Tag: Nelamngala

  • ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ – ಬೈಕ್‌ಗೆ ಬಸ್ ಡಿಕ್ಕಿ ಹೊಡೆದು ಸವಾರ ಮೃತ್ಯು

    ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ – ಬೈಕ್‌ಗೆ ಬಸ್ ಡಿಕ್ಕಿ ಹೊಡೆದು ಸವಾರ ಮೃತ್ಯು

    ನೆಲಮಂಗಲ: ದಿನೇ ದಿನೆ ಬಿಎಂಟಿಸಿ ಬಸ್‌ಗೆ (BMTC) ಬಲಿಯಾಗುತ್ತಿರುವವರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂತಹದೇ ಒಂದು ಪ್ರಕರಣ ಶನಿವಾರವೂ ನಡೆದಿದೆ. ವೇಗವಾಗಿ ಬಂದ ಬಿಎಂಟಿಸಿ ಬಸ್ ಬೈಕ್‌ಗೆ (Bike) ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆಲಮಂಗಲದಲ್ಲಿ (Nelamangala) ನಡೆದಿದೆ.

    ನೆಲಮಂಗಲ ಸಮೀಪದ ಬಿನ್ನಮಂಗಲ ಬಳಿ ಘಟನೆ ನಡೆದಿದೆ. ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಗುದ್ದಿದ್ದು, ಗುದ್ದಿದ ರಭಸಕ್ಕೆ ಬೈಕ್ ಸವಾರ ನೆಲಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ – ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

    ಈ ಹಿಂದೆ ಕಿಲ್ಲರ್ ಬಿಎಂಟಿಸಿ ಬಸ್‌ಗೆ ಎಂಜಿನಿಯರಿಂಗ್ ವಿದ್ಯಾರ್ಥಿ (Engineering Student) ಬಲಿಯಾದ ಘಟನೆ ಯಶವಂತಪುರದ ಗೋವರ್ಧನ ಬಳಿ ನಡೆದಿತ್ತು. ಗಂಗಾಧರ್ (21) ಮೃತ ವಿದ್ಯಾರ್ಥಿ. ಹೆಚ್‌ಎಎಲ್‌ಗೆ ಇಂಟರ್ನಿಶಿಪ್ ಸರ್ಟಿಫಿಕೇಟ್ ತರಲು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ, ಘಟನೆಯಲ್ಲಿ ಗಂಗಾಧರ್ ಸ್ಥಳದಲ್ಲೇ ಮೃತಪಟ್ಟಿದ್ದ. ಗಂಗಾಧರ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ, ಬಿಎಂಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಇದನ್ನೂ ಓದಿ: ಅಬ್ಬಬ್ಬಾ! ಬ್ಲೌಸ್‌ನಲ್ಲೂ ಚಿನ್ನ ಸಾಗಾಟ – ಬೆಂಗ್ಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ ಅಂದರ್‌

    ಇದಕ್ಕೂ ಮೊದಲು ಬೈಕ್‌ಗೆ ಹಿಂಬದಿಯಿಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಘಟನೆಯ ಪರಿಣಾಮ ಮೂರು ವರ್ಷದ ಮಗು (Child) ಸ್ಥಳದಲ್ಲೇ ಸಾವನ್ನಪ್ಪಿತ್ತು. ಈ ಘಟನೆ ಬೆಂಗಳೂರಿನ ಗಾರೇಪಾಳ್ಯ ಜಂಕ್ಷನ್‌ನಲ್ಲಿ ನಡೆದಿತ್ತು. ಚಾಲಕರ ವೇಗದ ಚಾಲನೆಯೇ ಈ ರೀತಿಯಾದ ಘಟನೆಗಳಿಗೆ ಮೂಲ ಕಾರಣ ಎಂದು ಜನರು ಆರೋಪಿಸುತ್ತಿದ್ದಾರೆ.  ಇದನ್ನೂ ಓದಿ: ಸಾಮಾಜಿಕ ಬಹಿಷ್ಕಾರದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಸ್ತೆ ಅಗಲೀಕರಣಕ್ಕೆ ಮರಗಳ ಕಟಾವು – ಸಿಡಿದೆದ್ದ ಪರಿಸರ ಪ್ರೇಮಿಗಳು

