Tag: nelmangala

  • ಇತಿಹಾಸ ಪ್ರಸಿದ್ಧ ದೇವರಹೋಸಹಳ್ಳಿ ಬ್ರಹ್ಮರಥೋತ್ಸವ – ಹಿಂದೂ, ಮುಸ್ಲಿಂ ಭಾವೈಕ್ಯ ಸಾಕ್ಷಿ

    ಇತಿಹಾಸ ಪ್ರಸಿದ್ಧ ದೇವರಹೋಸಹಳ್ಳಿ ಬ್ರಹ್ಮರಥೋತ್ಸವ – ಹಿಂದೂ, ಮುಸ್ಲಿಂ ಭಾವೈಕ್ಯ ಸಾಕ್ಷಿ

    ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತೀದೊಡ್ಡ ಬ್ರಹ್ಮರಥೋತ್ಸವ ಕೋವಿಡ್ ನಂತರ ಯಶಸ್ವಿಯಾಗಿದೆ. ಸುಮಾರು 1 ಲಕ್ಷ ಭಕ್ತರ ಸಮ್ಮುಖದಲ್ಲಿ ದೇವರಹೊಸಹಳ್ಳಿಯ ಶ್ರೀ ಭದ್ರಕಾಳಮ್ಮ ಸಮೇತ ವೀರಭದ್ರಸ್ವಾಮಿ ವೈಭವಯುತವಾದ ಬ್ರಹ್ಮರಥೋತ್ಸವ ಸಂಪನ್ನವಾಗಿದೆ.

    ಬ್ರಹ್ಮರಥೋತ್ಸವದಲ್ಲಿ ಒಂದೆಂಡೆ ಸಾಲು-ಸಾಲು ಭಕ್ತರು, ಜಾನಪದ ಕಲಾ ಪ್ರಕಾರಗಳು, ಅರವಂಟಿಕೆಗಳು, ನೆಲಮಂಗಲ ತಾಲೂಕಿನ ದೇವರಹೊಸಹಳ್ಳಿಯ ಬ್ರಹ್ಮರಥೋತ್ಸವ ಇಂದು ಮಿಥುನ ಲಗ್ನದಲ್ಲಿ 01.30ಕ್ಕೆ ಸಂಪನ್ನಗೊಂಡಿತ್ತು. ಪ್ರಕೃತಿ ಮಡಿಲಿನಲ್ಲಿರುವ ಶ್ರೀ ವೀರಭದ್ರ ಸ್ವಾಮಿಗೆ ಹಲವಾರು ಭಕ್ತರು ಉಘೇ ಹೇಳಿದರು. ಮುಜರಾಯಿ ಇಲಾಖೆ, ಪೆÇಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಗ್ನಿಶಾಮಕ ಠಾಣೆಯ ಸಹಕಾರದೊಂದಿಗೆ, ಕೋವಿಡ್ ನಂತರ ಅತ್ಯಂತ ದೊಡ್ಡ ಬ್ರಹ್ಮರಥೋತ್ಸವ ಯಶಸ್ವಿಯಾಯಿತು. ಇದನ್ನೂ ಓದಿ: ಬಿಹಾರ ದಿವಸ್ ಆಚರಣೆಯಲ್ಲಿ ಆಹಾರ ಸೇವಿಸಿದ 100 ಮಕ್ಕಳು ಆಸ್ಪತ್ರೆಗೆ ದಾಖಲು

    ಪ್ರಧಾನ ಅರ್ಚಕರಾದ ಜಗಜ್ಯೋತಿ ಬಸವೇಶ್ವರ್ ಈ ವೇಳೆ ಮಾತನಾಡಿದ್ದು, ಗೂಳೂರಿನ ಪ್ರಾಂತ್ಯದ ಅಂದಿನ ಚಿಕ್ಕದೇವರಾಜ ಅರಸರು 1652ರಲ್ಲಿ ಜೀರ್ಣೋದ್ಧಾರ ಮಾಡಿದ ಸುಮಾರು 500 ವರ್ಷಗಳ ಪುರಾತನ ಇತಿಹಾಸವಿರುವ ದೇವಾಲಯವಾಗಿದೆ. ಕಳೆದ ಬಾರಿ ಕೋವಿಡ್‍ನಿಂದಾಗಿ ಬೆಳಗಿನ ಜಾವವೇ ರಥೋತ್ಸವ ಎಳೆದಿದ್ದರು ಎಂದು ವಿವರಿಸಿದರು.

    ಕೋವಿಡ್‍ನಿಂದ ಮುಕ್ತವಾದ ಈ ವರ್ಷ ಸರಿಯಾದ ವೇಳೆಯಲ್ಲಿ ರಥೋತ್ಸವ ನಡೆಯಿತು. ಇಂದು ರಾತ್ರಿ ಕಲ್ಯಾಣೋತ್ಸವ, ನಾಳೆ ಮುತ್ತಿನ ಪಲ್ಲಕ್ಕಿ, ಸಿಂಹವಾಹನದ ಜೊತೆಗೆ ಸೋಮವಾರದವರೆಗೆ ಎಲ್ಲ ಪ್ರಕ್ರಿಯೆ ನಡೆದು, ಮಂಗಳವಾರ ದೆವ್ವದ ಜಾತ್ರೆಯಿಂದ ಕೊನೆಗಾಣುತ್ತದೆ ಎಂದರು. ಇದನ್ನೂ ಓದಿ:  ವಿಸ್ತಾರವಾದ, ಪ್ರತ್ಯೇಕವಾದ ನಿಲ್ಲುವವರೆಗೂ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ: ಮುತಾಲಿಕ್

