Tag: Neighbour

  • 1,100 ಕೋಳಿಗಳನ್ನು ಹೆದರಿಸಿ ಕೊಂದಿದ್ದ ವ್ಯಕ್ತಿಗೆ ಜೈಲು

    1,100 ಕೋಳಿಗಳನ್ನು ಹೆದರಿಸಿ ಕೊಂದಿದ್ದ ವ್ಯಕ್ತಿಗೆ ಜೈಲು

    ಬೀಜಿಂಗ್: ತನ್ನ ನೆರೆ ಮನೆಯಾತನ (Neighbour) ವಿರುದ್ಧ ಸೇಡು ತೀರಿಸಿಕೊಳ್ಳಲು 1,100 ಕೋಳಿಗಳನ್ನು ಹೆದರಿಸಿ ಸಾಯಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಜೈಲು (Jail) ಶಿಕ್ಷೆ ವಿಧಿಸಿದ ಘಟನೆ ಚೀನಾದಲ್ಲಿ (China) ನಡೆದಿದೆ.

    ಗು ಎಂಬಾತ ಆರೋಪಿ. ಗುಗೆ ಸೇರಿದ್ದ ಮರಗಳನ್ನು ನೆರೆಮನೆಯ ಝಾಂಗ್ ಅನುಮತಿಯಿಲ್ಲದೇ ಕತ್ತರಿಸಿದ್ದ. ಈ ಹಿನ್ನೆಲೆಯಲ್ಲಿ ಕೋಪಗೊಂಡ ಗು, ತನ್ನ ನೆರೆಮನೆಯ ಝಾಂಗ್‍ನ ಕೋಳಿ ಫಾರ್ಮ್‍ಗೆ ನುಗ್ಗಿದ್ದಾನೆ. ಅಲ್ಲಿ ಬ್ಯಾಟರಿ ದೀಪಗಳನ್ನು ಬಳಸಿ ಕೋಳಿಗಳನ್ನು ಭಯಭೀತಗೊಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಅಲ್ಲಿದ್ದ 460 ಕೋಳಿಗಳು ಹೆದರಿ ಮೃತಪಟ್ಟಿದೆ.

    ಘಟನೆಯ ನಂತರ ಗುನನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ 3,000 ಯುವಾನ್ (35,734 ರೂ.)ಯನ್ನು ದಂಡವಾಗಿ ಪಾವತಿಸಲು ಸೂಚಿಸಲಾಯಿತು. ಇದರಿಂದ ಸಿಟ್ಟಿಗೆದ್ದ ಗೂ, ಝಾಂಗ್ ವಿರುದ್ಧ ಸೇಡು ತೀರಿಸಿಕೊಳ್ಳಲು ಯೋಚಿಸಿದ್ದಾನೆ. ಅದರಂತೆ ಆತ 2ನೇ ಬಾರಿಗೆ ಕೋಳಿ ಫಾರ್ಮ್‍ಗೆ ಹೋಗಿ ಅಲ್ಲಿದ್ದ 640 ಕೋಳಿಗಳನ್ನು ಕೊಂದಿದ್ದಾನೆ.

    ಒಟ್ಟಾರೆಯಾಗಿ 1,100 ಕೋಳಿಗಳು ಮೃತಪಟ್ಟಿದ್ದು, ಅವೆಲ್ಲವೂ ಸುಮಾರು 13,840 ಯುವಾನ್ (ರೂ. 1,64,855) ಮೌಲ್ಯದ್ದಾಗಿವೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಇದನ್ನೂ ಓದಿ: ಭಾರತದಂತೆ ನಾನು ರಷ್ಯಾದಿಂದ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲ ಖರೀದಿಗೆ ಮುಂದಾಗಿದ್ದೆ: ಇಮ್ರಾನ್ ಖಾನ್

    ಘಟನೆಗೆ ಸಂಬಂಧಿಸಿ ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಹೆಂಗ್ಯಾಂಗ್ ಕೌಂಟಿಯ ನ್ಯಾಯಾಲಯವು ಗೂಗೆ 6 ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಿದೆ. ಇದನ್ನೂ ಓದಿ: ಧಾರ್ಮಿಕ ಕಾರ್ಯಕ್ರಮದ ವೇಳೆ ಧರೆಗುರುಳಿದ ಮರ 7 ಸಾವು, ಐವರಿಗೆ ಗಾಯ

  • ಮನೆ ಮುಂದೆ ಚಪ್ಪಲಿ ಇಟ್ಟಿದ್ದಕ್ಕೆ ದಂಪತಿಯಿಂದ ವ್ಯಕ್ತಿ ಕೊಲೆ

    ಮನೆ ಮುಂದೆ ಚಪ್ಪಲಿ ಇಟ್ಟಿದ್ದಕ್ಕೆ ದಂಪತಿಯಿಂದ ವ್ಯಕ್ತಿ ಕೊಲೆ

    ಮುಂಬೈ: ನೆರೆ ಮನೆಯ ವ್ಯಕ್ತಿಯೊಬ್ಬ (Neighbour) ತಮ್ಮ ಮನೆಯ ಬಾಗಿಲ (Door) ಬಳಿ ಚಪ್ಪಲಿ ಇಟ್ಟಿದ್ದಕ್ಕೆ ದಂಪತಿ ಸೇರಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಥಾಣೆಯ ನಯಾ ನಗರದಲ್ಲಿ ನಡೆದಿದೆ.

