Tag: Neglected

  • ಹುಡುಗಿಯರನ್ನು ಕಾಮತೃಷೆಗೆ ಬಳಸ್ತಿದ್ದ 65ರ ವ್ಯಕ್ತಿಯನ್ನು ಹಿಡಿದ ಯುವತಿ!

    ಹುಡುಗಿಯರನ್ನು ಕಾಮತೃಷೆಗೆ ಬಳಸ್ತಿದ್ದ 65ರ ವ್ಯಕ್ತಿಯನ್ನು ಹಿಡಿದ ಯುವತಿ!

    ಮಂಗಳೂರು: ಅಪ್ರಾಪ್ತ ಹುಡುಗಿಯರನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಲ್ಲದೆ ಅದನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯನ್ನು ಮಹಿಳೆಯೊಬ್ಬಳು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಕೇರಳ ಮೂಲದ 65 ವರ್ಷದ ಶಶಿ ಎಂಬಾತ ಸಿಕ್ಕಿಬಿದ್ದ ವ್ಯಕ್ತಿ. ಹಲವು ವರ್ಷಗಳಿಂದ ಯುವತಿಯರನ್ನು ಹಣದಾಸೆ ತೋರಿಸಿ, ಕಾಮದಾಟ ನಡೆಸುತ್ತಿದ್ದ ಈತ, ಅದನ್ನು ಕ್ಯಾಮೆರಾ ಇಟ್ಟು ಚಿತ್ರೀಕರಿಸುತ್ತಿದ್ದ. ಈ ಬಗ್ಗೆ ತಿಳಿದುಕೊಂಡ ಯುವತಿಯೊಬ್ಬಳು ಕ್ಯಾಮೆರಾ ಚಿಪ್ ತೆಗೆದು, ಮಂಗಳೂರಿನ ಬಿಜೆಪಿ ಕಾರ್ಯಕರ್ತೆ ಶ್ರೀಲತಾ ಎಂಬವರಿಗೆ ನೀಡಿದ್ದಳು. ಹೀಗಾಗಿ ಶ್ರೀಲತಾ ಶಶಿಯನ್ನು ಟ್ರ್ಯಾಪ್ ಮಾಡಿ, ಹಿಡಿದು ಕದ್ರಿ ಪೊಲೀಸರಿಗೆ ಒಪ್ಪಿಸಿದ್ದಾಳೆ.

    ಕದ್ರಿ ಪೊಲೀಸರು ಆತನನ್ನು ವಿಚಾರಣೆ ಮಾಡದೆ ನಿರ್ಲಕ್ಷ್ಯ ತೋರಿದ್ದು ಬಂಧಿಸದೆ ಬಿಟ್ಟು ಬಿಟ್ಟಿದ್ದಾರೆ. ಇದೇ ವೇಳೆ, ಶಶಿ ಬರ್ಕೆ ಠಾಣೆಯಲ್ಲಿ ಶ್ರೀಲತಾ ವಿರುದ್ಧ ದರೋಡೆ ದೂರು ದಾಖಲಿಸಿದ್ದಾನೆ. ಆದರೆ, 15 ಕ್ಕೂ ಹೆಚ್ಚು ಯುವತಿಯರನ್ನು ಕಾಮದಾಟಕ್ಕೆ ಬಳಸಿಕೊಂಡು ವಿಡಿಯೋದಲ್ಲಿದ್ದರೂ, ಪೊಲೀಸರು ನಿರ್ಲಕ್ಷ್ಯ ವಹಿಸಿದ್ದು ಯಾಕೆ ಅನ್ನುವ ಪ್ರಶ್ನೆ ಎದುರಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 10 ವರ್ಷದಿಂದ ಪತ್ರಗಳನ್ನೇ ಹಂಚದೇ ತನ್ನಲ್ಲೇ ಉಳಿಸಿಕೊಂಡ ಪೋಸ್ಟ್ ಮ್ಯಾನ್

