ಕನ್ನಡದ ‘ಮುಂಗಾರು ಮಳೆ 2’ ಬೆಡಗಿ ನೇಹಾ ಶೆಟ್ಟಿ (Neha Shetty) ತೆಲುಗು (Tollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಪವನ್ ಕಲ್ಯಾಣ್ ಸಿನಿಮಾದಲ್ಲಿ ಸ್ಪೆಷಲ್ ಹಾಡಿಗೆ ಸೊಂಟ ಬಳುಕಿಸಲು ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:UI ಫ್ಯಾನ್ಸ್‌ಗೆ ಉಪ್ಪಿ ಪ್ರಶ್ನೆ- ಕೊನೆಯ ಶಾಟ್ ಡಿಕೋಡ್ ಮಾಡಿ ಎಂದ ನಟ
ಶ್ರೀಲೀಲಾ ಐಟಂ ಹಾಡಿನಲ್ಲಿ ಹೆಜ್ಜೆ ಹಾಕಿ ಗೆದ್ಮೇಲೆ ನೇಹಾ ಶೆಟ್ಟಿ ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಳ್ಳಲು ಓಕೆ ಎಂದಿದ್ದಾರಂತೆ. ಪವನ್ ಕಲ್ಯಾಣ್ ನಟನೆಯ OG ಸಿನಿಮಾವು ಕಾರಣಾಂತರಗಳಿಂದ ನಿಂತು ಹೋಗಿತ್ತು. ಇದೀಗ ಚಿತ್ರದ ಕೆಲಸ ಶುರುವಾಗಿದ್ದು, ಈ ಸಿನಿಮಾದ ಭಾಗವಾಗಲು ಚಿತ್ರತಂಡ ನಟಿಯನ್ನು ಕೇಳಿದೆಯಂತೆ. ನೇಹಾ ಕೂಡ ಸೊಂಟ ಬಳುಕಿಸಲು ಒಪ್ಪಿಕೊಂಡಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ವಿಚಾರ.
ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ (Pawan Kalyan) ಜೊತೆ ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಅಪ್‌ಡೇಟ್ ಸಿಗಲಿದೆ.
ಕರಾವಳಿ ಬೆಡಗಿ ನೇಹಾ ಶೆಟ್ಟಿ (Neha Shetty) ಸದ್ಯ ಟಾಲಿವುಡ್‌ನಲ್ಲಿ (Tollywood) ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದಕ್ಕಾಗಿ ಬೆಂಗಳೂರಿಗೆ ಬಂದ ನೇಹಾ ಶೆಟ್ಟಿ, ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಮತ್ತೆ ಕನ್ನಡ ಸಿನಿಮಾ ಮಾಡೋದಾಗಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ: ಶೀಘ್ರವೇ ದರ್ಶನ್ ಬೇರೆ ಜೈಲಿಗೆ ಶಿಫ್ಟ್?
ನೇಹಾ ಶೆಟ್ಟಿ ಮಾತನಾಡಿ, ಕನ್ನಡದಲ್ಲಿ ಎಷ್ಟು ಒಳ್ಳೆಯ ಸಿನಿಮಾ ಬರುತ್ತಿದೆ. ‘ಕಾಂತಾರ’ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಬಂದಿದೆ ಇದರ ಬಗ್ಗೆ ಖುಷಿ ಇದೆ ಎಂದಿದ್ದಾರೆ. ಬಳಿಕ ನೇಹಾ ಶೆಟ್ಟಿ ಕನ್ನಡಕ್ಕೆ ಬರುವ ಬಗ್ಗೆ ಪ್ಲ್ಯಾನ್ ಮಾಡಿದ್ದಾರೆ. ಕನ್ನಡದ ಸ್ಕ್ರಿಪ್ಟ್‌ಗಳನ್ನು ಕೇಳ್ತಿರೋ ನೇಹಾ ಶೆಟ್ಟಿ, ಒಂದು ಒಳ್ಳೆಯ ಕಥೆಗಾಗಿ ಕಾಯುತ್ತಿದ್ದಾರೆ. ಅದು ಕಂಪ್ಲೀಟ್ ಹೊಸ ರೀತಿಯ ಪಾತ್ರವೇ ಆಗಿರಬೇಕು ಅನ್ನೋದು ಆಸೆ ಎಂದು ತಿಳಿಸಿದ್ದಾರೆ.
