Tag: Neighbours

  • ವಿವಾಹ ವಾರ್ಷಿಕೋತ್ಸವದಂದೇ ಅಪ್ಪ-ಅಮ್ಮ, ಸಹೋದರಿ ಸಾವು – ಕೊಲೆ ಸಂಶಯ

    ವಿವಾಹ ವಾರ್ಷಿಕೋತ್ಸವದಂದೇ ಅಪ್ಪ-ಅಮ್ಮ, ಸಹೋದರಿ ಸಾವು – ಕೊಲೆ ಸಂಶಯ

    ನವದೆಹಲಿ: ವಿವಾಹ ವಾರ್ಷಿಕೋತ್ಸವದಂದೇ (Wedding Anniversary) ಅಪ್ಪ-ಅಮ್ಮ ಹಾಗೂ ಸಹೋದರಿ ಸಾವನ್ನಪ್ಪಿರುವ ಘಟನೆ ದಕ್ಷಿಣ ದೆಹಲಿಯಲ್ಲಿ (South Delhi) ಬುಧವಾರ ನಡೆದಿದೆ.

    ರಾಜೇಶ್ ಕುಮಾರ್ (51), ಪತ್ನಿ ಕೋಮಲ್ (46) ಮತ್ತು ಪುತ್ರಿ ಕವಿತಾ (23) ಮೃತರು.‌ ಅಪ್ಪ-ಅಮ್ಮನಿಗೆ ವಾರ್ಷಿಕೋತ್ಸವದ ಶುಭಾಶಯ ಹೇಳಿ ವಾಕಿಂಗ್‌ಗೆ ಹೊರಟಿದ್ದೆ. ಮನೆಗೆ ವಾಪಸ್‌ ಬರುವಷ್ಟರಲ್ಲಿ ಮೂವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಅವರ ಮಗ ಅರ್ಜುನ್‌ ತಿಳಿಸಿದ್ದಾನೆ. ದೇಹದ ಮೇಲೆ ಇರಿತದ ಗಾಯದ ಗುರುತುಗಳು ಕಂಡುಬಂದಿವೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ತಟಸ್ಥ ನಿಲುವಿನ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ: ಯತ್ನಾಳ್

    ಪೊಲೀಸರ ಮಾಹಿತಿ ಪ್ರಕಾರ, ಮನೆಯಲ್ಲಿ ದರೋಡೆ ನಡೆದಿಲ್ಲ, ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ದೊಡ್ಡ ಸದ್ದು ಕೇಳಿಸಿದ ತಕ್ಷಣ ನೆರೆಯವರು ಮನೆಗೆ ಧಾವಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವಿಜಯೇಂದ್ರ ಗುಂಪುಗಾರಿಕೆ ಮಾಡುತ್ತಿದ್ದಾರೆ, ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿದ್ದೇನೆ: ಯತ್ನಾಳ್‌ ಚಾರ್ಜ್‌

    ಕೊಲೆಯಾಗಿರುವ ಬಗ್ಗೆ ಸಂಶಯ:
    ಇಂದು ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವ ಇತ್ತು. ಅವರಿಗೆ ಶುಭಹಾರೈಸಿ ನಾನು ಬೆಳಗ್ಗೆ ವಾಕಿಂಗ್‌ಗೆ ಹೋಗಿದ್ದೆ, ಬಂದು ನೋಡಿದಾಗ ಶವವಾಗಿ ಬಿದ್ದಿದ್ದರು. ಮೂವರ ಮೈಮೇಲೆ ಇರಿತದ ಗುರುತುಗಳಿದ್ದವು, ಎಲ್ಲೆಡೆ ರಕ್ತ ಚಿಮ್ಮಿತ್ತು ಎಂದು ಮಗ ಅರ್ಜುನ್‌ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಅಪರಾಧ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ತಂಡಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ದೇವೇಂದ್ರ ಫಡ್ನವೀಸ್ `ಮಹಾ’ ಸಿಎಂ – ಫಡ್ನವಿಸ್‌ ರಾಜಕೀಯ ಪಥ ಹೇಗಿದೆ? 