    ರಾಜ್ಯದ ಕೆಲವು ದೇವಾಲಯದ ಜಾತ್ರೆ ವೇಳೆ ಮುಸ್ಲಿಂ ಸಮುದಾಯದ ಜನರು ಅಂಗಡಿ ತೆರೆಯಲು ಅವಕಾಶ ನೀಡಿಲ್ಲ. ಆದರೆ ಇಲ್ಲಿ ಹಿಂದೂ, ಮುಸ್ಲಿಂ ಸಮುದಾಯದ ಬೇಧ-ಭಾವವಿಲ್ಲದೆ ಎಲ್ಲರು ಒಟ್ಟಾಗಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದು ಭಾವೈಕ್ಯತೆಗೆ ಕಾರಣವಾಗಿದೆ.

  • ಬೆಂಗಳೂರಿಗರೇ ಗಮನಿಸಿ, ಪೀಣ್ಯ ಫ್ಲೈಓವರ್ ಸಂಚಾರ ಬಂದ್ – ಬದಲಿ ಮಾರ್ಗ ಇಲ್ಲಿದೆ

    ಬೆಂಗಳೂರಿಗರೇ ಗಮನಿಸಿ, ಪೀಣ್ಯ ಫ್ಲೈಓವರ್ ಸಂಚಾರ ಬಂದ್ – ಬದಲಿ ಮಾರ್ಗ ಇಲ್ಲಿದೆ

    ನೆಲಮಂಗಲ: ಬೆಂಗಳೂರು- ತುಮಕೂರು ರಸ್ತೆಯನ್ನು ಸಂಪರ್ಕಿಸುವ ನವಯುಗ ಮೇಲ್ಸೇತುವೆಯಲ್ಲಿ ಬಿರುಕು ಮೂಡಿದ ಹಿನ್ನೆಲೆ ವಾಹನ ಸಂಚಾರಕ್ಕೆ ನಿರ್ಬಂಧವನ್ನು ಹೇರಲಾಗಿದೆ.

    ಟಿ.ದಾಸರಹಳ್ಳಿಯ ಬಳಿಯ ದೀಪಕ್ ಬಸ್ ನಿಲ್ದಾಣದ ಬಳಿ ಮೇಲ್ಸೇತುವೆ ಬಿರುಕು ಮೂಡಿದ ಪರಿಣಾಮ ಕಿಲೋಮಿಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ವಾಹನ ಸವಾರರು ಹೈರಾಣು ಆಗಿದ್ದಾರೆ.  ಈ ಹಿನ್ನೆಲೆಯಲ್ಲಿ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವನ್ನು ಹೇರಿದ್ದು, ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶವನ್ನು ನೀಡಲಾಗಿದೆ. ಇದನ್ನೂ ಓದಿ:  ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಸಂಪೂರ್ಣ ಸಹಕಾರ ನೀಡುವೆ: ಸಿಎಂ

     

    ಸರ್ವಿಸ್ ರಸ್ತೆಯಲ್ಲೂ ವಿಪರೀತ ಟ್ರಾಫಿಕ್‌ ಜಾಮ್‌ ಆದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ತುಮಕೂರು ಕಡೆಯಿಂದ ಬರುವವರು ಮಾದವಾರ ಬಳಿ ಬಲ ತಿರುವು ಪಡೆದು ನೈಸ್ ರಸ್ತೆ ಮೂಲಕ ನಗರ ಪ್ರವೇಶಕ್ಕೆ ಸೂಚನೆಯನ್ನು ನೀಡಲಾಗಿದೆ. ಬೆಂಗಳೂರಿನಿಂದ ತುಮಕೂರು ಕಡೆ ಹೋಗುವವರು, ಗೊರಗುಂಟೆಪಾಳ್ಯದ ಸಿಎಂಟಿಐ ಜಂಕ್ಷನ್ ಬಳಿ ಎಡ ತಿರುವು ಪಡೆದು ಸುಮನಹಳ್ಳಿ, ಮಾಗಡಿ ರಸ್ತೆ ಮೂಲಕ ನೈಸ್ ರಸ್ತೆಯಿಂದ ಹೊರ ಹೋಗಲು ಸೂಚಿಸಲಾಗಿದೆ.

     

    ಈ ಮೇಲ್ಸೇತುವೆ ದೋಷದಿಂದ ಟ್ರಾಫಿಕ್ ನಲ್ಲಿ ಅಂಬುಲೆನ್ಸ್ ಸಿಲುಕಿ ಪರದಾಡಿದೆ. 7-8 ಕಿ.ಮೀವರೆಗೆ ಟ್ರಾಫಿಕ್ ಜಾಮ್ ಆಗಿದೆ. ದುರಸ್ತಿ ಕಾರ್ಯಕ್ಕೆ ಅಂದಾಜು 6 ದಿನ ಬೇಕಾಗಿರುವ ಕಾರಣ ಅಲ್ಲಿಯವರೆಗೂ ಫ್ಲೈಓವರ್‌ ಮೇಲಿನ ರಸ್ತೆ ಸಂಚಾರವನ್ನು ಬಂದ್‌ ಮಾಡಲಾಗುತ್ತದೆ ಎಂದು ಪೀಣ್ಯ ಸಂಚಾರ ಪೊಲೀಸರು ತಿಳಿಸಿದ್ದಾರೆ.

