Tag: Nelamagala

  • Nelamangala | ಕೆಕೆಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ – ಓರ್ವ ಸಾವು

    Nelamangala | ಕೆಕೆಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ – ಓರ್ವ ಸಾವು

    ಬೆಂಗಳೂರು: ಕಲ್ಯಾಣ ಕರ್ನಾಟಕ ಸಾರಿಗೆ (KKRTC) ಬಸ್ಸಿಗೆ ಕಾರು ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ತೊಣಚಿನಕುಪ್ಪೆ ಪ್ರವಾಸಿ ಡಾಬಾದ ಬಳಿ ನಡೆದಿದೆ.

    ವೇಗವಾಗಿ ಬಂದ ಕಾರು (Car) ಹಿಂಬದಿಯಿಂದ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ಕಾರಿನಲ್ಲಿದ್ದ ಓಬಳಾರೆಡ್ಡಿ (35) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕಾರಿನಲ್ಲಿದ್ದ ಸುನಿಲ್ ಮತ್ತು ದಿವ್ಯ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಅಮೃತಹಳ್ಳಿ ಸ್ಪಾದಲ್ಲಿ ಲೇಡಿ ಗ್ಯಾಂಗ್‌ನಿಂದ ಅಟ್ಯಾಕ್ – ಬಂಧಿತ ಆರೋಪಿ ಕಾವ್ಯಳಿಗಿದೆ ರೌಡಿಸಂ ಲಿಂಕ್

    ರಾಷ್ಟ್ರೀಯ ಹೆದ್ದಾರಿ 48ರ ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಯುದ್ಧ ಹಡಗು, ಜಲಾಂತರ್ಗಾಮಿಗಳ ಸೂಕ್ಷ್ಮ ಮಾಹಿತಿಯನ್ನ ಪಾಕ್‌ಗೆ ರವಾನಿಸ್ತಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಅರೆಸ್ಟ್‌!

  • ಮಂದಗತಿಯ ಫ್ಲೈ ಓವರ್ ದುರಸ್ತಿ ಕಾರ್ಯ- ಬೆಂಗಳೂರಿಗರಿಗೆ ತಪ್ಪದ ಕಿರಿಕಿರಿ

    ಮಂದಗತಿಯ ಫ್ಲೈ ಓವರ್ ದುರಸ್ತಿ ಕಾರ್ಯ- ಬೆಂಗಳೂರಿಗರಿಗೆ ತಪ್ಪದ ಕಿರಿಕಿರಿ

    ಬೆಂಗಳೂರು: ತಾಂತ್ರಿಕ ದೋಷ ಹಿನ್ನೆಲೆ ದಾಸರಹಳ್ಳಿಯ ಫ್ಲೈ ಓವರ್ ರಸ್ತೆ ದುರಸ್ತಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಇನ್ನೂ ಒಂದು ವಾರ ನೆಲಮಂಗಲ, ಬೆಂಗಳೂರಿನ ಫ್ಲೈ ಓವರ್ ರಸ್ತೆಯಲ್ಲಿ ಕೆಲಸ ನಡೆಯುವ ಸಾಧ್ಯತೆ ಇದೆ.

    ಇತ್ತೀಚೆಗಷ್ಟೇ ದಾಸರಹಳ್ಳಿಯ ದೀಪಕ್ ಬಸ್ ನಿಲ್ದಾಣದ ಬಳಿಯ ಫ್ಲೈ ಓವರ್ ರಸ್ತೆಯಲ್ಲಿ ರೋಪ್ ಕಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ದುರಸ್ತಿ ಕಾರ್ಯ ಪ್ರಾರಂಭವಾಗಿದೆ. ಇನ್ನೂ ನೆಲಮಂಗಲ – ಬೆಂಗಳೂರು ರಸ್ತೆಯಲ್ಲಿ ಪ್ರತಿನಿತ್ಯ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ದುರಸ್ತಿ ಕಾರ್ಯ ಮಂದಗತಿಯಿಂದ ನಡೆಯುತ್ತಿರುವುದರಿಂದ ಇನ್ನೂ ಒಂದು ವಾರ ವಾಹನ ಸವಾರರು ಟ್ರಾಫಿಕ್ ದಟ್ಟಣೆ ಅನುಭವಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಪೀಣ್ಯ ಫ್ಲೈಓವರ್ ಸಂಚಾರ ಬಂದ್ – ಬದಲಿ ಮಾರ್ಗ ಇಲ್ಲಿದೆ

