Tag: nelemangala

  • ನೆಲಮಂಗಲ ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ NSTSE ಪರೀಕ್ಷೆ

    ನೆಲಮಂಗಲ ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ NSTSE ಪರೀಕ್ಷೆ

    ನೆಲಮಂಗಲ: ಭವಿಷ್ಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಯುವ ವಿಜ್ಞಾನಿಗಳನ್ನು ಹುಡುಕುವ ಸಲುವಾಗಿ ದೇಶದಲ್ಲಿ ಜಾರಿಯಲ್ಲಿರುವ ಎನ್‍ಎಸ್‍ಟಿಎಸ್‍ಇ (National Science Talent Search Exam) ಪರೀಕ್ಷೆ ಇಂದು ಥಾಮಸ್ ಮೆಮೊರಿಯಲ್ ಶಾಲೆಯಲ್ಲಿ ಪ್ರಾರಂಭವಾಯಿತು.

    ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದ ಥಾಮಸ್ ಮೆಮೂರಿಯಲ್ ಶಾಲೆಯ 128 ವಿದ್ಯಾರ್ಥಿಗಳು ಇಂದು ಪರೀಕ್ಷೆಯಲ್ಲಿ ಪಾಲ್ಗೊಂಡರು. ರಾಷ್ಟ್ರೀಯ ಮಟ್ಟದ ಪ್ರತಿಭೆ ಗುರುತಿಸುವ ಪರೀಕ್ಷೆ ಇದಾಗಿದ್ದು, ಮಕ್ಕಳಲ್ಲಿ ಶಾಲಾ ಹಂತದಿಂದಲೇ ವೈಜ್ಞಾನಿಕ ಪರಿಕಲ್ಪನೆ ಬೆಳೆಸುವ ಉದ್ದೇಶವಾಗಿದೆ.

    ಕಳೆದ ಬಾರಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿನಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಚಾಲನೆ ನೀಡಿದಳು. ಎಲ್ಲಾ ಮಕ್ಕಳೊಂದಿಗೆ ಸಾಮೂಹಿಕ ಪ್ರಾರ್ಥನೆ ಮಾಡಿ ಪರೀಕ್ಷೆ ಪ್ರಾರಂಭಿಸಲಾಯಿತು. ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಎಲ್ಲಾ ವೆಚ್ಚವನ್ನು ಕೇಂದ್ರ ಪರೀಕ್ಷಾ ಮಂಡಳಿ ಭರಿಸಲಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಪ್ರಥಮ ಪರೀಕ್ಷಾ ಕೇಂದ್ರ ಈ ಶಾಲೆಯಲ್ಲಿ ನಡೆಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಮಕ್ಕಳೆಲ್ಲರೂ ಉತ್ತಮ ಅಂಕಗಳಿಸುವತ್ತ ಅಭ್ಯಾಸ ನಡೆಸಲಿ ಎಂದು ಸಂಸ್ಥೆಯ ನಿರ್ದೇಶಕ ವಿನೋದ್ ಹಾಗೂ ರವಿ ಶುಭ ಕೋರಿದರು. ಪರೀಕ್ಷೆಯು ಅತ್ಯಾಧುನಿಕ ಶೈಲಿಯಲ್ಲಿ ಒ.ಎಂ.ಆರ್ ಪ್ರಶ್ನೆ ಪತ್ರಿಕೆ ಮೂಲಕ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಿದ್ದು ಕಂಡುಬಂದಿತು.

  • ಹೊತ್ತಿ ಉರಿದ ಕೆಮಿಕಲ್ ಕಾರ್ಖಾನೆ- ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

    ಹೊತ್ತಿ ಉರಿದ ಕೆಮಿಕಲ್ ಕಾರ್ಖಾನೆ- ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

    ಬೆಂಗಳೂರು: ಆಕಸ್ಮಿಕವಾಗಿ ಬೆಂಕಿ ತಗುಲಿ ಕೆಮಿಕಲ್ ಕಾರ್ಖಾನೆ ಹೊತ್ತಿ ಉರಿದ ಘಟನೆ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಕ್ಷಣ ಕ್ಷಣಕ್ಕೂ ಬೆಂಕಿ ಹೆಚ್ಚಾಗಿ ಸಿಲಿಂಡರ್ ಸ್ಫೋಟಗೊಂಡಿವೆ. ಬೆಂಕಿ ನಂದಿಸಲು ಪೀಣ್ಯ, ಯಶವಂತಪುರ, ತುಮಕೂರುನಿಂದ ಅಗ್ನಿಶಾಮಕ ವಾಹನಗಳು ಬಂದಿದ್ವು. ಲಿಯೋನಿಡ್ ಕೆಮಿಕಲ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಕೆಮಿಕಲ್ ಹಾಗೂ ಇನ್ನಿತರೆ ವಸ್ತುಗಳು ಸುಟ್ಟು ಭಸ್ಮವಾಗಿದೆ.

    ಶಿವರಾತ್ರಿ ಹಬ್ಬವಾದುದರಿಂದ ಕಾರ್ಖಾನೆಗೆ ರಜೆ ಘೋಷಿಸಲಾಗಿತ್ತು. ಹೀಗಾಗಿ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.

  • ಸಿದ್ದರಾಮಯ್ಯ ಬೆಂಕಿಯ ಮೇಲೆ ನಡೆದು ಯಶಸ್ವಿ ಸರ್ಕಾರ ನಡೆಸಿದ್ದಾರೆ- ಜಯಮಾಲಾ

    ಸಿದ್ದರಾಮಯ್ಯ ಬೆಂಕಿಯ ಮೇಲೆ ನಡೆದು ಯಶಸ್ವಿ ಸರ್ಕಾರ ನಡೆಸಿದ್ದಾರೆ- ಜಯಮಾಲಾ

    ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ಸಿಎಂ ಸಿದ್ದರಾಮಯ್ಯನವರು ಬೆಂಕಿಯ ಮೇಲೆ ನಡೆದು, ಯಶಸ್ವಿ ಸರ್ಕಾರವನ್ನ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡೆ, ಚಿತ್ರನಟಿ ಜಯಮಾಲಾ ಹೇಳಿದ್ದಾರೆ.

    ಕಾಂಗ್ರೆಸ್ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರುವಲ್ಲಿ ಕಾರ್ಯತಂತ್ರ ಕುರಿತಂತೆ ಸೋಮವಾರ ನಗರದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಅಂತ ಕಿವಿ ಮಾತು ಹೇಳಿದ್ರು.

    ಇದೇ ವೇಳೆ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಕೂಡ ಸಭೆಯಲ್ಲಿ ವಿವರಿಸಿದ್ರು. ಸಾಕಷ್ಟು ಜನ ಮೆಚ್ಚುವಂತಹ ಯೋಜನೆಗಳನ್ನ ಜನರಿಗೆ ಮುಟ್ಟಿಸಿ ಯಶಸ್ವಿಯಾದ ನಮ್ಮ ಸರ್ಕಾರ ಒಂದು ಕಪ್ಪು ಚುಕ್ಕೆ ಇಲ್ಲದೆ ಅಧಿಕಾರವನ್ನ ನಡೆಸಿದೆ ಎಂದರು.

    ಮಹಾದಾಯಿ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕಳಕಳಿ ಇದೆ. ನಮ್ಮ ಸರ್ಕಾರ ಮಹದಾಯಿ ಹೋರಾಟದ ಪರವಿದ್ದು, ಹೋರಾಟಗಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡುವವರಿಗೆ ಸಾಯುವಾಗ ನೀರು ಸಿಗುವುದಿಲ್ಲ ಎಂಬಂತೆ ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.