    10 ವರ್ಷದಿಂದ ಪತ್ರಗಳನ್ನೇ ಹಂಚದೇ ತನ್ನಲ್ಲೇ ಉಳಿಸಿಕೊಂಡ ಪೋಸ್ಟ್ ಮ್ಯಾನ್

    ಭುವನೇಶ್ವರ್: 10 ವರ್ಷಗಳಿಂದ ಪೋಸ್ಟ್ ಆಫೀಸ್ ಗೆ ಬಂದಿದ್ದ ಸುಮಾರು 1 ಸಾವಿರಕ್ಕೂ ಹೆಚ್ಚು ಪತ್ರಗಳನ್ನು ಮತ್ತು ಪ್ಯಾಕೇಜ್ ಗಳನ್ನು ಸಂಬಂಧಿಸಿದವರಿಗೆ ನೀಡದೆ ಇರುವ ಘಟನೆ ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಕರ್ತವ್ಯ ಲೋಪದ ಆರೋಪದಲ್ಲಿ ಅಂಚೆ ಕಚೇರಿ ಉದ್ಯೋಗಿಯನ್ನು ಅಮಾನತು ಮಾಡಲಾಗಿದೆ.

    ಜಗನ್ನಾಥ್ ಪುಹನ್ ಅಮಾನತುಗೊಂಡ ಉದ್ಯೋಗಿ. ಈತ ಭದ್ರಾಕ್ ನ ಒಡಂಗಾ ಶಾಖೆಯ ಅಂಚೆ ಕಚೇರಿಯಲ್ಲಿ, ಸಹಾಯಕ ಶಾಖೆಯ ಪೋಸ್ಟ್ ಮ್ಯಾನ್(ಎಬಿಪಿಎಂ) ಆಗಿ ಕೆಲಸ ಮಾಡುತ್ತಿದ್ದನು. ಈತ ತನ್ನ ನಿರ್ಲಕ್ಷ್ಯದಿಂದ ಕಚೇರಿಗೆ ಸುಮಾರು 2008 ರಿಂದ 2017 ರವರೆಗಿನ ಬಂದಂತಹ ಪತ್ರಗಳನ್ನು ಕೊಡದೆ ತನ್ನ ಬಳಿಯೇ ಉಳಿಸಿಕೊಂಡಿದ್ದಾನೆ.

    ಕಚೇರಿಗೆ ಬಂದಿದ್ದ ಪತ್ರಗಳಲ್ಲಿ ಸರ್ಕಾರದ ಅಧಿಕೃತ ಪ್ರಕಟಣೆಗಳು, ಪರೀಕ್ಷಾ ಪ್ರವೇಶ ಪತ್ರಗಳು, ಕೆಲಸದ ನೇಮಕ ಪತ್ರ ಹಾಗೂ ಬಹುಮುಖ್ಯವಾದ ಮಾಹಿತಿಯ ಪತ್ರಗಳು ಸೇರಿದೆ. ಸುಮಾರು 1,500 ಪತ್ರ ಹಾಗೂ ವಸ್ತುಗಳು ಬಂದಿದೆ. ಈತನ ಕರ್ತವ್ಯ ಲೋಪದಿಂದ ಈ ಭಾಗದ ನೂರಾರು ಜನರು ಮುಖ್ಯವಾದ ಮಾಹಿತಿಗಳನ್ನು ತಿಳಿದುಕೊಳ್ಳಲಾಗದೆ ಸಮಸ್ಯೆ ಎದುರಿಸಿದ್ದಾರೆ.

