Tag: Neha

  • ಯುಪಿಯ ಪುರುಷನಿಗೆ ಪಾಕ್ ಏಜೆಂಟ್ ನೇಹಾ ಆಮಿಷ – ರಕ್ಷಣಾ ಇಲಾಖೆಯ ಮಾಹಿತಿ ಸೋರಿಕೆ ಮಾಡ್ತಿದ್ದವನ ಬಂಧನ

    ಯುಪಿಯ ಪುರುಷನಿಗೆ ಪಾಕ್ ಏಜೆಂಟ್ ನೇಹಾ ಆಮಿಷ – ರಕ್ಷಣಾ ಇಲಾಖೆಯ ಮಾಹಿತಿ ಸೋರಿಕೆ ಮಾಡ್ತಿದ್ದವನ ಬಂಧನ

    ಲಕ್ನೋ: ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್‌ (ISI) ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಫಿರೋಜಾಬಾದ್‌ನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿದೆ.

    ಬಂಧಿತನನ್ನ ರವೀಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ‌ಫಿರೋಜಾಬಾದ್‌ನ ಹಜರತ್‌ಪುರ ಮೂಲದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಈತ ಗಗನಯಾನ ಬಾಹ್ಯಾಕಾಶ ಯೋಜನೆ ಮತ್ತು ಮಿಲಿಟರಿ ಲ್ಯಾಜಿಸ್ಟಿಜ್ಸ್‌, ಡ್ರೋನ್ ಪ್ರಯೋಗಗಳ ಮಾಹಿತಿ ಸೇರಿದಂತೆ ಗೌಪ್ತ ಮಾಹಿತಿಯನ್ನ ಪಾಕಿಸ್ತಾನದ ಐಎಸ್‌ಐ ಜೊತೆಗೆ ಹಂಚಿಕೊಂಡಿದ್ದಾನೆ ಎಂದು ಯುಪಿ ಎಟಿಎಸ್ (UP ATS) ಮುಖ್ಯಸ್ಥ ನೀಲಬ್ಜಾ ಚೌಧರಿ ತಿಳಿಸಿದ್ದಾರೆ.

    ರವೀಂದ್ರ ಕುಮಾರ್‌ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ಬಳಿಕ ಆತ ʻನೇಹಾʼ (Neha) ಎಂಬ ಹ್ಯಾಂಡ್ಲರ್‌ ಮೂಲಕ ರಕ್ಷಣಾ ವಲಯದ ಸೂಕ್ಷ್ಮ ಮಾಹಿತಿಗಳನ್ನ ಹಂಚಿಕೊಂಡಿರುವುದು ತಿಳಿದುಬಂದಿದೆ. ಈ ಮಾಹಿತಿಯನ್ನ ಇತರ ಕಾನೂನು ಸಂಸ್ಥೆಗಳೊಂದಿಗೆ ಹಂಚಿಕೊಂಡಿರುವುದಾಗಿ ಚೌಧರಿ ವಿವರಿಸಿದ್ದಾರೆ.

    ʻನೇಹಾʼ ಹೆಸರಿನ ಹ್ಯಾಂಡ್ಲರ್‌ ಕಳೆದ ಒಂದು ವರ್ಷದ ಹಿಂದೆ ಫೇಸ್‌ ಮೂಲಕ ರವೀಂದ್ರನನ್ನ ಸಂಪರ್ಕಿಸಿದ್ದಳು. ಈಕೆಯೊಂದಿಗೆ ರಸಹ್ಯ ಡೇಟಾ ಹಂಚಿಕೊಳ್ಳುತ್ತಿದ್ದ ರವೀಂದ್ರ ತನ್ನ ಕೋಡನ್ನು ಮರೆ ಮಾಚಲು ʻಚಂದನ್‌ ಸ್ಟೋರ್‌ ಕೀಪರ್‌-2ʼ ಎಂದು ಸೇವ್‌ ಮಾಡಿಕೊಂಡಿದ್ದ. ಹಣದ ಆಮಿಷಕ್ಕೆ ಒಳಗಾಗಿ‌ ವಾಟ್ಸಪ್‌ ಮೂಲಕವೂ ಅನೇಕ ಗೌಪ್ಯ ಮಾಹಿತಿಗಳನ್ನ ಹಂಚಿಕೊಂಡಿದ್ದ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

    ಸಮಗ್ರ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು ರವೀಂದ್ರನನ್ನ ಆಗ್ರಾದಲ್ಲಿ ಬಂಧಿಸಿದ್ದಾರೆ. ಇದೇ ವೇಳೆ ಆತನ ಸಹಚರನನ್ನೂ ಬಂಧಿಸಲಾಗಿದ್ದು, ವಾಟ್ಸಪ್ ಚಾಟ್‌, ವರ್ಗೀಕೃತ ದಾಖಲೆ ಸೇರಿದಂತೆ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಕೊಂಡಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

  • ಮುಸ್ಲಿಂ ಮುಖಂಡರು ಅವರ ಹುಡುಗರಿಗೆ ಬುದ್ಧಿ ಹೇಳಬೇಕು: ಮುತಾಲಿಕ್

    ಮುಸ್ಲಿಂ ಮುಖಂಡರು ಅವರ ಹುಡುಗರಿಗೆ ಬುದ್ಧಿ ಹೇಳಬೇಕು: ಮುತಾಲಿಕ್

    – ಮೊಬೈಲ್ ಸೀಜ್ ಆದ ರಾತ್ರಿ ಫೋಟೋ ವೈರಲ್

    ಹುಬ್ಬಳ್ಳಿ: ಮುಸಲ್ಮಾನ ಮುಖಂಡರು ಅವರ ಹುಡುಗರಿಗೆ ಮೊದಲು ಬುದ್ಧಿ ಹೇಳಬೇಕು. ಅಪರಾಧ ಕೃತ್ಯಗಳನ್ನು ಮಾಡಿದರೆ ನಿಮ್ಮ ಕುಟುಂಬ, ವ್ಯಾಪಾರ, ವಹಿವಾಟಿಗೆ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ (Neha) ಅವರ ಮನೆಗೆ ಭೇಟಿ ನೀಡಿ, ಪೋಷಕರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಲವ್ ಜಿಹಾದ್ ಷಡ್ಯಂತ್ರದ ಸಮಗ್ರ ತನಿಖೆಯಾಗಬೇಕು. ಈ ಮಾನಸಿಕತೆ ಎಲ್ಲಿಂದ, ಯಾರಿಂದ ಬರುತ್ತಿದೆ? ಇಂತಹ ಕೃತ್ಯಗಳು ಇಲ್ಲಿಗೆ ಕೊನೆಯಾಗಬೇಕು ಎಂದಿದ್ದಾರೆ. ಇದನ್ನೂ ಓದಿ: 9 ಅಲ್ಲ 14 ಬಾರಿ ನೇಹಾಳನ್ನು ಇರಿದು ಕೊಂದ ಫಯಾಜ್- ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಏನಿದೆ?

    ಆರೋಪಿಯ ಮೊಬೈಲ್ ಸೀಜ್ ಆದ ರಾತ್ರಿಯೇ ಅದರಲ್ಲಿನ ಫೋಟೋ ಹೊರಗೆ ಬಂದಿದೆ. ಸರ್ಕಾರಕ್ಕೆ ಈ ಪ್ರಕರಣದ ದಿಕ್ಕು ತಪ್ಪಿಸಬೇಕಿತ್ತು. ಇಬ್ಬರ ನಡುವೆ ಲವ್ ಇತ್ತು ಎಂದು ಬಿಂಬಿಸಿದವರ ಬಂಧನವಾಗಬೇಕು. ಮುಸಲ್ಮಾನರು, ಆತನ ಕುಟುಂಬ ಬಹಿಷ್ಕರಿಸುವ ಫತ್ವಾ ಹೊರಡಿಸುತ್ತಿಲ್ಲ. ಕೇವಲ ಗಲ್ಲಿಗೇರಿಸಿ ಎನ್ನುವ ನಾಟಕ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

    ಈ ಕೊಲೆಯ ಹಿಂದೆ ಹಲವರಿದ್ದಾರೆ ಎಂದು ನೇಹಾ ತಂದೆ ಹೇಳಿದ್ದಾರೆ. ಅಧಿಕಾರಿಗಳು ಇದನ್ನು ಸರಿಯಾಗಿ ತನಿಖೆ ಮಾಡಬೇಕು. ಕರ್ನಾಟಕದ ಪೊಲೀಸರು ಸಮರ್ಥರಾಗಿದ್ದಾರೆ. ರಾಜಕೀಯ ಒತ್ತಡ, ವೋಟ್ ಬ್ಯಾಂಕ್, ಮುಸಲ್ಮಾನರ ಓಲೈಕೆಗಾಗಿ ಈ ತನಿಖೆ ದಾರಿ ತಪ್ಪಬಾರದು. ಈ ಪ್ರಕರಣ ತನಿಖೆಯನ್ನು ಸಿಐಡಿಗೆ ವಹಿಸಿರುವುದು, ವಿಶೇಷ ನ್ಯಾಯಾಲಯ ಸ್ಥಾಪನೆ ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ನೇಹಾ ಹಿರೇಮಠ ತಂದೆಯ ಬಳಿ ಕ್ಷಮೆಯಾಚಿಸಿದ ಸಿಎಂ!

  • Justice For Neha – ಆರೋಪಿಗೆ ಕಠಿಣ ಶಿಕ್ಷೆಯಾಗಲಿ: ಅಶ್ವಿನಿ ಪುನೀತ್

    Justice For Neha – ಆರೋಪಿಗೆ ಕಠಿಣ ಶಿಕ್ಷೆಯಾಗಲಿ: ಅಶ್ವಿನಿ ಪುನೀತ್

    ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ದಿ.ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ (Ashwini Puneeth Rajkumar) ಸಹ ನೇಹಾ (Neha) ಪರ ಧ್ವನಿ ಎತ್ತಿದ್ದಾರೆ. ಹತ್ಯೆಗೈದ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಹಾಕಿ ಆಕ್ರೋಶ ಹೊರಹಾಕಿದ್ದಾರೆ.

    ಅಶ್ವಿನಿಯವರು ತಮ್ಮ ಇನ್ಸ್ಟಾದಲ್ಲಿ, ನೇಹಾ ಹಿರೇಮಠ ಅವರ ಸಾವಿಗೆ ನ್ಯಾಯ ಸಿಗಲಿ ಎಂಬುದು ನಮ್ಮೆಲ್ಲರ ಆಶಯ. ಕಾನೂನಿನ ಅಡಿಯಲ್ಲಿ ಇಂತಹ ಕಹಿ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದು, #JusticeForNeha ಎಂಬ ಟ್ಯಾಗ್ ಬಳಸಿ ಹಂಚಿಕೊಂಡಿದ್ದಾರೆ.

    ಈ ಬಗ್ಗೆ ಶಿವಣ್ಣ ಸಹ ತಮ್ಮ ಎಕ್ಸ್ ಖಾತೆಯಲ್ಲಿ, ಈ ರೀತಿಯ ಅಮಾನುಷ ಘಟನೆ ಮತ್ತೆಂದೂ ಮರುಕಳಿಸದಿರಲಿ. ಮಗಳನ್ನು ಕಳೆದುಕೊಂಡ ಆ ತಂದೆ-ತಾಯಿಯ ಆಕ್ರಂದನ ನೋಡಲಾಗದು. ನಮ್ಮ ಸರ್ಕಾರ, ನ್ಯಾಯಾಂಗ ವ್ಯವಸ್ಥೆ, ಹಾಗೂ ಪೊಲೀಸ್ ಆದಷ್ಟು ಬೇಗ ನೇಹಾ ಹಿರೇಮಠ ಸಾವಿಗೆ ನ್ಯಾಯ ದೊರಕುವಂತೆ ಮಾಡಲಿ ಎನ್ನುವುದು ನನ್ನ ಕಳಕಳಿಯ ವಿನಂತಿ ಎಂದು ಬರೆದುಕೊಂಡಿದ್ದರು.

    ನಟ ರಿಷಭ್, ರಕ್ಷಿತ್, ದರ್ಶನ್ ಹಾಗೂ ಅನುಶ್ರೀ ಸೇರಿದಂತೆ ಅನೇಕ ನಟ ನಟಿಯರು ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು.

    ಏನಿದು ಪ್ರಕರಣ? ಏ.18ರ ಗುರುವಾರ ಸಂಜೆ 4:45ರ ಸುಮಾರಿಗೆ ಫಯಾಜ್ ಎಂಬಾತ, ವಿದ್ಯಾರ್ಥಿನಿ ನೇಹಾ ಹಿರೇಮಠ ಕಾಲೇಜಿನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಆಕೆಯ ಕುತ್ತಿಗೆ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದ. ಬಳಿಕ ಆರೋಪಿ ಕಿಮ್ಸ್ ಆಸ್ಪತ್ರೆಯ ಹಿಂಬಂದಿ ಅವಿತಿದ್ದ, ಆತನನ್ನು ಕೂಡಲೇ ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಹೆಣ್ಣುಮಕ್ಕಳ ಬ್ಯಾಗ್‍ನಲ್ಲಿ ಸರ್ಕಾರ ಎಕೆ-47 ಗನ್ ಇಡಬೇಕು: ವೀರೇಶ್ವರ ಸ್ವಾಮೀಜಿ

    ಹೆಣ್ಣುಮಕ್ಕಳ ಬ್ಯಾಗ್‍ನಲ್ಲಿ ಸರ್ಕಾರ ಎಕೆ-47 ಗನ್ ಇಡಬೇಕು: ವೀರೇಶ್ವರ ಸ್ವಾಮೀಜಿ

    ಯಾದಗಿರಿ: ಎಲ್ಲಾ ಹೆಣ್ಣುಮಕ್ಕಳ ಬ್ಯಾಗ್‍ನಲ್ಲಿ ಸರ್ಕಾರ ಎಕೆ-47 ಗನ್ ಇಡಬೇಕು ಎಂದು ದಾಸವಾಳ ಮಠದ (Dasavala Mutt) ವೀರೇಶ್ವರ ಸ್ವಾಮಿಜಿ (Veereshwara Swamiji) ಹೇಳಿದ್ದಾರೆ.

