ವಿಜಯಪುರ: ನೆಲಮಂಗಲ ಭೀಕರ ಅಪಘಾತದಲ್ಲಿ ಸಾವೀಗೀಡಾಗಿದ್ದ 6 ಜನರ ಮೃತದೇಹಗಳು ಮಹಾರಾಷ್ಟ್ರದ ಸ್ವಗ್ರಾಮಕ್ಕೆ ತಲುಪಿದ್ದು, ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿದೆ.
ಇಂದು (ಡಿ.22) ಬೆಳಿಗ್ಗೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೃತದೇಹಗಳು ರವಾನೆಯಾಗಿವೆ. ಮೂರು ಅಂಬುಲೆನ್ಸ್ ಮೂಲಕ ಆರು ಮೃತದಹೇಗಳನ್ನು ಕರೆತರಲಾಗಿದೆ. ಮೃತದೇಹಗಳನ್ನು ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಚಂದ್ರಮ್ ಅವರ ಜಮೀನಿನಲ್ಲಿ ಲಿಂಗಾಯತ ಸಮಾಜದ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು. ಮೃತದೇಹಗಳಿಗೆ ಕುಟುಂಬಸ್ಥರು ಪೂಜೆ ನೆರವೇರಿಸಿದ ಬಳಿಕ ಬೆಂಕಿ ಸ್ಪರ್ಶಿಸುವ ಮೂಲಕ ಅಂತ್ಯಕ್ರಿಯೆ ನೆರವೇರಿಸಿದರು.ಇದನ್ನೂ ಓದಿ: ಒಂದು ದೇಶ, ಒಂದು ಚುನಾವಣೆ ಹಿಂದೆ ‘ನಂಬರ್ ಗೇಮ್’ – ಬಿಲ್ ಪಾಸ್ ಆಗುತ್ತಾ?
ಘಟನೆ ಏನು?
ಬೆಂಗಳೂರು ಹೊರವಲಯದ ನೆಲಮಂಗಲ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿತ್ತು. ಚಾಲಕನ ನಿಯಂತ್ರಣ ತಪ್ಪಿದ ಕಂಟೇನರ್, ವೋಲ್ವೋ ಕಾರಿನ ಮೇಲೆ ಉರುಳಿದ್ದ ಪರಿಣಾಮ ಕಾರಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ಬಲಿ ಆಗಿದ್ದರು. ಮೃತರನ್ನು 48 ವರ್ಷದ ಐಟಿ ಉದ್ಯಮಿ ಚಂದ್ರಮ್ ಯೇಗಪ್ಪಗೋಳ್, 42 ವರ್ಷದ ಗೌರಾಬಾಯಿ, 12 ವರ್ಷದ ದೀಕ್ಷಾ, 6 ವರ್ಷದ ಆರ್ಯ, ಜ್ಞಾನ್ ಏಗಪ್ಪ, 36 ವರ್ಷದ ವಿಜಯಲಕ್ಷ್ಮಿ ಎಂದು ಗುರುತಿಸಲಾಗಿದೆ.