  • ನೆಲಮಂಗಲದಲ್ಲಿ ಮಂಗಳಮುಖಿ ಆತ್ಮಹತ್ಯೆ – ಪೊಲೀಸರಿಂದ ತನಿಖೆ

    ನೆಲಮಂಗಲದಲ್ಲಿ ಮಂಗಳಮುಖಿ ಆತ್ಮಹತ್ಯೆ – ಪೊಲೀಸರಿಂದ ತನಿಖೆ

    ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ ಟೋಲ್ ಬಳಿ ಹಮಾಮ್ ನಡೆಸಿ ಜೀವನ ನಿರ್ವಹಿಸುತ್ತಿದ್ದ ಮಂಗಳಮುಖಿ, ತಾನು ವಾಸವಿದ್ದ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರಸಭೆ ವ್ಯಾಪ್ತಿಯ ಜಕ್ಕಸಂದ್ರ ಗ್ರಾಮದ ನಿವಾಸಿ ಮಾಯಾ(33) ಮೃತ ಮಂಗಳಮುಖಿ. ಮಾಯಾ ಅವರನ್ನು ಹೊಳೆನರಸೀಪುರದ ನೇರಳಿ ಗ್ರಾಮದ ಮೂಲದವರು ಎನ್ನಲಾಗುತ್ತಿದೆ. ಮಾಯಾ ಕಳೆದ 3 ವರ್ಷದಿಂದ ಚಕ್ಕಸಂದ್ರ ಗ್ರಾಮದ ನಿವಾಸಿ ಜಯಮ್ಮ ಎಂಬವರ ಮನೆಯನ್ನ ಬಾಡಿಗೆ ಪಡೆದು ವಾಸವಾಗಿದ್ದರು. ಇದನ್ನೂ ಓದಿ: ರಾಜ್ ಕುಟುಂಬದಲ್ಲಿ 20-23 ವರ್ಷಕ್ಕೆ ಮತ್ತೊಬ್ಬ ಸೂಪರ್ ಸ್ಟಾರ್ ಹುಟ್ಟಿಬರ್ತಾನೆ: ಜಗ್ಗೇಶ್

    ರಾ.ಹೆದ್ದಾರಿ ತುಮಕೂರು ರಸ್ತೆಯ ಜಾಸ್ ಟೋಲ್ ಬಳಿ ಹಮಾಮ್ ನಡೆಸುತ್ತಿದ್ದು, ಇಂದು ಬೆಳಿಗ್ಗೆ ಬಾಗಿಲು ತೆಗೆಯದ ಕಾರಣ ಪಕ್ಕದ ಮನೆಯ ನಿವಾಸಿ, ಮನೆಯ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಬಂದು ಮನೆಯ ಕಿಟಕಿಯಲ್ಲಿ ನೋಡಿದ್ದಾಗ ಕೋಣೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಕೂಡಲೇ ನೆಲಮಂಗಲ ಟೌನ್ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ನೆಲಮಂಗಲ ಟೌನ್ ಪೊಲೀಸರು ಬಾಗಿಲು ಒಡೆದು ಪರಿಶೀಲನೆ ನಡೆಸಿದರು. ನಂತರ ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಭೇಟಿಯಾದ ಸಚಿನ್

  • ಮಳೆಗಾಗಿ ಭಕ್ತನಿಂದ ಪ್ರಾರ್ಥನೆ – ಹೂ ಪ್ರಸಾದ ನೀಡಿದ ಆಂಜನೇಯ

    ಮಳೆಗಾಗಿ ಭಕ್ತನಿಂದ ಪ್ರಾರ್ಥನೆ – ಹೂ ಪ್ರಸಾದ ನೀಡಿದ ಆಂಜನೇಯ

    ಬೆಂಗಳೂರು/ನೆಲಮಂಗಲ: ಮಳೆಗಾಗಿ ಹನುಮನ ಭಕ್ತರೊಬ್ಬರು ಆಂಜನೇಯನಿಗೆ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಭಕ್ತಿಗೆ ಮೆಚ್ಚಿದ ಆಂಜನೇಯ ಭಕ್ತನಿಗೆ ಹೂವನ್ನು ಪ್ರಸಾದವಾಗಿ ನೀಡಿದ್ದಾನೆ.

