರೆ.

    ಸುಶಾಂತ್ ನೆಪಟಿಸಂ ಬಗ್ಗೆ ಮಾತನಾಡಿರುವ ವಿಡಿಯೋ ಅಪ್ಲೋಡ್ ಮಾಡಿಕೊಂಡು ಟ್ವೀಟ್ ಮಾಡಿರುವ ಪ್ರಕಾಶ್ ರೈ, ನಾನು ನೆಪಟಿಸಂ (ತಾರತಮ್ಯ) ಅನುಭವಗಳನ್ನು ಎದುರಿಸಿ ಬಂದಿದ್ದೇನೆ. ನಾನು ಬದುಕುಳಿದೆ. ನನ್ನ ಗಾಯಗಳು ಮನಸ್ಸಿಗಿಂತ ಆಳವಾಗಿವೆ. ಆದ್ರೆ ಮಗು ಸುಶಾಂತ್ ಸಿಂಗ್ ರಜಪೂತ್‍ಗೆ ಇದನ್ನು ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ನಾವು ವಾಸ್ತವತೆಯನ್ನು ಅರ್ಥ ಮಾಡಿಕೊಂಡು ಇಂತಹ ಕನಸುಗಳನ್ನು ಕೊನೆಯಾಗೋದನ್ನ ತಡೆಯಬೇಕು ಎಂದು ಬರೆದುಕೊಂಡಿದ್ದಾರೆ.

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್‍ನಲ್ಲಿ ತಾರತಮ್ಯದ ಜನರು ಪ್ರಶ್ನೆ ಎತ್ತುತ್ತಿದ್ದಾರೆ. ಸುಶಾಂತ್‍ನನ್ನು ಮಾನಸಿಕವಾಗು ಕುಗ್ಗಿಸಿ ಆತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲಾಯ್ತು. ಇದು ಸೂಸೈಡ್ ಅಲ್ಲ, ಪೂರ್ವ ನಿಯೋಜಿತ ಕೊಲೆ ಎಂದು ನಟ ಕಂಗನಾ ರಣಾವತ್ ಆರೋಪಿಸಿದ್ದರು.

  • ಸುಶಾಂತ್ ಆತ್ಮಹತ್ಯೆ ಅಲ್ಲ, ಯೋಜಿತ ಕೊಲೆ: ಕಂಗನಾ ಆರೋಪ

    ಸುಶಾಂತ್ ಆತ್ಮಹತ್ಯೆ ಅಲ್ಲ, ಯೋಜಿತ ಕೊಲೆ: ಕಂಗನಾ ಆರೋಪ

    ಮುಂಬೈ: ಭಾನುವಾರ ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್ ಸಿಂಗ್ ರಜಪೂತ್ ಅವರದ್ದು ಆತ್ಮಹತ್ಯೆ ಅಲ್ಲ ಯೋಜಿತ ಕೊಲೆ ಎಂದು ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅವರು ಆರೋಪ ಮಾಡಿದ್ದಾರೆ.

    ಬಾಲಿವುಡ್‍ನಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ಬಯೋಗ್ರಾಪಿ ‘ಧೋನಿ’ ಸಿನಿಮಾದಲ್ಲಿ ಅಭಿನಯಿಸಿ ಭಾರತ ಕಲಾರಸಿಕರ ಮನಗೆದ್ದಿದ್ದ ಸುಶಾಂತ್ ಸಿಂಗ್ ರಜಪೂತ್, ಭಾನುವಾರ ತಮ್ಮ ನಿಸವಾದಲ್ಲೇ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಈಗ ಈ ವಿಚಾರವಾಗಿ ಮಾತನಾಡಿರುವ ಕಂಗನಾ ಬಾಲಿವುಡ್‍ನಲ್ಲಿ ಇರುವ ತಾರತಮ್ಯದ ಬಗ್ಗೆ ಕಿಡಿಕಾರಿದ್ದಾರೆ.

