Tag: neocov

  • ಹೊಸ ವೈರಸ್‌ NeoCoV ಬಗ್ಗೆ ಚೀನಾ ಎಚ್ಚರ – ಮೂವರು ಸೋಂಕಿತರಲ್ಲಿ ಒಬ್ಬರು ಸಾವು!

    ಹೊಸ ವೈರಸ್‌ NeoCoV ಬಗ್ಗೆ ಚೀನಾ ಎಚ್ಚರ – ಮೂವರು ಸೋಂಕಿತರಲ್ಲಿ ಒಬ್ಬರು ಸಾವು!

    ಬೀಜಿಂಗ್: ಕೋವಿಡ್‌-19 ರೂಪಾಂತರಿಗಳೊಂದಿಗೆ ಮನುಕುಲವನ್ನು ಕಂಗೆಡಿಸುತ್ತಿರುವ ಸಂದರ್ಭದಲ್ಲೇ ಚೀನಾ ವಿಜ್ಞಾನಿಗಳು ಹೊಸ ಮಾದರಿಯ ಕೊರೊನಾ ವೈರಸ್‌ ʻನಿಯೋಕೋವ್‌ʼ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

    ಏನಿದು ನಿಯೋಕೋವ್?
    ಹೊಸ ಕೊರೊನಾ ವೈರಸ್‌, ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿದೆ. ಇದು ಹೆಚ್ಚಿನ ಸಾವು ಮತ್ತು ಸೋಂಕು ಪ್ರಸರಣ ದರವನ್ನು ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಬಾವಲಿಗಳಲ್ಲಿ ಈ ಸೋಂಕು ಕಂಡುಬಂದಿದೆ. ಇದನ್ನೂ ಓದಿ: ಮೂಗಿನ ಮೂಲಕ ನೀಡಲಾಗುವ ಕೋವ್ಯಾಕ್ಸಿನ್‌ನ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಒಪ್ಪಿಗೆ

    CORONA-VIRUS.

    ಪತ್ತೆಯಾಗಿದ್ದೆಲ್ಲಿ?
    ನಿಯೋಕೋವ್‌ ಹೊಸ ವೈರಸ್‌ ಏನೂ ಅಲ್ಲ. ಅದು ಎಂಇಆರ್‌ಎಸ್‌-ಕೋವ್‌ ವೈರಸ್‌ನೊಂದಿಗೆ ಸಂಯೋಗ ಹೊಂದಿದೆ. ಇದು 2012 ಮತ್ತು 2015ರಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿ ಏಕಾಏಕಿ ಪತ್ತೆಯಾಗಿದೆ. ಇದು ಸಾರ್ಸ್‌-ಕೋವ್‌-2 ಅನ್ನು ಹೋಲುತ್ತದೆ. ಅಲ್ಲದೇ ಇದು ಮಾನವರಲ್ಲಿ ಕೊರೊನಾ ವೈರಸ್‌ನ್ನು ಉಂಟು ಮಾಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.

    ವೈರಸ್‌ ಮಾರಣಾಂತಿಕವೇ?
    ವೈರಸ್‌ಗೆ ಮಾನವ ಜೀವಕೋಶಗಳಿಗೆ ನುಸುಳುವ ಒಂದು ರೂಪಾಂತರದ ಅಗತ್ಯವಿದೆ. ಕೊರೊನಾ ವೈರಸ್‌ ರೋಗಕಾರಕಕ್ಕಿಂತ ವಿಭಿನ್ನವಾಗಿ ಎಸಿಇ2 ಗ್ರಾಹಕಕ್ಕೆ ಬಂಧಿಸುವ ಈ ಕೊರೊನಾ ವೈರಸ್‌ ಅಪಾಯವನ್ನುಂಟು ಮಾಡುತ್ತದೆ ಎಂದು ವುಹಾನ್‌ ವಿಶ್ವವಿದ್ಯಾಲಯ ಮತ್ತು ಚೈನೀಸ್‌ ಅಕಾಡೆಮಿ ಆಫ್‌ ಸೈನ್ಸಸ್‌ನ ಇನ್‌ಸ್ಟಿಟ್ಯೂಟ್‌ ಆಫ್‌ ಬಯೋಫಿಸಿಕ್ಸ್‌ ಸಂಶೋಧಕರು ತಿಳಿಸಿದ್ದಾರೆ. ಇದನ್ನೂ ಓದಿ: ಒಂದೇ ತಿಂಗಳಲ್ಲಿ ಎರಡನೇ ಮಂಗನ ಕಾಯಿಲೆ ಪ್ರಕರಣ ಪತ್ತೆ

    ಮೂವರಲ್ಲಿ ಒಬ್ಬರು ಸಾವು
    ನಿಯೋಕೋವ್‌ ಸೋಂಕಿಗೆ ತುತ್ತಾದ ಪ್ರತಿ ಮೂರು ಮಂದಿಯಲ್ಲಿ ಒಬ್ಬರು ಸಾವಿಗೀಡಾಗುತ್ತಾರೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.