    ನವಯುಗ ಟೋಲ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಡೆಯುತ್ತಿರುವ ನಿಧಾನಗತಿಯಲ್ಲಿ ನಡೆಯುತ್ತಿರುವ ದುರಸ್ತಿ ಕಾರ್ಯದಿಂದಾಗಿ ವಾಹನ ಸವಾರರು ಹೈರಾಣಾಗಿದ್ದಾರೆ. ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಗೊರಗುಂಟೆಪಾಳ್ಯ ವರೆಗಿನ ಫ್ಲೈ ಓವರ್ ರಸ್ತೆಯಲ್ಲಿರುವ ಎಲ್ಲಾ ಕಂಬಗಳನ್ನು ಇಂಜಿನಿಯರ್‌ಗಳು ಪರಿಶೀಲಿಸುತ್ತಿದ್ದಾರೆ. ಇದರಿಂದಾಗಿ ಇನ್ನೂ ಒಂದು ವಾರ ದುರಸ್ತಿ ಕಾರ್ಯ ತಡವಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ವಾಹನ ಸವಾರರೆ ಎಚ್ಚರಿಕೆಯಿಂದ ಸಾಗಬೇಕಿದೆ. ಇದನ್ನೂ ಓದಿ: ಬಸ್ ಅಪಘಾತದಲ್ಲಿ 22 ಮಂದಿ ಸಾವಿಗೆ ಕಾರಣನಾದ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ

  • ಬಾರ್ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ – ವೀಡಿಯೋ ವೈರಲ್

    ಬಾರ್ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ – ವೀಡಿಯೋ ವೈರಲ್

    ನೆಲಮಂಗಲ: ಮದ್ಯಪ್ರಿರಿಯರಿಗೆ ಬಾರ್ ಮಾಲೀಕರು ಮಹಾ ಮೋಸ ಮಾಡಿ ವಸೂಲಿಗಿಳಿದಿದ್ದಾರೆ ಎಂಬ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಟಾಬಯಲಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರದಲ್ಲಿರುವ ಕೆಲವು ಬಾರ್, ವೈನ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಮದ್ಯದ ದರಕ್ಕಿಂತ ಸುಮಾರು 30% ರಿಂದ 40% ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಿ ಮದ್ಯಪ್ರಿಯರಿಗೆ ಮಹಾ ಮೋಸ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಇಂದಿರಾ ಗಾಂಧಿಯನ್ನು ಏಕವಚನದಲ್ಲಿ ಬೈಯ್ದಿದ್ದಾರೆ – ಸಿದ್ದುಗೆ ಕಟೀಲ್ ಸವಾಲು

    ಹೆಚ್ಚಿನ ದರಕ್ಕೆ ಮದ್ಯಮಾರಾಟದ ಹಿಂದೆ ನೆಲಮಂಗಲ ಅಬಕಾರಿ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಆರೋಪ ಕೂಡ ಇದ್ದು, ಬಾರ್ ಅಂಡ್ ರೆಸ್ಟೊರೆಂಟ್ ಅಲ್ಲಿ ಬಿಲ್ ಕೇಳಿದ್ರೆ ಮದ್ಯನೆ ಕೊಡಲ್ಲ ಎಂಬ ಆರೋಪ ಕೂಡ ಇದೆ. ಅದು ಅಲ್ಲದೇ ಈ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ಮಾಡಿದ್ದು, ಅಧಿಕಾರಿಗಳ ಜಾಣ ಕುರುಡುತನಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಇಂತಹ ಅಕ್ರಮಕ್ಕೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

  • ಯುವತಿಯಿಂದ ಕಾರು ಚಾಲನೆ- ಆಟೋ ಸಂಪೂರ್ಣ ನಜ್ಜುಗುಜ್ಜು

    ಯುವತಿಯಿಂದ ಕಾರು ಚಾಲನೆ- ಆಟೋ ಸಂಪೂರ್ಣ ನಜ್ಜುಗುಜ್ಜು

    ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಶಾಂತಿ ನಗರ ಬಳಿ ನಿಂತಿದ್ದ ಆಟೋಗೆ ವೇಗವಾಗಿ ಬಂದ ವ್ಯಾಗನರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋ ನಜ್ಜುಗುಜ್ಜಾಗಿ ಪಲ್ಟಿಯಾಗಿರುವ ಘಟನೆ ನಡೆದಿದೆ.