  • ಕಾರಿಗೆ ಮೂತ್ರ ಮಾಡಿದ ನಾಯಿ- ಕಾರ್ ಮಾಲೀಕನಿಗೆ ಬಿತ್ತು ಗೂಸಾ

    ಕಾರಿಗೆ ಮೂತ್ರ ಮಾಡಿದ ನಾಯಿ- ಕಾರ್ ಮಾಲೀಕನಿಗೆ ಬಿತ್ತು ಗೂಸಾ

    ಅಹಮದಾಬಾದ್: ಕಾರಿಗೆ ಮೂತ್ರ ಮಾಡಿದ ನಾಯಿಯನ್ನು ಕಟ್ಟಿ ಹಾಕಿ ಎಂದವನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ನಡೆದಿದೆ.

    ಕರ್ನಲ್ ಕಟೋಚ್ ಕಾರನ್ನು ತೊಳೆದು ಮನೆಯಿಂದ ಹೊರಗೆ ನಿಲ್ಲಿಸಿದ್ದರು. ಆ ವೇಳೆ ಪಕ್ಕದ ಮನೆಯ ನಾಯಿ ಬಂದು ಕಾರಿಗೆ ಮೂತ್ರ ಮಾಡಿದೆ. ಇದರಿಂದ ಕೋಪಗೊಂಡು ಕಟೋಚ್ ಪಕ್ಕದ ಮನೆಗೆ ಹೋಗಿ ನಾಯಿಯ ಮಾಲೀಕರಿಗೆ ಜೋರು ಮಾಡಿದ್ದಾರೆ. ನಿಮ್ಮ ಮನೆಯ ನಾಯಿಯನ್ನು ಮನೆಯೊಳಗೆ ಕಟ್ಟಿಕೊಳ್ಳಿ ಎಂದು ಹೇಳಿದ್ದಾರೆ. ಇದರಿಂದ ಪಕ್ಕದ ಮನೆಯ ಚಿರಾಗ್ ಮಲ್ಹೋತ್ರ ಮತ್ತು ಸನ್ನಿ ಮಲ್ಹೋತ್ರ ನಮ್ಮ ನಾಯಿಗೆ ಹೊಡೆಯಲು ನೀನು ಯಾರು? ಎಂದು ಆತನಿಗೆ ಮನಬಂದಂತೆ ಥಳಿಸಿ, ರಸ್ತೆಯಲ್ಲಿ ಕೆಡವಿ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಅಕ್ರಮ ಸಂಬಂಧ ಶಂಕೆ- ಪತ್ನಿಯ ಗುಪ್ತಾಂಗಕ್ಕೆ ಹೊಲಿಗೆ

    ಆ ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುತ್ತಿರುವ ಅನೇಕರು ಚಿರಾಗ್‍ನ ಮನೆಯ ನಾಯಿಯ ಬಗ್ಗೆ ಹಲವು ಬಾರಿ ದೂರಿದ್ದರೂ ಅವರು ನಾಯಿಯನ್ನು ಬೇಕಾಬಿಟ್ಟಿ ಹೊರಗೆ ಓಡಾಡಲು ಬಿಟ್ಟು ಬೇರೆಯವರಿಗೆ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ನಾಯಿ ಮೂತ್ರ ಮಾಡಿ ಕಾರನ್ನು ಗಲೀಜು ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ತಂದೆ-ಮಗನ ವಿರುದ್ಧ ಚಾಂದ್‍ಖೇಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • 50 ರೂ.ಗಾಗಿ ನಡೆಯಿತು ಕೊಲೆ- ಆರೋಪಿ ಅರೆಸ್ಟ್