    ಹಳೇ ಮೈಸೂರು ಭಾಗದಲ್ಲಿ ವರುಣನ ಕಣ್ಣಾಮುಚ್ಚಾಲೆ ಆಟದಿಂದ ಕೇವಲ ಸಾಧಾರಣವಾಗಿ ಮಳೆಯಾಗುತ್ತಿದೆ. ಈ ನಡುವೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನಲ್ಲಿ ಕೂಡ ರೈತರು ಬೆಳೆದಿರುವ ನಾನಾ ಬೆಳೆಗಳು ಉತ್ತಮ ಮಳೆಯಿಲ್ಲದೇ ಒಣಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಮಳೆಗಾಗಿ ಹನುಮ ಭಕ್ತರೊಬ್ಬರು ಬೆಟ್ಟದ ಆಂಜನೇಯನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ತುಂಬಾ ಮಿಸ್ ಮಾಡ್ಕೊಳ್ತೇನೆ – ಐಟಿ ಅಧಿಕಾರಿಗಳಿಗೆ ಹೇಳಿದ್ರಂತೆ ಸೋನು ಸೂದ್

    ಪುರಾತನ ಇತಿಹಾಸ ಇರುವ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಬಳಿಯ ನಿಜಗಲ್ಲು ಸಿದ್ದರಬೆಟ್ಟದ ಆಂಜನೇಯ ಸ್ವಾಮಿಯ ಮುಂದೆ ಮಳೆಗಾಗಿ ಮೂರು ದಿನದಿಂದ ನಿರಂತರ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ ಭಕ್ತನಿಗೆ ಆಂಜನೇಯ ಹೂ ಪ್ರಸಾದವನ್ನು ನೀಡಿ ಅಚ್ಚರಿ ಮೂಡಿಸಿದ್ದಾನೆ. ಇನ್ನೂ ಬಲಗಡೆ ಹೂ ಪ್ರಸಾದ ನೀಡುವ ಮೂಲಕ ವಿಸ್ಮಯ ನಡೆದಿದೆ ಎಂದು ನಂಬಿರುವ ಭಕ್ತರು ಹಾಗೂ ರೈತರು ಮಳೆಯ ಮುನ್ಸೂಚನೆ ಸಿಕ್ಕಿದೆ ಎಂದು ಸಂತಸಗೊಂಡಿದ್ದಾರೆ. ಇದನ್ನೂ ಓದಿ: ರಸ್ತೆಬದಿ ದಹಿ ಕಚೋರಿ ಮಾರುವ 14ರ ಬಾಲಕನ ಭಾವನಾತ್ಮಕ ಕಥೆ

  • ಬಕ್ರೀದ್ ಹಬ್ಬ -ಸಮುದಾಯದ ಮುಖಂಡರ ಜೊತೆಗೆ ಪೊಲೀಸರ ಶಾಂತಿ ಸಭೆ

    ಬಕ್ರೀದ್ ಹಬ್ಬ -ಸಮುದಾಯದ ಮುಖಂಡರ ಜೊತೆಗೆ ಪೊಲೀಸರ ಶಾಂತಿ ಸಭೆ

    ನೆಲಮಂಗಲ: ಬಕ್ರೀದ್ ಹಬ್ಬದ ಹಿನ್ನೆಲೆ ಸಮುದಾಯದ ಮುಖಂಡರ ಜೊತೆಗೆ ನೆಲಮಂಗಲ ಪೊಲೀಸರ ಶಾಂತಿ ಸಭೆ ನಡೆಸಿದ್ದಾರೆ.

    ಕೊರೊನಾ ಸೋಂಕಿನ ಆತಂಕದ ನಡುವೆ ಪವಿತ್ರವಾದ ಬಕ್ರೀದ್ ಹಬ್ಬ ಆಚರಣೆ ಸರ್ಕಾರ ಹೀಗಾಗಲೇ ಸಾಕಷ್ಟು ನಿಯಮಗಳನ್ನ ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಹೊರವಲಯ ನೆಲಮಂಗಲ ಉಪ ವಿಭಾಗದ ಎರಡು ಸಮುದಾಯದ ಮುಖಂಡರ ಸಭೆಯನ್ನ ನೆಲಮಂಗಲ ಡಿವೈಎಸ್ ಪಿ ಜಗದೀಶ್ ನೇತೃತ್ವದಲ್ಲಿ ನಡೆಸಲಾಗಿದೆ.

    ನಗರದ ಖಾಸಗಿ ಸಮುದಾಯ ಭವನದಲ್ಲಿ ಈ ಸಭೆಯನ್ನ ನಡೆಸಿದ್ದು, ನೂರಾರು ಮುಖಂಡರು ಭಾಗವಹಿಸಿದ್ದರು, ಈ ವೇಳೆ ಹಬ್ಬ ಆಚರಣೆ ವೇಳೆ ಸಾಮಾಜಿಕ ಅಂತರ, ಮಾಸ್ಕ್, ಗುಂಪು ಸೇರದಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು. ಇದನ್ನೂ ಓದಿ: ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಖ್ಯಾತ ನಟನ ಪುತ್ರಿ

    ಪವಿತ್ರ ಬಕ್ರೀದ್ ಹಬ್ಬದಲ್ಲಿ ದಾನ ಧರ್ಮ ಮಾಡುವಾಗ ಎಚ್ಚರಿಕೆ ವಹಿಸಿ ಹಾಗೂ ಕೊರೊನಾ ನಿಯಮಗಳನ್ನ ಪಾಲಿಸಿ ಎಂದು ನೆಲಮಂಗಲ ಉಪ ವಿಭಾಗದ ಡಿವೈಎಸ್ ಪಿ ಜಗದೀಶ್ ಹೇಳಿದರು. ಈ ವೇಳೆ ಸಿಪಿಐಗಳಾದ ಕುಮಾರ್, ಮಂಜುನಾಥ್, ಹರೀಶ್, ಅರುಣ್ ಕುಮಾರ್ ಸಾಲಂಕಿ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