    ಘಟನೆ ಬೆಳಕಿಗೆ ಬಂದಿದ್ದು ಹೇಗೆ?
    ಅಂಚೆ ಕಚೇರಿಯ ಆವರಣದಲ್ಲಿ ಮಕ್ಕಳ ಆಟವಾಡುತ್ತಿದ್ದಾಗ ಅವರಿಗೆ ಚೀಲದಲ್ಲಿ ತುಂಬಿದ್ದ ಪತ್ರಗಳು ದೊರೆತಿದೆ. ಬಳಿಕ ಆ ಚೀಲದಿಂದ ಹೊರ ಬಂದಿದ್ದ ಕೆಲವು ಪತ್ರಗಳನ್ನು ಗಮನಿಸಿದ್ದಾರೆ. ಅವುಗಳಲ್ಲಿ ಎಟಿಎಂ ಕಾರ್ಡ್ ಗಳು, ಬ್ಯಾಂಕ್ ಪಾಸ್ ಬುಕ್ ಮತ್ತು ಪ್ಯಾನ್ ಕಾರ್ಡ್ ಗಳು ಕಂಡಿದೆ. ಇವುಗಳನ್ನು ಅವರು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದು, ಬಳಿಕ ಆತನ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ ಎಂದು ಓಡಾಂಗ ಪಂಚಾಯಿತಿಯ ಅಧ್ಯಕ್ಷ ಕಿಶೋರ್ ಪಡಿಯಾರಿ ಎಂಬವರು ಮಾಹಿತಿ ನೀಡಿದ್ದಾರೆ.

    ಅಂದಹಾಗೇ ಜಗನ್ನಾಥ್ ಅಂಚೆ ಇಲಾಖೆಯ ಪೂರ್ಣಾವಧಿ ಸಮಯದ ನೌಕರನಲ್ಲ ಎಂದು ತಿಳಿದು ಬಂದಿದ್ದು, ಗುತ್ತಿಗೆ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಆದರೆ ಈತನ ನಿರ್ಲಕ್ಷ್ಯದಿಂದ ಸರಿಯಾದ ವೇಳೆಗೆ ಪತ್ರಗಳನ್ನು ಕೊಡದೆ ಕರ್ತವ್ಯ ಲೋಪ ಮಾಡಿದ್ದಾನೆ. ಮೊದಲು ಪುಹಾನ್ ಗ್ರಾಮೀಣ್ ಡಾಕ್ ಸೇವಕ್ ನೌಕರನಾಗಿ ಜಗನ್ನಾಥ್ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಳಿಕ ಈತನನ್ನು ಹೆಚ್ಚುವರಿ ಇಲಾಖೆಯ ಉದ್ಯೋಗಿಯಾಗಿ ವರ್ಗೀಕರಿಸಲಾಗಿ ಜುಲೈನಲ್ಲಿ ಎಬಿಪಿಎಮ್ ಎಂದು ಗೊತ್ತುಪಡಿಸಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಒಡಿಶಾ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಸಂತೋಷ್ ಕುಮಾರ್ ಕಮಿಲ್ಲಾ, ಕರ್ತವ್ಯ ಲೋಪದ ಆರೋಪದ ಮೇಲೆ ಜಗನ್ನಾಥ್‍ ನನ್ನು ಅಮಾನತು ಮಾಡಲಾಗಿದೆ. 10 ವರ್ಷಗಳಿಂದ ತನ್ನ ಕರ್ತವ್ಯವನ್ನು ಏಕೆ ನಿರ್ಲಕ್ಷಿಸಿದ್ದಾನೆ ಎಂಬುದರ ಕುರಿತು ಮಾಹಿತಿ ಪಡೆಯಲಾವುದು ಎಂದು ತಿಳಿಸಿದ್ದಾರೆ.

    ಜಗನ್ನಾಥ್ ಕಾರ್ಯನಿರ್ವಹಿಸುವ ಪ್ರದೇಶದಲ್ಲಿ ಸಾರ್ವಜನಿಕರು ಯಾವುದೇ ದೂರು ನೀಡಿಲ್ಲ. ಆದ್ದರಿಂದ ಈ ಮಾಹಿತಿ ಲಭಿಸಿಲ್ಲ. ಪ್ರತಿ ಅಂಚೆ ಕಚೇರಿಗೂ ಇಲಾಖೆಯ ಉನ್ನತ ಅಧಿಕಾರಿಗಳು ಪ್ರತಿವರ್ಷ ಒಮ್ಮೆಯಾದರೂ ಶಾಖಾ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಆದರೆ ಈ ಕಾರ್ಯವೂ ನಡೆದಿಲ್ಲ. ಆದ್ದರಿಂದ ಈತ ಕರ್ತವ್ಯ ನಿರ್ವಹಿಸದೆ ಕರ್ತವ್ಯ ಲೋಪವೆಸಗಿದ್ದಾನೆ ಎಂದು ಅಂಚೆ ಉದ್ಯೋಗಿಯೊಬ್ಬರು ಹೇಳಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಜಗನ್ನಾಥ್ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ತಪಿಸ್ಥನಿಗೆ ಶಿಕ್ಷೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವೈದ್ಯರ ಎಡವಟ್ಟಿನಿಂದ ಕಾಲುಗಳ ಸ್ವಾಧೀನ ಕಳೆದುಕೊಂಡ ದರ್ಶನ್ ಪುಟ್ಟ ಅಭಿಮಾನಿ!