    ಈ ಬಗ್ಗೆ ವಿಡಿಯೋ ಮಾಡಿರುವ ಕಂಗನಾ, ಸುಶಾಂತ್ ಸಾವಿನಿಂದ ನಮಗೆ ಬಹಳ ದುಃಖವಾಗಿದೆ. ಆದರೆ ಕೆಲವರು ಅವನ ಸಾವಲ್ಲೂ ಕೂಡ ಆಟವಾಡುತ್ತಿದ್ದಾರೆ. ಎಂಜಿನಿಯರಿಂಗ್ ನಲ್ಲಿ ಟಾಪ್ ಮಾಡಿ, ರಾಂಕ್ ಹೋಲ್ಡರ್ ಆಗಿದ್ದ ವ್ಯಕ್ತಿ ಖಿನ್ನತೆಯಿಂದ ಬಳಲಲು ಸಾಧ್ಯನಾ? ಸುಶಾಂತ್ ಲಾಸ್ಟ್ ಪೋಸ್ಟ್ ಅನ್ನು ನೋಡಿ, ಅದರಲ್ಲಿ ಸುಶಾಂತ್ ಜನರಿಗೆ ತನ್ನ ಚಿತ್ರ ನೋಡುವಂತೆ ಮನವಿ ಮಾಡಿದ್ದಾರೆ. ನನಗೆ ಗಾಡ್ ಫಾದರ್ ಇಲ್ಲ, ನನ್ನನ್ನು ಸಿನಿಮಾದಿಂದ ತೆಗೆದು ಹಾಕುತ್ತಾರೆ ಎಂದು ಬೇಡಿಕೊಂಡಿದ್ದರು ಎಂದು ಹೇಳಿದ್ದಾರೆ.

    https://twitter.com/sanilvikram/status/1272477311917371393

    ಸುಶಾಂತ್ ಸಿನಿಮಾ ರಂಗಕ್ಕೆ ಬಂದು ಕಾಯ್ ಪೋಚೆನಂತಹ ಸಿನಿಮಾ ಮಾಡಿದ್ದಾರೆ. ಸ್ಟಾರ್ ಕಿಡ್‍ಗಳ ಡೆಬ್ಯು ಅವಾರ್ಡ್ ನೀಡುವವರು, ಸುಶಾಂತ್‍ಗೆ ಅವಾರ್ಡ್ ಯಾಕೆ ನೀಡಿಲಿಲ್ಲ. ಕೇದರ್ ನಾಥ್, ಧೋನಿ, ಚಿಚೋರೆ ರೀತಿಯ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಗಲ್ಲಿಬಾಯ್ ರೀತಿಯ ಕೆಟ್ಟ ಸಿನಿಮಾಗಳಿಗೆ ಅವಾರ್ಡ್ ನೀಡುವ ನೀವು, ಚಿಚೋರೆ ರೀತಿಯ ಒಳ್ಳೆಯ ಸಿನಿಮಾ ಗುಡ್ ಡೈರೆಕ್ಟರ್ ಗೆ ಯಾಕೆ ಪ್ರಶಸ್ತಿ ನೀಡುವುದಿಲ್ಲ ಎಂದು ನೇರವಾಗಿಯೇ ನೆಪ್ಟೋಯಿಸಂ ಬಗ್ಗೆ ಮಾತನಾಡಿದ್ದಾರೆ.

    ನಾವು ಏನೇ ಮಾಡಿದರೂ ನೀವು ಒಪ್ಪುವುದಿಲ್ಲ. ನಾನು ಕೂಡ ಒಳ್ಳೆಯ ಸಿನಿಮಾ ಮಾಡಿದ್ದೇನೆ. ನಿರ್ಮಾಣ, ನಿರ್ದೇಶನ ಮಾಡಿದ್ದೇನೆ. ನಮ್ಮ ಸಿನಿಮಾವನ್ನು ನೀವು ಯಾಕೆ ಒಪ್ಪುವುದಿಲ್ಲ. ನನ್ನ ಮೇಲೆ ಯಾಕೆ 6 ದೂರುಗಳನ್ನು ದಾಖಲಿಸಿದ್ದೀರಾ? ಒಬ್ಬ ಪತ್ರಕರ್ತ ಸುಶಾಂತ್ ಬಗ್ಗೆ ಬಹಳ ಕೆಟ್ಟದಾಗಿ ಬರೆಯುತ್ತಾನೆ. ಆತ ಖಿನ್ನತೆಗೆ ಒಳಗಾಗಿದ್ದ, ಡ್ರಗ್ಸ್ ಅಡಿಕ್ಟ್ ಎಂದು ಬರೆಯುತ್ತಾರೆ. ಯಾಕೆ ನಿಮಗೆ ಸಂಜಯ್ ದತ್ ಅವರ ಅಡಿಕ್ಷನ್ ಕ್ಯೂಟ್ ಆಗಿ ಇತ್ತಾ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

