Tag: Neha Murder Case

  • ನಮ್ಮ ಸರ್ಕಾರದಲ್ಲಿ ನಾನೇ ನ್ಯಾಯಕ್ಕಾಗಿ ಬೇಡುವ ಪರಿಸ್ಥಿತಿ ಬಂದಿದೆ: ನೇಹಾ ಪ್ರಕರಣದಲ್ಲಿ ತಂದೆ ಅಸಮಾಧಾನ

    ನಮ್ಮ ಸರ್ಕಾರದಲ್ಲಿ ನಾನೇ ನ್ಯಾಯಕ್ಕಾಗಿ ಬೇಡುವ ಪರಿಸ್ಥಿತಿ ಬಂದಿದೆ: ನೇಹಾ ಪ್ರಕರಣದಲ್ಲಿ ತಂದೆ ಅಸಮಾಧಾನ

    ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣವನ್ನು ಫಾಸ್ಟ್‌ಟ್ರ್ಯಾಕ್ ಕೋರ್ಟ್‌ಗೆ (Fast Track Court) ಕೊಡುವ ಅವಶ್ಯಕತೆ ಇಲ್ಲ ಎಂಬ ಗೃಹ ಸಚಿವ ಪರಮೇಶ್ವರ್ (G Parameshwar) ಹೇಳಿಕೆಗೆ ನೇಹಾ ಹಿರೇಮಠ (Neha Hiremath) ತಂದೆ, ಕಾಂಗ್ರೆಸ್ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ (Niranjan Hiremath) ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

    ಈ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಗೃಹ ಸಚಿವ ಪರಮೇಶ್ವರ್ ಸಿಎಂ ಮಾತಿಗೂ ಬೆಲೆ ನೀಡುತ್ತಿಲ್ಲ. ಅವರದ್ದೇ ಬೇರೆ ಮಾರ್ಗ ಎನ್ನುವಂತೆ ವರ್ತನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ನಾನೇ ನ್ಯಾಯಕ್ಕಾಗಿ ಬೇಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಆರೋಪಿಗೆ ರಕ್ಷಣೆ ನೀಡಲು ಕೆಲವರು ಮುಂದಾಗಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸರ್ಕಾರಿ ಕಾಲೇಜುಗಳಲ್ಲಿ ಓದುವ ಪಿಯುಸಿ ಮಕ್ಕಳಿಗೆ ಉಚಿತ ನೀಟ್ ತರಬೇತಿ: ಮಧು ಬಂಗಾರಪ್ಪ

    ಪ್ರಕರಣದ ಆರಂಭದಿಂದಲೂ ಕೆಲವು ಷಡ್ಯಂತ್ರ ನಡೆಸುತ್ತಿದ್ದು, ಈಗ ಅದನ್ನು ಮುಂದುವರಿಸುತ್ತಿದ್ದಾರೆ. ಇಷ್ಟು ದಿನ ನಮ್ಮ ಸರ್ಕಾರ ಅಂತ ಸುಮ್ಮನಿದ್ದೆ. ಈಗ ಕಾಯುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ಜನ ಗಮನಿಸುತ್ತಿದ್ದಾರೆ. ನಾನು ಕೂಡ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕಳಂಕಿತ ಬಿಜೆಪಿಗೆ ಹೋರಾಟ ಮಾಡುವ ನೈತಿಕತೆ ಇಲ್ಲ: ಎಂ‌.ಬಿ.ಪಾಟೀಲ್

  • ಮುಸ್ಲಿಂ ಮುಖಂಡರು ಅವರ ಹುಡುಗರಿಗೆ ಬುದ್ಧಿ ಹೇಳಬೇಕು: ಮುತಾಲಿಕ್

    ಮುಸ್ಲಿಂ ಮುಖಂಡರು ಅವರ ಹುಡುಗರಿಗೆ ಬುದ್ಧಿ ಹೇಳಬೇಕು: ಮುತಾಲಿಕ್

    – ಮೊಬೈಲ್ ಸೀಜ್ ಆದ ರಾತ್ರಿ ಫೋಟೋ ವೈರಲ್

    ಹುಬ್ಬಳ್ಳಿ: ಮುಸಲ್ಮಾನ ಮುಖಂಡರು ಅವರ ಹುಡುಗರಿಗೆ ಮೊದಲು ಬುದ್ಧಿ ಹೇಳಬೇಕು. ಅಪರಾಧ ಕೃತ್ಯಗಳನ್ನು ಮಾಡಿದರೆ ನಿಮ್ಮ ಕುಟುಂಬ, ವ್ಯಾಪಾರ, ವಹಿವಾಟಿಗೆ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ (Neha) ಅವರ ಮನೆಗೆ ಭೇಟಿ ನೀಡಿ, ಪೋಷಕರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಲವ್ ಜಿಹಾದ್ ಷಡ್ಯಂತ್ರದ ಸಮಗ್ರ ತನಿಖೆಯಾಗಬೇಕು. ಈ ಮಾನಸಿಕತೆ ಎಲ್ಲಿಂದ, ಯಾರಿಂದ ಬರುತ್ತಿದೆ? ಇಂತಹ ಕೃತ್ಯಗಳು ಇಲ್ಲಿಗೆ ಕೊನೆಯಾಗಬೇಕು ಎಂದಿದ್ದಾರೆ. ಇದನ್ನೂ ಓದಿ: 9 ಅಲ್ಲ 14 ಬಾರಿ ನೇಹಾಳನ್ನು ಇರಿದು ಕೊಂದ ಫಯಾಜ್- ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಏನಿದೆ?