  • ಲಾಕ್ ಡೌನ್ ನಡುವೆ ಎಂಜಿನಿಯರಿಂಗ್ ಪದವೀಧರನಿಂದ ಮೀನು ಕೃಷಿಯಲ್ಲಿ ವಿನೂತನ ಸಾಧನೆ

    ಲಾಕ್ ಡೌನ್ ನಡುವೆ ಎಂಜಿನಿಯರಿಂಗ್ ಪದವೀಧರನಿಂದ ಮೀನು ಕೃಷಿಯಲ್ಲಿ ವಿನೂತನ ಸಾಧನೆ

    ನೆಲಮಂಗಲ: ಕೋವಿಡ್ ಅಲೆಗಳಿಗೆ ತತ್ತರಿಸಿದ ಹಲವಾರು ನಗರ ಜನತೆ ಹಳ್ಳಿಯತ್ತ ಮುಖಮಾಡಿದ್ದಾರೆ. ಇದೇ ಹಾದಿಯಲ್ಲಿ ವಿದ್ಯಾವಂತ ಯುವಕರು ಸ್ವಯಂ ಕೃಷಿಯತ್ತ ಮನಸ್ಸು ಮಾಡಿ ಸಾಧನೆ ಮಾಡಿ ಸಾಧಕರಾಗಿದ್ದಾರೆ. ತುಮಕೂರಿನ ಕೈಗಾರಿಕಾ ವ್ಯವಹಾರ ಅಧ್ಯಯನದಲ್ಲಿ ಎಂಜಿನಿಯರ್ ಪದವಿ ಪಡೆದಿದ್ದ ಯುವಕೊರಬ್ಬರು ಮೀನು ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ.

    ವಿವೇಕ್ ಕುಮಾರ್ ನೆಲಮಂಗಲ ತಾಲೂಕಿನ ಮುದ್ದರಾಮನಾಯ್ಕನ ಪಾಳ್ಯದ ಬಳಿಯ, ಸೈನಿಕ ವಸತಿ ಸಮುಚ್ಚಯದ ಪಕ್ಕದಲ್ಲಿ ಜಮೀನು ಪಡೆದು ಮೂರು ದೊಡ್ಡ ತೊಟ್ಟಿಗಳಲ್ಲಿ ಮೀನಿನ ಕೃಷಿ ಮಾಡಿ, ವರ್ಷಕ್ಕೆ ಸರಾಸರಿ 12 ಟನ್ ಮೀನು ಮಾರಾಟ ಮಾಡಿ ಲಕ್ಷ, ಲಕ್ಷ ಆದಾಯ ಗಳಿಸುತ್ತಿದ್ದಾರೆ.

    ಗಿಫ್ಟ್ ಥಿಲೋಪಿಯಾ ಮೀನು ವರದಾನವಾಗಿದ್ದು, ರಿಸರ್ಕಿಯೊಲೇಟಿಂಗ್ ಅಕ್ವಾ ಸಿಸ್ಟಂ ಎಂಬ ನೂತನ ತಂತ್ರಜ್ಞಾನ ಬಳಸಿ, ಮೂರು ತೊಟ್ಟಿಗಳಿಗೂ ಸ್ವಯಂ ಪೆಂಡಂಟಿಂಗ್ ಪಡೆದು, ಈ ಗಿಫ್ಟ್ ಥಿಲಿಪಿಯಾ ಎಂಬ ಮೀನನ್ನು ಮಾರುಕಟ್ಟೆಗೆ ನೀಡುತ್ತಿದ್ದಾರೆ. ಈ ಮೀನು ವಾಸ ಮಾಡುವ ನೀರಿನಲ್ಲಿ ಸುಮಾರು 14 ವಿವಿಧ ತ್ಯಾಜ್ಯಗಳನ್ನು ಬಿಡುವುದರಿಂದ, ಈ ನೀರಿನಲ್ಲಿ ಕೃಷಿ ಬೆಳೆಗಳನ್ನು ಬೆಳೆಯಲು ಸಾಕಷ್ಟು ಅನುಕೂಲಕರವಾಗಿದೆ. ಮುಂದಿನ ದಿನಗಳಲ್ಲಿ ಈ ಮೀನಿನ ಜೊತೆ ಸ್ವಯಂ ಕೃಷಿ ಸಹ ಮಾಡುತ್ತೇನೆ ಎಂದು ವಿವೇಕ್ ಕುಮಾರ್ ತಿಳಿಸಿದ್ದಾರೆ.