    ವೈದ್ಯರ ಎಡವಟ್ಟಿನಿಂದ ಕಾಲುಗಳ ಸ್ವಾಧೀನ ಕಳೆದುಕೊಂಡ ದರ್ಶನ್ ಪುಟ್ಟ ಅಭಿಮಾನಿ!

    ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಡೈಲಾಗ್‍ಗಳನ್ನು ಹರಳು ಹುರಿದಂತೆ ಪಟಪಟನೆ ಹೇಳುತ್ತಿದ್ದ ಜಿಲ್ಲೆಯ ಬಾಲಕನೊಬ್ಬ ವೈದ್ಯರ ನಿರ್ಲಕ್ಷ್ಯದಿಂದ ತನ್ನ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು ನರಕಯಾತನೆ ಅನುಭವಿಸುವಂತಾಗಿದೆ.

    ಹರಪನಹಳ್ಳಿ ತಾಲೂಕಿನ ಎಡೆಹಳ್ಳಿ ಗ್ರಾಮದ ಕೀರ್ತಿರಾಜ್ ವೈದ್ಯರ ನಿರ್ಲಕ್ಷ್ಯದಿಂದ ಕಾಲು ಕಳೆದುಕೊಂಡ ಬಾಲಕ. ಕುರುವತ್ತಪ್ಪ ಹಾಗೂ ನೇತ್ರಾ ದಂಪತಿಯ ಎರಡನೇ ಪುತ್ರ ಕೀರ್ತಿರಾಜ್. ಕೆಲವು ದಿನಗಳ ಹಿಂದೆ ಕೀರ್ತಿರಾಜ್‍ಗೆ ಎದೆ ನೋವು ಕಾಣಿಸಿಕೊಂಡಿದ್ದು, ಆತನನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆದೊಯ್ಯಲಾಗಿತ್ತು.

    ವೈದ್ಯರು ಎಕ್ಸ್ ರೇ ತೆಗೆಸಿ, ಇಲ್ಲಿ ಕಾಯಿಲೆ ಸರಿ ಹೋಗುವುದಿಲ್ಲ. ಬದಲಾಗಿ ನೀವು ಮಂಗಳೂರಿಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದರಂತೆ. ಮಗನನ್ನು ಉಳಿಸಿಕೊಳ್ಳಲು ಪೋಷಕರು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿದ್ದರು. ದಾವಣಗೆರೆ ಆಸ್ಪತ್ರೆ ವೈದ್ಯರು ನೀಡಿದ್ದ ದಾಖಲೆಗಳನ್ನು ನೋಡಿದ ವೈದ್ಯರು, ಬೆನ್ನಿನಲ್ಲಿ ನೀರು ತುಂಬಿಕೊಂಡಿದೆ. ಶಸ್ತ್ರ ಚಿಕಿತ್ಸೆ ಮೂಲಕ ನೀರನ್ನು ಹೊರತೆಗೆಯಬೇಕು ಎಂದು ಹೇಳಿದ್ದರಂತೆ.

    ಶಸ್ತ್ರ ಚಿಕಿತ್ಸೆಗೂ ಮುನ್ನ ಆಟವಾಡಿಕೊಂಡು ನಗುತ್ತಿದ್ದ ಬಾಲಕ ಕೀರ್ತಿರಾಜ್, ಚಿಕಿತ್ಸೆಯ ಬಳಿಕ ತನ್ನ ಎರಡು ಕಾಲುಗಳ ಸ್ವಾದೀನ ಕಳೆದುಕೊಂಡಿದ್ದಾನೆ. ಈ ಕುರಿತು ಪರಿಶೀಲನೆ ನಡೆಸಿದಾಗ, ಚಿಕಿತ್ಸೆ ವೇಳೆ ವೈದ್ಯರು ಜೀವಕೋಶಗಳನ್ನು ತೆಗೆದಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಏಕೆ ಹೀಗೆ ಮಾಡಿದಿರಿ ಎಂದು ವೈದ್ಯರನ್ನ ಪ್ರಶ್ನೆ ಮಾಡಿದ್ದಕ್ಕೆ, ಪೋಷಕರ ಮೇಲೆ ದೌರ್ಜನ್ಯ ಮಾಡಿ ಅಲ್ಲಿಂದ ಹೊರ ಹಾಕಿದ್ದಾರಂತೆ.

    ಚಿಕಿತ್ಸೆ ನೀಡಿ ಸುಮಾರು 11 ತಿಂಗಳಾದರೂ ಮಗನಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಕೀರ್ತಿರಾಜ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯಾಗಿದ್ದು, ಅವರಂತೆ ಪೊಲೀಸ್ ಪಾತ್ರ ಮಾಡುವಂತೆ, ನಿಜ ಜೀವನದಲ್ಲಿ ಪೊಲೀಸ್ ಆಗುವ ಬಯಕೆ ವ್ಯಕ್ತಪಡಿಸಿದ್ದಾನೆ. ನಟ ದರ್ಶನ್‍ನನ್ನು ಒಮ್ಮೆಯಾದರು ನೋಡಬೇಕು ಎನ್ನುವ ಆಸೆ ಈ ಮಗುವಿಗಿದೆ. ಆದರೆ ವೈದ್ಯರು ಮಾಡಿದ ತಪ್ಪಿಗೆ ಈಗ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದು. ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಸಚಿವ ಡಿಕೆ ಶಿವಕುಮಾರ್ ಬಂದು ಹೋದ ಅರ್ಧ ಗಂಟೆಯಲ್ಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಮಾನವೀಯತೆ ಪ್ರದರ್ಶನ

    ಸಚಿವ ಡಿಕೆ ಶಿವಕುಮಾರ್ ಬಂದು ಹೋದ ಅರ್ಧ ಗಂಟೆಯಲ್ಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಮಾನವೀಯತೆ ಪ್ರದರ್ಶನ

    ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ತೆರಳಿದ ಬೆನ್ನಲ್ಲೆ ರೋಗಿಗೆ ಚಿಕಿತ್ಸೆ ನೀಡಲು ವೈದ್ಯರು ನಿರ್ಲಕ್ಷ್ಯ ವಹಿಸಿ ಅಮಾನವೀಯತೆ ಪ್ರದರ್ಶಿಸಿದ್ದಾರೆ.

    ವಿಕ್ಟೋರಿಯಾ ಆಸ್ಪತ್ರೆಯ ಅವ್ಯವಸ್ಥೆ ದೂರು ಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ಹಾಗೂ ಜಲ ಸಂಪನ್ಮೂಲ ಖಾತೆ ಸಚಿವರಾದ ಡಿಕೆ ಶಿವಕುಮಾರ್ ಅವರು ಇಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಸಚಿವರು ಆಸ್ಪತ್ರೆ ಭೇಟಿ ನೀಡಿ ತೆರಳಿದ ಅರ್ಧ ಗಂಟೆ ಸಮಯದಲ್ಲೇ ಆಸ್ಪತ್ರೆಯ ಸಿಬ್ಬಂದಿ ರೋಗಿಯನ್ನು ದಾಖಲಿಸಿಕೊಳ್ಳಲು ನಿರ್ಲಕ್ಷ ತೋರಿದ್ದು, ಈ ಕುರಿತು ರೋಗಿಯ ಪೋಷಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಏನಿದು ಘಟನೆ: ನಗರದ ಕೆಂಗೇರಿ ಬಳಿ ನಿಶಾಂತ್(28) ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿತ್ತು. ಸಚಿವರು ಭೇಟಿ ನೀಡಿ ತೆರಳಿದ ಬಳಿಕವೂ ಎಚ್ಚೆತ್ತುಕೊಳ್ಳದ ವೈದ್ಯರು ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ರೋಗಿ ನರಳುತ್ತಿದ್ದ ನಿಶಾಂತ್ ನನ್ನು ಆಸ್ಪತೆಗೆ ದಾಖಲಿಸಿಕೊಳ್ಳಲು ಸಿಬ್ಬಂದಿ ನಿರ್ಲಕ್ಷ್ಯ ವಹಿಸಿ ರೋಗಿಯನ್ನು ಅಂಬುಲೆನ್ಸ್ ನಲ್ಲೇ ಇರಿಸಿದ್ದಾರೆ.

    ಇದಕ್ಕೂ ಮುನ್ನ ಗಂಭೀರವಾಗಿ ಗಾಯಗೊಂಡಿದ್ದ ನಿಶಾಂತ್ ನನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲು ಪೋಷಕರು ಮುಂದಾಗಿದ್ದರು. ಆದರೆ ಅಲ್ಲಿಯ ವೈದ್ಯರು ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದ ವೇಳೆ ಈ ಅಮಾನವೀಯ ಘಟನೆ ನಡೆದಿದೆ. ನಿಶಾಂತ್ ಹಾಗೂ ಆತನ ಸ್ನೇಹಿತ ಅರುಣ್ ಜೊತೆ ಬೈಕ್‍ನಲ್ಲಿ ಬರುತ್ತಿರುವಾಗ, ಕೆಂಗೇರಿ ಚೆಕ್‍ಪೋಸ್ಟ್ ಬಳಿ ಟಾಟಾ ಸುಮೊ ಹಾಗೂ ಅಪಾಚಿ ಬೈಕ್ ನಡುವೆ ಅಪಘಾತ ಸಂಭವಿಸಿತ್ತು.

  • ವೈದ್ಯರ ನಿರ್ಲಕ್ಷ್ಯಕ್ಕೆ 3 ದಿನದ ಮಗು ಬಲಿ ಆರೋಪ- ವಾಣಿ ವಿಲಾಸ ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ

    ವೈದ್ಯರ ನಿರ್ಲಕ್ಷ್ಯಕ್ಕೆ 3 ದಿನದ ಮಗು ಬಲಿ ಆರೋಪ- ವಾಣಿ ವಿಲಾಸ ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ

    ಬೆಂಗಳೂರು: ವಾಣಿ ವಿಲಾಸ ವೈದ್ಯರ ನಿರ್ಲಕ್ಷ್ಯಕ್ಕೆ ಮೂರು ದಿನದ ಮಗು ಬಲಿಯಾಗಿರುವ ಆರೋಪ ಕೇಳಿಬಂದಿದೆ.

    ಮೂರು ದಿನದ ಹಿಂದೆ ಹೆರಿಗೆಗೆಂದು 35 ವರ್ಷದ ಅನಿತಾ ಎಂಬಾಕೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಮಗು ಮೂರು ದಿನದಿಂದ ಆರೋಗ್ಯವಾಗಿದೆ ಎಂದು ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ಭಾನುವಾರ ಸಂಜೆ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ವೈದ್ಯರ ನಿರ್ಲಕ್ಷ್ಯವೇ ಮಗು ಮೃತಪಡಲು ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ವೈದ್ಯರ ಜೊತೆ ಪೋಷಕರು ವಾಗ್ವಾದ ನಡೆಸಿದ್ದು, ಕೆಲಕಾಲ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ಕೂಡ ನಿರ್ಮಾಣವಾಗಿತ್ತು.