    ರಸ್ತೆ ಅಗಲೀಕರಣಕ್ಕೆ ಮರಗಳ ಕಟಾವು – ಸಿಡಿದೆದ್ದ ಪರಿಸರ ಪ್ರೇಮಿಗಳು

    ಬೆಂಗಳೂರು: ರಾಜ್ಯದ 17 ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ನೆಲಮಂಗಲ (Nelamangala) ತಾಲೂಕು ಸದಾ ವಾಹನಗಳಿಂದ ಗಿಜಿಗುಡುವ, 24*7 ವಾಹನಗಳು ಸಂಚರಿಸುವ ಹೆದ್ದಾರಿ (Highway). ಇದೀಗ ಈ ಹೆದ್ದಾರಿಯನ್ನು ಅಗಲೀಕರಣಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದ್ದು ರಸ್ತೆ ಬದಿಯಲ್ಲಿದ್ದ ಮರಗಳನ್ನು (Trees) ಕಟಾವು ಮಾಡಲಾಗಿದೆ ಇದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ (Green Activists) ಗುರಿಯಾಗಿದೆ.

    ವಾಹನಗಳ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆ ಸುಗಮ ಸಂಚಾರಕ್ಕೆ ಹಾಗೂ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಮುಂದಾಗಿದೆ. ರಸ್ತೆ ಅಗಲೀಕರಣದ ಉದ್ದೇಶದಿಂದ ರಸ್ತೆ ಬದಿಯ ಬೃಹತ್ ಮರಗಳನ್ನು ಯಂತ್ರಗಳ ಮೂಲಕ ಕಟಾವು ಮಾಡಲಾಗುತ್ತಿದೆ. ಇದಕ್ಕೆ ಪರಿಸರ ಪ್ರೇಮಿಗಳ ವಿರೋಧ ವ್ಯಕ್ತವಾಗಿದೆ. ಇದನ್ನೂ ಓದಿ: UP ಬಿಜೆಪಿ ಶಾಸಕನ ತಾಯಿಯ ಕಿವಿ ಕತ್ತರಿಸಿ ಓಲೆ ಕದ್ದ ಕಳ್ಳರು

    ರಸ್ತೆ ಬದಿಯಲ್ಲಿದ್ದ ನೂರಾರು ಮರಗಳನ್ನು ಈಗಾಗಲೇ ಕಟಾವು ಮಾಡಲಾಗಿದೆ. ಇದನ್ನು ಕಂಡು ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದು, ಮರಗಳ ಕಟಾವು ಬದಲು ಸ್ಥಳಾಂತರಕ್ಕೆ ಆಗ್ರಹಿಸುತ್ತಿದ್ದಾರೆ. ಈ ಮೂಲಕ ಹಲವು ವರ್ಷಗಳಿಂದ ಬೆಳೆದು ನಿಂತಿರುವ ಮರಗಳ ಉಳಿವಿಗಾಗಿ ಧ್ವನಿ ಎತ್ತಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮೂಕ ಪ್ರಾಣಿಗಳ ರೋಧನೆಗೆ ತಹಶೀಲ್ದಾರ್ ಸ್ಪಂದನೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮೂಕ ಪ್ರಾಣಿಗಳ ರೋಧನೆಗೆ ತಹಶೀಲ್ದಾರ್ ಸ್ಪಂದನೆ

    – ಹಾಲು ಖರೀದಿಸುವಂತೆ ಒಕ್ಕೂಟಕ್ಕೆ ಮನವಿ

    ನೆಲಮಂಗಲ: ಕೊರೊನಾ ಸೋಂಕಿತೆಯ ಸಾವಿನಿಂದ, ಆಕೆಯ ಸಂಪರ್ಕದಲ್ಲಿ ಇದ್ದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿತ್ತು. ಹೀಗಾಗಿ ಅವರ ಜಾನುವಾರುಗಳು ಆಹಾರವಿಲ್ಲದೇ ಪರಾದಡುವಂತೆ ಆಗಿತ್ತು. ಈಗ ಈ ಜಾನುವಾರುಗಳ ನೆರವಿಗೆ ತಾಲೂಕಾಡಳಿತ ಬಂದಿದೆ.