    ಆರ್.ಎ.ಎಸ್.( ರಿಸರ್ಕಿಯೊಲೇಟಿಂಗ್ ಅಕ್ವಾ ಸಿಸ್ಟಂ) ಬಳಸಿಕೊಂಡ ನಂತರ ಉತ್ಪಾದನಾ ವೆಚ್ಚವನ್ನು 200-220 ರೂಪಾಯಿಯಿಂದ 80 ರಿಂದ 100 ರೂಪಾಯಿಗಳಿಗೆ ಇಳಿಸಿದ್ದೇವೆ. ಸ್ಥಳೀಯವಾಗಿ ಸಹ ಮೀನಿನ ಮಾರಾಟ ಮಾಡುತ್ತೇವೆ. ಜೊತೆಗೆ ಸಗಟು ಮಾರಾಟ ಮಾಡುತ್ತೇವೆ. ಜಿ.ಐ.ಎಫ್.ಟಿ. ಥಿಲಪಿಯಾ ತಳಿ: ಜನಟೀಕಲಿ-ಇಂಪರ್ ವುಡ- ಫಾಮಿರ್ಂಗ್- ಟೆಕ್ನಾಲಜಿ, ಗಿಫ್ಟ್ ಥಿಲಪಿಯಾ ಮೀನಿನ ವಿಸ್ತøತ ರೂಪವಾಗಿದ್ದು, ಪ್ರಾರಂಭದಲ್ಲೇ ಈ ಮೀನುಗಳು, ಹೊಸ ತಳಿ ಶಾಸ್ತ್ರ, ಹಾಗೂ ಒಂದು ವರ್ಷದ ಕಾಲ ಈ ಮೀನುಗಳು ಗಂಡು-ಹೆಣ್ಣು ಭೇದವಿಲ್ಲದೆ, ಬೆಳೆಯುವುದರಿಂದ ಅಧಿಕ ಇಳುವರಿ ಬರುತ್ತದೆ ಮತ್ತು ಹೊಸ ಅವಿಷ್ಕಾರ ಮುಂದಿನ ಹೊಸ ಯೋಜನೆಗಳಿಗೂ ದಾರಿ ಮಾಡಿಕೊಡುತ್ತದೆ ಎಂದಿದ್ದಾರೆ.

    ಮೀನು ಮಾರಾಟ ಬಲು ಜೋರು: ಸ್ಥಳೀಯವಾಗಿ ವಾರದಲ್ಲಿ ಎರಡು ದಿನ ಮಾರಾಟ ಮಾಡುವ ಈ ಮೀನು ಕೆಜಿಗೆ 200 ರೂಪಾಯಿವರೆಗೆ ಮಾರಾಟವಾಗುತ್ತದೆ. ಇನ್ನೂ ಇದೇ ಜಾಗಕ್ಕೆ ಬಂದು ಸಗಟು ಮಾರಾಟಗಾರರು ಟನ್ ಗಟ್ಟಲೆ ಮೀನು ಖರೀದಿಸುವವರಿಗೆ 150 ರೂಪಾಯಿ ಕೆಜಿಗೆ ನೀಡುತ್ತೇವೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಯಪ್ರವೃತ್ತರಾಗಿ ಹೊಸ ಮಾರಾಟದ ಆಪ್ ಸಿದ್ದಪಡಿಸುತ್ತಿದ್ದು, ಜೀವಂತ ಮೀನುಗಳನ್ನು ತುಮಕೂರಿಗೆ ಮಂಜುಗಡ್ಡೆ ಮುಖಾಂತರ ಸಾಗಿಸಿ ಮಾರಾಟ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಧಾರಕಾರ ಮಳೆ – ಧುಮ್ಮುಕ್ಕಿ ಹರಿಯುತ್ತಿದೆ ಜಲಧಾರೆಗಳು

  • ನೆಲಮಂಗಲ ಪೊಲೀಸರ ಭರ್ಜರಿ ಕಾರ್ಯಾಚರಣೆ – 1.08 ಕೋಟಿ ಮೌಲ್ಯದ ಚಿನ್ನ, ನಗದು ವಶ

    ನೆಲಮಂಗಲ ಪೊಲೀಸರ ಭರ್ಜರಿ ಕಾರ್ಯಾಚರಣೆ – 1.08 ಕೋಟಿ ಮೌಲ್ಯದ ಚಿನ್ನ, ನಗದು ವಶ

    ನೆಲಮಂಗಲ: ನೆಲಮಂಗಲ ಉಪವಿಭಾಗ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ವಿವಿಧ ಪ್ರಕರಣವನ್ನ ಭೇದಿಸಿ ಜನರು ಹಾಗೂ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಕಳೆದ ಜನವರಿ ಹಾಗೂ ಲಾಕ್ ಡೌನ್ ಸಮಯದಲ್ಲಿ ಮನೆಗಳ ಕಳವು, ಹೆದ್ದಾರಿಯಲ್ಲಿ ದರೋಡೆ, ಸುಲಿಗೆ, ಸರಗಳ್ಳತನ, ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಬರೋಬ್ಬರಿ 1 ಕೋಟಿ 8 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಲಕ್ಷಾಂತರ ರೂ. ಹಣವನ್ನ ವಶ ಪಡಿಸಿಕೊಂಡಿದ್ದು, ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ನೇತೃತ್ವದಲ್ಲಿ ಸಿಬ್ಬಂದಿಗೆ ಪ್ರಶಂಸೆ ನೀಡಲಾಯಿತು. ಇದನ್ನು ಓದಿ: ಕೊರೊನಾ ನಿಯಮ ಮರೆತು ಲಸಿಕೆಗೆ ಮುಗಿಬಿದ್ದ ಜನರು