    ಅಪ್ಸರ್ ಖಾತ್ರಿ (54) ಮೃತ ವ್ಯಕ್ತಿ. ಮನೆಯ ಬಾಗಿಲ ಬಳಿ ಚಪ್ಪಲಿಗಳನ್ನು (Slipper) ಇಡುತ್ತಿದ್ದಾರೆ ಎಂದು ದಂಪತಿ ಹಾಗೂ ಅಪ್ಸರ್ ಖಾತ್ರಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದು ಅತಿರೇಕಕ್ಕೆ ಹೋಗಿ ಅಪ್ಸರ್ ಹಾಗೂ ದಂಪತಿ ಮಧ್ಯೆ ಹೊಡೆದಾಟ ನಡೆದಿದೆ.

    ಘಟನೆ ವೇಳೆ ಗಂಭೀರ ಗಾಯಗೊಂಡಿದ್ದ ಅಪ್ಸರ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್ ಮಾಡಲು ಮನೆಗೆ ಹೋದ ಪೊಲೀಸರು – ಎಷ್ಟು ಹುಡುಕಿದ್ರೂ ಪತ್ತೆಯಾಗ್ಲಿಲ್ಲ ಪಾಕ್ ಮಾಜಿ ಪಿಎಂ

    ಘಟನೆಗೆ ಸಂಬಂಧಿಸಿ ನಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಕೊಲೆ ಮಾಡಿರುವ ಆರೋಪಿ ಪರಾರಿಯಾಗಿದ್ದು, ಆರೋಪಿ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಪತ್ರ ಬರೆದ 8 ಪಕ್ಷಗಳು – ಏನಿದೆ ಅದರಲ್ಲಿ? – ಪತ್ರ ಬರೆದವರಿಂದ ದೂರ ಉಳಿದ ಕಾಂಗ್ರೆಸ್‌

  • 5ರ ಕಿವುಡ, ಮೂಕ ಮಗುವಿನ ಮೇಲೆ ನೆರೆಮನೆಯಾತನಿಂದ ರೇಪ್

    5ರ ಕಿವುಡ, ಮೂಕ ಮಗುವಿನ ಮೇಲೆ ನೆರೆಮನೆಯಾತನಿಂದ ರೇಪ್

    ಭೋಪಾಲ್: ಐದು ವರ್ಷದ ಕಿವುಡ ಮತ್ತು ಮೂಕ ಬಾಲಕಿಯ ಮೇಲೆ ಆಕೆಯ ನೆರೆ ಮನೆಯಲ್ಲಿ (Neighbour) ವಾಸಿಸುತ್ತಿದ್ದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಘಟನೆ ಭೋಪಾಲ್‍ನಲ್ಲಿ (Bhopal) ನಡೆದಿದೆ.

    ಘಟನೆಗೆ ಸಂಬಂಧಿಸಿ 56 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಐದು ವರ್ಷದ ವಿಶೇಷ ಚೇತನ (Specially Abled) ಬಾಲಕಿಗೆ ಆಟವಾಡಲು ತನ್ನ ಮನೆಗೆ ಕರೆದಿದ್ದು ಆಕೆಯ ಮೇಲೆ ಆತ ಅತ್ಯಾಚಾರವೆಸಗಿದ್ದಾನೆ. ಆ ವೇಳೆ ಬಾಲಕಿ ಕಿರುಚಿದ್ದಾಳೆ. ಬಾಲಕಿಯ ಚೀರಾಟವನ್ನು ಕೇಳಿದ ಆಕೆಯ ತಾಯಿಯು (Mother) ಆರೋಪಿ ಮನೆಗೆ ಬಂದಿದ್ದಾಳೆ. ಅಲ್ಲಿ ಬಾಲಕಿಯ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನ್ನು ನೋಡಿ ಒಮ್ಮೆಲೆ ಆತಂಕಕ್ಕೆ ಒಳಗಾಗಿದ್ದಾಳೆ.

    ಆದರೂ ಚೇತರಿಸಿಕೊಂಡು ತಕ್ಷಣ ತನ್ನ ಮಗುವನ್ನು ಪಾರು ಮಾಡಿದ್ದಾಳೆ. ಇದಾದ ಬಳಿಕ ಘಟನೆಗೆ ಸಂಬಂಧಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಮಗುವು ತನ್ನ ತಾಯಿಯ ಸಹಾಯ ಪಡೆದು ತನಗಾದ ತೊಂದರೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಪ್ರತಿಮೆ ಸ್ವಂತ ಜಾಗದಲ್ಲಿ ಕಟ್ತೀವಿ ಅಂದ್ರೂ ಬಿಡಲ್ಲ, ಬಾಬ್ರಿ ಮಸೀದಿ ರೀತಿ ಧ್ವಂಸ ಮಾಡ್ತೇವೆ – ಮುತಾಲಿಕ್

    POLICE JEEP

    ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪರೀಕ್ಷೆ ನಡೆಸಿದಾಗ ಆತ ಪಾನಮತ್ತನಾಗಿರುವುದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ದೇವರ ಪೂಜೆಗೆ ಎರಡು ಗುಂಪುಗಳ ನಡುವೆ ಗಲಾಟೆ – ಬೀಗ ಮುರಿದು ಪೂಜೆ ಮಾಡಿದ ಪೊಲೀಸರು

    Live Tv
    [brid partner=56869869 player=32851 video=960834 autoplay=true]