    50 ರೂ.ಗಾಗಿ ನಡೆಯಿತು ಕೊಲೆ- ಆರೋಪಿ ಅರೆಸ್ಟ್

    ಗುರುಗ್ರಾಮ: ಆಟವಾಡುತ್ತಿದ್ದ 18 ತಿಂಗಳ ಮಗುವನ್ನು ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ ಕೊಂದಿದ್ದವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ನರೇಶ್ ಎಂಬ 22 ವರ್ಷದ ಯುವಕ ಆರೋಪಿಯಾಗಿದ್ದಾನೆ. ಪಕ್ಕದ ಮನೆಯ, 18 ತಿಂಗಳ ಮಗುವನ್ನು ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ ಕೊಂದಿದ್ದ ವ್ಯಕ್ತಿಯೊಬ್ಬ ಈಗ ಅರೆಸ್ಟ್ ಆಗಿದ್ದಾನೆ. ಈ ಘಟನೆ ಫೆಬ್ರವರಿಯಲ್ಲಿ ನಡೆದಿದ್ದು, ಆರು ತಿಂಗಳ ಬಳಿಕ ಈತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ತಾನೇ ಮಗುವನ್ನು ಕೊಂದಿದ್ದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ: ಅರವಿಂದ್ ಕೇಜ್ರಿವಾಲ್

    ನಿರುದ್ಯೋಗಿ ಆಗಿರುವ ಈತ ಫರಿದಾಬಾದ್‍ನ ಸೆಕ್ಟರ್ 56ರ ನಿವಾಸಿ ಹಾಗೂ ಆತನೊಬ್ಬ ಮಾದಕ ವ್ಯಸನಿ ಎಂದು ಫರಿದಾಬಾದ್ ಪೊಲೀಸ್ ಪಿಆರ್‍ಒ ಸುಬೆ ಸಿಂಗ್ ತಿಳಿಸಿದ್ದಾರೆ. ಆತನಿಗೆ ಮಗುವಿನ ಮೇಲೆ ಯಾವುದೇ ದ್ವೇಷ ಇರಲಿಲ್ಲ. ಆದರೆ ಆ ಮಗುವಿನ ತಂದೆಗೂ-ಈ ನರೇಶ್‍ಗೂ ಪದೇಪದೆ ಜಗಳವಾಗುತ್ತಿತ್ತು. ಹಾಗೇ ಒಂದು ದಿನ ನರೇಶ್ ತನ್ನ ಪಕ್ಕದ ಮನೆಯವರೊಬ್ಬರ 8ವರ್ಷದ ಮಗಳ ಕೈಯಿಂದ 50 ರೂಪಾಯಿ ಕಸಿದಿದ್ದ. ಅದನ್ನು ನೋಡಿದ್ದ 18 ತಿಂಗಳ ಮಗುವಿನ ತಂದೆ, ನರೇಶ್ ಜತೆ ಜಗಳ ತೆಗೆದು, ಆತ ಮಾಡಿದ ಕೆಲಸದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ. ಅದಾದ ಮೇಲೆ ನರೇಶ್ ಹೇಗಾದರೂ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಎಂದು ಸುಬೆ ಸಿಂಗ್ ವಿವರಿಸಿದ್ದಾರೆ. ಇದನ್ನೂ ಓದಿ:  ಎಲ್ಲಿ ಸ್ಪರ್ಧೆ ಇದೆಯೋ ಅಲ್ಲಿ ಪಕ್ಷ ಬೆಳೆದಿದೆ ಎಂದರ್ಥ: ಕಟೀಲ್

    ಫೆಬ್ರವರಿ 5ರಂದು ನರೇಶ್ ಆ 18 ತಿಂಗಳ ಗಂಡು ಮಗು ಮನೆಯ ಬಳಿ ಒಬ್ಬನೇ ಆಡುತ್ತಿರುವುದು ಕಂಡು ಬಂತು. ಆತನನ್ನು ಎತ್ತಿಕೊಂಡು ತನ್ನ ಫ್ಲ್ಯಾಟ್‍ಗೆ ಕರೆದುಕೊಂಡು ಹೋದ. ನಂತರ ಮಗುವನ್ನು ದೊಡ್ಡದಾದ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ, ಯಾರಿಗೂ ಗೊತ್ತಾಗಬಾರದು ಎಂದು ಅದರ ಬಾಯಿಯನ್ನು ಮುಚ್ಚಿದ್ದ. ಮಗುವಿನ ಜೀವ ಹೋಯಿತು. ಇತ್ತ ಮಗುವಿನ ಪಾಲಕರು ಹುಡುಕಾಟ ಶುರು ಮಾಡಿದ್ದರು. ಅತ್ತ ನರೇಶ್, ಮಗುವನ್ನು ಹತ್ಯೆ ಮಾಡಿದ ತಕ್ಷಣ ತನ್ನ ಸ್ಥಳ ಬದಲಾಯಿಸಿದ್ದ. ಆದರೆ ಆರು ತಿಂಗಳ ನಂತರ ಆತನನ್ನು ಹಿಡಿಯಲಾಗಿದೆ. ಮಗುವಿನ ಕುತ್ತಿಗೆಯಿಂದ ಆತ ಕದ್ದಿದ್ದ ತಾಯತವನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸ್ ಪಿಆರ್‌ಒ ತಿಳಿಸಿದ್ದಾರೆ.