ನಾನು ಎಲ್ಲೂ ಹೋಗಿಲ್ಲ. ಇಲ್ಲಿಯೇ ಇದ್ದೇನೆ. ಅಪ್ಪ-ಅಮ್ಮ ಬೆಂಗಳೂರಲ್ಲಿಯೇ ಇದ್ದಾರೆ. ಆಗಾಗ ಇಲ್ಲಿಗೆ ಬರುತ್ತಲೇ ಇರುತ್ತೇನೆ. ಹಾಗೆ ಕನ್ನಡದಲ್ಲಿ ಆಫರ್ಸ್ ಸಿಗ್ತಿಲ್ಲ ಅಂತ ಬೇರೆ ಕಡೆಗೆ ಹೋಗಿಲ್ಲ. ತಮಿಳು, ಮಲೆಯಾಳಂ, ತೆಲುಗು ಭಾಷೆಯಿಂದಲೂ ಆಫರ್ಸ್ ಬಂದಿವೆ. ಆದರೆ, ನಾನು ತೆಲುಗು ಆಯ್ಕೆ ಮಾಡಿಕೊಂಡೆ ನೇಹಾ ಶೆಟ್ಟಿ ಮಾಧ್ಯಮಕ್ಕೆ ಮಾತನಾಡಿದ್ದಾರೆ.
ಎರಡ್ಮೂರು ತಿಂಗಳು ಕಾಯಿರಿ, ಕನ್ನಡ ಸಿನಿಮಾ ಬಗ್ಗೆ ನಿಮಗೆ ಸರ್ಪ್ರೈಸ್ ಸಿಗುತ್ತದೆ ಎಂದು ನಟಿ ಖುಷಿಯಿಂದ ಹೇಳಿಕೊಂಡಿದ್ದಾರೆ. ಕಥೆಯಲ್ಲಿ ಹೊಸತನ, ನಟನೆಗೆ ಸ್ಕೋಪ್ ಇರಬೇಕು ಖಂಡಿತಾ ಕನ್ನಡದಲ್ಲಿ ನಟಿಸುತ್ತೇನೆ ಎಂದು ನಟಿ ಖುಷಿಯಿಂದ ಮಾತನಾಡಿದ್ದಾರೆ. ನಟಿಯ ಕನ್ನಡದ ಮುಂದಿನ ಪ್ರಾಜೆಕ್ಟ್ ಯಾವುದಿರಬಹುದು ಎಂದು ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ. ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.
ಅಂದಹಾಗೆ, ಮೂಲತಃ ಮಂಗಳೂರಿನವರಾದ ನೇಹಾ ಶೆಟ್ಟಿ ಅವರು 2016ರಲ್ಲಿ ‘ಮುಂಗಾರು ಮಳೆ 2’ (Mungaru Male 2) ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಾಯಕಿಯಾಗಿ ನಟಿಸಿದರು. ಬಳಿಕ ತೆಲುಗಿನತ್ತ ಮುಖ ಮಾಡಿದರು. ಅಲ್ಲಿ ಗಲ್ಲಿ ರೌಡಿ, ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ಡಿಜೆ ಟಿಲ್ಲು, ರೂಲ್ಸ್ ರಂಜನ್, ಗ್ಯಾಂಗ್ಸ್ ಆಫ್ ಗೋದಾವರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಟಾಲಿವುಡ್‌ನಲ್ಲಿ ನಟಿಗೆ ಭಾರೀ ಬೇಡಿಕೆ ಇದೆ.
ಕರಾವಳಿ ನಟಿ ನೇಹಾ ಶೆಟ್ಟಿ (Neha Shetty) ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಡಿಜೆ ಟಿಲ್ಲು’ ನಂತರ ಈಗ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವೇಳೆ, ತಮ್ಮ ಬಗೆಗಿನ ಟ್ರೋಲ್‌ಗಳ ಕುರಿತು ನೇಹಾ ಶೆಟ್ಟಿ ಮೌನ ಮುರಿದಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಟ್ರೋಲ್‌ಗಳ (Troll) ಬಗ್ಗೆ ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನೇಹಾ ಶೆಟ್ಟಿ ಹೇಳಿದ್ದಾರೆ. ಜಗತ್ತಿನಲ್ಲಿ ಜನರು ತಮ್ಮದೇ ಆದ ವಿವಿಧ ರೀತಿಯ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂದು ನಾನು ತಿಳಿದಿದ್ದೇನೆ. ಬೇರೆಯವರ ಅಭಿಪ್ರಾಯಗಳು ನನ್ನ ನಿರ್ಧಾರಗಳ ಮೇಲೆ ಯಾವುದೇ ಪರಿಣಾಮ ಬೀರಲು ನಾನು ಬಿಡುವುದಿಲ್ಲ. ಹಾಗಾಗಿ ನನಗೆ ಸಂಬಂಧಿಸಿದ ಟ್ರೋಲ್, ಸುದ್ದಿಗಳನ್ನು ನಾನು ನೋಡುವುದಿಲ್ಲ. ಅಲ್ಲಿ ಪಾಸಿಟಿವ್‌ಗಿಂತ ನೆಗೆಟಿವ್ ವಿಚಾರಗಳು ಹೆಚ್ಚಾಗಿರುತ್ತದೆ ಎಂದು ‘ಮುಂಗಾರು ಮಳೆ 2’ ನಟಿ ಮಾತನಾಡಿದ್ದಾರೆ.