    ಯಾದಗಿರಿಯಲ್ಲಿ (Yadgir) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ (Hubballi) ನಡೆದ ನೇಹಾ (Neha) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ಯಾವ ಪೋಷಕರು ಹೆಣ್ಣುಮಕ್ಕಳ ಹಿಂದೆ ರಕ್ಷಣೆಗೆ ಹೋಗಲು ಆಗುವುದಿಲ್ಲ. ಅಲ್ಲದೇ ಶಿಕ್ಷಣ ಸಂಸ್ಥೆಯವರು ಸಹ ಹೆಣ್ಣುಮಕ್ಕಳಿಗೆ ಭದ್ರತೆ ಕೊಡಲು ಆಗುತ್ತಾ? ಹೀಗಾಗಿ ಹೆಣ್ಣುಮಕ್ಕಳಿಗೆ ಸರ್ಕಾರ ದೈಹಿಕ ಸಾಮರ್ಥ್ಯದ ತರಬೇತಿ ಕೊಡಬೇಕು. ಇದಕ್ಕಾಗಿ ಒಂದು ತರಗತಿ ಮೀಸಲಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮದುವೆಗೆ ಒಪ್ಪದಿದ್ದಕ್ಕೆ ಹತಾಶೆಯಿಂದ ಕೊಂದಿದ್ದಾನೆ; ನೇಹಾ ತಂದೆ ಹೇಳಿದ್ದೇನು? – ಎಫ್‌ಐಆರ್‌ನಲ್ಲಿ ಏನಿದೆ?

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಏನೇ ಮಾಡಿದರೂ ವರ್ಷ ಆರು ತಿಂಗಳು ಜೈಲಿನಲ್ಲಿದ್ದು, ಮತ್ತೆ ಜಾಮೀನಿನ ಮೇಲೆ ಬರ್ತಿವಿ ಎಂದು ದುಷ್ಕೃತ್ಯ ಎಸಗುವ ಆರೋಪಿಗಳಿಗೆ ಮನದಟ್ಟಾಗಿದೆ. ಆರೋಪಿಯನ್ನು ಪೊಲೀಸರು ಹೇಗೆ ಠಾಣೆಗೆ ಕರೆತಂದ್ರೂ ಹಾಗೆ ಸ್ಮಶಾನಕ್ಕೆ ಕರೆದುಕೊಂಡ ಹೋಗಬೇಕು ಎಂದರು.

    ಸಿಎಂ ಹಾಗೂ ಗೃಹ ಸಚಿವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಗಳು ಜವಾಬ್ದಾರಿ ಮರೆತು ಹೇಳಿಕೆ ಕೊಟ್ಟಿದ್ದಾರೆ. ಆಕಸ್ಮಿಕವಾದದ್ದು ಎಂಬ ಪದ ಬಹಳ ಹೇಯವಾದದ್ದು. ಇಂತಹ ಮಾತುಗಳು ಆ ವ್ಯಕ್ತಿಗೆ ಶೋಭೆ ತರುವಂತದ್ದಲ್ಲ. ಉದ್ದೇಶಪೂರ್ವಕವಾಗಿ ನೇಹಾ ಹೀರೆಮಠರನ್ನು ಒಬ್ಬರೇ ಬರುವಾಗ ಕತ್ತು ಕೊಯ್ದು ಒಂಬತ್ತು ಬಾರಿ ಚುಚ್ಚಿ ಕೊಲೆಗೈದಿದ್ದಾನೆ. ರಾಜ್ಯದಲ್ಲಿ ಮತ್ತೊಮ್ಮ ಈ ರೀತಿ ಘಟನೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದ ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಗಳಿಗೆ ರಕ್ಷಣೆ ಕೊಟ್ಟಿದ್ದಕ್ಕೆ ಯುವತಿ ತಾಯಿಯ ಸೀರೆ ಎಳೆದಾಡಿ ದುರ್ವರ್ತನೆ ತೋರಿದ ಪುಂಡ!