    ಇದೇ ವೇಳೆ ಚಿನ್ನಾಭರಣ, ಹಣ ಕಳೆದುಕೊಂಡ ಜನರಿಗೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ವಾಪಸ್ ನೀಡಿದರು. ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ.ಚನ್ನಣ್ಣವರ್, ಎಎಸ್ಪಿ ಲಕ್ಷ್ಮಿ ಗಣೇಶ್, ಡಿವೈಎಸ್ ಪಿ ಜಗದೀಶ್ ವೃತ್ತ ನಿರೀಕ್ಷಿತರಾದ ಕುಮಾರ್, ಹರೀಶ್, ಮಂಜುನಾಥ್, ಅರುಣ್, ಉಪ ವಿಭಾಗದ ಪಿಎಸ್‍ಐ ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ವೇಳೆ ಅಪರಾಧ ವಿಭಾಗದಲ್ಲಿ ಪ್ರಕರಣ ಭೇದಿಸಿದ ಸಿಬ್ಬಂದಿಗೆ ಪ್ರಶಂಸೆ ಪತ್ರವನ್ನ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನು ಓದಿ: ಇಬ್ಬರು ಮನೆಗಳ್ಳರ ಬಂಧನ- ಭಾರೀ ಪ್ರಮಾಣ ಚಿನ್ನಾಭರಣ, ನಗದು ವಶ

  • ಮದುವೆಯಾಗಬೇಕಾದವಳು ಮಸಣಕ್ಕೆ – ಕಾಣೆಯಾದ ಯುವತಿ ಕೊಳೆತ ಶವವಾಗಿ ಪತ್ತೆ

    ಮದುವೆಯಾಗಬೇಕಾದವಳು ಮಸಣಕ್ಕೆ – ಕಾಣೆಯಾದ ಯುವತಿ ಕೊಳೆತ ಶವವಾಗಿ ಪತ್ತೆ

    – ಅನುಮಾನಾಸ್ಪದವಾಗಿ ಸಿಕ್ತು ಮೃತದೇಹ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಾಣೆಯಾದ ಯುವತಿ ಕೊಳೆತ ಶವವಾಗಿ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಬಳಿಯ ಕೆರೆಯಲ್ಲಿ ಪತ್ತೆಯಾಗಿದ್ದಾಳೆ.

    ಹೌದು ಬೆಂಗಳೂರಿನ ಆಂಧ್ರಹಳ್ಳಿ ನಿವಾಸಿ ದೀಪ ಶವವಾಗಿ ಪತ್ತೆ ಯಾಗಿದ್ದಾಳೆ. ದೀಪ ಬಾವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗುತ್ತಿದೆ. ಮದುವೆ ಫಿಕ್ಸ್ ಆಗುತ್ತಿದ್ದಂತೆ ಅಕ್ರಮ ಸಂಬಂಧ ಬಯಲಿಗೆ ಬರುತ್ತದೆ ಅಥವಾ ನಾದಿನಿ ಕೈ ತಪ್ಪಿ ಹೊಗುತ್ತಾಳೆ ಎಂದು ಬಾವನೇ ಕೊಲೆ ಮಾಡಿರಬಹುದಾ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ.

    ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ. ರವಿ.ಡಿ.ಚನ್ನಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭದ್ರಾವತಿ ಮೂಲದ ಪುನೀತ್‍ನ ಜೊತೆ ಮೃತ ದೀಪಳ ಮದುವೆಗೆ ಕುಟುಂಬಸ್ಥರು ಈಗಾಗಲೇ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಆದರೆ ವಿಪರ್ಯಾಸ ಎಂಬಂತೆ ದೀಪ ಶವವಾಗಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತಪಡಿಸಿರುವ ಪೋಷಕರು ತನಿಖೆಗೆ ಒತ್ತಾಯಿಸಿದ್ದಾರೆ.

    ಈ ಸಂಬಂಧ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಇದೀಗ ಶವವನ್ನು ಕೊರೊನಾ ಪರೀಕ್ಷೆ ಕಳುಹಿಸಲಾಗಿದೆ. ಕೊಲೆ ಮತ್ತು ಕೊರೊನಾ ಮಧ್ಯೆ ಆತಂಕದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಭಯದಲ್ಲಿ ಈಗ ಕಾಲ ಕಳೆಯವಂತಾಗಿದೆ.

  • ಧರೆಗುರುಳಿದ 5 ವರ್ಷಗಳ ಹಿಂದೆ ನಿರ್ಮಿಸಿದ್ದ ಬೃಹತ್ ವಾಟರ್ ಟ್ಯಾಂಕ್

    ಧರೆಗುರುಳಿದ 5 ವರ್ಷಗಳ ಹಿಂದೆ ನಿರ್ಮಿಸಿದ್ದ ಬೃಹತ್ ವಾಟರ್ ಟ್ಯಾಂಕ್

    ಬೆಂಗಳೂರು: ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಬೃಹತ್ ಓವರ್ ಹೆಡ್ ಟ್ಯಾಂಕ್ ನೆಲಸಮವಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಬಿದಲೂರು ಗ್ರಾಮದಲ್ಲಿ ಘಟನೆ ನಡೆದಿದೆ.