‘ಡಿಜೆ ಟಿಲ್ಲು’ ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಮೇಲೆ ನೇಹಾಗೆ ಬೇಡಿಕೆ ಹೆಚ್ಚಾಗಿತ್ತು. ಇತ್ತೀಚೆಗೆ ರಿಲೀಸ್ ಆದ ‘ಟಿಲ್ಲು ಸ್ಕ್ವೇರ್’ನಲ್ಲಿ ಗೆಸ್ಟ್ ರೋಲ್‌ನಲ್ಲಿ ನೇಹಾ ನಟಿಸಿದ್ದರು. ಇದೀಗ ‘ಗ್ಯಾಂಗ್ಸ್ ಆಫ್ ಗೋದಾವರಿ’ (Gangs Of Godavari) ಸಿನಿಮಾದಲ್ಲಿ ವಿಶ್ವಕ್ ಸೇನ್‌ಗೆ (Vishwak Sen) ನಾಯಕಿಯಾಗಿ ಕರಾವಳಿ ನಟಿ ಕಾಣಿಸಿಕೊಂಡಿದ್ದಾರೆ. ಇದೇ ಮೇ 31ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಕ್ಸಸ್‌ಗಾಗಿ ಎದುರು ನೋಡ್ತಿರುವ ನೇಹಾಗೆ ಈ ಚಿತ್ರ ಕೈ ಹಿಡಿಯುತ್ತಾ? ಟಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ತಾರಾ ಕಾದುನೋಡಬೇಕಿದೆ.
ಕರಾವಳಿ ಬ್ಯೂಟಿ ನೇಹಾ ಶೆಟ್ಟಿ (Neha Shetty) ಸದ್ಯ ತೆಲುಗಿನಲ್ಲಿ ಗುರುತಿಸಿಕೊಳ್ತಿದ್ದಾರೆ. ಕನ್ನಡದ ‘ಮುಂಗಾರು ಮಳೆ 2’ (Mungarumale 2) ಚಿತ್ರದ ಮೂಲಕ ಪರಿಚಿತರಾದ ನಟಿ ಇದೀಗ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಸೊಂಟ ತೋರಿಸಿ ಸಖತ್ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ನೇಹಾ ಶೆಟ್ಟಿಗೆ ಇದೀಗ ಟಾಲಿವುಡ್‌ನಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಸದಾ ಹೊಸ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡುಸುತ್ತಿರುತ್ತಾರೆ. ಸೊಂಟ ತೋರಿಸಿ ಪೋಸ್ ಕೊಟ್ಟಿರುವ ನೇಹಾರನ್ನು ನೋಡಿ ಸೊಂಟದ ವಿಷ್ಯ ಬೇಡವೋ ಶಿಷ್ಯ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಕೆಲವರು ಸೊಂಟ ಸೂಪರ್ ಎಂದು ಬಗೆ ಬಗೆಯ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ. ಇದನ್ನೂ ಓದಿ:ಚಿತ್ರರಂಗಕ್ಕೆ ದ್ವಾರಕೀಶ್ ಕೊಡುಗೆ ಅಪಾರ- ನರೇಂದ್ರ ಮೋದಿ ಸಂತಾಪ
ಅಂದಹಾಗೆ, ತೆಲುಗಿನ ಮೆಹಬೂಬಾ, ಗಲ್ಲಿ ಬಾಯ್, ಡಿಜೆ ಟಿಲ್ಲು ಚಿತ್ರಗಳ ಮೂಲಕ ಗಮನ ಸೆಳೆದ ನೇಹಾ ಶೆಟ್ಟಿಗೆ ಈಗ ಅವಕಾಶಗಳು ಕಮ್ಮಿಯಾಗಿದೆ. ಕೆರಿಯರ್‌ನಲ್ಲಿ ಬಿಗ್ ಬ್ರೇಕ್ ಸಿಗದೇ ನಟಿ ಕಂಗಾಲಾಗಿದ್ದಾರೆ. ಸದ್ಯ ತೆಲುಗಿನಲ್ಲಿ ಸೌಂಡ್ ಮಾಡುತ್ತಿರುವ ಹೆಸರು ಅಂದರೆ ರಶ್ಮಿಕಾ ಮಂದಣ್ಣ, ಶ್ರೀಲೀಲಾ. ನೇಹಾ ಶೆಟ್ಟಿ ಠಕ್ಕರ್ ಕೊಟ್ಟಿದ್ದಾರೆ. ಸ್ಟಾರ್ ನಟರ ಸಿನಿಮಾಗಳಿಗೆ ರಶ್ಮಿಕಾ ಅಥವಾ ಶ್ರೀಲೀಲಾನೇ (Sreeleela) ಬೇಕು ಅನ್ನುವಷ್ಟರ ಮಟ್ಟಿಗೆ ಅವರಿಗೆ ಬೇಡಿಕೆ ಇದೆ. ರಶ್ಮಿಕಾ (Rashmika Mandanna) ತೆಲುಗಿನ ಜೊತೆ ಬಾಲಿವುಡ್‌ನತ್ತ ಮುಖ ಮಾಡಿದ್ರೆ, ಶ್ರೀಲೀಲಾ ಕಾಲಿವುಡ್‌ನಲ್ಲಿ ಹೊಸ ಹೆಜ್ಜೆ ಇಡಲು ಪ್ಲ್ಯಾನ್ ಮಾಡಿದ್ದಾರೆ.