    ಕೆಲವರು ನನಗೂ ಸಂದೇಶ ಕಳುಹಿಸುತ್ತಾರೆ. ನಿನ್ನ ಟೈಮ್ ಸರಿಯಿಲ್ಲ ಎಂದರೆ ನೀನು ಕೂಡ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬೇಡ ಎಂದು, ನೀವು ಯಾಕೆ ಆತ್ಮಹತ್ಯೆ ಎಂಬುದನ್ನು ನಮ್ಮ ತಲೆಗೆ ತುಂಬುತ್ತೀರಾ? ಸಮಾಜ ಸುಶಾಂತ್ ನನ್ನು ಪ್ಲಾನ್ ಮಾಡಿ ಮರ್ಡರ್ ಮಾಡಿದೆ. ಆದರೆ ಆತ ದಡ್ಡ, ಸಮಾಜ ಹೇಳಿದ್ದೇಲ್ಲವನ್ನು ನಂಬಿದ್ದ. ಸಮಾಜ ನಿನ್ನ ಕೈಯಲ್ಲಿ ಏನೂ ಮಾಡಲು ಆಗಲ್ಲ ಎಂದರೆ ಅದನ್ನು ಎದುರಿಸದೆ ಒಪ್ಪಿಕೊಂಡಿದ್ದ. ಅದೂ ಅವನು ಮಾಡಿದ ದೊಡ್ಡ ತಪ್ಪು ಎಂದು ಕಂಗನಾ ಹೇಳಿದ್ದಾರೆ.

    ಸುಶಾಂತ್ ತನ್ನ ತಾಯಿ ಹೇಳಿದ್ದನ್ನು ಕೇಳಬೇಕಿತ್ತು. ಆತ ಸಮಾಜದ ಮಾತು ಕೇಳಿದ. ಸಮಾಜ ನೀನು ಕೆಲಸಕ್ಕ ಬಾರದವ, ನಿನ್ನ ಕೈಯಲ್ಲಿ ಏನೂ ಮಾಡಲು ಆಗಲ್ಲ ಎಂದು ದೂರಿತ್ತು. ಅದನ್ನು ಮನಸ್ಸಿಗೆ ತೆಗೆದುಕೊಂಡು ಸುಶಾಂತ್ ಹೀಗೆ ಮಾಡಿಕೊಂಡಿದ್ದಾನೆ. ಇತಿಹಾಸವನ್ನು ಯಾರು ಬರೆಯಲಿದ್ದಾರೆ ಎಂಬುದನ್ನು ನಾವು ತೀರ್ಮಾನ ಮಾಡಬೇಕು. ಗೂಗಲ್ ಅದನ್ನು ಬರೆದು ಇಡುತ್ತದೆ ಎಂದು ಕಂಗನಾ ಬಾಲಿವುಡ್ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಂಗನಾ ಈ ರೀತಿ ಬಾಲಿವುಡ್‍ನಲ್ಲಿರುವ ನೆಪ್ಟೋಯಿಸಂ ಮತ್ತು ತಾರತಮ್ಯದ ದನಿ ಎತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಹಲವಾರು ಬಾರಿ ಮಾತನಾಡಿದ್ದಾರೆ. ಈ ವಿಚಾರವಾಗಿ ಈ ಹಿಂದೆ ಕರಣ್ ಜೋಹರ್ ಅವರನ್ನು ಅವರದ್ದೇ ಶೋನಲ್ಲಿ ತರಾಟೆಗೆ ತೆಗೆದುಕೊಂಡಿದ್ದ ಕಂಗನಾ, ನೀವು ಸಂಕುಚಿತ ಮನಸ್ಸಿನ ಪಾತ್ರ ಮಾಡ್ತೀರಿ. ಸರ್ವಾಧಿಕಾರಿತ್ವ, ಬೇರೆಯವರ ಬಗೆಗಿನ ಕೆಳಮಟ್ಟದ ಯೋಚನೆಗಳು, ಮೂವಿ ಮಾಫಿಯಾದ ಲೀಡರ್ ಆಗಿರುತ್ತೀರಿ ಎಂದು ನೆಪ್ಟೋಯಿಸಂ ತೀಕ್ಷ್ಣವಾಗಿ ಮಾತನಾಡಿದ್ದರು.