  • ಚಿಕನ್ ಬೇಯಿಸುವ ವಿಚಾರಕ್ಕೆ ದಂಪತಿ ಜಗಳ- ಬಗೆಹರಿಸಲು ಹೋಗಿದ್ದ ನೆರೆ ಮನೆಯಾತ ಸಾವು

    ಚಿಕನ್ ಬೇಯಿಸುವ ವಿಚಾರಕ್ಕೆ ದಂಪತಿ ಜಗಳ- ಬಗೆಹರಿಸಲು ಹೋಗಿದ್ದ ನೆರೆ ಮನೆಯಾತ ಸಾವು

    ಭೋಪಾಲ್: ಚಿಕನ್ (Chicken) ಬೇಯಿಸುವ ವಿಚಾರಕ್ಕೆ ಸಂಬಂಧಿಸಿ ದಂಪತಿ (Couple) ಜಗಳವಾಡುತ್ತಿದ್ದನ್ನು ನೋಡಿದ ನೆರೆ ಮನೆಯಾತ (neighbour) ಬಗೆಹರಿಸಲು ಹೋಗಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಭೋಪಾಲ್‍ನ (Bhopal) ಚವಾನಿ ಪಥರ್ ಗ್ರಾಮದಲ್ಲಿ ನಡೆದಿದೆ.

    ಭೋಪಾಲ್‍ನ ಚವಾನ್ ಪಥರ್ ಗ್ರಾಮದಲ್ಲಿ ಚಿಕನ್ ಬೇಯಿಸುವ ವಿಷಯಕ್ಕೆ ದಂಪತಿ ಮನೆಯಲ್ಲಿ ಜಗಳವಾಡುತ್ತಿದ್ದರು. ಮಹಿಳೆ ಮನೆಯಲ್ಲಿ ಚಿಕನ್ ಅಡುಗೆ (Cook) ಮಾಡಲು ನಿರಾಕರಿಸಿದ್ದರು. ಆದರೆ ಆಕೆಯ ಪತಿ ಪಪ್ಪು ಅಹಿರ್ವಾರ್ ಕೋಪಗೊಂಡು ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ.

    ದಂಪತಿ ಜಗಳ ಕೇಳಿ ನೆರೆಮನೆಯಲ್ಲಿ ವಾಸಿಸುತ್ತಿದ್ದ ಬಬ್ಲು ಅಹಿರ್ವಾರ್ ಸೇರಿ ಕೆಲವರು ಆ ದಂಪತಿ ಮನೆಗೆ ಬಂದಿದ್ದಾರೆ. ಈ ವೇಳೆ ಜಗಳವನ್ನು ಬಗೆ ಹರಿಸಲು ಯಶಸ್ವಿಯಾಗಿದ್ದಾರೆ. ಆದರೆ ಕೆಲ ಸಮಯದ ನಂತರ ಪಪ್ಪು ತನ್ನ ನೆರೆ ಮನೆಯ ಬಬ್ಲು ಅಹಿರ್ವಾರ್ ಮನೆಗೆ ಬಂದು ದೊಣೆಯಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಸ್ನೇಹ ನಂಬಿ ಕೋಟಿ ಕೋಟಿ ಸುರಿದ- ಹಣ ಆಗ್ತಿದ್ದಂತೆ ಉಲ್ಟಾ ಹೊಡೆದ ಮಿತ್ರದ್ರೋಹಿ

    ದಾಳಿ ವೇಳೆ ಬಬ್ಲುಗೆ ತೀವ್ರ ಗಾಯಗಳಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಪ್ಪು ಅಹಿರ್ವಾರ್‍ನನ್ನು ಬಂಧಿಸಿದ್ದಾರೆ. ಘಟನೆಯ ಕುರಿತು ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಊರಿಗೆ ಹೋಗಲಾರದೇ ಮೂಡಿತ್ತು ಬೇಸರ- ಕಾಲೇಜು ಕ್ಯಾಂಪಸ್‍ನಲ್ಲೇ ದೀಪಾವಳಿ ಸಡಗರ

    Live Tv
    [brid partner=56869869 player=32851 video=960834 autoplay=true]

  • ಗೋಣಿ ಚೀಲ ಒಣಗಿಸುವ ವಿಚಾರಕ್ಕೆ ಮಹಿಳೆಗೆ ಮಚ್ಚಿನೇಟು

    ಗೋಣಿ ಚೀಲ ಒಣಗಿಸುವ ವಿಚಾರಕ್ಕೆ ಮಹಿಳೆಗೆ ಮಚ್ಚಿನೇಟು

    ಬೆಂಗಳೂರು: ಗೋಣಿ ಚೀಲ ಒಣಗಾಕುವ ವಿಚಾರಕ್ಕೆ ಕಿರಿಕ್ ತೆಗೆದು ಮಹಿಳೆ ಮೇಲೆ ನೆರೆಮನೆಯವರು ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯಪುರದ ವಸಂತಪುರದಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಮಹಿಳೆಯನ್ನು ಅಮುದಾ ಎಂದು ಗುರುತಿಸಲಾಗಿದೆ. ತುಳಸಿ ಮಂಟಪದ ಮೇಲೆ ಗೋಣಿ ಚೀಲ ಹಾಕಿದ್ದ ನೆರೆಮನೆಯವರಿಗೆ ಗೋಣಿ ಚೀಲವನ್ನು ತೆಗೆಯುವಂತೆ ಹೇಳಿದ್ದಕ್ಕೆ ಅಮುದಾ ಮೇಲೆ ಮಚ್ಚಿನಿಂದ ತಲೆ ಹಾಗೂ ಭುಜಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅಮುದ ತಲೆಯಿಂದ ರಕ್ತ ಸುರಿಯುತ್ತಿದ್ದರೂ ಸಹಾಯಕ್ಕೆ ಬಾರದೇ ಸ್ಥಳೀಯರು ಅಮಾನವೀಯತೆ ತೋರಿದ್ದಾರೆ.

    ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಎಫ್‍ಐಆರ್ ದಾಖಲಾಗಿದ್ದರೂ ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಸದ್ಯ ನೆರೆ ಮನೆಯ ವಿಜಯಲಕ್ಷ್ಮೀ, ಕುಮಾರ್, ವಿಶಾಲ್ ಈ ಕೃತ್ಯ ಎಸಗಿದ್ದು, ದಿನನಿತ್ಯ ಮನೆ ಬಳಿ ಮಹಿಳೆಯೊಂದಿಗೆ ಜಗಳ ಆಡುವುದು, ಮನೆ ಮುಂದೆ ನಿಲ್ಲಿಸಿರುವ ಬೈಕ್‍ಗೆ ಬೆಂಕಿ ಹಚ್ಚುವುದು, ಮನೆಯ ಕಿಟಕಿ ಗ್ಲಾಸ್‍ಗೆ ಕಲ್ಲಿನಿಂದ ಹೊಡೆಯುವುದು ಹೀಗೆ ಅನೇಕ ತೊಂದರೆಗಳನ್ನು ನೀಡುತ್ತಿರುತ್ತಾರೆ.

    POLICE JEEP

    ಇದೀಗ ಮನನೊಂದ ಅಮುದಾ ಕುಟುಂಬಸ್ಥರು ನ್ಯಾಯಕ್ಕಾಗಿ ಸುಬ್ರಮಣ್ಯ ಪೊಲೀಸರ ಮೊರೆಹೋಗಿದ್ದರು. ಪೊಲೀಸರು ಮಾತ್ರ, ನೊಂದವರ ಸಹಾಯಕ್ಕೆ ಬಂದಿಲ್ಲ. ಇದನ್ನೂ ಓದಿ: ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ

  • ಜೋರಾಗಿ ಹಾಡು ಹಾಕಿದ್ದಕ್ಕೆ ನೆರೆಮನೆಯವನನ್ನೇ ಕೊಂದ!

    ಜೋರಾಗಿ ಹಾಡು ಹಾಕಿದ್ದಕ್ಕೆ ನೆರೆಮನೆಯವನನ್ನೇ ಕೊಂದ!

    ಮುಂಬೈ: ಜೋರಾಗಿ ಹಾಡು ಹಾಕಿದ್ದಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಸುರೇಂದ್ರ ಕುಮಾರ್ ಗುನ್ನಾರ್ (40). ನೆರೆಯ ಸೈಫ್ ಅಲಿ ಚಂದ್ ಅಲಿ ಶೇಖ್ ಎಂಬಾತ ಆರೋಪಿ. ಮುಂಬೈನ ಮಲ್ವಾನಿಯ ಅಂಬುಜ್‍ವಾಡಿ ಪ್ರದೇಶದಲ್ಲಿ ಬುಧವಾರ ಈ ಘಟನೆ ನಡೆದಿದೆ. ಇದನ್ನೂ ಓದಿ: ಮೊದಲನೇ ಬಾರಿಗೆ ನನ್ನ ಅಣ್ಣನಿಗೆ ವೋಟು ಹಾಕುತ್ತಿರೊದ್ರಿಂದ ಒಳ್ಳೆಯ ನಂಬರ್‌ನಲ್ಲಿ ವೋಟು ಹಾಕ್ದೆ ಅಷ್ಟೇ: ಪ್ರಜ್ವಲ್ ರೇವಣ್ಣ

    POLICE JEEP

    ಸುರೇಂದ್ರ ಕುಮಾರ್ ಗುನ್ನಾರ್ ತಮ್ಮ ಮನೆಯ ಹೊರಗೆ ಕುಳಿತು ರೆಕಾರ್ಡರ್‌ನಲ್ಲಿ ಜೋರಾಗಿ ಹಾಡು ಹಾಕಿಕೊಂಡು ಕೇಳುತ್ತಿದ್ದರು. ಆಗ ಈ ಶಬ್ದದಿಂದ ಕಿರಿಕಿರಿ ಅನುಭವಿಸುತ್ತಿದ್ದ ಅವರ ನೆರೆಹೊರೆಯವರಾದ ಸೈಫ್ ಅಲಿ ಚಂದ್ ಅಲಿ ಶೇಖ್ ಸೌಂಡ್ ಕಡಿಮೆ ಮಾಡಲು ಸುರೇಂದ್ರಗೆ ಸೂಚಿಸಿದ್ದಾನೆ. ಆದರೆ ಸುರೇಂದ್ರ ಮಾತ್ರ ಲೆಕ್ಕಿಸದೇ ಸುಮ್ಮನೇ ಹಾಡು ಕೇಳುತ್ತಾ ಕುಳಿತಿದ್ದಾನೆ. ಇದನ್ನೂ ಓದಿ:  ಫೋಟೋ ತೆಗೆಯುವಾಗ ಪುರುಷರು ಯಾಕೆ ತುಂಬಾ ಕಷ್ಟಪಡುತ್ತಾರೆ?: ರಾಧಿಕಾ ಪಂಡಿತ್

    ಶೇಖ್, ಸುರೇಂದ್ರನನ್ನು ಹೊಡೆದು ನೆಲಕ್ಕೆ ತಳ್ಳಿದ್ದಾನೆ. ತೀವ್ರ ಗಾಯಗೊಂಡಿದ್ದ ಸುರೇಂದ್ರ ಕುಮಾರ್ ಪ್ರಜ್ಞೆ ತಪ್ಪಿ ಬಿದ್ದರು. ಅತೀವ ರಕ್ತಸ್ರಾವ ಉಂಟಾಯಿತು. ಬಳಿಕ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಸಾವಿಗೀಡಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಭಾರತೀಯ ದಂಡ ಸಂಹಿತೆ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ನೆರೆಮನೆಯ ಹೆಣ್ಣು ನಾಯಿಯನ್ನು ರೇಪ್ ಮಾಡಿದ 67ರ ವೃದ್ಧ

    ನೆರೆಮನೆಯ ಹೆಣ್ಣು ನಾಯಿಯನ್ನು ರೇಪ್ ಮಾಡಿದ 67ರ ವೃದ್ಧ

    ಚಂಡೀಗಢ: ಇತ್ತೀಚೆಗೆ ಅತ್ಯಾಚಾರದ ಸುದ್ದಿಗಳು ಹೆಚ್ಚಾಗುತ್ತಲೆ ಇವೆ. ಪ್ರಾಣಿ, ಮಹಿಳೆಯರ ಮೇಲೆ ಅತ್ಯಚಾರ ಮಾಡುವುದನ್ನು ನಾವು ಕೇಳುತ್ತಿದ್ದೇವೆ. ಇಂತಹ ಒಂದು ಪ್ರಕರಣ ಹರಿಯಾಣದಲ್ಲಿ ಕೇಳಿ ಬಂದಿದೆ. 67 ವರ್ಷದ ವೃದ್ಧ ಹೆಣ್ಣು ನಾಯಿಯನ್ನು ಅತ್ಯಚಾರ ಮಾಡಿದ್ದಾನೆ.

    67 ವರ್ಷದ ಕಾಮುಕ ಮಾತು ಬಾರದ ಮೂಕಪ್ರಾಣಿ ಮೇಲೆ ಎರಗಿ ಬಿದ್ದಿದ್ದಾನೆ. ತನ್ನ ಕಾಮ ತೀರಿಸಿಕೊಳ್ಳಲು ತನ್ನ ಪಕ್ಕದ ಮನೆ ಸಾಕು ನಾಯಿಯನ್ನ ರೇಪ್ ಮಾಡಿದ್ದಾನೆ. ಹರಿಯಾಣ(Haryana)ದ ಗುರುಗ್ರಾಮ್ ಸೋಹ್ನಾ ಪ್ರದೇಶದಲ್ಲಿ ಈ ಅಸಹ್ಯಕರ ಘಟನೆ ನಡೆದಿದೆ. ಇದನ್ನೂ ಓದಿ: ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅರೆಸ್ಟ್

    ಸುರೇಶ್ ಬಂಧಿತ ಆರೋಪಿಯಾಗಿದ್ದಾನೆ. ಈತ ವಾಸಿಸುತ್ತಿದ್ದ, ಪಕ್ಕದ ಮನೆಯಲ್ಲಿ ಮುಖೇಶ್ ವಾಸವಿದ್ದರು. ಜೊತೆಗೆ ಮುದ್ದಾದ ಒಂದು ಗಂಡು ನಾಯಿ, ಒಂದು ಹೆಣ್ಣು ನಾಯಿಯನ್ನ ಸಾಕಿದ್ದರು. ಸೆಪ್ಟೆಂಬರ್ 28 ರಂದು ಸುರೇಶ್ ಹೆಣ್ಣು ನಾಯಿಯನ್ನ ಆಟವಾಡಿಸುತ್ತ ತನ್ನ ಮನೆಗೆ ಕರೆದೊಯ್ದಿದ್ದಾನೆ. ಕೆಲ ಸಮಯದ ಬಳಿಕ ನಾಯಿ ಮಾಲೀಕ ಮುಖೇಶ್ ತನ್ನ ನಾಯಿ ಕಾಣಿಸದಿದ್ದಕ್ಕೆ ಗಾಬರಿಯಾಗಿದ್ದರು. ಮನೆಯಿಂದ ಹೊರಬಂದು ನಾಯಿಯನ್ನು ಹುಡುಕಲು ಮುಂದಾಗಿದ್ದರು. ಈ ವೇಳೆ ಮತ್ತೊಂದು ನಾಯಿ ಮನೆ ಕಡೆ ತಿರುಗಿ ಬೊಗಳುತ್ತಿತ್ತು. ಇದನ್ನು ಕಂಡ ಮುಖೇಶ್, ಸುರೇಶ್ ಮನೆ ಒಳಗೆ ಹೋಗಿದ್ದ. ಸುರೇಶ್ ತನ್ನ ನಾಯಿ ಜೊತೆ ಅಸ್ವಾಭಾವಿಕ ಸಂಭೋಗ ನಡೆಸುವುದನ್ನು ಮುಖೇಶ್ ನೋಡಿದ್ದಾರೆ. ಕೂಡಲೇ ತನ್ನ ಮೊಬೈಲ್‍ನಲ್ಲಿ ನೀಚ ಕೃತ್ಯವನ್ನ ಸೆರೆಹಿಡಿದಿದ್ದಾರೆ. ಇದನ್ನೂ ಓದಿ: ಶಾರುಖ್ ಪುತ್ರ ಆರ್ಯನ್ ಇನ್ನೂ ಮಗು, ಉಸಿರಾಡಲು ಬಿಡಿ: ನಟ ಸುನೀಲ್ ಶೆಟ್ಟಿ

    ಈ ಸುದ್ದಿ ಹರಡುತ್ತಿದ್ದಂತೆ, ಸುರೇಶ್ ಸುಳ್ಳು ಹೇಳಿ ಮುಖೇಶ್ ವಿರುದ್ಧವೇ ಆರೋಪಿಸಿದ್ದಾರೆ. ತನ್ನ ಇಮೇಜ್ ಹಾಳುಮಾಡಲು ಆಧಾರರಹಿತ ಆರೋಪಗಳನ್ನು ಮುಖೇಶ್ ಹೊರಿಸುತ್ತಿದ್ದಾನೆ ಎಂದು ವೃದ್ಧ ಹೇಳಿದ್ದಾನೆ. ಆದರೆ ಸುರೇಶ್ ಕೃತ್ಯದ ವೀಡಿಯೋ ಮಾಡಿರುವ ಮುಖೇಶ್, ನನ್ನ ಬಳಿ ವೀಡಿಯೋ ಇದೆ, ಇಲ್ಲವಾದರೆ ಯಾರೂ ನನ್ನನ್ನು ನಂಬುತ್ತಿರಲಿಲ್ಲ. ಒಬ್ಬ ವೃದ್ಧ ಹೇಗೆ ಇಂತಹ ಕೃತ್ಯ ಎಸಗುತ್ತಾನೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ನಾಯಿ ಮಾಲೀಕ ಮುಖೇಶ್ ತಿಳಿಸಿದ್ದಾರೆ.

    ಒಂದು ದಿನದ ಬಳಿಕ ಮುಖೇಶ್ ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಯ ವಿರುದ್ಧ ವೀಡಿಯೋ ಸಾಕ್ಷ್ಯವನ್ನು ಸಹ ಸಲ್ಲಿಸಿದ್ದಾರೆ. ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸೆಕ್ಷನ್ 377 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸುರೇಶ್‍ನನ್ನು ಬಂಧಿಸಿ ಜೈಲಗಟ್ಟಿದ್ದಾರೆ.

  • ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ತಂದೆಯನ್ನೇ ಹತ್ಯೆಗೈದ ಬಾಲಕಿ

    ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ತಂದೆಯನ್ನೇ ಹತ್ಯೆಗೈದ ಬಾಲಕಿ

    ಚೆನ್ನೈ: ಕೆಲವು ದಿನಗಳ ಹಿಂದೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಅಪ್ರಾಪ್ತ ಬಾಲಕಿಯೇ ತನ್ನ ತಂದೆಯನ್ನು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಈ ಕುರಿತಂತೆ ಪೊಲೀಸರು, ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಬಾಲಕಿ ಆತ್ಮರಕ್ಷಣೆಗಾಗಿ ತನ್ನ ತಂದೆಯನ್ನೇ ಕೊಲೆ ಮಾಡಿದ್ದಾಳೆ. ಕೆಲವು ದಿನಗಳ ಹಿಂದೆ ಬಾಲಕಿ ಬಟ್ಟೆ ಒಗೆಯುವ ಕೆಲಸದಿಂದ ಮನೆಗೆ ಹಿಂದಿರುಗಿದ ಬಳಿಕ ತನ್ನ ತಂದೆಯನ್ನು ಕೊಲೆ ಮಾಡಿರುವುದಾಗಿ ನೆರೆಹೊರೆಯವರ ಬಳಿ ಹೇಳಿಕೊಂಡಿದ್ದಾಳೆ. ಈ ಹಿಂದೆ ಈ ಪ್ರಕರಣ ಕುರಿತಂತೆ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿದ್ದರು. ಆದರೆ ಇದೀಗ ತನಿಖೆ ಬಳಿಕ 40 ವರ್ಷದ ತನ್ನ ತಂದೆಯನ್ನು ಕೊಂದಿದ್ದು, ಮಗಳೇ ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೆ.28 ರವರೆಗೆ ರಾಜ್ಯದಲ್ಲಿ ಮಳೆ – ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ

    ಮದ್ಯವ್ಯಸನರಾಗಿದ್ದ ತಂದೆ ನೀಡುತ್ತಿದ್ದ ಹಿಂಸೆಯನ್ನು ಸಹಿಸಲಾಗದೇ ಬಾಲಕಿಯೆ ತಂದೆಯನ್ನು ಕೊಲೆಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇನ್ನೂ ಈ ವಿಚಾರವಾಗಿ ಕಾನೂನು ತಜ್ಞರನ್ನು ಸಂಪರ್ಕಿಸಿದಾಗ ಭಾರತೀಯ ದಂಡ ಸಂಹಿತೆ ಸೆಕ್ಷನ್ 100ರ ಅಡಿ ಖಾಸಗಿ ರಕ್ಷಣೆಯ ಹಕ್ಕನ್ನು ಜಾರಿಗೊಳಿಸಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ನಾವು ಆಕೆಯನ್ನು ಮುಕ್ತಗೊಳಿಸಿದ್ದೇವೆ ಎಂದು ವಿಲ್ಲುಪುರಂ ಪೊಲೀಸ್ ಅಧಿಕಾರಿ ಎನ್. ಶ್ರೀನಾಥ್ ತಿಳಿಸಿದ್ದಾರೆ.

    ವಿಚಾರಣೆ ವೇಳೆ ಬಾಲಕಿ ತನ್ನ ತಾಯಿ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಆಕೆಯ ಅಕ್ಕ 160 ಕಿ.ಮೀ ದೂರದಲ್ಲಿರುವ ಚೆನ್ನೈನ ಜವಳಿ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾಳೆ ಮತ್ತು ಆಕೆ ತನ್ನ ತಂದೆಯೊಟ್ಟಿಗೆ ವಾಸಿಸುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಇದೀಗ ಬಾಲಕಿಯನ್ನು ಬಾಲಗೃಹಕ್ಕೆ ಸ್ಥಳಾಂತರಿಸಲಾಗಿದ್ದು, ಈಗ ಬಾಲಕಿ ಕ್ಷೇಮವಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಓವೈಸಿ ಮನೆ ಮೇಲೆ ದಾಳಿ ಪ್ರಕರಣ -ನಾಲ್ವರು ಆರೋಪಿಗಳು ಪೊಲೀಸ್ ಕಸ್ಟಡಿಗೆ

  • ಕೂಲ್ ಡ್ರಿಂಕ್ಸ್‌ನಲ್ಲಿ ಮತ್ತು ಬರುವ ಔಷಧಿ ಹಾಕಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ

    ಕೂಲ್ ಡ್ರಿಂಕ್ಸ್‌ನಲ್ಲಿ ಮತ್ತು ಬರುವ ಔಷಧಿ ಹಾಕಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ

    ವಿಜಯವಾಡ: ಕೂಲ್ ಡ್ರಿಂಕ್ಸ್‌ನಲ್ಲಿ ಮತ್ತು ಬರುವ ಔಷಧಿ ಹಾಕಿ 30 ವರ್ಷದ ವ್ಯಕ್ತಿಯೊಬ್ಬ ಅಪ್ರಾಪ್ತೆಯ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ ಘಟನೆ ಆಂಧ್ರ ಪ್ರದೇಶದ ಗುಂಟೂರಿನ ತಡೆಪಲ್ಲಿಯಲ್ಲಿ ನಡೆದಿದೆ.

    ಗುಂಟೂರಿನ ತಡೆಪಲ್ಲಿ ಪ್ರದೇಶದ ಆರೋಪಿಯು 17 ವರ್ಷದ ಬಾಲಕಿಯ ಮೇಲೆ ಕಳೆದ ಆರು ತಿಂಗಳಲ್ಲಿ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆಯು ಎನ್‍ಜಿಓವೊಂದಕ್ಕೆ ಮಾಹಿತಿ ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಎನ್‍ಜಿಒ ಸಿಬ್ಬಂದಿಯ ಸಹಾಯದಿಂದ ಸಂತ್ರಸ್ತೆ ನೀಡಿ ದೂರಿನ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಸಂತ್ರಸ್ತೆಯ ದೂರಿನ ಪ್ರಕಾರ, ಆರೋಪಿಯು ಮನೆಯ ಪಕ್ಕದ ನಿವಾಸಿಯಾಗಿದ್ದು, ಈ ಮೊದಲು ಮತ್ತು ಬರುವ ಡ್ರಿಂಕ್ಸ್ ನೀಡಿ ನನಗೆ ಪ್ರಜ್ಞೆ ತಪ್ಪಿಸಿದ್ದ. ಬಳಿಕ ನನ್ನ ಮೇಲೆ ಅತ್ಯಾಚಾರ ಎಸಗಿ, ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ. ಇದಕ್ಕೆ ಒಪ್ಪದೆ ನಾನು ಪೋಷಕರ ಬಳಿ ಹೇಳಿಕೊಂಡಿದ್ದೆ. ಆದರೆ ಗ್ರಾಮದ ಹಿರಿಯರು ಮಧ್ಯಪ್ರವೇಶಿಸಿ ಪೊಲೀಸ್ ಠಾಣೆಗೆ ದೂರು ನೀಡಲು ಬಿಡಲಿಲ್ಲ. ಹೀಗಾಗಿ ನನ್ನನ್ನು ಗುಂಟೂರಿನ ಹಾಸ್ಟೆಲ್‍ಗೆ ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾಳೆ.

    ಆರೋಪಿಯು ಡಿಸೆಂಬರ್ 22ರಂದು ಗುಂಟೂರಿನ ಹಾಸ್ಟೆಲ್‍ಗೆ ಬಂದಿದ್ದ. ಈ ವೇಳೆ ನಿನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಹೀಗಾಗಿ ಆಕೆಯನ್ನು ನೋಡಲು ನೀನು ಈಗಲೇ ಬರಬೇಕು ಎಂದು ಒತ್ತಾಯಿಸಿದ್ದ. ತಾಯಿಯ ಆರೋಗ್ಯ ಕ್ಷೀಣಿಸುತ್ತಿರುವ ವಿಚಾರ ಕೇಳಿ ಆತನ ಜೊತೆಗೆ ಹೋದೆ. ಆದರೆ ಆರೋಪಿ ತನ್ನ ಮನೆಗೆ ನನ್ನನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

  • ನೆರೆಮನೆಯವರು ಬೈದ ಸಿಟ್ಟಿಗೆ 11ರ ಬಾಲಕನ ಬಲಿ ಪಡೆದ ಯುವಕ!

    ನೆರೆಮನೆಯವರು ಬೈದ ಸಿಟ್ಟಿಗೆ 11ರ ಬಾಲಕನ ಬಲಿ ಪಡೆದ ಯುವಕ!

