Tag: nemalangala

  • ಬಾಟೆಲ್ ಕಿತ್ತುಕೊಂಡು ಹಾಲು ಕುಡಿದ ವಾನರ

    ಬಾಟೆಲ್ ಕಿತ್ತುಕೊಂಡು ಹಾಲು ಕುಡಿದ ವಾನರ

    ನೆಲಮಂಗಲ: ಬಿಸಿಲಿನ ಧಗೆಗೆ ಮಗುವಿಗೆ ಕುಡಿಸಲು ಬ್ಯಾಗ್‍ನಲ್ಲಿ ಇಟ್ಟಿದ್ದ ಹಾಲಿನ ಬಾಟಲ್ ಕದ್ದು ವಾನರ ಕುಡಿದಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿ ನಡೆದಿದೆ.

    ಮಗುವಿನ ಹಾಲಿನ ಬಾಟಲ್ ಹಿಡಿದು ಕೋತಿಯೊಂದು ಹಾಲನೇಲ್ಲಾ ಖಾಲಿ ಖಾಲಿ ಮಾಡಿರುವುದನ್ನು ಸ್ಥಳದಲ್ಲಿರುವವರು ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಕೋತಿಯೊಂದು ಬಾಟಲಿನಲ್ಲಿ ಹಾಲು ಕುಡಿಯುತ್ತಿರುವುದನ್ನು ಕಾಣಬಹುದಾಗಿದೆ.

    ಈಗಾಗಲೇ ದಕ್ಷಿಣ ಕಾಶಿ ಶಿವಗಂಗೆಯಲ್ಲಿ ನೀರಿಲ್ಲದೆ ಪರದಾಟ ಪ್ರಾರಂಭವಾಗಿದೆ. ನೀರಿನ ಅಭಾವ ಪ್ರಾರಂಭದಲ್ಲಿ ಪ್ರಾಣಿಗಳಿಗೆ ತಟ್ಟಿದೆ. ಹೀಗಾಗಿ ಬೇಸಿಗೆ ಆರಂಭದಲ್ಲೇ ನೀರಿಗೆ ಹಾಹಾಕಾರ ಎನ್ನುವಂತಾಗಿದೆ. ಆದ್ದರಿಂದ ಪ್ರಾಣಿಪ್ರಿಯರು ಕೋತಿಗಳಿಗೆ ಸಹಕರಿಸಬೇಕೆಂದು ಪ್ರವಾಸಿಗರು ಹೇಳುತ್ತಿದ್ದಾರೆ.