Tag: neighbor

  • ತನ್ನ ಬೆಕ್ಕು ಕದ್ದಿದ್ದಾರೆಂದು ಶಂಕಿಸಿ ನೆರೆಮನೆಯವರ ಪಾರಿವಾಳಗಳಿಗೆ ವಿಷ ಉಣಿಸಿದ

    ತನ್ನ ಬೆಕ್ಕು ಕದ್ದಿದ್ದಾರೆಂದು ಶಂಕಿಸಿ ನೆರೆಮನೆಯವರ ಪಾರಿವಾಳಗಳಿಗೆ ವಿಷ ಉಣಿಸಿದ

    ಲಕ್ನೋ: ತನ್ನ ಬೆಕ್ಕನ್ನು (Cat) ಕದ್ದೊಯ್ದಿದ್ದಾರೆ ಎಂದು ಶಂಕಿಸಿ ವ್ಯಕ್ತಿಯೊಬ್ಬ ಕೋಪದಿಂದ ನೆರೆಮನೆಯವರ (Neighbor) ಪಾರಿವಾಳಗಳಿಗೆ (Pigeon) ವಿಷ (Poison) ನೀಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಷಹಜಹಾನ್‌ಪುರದಲ್ಲಿ ನಡೆದಿದೆ.

    ಘಟನೆ ಠಾಣಾ ಸದರ್ ಬಜಾರ್‌ನ ಮೊಹಲ್ಲಾ ಅಮಾಂಜೈ ಎಂಬಲ್ಲಿ ಮಂಗಳವಾರ ನಡೆದಿದೆ. ಆರೋಪಿ ಅಬಿದ್‌ನ ಬೆಕ್ಕು ಇತ್ತೀಚೆಗೆ ಕಣ್ಮರೆಯಾಗಿತ್ತು. ತನ್ನ ಬೆಕ್ಕನ್ನು ನೆರೆ ಮನೆಯ ಅಲಿ ಕಳ್ಳತನ ಮಾಡಿದ್ದಾನೆ ಎಂದು ಭಾವಿಸಿ ಆತ ಈ ಕೃತ್ಯ ನಡೆಸಿದ್ದಾನೆ.

    ಆರೋಪಿ ಅಬಿದ್ ತನ್ನ ಬೆಕ್ಕು ಕಾಣೆಯಾಗಿದೆ, ಅದನ್ನು ನೆರೆಮನೆಯವರು ಕಳ್ಳತನ ಮಾಡಿದ್ದಾರೆ ಎಂದು ಭಾವಿಸಿ ವರ್ಷಗಳಿಂದ ಸಾಕಿದ್ದ ಪಾರಿವಾಳಗಳಿಗೆ ವಿಷ ಉಣಿಸಿದ್ದಾನೆ. ನೆರೆಮನೆಯವ ಸಾಕಿದ್ದ 78 ಪಾರಿವಾಳಗಳಲ್ಲಿ ವಿಷ ತಿಂದು ಸುಮಾರು 30 ಪಾರಿವಾಳಗಳು ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗರ್ಭಿಣಿಯಾಗಲು ಮಹಿಳೆಗೆ ಮಾನವನ ಮೂಳೆ ತಿನ್ನುವಂತೆ ಒತ್ತಾಯಿಸಿದ ಪಾಪಿ ಪತಿ

    ಘಟನೆಗೆ ಸಂಬಂಧಿಸಿದಂತೆ ಅಬಿದ್ ಸೇರಿದಂತೆ ಮೂವರ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನೆ 428 (ಪ್ರಾಣಿಗಳನ್ನು ಕೊಲ್ಲುವ ಮೂಲಕ ದುಷ್ಕೃತ್ಯ ಎಸಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾವನ್ನಪ್ಪಿರುವ ಪಾರಿವಾಳಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಸೀಟ್‌ಬೆಲ್ಟ್ ಹಾಕದ ರಿಷಿ ಸುನಾಕ್‌ಗೆ ದಂಡ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅನ್ಯ ಸಮುದಾಯದವರೊಂದಿಗೆ ಮಗ ಮಾತನಾಡಿದ್ದಕ್ಕೆ ನೆರೆಹೊರೆಯವರಿಂದ ತಂದೆಯ ಹತ್ಯೆ

    ಅನ್ಯ ಸಮುದಾಯದವರೊಂದಿಗೆ ಮಗ ಮಾತನಾಡಿದ್ದಕ್ಕೆ ನೆರೆಹೊರೆಯವರಿಂದ ತಂದೆಯ ಹತ್ಯೆ

    ಲಕ್ನೋ: ಯುವಕನೊಬ್ಬ ಅನ್ಯ ಸಮುದಾಯದವರೊಂದಿಗೆ (Another Community) ಸ್ನೇಹ ಬೆಳೆಸಿದ್ದ ಎಂಬ ಕಾರಣಕ್ಕೆ ಆತನ ತಂದೆಯನ್ನು (Father) ಮನಬಂದಂತೆ ಥಳಿಸಿ ನೆರೆಹೊರೆಯವರೇ ಹತ್ಯೆ (Murder) ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ದಾಳಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಪುತ್ರನೂ (Son) ಗಾಯಗೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ.

    ಮೃತ ವ್ಯಕ್ತಿಯ ಮಗ ಶಾರುಖ್ ಶೇಖ್ (20) ಅನ್ಯ ಸಮುದಾಯದ ಸ್ನೇಹಿತರೊಂದಿಗೆ ಮಾತನಾಡಿದ ಎಂಬ ಕಾರಣಕ್ಕೆ ನೆರೆಹೊರೆಯವರು ಥಳಿಸಿದ್ದಾರೆ. ತನ್ನ ಮಗನನ್ನು ಥಳಿಸುತ್ತಿರುವುದನ್ನು ಕಂಡು ಮಹಮ್ಮದ್ ಸರ್ತಾಜ್ ಆತನನ್ನು ರಕ್ಷಿಸಲು ಧಾವಿಸಿದ್ದಾರೆ. ಆದರೆ ಈ ವೇಳೆ ನೆರೆಹೊರೆಯವರು ಸರ್ತಾಜ್ ಮೇಲೂ ಹಲ್ಲೆ ನಡೆಸಿದ್ದಾರೆ. ಇದರಿಂದ ಸರ್ತಾಜ್ ಪ್ರಜ್ಞೆ ಕಳೆದುಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ವರದಿಗಳ ಪ್ರಕಾರ ಶಾರುಖ್ ತನ್ನ ಇಬ್ಬರು ಸ್ನೇಹಿತರೊಂದಿಗೆ ತಮ್ಮ ಮನೆಯ ಹೊರಗಡೆ ಮಾತನಾಡುತ್ತಿದ್ದ. ಈ ವೇಳೆ ನೆರೆಹೊರೆಯವರಾದ ರಶೀದ್ ಖಾನ್, ಅಶು ಖಾನ್, ಫಯ್ಯಾಮ್ ಹಾಗೂ ಫಾಜಿಲ್ ಆತನನ್ನು ನಿಂದಿಸಿ ಥಳಿಸಿದ್ದಾರೆ. ಈ ವೇಳೆ ಆತನ ಸ್ನೇಹಿತರು ಹೇಗೋ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಶಾರುಖ್‌ನನ್ನು ಥಳಿಸುತ್ತಿದ್ದುದನ್ನು ಕಂಡ ಸರ್ತಾಜ್ ಮಗನನ್ನು ರಕ್ಷಿಸಲು ಅಲ್ಲಿಗೆ ಬಂದಾಗ ಅವರ ಮೇಲೆ ಹಾಕಿ ಸ್ಟಿಕ್‌ಗಳಿಂದ ಥಳಿಸಿದ್ದಾರೆ. ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್‌ ಉದ್ಘಾಟನೆಗೊಂಡ 4ನೇ ದಿನಕ್ಕೆ ಕಲ್ಲು ತೂರಾಟ- ಕಿಟಕಿ ಗಾಜು ಪುಡಿ ಪುಡಿ

    ನನ್ನ ಕುಟುಂಬ ಅನ್ಯ ಸಮುದಾಯದವರ ಭೇಟಿಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ ನಮ್ಮ ನೆರೆಹೊರೆಯವರು ಇದನ್ನು ವಿರೋಧಿಸಿದ್ದು, ಅನ್ಯ ಧರ್ಮದವರೊಂದಿಗೆ ಸಂಬಂಧ ಕಡಿದುಕೊಳ್ಳುವಂತೆ ಹೇಳಿದ್ದರು. ಇಲ್ಲದೇ ಹೋದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಹಾಕಿದ್ದರು. ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳ ವಿರುದ್ಧವೂ ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗಿ ವಿನಂತಿಸುತ್ತೇವೆ ಎಂದು ಶಾರುಖ್‌ನ ಹಿರಿಯ ಸಹೋದರ ದಾವುದ್ ತಿಳಿಸಿದ್ದಾರೆ.

    CRIME 2

    ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಬ್ಬ ರಷ್ಯಾ ವ್ಯಕ್ತಿಯ ಶವ ಪತ್ತೆ – 15 ದಿನದಲ್ಲಿ 3ನೇ ಘಟನೆ

    Live Tv
    [brid partner=56869869 player=32851 video=960834 autoplay=true]

  • ಗಂಡ-ಹೆಂಡತಿ ಜಗಳ ಬಿಡಿಸಲು ಬಂದ ನೆರೆಮನೆಯವನೇ ಕೊಲೆಯಾದ

    ಭೋಪಾಲ್: ನಾನ್‌ವೆಜ್ (Nonveg) ಅಡುಗೆ ಮಾಡುವ ವಿಚಾರಕ್ಕೆ ಗಂಡ ಹೆಂಡತಿ (Husband Wife) ನಡುವೆ ಜಗಳ ಉಂಟಾಗಿದ್ದು, ಇದನ್ನು ಬಿಡಿಸಲು ಮುಂದಾದ ನೆರೆಮನೆಯವನೇ (Neighbor) ಕೊಲೆಯಾಗಿರುವ ಘಟನೆ ಮಧ್ಯಪ್ರದೇಶದ (Madhya Pradesh) ಭೋಪಾಲ್‌ನಲ್ಲಿ (Bhopal) ನಡೆದಿದೆ.

    ವರದಿಗಳ ಪ್ರಕಾರ ಮಂಗಳವಾರ ನಾನ್‌ವೆಜ್ ಮಾಡಬಾರದು ಎಂದು ಮಹಿಳೆ ವಾದಿಸಿದ್ದಕ್ಕೆ ಆಕೆಯ ಪತಿ ಪಪ್ಪು ಜಗಳ ಪ್ರಾರಂಭಿಸಿದ್ದಾನೆ. ಬಳಿಕ ದಂಪತಿಯ ವಾಗ್ವಾದ ನೆರೆಮನೆಯವನಾದ ಬಿಲ್ಲುವಿನ ಕಿವಿಗೆ ಬಿದ್ದು, ಅವರ ಜಗಳವನ್ನು ತಡೆಯುವ ಸಲುವಾಗಿ ಮಧ್ಯಪ್ರವೇಶಿಸಿದ್ದಾನೆ. ಆದರೆ ಪಪ್ಪು ಆತನನ್ನು ಹೊಡೆದು ಕೊಂದಿದ್ದಾನೆ.

    ಹಿಂದೂ ಸಂಪ್ರದಾಯದ ಪ್ರಕಾರ ಹಲವರು ಮಂಗಳವಾರ ಮಂಗಳಕರ ದಿನವೆಂದು ಪರಿಗಣಿಸುತ್ತಾರೆ. ಹೀಗಾಗಿ ಕೆಲವರು ಅಂದು ಮಾಂಸಾಹಾರವನ್ನು ಸೇವಿಸುವುದಿಲ್ಲ. ಈ ಹಿನ್ನೆಲೆ ಮಹಿಳೆ ತನ್ನ ಪತಿಗೆ ಮಾಂಸಾಹಾರ ಮಾಡುವುದು ಬೇಡ ಎಂದು ವಾದಿಸಿದ್ದಾಳೆ. ಇದರಿಂದ ಕೋಪಗೊಂಡ ಪಪ್ಪು ಜಗಳ ಪ್ರಾರಂಭಿಸಿದ್ದಾನೆ. ಇದನ್ನೂ ಓದಿ: ಕಾಪಿ ಚೀಟಿಯನ್ನು ಲವ್ ಲೆಟರ್ ಎಂದು ತಪ್ಪಾಗಿ ಭಾವಿಸಿದ ವಿದ್ಯಾರ್ಥಿನಿ- ವಿದ್ಯಾರ್ಥಿಯ ಬರ್ಬರ ಕೊಲೆ

    ಗಲಾಟೆ ಕೇಳಿದ ಬಿಲ್ಲು ಅವರಿಬ್ಬರ ಜಗಳವನ್ನು ಬಿಡಿಸಲು ಹೋಗಿ, ಸಮಸ್ಯೆಯನ್ನು ಇತ್ಯರ್ಥವೇನೋ ಮಾಡಿ ವಾಪಾಸ್ ತನ್ನ ಮನೆಗೆ ಬಂದಿದ್ದಾನೆ. ಆದರೆ ಬಳಿಕ ಪಪ್ಪು ಬಿಲ್ಲುವಿನ ಮನೆಗೆ ಹೋಗಿ ಹೊಡೆದು ಕೊಂದಿದ್ದಾನೆ.

    KILLING CRIME

    ಬಿಲ್ಲು ಸಾವಿನ ಬಳಿಕ ಪೊಲೀಸರು ಆರೋಪಿಯ ಪತ್ನಿಯ ಹೇಳಿಕೆಯ ಆಧಾರದ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ. ಅದೇ ದಿನ ಆರೋಪಿ ಪಪ್ಪುವನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪಟಾಕಿ ಸಂಗ್ರಹಿಸಿದ್ದ ಗೋಡೌನ್‌ನಲ್ಲಿ ಸ್ಫೋಟ – 4 ಸಾವು, 7 ಜನ ಗಂಭೀರ

    Live Tv
    [brid partner=56869869 player=32851 video=960834 autoplay=true]

  • ಅಸ್ವಸ್ಥ ತಾಯಿಗೆ ಔಷಧ ಕೇಳಿದ ಬಾಲಕಿ ಮೇಲೆ ಅತ್ಯಾಚಾರ

    ಅಸ್ವಸ್ಥ ತಾಯಿಗೆ ಔಷಧ ಕೇಳಿದ ಬಾಲಕಿ ಮೇಲೆ ಅತ್ಯಾಚಾರ

    ನವದೆಹಲಿ: ತಾಯಿಗೆ ಹುಷಾರಿಲ್ಲವೆಂದು ಸಹಾಯ ಕೇಳಿದ ಅಪ್ರಾಪ್ತ ಬಾಲಕಿ ಮೇಲೆ ನೆರೆಮನೆಯ ವ್ಯಕ್ತಿ ಅತ್ಯಾಚಾರವೆಸಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಈ ಘಟನೆ ಜನವರಿ 22ರಂದು ಸಂಭವಿಸಿದ್ದು, ಮರುದಿನ ದೆಹಲಿಯ ಪಾಂಡವ್ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಬಾಲಕಿ ದೂರು ದಾಖಲಿಸಿದ್ದಾಳೆ. ಗ್ರಾಮಕ್ಕೆ ಹೋಗಿದ್ದ ಬಾಲಕಿ ತನ್ನ ಅನಾರೋಗ್ಯ ಪೀಡಿತ ತಾಯಿಯೊಂದಿಗೆ ಮನೆಯಲ್ಲಿ ಒಬ್ಬಳೆ ಇದ್ದಳು. ತಾಯಿಯ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಬಾಲಕಿ ನೆರೆಹೊರೆಯವರ ಬಳಿ ಸಹಾಯ ಕೇಳಿದ್ದಾಳೆ. ಇದನ್ನೂ ಓದಿ: ಸಿಎಂ ಅಭ್ಯರ್ಥಿ ಘೋಷಿಸಲಿ, ಯಾರು ಉಳಿಯುತ್ತಾರೆ, ಹೋಗುತ್ತಾರೆ ನೋಡೋಣ: ಸಿ.ಟಿ. ರವಿ

    ಈ ವೇಳೆ ಔಷಧಿ ಕೊಡಿಸಿ ಸಹಾಯ ಮಾಡುವ ನೆಪದಲ್ಲಿ ಆರೋಪಿ ಬಾಲಕಿಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಇದಲ್ಲದೇ ಆಕೆಗೆ ಈ ವಿಚಾರ ಹೊರಗೆ ಹೇಳಿದರೆ, ಕೊಲ್ಲುವುದಾಗಿ ಬೆದರಿಕೆಯೊಡ್ಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದೀಗ ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆತ್ಮ ಗೌರವ ಇದ್ದವರು ಯಾರೂ ಕಾಂಗ್ರೆಸ್‍ಗೆ ವಾಪಸ್ ಹೋಗಲ್ಲ: ಬಿ.ಸಿ.ಪಾಟೀಲ್

  • ಮಾತನಾಡಲು ನಿರಾಕರಿಸಿದಕ್ಕೆ ಯುವತಿಗೆ ಆ್ಯಸಿಡ್ ದಾಳಿ ಬೆದರಿಕೆ ಹಾಕ್ದ

    ಮಾತನಾಡಲು ನಿರಾಕರಿಸಿದಕ್ಕೆ ಯುವತಿಗೆ ಆ್ಯಸಿಡ್ ದಾಳಿ ಬೆದರಿಕೆ ಹಾಕ್ದ

    ಗಾಂಧಿನಗರ: ಮಾತನಾಡಲು ನಿರಾಕರಿಸಿದ 25 ವರ್ಷದ ಯುವತಿಗೆ ಆ್ಯಸಿಡ್ ದಾಳಿ ನಡೆಸುವುದಾಗಿ ವ್ಯಕ್ತಿಯೋರ್ವ ಬೆದರಿಕೆ ಹಾಕಿರುವ ಘಟನೆ ಅಹಮದಬಾದ್‍ನಲ್ಲಿ ನಡೆದಿದೆ.

    ಇದೀಗ ಯುವತಿ ಆ್ಯಸಿಡ್ ದಾಳಿ ಬೆದರಿಕೆಯೊಡ್ಡಿದ್ದ ಆರೋಪಿ ವಿರುದ್ಧ ವೆಜಾಲ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಹಮದಾಬಾದ್‍ನ ಜುಹಾಪುರದ ನಿವಾಸಿಯಾಗಿರುವ ಸಂತ್ರಸ್ತೆ, ವೆಜಲ್‍ಪುರದಲ್ಲಿ ವಾಸಿಸುವ ಮನ್ಸೂರಿ ಇಬ್ಬರೂ ಸುಮಾರು ಏಳು ವರ್ಷಗಳಿಂದ ಸ್ನೇಹಿತರಾಗಿದ್ದರು. ಆದರೆ ಇದೀಗ ಯುವತಿ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ರೇಪ್ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು!

    ಮನ್ಸೂರಿ ಶನಿವಾರ ಮಧ್ಯಾಹ್ನ ಸಂತ್ರಸ್ತೆ ಮನೆಗೆ ಆಗಮಿಸಿ ಮತನಾಡುವುದನ್ನು ನಿಲ್ಲಿಸಿರುವ ಕುರಿತಂತೆ ಪ್ರಶ್ನಿಸಿದ್ದಾನೆ. ಆಗ ಯುವತಿ ನಿನ್ನೊಂದಿಗೆ ಸ್ನೇಹ ಬೆಳೆಸಲು ಇಷ್ಟವಿಲ್ಲ ಎಂದು ಹೇಳಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಮನ್ಸೂರಿ ಆಕೆಯ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಈ ವೇಳೆ ಯುವತಿ ಕಿರುಚಾಡಿದ್ದರಿಂದ ಅವರ ನೆರೆಹೊರೆಯವರು ಧಾವಿಸಿದಾರೆ. ಆಗ ವ್ಯಕ್ತಿ ಸಂತ್ರಸ್ತೆಗೆ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದಾನೆ.

    ಈ ಘಟನೆ ಕುರಿತಂತೆ ಯುವತಿ ತನ್ನ ತಂದೆಗೆ ವಿವರಿಸಿದಾಗ ಕೂಡಲೇ ಪೊಲೀಸರನ್ನು ಸಂಪರ್ಕಿಸಲು ತಿಳಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಕ್ರಮಿನಲ್ ಬೆದರಿಕೆ ಮತ್ತು ಇತರ ದೂರುಗಳನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ಹಿರಿಯರ ಕಿರುಕುಳ – ಚರ್ಚಿನಲ್ಲಿಯೇ ಪಾದ್ರಿ ಆತ್ಮಹತ್ಯೆಗೆ ಯತ್ನ

  • ಮನೆಗೆ ನುಗ್ಗಿ ಗನ್ ತೋರಿಸಿ 14ರ ಬಾಲಕಿಯ ಅತ್ಯಾಚಾರ

    ಮನೆಗೆ ನುಗ್ಗಿ ಗನ್ ತೋರಿಸಿ 14ರ ಬಾಲಕಿಯ ಅತ್ಯಾಚಾರ

    – ರಾತ್ರಿ ಗೋಡೆ ಹಾರಿ ಬಂದ ಪಕ್ಕದ್ಮನೆ ವ್ಯಕ್ತಿ

    ಲಕ್ನೋ: ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬ ಗೋಡೆ ಹಾರಿ ನೆರೆಮನೆಗೆ ನುಗ್ಗಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

    ಬಾಲಕಿ ತನ್ನ ಕುಟುಂಬಸ್ಥರ ಜೊತೆ ಮಲಗಿದ್ದಳು. ರಾತ್ರಿ ಮನೆಗೆ ನುಗ್ಗಿದ ಕಾಮುಕ ದೇಶಿ ಗನ್ ತೋರಿಸಿ ಬೆದರಿಸಿ ಅತ್ಯಾಚಾರ ನಡೆಸಿದ್ದಾನೆ. ಬಾಲಕಿ ಸಹಾಯಕ್ಕಾಗಿ ಕಿರುಚಿಕೊಂಡಾಗ ಕುಟುಂಬಸ್ಥರು ಕಾಮುಕನನ್ನ ಹಿಡಿದು ಥಳಿಸಿದ್ದಾರೆ.

    ಘಟನೆ ಸಂಬಂಧ ಬಾಲಕಿ ಪೋಷಕರು ನೋಯ್ಡಾ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನ ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

     

  • ನೆರೆಮನೆ ಮಹಿಳೆಯೊಂದಿಗೆ ಜಗಳ- ಸೇಡು ತೀರಿಸಿಕೊಳ್ಳಲು ಆಕೆಯ 2 ವರ್ಷದ ಮಗನನ್ನು ಕೊಂದ್ಳು!

    ನೆರೆಮನೆ ಮಹಿಳೆಯೊಂದಿಗೆ ಜಗಳ- ಸೇಡು ತೀರಿಸಿಕೊಳ್ಳಲು ಆಕೆಯ 2 ವರ್ಷದ ಮಗನನ್ನು ಕೊಂದ್ಳು!

     

    ನವದೆಹಲಿ: ಮಹಿಳೆಯೊಬ್ಬಳು ತನ್ನ ನೆರೆಮನೆಯ ಮಹಿಳೆಯೊಂದಿಗೆ ಜಗಳವಾಡಿದ್ದು, ಅದಕ್ಕೆ ಸೇಡು ತೀರಿಸಿಕೊಳ್ಳಲು ಆಕೆಯ 2 ವರ್ಷದ ಮಗನನ್ನು ಕೊಲೆ ಮಾಡಿರೋ ಘಟನೆ ದೆಹಲಿಯ ಉತ್ತಾಮ್‍ನಗರದಲ್ಲಿ ಶುಕ್ರವಾರದಂದು ನಡೆದಿದೆ.

    ಆರೋಪಿ ಮಹಿಳೆ ಎರಡನೇ ಮಹಡಿಯ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಮಗುವಿನ ತಲೆಯನ್ನ ನೆಲಕ್ಕೆ ಗುದ್ದಿ ಕೊಲೆ ಮಾಡಿರಬಹುದೆಂಬ ಶಂಕೆಯಿದೆ. ಮೃತ ಬಾಲಕ ಆರೋಪಿ ಮಹಿಳೆಯ ಮಕ್ಕಳೊಂದಿಗೆ ಆಟವಾಡಲು ಅವರ ಮನೆಗೆ ಆಗಾಗ ಹೋಗುತ್ತಿದ್ದ ಎಂದು ಪೊಲೀಸಿರು ತಿಳಿಸಿದ್ದಾರೆ.

    ಆರೋಪಿ ಮಹಿಳೆ ಕೆಲವು ದಿನಗಳ ಹಿಂದೆ ಬಾಲಕನ ತಾಯಿಯೊಂದಿಗೆ ಜಗಳವಾಡಿದ್ದಳು. ಬುಧವಾರದಂದು ಆಕೆ ಬಾಲಕನನ್ನು ತನ್ನ ಮಗನೊಂದಿಗೆ ಆಟವಾಡಲು ಕರೆದು ಕೊಲೆ ಮಾಡಿದ್ದಾಳೆ. ಬಾಲಕನ ಪೋಷಕರು ಆತನಿಗಾಗಿ ಹುಡುಕಾಡಿದಾಗ ಆರೋಪಿ ಮಹಿಳೆಯ ಮನೆಯಲ್ಲಿ ಗಾಯಗೊಂಡು ಬಿದ್ದಿರೋದನ್ನ ನೋಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಬಾಲಕನನ್ನ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

    ಸದ್ಯ ಪೊಲೀಸರು ಆರೋಪಿ ಮಹಿಳೆಯನ್ನ ಬಂಧಿಸಿದ್ದಾರೆ.

  • ಪಕ್ಕದ ಮನೆಗೆ ಆಟವಾಡಲು ಹೋಗಿದ್ದ 1 ವರ್ಷದ ಬಾಲಕಿ ಮೇಲೆ ಮಕ್ಕಳ ಮುಂದೆಯೇ ಅತ್ಯಾಚಾರ

    ಪಕ್ಕದ ಮನೆಗೆ ಆಟವಾಡಲು ಹೋಗಿದ್ದ 1 ವರ್ಷದ ಬಾಲಕಿ ಮೇಲೆ ಮಕ್ಕಳ ಮುಂದೆಯೇ ಅತ್ಯಾಚಾರ

    ನವದೆಹಲಿ: ಪಕ್ಕದ ಮನೆಗೆ ಆಟವಾಡಲೆಂದು ಹೋಗಿದ್ದ 1 ವರ್ಷದ ಬಾಲಕಿ ಮೇಲೆ 33 ವರ್ಷದ ವ್ಯಕ್ತಿ ಆತನ ಮಕ್ಕಳ ಮುಂದೆಯೇ ಅತ್ಯಾಚಾರ ನಡೆಸಿರೋ ಆಘಾತಕಾರಿ ಘಟನೆ ಬುಧವಾರದಂದು ದೆಹಲಿಯಲ್ಲಿ ನಡೆದಿದೆ.

    ಪಕ್ಕದ ಮನೆಯಲ್ಲಿ ವಾಸವಿದ್ದ 4 ವರ್ಷದ ಬಾಲಕ ಹಾಗೂ 2 ವರ್ಷದ ಬಾಲಕಿಯೊಂದಿಗೆ ಆಟವಾಡಲೆಂದು ಬಾಲಕಿ ಹೋಗಿದ್ದಳು. ಈ ವೇಳೆ ಆ ಮಕ್ಕಳ ತಾಯಿ ಟೆರೆಸ್ ಮೇಲೆ ಏನೋ ಕೆಲಸ ಮಾಡುತ್ತಿದ್ದರು. ಇತ್ತ ಮನೆಯ ರೂಮಿನಲ್ಲಿ ಆರೋಪಿ ಬಾಲಕಿಯ ಮೇಲೆ ತನ್ನ ಮಕ್ಕಳ ಮುಂದೆಯೇ ಅತ್ಯಾಚಾರ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಬಾಲಕಿ ಮನೆಗೆ ಹಿಂದಿರುಗಿದ ನಂತರ ಆಕೆಯ ಗುಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿರುವುದನ್ನು ತಾಯಿ ನೋಡಿದ್ದರು. ನಂತರ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಲೈಂಗಿಕ ದೌರ್ಜನ್ಯ ನಡೆದಿರುವುದು ಗೊತ್ತಾಯಿತು ಎಂದು ಅವರು ತಿಳಿಸಿದ್ದಾರೆ.

    ನಂತರ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿಯ ತಾಯಿ ತನ್ನ ಗಂಡನಿಂದ ದೂರವಾಗಿದ್ದು, ದೆಹಲಿಯಲ್ಲಿ ತಾಯಿ ಮನೆಯಲ್ಲಿ ವಾಸವಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಲಕಿಯನ್ನು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆಕೆಯನ್ನು ಭೇಟಿಯಾಗುವುದಾಗಿ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ಸಭೆ ಕರೆಯಬೇಕೆಂದು ಸ್ವಾತಿ ಹೇಳಿದ್ದಾರೆ ಎಂದು ವರದಿಯಾಗಿದೆ.