Tag: Neil

  • ಅಮ್ಮಂದಿರ ದಿನದ ವಿಶೇಷ: ತನ್ನ ಪುಟ್ಟ ರಾಜಕುಮಾರನಿಗಾಗಿ ಭಾವನಾತ್ಮಕ ಸಾಲು ಬರೆದ ಕಾಜಲ್

    ಅಮ್ಮಂದಿರ ದಿನದ ವಿಶೇಷ: ತನ್ನ ಪುಟ್ಟ ರಾಜಕುಮಾರನಿಗಾಗಿ ಭಾವನಾತ್ಮಕ ಸಾಲು ಬರೆದ ಕಾಜಲ್

    ಟಾಲಿವುಡ್ ಕ್ವೀನ್ ಕಾಜಲ್ ಅಗರ್ವಾಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತನ್ನ ಮುದ್ದು ಕಂದಮ್ಮನ ಜೊತೆ ಹೃದಯಸ್ಪರ್ಶಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳ ಮಕ್ಕಳು ಹುಟ್ಟುವಾಗಲೇ ಸೆಲೆಬ್ರಿಟಿಗಳಾಗಿ ಹುಟ್ಟುತ್ತಾರೆ. ಅದರಂತೆ ಕಾಜಲ್ ಮಗನ ಮುದ್ದು ಮುಖ ನೋಡಬೇಕು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಕಾಜಲ್ ಮಗನ ಜೊತೆ ಆಟವಾಡುವ ಫೋಟೋ ಶೇರ್ ಮಾಡಿದ್ರೂ, ಮುಖವನ್ನು ಮಾತ್ರ ಹ್ಯಾಡ್ ಮಾಡುತ್ತಿದ್ದರು. ಆದರೆ ಇಂದು ‘ಅಮ್ಮಂದಿರ ದಿನ’ವಾಗಿದ್ದರಿಂದ ತಮ್ಮ ಮುದ್ದು ಕಂದಮ್ಮನ ಫೋಟೋ ಜೊತೆಗೆ ಭಾವನ್ಮಾಕ ಸಾಲು ಬರೆದು ಪೋಸ್ಟ್ ಮಾಡಿದ್ದಾರೆ.

    ಕಾಜಲ್ ತನ್ನ ಮಗನಿಗೆ ನೀಲ್ ಎಂದು ಹೆಸರಿಟ್ಟಿದ್ದು, ತನ್ನ ಚಿಕ್ಕ ರಾಜಕುಮಾರನಿಗೆ ಮುದ್ದಾದ ಪತ್ರವನ್ನು ಬರೆದಿದ್ದಾರೆ. ಫೋಟೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿದ ಕಾಜಲ್, ನನ್ನ ಪ್ರೀತಿಯ ನೀಲ್, ನೀನು ನನಗೆ ಯಾವಾಗಲೂ ಎಷ್ಟು ಅಮೂಲ್ಯವಾದವನು ಎಂದು ತಿಳಿಯಬೇಕೆಂದು ನಾನು ಬಯಸುತ್ತೇನೆ. ನಾನು ನಿನ್ನನ್ನು ನನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಂಡೆ. ನಿನ್ನ ಪುಟ್ಟ ಕೈಯನ್ನು ನಾನು ಹಿಡಿದುಕೊಂಡಾಗ ನಿನ್ನ ಬೆಚ್ಚಗಿನ ಉಸಿರನ್ನು ನಾನು ಅನುಭವಿಸಿದೆ. ನಿನ್ನ ಸುಂದರವಾದ ಕಣ್ಣುಗಳನ್ನು ನೋಡಿದ ಕ್ಷಣ, ನಾನು ಶಾಶ್ವತವಾಗಿ ನಿನ್ನನ್ನು ಪ್ರೀತಿಸುತ್ತಿದ್ದೇನೆ. ಇದನ್ನೂ ಓದಿ: ಪೂಲ್‌ನಲ್ಲಿ ಪತಿಯ ಜೊತೆ ಹಾಟ್ ಆಗಿ ಕಾಣಿಸಿಕೊಂಡ ಕತ್ರಿನಾ ಕೈಫ್ 

    ನೀನು ನನ್ನ ಮೊದಲ ಮಗು. ಮುಂಬರುವ ವರ್ಷಗಳಲ್ಲಿ, ನಾನು ನಿನಗೆ ಕಲಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಆದರೆ ನೀನು ಈಗಾಗಲೇ ನನಗೆ ಸಾಕಷ್ಟು ಪ್ರಮಾಣದಲ್ಲಿ ಕಲಿಸಿದ್ದೀಯಾ. ತಾಯಿಯಾಗುವುದು ಏನು ಎಂದು ನೀನು ನನಗೆ ಕಲಿಸಿದ್ದೀಯ. ನೀನು ನನಗೆ ನಿಸ್ವಾರ್ಥವಾಗಿರಲು, ಶುದ್ಧ ಪ್ರೀತಿ ಎಲ್ಲವನ್ನು ಕಲಿಸಿದ್ದೀಯ ಎಂದು ಭಾವನ್ಮಾಕ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಸಾಲುಗಳನ್ನು ನೋಡಿದ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ತಾಯಂದಿರ ದಿನ ವಿಶ್ ಮಾಡಿದ್ದು, ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ಈ ಹಿಂದೆ ಕಾಜಲ್ ತನ್ನ ಪತಿ ಗೌತಮ್ ಬಗ್ಗೆಯೂ ಭಾವನ್ಮಾಕ ಸಾಲುಗಳನ್ನು ಬರೆದು ಪೊಸ್ಟ್ ಮಾಡಿದ್ದರು. ಗೌತಮ್ ಹೇಗೆ ತನ್ನನ್ನು ನೋಡಿಕೊಳ್ಳುತ್ತಾರೆ. ಅವರು ನನಗೆ ಗೌರವವನ್ನು ಕೊಡುತ್ತಾರೆ ಎಂಬುದನ್ನು ಬರೆದುಕೊಂಡಿದ್ದರು. ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಕಾಜಲ್ ಅಗರ್ವಾಲ್