‘ಡಿಜೆ ಟಿಲ್ಲು’ ಸಿನಿಮಾದಲ್ಲಿ ಸಿದ್ದು ಜೊತೆ ನೇಹಾ ಬೋಲ್ಡ್ ಆಗಿ ನಟಿಸಿದ್ದರು. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಟಿ ಮೋಡಿ ಮಾಡಿದ್ದರು. ‘ಟಿಲ್ಲು ಸ್ಕ್ವೇರ್’ ಸಿನಿಮಾದಲ್ಲಿ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದಾರೆ. ಸದ್ಯ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾ ಬಿಟ್ಟು ಯಾವುದೇ ಹೊಸ ಚಿತ್ರವನ್ನು ನಟಿ ಒಪ್ಪಿಕೊಂಡಿಲ್ಲ. ಇದೇ ಮೇನಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ.
‘ಗ್ಯಾಂಗ್ಸ್ ಆಫ್ ಗೋದಾವರಿ’ ಚಿತ್ರದ ನಂತರ ನೇಹಾ ಶೆಟ್ಟಿ ಲಕ್ ಬದಲಾಗುತ್ತಾ? ಈ ಚಿತ್ರ ಮುಂಗಾರು ಮಳೆ 2 ನಟಿಯ ಕೈ ಹಿಡಿಯುತ್ತಾ? ಎಂದು ಕಾದುನೋಡಬೇಕಿದೆ.
ಟಾಲಿವುಡ್ ಅಂಗಳದಲ್ಲಿ ಸದ್ಯ ಕನ್ನಡತಿಯರ ಹವಾ ಜಾಸ್ತಿ ಆಗಿದೆ. ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾಗೆ (Sreeleela) ತೆಲುಗಿನಲ್ಲಿ ಭಾರೀ ಬೇಡಿಕೆಯಿದೆ. ಇವರ ನಡುವೆ ಕುಡ್ಲದ ಕುವರಿ ನೇಹಾ ಶೆಟ್ಟಿಗೆ ಬೇಡಿಕೆ ಕಮ್ಮಿಯಾಗಿದ್ಯಾ? ಎಂಬ ಗುಸು ಗುಸು ಶುರುವಾಗಿದೆ. ಹಾಗಾದ್ರೆ ಕರಾವಳಿ ನಟಿ ಕೈಯಲ್ಲಿ ಅದೆಷ್ಟು ಸಿನಿಮಾಗಳಿವೆ. ನೇಹಾ ಈಗ ಏನ್ಮಾಡ್ತಿದ್ದಾರೆ? ಇಲ್ಲಿದೆ ಮಾಹಿತಿ.
‘ಮುಂಗಾರು ಮಳೆ 2’ (Mungaru Male 2) ಚಿತ್ರದಿಂದ ಸಿನಿಮಾ ಕೆರಿಯರ್ ಶುರು ಮಾಡಿದ ಮಂಗಳೂರಿನ ಬೆಡಗಿ ನೇಹಾ ಶೆಟ್ಟಿ (Neha Shetty) ಸದ್ಯ ಟಾಲಿವುಡ್‌ನಲ್ಲಿ ಗುರುತಿಸಿಕೊಳ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್‌ಗೆ (Golden Star Ganesh) ನಾಯಕಿಯಾಗಿ ನಟಿ ನೇಹಾ ತೆಲುಗು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ತೆಲುಗಿನ ಮೆಹಬೂಬಾ, ಗಲ್ಲಿ ಬಾಯ್, ಡಿಜೆ ಟಿಲ್ಲು ಚಿತ್ರಗಳ ಮೂಲಕ ಗಮನ ಸೆಳೆದ ನೇಹಾ ಶೆಟ್ಟಿಗೆ ಈಗ ಅವಕಾಶಗಳು ಕಮ್ಮಿಯಾಗಿದೆ. ಕೆರಿಯರ್‌ನಲ್ಲಿ ಬಿಗ್ ಬ್ರೇಕ್ ಸಿಗದೇ ನಟಿ ಕಂಗಾಲಾಗಿದ್ದಾರೆ. ಸದ್ಯ ತೆಲುಗಿನಲ್ಲಿ ಸೌಂಡ್ ಮಾಡುತ್ತಿರುವ ಹೆಸರು ಅಂದರೆ ರಶ್ಮಿಕಾ ಮಂದಣ್ಣ, ಶ್ರೀಲೀಲಾ. ನೇಹಾ ಶೆಟ್ಟಿ ಠಕ್ಕರ್ ಕೊಟ್ಟಿದ್ದಾರೆ. ಸ್ಟಾರ್ ನಟರ ಸಿನಿಮಾಗಳಿಗೆ ರಶ್ಮಿಕಾ ಅಥವಾ ಶ್ರೀಲೀಲಾನೇ ಬೇಕು ಅನ್ನುವಷ್ಟರ ಮಟ್ಟಿಗೆ ಅವರಿಗೆ ಬೇಡಿಕೆ ಇದೆ. ರಶ್ಮಿಕಾ ತೆಲುಗಿನ ಜೊತೆ ಬಾಲಿವುಡ್‌ನತ್ತ ಮುಖ ಮಾಡಿದ್ರೆ, ಶ್ರೀಲೀಲಾ ಕಾಲಿವುಡ್‌ನಲ್ಲಿ ಹೊಸ ಹೆಜ್ಜೆ ಇಡಲು ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ:ಹೊಸ ಹುಡುಗಿ ಜೊತೆ ವರ್ಮಾ ನೈಟ್ ಪಾರ್ಟಿ
‘ಡಿಜೆ ಟಿಲ್ಲು’ (Dj Tillu) ಸಿನಿಮಾದಲ್ಲಿ ಸಿದ್ದು ಜೊತೆ ನೇಹಾ ಬೋಲ್ಡ್ ಆಗಿ ನಟಿಸಿದ್ದರು. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಟಿ ಮೋಡಿ ಮಾಡಿದ್ದರು. ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾದಲ್ಲಿ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದಾರೆ. ಸದ್ಯ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾ ಬಿಟ್ಟು ಯಾವುದೇ ಹೊಸ ಚಿತ್ರವನ್ನು ನಟಿ ಒಪ್ಪಿಕೊಂಡಿಲ್ಲ. ಇದೇ ಮೇನಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ.
‘ಗ್ಯಾಂಗ್ಸ್ ಆಫ್ ಗೋದಾವರಿ’ ಚಿತ್ರದ ನಂತರ ನೇಹಾ ಶೆಟ್ಟಿ ಲಕ್ ಬದಲಾಗುತ್ತಾ? ಈ ಚಿತ್ರ ಮುಂಗಾರು ಮಳೆ 2 ನಟಿಯ ಕೈ ಹಿಡಿಯುತ್ತಾ? ಎಂದು ಕಾದುನೋಡಬೇಕಿದೆ.
ಟಾಲಿವುಡ್ ನಟ ವಿಶ್ವಕ್ ಸೇನ್ (Vishwak Sen) ಅವರು ಸಿನಿಮಾವೊಂದರ ಶೂಟಿಂಗ್ ವೇಳೆ ಸೆಟ್‌ನಲ್ಲಿ ಲಾರಿಯಿಂದ ಕೆಳಗೆ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಆ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇದನ್ನೂ ಓದಿ:ಗ್ಲೋಬಲ್ ಸ್ಟಾರ್ ಆಗಲು ಭಾರತ ಬಿಡಬೇಕಾ? ಪ್ರಿಯಾಂಕಾಗೆ ದೀಪಿಕಾ ಟಾಂಗ್
ಸದ್ಯ ವಿಶ್ವಕ್ ಸೇನ್ ಅವರು ‘ಗ್ಯಾಂಗ್ಸ್ ಆಫ್ ಗೋದಾವರಿ’ (Gangs Of Godavari) ಆ್ಯಕ್ಷನ್ ಭರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿಯೇ ಲಾರಿ ಬಳಸಿ ಆ್ಯಕ್ಷನ್ ದೃಶ್ಯವನ್ನ ಚಿತ್ರೀಕರಿಸಲು ಯೋಜನೆ ಮಾಡಲಾಗಿತ್ತು. ವಿಶ್ವಕ್ ಲಾರಿ ಮೇಲೆ ನಿಂತು ಮಾಡುವ ಸ್ಟಂಟ್ ಶೂಟಿಂಗ್ ವೇಳೆ ಈ ಅವಘಡ ನಡೆದಿದೆ. ಈ ದೃಶ್ಯಕ್ಕೆ ತಾಲೀಮು ಮಾಡುವ ಸಂದರ್ಭದಲ್ಲಿ ಲಾರಿ ಮೇಲಿಂದ ಕೆಳಗೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ವಿಶ್ವಕ್ ಸೇನ್ ಸುದ್ದಿ ವೈರಲ್ ಆಗ್ತಿದ್ದಂತೆ ನಿರ್ಮಾಣ ಸಂಸ್ಥೆ ಈ ಬಗ್ಗೆ ಪ್ರತಿಕ್ರಿಯಿಸಿ, ವಿಶ್ವಕ್ ಚಿತ್ರೀಕರಣ ಸಮಯದಲ್ಲಿ ಪೆಟ್ಟಾಗಿದ್ದು ನಿಜ. ಆದರೆ ಇದಾಗಿ ಕೆಲವು ದಿನಗಳಾಗಿವೆ. ಸೂಕ್ತ ಚಿಕಿತ್ಸೆ ಬಳಿಕ ಅವರು ಇದೀಗ ಗುಣಮುಖರಾಗಿದ್ದಾರೆ. ಮತ್ತೆ ಚಿತ್ರೀಕರಣಕ್ಕೆ ಅವರು ಬಂದಿದ್ದಾರೆ ಎಂದು ತಿಳಿಸಿದ್ದಾರೆ.
‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾ ಇದೇ ಡಿಸೆಂಬರ್ 10ರಂದು ರಿಲೀಸ್ ಆಗುತ್ತಿದೆ. ವಿಶ್ವಕ್‌ಗೆ ನಾಯಕಿಯಾಗಿ ಕನ್ನಡದ ನಟಿ ನೇಹಾ ಶೆಟ್ಟಿ (Neha Shetty) ನಟಿಸಿದ್ದಾರೆ.
‘ಖುಷಿ’ (Kushi) ಸಿನಿಮಾದ ಪ್ರಚಾರ ಕಾರ್ಯದಲ್ಲಿ ವಿಜಯ್ (Vijay Devarakonda) ಶರ್ಟ್ ಬಿಚ್ಚಿ ಸಮಂತಾ (Samantha) ಜೊತೆ ಡ್ಯಾನ್ಸ್ ಮಾಡಿರೋದು ಸಖತ್ ಟ್ರೋಲ್ ಆಗುತ್ತಿದೆ. ಈ ಬೆನ್ನಲ್ಲೇ ಕನ್ನಡದ ‘ಮುಂಗಾರು ಮಳೆ 2’ ನಟಿ ವೇದಿಕೆಯ ಮೇಲೆ ಸೀರೆ ಸೆರಗು ಬಿಚ್ಚುವ ಮೂಲಕ ಟ್ರೋಲ್ ಆಗಿದ್ದಾರೆ. ನೇಹಾ ನಡೆಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ಒಂದು ಸಿನಿಮಾ ರಿಲೀಸ್ ಆಗ್ತಿದೆ ಅಂದರೆ ಆ ಚಿತ್ರವನ್ನ ಬಗೆ ಬಗೆಯ ರೀತಿಯಲ್ಲಿ ಮಾರ್ಕೆಟಿಂಗ್ ಮಾಡುತ್ತಾರೆ. ಇತ್ತೀಚೆಗೆ ಎಲ್ಲ ಸಿನಿಮಾಗಳು ಎಲ್ಲ ಭಾಷೆಗಳಲ್ಲಿ ಡಬ್ ಆಗುತ್ತಿರುವುದಿಂದ ಯಾವ ಸಿನಿಮಾ ನೋಡಬೇಕೆಂಬ ಗೊಂದಲ ಪ್ರೇಕ್ಷಕರಲ್ಲಿ ಮೂಡಿದೆ. ಅಷ್ಟೊಂದು ಸಿನಿಮಾಗಳು ಪ್ರತಿ ವಾರ ತೆರೆ ಕಾಣುತ್ತವೆ. ಹೀಗಾಗಿ ಜನರನ್ನು ಸೆಳೆಯಲು ಚಿತ್ರತಂಡಗಳು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿವೆ. ಆದರೆ, ಕೆಲವೊಮ್ಮೆ ಇಂತಹ ಪ್ರಯತ್ನ ವಿವಾದಕ್ಕೆ ದಾರಿ ಮಾಡಿಕೊಡುತ್ತದೆ. ಇದನ್ನೂ ಓದಿ:ನಿರ್ದೇಶಕನಾದ ‘ಗೊಂಬೆಗಳ ಲವ್’ ಹೀರೋ ಅರುಣ್
ನಟ ವಿಶ್ವಕ್ ಸೇನ್- ನೇಹಾ ಶೆಟ್ಟಿ(Neha Shetty) ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ಇಬ್ಬರು ಮಿತಿ ಮೀರಿ ನಡೆದುಕೊಂಡಿದ್ದಾರೆ. ಈ ಸಿನಿಮಾದ ಮೊದಲ ಹಾಡು ಸುತ್ತಮ್ಲ ಸುಸಿ ಸಾಂಗ್ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ. ಈ ಹಾಡಿಗೆ ಯುವನ್ ಶಂಕರ್ ರಾಜಾ ಮ್ಯೂಸಿಕ್ ನೀಡಿದ್ದಾರೆ. ನಿನ್ನೆಯಷ್ಟೇ ಈ ಹಾಡು ಬಿಡುಗಡೆಯಾಗಿದೆ.
ಸಿನಿಮಾದ ಹಾಡಿನ ಹುಕ್ ಸ್ಟೆಪ್ಸ್ ಸಹ ಇದೆ. ಇದಕ್ಕೆ ನೇಹಾ ಮತ್ತು ವಿಶ್ವಕ್ (Vishwak Sen) ವೇದಿಕೆ ಮೇಲೆಯೇ ಹೆಜ್ಜೆ ಹಾಕಿದರು. ಈ ವೇಳೆ ನೇಹಾ ತಮ್ಮ ಸೀರೆಯ ಒಂದು ಎಳೆಯನ್ನು ಬಿಚ್ಚಿ ಹೀರೋ ವಿಶ್ವಕ್ ಮೇಲೆ ಹಾಕಿ ಹುಕ್ ಸ್ಟೆಪ್ಸ್ ಮಾಡಿದ್ದರು. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೇಹಾ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ವೇದಿಕೆ ಮೇಲೆ ಈ ರೀತಿ ನಡೆದುಕೊಳ್ಳಬಾರದು ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮನ್ನ ಫಾಲೋ ಮಾಡೋ ಅನೇಕ ಅಭಿಮಾನಿಗಳಿರುತ್ತಾರೆ. ನೀವೇ ಹೀಗೆ ಮಾಡಿದ್ರೆ ಹೇಗೆ ಎಂದು ನಟಿಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್‌ಗೆ(Golden Star Ganesh) ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟ ಕರಾವಳಿ ನಟಿ ನೇಹಾ ಶೆಟ್ಟಿ(Neha Shetty) ಇದೀಗ ಸೌತ್ ಸಿನಿಮಾದತ್ತ ಮುಖ ಮಾಡಿದ್ದಾರೆ. ಟಾಲಿವುಡ್‌ನ (Tollywood) ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ ನೇಹಾ ಬ್ಯುಸಿಯಾಗಿದ್ದಾರೆ. ಇದೀಗ ಬೋಲ್ಡ್ ಮತ್ತು ಹಾಟ್ ಲುಕ್ ಫೋಟೋಶೂಟ್ ಮಾಡಿಸಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.
ಕನ್ನಡದ `ಮುಂಗಾರು ಮಳೆ 2′ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಬ್ಯೂಟಿ ನೇಹಾ ಶೆಟ್ಟಿ ಈಗ ತೆಲುಗಿನತ್ತ ಮುಖ ಮಾಡಿದ್ದಾರೆ. ಮೆಹಾಬೂಬ, ಗಲ್ಲಿ ರೌಡಿ, ಹೀಗೆ ಸಾಕಷ್ಟು ಚಿತ್ರಗಳಲ್ಲಿ ನೇಹಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿನ `ಡಿಜೆ ಟಿಲ್ಲು’ ಸಿನಿಮಾದಲ್ಲಿ ನಾಯಕಿಯಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈಗ ಹಾಟ್ ಆಗಿ ಫೋಟೋಶೂಟ್ ಮಾಡಿಸಿ, ಪಡ್ಡೆಹುಡುಗರನ್ನ ಬೋಲ್ಡ್ ಮಾಡಿದ್ದಾರೆ. ಇದನ್ನೂ ಓದಿ:ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಬೆನ್ನಿಗೆ ನಿಂತ ಉಪೇಂದ್ರ : ಸ್ನೇಹಿತ್ ಒಳ್ಳೆಯ ಹುಡುಗ
ಇನ್ನೂ ಸದ್ಯ ತೆಲುಗಿನ ನಟ ಕಾರ್ತಿಕೇಯ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. `ಮುಂಗಾರು ಮಳೆ 2′, ಚಾಕ್‌ಲೇಟ್ ಗರ್ಲ್ ಆಲ್ಬಂ ಸಾಂಗ್ ನಂತರ ಕನ್ನಡದ ಸಿನಿಮಾದಲ್ಲಿ ಮರೆಯಾಗಿರುವ ನಟಿ ನೇಹಾ ಸಿನಿಮಾಗಾಗಿ ಕನ್ನಡ ಪ್ರೇಕ್ಷಕರು ಕಾಯುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಗಣೇಶ್ ನಟನೆಯ ‘ಮುಂಗಾರು ಮಳೆ 2’ ಮೂಲಕ ಸಿನಿಮಾ ರಂಗ ಪ್ರವೇಶ ಮಾಡಿದ್ದ ಕರಾವಳಿ ಬೆಡಗಿ ನೇಹಾ ಶೆಟ್ಟಿ, ಆನಂತರ ಅವರು ಮತ್ತೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿಲ್ಲ. ಮುಂಗಾರು ಮಳೆ 2 ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ ಎನ್ನುವ ಕಾರಣಕ್ಕೋ ಏನೋ, ಸ್ಯಾಂಡಲ್ ವುಡ್ ನೇಹಾ ಶೆಟ್ಟಿಗೆ ಮತ್ತೆ ಅವಕಾಶ ಕೊಡಲಿಲ್ಲ. ಹಾಗಾಗಿ ಅವರು ತೆಲುಗು ಸಿನಿಮಾ ರಂಗದತ್ತ ಮುಖ ಮಾಡಿದರು. ಇದನ್ನು ಓದಿ : ಡಾ.ವಿಷ್ಣು ಪುತ್ಥಳಿ ಅನಾವರಣಕ್ಕೆ ಹಿಜಬ್ -ಕೇಸರಿ ವಿವಾದ ಅಡ್ಡಿ
ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ ‘ಮೆಹಬೂಬು’ ಚಿತ್ರದ ಮೂಲಕ ತೆಲುಗು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ಈ ಸಿನಿಮಾ ತಕ್ಕಮಟ್ಟಿಗೆ ಹಿಟ್ ಆಯಿತು ಮತ್ತು ಪುರಿ ಜಗನ್ನಾಥ್ ಪರಿಚಯಿಸಿದ ನಟಿ ಅನ್ನುವ ಕಾರಣಕ್ಕೆ ಅಲ್ಲಿ ಅವರಿಗೆ ಅವಕಾಶ ಸಿಕ್ಕವು. ಹಾಗಾಗಿ ಒಂದರ ಮೇಲೊಂದು ಅವರು ಸಿನಿಮಾ ಮಾಡುತ್ತಲೇ ಹೋದರು. ಇದನ್ನೂ ಓದಿ : ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಸಲು ಖಡಕ್ ಸುತ್ತೋಲೆ
ಮೊನ್ನೆಯಷ್ಟೇ ನೇಹಾ ಶೆಟ್ಟಿ ನಟನೆಯ ‘ಡಿಜೆ ಟಿಲ್ಲು’ ಚಿತ್ರ ಬಿಡುಗಡೆ ಆಗಿದೆ. ಈ ಸಿನಿಮಾ ಭಾರೀ ಸದ್ದು ಕೂಡ ಮಾಡಿತು. ಅಲ್ಲಿಂದ ಅವರಿಗೆ ಅದೃಷ್ಟ ಖುಲಾಯಿಸಿದೆ. ಹಾಗಾಗಿ ಅವರನ್ನು ಮತ್ತೆ ಕನ್ನಡಕ್ಕ ತರುವ ಪ್ರಯತ್ನ ನಡೆದಿದೆ. ಇದನ್ನೂ ಓದಿ : ಸಿಎಂ ಜಗನ್ ಆದೇಶಕ್ಕೆ ನಿಟ್ಟುಸಿರಿಟ್ಟ ತೆಲುಗು ಚಿತ್ರರಂಗ
ಸದ್ಯ ನೇಹಾ ಶೆಟ್ಟಿ ಕನ್ನಡದತ್ತ ಮತ್ತೆ ಮುಖ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ನಟನೆಯ ‘ಯದುವೀರ’ ಚಿತ್ರಕ್ಕೆ ಇವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿಯಿದೆ. ಚಿತ್ರತಂಡ ಅಧಿಕೃತವಾಗಿ ಹೇಳಿಕೊಳ್ಳದೇ ಇದ್ದರೂ, ಚಿತ್ರತಂಡದ ಸದಸ್ಯರ ಮಾಹಿತಿಯ ಪ್ರಕಾರ, ಭಾರೀ ಮೊತ್ತದ ಸಂಭಾವನೆಯನ್ನೇ ನೀಡಿ ನೇಹಾ ಅವರನ್ನು ಕರೆತರಲಾಗುತ್ತಿದೆಯಂತೆ. ಇದನ್ನೂ ಓದಿ : ರಕ್ತದಾನ ಮಾಡಿದ ಹೃತಿಕ್ ರೋಷನ್
ಮೊನ್ನೆಯಷ್ಟೇ ಯದುವೀರ ಸಿನಿಮಾದ ಟೈಟಲ್ ಲಾಂಚ್ ಆಗಿದೆ. ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿತ್ತು ಚಿತ್ರತಂಡ. ಸಿನಿಮಾದ ಚಿತ್ರೀಕರಣಕ್ಕೂ ಸಿದ್ಧತೆ ಮಾಡಿಕೊಂಡಿದೆ. ಕೆಲವೇ ದಿನಗಳಲ್ಲಿ ನಾಯಕಿಯ ಬಗ್ಗೆ ಚಿತ್ರತಂಡವೇ ಮಾಹಿತಿ ಕೊಡಬಹುದು.