    ಆರೋಪಿಯ ಮೊಬೈಲ್ ಸೀಜ್ ಆದ ರಾತ್ರಿಯೇ ಅದರಲ್ಲಿನ ಫೋಟೋ ಹೊರಗೆ ಬಂದಿದೆ. ಸರ್ಕಾರಕ್ಕೆ ಈ ಪ್ರಕರಣದ ದಿಕ್ಕು ತಪ್ಪಿಸಬೇಕಿತ್ತು. ಇಬ್ಬರ ನಡುವೆ ಲವ್ ಇತ್ತು ಎಂದು ಬಿಂಬಿಸಿದವರ ಬಂಧನವಾಗಬೇಕು. ಮುಸಲ್ಮಾನರು, ಆತನ ಕುಟುಂಬ ಬಹಿಷ್ಕರಿಸುವ ಫತ್ವಾ ಹೊರಡಿಸುತ್ತಿಲ್ಲ. ಕೇವಲ ಗಲ್ಲಿಗೇರಿಸಿ ಎನ್ನುವ ನಾಟಕ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

    ಈ ಕೊಲೆಯ ಹಿಂದೆ ಹಲವರಿದ್ದಾರೆ ಎಂದು ನೇಹಾ ತಂದೆ ಹೇಳಿದ್ದಾರೆ. ಅಧಿಕಾರಿಗಳು ಇದನ್ನು ಸರಿಯಾಗಿ ತನಿಖೆ ಮಾಡಬೇಕು. ಕರ್ನಾಟಕದ ಪೊಲೀಸರು ಸಮರ್ಥರಾಗಿದ್ದಾರೆ. ರಾಜಕೀಯ ಒತ್ತಡ, ವೋಟ್ ಬ್ಯಾಂಕ್, ಮುಸಲ್ಮಾನರ ಓಲೈಕೆಗಾಗಿ ಈ ತನಿಖೆ ದಾರಿ ತಪ್ಪಬಾರದು. ಈ ಪ್ರಕರಣ ತನಿಖೆಯನ್ನು ಸಿಐಡಿಗೆ ವಹಿಸಿರುವುದು, ವಿಶೇಷ ನ್ಯಾಯಾಲಯ ಸ್ಥಾಪನೆ ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ನೇಹಾ ಹಿರೇಮಠ ತಂದೆಯ ಬಳಿ ಕ್ಷಮೆಯಾಚಿಸಿದ ಸಿಎಂ!

  • ಹುಬ್ಬಳ್ಳಿ ನೇಹಾ ಹತ್ಯೆ ಕೇಸ್ ಸಿಐಡಿ ತನಿಖೆಗೆ ವಹಿಸುತ್ತೇವೆ – ಸಿಎಂ

    ಹುಬ್ಬಳ್ಳಿ ನೇಹಾ ಹತ್ಯೆ ಕೇಸ್ ಸಿಐಡಿ ತನಿಖೆಗೆ ವಹಿಸುತ್ತೇವೆ – ಸಿಎಂ

    ಶಿವಮೊಗ್ಗ: ಹುಬ್ಬಳ್ಳಿಯ ನೇಹಾ ಹಿರೇಮಠ (Neha Hiremath) ಅವರ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವುದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.

    ಶಿವಮೊಗ್ಗದ ತರೀಕೆರೆಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ತೆರಳಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ನೇಹಾ ಹತ್ಯೆ ಪ್ರಕರಣವನ್ನ ಸಿಐಡಿ ತನಿಖೆಗೆ (CID Investigation) ವಹಿಸುತ್ತೇವೆ. ಇದಕ್ಕಾಗಿ ವಿಶೇಷ ಕೋರ್ಟ್ (Speical Court) ಅನ್ನು ರಚಿಸುತ್ತೇವೆ ಎಂದು ಹೇಳಿದ್ದಾರೆ.

    ನಾನು ನೇಹಾ ಅವರ ಮನೆಗೆ ಹೋಗಲು ಆಗಿಲ್ಲ. ನಮ್ಮ ಸಚಿವರು, ಕಾರ್ಯಕರ್ತರು ಅವರ ಮನೆಗೆ ಹೋಗಿದ್ದಾರೆ. ಇದನ್ನೂ ಓದಿ: ಮಿಷನ್‌-100 ಟಾರ್ಗೆಟ್‌; 98ರಲ್ಲಿ ಸೋಲು, 99ನೇ ಚುನಾವಣೆಯಲ್ಲಿ ಮತ್ತೆ ಕಣಕ್ಕೆ – ಈ ಅಭ್ಯರ್ಥಿ ಯಾರು ಗೊತ್ತೆ?

    ಇದೇ ವೇಳೆ ಚುನಾವಣಾ ಪ್ರಚಾರದ ಕುರಿತು ಮಾತನಾಡಿದ ಅವರು, ದಿಂಗಾಲೇಶ್ವರ ಸ್ವಾಮೀಜಿಗಳು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಕೊಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 14 ವರ್ಷದ ಅಪ್ರಾಪ್ತೆಯ ಗರ್ಭಪಾತಕ್ಕೆ ಸುಪ್ರೀಂಕೋರ್ಟ್ ಅನುಮತಿ

  • Justice For Neha – ಆರೋಪಿಗೆ ಕಠಿಣ ಶಿಕ್ಷೆಯಾಗಲಿ: ಅಶ್ವಿನಿ ಪುನೀತ್

    Justice For Neha – ಆರೋಪಿಗೆ ಕಠಿಣ ಶಿಕ್ಷೆಯಾಗಲಿ: ಅಶ್ವಿನಿ ಪುನೀತ್

    ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ದಿ.ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ (Ashwini Puneeth Rajkumar) ಸಹ ನೇಹಾ (Neha) ಪರ ಧ್ವನಿ ಎತ್ತಿದ್ದಾರೆ. ಹತ್ಯೆಗೈದ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಹಾಕಿ ಆಕ್ರೋಶ ಹೊರಹಾಕಿದ್ದಾರೆ.

    ಅಶ್ವಿನಿಯವರು ತಮ್ಮ ಇನ್ಸ್ಟಾದಲ್ಲಿ, ನೇಹಾ ಹಿರೇಮಠ ಅವರ ಸಾವಿಗೆ ನ್ಯಾಯ ಸಿಗಲಿ ಎಂಬುದು ನಮ್ಮೆಲ್ಲರ ಆಶಯ. ಕಾನೂನಿನ ಅಡಿಯಲ್ಲಿ ಇಂತಹ ಕಹಿ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದು, #JusticeForNeha ಎಂಬ ಟ್ಯಾಗ್ ಬಳಸಿ ಹಂಚಿಕೊಂಡಿದ್ದಾರೆ.

    ಈ ಬಗ್ಗೆ ಶಿವಣ್ಣ ಸಹ ತಮ್ಮ ಎಕ್ಸ್ ಖಾತೆಯಲ್ಲಿ, ಈ ರೀತಿಯ ಅಮಾನುಷ ಘಟನೆ ಮತ್ತೆಂದೂ ಮರುಕಳಿಸದಿರಲಿ. ಮಗಳನ್ನು ಕಳೆದುಕೊಂಡ ಆ ತಂದೆ-ತಾಯಿಯ ಆಕ್ರಂದನ ನೋಡಲಾಗದು. ನಮ್ಮ ಸರ್ಕಾರ, ನ್ಯಾಯಾಂಗ ವ್ಯವಸ್ಥೆ, ಹಾಗೂ ಪೊಲೀಸ್ ಆದಷ್ಟು ಬೇಗ ನೇಹಾ ಹಿರೇಮಠ ಸಾವಿಗೆ ನ್ಯಾಯ ದೊರಕುವಂತೆ ಮಾಡಲಿ ಎನ್ನುವುದು ನನ್ನ ಕಳಕಳಿಯ ವಿನಂತಿ ಎಂದು ಬರೆದುಕೊಂಡಿದ್ದರು.

    ನಟ ರಿಷಭ್, ರಕ್ಷಿತ್, ದರ್ಶನ್ ಹಾಗೂ ಅನುಶ್ರೀ ಸೇರಿದಂತೆ ಅನೇಕ ನಟ ನಟಿಯರು ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು.

    ಏನಿದು ಪ್ರಕರಣ? ಏ.18ರ ಗುರುವಾರ ಸಂಜೆ 4:45ರ ಸುಮಾರಿಗೆ ಫಯಾಜ್ ಎಂಬಾತ, ವಿದ್ಯಾರ್ಥಿನಿ ನೇಹಾ ಹಿರೇಮಠ ಕಾಲೇಜಿನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಆಕೆಯ ಕುತ್ತಿಗೆ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದ. ಬಳಿಕ ಆರೋಪಿ ಕಿಮ್ಸ್ ಆಸ್ಪತ್ರೆಯ ಹಿಂಬಂದಿ ಅವಿತಿದ್ದ, ಆತನನ್ನು ಕೂಡಲೇ ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.