ವೀಕೆಂಡ್ ಇದ್ದ ಕಾರಣ ಚಂದ್ರಮ್ ಕುಟುಂಬ ಇತ್ತೀಚಿಗಷ್ಟೇ ಖರೀದಿಸಿದ್ದ ಹೊಸ ವೋಲ್ವೋ ಕಾರಿನಲ್ಲಿ ತಮ್ಮ ಊರಿಗೆ ಹೊರಟಿತ್ತು. ಆದರೆ ಟೀ.ಬೇಗೂರು ಸಮೀಪ ಕಂಟೇನರ್ ಉರುಳಿ, ಕಾರಲ್ಲಿಯೇ ಎಲ್ಲರೂ ಸಾವನ್ನಪ್ಪಿದ್ದಾರೆ. ದಾಬಸ್‌ಪೇಟೆಯಿಂದ ಬೆಂಗಳೂರಿಗೆ ಕಂಟೇನರ್ ಬರುತ್ತಿತ್ತು. ತನ್ನ ಮುಂದಿನ ಕಾರನ್ನು ಸೇಫ್ ಮಾಡಲು ಹೋಗಿ ಹೀಗಾಗಿದೆ ಎಂದು ಚಾಲಕ ಹೇಳಿಕೊಂಡಿದ್ದಾನೆ. ಈ ಅಪಘಾತದ ಪರಿಣಾಮ ವೋಲ್ವೋ ಮುಂದಿದ್ದ ವಾಹನಗಳು ಸಡನ್ ಬ್ರೇಕ್ ಹಾಕಿದಕ್ಕೆ ಹಲವು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. 2 ಲಾರಿ, 2 ಕಾರು, ಸ್ಕೂಲ್ ಬಸ್ ಒಂದಕ್ಕೊಂದು ಟಚ್ ಆಗಿವೆ.
ಸರಣಿ ಅಪಘಾತದಿಂದಾಗಿ ಬೆಂಗಳೂರು-ತುಮಕೂರು ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ, ಸವಾರರು ಪರದಾಡಿದರು. ಇನ್ನೂ ಮೃತ ಉದ್ಯಮಿ ಚಂದ್ರಮ್ ಮೂಲತಃ ಮಹಾರಾಷ್ಟ್ರದ ಜತ್ ತಾಲೂಕಿನ ಮೊರಬಗಿ ಗ್ರಾಮದವರು. ಬೆಂಗಳೂರಿನಲ್ಲಿ ಐಎಎಸ್‌ಟಿ ಎಂಬ ಸಂಸ್ಥೆ ಸ್ಥಾಪಿಸಿ, 300 ಜನಕ್ಕೆ ಕೆಲಸ ಕೊಟ್ಟಿದ್ದರು. ಇದೀಗ ಸಂಸ್ಥೆ ಸಿಬ್ಬಂದಿ ದಿಕ್ಕು ತೋಚದಂತಾಗಿದ್ದು, ಕುಟುಂಬಸ್ಥರು ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ.ಇದನ್ನೂ ಓದಿ: ಅಕಸ್ಮಾತ್ ಹುಂಡಿಗೆ ಬಿದ್ದ ಐಫೋನ್ ದೇವಸ್ಥಾನದ ಪಾಲು – ವಾಪಸ್ ಕೊಡಲ್ಲ ಎಂದ ಮಂಡಳಿ
ಬೆಂಗಳೂರು: ನನ್ನ ಮುಂದಿದ್ದ ಕಾರಿನಲ್ಲಿದ್ದವರನ್ನು ಬಚಾವ್ ಮಾಡಲು ಹೋಗಿ ಹೀಗಾಯ್ತು ಎಂದು ನೆಲಮಂಗಲದಲ್ಲಿ (Nelamangala) ನಡೆದ ಸರಣಿ ಅಪಘಾತದ ಬಗ್ಗೆ ಲಾರಿ ಚಾಲಕ ಆರೀಫ್ ಹೇಳಿದ್ದಾರೆ.
