Tag: Nelamangala police

  • ಯುವ ವಕೀಲೆ ಅನುಮಾನಸ್ಪದ ಸಾವು – ಮನನೊಂದು ಯುವಕ ಆತ್ಮಹತ್ಯೆ

    ಯುವ ವಕೀಲೆ ಅನುಮಾನಸ್ಪದ ಸಾವು – ಮನನೊಂದು ಯುವಕ ಆತ್ಮಹತ್ಯೆ

    ನೆಲಮಂಗಲ: ಯುವ ವಕೀಲೆಯೊಬ್ಬರು (Lawyer) ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ (Nelamangala) ನಡೆದಿದೆ.

    ರಮ್ಯ(27) ಸಾವನ್ನಪ್ಪಿದ ವಕೀಲೆ. ನೆಲಮಂಗಲ ಬಳಿಯ ಶ್ರೀನಿವಾಸಪುರದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಕೀಲೆಯ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿರಂಗನ್ ನಿಧನ

    ವಕೀಲೆ ಮನೆಯಲ್ಲೇ ವಾಸವಿದ್ದ ಪುನೀತ್(22) ಎಂಬ ಯುವಕನೂ ತೋಟದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವುಡ್ ವರ್ಕ್ ಕೆಲಸ ಮಾಡ್ಕೊಂಡಿದ್ದ ಪುನೀತ್, ವಕೀಲೆಯ ಮನೆಯಲ್ಲಿ ವಾಸವಿದ್ದ. ವಕೀಲೆಯ ಮನೆಯಲ್ಲಿ ಸಾಕುಮಗನಂತೆ ಜೀವನ ನಡೆಸುತ್ತಿದ್ದ ಪುನೀತ್, ಆಕೆಯ ಸಾವು ನೋಡಿ ಮನನೊಂದು ನೇಣಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರನ್ನು ನೀವು ಹೀಗೆ ನಡೆಸಿಕೊಳ್ಳುತ್ತೀರಾ ? – ರಾಹುಲ್‌ಗೆ ಸುಪ್ರೀಂ ತರಾಟೆ


    ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಘಟನೆಯ ಸಂಬಂಧ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೆಲಮಂಗಲದಲ್ಲಿ ಭೀಕರ ಅಪಘಾತ – ಪ್ರವಾಸಕ್ಕೆ ಹೊರಟಿದ್ದ ಒಂದೇ ಕುಟುಂಬದ 6 ಮಂದಿ ದುರ್ಮರಣ

    ನೆಲಮಂಗಲದಲ್ಲಿ ಭೀಕರ ಅಪಘಾತ – ಪ್ರವಾಸಕ್ಕೆ ಹೊರಟಿದ್ದ ಒಂದೇ ಕುಟುಂಬದ 6 ಮಂದಿ ದುರ್ಮರಣ

    – ಕಂಟೇನರ್‌ ಬಿದ್ದು ಕಾರು ಅಪ್ಪಚ್ಚಿ; ಸುಮಾರು 10 ಕಿಮೀವರೆಗೆ ಟ್ರಾಫಿಕ್ ಜಾಮ್‌

    ನೆಲಮಂಗಲ: ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವಿನ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ದುರ್ಮಣಕ್ಕೀಡಾಗಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ಟಿ.ಬೇಗೂರು ಬಳಿ ನಡೆದಿದೆ.

    ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Tumkur Bengaluru National Highway) ಟಿ.ಬೇಗೂರು ಬಳಿ ಘಟನೆ ನಡೆದಿದೆ. ಕಾರಿನ ಮೇಲೆ ಕಂಟೇನರ್‌ ಬಿದ್ದ ಪರಿಣಾಮ ಕಾರಿನಲ್ಲಿದ್ದ 6 ಮಂದಿ (ವಿಜಯಪುರ ಮೂಲದ ಚಂದ್ರ ಯಾಗಪ್ಪ ಗೋಳ್ (48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯ (6)) ಸಾವನ್ನಪ್ಪಿದ್ದಾರೆ. ವೀಕೆಂಡ್‌ ಪ್ರವಾಸ ಕೈಗೊಂಡಿದ್ದ ಕುಟುಂಬ ಮಸಣ ಸೇರಿದೆ. ಇದನ್ನೂ ಓದಿ: ಭಾರತದ ಈ ಮೂರು ರಾಜ್ಯಗಳು ನಮ್ಮವು – ಬಾಂಗ್ಲಾ ಸರ್ಕಾರದ ಸಲಹೆಗಾರನ ಹೊಸ ಕ್ಯಾತೆ

    ಇದರಿಂದ ತುಮಕೂರು ರಸ್ತೆಯಲ್ಲಿ ಸುಮಾರು 10 ಕಿಮೀ ನಷ್ಟು ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇದನ್ನೂ ಓದಿ: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ – ಇಂದಿನಿಂದ ಮೋದಿ ಕುವೈತ್‌ ಪ್ರವಾಸ

