Tag: nelson dileep kumar

  • ‘ಜನ ನಾಯಗನ್’ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಮೂವರು ಸ್ಟಾರ್ ನಿರ್ದೇಶಕರು

    ‘ಜನ ನಾಯಗನ್’ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಮೂವರು ಸ್ಟಾರ್ ನಿರ್ದೇಶಕರು

    ಕಾಲಿವುಡ್‌ನ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾದಲ್ಲಿ ತಮಿಳಿನ ಖ್ಯಾತ ನಿರ್ದೇಶಕರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿ- ಕನ್ನಡಕ್ಕೆ ಬಂದ ‘ಹನುಮಾನ್’ ಖ್ಯಾತಿಯ ಅಮೃತಾ ಅಯ್ಯರ್

    ‘ಜನ ನಾಯಗನ್’ ಸಿನಿಮಾದಲ್ಲಿ ಲೋಕೇಶ್ ಕನಕರಾಜ್ (Lokesh Kanagaraj), ನೆಲ್ಸನ್ ದಿಲೀಪ್ ಕುಮಾರ್ (Nelson Dileep Kumar), ‘ಜವಾನ್’ ಡೈರೆಕ್ಟರ್ ಅಟ್ಲಿ (Atlee Kumar) ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ವಿಶೇಷ ಗೀತೆಯೊಂದರಲ್ಲಿ ಈ ಮೂರು ಮಂದಿ ಸ್ಟಾರ್ ನಿರ್ದೇಶಕರು ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

    ವಿಜಯ್ ಆಪ್ತರಾಗಿರುವ ಈ ನಿರ್ದೇಶಕರು ನಟನ ಕೊನೆಯ ಚಿತ್ರಕ್ಕೆ ಸಾಥ್ ನೀಡುತ್ತಿದ್ದಾರೆ. ಕೆವಿಎನ್‌ ಸಂಸ್ಥೆ ನಿರ್ಮಾಣದ ಈ ಚಿತ್ರಕ್ಕೆ ಹೆಚ್. ವಿನೋದ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕರಾವಳಿ ಬೆಡಗಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮೂಲಕ ವಿಜಯ್‌ಗೆ 2ನೇ ಬಾರಿ ಜೋಡಿಯಾಗಿ ನಟಿಸುತ್ತಿದ್ದಾರೆ. 2026ರಲ್ಲಿ ಚಿತ್ರ ರಿಲೀಸ್ ಆಗಲಿದೆ.

  • ನಿರ್ಮಾಣ ಸಂಸ್ಥೆ ಆರಂಭಿಸಿದ ‘ಜೈಲರ್’ ಡೈರೆಕ್ಟರ್

    ನಿರ್ಮಾಣ ಸಂಸ್ಥೆ ಆರಂಭಿಸಿದ ‘ಜೈಲರ್’ ಡೈರೆಕ್ಟರ್

    ಮಿಳಿನ ‘ಜೈಲರ್’ (Jailer) ಖ್ಯಾತಿಯ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ (Nelson Dileep Kumar) ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ರೊಡಕ್ಷನ್ ಹೌಸ್ ಆರಂಭಿಸಿದ್ದು, ಹೊಸ ಸಿನಿಮಾ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ನೆಲ್ಸನ್ ಹೊಸ ಹೆಜ್ಜೆಗೆ ಅಭಿಮಾನಿಗಳು ಶುಭಕೋರಿದ್ದಾರೆ. ಇದನ್ನೂ ಓದಿ:‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ ಫಾಲ್ಕೆ ಜ್ಯೂರಿ ಅವಾರ್ಡ್