ಆರಿಫ್ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ಡಾಬಸ್‌ಪೇಟೆಯಿಂದ ಬೆಂಗಳೂರಿನ ಕಡೆಗೆ ನಾನು ಬರುತ್ತಿದ್ದೆ. ನನ್ನ ಮುಂದಿನ ಕಾರನ್ನು ಸೇಫ್ ಮಾಡಲು ಹೋಗಿ ಹೀಗೆ ಆಗಿದೆ. ಲಾರಿ ಡಿವೈಡರ್ ದಾಟಿ ಮುಂದಿನ ರಸ್ತೆಗೆ ಪಲ್ಟಿ ಆಯ್ತು. ನನ್ನ ಮುಂದಿನ ಕಾರಿನಿಂದಾಗಿ ಹೀಗೆ ಆಯ್ತು. ನನಗೆ ತುಂಬಾ ನೋವಾಗ್ತಿದೆ. ಅಲ್ಲಿ ಏನಾಯ್ತು ಆಮೇಲೆ ಅನ್ನೋದು ಗೊತ್ತಿಲ್ಲ. ಕಾರಿನ ಮೇಲೆ ನನ್ನ ಲಾರಿ ಪಲ್ಟಿಯಾಗಿತ್ತು ಎಂದು ಬೇಸರದಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ: ನೆಲಮಂಗಲದಲ್ಲಿ ಭೀಕರ ಅಪಘಾತ – ಪ್ರವಾಸಕ್ಕೆ ಹೊರಟಿದ್ದ ಒಂದೇ ಕುಟುಂಬದ 6 ಮಂದಿ ದುರ್ಮರಣ
ನೆಲಮಂಗಲದ ಟಿ.ಬೇಗೂರು ಬಳಿಯ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Tumkur Bengaluru National Highway) ಇಂದು ಮಧ್ಯಾಹ್ನ (ಶನಿವಾರ) ನಡೆದ ಎರಡು ಕಾರು, ಎರಡು ಲಾರಿ ಹಾಗೂ ಸ್ಕೂಲ್ ಬಸ್ ನಡುವಿನ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ದುರ್ಮರಣಕ್ಕೀಡಾಗಿದ್ದರು.
ಕಾರಿನ ಮೇಲೆ ಕಂಟೇನರ್ ಬಿದ್ದ ಪರಿಣಾಮ ಕಾರಿನಲ್ಲಿದ್ದ ವಿಜಯಪುರ ಮೂಲದ ಚಂದ್ರಮ್ ಯಾಗಪ್ಪ ಗೋಳ್ (48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯ (6) ಸಾವನ್ನಪ್ಪಿದ್ದರು.
– ಮಾಲೀಕನ ಕುಟುಂಬದ ಸಾವಿನ ಸುದ್ದಿ ಕೇಳಿ ಕಂಪನಿ ಸಿಬ್ಬಂದಿಗೆ ಅಘಾತ – ಕೆಲಸ ಅರ್ಧಕ್ಕೆ ನಿಲ್ಲಿಸಿ ದುಃಖದಿಂದ ಹೊರಟ ಸಿಬ್ಬಂದಿ
ಬೆಂಗಳೂರು ಗ್ರಾಮಾಂತರ: ನೆಲಮಂಗಲದಲ್ಲಿ (Nelamangala Accident) ಸಂಭವಿಸಿದ ಭೀಕರ ಅಪಘಾತದಲ್ಲಿ ದಾರುಣ ಅಂತ್ಯ ಕಂಡ ಚಂದ್ರಮ್ ಯಾಗಪ್ಪಗೋಳ್ ಒಬ್ಬ ಐಟಿ ಉದ್ಯಮಿ. ಬೆಂಗಳೂರಿನಲ್ಲಿ ಕಂಪನಿಯೊಂದರ ಮಾಲೀಕರಾಗಿದ್ದ ಇವರು, 50 ಕ್ಕೂ ಹೆಚ್ಚು ಮಂದಿಗೆ ಉದ್ಯೋಗದಾತರಾಗಿದ್ದರು.
ಮೃತರು ಬಿಜಾಪುರ ಮೂಲದವರು. ಐಟಿ ಉದ್ಯಮಿಗಳು ಒಂದೇ ಕುಟುಂಬ ಮೃತಪಟ್ಟಿದ್ದಾರೆ. ಚಂದ್ರಮ್ ಯಾಗಪ್ಪಗೋಳ್ ಬೆಂಗಳೂರಿನಲ್ಲಿ ಕಂಪನಿ ಮಾಲೀಕ. ಸುಮಾರು 50 ಕ್ಕೂ ಹೆಚ್ಚು ಮಂದಿಗೆ ಕೆಲಸ ನೀಡಿದ್ದ ಉದ್ಯಮಿ.