    ಅಪಘಾತದ ವೇಳೆ ಕಂಟೇನರ್‌ ಕಾರಿನ ಮೇಲೆ ಬಿದ್ದ ಪರಿಣಾಮ, ಕಾರು ಸಂಪೂರ್ಣ ಅಪ್ಪಚ್ಚಿಯಾಗಿತ್ತು. ಇದರಿಂದ ಕಾರು ಹೊರತೆಗೆಯಲು ಪೊಲೀಸರು ಹರಸಾಹಸಪಟ್ಟರು. ಹೆವಿ ಲೋಡ್ ಇರುವ ಕಂಟೇನರ್‌ ಮೇಲೆತ್ತಲು ಲಾರಿ ಬೆಲ್ಟ್‌, ಚೈನ್‌ಗಳನ್ನ ತರಿಸಲಾಗಿತ್ತು. ಕೊನೆಗೆ ಹರಸಾಹಸ ಪಟ್ಟು ಮೂರು ಕ್ರೇನ್‌ಗಳ ಸಹಾಯದಿಂದ ಕಂಟೇನರ್‌ ಮೇಲೆತ್ತಿ ಕಾರನ್ನು ಹೊರತೆಗೆದರು.

    ಸದ್ಯ ನೆಲಮಂಗಲ ಪೊಲೀಸರು ಹಾಗೂ SP ಸಿ.ಕೆ ಬಾಬಾ ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾರಿನಲ್ಲಿದ್ದವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ವೀಕೆಂಡ್‌ ಪ್ರವಾಸಕ್ಕೆ ಹೊರಟಿದ್ದ ಕುಟುಂಬ 6 ತಿಂಗಳ ಹಿಂದೆಯಷ್ಟೇ ಕಾರು ಖರೀದಿಸಿತ್ತು ಎಂದು ತಿಳಿದುಬಂದಿದೆ.

  • ನೆಲಮಂಗಲ ಟೌನ್ ಪೊಲೀಸರ ದಿಢೀರ್ ಕಾರ್ಯಾಚರಣೆ- ಪೋಲಿ ಪುಂಡರಿಗೆ ಶಾಕ್

    ನೆಲಮಂಗಲ ಟೌನ್ ಪೊಲೀಸರ ದಿಢೀರ್ ಕಾರ್ಯಾಚರಣೆ- ಪೋಲಿ ಪುಂಡರಿಗೆ ಶಾಕ್

    ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ನಗರದಲ್ಲಿ ನ್ಯೂಸೆನ್ಸ್ ಮಾಡುತ್ತಿದ್ದವರಿಗೆ ನೆಲಮಂಗಲ ಟೌನ್ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ಮಧ್ಯಪಾನ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ ಯುವಕರಿಗೆ ಪೊಲೀಸರು ಮಳೆಯಲ್ಲೂ ನಡುಗುವಂತೆ ಚಳಿ ಬಿಡಿಸಿದ್ದಾರೆ.

    ರಸ್ತೆ ಬದಿ, ಅಂಗಡಿ ಬಾರ್, ಇನ್ನಿತರ ಕಡೆ ಸಮಸ್ಯೆ ಮಾಡುತ್ತಿದ್ದವರಿಗೆ ಪೊಲೀಸರು ಶಾಕ್ ನೀಡಿದ್ದು, ಪೊಲೀಸರ ದಿಢೀರ್ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

    ಮಕ್ಕಳು, ವೃದ್ದರು, ಮಹಿಳೆಯರು ಓಡಾಡುವ ಪ್ರದೇಶದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದನ್ನ ಗಮನಿಸಿದ ನೆಲಮಂಗಲ DYSP ಜಗದೀಶ್ ಮತ್ತು ಇನ್ಸ್‍ಪೆಕ್ಟರ್ ಎ.ವಿ.ಕುಮಾರ್ ನೇತೃತ್ವದ ತಂಡ ಖಾಸಗೀ ವಾಹನದಲ್ಲಿ ಕಾರ್ಯಾಚರಣೆ ನಡೆಸಿ ಪೋಲಿ ಪುಂಡರನ್ನು ಬೆಚ್ಚಿ ಬೀಳಿಸಿದ್ದಾರೆ. ಇನ್ನೂ ಮುಂದೆ ಇಂತಹ ಪ್ರಕರಣ ಜರುಗದಂತೆ ಖಡಕ್ ವಾನಿರ್ಂಗ್ ನೀಡಿ ಎಲ್ಲರಿಗೂ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ RSS ವಿರುದ್ಧ ಕಾಂಗ್ರೆಸ್ ಹೇಳಿಕೆ ನೀಡುತ್ತಿದೆ: ಬೊಮ್ಮಾಯಿ

  • ಸಿನಿಮಾ ಸ್ಟೈಲ್‍ನಲ್ಲಿ ಡೈರೆಕ್ಟರ್ ಕಿಡ್ನ್ಯಾಪ್

    ಸಿನಿಮಾ ಸ್ಟೈಲ್‍ನಲ್ಲಿ ಡೈರೆಕ್ಟರ್ ಕಿಡ್ನ್ಯಾಪ್

    ಬೆಂಗಳೂರು: ಪತಿಬೇಕು.ಕಾಮ್ ಸಿನಿಮಾದ ನಿರ್ದೇಶಕ ರಾಕೇಶ್ ಮೇಲೆ ಪ್ರಕರಣವೊಂದು ದಾಖಲಾಗಿ ಸುದ್ದಿಯಾಗಿತ್ತು. ಸಹ ನಿರ್ಮಾಪಕರಿಗೆ ರಾಕೇಶ್ ವಂಚನೆ ಮಾಡಿದ್ದಾರೆ ಅಂತ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಆದರೆ ಈ ಪ್ರಕರಣ ಇದೀಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ.

    ವಿಜಯನಗರದ ಮನೆಯಿಂದ ಅಕ್ಟೋಬರ್ 21ರಂದು ರಾಕೇಶ್ ಅವರನ್ನು ಎಳೆದೊಯ್ದ ನೆಲಮಂಗಲ ಪೊಲೀಸ್ ಕೇಶವ್ ಅಂಡ್ ಟೀಂ ಸೆಟ್ಲ್ ಮೆಂಟ್ ಮಾಡಿಕೊಳ್ಳುವಂತೆ ಧಮ್ಕಿ ಹಾಕಿದ್ದರಂತೆ. ಈ ಹಿಂದೆಯೇ ಚಂದ್ರಾ ಲೇಔಟ್‍ನಲ್ಲಿ ಹಣಕಾಸು ವಿಚಾರವಾಗಿ ನಿರ್ಮಾಪಕ ಮಂಜುನಾಥ್‍ಗೆ ರಾಕೇಶ್ 10 ಲಕ್ಷ ರೂ. ಕೊಟ್ಟಿದ್ದು, ಯಾವುದೇ ಹಣ ಕೊಡಬೇಕಾಗಿಲ್ಲ ಅಂದಿದ್ದರು. ಚಂದ್ರಾ ಲೇಔಟ್ ಕೇಸ್‍ನಲ್ಲಿ ಬೇಲ್ ಪಡೆದಿದ್ದ ಮಂಜುನಾಥ್, ನೆಲಮಂಗಲದಲ್ಲಿ ದೂರು ದಾಖಲಿಸಿದ್ದರು.

    ರಾಕೇಶ್ ಅವರನ್ನ ಕರೆದೊಯ್ದಿದ್ದ ನೆಲಮಂಗಲ ಪೊಲೀಸರು ಮನೆಯವರಿಗೆ ಯಾವುದೇ ವಿಚಾರ ತಿಳಿಸಿರಲಿಲ್ಲ. ಕೊನೆಗೆ ರಾಕೇಶ್ ಸಂಬಂಧಿಕರು ಚಂದ್ರಾ ಲೇಔಟ್ ಠಾಣೆಯ ಪೊಲೀಸರ ಮೊರೆ ಹೋಗಿದ್ದರು. ಆಗ ಚಂದ್ರಾ ಲೇಔಟ್ ಠಾಣೆಯ ಪೊಲೀಸರು ನೆಲಮಂಗಲ ಪೊಲೀಸರಿಗೆ ಕರೆ ಮಾಡಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದರು. ಇದರಿಂದಾಗಿ ನೆಲಮಂಗಲ ಪೊಲೀಸರು ರಾಕೇಶ್ ಅವರಿಂದ ಚೆಕ್‍ಗೆ ಸೈನ್ ಮಾಡಿಸಿಕೊಂಡು ಬಿಟ್ಟು ಕಳಿಸಿದ್ದರು. ಇದೀಗ ಅಕ್ರಮವಾಗಿ ಕೂಡಿಟ್ಟು, ರೌಡಿ ಶೀಟ್ ಓಪನ್ ಮಾಡುದಾಗಿ ಬೆದರಿಸಿದ್ದ ಎಸ್.ಐ.ಮಂಜುನಾಥ್ ಹಾಗೂ ಪೇದೆ ಕೇಶವ್ ಮೇಲೆ ನಿರ್ದೇಶಕ ರಾಕೇಶ್, ಎಸ್‍ಪಿ, ಐಜಿ, ಡಿಜಿ, ಐಜಿಪಿ ಅವರಿಗೆ ಹಾಗೂ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.