    20ರ ಹರೆಯದಲ್ಲಿ ನನ್ನ ಸಿನಿಮಾ ಪಯಣ ಶುರುವಾಗಿದ್ದು, ಇಂಡಸ್ಟ್ರಿ ನನಗೆ ಹಲವು ವರ್ಷಗಳಿಂದ ಏರಿಳಿತಗಳನ್ನು ನೀಡಿದೆ. ಇವೆಲ್ಲವೂ ನನ್ನ ಬೆಳವಣಿಗೆಗೆ ಕಾರಣವಾಗಿವೆ. ಸ್ವಂತ ನಿರ್ಮಾಣ ಸಂಸ್ಥೆ ಆರಂಭಿಸಬೇಕು ಎಂಬುದು ನನ್ನ ಬಹುದಿನಗಳ ಕನಸು. ಆ ಕನಸು ಇದೀಗ ನನಸಾಗಿದೆ. ‘ಫಿಲಮೆಂಟ್ ಪಿಕ್ಚರ್ಸ್’ ಎಂಬ ನನ್ನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಲು ನಾನು ಹೆಮ್ಮೆಪಡುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಡೈರೆಕ್ಟರ್ ನೆಲ್ಸನ್ ಬರೆದುಕೊಂಡಿದ್ದಾರೆ.

    ಪ್ರೇಕ್ಷಕರನ್ನು ರಂಜಿಸಲು ಸೃಜನಶೀಲ ಮತ್ತು ಆಸಕ್ತಿದಾಯಕ ವಿಷಯವನ್ನು ಒದಗಿಸುವುದು ನಮ್ಮ ಕಂಪನಿಯ ಮುಖ್ಯ ಗುರಿಯಾಗಿದೆ ಎಂದು ಪ್ರಸ್ತಾಪಿಸಿದ ನೆಲ್ಸನ್, ಮೇ 3ರಂದು ತಮ್ಮ ನಿರ್ಮಾಣ ಕಂಪನಿಯ ಮೊದಲ ಚಿತ್ರದ ಮಾಹಿತಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

    ಕಳೆದ ವರ್ಷ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಈಗ ಇದರ ಸೀಕ್ವೆಲ್‌ಗೆ ಸಿದ್ಧತೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ. ತಲೈವಾ ಚಿತ್ರಕ್ಕೆ ಸಾಥ್ ನೀಡಲಿದ್ದಾರೆ.

  • ಎಲ್ಲೆಲ್ಲೂ ‘ಜೈಲರ್’ ಚಿತ್ರದ ಹವಾ, ನಿಲ್ಲುತ್ತಿಲ್ಲ ರಜನಿ ತಾಕತ್ತು

    ಎಲ್ಲೆಲ್ಲೂ ‘ಜೈಲರ್’ ಚಿತ್ರದ ಹವಾ, ನಿಲ್ಲುತ್ತಿಲ್ಲ ರಜನಿ ತಾಕತ್ತು

    ‘ಜೈಲರ್’ (Jailer) ಸಿನಿಮಾ ಹವಾ ಆಕಾಶಕ್ಕೆ ಮುಟ್ಟಿದೆ. ಬಿಡುಗಡೆಯಾಗಿ ಹನ್ನೆರಡು ದಿನ ಕಳೆದಿವೆ. ಆದರೂ ರಜನಿಯನ್ನು (Rajanikanth) ನೋಡಲು ಜನರು ಮುಗಿಬೀಳುತ್ತಿದ್ದಾರೆ. ವಿಶ್ವಾದ್ಯಂತ 500 ಕೋಟಿ ರೂಪಾಯಿ ಗಳಿಸಿದೆ. ಆದರೆ ಕರ್ನಾಟಕದಲ್ಲಿ ತಲೈವಾ ಸಿನಿಮಾ ಬಾಚಿದ್ದೆಷ್ಟು? ಎಷ್ಟು ಪ್ರದರ್ಶನಗಳಲ್ಲಿ ಮೆರೆಯುತ್ತಿದೆ ಜೈಲರ್?