  • ದಾವಣಗೆರೆಯಲ್ಲಿ ಶುಕ್ರವಾರ ಸುರಿದ ಮಳೆಗೆ ಮನೆಗಳು ಸಂಪೂರ್ಣ ಜಲಾವೃತ

    ದಾವಣಗೆರೆಯಲ್ಲಿ ಶುಕ್ರವಾರ ಸುರಿದ ಮಳೆಗೆ ಮನೆಗಳು ಸಂಪೂರ್ಣ ಜಲಾವೃತ

    ದಾವಣಗೆರೆ: ಶುಕ್ರವಾರ ರಾತ್ರಿ ಸುರಿದ ಮಳೆಗೆ ದಾವಣಗೆರೆಯ ಭಾಷಾ ನಗರದ ಆರನೇ ಕ್ರಾಸ್ ನಲ್ಲಿರುವ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಅಲ್ಲಿನ ನಿವಾಸಿಗಳು ನೀರನ್ನು ಹೊರ ಹಾಕುತ್ತಿದ್ದಾರೆ.

    ಪ್ರತಿ ಬಾರಿ ಮಳೆ ಜಾಸ್ತಿ ಬಂದರೆ ಇಲ್ಲಿನ ನಿವಾಸಿಗಳು ನರಕವನ್ನು ಅನುಭವಿಸುವಂತಾಗುತ್ತದೆ. ಮಳೆ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿವೆ. ಇದನ್ನೂ ಓದಿ: ಕೇವಲ ಅರ್ಧ ಗಂಟೆ ಮಳೆಗೆ ತತ್ತರಿಸಿದ ಬೆಂಗ್ಳೂರು- 100ಕ್ಕೂ ಹೆಚ್ಚು ಮನೆ ಜಲಾವೃತ

    ಇಲ್ಲಿ ವಾಸಿಸುವ ಜನರು ಬಹುತೇಕ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಮನೆಗಳಿಗೆ ಏಕಾಏಕಿ ನೀರು ನುಗ್ಗಿದ ಹಿನ್ನಲೆ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಹಾಗೂ ಅಡುಗೆ ಸಾಮಗ್ರಿಗಳು ಜಲಾವೃತಗೊಂಡಿದ್ದು, ಸಂಕಷ್ಟ ಅನುಭವಿಸುವಂತಾಗಿದೆ. ಅದರಲ್ಲೂ ಚಿಕ್ಕ ಚಿಕ್ಕ ಕಂದಮ್ಮಗಳಿದ್ದು ಮಾರಕ ರೋಗಕ್ಕೆ ತುತ್ತಾಗಿ ಸಾವನ್ನಪ್ಪುವಂತಾಗಿದೆ.

    ಪ್ರತಿನಿತ್ಯ ನರಕದಲ್ಲಿ ಜೀವನ ಮಾಡುವ ನಮಗೆ ಒಳ್ಳೆಯ ಚರಂಡಿ ವ್ಯವಸ್ಥೆ ಹಾಗೂ ಮಳೆ ನೀರು ಸರಾಗವಾಗಿ ಹರಿಯುವ ರೀತಿ ವ್ಯವಸ್ಥೆ ಮಾಡಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದರು. ಹಲವು ಬಾರಿ ಇಲ್ಲಿನ ಸ್ಥಳೀಯರು ಜನ ಪ್ರತಿನಿಧಿಗಳಿಗೆ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಕೇವಲ ಚುನಾವಣೆಗೆ ಮಾತ್ರ ಬರ್ತಾರೆ ವಿನಃ ಸಮಸ್ಯೆಗಳನ್ನು ಬಗೆಹರಿಸಲು ಬರುವುದಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv