Tag: Neighbors

  • ನಿಶ್ಚಿತಾರ್ಥ ವರನಿಗೆ ಯುವತಿಯ ಅಶ್ಲೀಲ ಫೋಟೋ ಕಳುಹಿಸಿದ ನೆರೆಮನೆಯವ – ವಧು ಆತ್ಮಹತ್ಯೆ

    ನಿಶ್ಚಿತಾರ್ಥ ವರನಿಗೆ ಯುವತಿಯ ಅಶ್ಲೀಲ ಫೋಟೋ ಕಳುಹಿಸಿದ ನೆರೆಮನೆಯವ – ವಧು ಆತ್ಮಹತ್ಯೆ

    ಲಕ್ನೋ: ನೆರೆಮನೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೋರ್ವ ಮದುವೆ ನಿಶ್ಚಿಯವಾಗಿದ್ದ ಯುವತಿಯ ಅಶ್ಲೀಲ ಫೋಟೋಗಳನ್ನು ವರನಿಗೆ ಕಳುಹಿಸಿದ್ದರಿಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದಿದೆ.

    ಆರೋಪಿಯನ್ನು ರವಿ ಪ್ರಕಾಶ್ ಎಂದು ಗುರುತಿಸಲಾಗಿದ್ದು, ಈತ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರಿಂದ ತೀವ್ರವಾಗಿ ಮನನೊಂದ ಯುವತಿ ತನ್ನ ಕೋಣೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗುರುವಾರ ಬೆಳಗ್ಗೆ ಸೀಲಿಂಗ್ ಫ್ಯಾನ್‍ನಲ್ಲಿ ಯುವತಿ ನೇತಾಡುತ್ತಿರುವುದನ್ನು ಕಂಡು ಕುಟುಂಬಸ್ಥರು ಗಾಬರಿಗೊಂಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡೇ ಮಾಡ್ತೀವಿ – ಗುಂಡು ಹಾರಿಸ್ತೀರಾ ಹಾರಿಸಿ: ಮುತಾಲಿಕ್

    ಈ ಕುರಿತಂತೆ ಪ್ರತಿಕ್ರಿಯಿಸಿದ ಮೃತ ಯುವತಿಯ ಸಹೋದರ, ಕೆಲವು ದಿನಗಳ ಹಿಂದೆ ಆರೋಪಿ ಆಕೆಯ ಐಡಿಯನ್ನು ಕದ್ದಿದ್ದು, ನಂತರ ಅಶ್ಲೀಲ ಫೋಟೋಗಳನ್ನು ಮಾಡಲು ಬಳಸಿಕೊಂಡಿದ್ದಾನೆ. ಅಲ್ಲದೇ ಆ ಫೋಟೋಗಳನ್ನು ವರ ಮತ್ತು ಆತನ ಕುಟುಂಬಸ್ಥರಿಗೆ ಕಳುಹಿಸಿದ್ದಾನೆ. ಇದರಿಂದಾಗಿ ಮದುವೆ ರದ್ದುಗೊಳಿಸಲಾಗಿತ್ತು ಎಂದು ತಿಳಿಸಿದ್ದಾರೆ.

    ಇದೀಗ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಜೊತೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಲಖಿಂಪುರ ಖೇರಿಯ ಹೆಚ್ಚುವರಿ ಎಸ್‍ಪಿ ಅರುಣ್ ಕುಮಾರ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಚೈಲ್ಡೀಶ್‌, ಅಪ್ರಬುದ್ಧ ನಾಯಕ – ರಾಹುಲ್‌ ಗಾಂಧಿಯಿಂದಲೇ ಕಾಂಗ್ರೆಸ್‌ ಅವನತಿ

  • ಆಂಧ್ರಪ್ರದೇಶ ಪ್ರವಾಹ ಸಂತ್ರಸ್ತರಿಗೆ ಮಿಡಿದ ಟಾಲಿವುಡ್ ಸ್ಟಾರ್ಸ್

    ಆಂಧ್ರಪ್ರದೇಶ ಪ್ರವಾಹ ಸಂತ್ರಸ್ತರಿಗೆ ಮಿಡಿದ ಟಾಲಿವುಡ್ ಸ್ಟಾರ್ಸ್

    ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಪ್ರವಾಹವಾಗುತ್ತಿದ್ದು, ಅದಕ್ಕೆ ಟಾಲಿವುಡ್ ಸ್ಟಾರ್ ಗಳು ಸಂತ್ರಸ್ತರಿಗಾಗಿ ಮಿಡಿದಿದ್ದಾರೆ.

    ಆಂಧ್ರ ಪ್ರವಾಹದಿಂದ ತತ್ತರಿಸುತ್ತಿರುವ ಜನರಿಗಾಗಿ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು 25 ಲಕ್ಷ ರೂ. ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ.

    ಟ್ವೀಟ್ ಮಾಡಿದ ಅವರು, ಆಂಧ್ರಪ್ರದೇಶದಲ್ಲಿ ವಿನಾಶಕಾರಿ ಪ್ರವಾಹವಾಗುತ್ತಿದೆ. ನಾನು ಸಿಎಂಆಎರ್‍ಎಫ್ ನಿಧಿಗೆ 25 ಲಕ್ಷ ರೂ. ನೀಡಲು ಬಯಸುತ್ತೇನೆ. ಈ ಬಿಕ್ಕಟ್ಟಿನ ಸಮಯದಲ್ಲಿ ಎಪಿಗೆ ಸಹಾಯ ಮಾಡಲು ಎಲ್ಲರೂ ಮುಂದೆ ಬರಲು ವಿನಂತಿಸಿಕೊಳ್ಳುತ್ತೇನೆ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸ್ನೇಹಿತರು ಒಬ್ಬರಿಗೊಬ್ಬರು ಟ್ವೀಟ್ ಮಾಡಬಾರದೇ – ಅಭಿಮಾನಿಗಳಲ್ಲಿ ಶ್ರೇಯಾ ಪ್ರಶ್ನೆ

    ಮಹೇಶ್ ಬಾಬು ಮಾತ್ರವಲ್ಲ ಟಾಲಿವುಡ್ ನ ಮತ್ತೊಬ್ಬ ಸೂಪರ್ ಸ್ಟಾರ್ ಜ್ಯೂ.ಎನ್ ಟಿಆರ್ ಸಹ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾಗಿದ್ದು, ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಸಂತ್ರಸ್ತರಾದ ಜನರು ದುಃಸ್ಥಿತಿಯಲ್ಲಿ ಇದ್ದಾರೆ. ಅದಕ್ಕೆ ನಾನು ಅವರ ಚೇತರಿಕೆಗೆ ಒಂದು ಸಣ್ಣ ಹೆಜ್ಜೆಯನ್ನು ಇಡುತ್ತಿದ್ದು, ಸಿಎಂ ಪರಿಹಾರ ನಿಧಿಗೆ 25 ಲಕ್ಷವನ್ನು ನೀಡುತ್ತಿದ್ದೇನೆ ಎಂದು ಬರೆದು ಅಭಿಮಾನಿಗಳಲ್ಲಿ ನೀವು ಸಹ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಆಂಧ್ರಪ್ರದೇಶದಲ್ಲಿ ಪ್ರಕೃತಿ ವಿಕೋಪದಿಂದ ನೂರಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡು ಕಷ್ಟ ಪಡುತ್ತಿದ್ದಾರೆ. ಟಾಲಿವುಡ್ ಸ್ಟಾರ್ ಗಳು ಆಂಧ್ರ ಸಿಎಂ ಪರಿಹಾರ ನಿಧಿಗೆ ತಲಾ 25 ಲಕ್ಷ ದೇಣಿಗೆ ನೀಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಂದೇಶವನ್ನು ನೀಡಿದ್ದಾರೆ. ಇದನ್ನೂ ಓದಿ:  ಉತ್ತರ ಪ್ರದೇಶದ ಸರ್ಕಾರಿ ನೌಕರರು, ವಕೀಲರಿಗೆ 1 ರೂ.ಗೆ ಸಿಗಲಿದೆ ಮನೆ

    ಆಂಧ್ರ ಸಿಎಂ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರು ಸಂತ್ರಸ್ತರ ಕಷ್ಟವನ್ನು ತಿಳಿದುಕೊಳ್ಳಲು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.

  • ಸ್ನೇಹಿತನಿಂದ ಚಾಕು ಇರಿತ – 7 ವರ್ಷದ ಮಗನ ಮುಂದೆಯೇ ದಂಪತಿ ಸಾವು

    ಸ್ನೇಹಿತನಿಂದ ಚಾಕು ಇರಿತ – 7 ವರ್ಷದ ಮಗನ ಮುಂದೆಯೇ ದಂಪತಿ ಸಾವು

    ನವದೆಹಲಿ: 7 ವರ್ಷದ ತಮ್ಮ ಮಗನ ಮುಂದೆಯೇ ತಂದೆ, ತಾಯಿಯನ್ನು ವ್ಯಕ್ತಿಯೊಬ್ಬ ಕೊಲೆಗೈದ ಘಟನೆ ದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ.

    ಕೊಲೆಯಾದ ದಂಪತಿಯನ್ನು ದುಂಡೇಹಾರದ ನಿವಾಸಿಗಳಾದ ವಿಕ್ರಮ್ ಸಿಂಗ್ ಮತ್ತು ಅವರ ಪತ್ನಿ ಜ್ಯೋತಿ ಎಂದು ಗುರುತಿಸಲಾಗಿದೆ. ವಿಕ್ರಮ್ ಸಿಂಗ್ ಅವರ ಸ್ನೇಹಿತ ಅಭಿನವ್ ಕೊಲೆ ಮಾಡಿ ಸ್ಥಳೀಯರ ಕೈಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

    ಆರೋಪಿ ಅಭಿನವ್ ವಿಕ್ರಮ್ ಸಿಂಗ್ ಅವರ ಸ್ನೇಹಿತನಾಗಿದ್ದು, ವಿಕ್ರಮ್ ವಿದೇಶದಲ್ಲಿ ನಿನಗೆ ಕೆಲಸ ಕೊಡುಸುತ್ತೇನೆ ಎಂದು ಹೇಳಿ ಅಭಿನವ್ ಬಳಿ 1.5 ಲಕ್ಷ ರೂ ಪಡೆದುಕೊಂಡಿದ್ದಾನೆ. ಆದರೆ ಅಭಿನವ್‍ಗೆ ಕೆಲಸ ಕೊಡಿಸಲು ವಿಕ್ರಮ್‍ನಿಂದ ಸಾಧ್ಯವಾಗಿಲ್ಲ. ಈ ವಿಚಾರಕ್ಕೆ ಈ ಇಬ್ಬರ ನಡುವೆ ಜಗಳವಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

    ಈ ವಿಚಾರವಾಗಿ ಮಾತನಾಡಲು ತಡರಾತ್ರಿ ಅಭಿನವ್ ವಿಕ್ರಮ್ ಸಿಂಗ್ ಅವರ ಮನೆಗೆ ಬಂದಿದ್ದಾನೆ. ಇಬ್ಬರು ಕುಳಿತು ಮದ್ಯಪಾನ ಮಾಡಿದ್ದಾರೆ. ನಂತರ ಅಭಿನವ್ ಮತ್ತು ವಿಕ್ರಮ್ ಕೆಲಸದ ವಿಚಾರವಾಗಿ ಮತ್ತೆ ಮನೆಯಲ್ಲಿ ಜಗಳವಾಡಿದ್ದಾರೆ. ಈ ವೇಳೆ ಅಭಿನವ್ ಚಾಕುವಿನಿಂದ ವಿಕ್ರಮ್‍ಗೆ ಇರಿದಿದ್ದಾನೆ. ಗಂಡನನ್ನು ಬಿಡಿಸಿಕೊಳ್ಳಲು ಬಂದ ಪತ್ನಿ ಜ್ಯೋತಿಯನ್ನು ಕೂಡ ಅಭಿನವ್ ಇರಿದು ಇಬ್ಬರನ್ನು ಕೊಲೆ ಮಾಡಿದ್ದಾನೆ.

    ಈ ಸಮಯದಲ್ಲಿ ಮನೆಯೊಳಗೆ ಗಲಾಟೆಯಾಗುತ್ತಿದ್ದನ್ನು ಗಮನಿಸಿದ ನೆರೆಹೊರೆಯವರು ಬಾಗಿಲು ಮುರಿದು ಮನೆಯೊಳಗೆ ಬಂದಿದ್ದಾರೆ. ಈ ವೇಳೆ ಇರಿತಕ್ಕೆ ಒಳಗಾಗಿದ್ದ ದಂಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಈ ಘಟನೆಯನ್ನು ಕಣ್ಣಾರೆ ಕಂಡ ದಂಪತಿಯ 7 ವರ್ಷದ ಮಗ ಭಯಭೀತನಾಗಿ ನಿಂತಿದ್ದ. ಸ್ಥಳೀಯರು ಆರೋಪಿ ಅಭಿನವ್‍ನನ್ನು ರೆಡ್‍ಹ್ಯಾಂಡ್ ಆಗಿ ಹಿಡಿದ್ದಾರೆ ಎಂದು ಸಹಾಯಕ ಪೊಲೀಸ್ ಆಯುಕ್ತ ಬೆರಾಮ್ ಸಿಂಗ್ ಹೇಳಿದ್ದಾರೆ.