    ರಜನಿಕಾಂತ್ ಮೇನಿಯಾ ನಿಲ್ಲುತ್ತಿಲ್ಲ. ಒಂದಲ್ಲ ಎರಡಲ್ಲ. ಭರ್ತಿ ಹನ್ನೆರಡು ದಿನ ಮುಗಿದಿದೆ. ಆದರೂ ಜನರು ಚಿತ್ರಮಂದಿರಕ್ಕೆ ನುಗ್ಗುತ್ತಿದ್ದಾರೆ. ನೋಡಿದವರೇ ಮತ್ತೆ ಮತ್ತೆ ನೋಡುತ್ತಿದ್ದಾರೆ. ರಜನಿ ಯುಗ ಮುಗಿಯಿತು ಎಂದವರಿಗೆ ಕಪಾಳಕ್ಕೆ ಬಾರಿಸುವಂಥ ಉತ್ತರ ಕೊಟ್ಟಿದೆ ಜೈಲರ್. ವಿಶ್ವಾದ್ಯಂತ ಇಲ್ಲಿವರೆಗೆ 500 ಕೋಟಿ ರೂ. ಗಳಿಸಿದೆ. ಹಾಗಿದ್ದರೆ ಕರ್ನಾಟಕದಲ್ಲಿ(Karnataka) ಎಷ್ಟು ಕೋಟಿ? ಉಸಿರು ಬಿಗಿ ಹಿಡಿಯಿರಿ. ಅನಾಮತ್ತು ಐವತ್ತು ಕೋಟಿಯನ್ನು ಖಜಾನೆಗೆ ಸೇರಿಸಿದೆ. ದಟ್ ಈಸ್ ತಲೈವಾ ತಾಕತ್ತು. ಇದನ್ನೂ ಓದಿ:ಬಾಲಿವುಡ್‌ ನಟ ಪಂಕಜ್ ತ್ರಿಪಾಠಿ ತಂದೆ ವಿಧಿವಶ

    ಮೊದಲ ದಿನ ಒಟ್ಟು 500 ಪ್ರದರ್ಶನ ಕಂಡಿತ್ತು ಜೈಲರ್. ಮೊದಲ ವಾರದ ನಂತರ ಪ್ರದರ್ಶನ ಸಂಖ್ಯೆ ಕಮ್ಮಿ ಆಗಬಹುದು. ಹೀಗಂತ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಐದು ನೂರರಲ್ಲಿ ಒಂದೇ ಒಂದು ಪ್ರದರ್ಶನ ಕಮ್ಮಿಯಾಗಿಲ್ಲ. ಜನರು ಸಿನಿಮಾ ನೋಡುವುದನ್ನು ನಿಲ್ಲಿಸುತ್ತಿಲ್ಲ. ರಜನಿ ಅಷ್ಟೊಂದು ಮೋಡಿ ಮಾಡಿದ್ದಾರೆ. ಏನಾದರಾಗಲಿ. ಹಳೇ ರಜನಿಕಾಂತ್ ಮತ್ತೆ ಸಿಕ್ಕಿದ್ದಾರೆ. ಫ್ಯಾನ್ಸ್ ಕೇಕೆ ಹಾಕುತ್ತಿದ್ದಾರೆ. ನಿರ್ದೇಶಕ ನೆಲ್ಸನ್ ನಿರ್ದೇಶನಕ್ಕೆ ಭೇಷ್ ಎಂದಿದ್ದಾರೆ.

    ಸಿನಿಮಾರಂಗದ ಆರಾಧ್ಯ ದೈವ ರಜನಿಕಾಂತ್ ಅವರನ್ನ ಜೈಲರ್ (Jailer) ಸಿನಿಮಾ ಮೂಲಕ ಮತ್ತೆ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ತಲೈವಾ ಮತ್ತೆ ತೆರೆಯ ಮೇಲೆ ಮಿಂಚೋದಕ್ಕೆ ಸೂಕ್ತ ಸಿನಿಮಾ ಅಂತಿದ್ದಾರೆ. ಈಗ ಅವರ ಮುಂದಿನ ಸಿನಿಮಾಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶೂಟಿಂಗ್ ಮುಗಿಸಿದ ‘ಜೈಲರ್’ ಸಿನಿಮಾ- ಕೇಕ್ ಕತ್ತರಿಸಿ ಸಂಭ್ರಮಿಸಿದ ತಲೈವಾ