    ನವದೆಹಲಿ: ನೆರೆಮನೆಯವರು ಬೈದ ಸಿಟ್ಟಿಗೆ ಅವರ 11 ವರ್ಷದ ಮಗನನ್ನು ಯುವಕನೊಬ್ಬ ಕತ್ತು ಹಿಸುಕಿ ಕೊಂದ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ.

    ಕಳೆದ ಎರಡು ವಾರದ ಹಿಂದೆ ಕಾಣೆಯಾಗಿದ್ದ ಬಾಲಕ ಈಗ ಹೆಣವಾಗಿ ಸಿಕ್ಕಿದ್ದಾನೆ. ಈಶಾನ್ಯ ದೆಹಲಿಯ ನೆಹರೂ ವಿಹಾರ್ ನಿವಾಸಿ ಡ್ಯಾನಿಷ್(28) ಕೃತ್ಯವೆಸೆಗಿರುವ ಆರೋಪಿ. ಡ್ಯಾನಿಷ್ ಹಾಗೂ ಬಾಲಕ ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರು. ಡ್ಯಾನಿಷ್ ಕೋಳಿ ಮಾರಿ ಜೀವನ ನಡೆಸುತ್ತಿದ್ದನು. ಬಾಲಕನೊಂದಿಗೆ ಆರೋಪಿ ಒಡನಾಟ ಚೆನ್ನಾಗಿಯೇ ಇತ್ತು. ಆದರೆ ಬಾಲಕನ ತಂದೆ ತಾಯಿ ಬೈದಿದ್ದಕ್ಕೆ ಆರೋಪಿ ಮಗನ ಮೇಲೆ ತನ್ನ ಸಿಟ್ಟನ್ನು ತೋರಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಒಂದು ಜೀವವನ್ನೇ ಬಲಿಪಡೆದಿದ್ದಾನೆ.

    ಬಾಲಕನ ಪೋಷಕರು ದಿನಕೂಲಿ ಕಾರ್ಮಿಕರು, ಹೇಗೋ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಡ್ಯಾನಿಷ್ ಹಾಗೂ ಬಾಲಕನ ಮನೆಯವರ ನಡುವೆ ಒಳ್ಳೆಯ ಒಡನಾಟವಿತ್ತು. ಆದರೆ ಕೆಲವು ದಿನಗಳ ಹಿಂದೆ ಡ್ಯಾನಿಷ್‍ಗೆ ಬಾಲಕನ ಪೋಷಕರು ಬೈದಿದ್ದರು. ಯಾವಾಗಲೂ ಮನೆ ಮುಂದೆ ಅಡ್ಡ ನಿಂತಿರುತ್ತೀಯ, ಓಡಾಡಲು ಕಷ್ಟವಾಗುತ್ತೆ ಎಂದು ಬೈದಿದ್ದರು. ಇಷ್ಟಕ್ಕೆ ಡ್ಯಾನಿಷ್ ಕೊಪಗೊಂಡಿದ್ದು, ಪೋಷಕರ ಮೇಲಿದ್ದ ಸಿಟ್ಟಿಗೆ ಮೇ 14ರಂದು ಬಾಲಕನನ್ನು ತನ್ನೊಡನೆ ಕರೆದೊಯ್ದು, ಖಜುರಿ ಖಾಸ್ ಫ್ಲೈಓವರ್ ಬಳಿ ಇರುವ ನಿರ್ಜನ ಪ್ರದೇಶದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಹಾಗೆಯೇ ಶವವನ್ನು ಅಲ್ಲಿಯೆ ಹೂತಿದ್ದಾನೆ.

    ಬಾಲಕ ಕಾಣೆಯಾಗಿರುವ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಾಗ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತನಿಖೆ ಕೈಗೊಂಡ ಪೊಲೀಸರು ಬಾಲಕ ಪ್ರತಿನಿತ್ಯ ಓಡಾಡುತ್ತಿದ್ದ ಸ್ಥಳಗಳಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಮೊದಲು ಪರಿಶೀಲನೆ ನಡೆಸಿದ್ದರು. ಈ ವೇಳೆ ಅಂಗಡಿಯೊಂದರ ಮುಂದೆ ಇದ್ದ ಸಿಸಿಟಿವಿಯಲ್ಲಿ ಡ್ಯಾನಿಷ್ ಜೊತೆ ಬಾಲಕ ಹೋಗುತ್ತಿದ್ದ ದೃಶ್ಯ ಸೆರೆಯಾಗಿತ್ತು. ಬಳಿಕ ಡ್ಯಾನಿಷ್‍ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯಾಂಶವನ್ನು ಆತ ಬಾಯ್ಬಿಟ್ಟಿದ್ದಾನೆ.

    ಇದೀಗ ಡ್ಯಾನಿಶ್ ಹೇಳಿಕೆಯನ್ನು ಮಾತ್ರ ದಾಖಲಿಸಿಕೊಂಡಿದ್ದೇವೆ. ಕೊಲೆಗೆ ಬೇರೆ ಕಾರಣಗಳು ಇರಬಹುದಾ ಎಂಬುದನ್ನು ಕೂಡ ಪತ್ತೆ ಹಚ್ಚುತ್ತಿದ್ದೇವೆ. ಹಾಗೆಯೇ ಬಾಲಕನ ಮೃತದೇಹ ಮಣ್ಣಿನಲ್ಲಿ ಹೂತಿಟ್ಟ ಕಾರಣಕ್ಕೆ ಕೊಳೆತಿದ್ದು, ಅದನ್ನು ಶವಪರೀಕ್ಷೆಂದು ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.