ಹೆಚ್‌ಎಸ್‌ಆರ್ ಲೇಔಟ್ ಬಳಿಯಿರುವ ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್‌ನಲ್ಲಿ ಸುಮಾರು 50 ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. 2018 ರಲ್ಲಿ ಕಂಪನಿ ಶುರುವಾಗಿತ್ತು. ಅದಕ್ಕೆ ಚಂದ್ರಮ್ ಅವರೆ ಎಂಡಿ, ಸಿಇಒ ಆಗಿದ್ದರು. ಇದನ್ನೂ ಓದಿ: ಟಿವಿ ರಿಮೋಟ್ ಕೊಡದಿದ್ದಕ್ಕೆ ಬಾಲಕಿ ಆತ್ಮಹತ್ಯೆ
ಅಪಘಾತದಲ್ಲಿ ಚಂದ್ರಮ್ ಅವರು ಮೃತಪಟ್ಟ ಸುದ್ದಿ ಕೇಳಿ ಕಂಪನಿ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ. ದುಃಖದಿಂದ ಅರ್ಧಕ್ಕೆ ಕೆಲಸ ನಿಲ್ಲಿಸಿ ಹೊರಟು ಹೋಗಿದ್ದಾರೆ. ಮಾಲೀಕನ ಸಾವಿನಿಂದ ಸಿಬ್ಬಂದಿ ದಿಗ್ಭ್ರಾಂತರಾಗಿದ್ದಾರೆ.
ಗ್ರೂಪ್‌ನಲ್ಲಿ ಸಾವಿನ ಸುದ್ದಿಯ ಮೆಸೇಜ್ ನೋಡಿ ಎಲ್ಲರೂ ಶಾಕ್‌ಗೆ ಒಳಗಾಗಿದ್ದಾರೆ. ಸಿಸ್ಟಮ್‌ಗಳನ್ನು ಲಾಗೌಟ್ ಮಾಡಿ ಬೇಸರದಿಂದ ಮನೆಗೆ ಹಿಂದಿರುಗಿದ್ದಾರೆ.
ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತದಲ್ಲಿ ಆ್ಯಂಬುಲೆನ್ಸ್ ಜಖಂಗೊಂಡಿದ್ದಲ್ಲದೇ ಟ್ರಾಫಿಕ್ ಜಾಮ್ ಆಗಿ ಜನರು ಪರದಾಡಿದ ನಡೆಯಿತು.
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿ ಬಳಿ ಘಟನೆ ನಡೆದಿದ್ದು, ಅಪಘಾತದಲ್ಲಿ ಮೂರು ಕಾರು ಹಾಗೂ ಒಂದು ಆ್ಯಂಬುಲೆನ್ಸ್ ಜಖಂಗೊಂಡಿವೆ. ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋ ಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತು. ಇದನ್ನೂ ಓದಿ: ನನಗೆ ಜನರ ಪ್ರೀತಿಯೇ ದೊಡ್ಡ ಪ್ರಶಸ್ತಿ: ಸೋನು ಸೂದ್
ನಿಂತಿದ್ದ ಕಾರೊಂದಕ್ಕೆ ಎರಡು ಕಾರು ಹಾಗೂ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿವೆ. ಸದ್ಯ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತುಮಕೂರು-ಬೆಂಗಳೂರು ಮಾರ್ಗದಲ್ಲಿ ಅಪಘಾತ ಸಂಭವಿಸಿದ್ದು, ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: 6 ದಿನ ನಡೆಯಲಿದೆ ಕತ್ರಿನಾ, ವಿಕ್ಕಿ ಮದುವೆ – ಯಾರಿಗೆಲ್ಲ ಇದೆ ಆಮಂತ್ರಣ?