    ಕೊರೊನಾ ಹಬ್ಬುವ ಭಯದಿಂದ ಯಾರೂ ಕ್ವಾರಂಟೈನ್ ಅದವರ ಮನೆಯ ಬಳಿ ಹೋಗಿಲ್ಲ. ಹೀಗಾಗಿ ಅವರ ದನ-ಕಾರುಗಳು ಹಾಗೂ ಮೇಕೆಗಳು ಆಹಾರವಿಲ್ಲದೇ ಮೂಕ ರೋಧನೆ ಅನುಭವಿಸುತ್ತಿದ್ದವು. ಈ ಬಗ್ಗೆ ಬೆಳಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ವರದಿಗೆ ಈಗ ಸ್ಪಂದನೆ ಸಿಕ್ಕಿದ್ದು, ಸ್ಥಳೀಯ ಅಧಿಕಾರಿಗಳು ಗ್ರಾಮಕ್ಕೆ ಬಂದು ಅವುಗಳಿಗೆ ಮೇವಿನ ವ್ಯವಸ್ಥೆ ಮಾಡಿದ್ದಾರೆ.

    ಜಾನುವಾರುಗಳ ನರವಿಗೆ ಬಂದ ನೆಲಮಂಗಲ ತಹಶೀಲ್ದಾರ್ ಶ್ರೀನಿವಾಸ್, ತಮ್ಮ ಅಧಿಕಾರಿಗಳನ್ನು ಗ್ರಾಮಕ್ಕೆ ಕಳಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಜೊತೆಗೆ ಜಾನುವಾರುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಬೆಂಗಳೂರು ಹಾಲು ಉತ್ಪಾದಕ ಒಕ್ಕೂಟದ ಜೊತೆಗೆ ಮಾತನಾಡಿ ಈ ಹಸುಗಳ ಹಾಲನ್ನು ಖರೀದಿ ಮಾಡುವಂತೆ ಮನವಿಮಾಡಿಕೊಂಡು ಮಾನವೀಯತೆ ಮೆರೆದಿದ್ದಾರೆ.

    ಕ್ವಾರಂಟೈನ್ ಆದ ಮನೆಯ ಜಾನುವಾರುಗಳನ್ನು ನೋಡುವವರಿಲ್ಲದೆ ಕಂಗೆಟ್ಟ ಮೂಕಪ್ರಾಣಿಗಳ ರೋಧನೆ ಮುಗಿಲುಮುಟ್ಟಿತ್ತು. ಪ್ರತಿದಿನ ಸುಮಾರು 60 ಲೀಟರ್ ಹಾಲು ನೀಡುತ್ತಿದ್ದ ಗೋವುಗಳ ಹಾಲು ವ್ಯರ್ಥವಾಗುತ್ತಿತ್ತು. ಕೊರೊನಾ ಬರುತ್ತೆ ಎಂದು ಗ್ರಾಮಸ್ಥರು ಅವರ ಮನೆಯ ಕಡೆ ಹೋಗುತ್ತಿಲ್ಲ. ಸ್ಥಳೀಯ ಹಾಲಿನ ಡೈರಿಯಲ್ಲಿ ಹಾಲನ್ನು ಖರೀದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಜೊತೆಗೆ ಊರಿನ ಗ್ರಾಮಸ್ಥರು ನೆರವಿಗೆ ಬರುವಂತೆ ತಾಲೂಕಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರು.