Tag: Neha Kakkar

  • ಗಾಯಕಿ ನೇಹಾ ಕಕ್ಕರ್ ಪತಿಯ ಬೆಲೆಬಾಳುವ ವಸ್ತು ಕಳವು

    ಗಾಯಕಿ ನೇಹಾ ಕಕ್ಕರ್ ಪತಿಯ ಬೆಲೆಬಾಳುವ ವಸ್ತು ಕಳವು

    ಬಾಲಿವುಡ್ ಪ್ರಸಿದ್ಧ ಗಾಯಕಿ ನೇಹಾ ಕಕ್ಕರ್ ಮತ್ತು ರೋಹನ್ ಪ್ರೀತ್ ಸಿಂಗ್ ದಂಪತಿಯ ಬೆಲೆ ಬಾಳುವ ವಸ್ತು ಕಳವು ಮಾಡಲಾಗಿದೆ. ಹಿಮಾಚಲ ಪ್ರದೇಶದ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹಿಂದಿಯ ಸಾಕಷ್ಟು ಹಾಡುಗಳಿಗೆ ಧ್ವನಿಯಾಗುವ ಮೂಲಕ ಗುರುತಿಸಿಕೊಂಡಿದ್ದ ಗಾಯಕಿ ನೇಹಾ ಕಕ್ಕರ್ ತಮ್ಮ ಪತಿ ಜತೆ ಹಿಮಾಚಲಕ್ಕೆ ಪ್ರವಾಸಕ್ಕೆ ತೆರಳಿದ್ರು. ಹಿಮಾಚಲ ಪ್ರದೇಶದ ಮಂಡಿಯಲ್ಲಿ ಹೋಟೆಲ್‌ವೊಂದರಲ್ಲಿ ವಾಸವಿದ್ರು, ಈ ವೇಳೆ ಹೋಟೆಲ್ ರೂಮ್‌ನಿಂದ ರೋಹನ್ ಅವರ ವಜ್ರ ಉಂಗುರ, ಐಫೋನ್, ಸ್ಮಾರ್ಟ್‌ವಾಚ್ ಮತ್ತು ನಗದನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತಷ್ಟು ಹಾಟ್ ಫೋಟೋಗಳನ್ನು ಹರಿಬಿಟ್ಟು ಟ್ರೋಲಿಗರಿಗೆ ಚಳಿಬಿಡಿಸಿದ ಇರಾ ಖಾನ್

    ರೋಹನ್ ವಾಸವಿದ್ದ ರೂಮ್‌ನಿಂದ ವಜ್ರದ ಉಂಗುರ ಜತೆ ಬೆಲೆಬಾಳುವ ವಸ್ತು ಕಳುವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಂಡಿ ಪೊಲೀಸ್ ವರಿಷ್ಠಾಧಿಕಾರಿ ಶಾಲಿನಿ ಅಗ್ನಿಹೋತ್ರಿ ತಿಳಿಸಿದ್ದಾರೆ.

  • ರಾಯಲ್ ಆಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ನೇಹಾ, ರೋಹನ್ ಪ್ರೀತ್ ಸಿಂಗ್

    ರಾಯಲ್ ಆಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ನೇಹಾ, ರೋಹನ್ ಪ್ರೀತ್ ಸಿಂಗ್

    -ದಂಪತಿಯ ರೋಮ್ಯಾಂಟಿಕ್ ಫೋಟೋಗಳು ವೈರಲ್

    ಜೈಪುರ: ಬಾಲಿವುಡ್ ಜನಪ್ರಿಯ ಗಾಯಕಿ ನೇಹಾ ಕಕ್ಕರ್ ಮತ್ತು ಪಂಜಾಬಿ ಗಾಯಕ ರೋಹನ್ ಪ್ರೀತ್ ಸಿಂಗ್ ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ರಾಜಸ್ಥಾನದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.

    Neha Kakkar

    ಅಕ್ಟೋರ್ 24ರಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿರುವ ನೇಹಾ, ಪತಿ ಜೊತೆಗಿರುವ ಕೆಲವೊಂದು ರೋಮ್ಯಾಂಟಿಕ್ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ರಾಯಲ್ ಥೀಮ್‍ನಲ್ಲಿ ಅಲಂಕರಿಸಲ್ಪಟ್ಟ ದೊಡ್ಡ ದೋಯನಲ್ಲಿ ದಂಪತಿಗಳು ಕಾಲ ಕಳೆದಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ:  6 ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪ್ರಜ್ವಲ್ ದೇವರಾಜ್

    Neha Kakkar

    ಫೋಟೋ ಜೊತೆಗೆ ನೇಹಾ, ನಮ್ಮ ಮೊದಲನೇ ವಿವಾಹ ವಾರ್ಷಿಕೋತ್ಸವ ಹೀಗಿತ್ತು. ನಮನ್ನು ವಿಶೇಷವಾಗಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ಆಶೀರ್ವಾದ, ಪೋಸ್ಟ್, ಸ್ಟೋರಿಗಳು, ನಿಮ್ಮ ಸಂದೇಶ, ನಿಮ್ಮ ಕರೆ ನಿಮ್ಮೆಲ್ಲರ ಪ್ರೀತಿ ನಮ್ಮನ್ನು ಸಂತಸಗೊಳಿಸಿತು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    Neha Kakkar

    ಫೋಟೋದಲ್ಲಿ ನೇಹಾ ಗುಲಾಬಿ ಬಣ್ಣದ ಸಲ್ವರ್-ಸೂಟ್‍ನಲ್ಲಿ ಕಾಣಿಸಿಕೊಂಡಿದ್ದರೆ, ರೋಹನ್ ಗುಲಾಬಿ ಬಣ್ಣದ ಪೇಟಾ ತೊಟ್ಟು ಬ್ಲೂ ಕಲರ್ ಡ್ರೆಸ್ ಧರಿಸಿ ಮಿಂಚಿದ್ದಾರೆ. ವಿಶೇಷವೆಂದರೆ ಇಬ್ಬರೂ ಲೇಕ್ ಸೈಡ್‍ನಲ್ಲಿ ಸೂರ್ಯಾಸ್ತದ ವೇಳೆ ದೊಡ್ಡ ದೋಣಿಯಲ್ಲಿ ಕೈಕೈ ಹಿಡಿದುಕೊಂಡು ರೋಮ್ಯಾಂಟಿಕ್ ಆಗಿ ಕಾಲ ಕಳೆದಿದ್ದಾರೆ. ಅಲ್ಲದೇ ಇವರ ಮುಂದೆ ಕ್ಯಾಂಡಲ್‍ ಲೈಟ್ ಡಿನ್ನರ್ ಗೆ ಸಿದ್ದಪಡಿಸಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ:  ಕೋಟೆನಾಡಿನ ರಾಜಕೀಯಕ್ಕೆ ಚಿತ್ರನಟ ಶಶಿಕುಮಾರ್ ರೀ-ಎಂಟ್ರಿ!

    ನೇಹು ದಾ ವ್ಯಾ ಹಾಡಿನ ವೀಡಿಯೋದ ಚಿತ್ರೀಕರಣದ ವೇಳೆ ನೇಹಾ ಹಾಗೂ ರೋಹನ್ ಪ್ರೀತ್ ಸಿಂಗ್ ಇಬ್ಬರಿಗೂ ಪರಿಚಯವಾಗಿ ನಂತರ ಪ್ರೀತಿಯಲ್ಲಿ ಬಿದ್ದರು, ನಂತರ ಕಳೆದ ವರ್ಷ ಈ ಜೋಡಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದನ್ನೂ ಓದಿ:  ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್

  • ಪತಿ ಜೊತೆ ಕ್ಯಾಮೆರಾ ಕಣ್ಣಿಗೆ ಬಿದ್ದ ನೇಹಾ ಕಕ್ಕರ್

    ಪತಿ ಜೊತೆ ಕ್ಯಾಮೆರಾ ಕಣ್ಣಿಗೆ ಬಿದ್ದ ನೇಹಾ ಕಕ್ಕರ್

    ಮುಂಬೈ: ಬಾಲಿವುಡ್‍ನಲ್ಲಿ ತಮ್ಮ ಗಾಯನ ಪ್ರತಿಭೆ ಹಾಗೂ ಸೌಂದರ್ಯದ ಮೂಲಕವೇ ಖ್ಯಾತಿ ಪಡೆದಿರುವ ನೇಹಾ ಕಕ್ಕರ್ ಪತಿ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

    neha-kakkar

    ಪತಿ ರೋಹನ್ ಪ್ರೀತ್ ಸಿಂಗ್ ಜೊತೆ ಕಾರಿನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ಅವರು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡರು.

    neha-kakkar

    ಪತಿ ಕೈ ಹಿಡಿದುಕೊಂಡು ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿ ನೇಹಾ ಕಕ್ಕರ್ ಕ್ಯಾಮೆರಾಗೆ ಹಾಯ್ ಹೇಳಿದರು.  ಇದನ್ನೂ ಓದಿ: ನಿಮ್ಮ ಪ್ರೋತ್ಸಾಹ, ಬೆಂಬಲ ನನಗೆ ಶ್ರೀರಕ್ಷೆ : ಧ್ರುವ ಸರ್ಜಾ

    neha-kakkar

    ಈ ವೇಳೆ ರೋಹನ್ ಪ್ರೀತ್ ಸಿಂಗ್ ವೈಟ್ ಆ್ಯಂಡ್ ಡ್ರೆಸ್ ತೊಟ್ಟು, ಅದಕ್ಕೆ ಸೂಟ್ ಆಗುವಂತಹ ಬ್ಲ್ಯಾಕ್ ಕಲರ್ ಕ್ಯಾಪ್ ತೊಟ್ಟಿದ್ದರೆ, ನೇಹಾ ಪ್ಲಾಸಾ ಪ್ಯಾಂಟ್ ಮತ್ತು ಶಾರ್ಟ್ ಟಾಪ್, ಯೆಲ್ಲೋ ಕಲರ್ ಸ್ಲಿಪ್ಪರ್ ಧರಿಸಿದ್ದರು.

    ನೇಹಾ ಕಕ್ಕರ್ ಒಂದು ಕೈಯಲ್ಲಿ ಪುಟ್ಟ ಹ್ಯಾಂಡ್ ಬ್ಯಾಗ್ ಹಿಡಿದುಕೊಂಡಿದ್ದರೆ, ಮತ್ತೊಂದರಲ್ಲಿ ಪತಿ ಕೈ ಹಿಡಿದುಕೊಂಡು ವಿಮಾನ ನಿಲ್ದಾಣದಲ್ಲಿ ಸಾಗಿದರು.  ಇದನ್ನೂ ಓದಿ: ಡ್ರಗ್ಸ್, ಸಿಗರೇಟ್, ಸೆಕ್ಸ್‌ಗೆ ಮಗನಿಗೆ ಓಕೆ ಅಂದಿದ್ದೇನೆ: ಶಾರೂಖ್ ವೀಡಿಯೋ ವೈರಲ್

    neha kakkar

    ರಿಷಿಕೇಶ ಮೂಲದವರಾದ ನೇಹಾ ಕಕ್ಕರ್ ನಾಲ್ಕನೇ ವಯಸ್ಸಿನಲ್ಲಿಯೇ ವಿವಿಧ ಸಂಗೀತ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ಅಲ್ಲದೇ ಇಂಡಿಯನ್ ಐಡಿಯಲ್ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದರು. ಕಳೆದ ವರ್ಷ ನೇಹಾ ಕಕ್ಕರ್ ಪಂಜಾಬಿ ಗಾಯಕರಾಗಿರುವ ರೋಹನ್ ಪ್ರೀತ್ ಸಿಂಗ್‍ರನ್ನು ನವದೆಹಲಿಯ ಗುರುದ್ವಾರದಲ್ಲಿ ಸಪ್ತಪದಿ ತುಳಿದಿದ್ದರು.

    https://www.youtube.com/watch?v=k5fuj6IlK1Y

  • ನೇಹಾ ಕಕ್ಕರ್ ಗರ್ಭಿಣಿ ಪೋಸ್ಟ್ ಗೆ ನಿಜ ಹೇಳಿ ಅಂದ್ರು ಫ್ಯಾನ್ಸ್!

    ನೇಹಾ ಕಕ್ಕರ್ ಗರ್ಭಿಣಿ ಪೋಸ್ಟ್ ಗೆ ನಿಜ ಹೇಳಿ ಅಂದ್ರು ಫ್ಯಾನ್ಸ್!

    ಮುಂಬೈ: ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಬೇಬಿ ಬಂಪ್ ಫೋಟೋ ನೋಡಿದ ಅಭಿಮಾನಿಗಳು ವಿಶ್ ಮಾಡಿದ್ದರು. ಆದ್ರೆ ಇಂದು ಮಗದೊಂದು ಪೋಸ್ಟ್ ಮಾಡಿಕೊಂಡಿರುವ ನೇಹಾ ಕಕ್ಕರ್, ಅದು ಹಾಡಿನ ಪೋಸ್ಟ್ ಅನ್ನೋದನ್ನ ರಿವೀಲ್ ಮಾಡಿದ್ದಾರೆ. ಇನ್ನು ಎರಡು ಫೋಟೋ ನೋಡಿದ ಫ್ಯಾನ್ಸ್ ನಿಜ ಹೇಳಿ ಅಂತ ಕಮೆಂಟ್ ಮಾಡುತ್ತಿದ್ದಾರೆ.

    ಪತಿ ರೋಹನ್ ಪ್ರೀತ್ ಸಿಂಗ್ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಶೇರ್ ಮಾಡಿಕೊಂಡಿದ್ದರು. ನೇಹಾ ಪೋಸ್ಟ್ ಗೆ ಕಮೆಂಟ್ ಮಾಡಿದ್ದ ಪತಿ, ಇನ್ನು ಮುಂದೆ ನಾನಿ ಇನ್ನಷ್ಟು ಇನ್ನಷ್ಟು ಕೇರ್ ಮಾಡಬೇಕು ನೇಹೂ (ಖಯಲಾ ರಖ್ಯಾ ಕರ್)ಎಂದು ತಿಳಿಸಿದ್ದರು.

    ನೇಹಾ ಮತ್ತು ರೋಹನ್ ಜೊತೆಯಾಗಿ ಖಯಲಾ ರಖ್ಯಾ ಕರ್ ಹೆಸರಿನ ಹಾಡು ತರಲಿದ್ದಾರೆ. ಈ ಹಾಡಿನಲ್ಲಿ ನೇಹಾ ಗರ್ಭಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಾಡು ಡಿಸೆಂಬರ್ 22ರಂದು ರಿಲೀಸ್ ಆಗಲಿದೆ ಎಂದು ನೇಹಾ ಹೇಳಿಕೊಂಡಿದ್ದಾರೆ. ಆದ್ರೆ ನೇಹಾ ಗರ್ಭಿಣಿ ಹೌದು? ಅಲ್ವಾ? ಪ್ರಶ್ನೆಗೆ ಇನ್ನೂ ಸ್ಪಷ್ಟತಿ ಸಿಕ್ಕಿಲ್ಲ.

    ಗಾಯಕಿ ಹಾಗೂ ನಟಿ ನೇಹಾ ಅವರು ಅಕ್ಟೋಬರ್ 24ರಂದು ತಮ್ಮ ಗೆಳೆಯ ರೋಹನ್ ಪ್ರೀತ್ ಸಿಂಗ್ ಮದುವೆ ದೆಹಲಿಯ ಗುರುದ್ವಾರದಲ್ಲಿ ನಡೆದಿತ್ತು. ನಂತರ ಜೋಡಿ ಮಧುಚಂದ್ರಕ್ಕಾಗಿ ದುಬೈಗೆ ತೆರಳಿತ್ತು. ಸದ್ಯ ಖಾಸಗಿ ವಾಹಿನಿಯ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ನೇಹಾ ತೀರ್ಪುಗಾರರಾಗಿದ್ದು, ಈ ಸ್ಪರ್ಧೆಯಲ್ಲಿ ಮಂಗಳೂರಿನ ನಿಹಾಲ್ ತಾವ್ರೂ ಸಹ ಸ್ಪರ್ಧೆಯಲ್ಲಿದ್ದಾರೆ.

  • ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ಟ ನೇಹಾ ಕಕ್ಕರ್..!

    ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ಟ ನೇಹಾ ಕಕ್ಕರ್..!

    ಮುಂಬೈ: ಮದುವೆಯಾದ ಕೇವಲ ಎರಡೇ ತಿಂಗಳಿಗೆ ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಹೌದು. ನೇಹಾ ಕಕ್ಕರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಈ ಫೋಟೋ ಬೇಬಿ ಬಂಪ್ ತೋರಿಸುವಂತಿದೆ.

    ಫೋಟೋ ಶೇರ್ ಮಾಡಿಕೊಂಡು ಏನೂ ಬರೆದುಕೊಳ್ಳದಿದ್ದರೂ ನೇಹಾ ಅವರು, ಕಾಳಜಿ ವಹಿಸು ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಈ ಪೋಸ್ಟ್ ಗೆ ಪತಿ ರೋಹನ್ ಕೂಡ ಕಾಮೆಂಟ್ ಮಾಡಿದ್ದು, ಇನ್ನು ಮುಂದೆ ನಾನಿ ಇನ್ನಷ್ಟು ಇನ್ನಷ್ಟು ಕೇರ್ ಮಾಡಬೇಕು ನೇಹೂ ಎಂದು ತಿಳಿಸಿದ್ದಾರೆ.

    ಸದ್ಯ ದಂಪತಿ ಎಲ್ಲೂ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಬಹಿರಂಗಪಡಿಸಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಕತೂಹಲ ಮತ್ತಷ್ಟು ಹೆಚ್ಚಿದೆ. ನೇಹಾ ಹಂಚಿಕೊಂಡಿರುವ ಫೋಟೋಗೆ ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ. ನೀವು ಗರ್ಭಿಣಿಯಾಗಿರುವುದು ನಿಜವೇ ಆಗಿದ್ದರೆ ತಿಳಿಸಿ ಎಂದು ಅಭಿಮಾನಿಗಳು ಕಾಮೆಂಟ್ ಮೂಲಕವೇ ಒತ್ತಾಯಿಸಿದ್ದಾರೆ.

    ಗಾಯಕಿ ಹಾಗೂ ನಟಿ ನೇಹಾ ಅವರು ಅಕ್ಟೋಬರ್ 24ರಂದು ತಮ್ಮ ಗೆಳೆಯ ರೋಹನ್ ಪ್ರೀತ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ನಂತರ ಜೋಡಿ ಹನಿಮೂನ್ ಗಾಗಿ ದುಬೈಗೆ ತೆರಳಿ ವಾಪಸ್ಸಾಗಿತ್ತು.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೇಹಾ ಕಕ್ಕರ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೇಹಾ ಕಕ್ಕರ್

    ನವದೆಹಲಿ: ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಇಂದು ಗೆಳೆಯ ರೋಹನ್ ಪ್ರೀತ್ ಸಿಂಗ್ ಜೊತೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದೆಹಲಿಯ ಆನಂದ್ ಕಾರಜ್ ನಲ್ಲಿ ನಡೆದ ಮದುವೆಯಲ್ಲಿ ಎರಡು ಕುಟುಂಬಗಳ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು.

    ಕಳೆದ ಕೆಲ ದಿನಗಳಿಂದ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಸಂಭ್ರಮದ ವಿಡಿಯೋ ವತ್ತು ಫೋಟೋಗಳನ್ನ ಶೇರ್ ಮಾಡಿಕೊಳ್ಳಲಾರಂಭಿಸಿದ್ದರು. ಮದುವೆ ಬಳಿಕ ನೇಹಾ ಪತಿ ರೋಹನ್ ಜೊತೆ ಪಂಜಾಬ್ ಗೆ ತೆರಳಲಿದ್ದಾರೆ. ಪಂಜಾಬ್ ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಆಯೋಜಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

    20 ದಿನಗಳ ಹಿಂದೆಯೇ ನೇಹಾ ಮತ್ತು ರೋಹನ್ ಮದುವೆಯ ಸುದ್ದಿಗಳು ಹರಿದಾಡಿದ್ದವು. ಅಕ್ಟೋಬರ್ 24ರಂದು ಇಬ್ಬರ ಮದುವೆ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅಕ್ಟೋಬರ್ 9ರಂದು ನೇಹಾ ಕಕ್ಕರ್, ಸೋಶಿಯಲ್ ಮೀಡಿಯಾದಲ್ಲಿ ಗೆಳೆಯ ರೋಹನ್ ಜೊತೆ ಮದುವೆ ಆಗುತ್ತಿರುವ ವಿಷಯ ರಿವೀಲ್ ಮಾಡಿದ್ದರು. ರೋಹನ್ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿದ್ದ ನೇಹಾ, ನೀನು ನನ್ನವನು ಎಂದು ಬರೆದುಕೊಂಡಿದ್ದರು. ನೇಹಾ ಪೋಸ್ಟ್ ಗೆ ರಿಪ್ಲೈ ನೀಡಿದ್ದ ರೋಹನ್, ಬಾಬು ಐ ಲವ್ ಯು ಸೋ ಮಚ್ ಮೈ ಲವ್. ಹೌದು ನಾನು ನಿನ್ನವನು ಮಾತ್ರ. ನೀನು ನನ್ನ ಜೀವ ಎಂದು ರೊಮ್ಯಾಂಟಿಕ್ ಆಗಿ ಪ್ರೇಮ ವಿಷಯ ತಿಳಿಸಿದ್ದರು.

    ಕೆಲ ತಿಂಗಳ ಹಿಂದೆ ರೋಹನ್ ಮತ್ತು ನೇಹಾ ಪರಿಚಯವಾಗಿತ್ತು. ಆಜಾ ಚಲಾ ವ್ಯಾಹ ಕರವಾಯೇಂ ಹಾಡಿನ ಸಂದರ್ಭದಲ್ಲಿ ಇಬ್ಬರ ಪರಿಚಯವಾಗಿತ್ತು. ಪರಿಚಯ ಕೆಲವೇ ದಿನಗಳಲ್ಲಿ ಪ್ರೇಮದ ಪುಟ ತೆರೆದು ಮದುವೆ ಎಂಬ ಹಸ್ತಾಕ್ಷರ ಇಬ್ಬರ ಬಾಳಲ್ಲಿ ಮುದ್ರಣಗೊಂಡಿದೆ.

    2019ರ ಇಂಡಿಯನ್ ರೈಸಿಂಗ್ ಸ್ಟಾರ್ ಮೂರನೇ ಸೀಸನ್ ನಲ್ಲಿ ರೋಹನ್ ಪ್ರೀತ್ ಸಿಂಗ್ ಸ್ಪರ್ಧಿಯಾಗಿದ್ದರು. ಇದರ ಜೊತೆ ಮುಜ್‍ಸೇ ಶಾದಿ ಕರೋಗೆ ರಿಯಾಲಿಟಿ ಶೋನಲ್ಲಿ ರೋಹನ್ ಕಾಣಿಸಿಕೊಂಡಿದ್ದರು.

  • ಅಂದು ಬಾಡಿಗೆ ಮನೆಯಲ್ಲಿ, ಇಂದು ಭವ್ಯವಾದ ಬಂಗಲೆ ಒಡತಿಯಾದ ಗಾಯಕಿ ನೇಹಾ

    ಅಂದು ಬಾಡಿಗೆ ಮನೆಯಲ್ಲಿ, ಇಂದು ಭವ್ಯವಾದ ಬಂಗಲೆ ಒಡತಿಯಾದ ಗಾಯಕಿ ನೇಹಾ

    ಹೈದರಾಬಾದ್: ಜನಪ್ರಿಯ ಗಾಯಕಿ ನೇಹಾ ಕಕ್ಕರ್ ಉತ್ತರಾಖಂಡದ ರಿಷಿಕೇಶದಲ್ಲಿ ಒಂದು ವಿಸ್ತಾರವಾದ ಬಂಗಲೆಯನ್ನು ಖರೀದಿಸಿದ್ದಾರೆ. ಜೊತೆಗೆ ಕಠಿಣ ಶ್ರಮದಿಂದ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದನ್ನು ನಿರೂಪಿಸಿದ್ದಾರೆ.

    ನೇಹಾ ಕಕ್ಕರ್ ಅವರು ತಾವು ಹುಟ್ಟಿ, ಬೆಳೆದ ಹಳೆಯ ಮನೆಯ ಫೋಟೋದೊಂದಿಗೆ ತಮ್ಮ ಹೊಸ ಬಂಗಲೆ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಮೂಲಕ ನೇಹಾ ಅವರು ತಮ್ಮ ಇಡೀ ಕುಟುಂಬವು ಬಾಡಿಗೆ ಮನೆಯಲ್ಲಿ ಹೇಗೆ ವಾಸಿಸುತ್ತಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ಕಠಿಣ ಪರಿಶ್ರಮದಿಂದ ಅಂದಿನ ಬಾಡಿಗೆ ಮನೆಯಲ್ಲಿ ಬೆಳೆದು ಇಂದು ಅದೇ ನಗರದಲ್ಲಿ ಬಂಗಲೆಯ ಮಾಲೀಕರಾಗಿರುವುದರ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಇನ್ಸ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಏನಿದೆ?
    “ಈ ಬಂಗಲೆಯನ್ನು ನಾವು ಈಗ ರಿಷಿಕೇಶದಲ್ಲಿ ಖರೀದಿಸಿದ್ದೇವೆ. ಜೊತೆಗೆ ನಮ್ಮ ಹಳೆಯ ಮನೆಯ ಫೋಟೋ ನೋಡಲು ಬಲಕ್ಕೆ ಸ್ವೈಪ್ ಮಾಡಿ. ಅದೇ ಮನೆಯಲ್ಲಿ ನಾನು ಹುಟ್ಟಿದ್ದು, ಒಂದು ರೂಮಿನಲ್ಲಿ ನಾವು ವಾಸಿಸುತ್ತಿದ್ದೆವು. ಆ ಸಣ್ಣ ಕೋಣೆಯಲ್ಲಿ ನಮ್ಮ ತಾಯಿ ಒಂದು ಟೇಬಲ್ ಇಟ್ಟಿದ್ದರು. ಅದೇ ನಮ್ಮ ಅಡುಗೆ ಮನೆಯಾಗಿತ್ತು. ಆ ರೂಮ್ ಕೂಡ ನಮ್ಮದಲ್ಲ, ಅದಕ್ಕೆ ನಾವು ಬಾಡಿಗೆ ಕೊಡುತ್ತಿದ್ದೆವು. ಈಗ ನಾನು ಅದೇ ನಗರದಲ್ಲಿ ನಮ್ಮ ಸ್ವಂತ ಬಂಗಲೆಯನ್ನು ಹೊಂದಿದ್ದೇನೆ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಜೊತೆಗೆ ಅವರ ಕುಟುಂಬಕ್ಕೆ ಮತ್ತು ತಮ್ಮ ಹಿತೈಷಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ನೇಹಾ ಭಾವನಾತ್ಮಕ ಪೋಸ್ಟ್ ಮಾಡಿದ ನಂತರ ಅದಕ್ಕೆ ಅವರ ಸಹೋದ್ಯೋಗಿಗಳಾದ ಗೀತಾ ಕಪೂರ್, ಆದಿತ್ಯ ನಾರಾಯಣ್, ವಿಶಾಲ್ ದಾದ್ಲಾನಿ ಮತ್ತು ಮನೀಶ್ ಪಾಲ್ ಇತರರು ಕಮೆಂಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಜೀವನದಲ್ಲಿ ಕಠಿಣ ಪರಿಶ್ರಮದಿಂದ ಏನೂ ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ನೇಹಾ ಒಂದು ಉದಾಹರಣೆ ಎಂದು ವಿಶಾಲ್ ಹೇಳಿದ್ದಾರೆ. ನೇಹಾ ಅವರು ಬೆಳೆದು ಬಂದ ಹಾದಿ ಕನಸು ಕಾಣುವುದನ್ನು ಎಂದಿಗೂ ನಿಲ್ಲಿಸದಂತೆ ಇತರರಿಗೆ ಪ್ರೇರಣೆ ನೀಡುತ್ತದೆ ಎಂದು ಆದಿತ್ಯ ಕಮೆಂಟ್ ಮಾಡಿದ್ದಾರೆ.

    ನೇಹಾ ಜನಪ್ರಿಯ ಹಿನ್ನೆಲೆ ಗಾಯಕರಲ್ಲಿ ಒಬ್ಬರು. ನೇಹಾ ಅವರ ಸಹೋದರಿ ಸೋನು ಕಕ್ಕರ್ ಮತ್ತು ಸಹೋದರ ಟೋನಿ ಕಕ್ಕರ್ ಕೂಡ ಗಾಯಕರಾಗಿದ್ದು, ಕೆಲವು ಹಿಟ್ ಹಾಡುಗಳನ್ನು ಒಟ್ಟಿಗೆ ಹಾಡಿದ್ದಾರೆ.

    https://www.instagram.com/p/B9Y80pXHICf/?utm_source=ig_embed

  • ಖ್ಯಾತ ನಿರೂಪಕನನ್ನು ವರಿಸಲಿದ್ದಾರೆ ಗಾಯಕಿ ನೇಹಾ ಕಕ್ಕರ್

    ಖ್ಯಾತ ನಿರೂಪಕನನ್ನು ವರಿಸಲಿದ್ದಾರೆ ಗಾಯಕಿ ನೇಹಾ ಕಕ್ಕರ್

    ಮುಂಬೈ: ಬಾಲಿವುಡ್‍ನ ಖ್ಯಾತ ಹಿನ್ನೆಲೆ ಗಾಯಕಿ ನೇಹಾ ಕಕ್ಕರ್ ಅವರು ಸ್ಟಾರ್ ನಿರೂಪಕರೊಬ್ಬರನ್ನು ವರಿಸಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

    ಸದ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಒಂದು ರಿಯಾಲಿಟಿ ಶೋನ ತೀರ್ಪುಗಾರ್ತಿಯಾಗಿ ನೇಹಾ ಕಕ್ಕರ್ ಭಾಗವಹಿಸುತ್ತಿದ್ದು, ಅದೇ ಕಾರ್ಯಕ್ರಮದ ನಿರೂಪಕ ಆದಿತ್ಯ ನಾರಾಯಣ್ ಅವರನ್ನು ನೇಹಾ ಕಕ್ಕರ್ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿದೆ.

    ಒಂದೇ ಕಾರ್ಯಕ್ರಮದಲ್ಲಿ ತೀರ್ಪುಗಾರ್ತಿಯಾಗಿ ಹಾಗೂ ನಿರೂಪಕನಾಗಿ ಭಾಗವಹಿಸುತ್ತಿರುವ ನೇಹಾ ಮತ್ತು ಆದಿತ್ಯ ನಡುವೆ ಪ್ರೇಮಾಂಕುರವಾಗಿದ್ದು, ಇದೇ ತಿಂಗಳು ಅಂದರೆ ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ಈ ಜೋಡಿ ಹಸಮಣೆ ಹತ್ತಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನೇಹಾ ಕಕ್ಕರ್ ಆಗಲಿ ಅಥವಾ ಆದಿತ್ಯ ನಾರಾಯಣ್ ಆಗಲಿ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ.

    ಈ ಶೋನ ಆರಂಭದಲ್ಲಿ ಆದಿತ್ಯ ನೇಹಾ ಜೊತೆ ಫ್ಲರ್ಟ್ ಮಾಡುತ್ತಿದ್ದರು. ನಂತರ ಅವರಿಗೆ ಪ್ರಪೋಸ್ ಕೂಡ ಮಾಡಿದ್ದರು. ಇದಾದ ಬಳಿಕ ಇತ್ತೀಚಿಗೆ ಶೋನಲ್ಲಿ ಆದಿತ್ಯ ನಾರಾಯಣ್ ಪೋಷಕರಾದ ಉದಿತ್ ನಾರಾಯಣ್ ಮತ್ತು ದೀಪಾ ನಾರಾಯಣ್ ಬಂದಿದ್ದರು. ಜೊತೆಗೆ ನೇಹಾ ಕಕ್ಕರ್ ಪೋಷಕರು ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು. ಈ ಸಮಯದಲ್ಲಿ ಆದಿತ್ಯ ನಾರಾಯಣ್ ಪೋಷಕರು ನೇಹಾಗೆ, ನಮ್ಮ ಮನೆಯ ಸೊಸೆ ಆಗ್ತೀಯಾ ಎಂದು ಕೇಳಿದ್ದರು. ಈ ಎಲ್ಲಾ ವಿಚಾರಗಳಿಂದ ಈ ಇಬ್ಬರು ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ.

    ಈ ಕಾರ್ಯಕ್ರಮದಲ್ಲಿ ಈ ಇಬ್ಬರು ರೊಮ್ಯಾಂಟಿಕ್ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಿದ್ದರು. ಇದಾದ ನಂತರ ಖಾಸಗಿ ವಾಹಿನಿಯೊಂದು ಇವರಿಬ್ಬರ ಸಂಬಂಧದ ಬಗ್ಗೆ ಟ್ವೀಟ್ ಕೂಡ ಮಾಡಿತ್ತು. ಇದರ ಜೊತೆಗೆ ನೇಹಾ ಮತ್ತು ಆದಿತ್ಯ ಸಾಮಾಜಿಕ ಜಾಲತಾಣದಲ್ಲಿ ಅವರಿಬ್ಬರ ಫೋಟೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಈ ಕಾರ್ಯಕ್ರಮಕ್ಕೆ ಅಥಿತಿಯಾಗಿ ಬಂದಿದ್ದ ಕಾರ್ತಿಕ್ ಆರ್ಯನ್ ಮತ್ತು ಸಾರಾ ಆಲಿಖಾನ್ ಕೂಡ ಈ ಜೋಡಿಯ ಮದುವೆಗೆ ಶುಭಕೋರಿದ್ದಾರೆ ಎನ್ನಲಾಗಿದೆ. ಆದರೆ ಯಾವುದೂ ಅಧಿಕೃತವಾಗಿಲ್ಲ. ನೇಹಾ ಮತ್ತು ಆದಿತ್ಯ ನಿಜವಾಗಲು ಮದುವೆಯಾಗುತ್ತಾರಾ? ಇಲ್ಲ ಇದೆಲ್ಲ ಗಾಳಿ ಸುದ್ದಿನ ಕಾದು ನೋಡಬೇಕಿದೆ.