    ಬಿದಲೂರು ಗ್ರಾಮದಲ್ಲಿ 2013-14ನೇ ಸಾಲಿನಲ್ಲಿ ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ನಿರ್ಮಾಣವಾದ ಟ್ಯಾಂಕ್ ಇದಾಗಿದೆ. ಕಳೆದ ಐದು ವರ್ಷಗಳ ಹಿಂದೆ ಟ್ಯಾಂಕ್ ನಿರ್ಮಾಣವಾಗಿತ್ತು. ಆದರೆ ದಿಢೀರನೇ ವಾಟರ್ ಟ್ಯಾಂಕರ್ ಉರುಳಿ ಬಿದ್ದ ಪರಿಣಾಮ ಕಳಪೆ ಕಾಮಗಾರಿ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಡೀ ಗ್ರಾಮಕ್ಕೆ ನಿರುಣಿಸುತ್ತಿದ್ದ ಓವರ್ ಹೆಡ್ ಟ್ಯಾಂಕ್ ಇದ್ದಾಗಿತ್ತು. ಸುಮಾರು 50 ಸಾವಿರ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ಇದೀಗ ಉರುಳಿಬಿದ್ದಿದೆ. ಇದರಿಂದ ಗ್ರಾಮಕ್ಕೆ ನೀರಿನ ಅಭಾವ ಉಂಟಾಗಿದೆ. ಬಿದಲೂರು ಗ್ರಾಮ ಪಂಚಾಯತಿ ಸದಸ್ಯ ರವಿಕುಮಾರ್ ಕಾಮಗಾರಿ ಗುತ್ತಿಗೆ ನಡೆಸಿದ್ದರು ಎನ್ನಲಾಗಿದೆ.

    ಒಂದೆಡೆ ಬೇಸಿಗೆ, ಮತ್ತೊಂದೆಡೆ ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಜನರು ಪರಿತಪ್ಪಿಸುವಂತಾಗಿದೆ. ಕೂಡಲೇ ಅಧಿಕಾರಿಗಳು ಗ್ರಾಮಕ್ಕೆ ನೀರಿನ ಸಮಸ್ಯೆ ಬಗ್ಗೆ ಗಮನಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಶೂ ಒಳಗೆ ಹಾವು- ಲಾಕ್‍ಡೌನ್‍ನಲ್ಲಿ ಶೂ ಹಾಕೋ ಮುನ್ನ ಎಚ್ಚರವಿರಲಿ

    ಶೂ ಒಳಗೆ ಹಾವು- ಲಾಕ್‍ಡೌನ್‍ನಲ್ಲಿ ಶೂ ಹಾಕೋ ಮುನ್ನ ಎಚ್ಚರವಿರಲಿ

    ನೆಲಮಂಗಲ: ಲಾಕ್‍ಡೌನ್ ವೇಳೆ ಮನೆಯಲ್ಲಿ ಇರುವ ಶೂಗಳನ್ನು ಮತ್ತೆ ಧರಿಸುವಾಗ ಸ್ವಲ್ಪ ಜಾಗರೂಕತೆಯಿಂದ ಇರುವುದು ಒಳ್ಳೆಯದು. ಯಾಕೆಂದರೆ ಅದರಲ್ಲಿ ಹಾವು ಇರುವ ಸಾಧ್ಯತೆಗಳು ಇರುತ್ತದೆ.

    ಲಾಕ್‍ಡೌನ್ ವೇಳೆ ಧರಿಸದೇ ನಿಮ್ಮ ಮನೆಯ ಮುಂದೆ ಬಿಟ್ಟಿರುವ ಶೂಗಳನ್ನ ಒಮ್ಮೆ ಪರೀಕ್ಷಿಸಿ ಹಾಕಿಕೊಳ್ಳಬೇಕು. ಏಕೆಂದರೆ ಬೇಸಿಗೆ ಕಾಲವಾದ್ದರಿಂದ ಶೂ ಒಳಗೆ ಹಾವುಗಳು ಬಂದು ಆಶ್ರಯ ಪಡೆದಿರುವ ಸಾಧ್ಯತೆಗಳು ಹೆಚ್ಚಾಗಿ ಇದೆ. ಇದೇ ರೀತಿಯ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದವಾರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ನಿವಾಸಿ ಮನೋಹರ್ ಅವರ ಮನೆಯ ಹೊರಗಿದ್ದ ಶೂ ಒಳಗೆ ಸೇರಿಕೊಂಡಿದ್ದ ನಾಗರ ಹಾವುನ್ನು ಕಂಡು ಜನ ಭಯಭೀತರಾಗಿದ್ದಾರೆ. ನಂತರ ಸ್ನೇಕ್ ಶ್ರೀನಿವಾಸ್ ಅವರು ಸ್ಥಳಕ್ಕೆ ಬಂದು ಹಾವುವನ್ನು ರಕ್ಷಣೆ ಮಾಡಿದ್ದಾರೆ. ಹಾವಿನ ರಕ್ಷಣೆಯಿಂದ ಮನೆಯವರು ನಿಟ್ಟಿಸುರು ಬಿಟ್ಟಿದ್ದಾರೆ. ಲಾಕ್‍ಡೌನ್ ವೇಳೆ ಮನೆಯಲ್ಲಿರುವ ಜನರೇ ಒಮ್ಮೆ ನಿಮ್ಮ ವಸ್ತುಗಳನ್ನ ಪರೀಕ್ಷಿಸಿ ಜಾಗರೂಕತೆಯಿಂದ ಧರಿಸಬೇಕು ಎಂಬುದಕ್ಕೆ ಈ ವರದಿ ಸಾಕ್ಷಿಯಾಗಿದೆ.