    ಶೂಟಿಂಗ್ ಮುಗಿಸಿದ ‘ಜೈಲರ್’ ಸಿನಿಮಾ- ಕೇಕ್ ಕತ್ತರಿಸಿ ಸಂಭ್ರಮಿಸಿದ ತಲೈವಾ

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ನಟನೆಯ ‘ಜೈಲರ್’ (Jailer) ಸಿನಿಮಾದ ಚಿತ್ರೀಕರಣ ಇದೀಗ ಪೂರ್ಣಗೊಂಡಿದೆ. ಕೇಕ್ ಕತ್ತರಿಸುವ ಮೂಲಕ ಜೈಲರ್ ಟೀಮ್ ಜೊತೆ ತಲೈವಾ ಸಂಭ್ರಮಿಸಿದ್ದಾರೆ. ಈ ಕುರಿತ ಫೋಟೋ ಎಲ್ಲೆಡೆ ಸದ್ದು ಮಾಡ್ತಿದೆ.

    ನೆಲ್ಸನ್ ದಿಲೀಪ್ ಕುಮಾರ್ (Nelson Dileep Kumar) ನಿರ್ದೇಶನದಲ್ಲಿ ‘ಜೈಲರ್’ ಸಿನಿಮಾ ಮೂಡಿ ಬಂದಿದೆ. ರಜನಿಕಾಂತ್ 169ನೇ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಬೆಟ್ಟದಷ್ಟಿದೆ. ತಲೈವಾ ಜೊತೆ ಬಹುಭಾಷಾ ತಾರೆಯರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದ ಹ್ಯಾಟ್ರಿಕ್ ಹೀರೋ ಶಿವಣ್ಣ (Shivarajkumar) ಕೂಡ ರಜನಿಕಾಂತ್ ಜೊತೆ ನಟಿಸಿ ಬಂದಿದ್ದಾರೆ.

    ಇತ್ತೀಚಿಗಷ್ಟೇ ‘ಜೈಲರ್’ ಸಿನಿಮಾದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿತ್ತು. ಕಾರಿನಿಂದ ಇಳಿದು ಬರುವ ತಲೈವಾ ಅವರನ್ನ ನೋಡಿ ಫ್ಯಾನ್ಸ್ ಕಳೆದು ಹೋಗಿದ್ದರು. ಚಿತ್ರೀಕರಣವನ್ನ ಹಾಡೊಂದರಿಂದ ಮುಕ್ತಾಯ ಮಾಡಲಾಗಿದೆ. ತಮನ್ನಾ ಜೊತೆ ಮಸ್ತ್‌ ಆಗಿರೋ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಜೈಲರ್‌ ಶೂಟಿಂಗ್‌ಗೆ ತೆರೆಬಿದ್ದಿದೆ. ಈ ಸಿನಿಮಾ ಪೂರ್ಣಗೊಂಡಿರುವ ಬಗ್ಗೆ ಚಿತ್ರತಂಡ ಸಿಹಿಸುದ್ದಿ ನೀಡಿದ್ದಾರೆ. ನಟಿ ತಮನ್ನಾ ಭಾಟಿಯಾ, ನಿರ್ದೇಶಕ ನೆಲ್ಸನ್ & ಟೀಮ್ ಜೊತೆ ರಜನಿಕಾಂತ್ ಕೇಕ್ ಕತ್ತರಿಸಿ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ಅದ್ದೂರಿಯಾಗಿ ನಡೆಯಿತು ಅಂಬಿ ಪುತ್ರನ ಅರಿಶಿನ ಶಾಸ್ತ್ರ

    ‘ಜೈಲರ್’ ಸಿನಿಮಾ ಇದೇ ಆಗಸ್ಟ್ 10ಕ್ಕೆ ತೆರೆಗೆ ಬರಲಿದೆ. ಬಹುಭಾಷೆಗಳಲ್ಲಿ ತೆರೆ ಕಾಣಲಿದೆ. ರಜನಿಕಾಂತ್ ನಯಾ ಲುಕ್‌ನಲ್ಲಿ ನೋಡಲು ಅಭಿಮಾನಿಗಳು ಕೂಡ ಎದುರುನೋಡ್ತಿದ್ದಾರೆ.

