Tag: Nelamangal

  • ಸಿಎಂ ಕುಮಾರಸ್ವಾಮಿ ಆದೇಶಕ್ಕೆ ತಡೆತಂದ ಸೂಪರ್ ಸಿಎಂ ರೇವಣ್ಣ!

    ಸಿಎಂ ಕುಮಾರಸ್ವಾಮಿ ಆದೇಶಕ್ಕೆ ತಡೆತಂದ ಸೂಪರ್ ಸಿಎಂ ರೇವಣ್ಣ!

    ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮತ್ತೆ ಸೂಪರ್ ಸಿಎಂ ಎಂಬುದನ್ನು ಸಾಬೀತುಪಡಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಮೋಹನ್ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆದೇಶ ಹೊರಡಿಸಿದ್ದರು. ಆದರೆ ಈ ಆದೇಶಕ್ಕೆ ಸಚಿವ ರೇವಣ್ಣ ಅವರು ತಡೆಯಾಜ್ಞೆ ನೀಡಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯರು ಆರೋಪಿಸಿದ್ದಾರೆ.

    ಏನಿದು ಪ್ರಕರಣ?:
    ಯಂಟಗಾನಹಳ್ಳಿ ಗ್ರಾಮ ಪಿಡಿಓ ಮೋಹನ್ ಕುಮಾರ್ ವಿರುದ್ಧ ಕರ್ತವ್ಯಲೋಪ ಹಾಗೂ ಸರ್ವಾಧಿಕಾರಿ ಧೋರಣೆ ಆರೋಪ ಕೇಳಿಬಂದಿತ್ತು. ಈ ಸಂಬಂಧ ಗ್ರಾಮ ಪಂಚಾಯತಿ ಸದಸ್ಯರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೂರು ನೀಡಿ, ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಸಿಎಂ ಕುಮಾರಸ್ವಾಮಿ ಅವರು ಮೋಹನ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದರು. ಆದರೆ ಮೋಹನ್ ಕುಮಾರ್ ಸಚಿವ ರೇವಣ್ಣ ಅವರ ಸಹಾಯ ಪಡೆದು ವರ್ಗಾವಣೆಗೆ ತಡೆ ತಂದಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯರು ಆರೋಪಿಸಿದ್ದಾರೆ.

    ಮೋಹನ್ ಕುಮಾರ್ ಅವರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ನಾವು ಕರೆ ಮಾಡಿದರೆ ಫೋನ್ ಅಟೆಂಡ್ ಮಾಡಲ್ಲ. ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಜಾರಿಗೆ ತರುವುದಿಲ್ಲ. ನಮಗೆ ಇಷ್ಟ ಬಂದ ನಿರ್ಣಯಗಳನ್ನು ಮಾತ್ರ ಜಾರಿಗೆ ತರುತ್ತಾರೆ. ಹೀಗೆ ಏಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರೆ ಯಾವುದೇ ಪ್ರಕ್ರಿಯೆ ನೀಡುವುದಿಲ್ಲ ಎಂದು ಸದಸ್ಯರು ದೂರಿದರು.

    ಮೋಹನ್ ಕುಮಾರ್ ವರ್ಗಾವಣೆಗೆ ತಡೆ ಬಿದ್ದಿದ್ದರಿಂದ ಯಂಟಗಾನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು, ಪಂಚಾಯತಿಯ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಸಚಿವ ರೇವಣ್ಣ ವಿರುದ್ಧ ಆಕ್ರೋಶ ಹೊರಹಾಕಿ, ಮೋಹನ್ ಕುಮಾರ್ ಅವರನ್ನು ವರ್ಗಾವಣೆ ಮಾಡಲೇಬೇಕು ಎಂದು ಪಟ್ಟು ಹಿಡಿದು ಪ್ರತಿಭಟಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಯ ಗೋಡೆ ಮೇಲೆ ‘I miss you ರೀ’ ಎಂದು ಬರೆದು – ಇಬ್ಬರು ಮಕ್ಕಳೊಂದಿಗೆ ನೇಣಿಗೆ ಶರಣಾದ ತಾಯಿ

    ಮನೆಯ ಗೋಡೆ ಮೇಲೆ ‘I miss you ರೀ’ ಎಂದು ಬರೆದು – ಇಬ್ಬರು ಮಕ್ಕಳೊಂದಿಗೆ ನೇಣಿಗೆ ಶರಣಾದ ತಾಯಿ

    ಬೆಂಗಳೂರು: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ತಿಪ್ಪಗೊಂಡನಹಳ್ಳಿಯಲ್ಲಿ ನಡೆದಿದೆ.

    ತಾಯಿ ರಾಧ(25), ಮಕ್ಕಳಾದ ಚಿನ್ಮಯಿ(4) ಮತ್ತು ಸಿಂಚನ(2) ಸಾವನ್ನಪ್ಪಿದವರು. ಬುಧವಾರ ಮಧ್ಯಾಹ್ನ ಮನೆಯಲ್ಲಿ ರಾಧ ಇಬ್ಬರು ಪುಟಾಣಿ ಮಕ್ಕಳಿಗೆ ನೇಣು ಹಾಕಿ, ನಂತರ ತಾನೂ ಕೂಡ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

    ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಆತ್ಮಹತ್ಯೆಗೂ ಮುಂಚೆ ಮನೆಯ ಗೋಡೆ ಮೇಲೆ ಪತಿಗಾಗಿ `ಐ ಮಿಸ್ ಯು ರೀ’ ಎಂದು ರಾಧ ಬರದಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತಿ ಶ್ರೀನಿವಾಸ್ ನನ್ನ ವಶಕ್ಕೆ ಪಡೆಕೊಂಡು ಕೌಟುಂಬಿಕ ಕಲಹದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

    ಇನ್ನು ಘಟನೆ ಬಗ್ಗೆ ತಿಳಿದು ಆಸ್ಪತ್ರೆ ಬಳಿ ಬಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

  • ಮದ್ವೆಯಾಗ್ತೀನೆಂದು ನಂಬಿಸಿ ಬೆತ್ತಲೆ ವಿಡಿಯೋ ಮಾಡಿ ಯುತಿಯ ಮೇಲೆ ನಿರಂತರ ಅತ್ಯಾಚಾರ

    ಮದ್ವೆಯಾಗ್ತೀನೆಂದು ನಂಬಿಸಿ ಬೆತ್ತಲೆ ವಿಡಿಯೋ ಮಾಡಿ ಯುತಿಯ ಮೇಲೆ ನಿರಂತರ ಅತ್ಯಾಚಾರ

    ಬೆಂಗಳೂರು: ಬೆತ್ತಲೆ ವಿಡಿಯೋ ಮಾಡಿ ಯುವತಿಯ ಮೇಲೆ ನಿರಂತರ ಅತ್ಯಾಚಾರ ಮಾಡಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಹೆಗ್ಗಡದೇವನಪುರ ಗ್ರಾಮದಲ್ಲಿ ನಡೆದಿದೆ.

    ಆರೋಪಿ ವಿಜಯ್‍ಕುಮಾರ್ ಮದುವೆ ಆಗುವುದಾಗಿ ನಂಬಿಸಿ ಕೈಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ ಬೆತ್ತಲೆ ವಿಡಿಯೋ ಮಾಡಿ 3-4 ವರ್ಷಗಳಿಂದ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇನೆ. ಆದರೂ ಪೊಲೀಸರು ಯಾವುದೇ ಸಾಕ್ಷಿ ಇಲ್ಲ ಎಂದು ಹೇಳಿ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಯುವತಿ ಆರೋಪಿಸುತ್ತಿದ್ದಾರೆ.


    ನಡೆದಿದ್ದೇನು?: ವಿಜಯ್‍ಕುಮಾರ್ ಮೂಲತಃ ಮಾಗಡಿ ತಾಲೂಕಿನ ಕಣನೂರು ಗ್ರಾಮದ ನಿವಾಸಿ. ವಿಜಯ್ ಈಗಾಗಲೇ ಒಂದು ಮದುವೆಯಾಗಿದ್ದಾನೆ. ಯುವತಿ ಕಣನೂರಿನಲ್ಲಿನ ತನ್ನ ಅಜ್ಜಿ ಮನೆಗೆ ಹೋದಾಗ ಬೆತ್ತಲೆ ವಿಡಿಯೋ ಮಾಡಿದ್ದಾನೆ. ನಂತರ ನಿನ್ನನ್ನು ನಾನು ಲವ್ ಮಾಡುತ್ತಿದ್ದೇನೆ ಎಂದು ನಂಬಿಸಿದ್ದಾನೆ. ನಂತರ ಆ ವಿಡಿಯೋ ಇಟ್ಟುಕೊಂಡು ಅನೇಕ ಬಾರಿ ಅತ್ಯಾಚಾರ ಮಾಡಿದ್ದಾನೆ. ಇದರಿಂದ ನಾನು ಎರಡು ಬಾರಿ ಗರ್ಭಿಣಿಯಾಗಿದ್ದೆ. ಈ ವಿಷಯ ತಿಳಿದು ಆತನೇ ಮಾತ್ರೆಗಳನ್ನ ನೀಡಿ ಅಬಾರ್ಷನ್ ಮಾಡಿಸಿದ್ದಾನೆ ಎಂದು ಯುವತಿ ಹೇಳಿದ್ದಾರೆ.

    ಈ ಬಗ್ಗೆ ಮನೆಯವರಿಗೆ ವಿಷಯ ತಿಳಿಸಿದೆ. ಬಳಿಕ ಗಾಬರಿಗೊಂಡ ಪೋಷಕರು, ವಿಜಯ್ ಕೈಕಾಲು ಹಿಡಿದು ಮದುವೆಯಾಗುವಂತೆ ಕಣ್ಣೀರಿಟ್ಟಿದ್ದಾರೆ. ಆದರೆ ವಿಜಯ್‍ಕುಮಾರ್ ನನ್ನ ಪ್ರೀತಿಯನ್ನ ತಿರಸ್ಕರಿಸಿ ನನಗೂ-ಈಕೆಗೂ ಯಾವುದೇ ಸಂಬಂಧವಿಲ್ಲ, ಪರಿಚಯವೂ ಇಲ್ಲ ಎಂದು ಹೇಳಿ ನಾಪತ್ತೆಯಾಗಿದ್ದಾನೆ ಎಂದು ಸಂತ್ರಸ್ತ ಯುವತಿ ಹೇಳಿದ್ದಾರೆ.

    ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ. ಆದರೆ ಪೊಲೀಸರು ಆರೋಪಿ ವಿಜಯ್‍ಕುಮಾರ್ ಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ನೊಂದ ಯುವತಿ ಹಾಗೂ ಪೋಷಕರು ಆರೋಪಿಸಿದ್ದಾರೆ.