Tag: Nepal Singh

  • ಸೈನಿಕರು ಪ್ರತಿದಿನ ಸಾಯ್ತಾರೆ, ಸೈನಿಕರು ಸಾಯದಿರೋ ದೇಶ ಇದ್ಯಾ?: ಬಿಜೆಪಿ ಸಂಸದ

    ಸೈನಿಕರು ಪ್ರತಿದಿನ ಸಾಯ್ತಾರೆ, ಸೈನಿಕರು ಸಾಯದಿರೋ ದೇಶ ಇದ್ಯಾ?: ಬಿಜೆಪಿ ಸಂಸದ

    ಲಕ್ನೋ: ಇತ್ತೀಚೆಗೆ ಸಿಆರ್‍ಪಿಎಫ್ ತರಬೇತಿ ಕೇಂದ್ರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಈ ಬಗ್ಗೆ ಉತ್ತರ ಪ್ರದೇಶ ರಾಜ್ಯದ ರಾಮ್‍ಪುರ ಕ್ಷೇತ್ರದ ಬಿಜೆಪಿ ಸಂಸದ ನೇಪಾಳ ಸಿಂಗ್ ಪ್ರತಿಕ್ರಿಯಿಸುವ ವೇಳೆ ಭಾರತೀಯ ಸೈನಿಕರಿಗೆ ಅವಮಾನಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ.

    ಸೈನಿಕರು ಪ್ರತಿದಿನ ಸಾಯ್ತಾರೆ. ಎಲ್ಲಿಯಾದ್ರೂ ಯುದ್ಧದಲ್ಲಿ ಸೈನಿಕರು ಸಾಯದೇ ಇರುವ ದೇಶವಿದ್ಯಾ? ಗ್ರಾಮಗಳಲ್ಲಿ ಗಲಾಟೆ ಆದಾಗ ಯಾರಿಗಾದ್ರೂ ಗಾಯ ಆಗೇ ಆಗುತ್ತದೆ. ಜೀವವನ್ನು ಉಳಿಸಬಲ್ಲ ಸಾಧನ ಏನಾದ್ರೂ ಇದ್ರೆ ಹೇಳಿ. ಬುಲೆಟ್ ವಿಫಲಗೊಳಿಸುವ ಯಾವುದಾದ್ರೂ ಸಾಧನ ಇದ್ರೆ ಹೇಳಿ. ಅದನ್ನ ಜಾರಿಗೆ ತರೋಣ ಎಂದು ಹೇಳಿದ್ದಾರೆ.

    ಇತ್ತ ಸಂಸದರ ಹೇಳಿಕೆಗೆ ಆಕ್ರೋಶ ವ್ಯಕ್ತವಾದ ಕೂಡಲೇ ನಾನು ಸೇನೆಗೆ ಅವಮಾನಿಸುವಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಒಂದು ವೇಳೆ ನನ್ನ ಮಾತುಗಳಿಂದ ಯಾರಿಗಾದ್ರೂ ದುಃಖವಾದ್ರೆ ನಾನು ಎಲ್ಲರಲ್ಲಿಯೂ ಕ್ಷಮೆ ಕೇಳುತ್ತೇನೆ ಅಂತಾ ನೇಪಾಳ ಸಿಂಗ್ ಪ್ರತಿಕ್ರಿಯಿಸಿದ್ದಾರೆ.