  • `ಜೈಲರ್’ ಲುಕ್‌ನಲ್ಲಿ ರಜನಿಕಾಂತ್ ಮಿಂಚಿಂಗ್: ಹೇಗಿರಲಿದೆ ಶಿವಣ್ಣನ ಲುಕ್?

    `ಜೈಲರ್’ ಲುಕ್‌ನಲ್ಲಿ ರಜನಿಕಾಂತ್ ಮಿಂಚಿಂಗ್: ಹೇಗಿರಲಿದೆ ಶಿವಣ್ಣನ ಲುಕ್?

    ಕಾಲಿವುಡ್‌ನ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 169ನೇ ಸಿನಿಮಾ ಜೈಲರ್ ಪೋಸ್ಟರ್ ರಿಲೀಸ್ ಆಗಿದೆ. ತಲೈವಾ ಲುಕ್ ನೋಡಿ ಫ್ಯಾನ್ಸ್ ದಂಗಾಗಿದ್ದಾರೆ. ಜತೆಗೆ ನೆಚ್ಚಿನ ನಟ ಶಿವರಾಜ್‌ಕುಮಾರ್ ಪಾತ್ರದ ಲುಕ್ ಹೇಗಿರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

    ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಬಹುನಿರೀಕ್ಷಿತ `ಜೈಲರ್’ ಚಿತ್ರದ ಮೂಲಕ ತಲೈವಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಲುಕ್ ಕೂಡ ರಿವೀಲ್ ಆಗಿದ್ದು, ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರಜನೀಕಾಂತ್ ಮಿಂಚಿದ್ದಾರೆ. ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು ಕೂಡ ರಜನೀಕಾಂತ್ ಗತ್ತಿಗೆ ಫ್ಯಾನ್ಸ್ ಫುಲ್ ಆಗಿದೆ. ಇದನ್ನೂ ಓದಿ:ಮೆಗಾಸ್ಟಾರ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್: ಗಾಡ್ ಫಾದರ್‌ಗೆ ಸಲ್ಲು ಬಾಯ್ ಸಾಥ್

    ತಲೈವಾ ನಟನೆಯ 169ನೇ ಈ ಸಿನಿಮಾಗೆ ರಜನಿಕಾಂತ್ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಕಾಣಿಸಿಕೊಳ್ಳುತ್ತಿರುವ ವಿಶೇಷ. ತಲೈವಾ ಜತೆ ಶಿವಣ್ಣ ಕೂಡ ಪ್ರಮುಖ ಪಾತ್ರಕ್ಕೆ ಸಾಥ್ ನೀಡಲಿದ್ದಾರೆ. ಇಂದಿನಿಂದ ಶೂಟಿಂಗ್ ಶುರುವಾಗಿದೆ. ತಲೈವಾ ಜತೆ ಬಾಹುಬಲಿ ಖ್ಯಾತಿ ರಮ್ಯಾ ಕೃಷ್ಣ ಕೂಡ ಸಾಥ್ ನೀಡಿದ್ದಾರೆ.

    ಜೈಲಿನಲ್ಲಿ ಕದೀಮರನ್ನು ಬೆಂಡೆತ್ತಲು ರಜನೀಕಾಂತ್ ಬರುತ್ತಿದ್ದಾರೆ. ತಲೈವಾ ಲುಕ್ ನೋಡಿ ಇದೀಗ ಫಿದಾ ಆಗಿರುವ ಫ್ಯಾನ್ಸ್, ಚಿತ್ರದಲ್ಲಿ ಶಿವಣ್ಣ ಲುಕ್ ಹೇಗಿರಬಹುದು ಎಂದು ಕಾತರದಿಂದ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಬೀಸ್ಟ್’ ಸೋಲಿನ ಹಿನ್ನೆಲೆ `ತಲೈವರ್ 169′ ಚಿತ್ರಕ್ಕೆ ಹೊಸ ನಿರ್ದೇಶಕರ ಹುಡುಕಾಟದಲ್ಲಿ ತಲೈವಾ!