    ಯುವತಿ ಕಾರು ಚಲಾಯಿಸಿದ್ದು, ಅಜಾಗರೂಕತೆಯಿಂದ ಈ ಅಪಘಾತ ನಡೆದಿದೆ.ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ಜಖಂ ಆಗಿದ್ದು, ಆಟೋದಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕನಿಗೆ ಗಂಭೀರ ಗಾಯಗಳಾಗಿದೆ. ಆಟೋ ಚಾಲಕ ಪ್ರಾಣಪಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ:  ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ಗಣಿಗಾರಿಕೆ ಪ್ರದೇಶದಲ್ಲಿ ಸ್ಪೋಟಕ್ಕೆ ಜೀವಗಳು ಬಲಿ

    ವ್ಯಾಗನರ್ ಕಾರಿನಲ್ಲಿದ್ದ ನಾಲ್ವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಆಟೋದಲ್ಲಿ ಸಿಲುಕಿದ್ದ ಪ್ರಯಾಣಿಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಅಂಬುಲೆನ್ಸ್ ನಲ್ಲಿ ನೆಲಮಂಗಲ ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ:  ಈಜಲು ಹೋಗಿದ್ದ ಯುವಕ ನೀರುಪಾಲು

    ಅಪಘಾತದಿಂದ ಗುಂಪು ಸೇರಿದ ಸ್ಥಳೀಯರು ಕಾರಿನಲ್ಲಿದ್ದವರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅತೀ ವೇಗವಾಗಿ ಕಾರನ್ನು ಚಲಾಯಿಸಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕೆನರಾ ಬ್ಯಾಂಕ್‍ನಲ್ಲಿ ಎಸಿ ಸಿಲಿಂಡರ್ ಸ್ಫೋಟ: ಕಂಪ್ಯೂಟರ್, ಪೀಠೋಪಕರಣ ಸುಟ್ಟು ಭಸ್ಮ

    ಕೆನರಾ ಬ್ಯಾಂಕ್‍ನಲ್ಲಿ ಎಸಿ ಸಿಲಿಂಡರ್ ಸ್ಫೋಟ: ಕಂಪ್ಯೂಟರ್, ಪೀಠೋಪಕರಣ ಸುಟ್ಟು ಭಸ್ಮ

    ಬೆಂಗಳೂರು: ಎಸಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ನೆಲಮಂಗಲ ಪಟ್ಟಣದ ಕೆನರಾ ಬ್ಯಾಂಕ್ ನಲ್ಲಿ ಇಂದು ಬೆಳಗ್ಗೆ ಅಗ್ನಿ ಅವಗಢ ಸಂಭವಿಸಿದೆ.

    ಬೆಳಗ್ಗೆ ಎಂದಿನಂತೆ ಬ್ಯಾಂಕ್‍ಗೆ ಬಂದ ಸಿಬ್ಬಂದಿ ಎಸಿ ಆನ್ ಮಾಡಿದ್ದಾರೆ. ಆನ್ ಆಗುತ್ತಿದ್ದಂತೆ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡು ಶಬ್ಧ ಬಂದಿದೆ. ತಕ್ಷಣ ಬ್ಯಾಂಕಿನಲ್ಲಿದ್ದ ಸಿಬ್ಬಂದಿ ಹೊರಗೆ ಬಂದು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ.

    ಆಗ್ನಿಶಾಮಕದ ಸಿಬ್ಬಂದಿ ಬರುವಷ್ಟರಲ್ಲಿ ಬ್ಯಾಂಕಿನಲ್ಲಿದ್ದ ಪೀಠೊಪಕರಣಗಳು, ಕಂಪ್ಯೂಟರ್‍ಗಳು ಹಾಗೂ ಹಲವಾರು ದಾಖಲೆಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬ್ಯಾಂಕಿಗೆ ಆವರಿಸಿದ ಬೆಂಕಿಯನ್ನು ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಒಬ್ಬರ ಕೈಗೆ ಗಾಯವಾಗಿದೆ.

    ಬ್ಯಾಂಕಿನಲ್ಲಿದ್ದ ಅನೇಕ ದಾಖಲೆಗಳು ಸುಟ್ಟಿ ಹೋಗಿದ್ದು, ಸ್ಟ್ರಾಂಗ್ ರೂಂನಲ್ಲಿರುವ ಹಣಕ್ಕೆ ಯಾವುದೇ ತೊಂದರೆಯಾಗಿಲ್ಲ. ಅದನ್ನು ಬ್ಯಾಂಕಿನ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಬೇಕು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

    ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಬೆಂಕಿ ಅವಘಡದ ಬಗ್ಗೆ ಪ್ರಕರಣ ದಾಖಲಾಗಿದೆ.