    `ಬೀಸ್ಟ್’ ಸೋಲಿನ ಹಿನ್ನೆಲೆ `ತಲೈವರ್ 169′ ಚಿತ್ರಕ್ಕೆ ಹೊಸ ನಿರ್ದೇಶಕರ ಹುಡುಕಾಟದಲ್ಲಿ ತಲೈವಾ!

    ಕಾಲಿವುಡ್ ಸೂಪರ್ ಸ್ಟಾರ್ ರಜನೀಕಾಂತ್ ಮತ್ತು ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಷನ್‌ನಲ್ಲಿ `ತಲೈವರ್ 169′ ಚಿತ್ರ ಅನೌನ್ಸ್ ಆಗಿತ್ತು. ಆದರೆ ರಜನೀಕಾಂತ್ ತಮ್ಮ ಚಿತ್ರ ನಿರ್ದೇಶಕನನ್ನು ಬದಲಾವಣೆ ಮಾಡುವ ಯೋಜನೆಯಲ್ಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

    ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಬೀಸ್ಟ್ ಚಿತ್ರ ಇತ್ತೀಚಿಗೆ ರಿಲೀಸ್ ಆಗಿತ್ತು. ಚಿತ್ರಕ್ಕೆ ಪ್ರತಿಕ್ರಿಯೆ ವ್ಯಕ್ತವಾಗ್ತಿರೋ ಹಿನ್ನೆಲೆಯಲ್ಲಿ, `ತಲೈವರ್ 169′ ಚಿತ್ರಕ್ಕೆ ನಿರ್ದೇಶಕ ಬದಲಿಸುವ ಪ್ಲ್ಯಾನ್‌ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ `ಕೆಜಿಎಫ್ 2′ ಚಿತ್ರವನ್ನ ಕನ್ನಡದಲ್ಲೇ ನೋಡಿ ಸೂಪರ್ ಸ್ಟಾರ್ ರಜನೀಕಾಂತ್ ಮೆಚ್ಚುಗೆ ಸೂಚಿಸಿದ್ದರು. ಆದರೆ ಬೀಸ್ಟ್ ಚಿತ್ರದ ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸಿರಲಿಲ್ಲ. ಹಾಗಾಗಿ ಈ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದೆ.

    ಈ ಹಿಂದೆ `ತಲೈವರ್ 169′ ಚಿತ್ರದ ಅಧಿಕೃತ ಟೀಸರ್ ಲುಕ್‌ನ್ನ ರಜನೀಕಾಂತ್ ಅವರು ಟ್ವಿಟರ್ ಕವರ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದರು ಈಗ ಆ ಪೋಸ್ಟ್ ಇಲ್ಲದೇ ಇರುವುದು ಹಲವಾರು ವದಂತಿಗೆ ದಾರಿ ಮಾಡಿಕೊಟ್ಟಿದೆ. ಚಿತ್ರತಂಡದವರಾಗಲಿ, ಸ್ವತಃ ರಜನೀಕಾಂತ್ ಅವರು ಕೂಡ ಈ ವದಂತಿಯ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಇದನ್ನೂ ಓದಿ:`ಕೆಜಿಎಫ್ 2′ ಚಿತ್ರ ನೋಡಿ ಮಾಸ್ಟರ್ ಪೀಸ್ ಎಂದು ಹೊಗಳಿದ ರಿಯಲ್ ಸ್ಟಾರ್ ಉಪೇಂದ್ರ

    ದಳಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ನಟನೆಯ ʻಬೀಸ್ಟ್‌ʼ ಚಿತ್ರ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡದೇ ಇರೋದು ನಿರ್ದೇಶಕ ನೆಲ್ಸನ್ ಕೆರಿಯರ್‌ಗೆ ಎಫೆಕ್ಟ್ ಆಯ್ತಾ ಅಥವಾ ನಿಜಕ್ಕೂ ರಜನೀಕಾಂತ್ ಹೊಸ ನಿರ್ದೇಶಕರ ಹುಡುಕಾಟದಲ್ಲಿದ್ದಾರಾ ಅಂತಾ ಕಾದು ನೋಡಬೇಕಿದೆ.