    ಪೋಷಕರು ಮಧ್ಯಾಹ್ನ 2.45 ಕ್ಕೆ ಮಗು ಹಾಲು ಕುಡಿಯುತ್ತಿಲ್ಲ, ಮೂತ್ರ ಮಾಡ್ತಿಲ್ಲ ಎಂದು ವೈದ್ಯರಿಗೆ ತಿಳಿಸಿದ್ದಾರೆ. ಆದರೆ ವೈದ್ಯರು ಇದಕ್ಕೆ ಸ್ಪಂದಿಸದೆ, ಆಗ ಏನು ಸಮಸ್ಯೆ ಇಲ್ಲ ಎಂದು ಹೇಳಿ ಕಳಿಸಿದ್ದಾರೆ. ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಮಗು ಮೃತಪಟ್ಟಿದೆ. ಆದರೆ ಇದುವರೆಗೂ ಮಗು ಸತ್ತರೂ ಇನ್ನೂ ರಿಪೋರ್ಟ್ ನೀಡದೆ ವೈದ್ಯರು ಸತಾಯಿಸುತ್ತಿದ್ದಾರೆ, ಕೇವಲ ಮೌಖಿಕ ಕಾರಣ ನೀಡುತ್ತಿದ್ದಾರೆ ಎಂದು ವೈದ್ಯರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪೋಷಕರು ಮಾಡಿದ ಆರೋಪವನ್ನು ವೈದ್ಯರು ತಳ್ಳಿಹಾಕಿದ್ದು, ಮಗು ಮೃತಪಡಲು ನಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

  • ಮಹಿಳೆಯರೇ ಎಚ್ಚರ! ರೈಲಿನಲ್ಲಿ ಪ್ರಯಾಣಿಸುವಾಗ ಸ್ವಲ್ಪ ಯಾಮಾರಿದ್ರೆ ಮಾಂಗಲ್ಯ ಸರವನ್ನೇ ಎಗರಿಸ್ತಾರೆ

    ಮಹಿಳೆಯರೇ ಎಚ್ಚರ! ರೈಲಿನಲ್ಲಿ ಪ್ರಯಾಣಿಸುವಾಗ ಸ್ವಲ್ಪ ಯಾಮಾರಿದ್ರೆ ಮಾಂಗಲ್ಯ ಸರವನ್ನೇ ಎಗರಿಸ್ತಾರೆ

    ಬಳ್ಳಾರಿ: ರೈಲಿನಲ್ಲಿ ಪ್ರಯಾಣಿಸುವಾಗ ಸ್ವಲ್ಪ ಯಾಮಾರಿದ್ರೆ ಸಾಕು ಮಹಿಳೆಯರ ಮಾಂಗಲ್ಯ ಸರ ಎಗರಿಸುತ್ತಾರೆ. ಅಂತಹದೊಂದು ಘಟನೆ ಬೆಂಗಳೂರಿನಿಂದ ಬಳ್ಳಾರಿಗೆ ಹೊರಟಿದ್ದ ಹಂಪಿ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ.

    ಬಳ್ಳಾರಿಯ ರೇಡಿಯೋ ಪಾರ್ಕ್ ನಿವಾಸಿ ಪ್ರಮೀಳಾ ಎಂಬವರು ಸೋಮವಾರ ರಾತ್ರಿ ತಾಯಿಯೊಂದಿಗೆ ಬೆಂಗಳೂರಿನಿಂದ ಬಳ್ಳಾರಿಗೆ ರೈಲಿನಲ್ಲಿ ತೆರೆಳುತ್ತಿದ್ದರು. ರೈಲಿನ ಎಸ್ 6 ರಿಸರ್ವೇಷನ್ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದು, ತಮ್ಮ ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಕಳ್ಳರು ಬಂದು ಏಕಾಏಕಿ 60 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ತಕ್ಷಣ ಪ್ರಮೀಳಾ ರೈಲಿನಲ್ಲಿದ್ದ ಆರ್‍ಪಿಎಫ್ ಪೊಲೀಸರಿಗೆ ಹಾಗೂ ಟಿಸಿಗೆ ದೂರು ನೀಡಿದ್ದಾರೆ. ಆದರೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.

    ನೀವು ಕರ್ನಾಟಕದವರು, ಗೌರಿಬಿದನೂರು ಬಳಿ ನಿಮ್ಮ ಮಾಂಗಲ್ಯ ಕಳ್ಳತನವಾಗಿದೆ. ಕರ್ನಾಟಕದಲ್ಲೇ ದೂರು ನೀಡಿ ಅಂತಾ ಆರ್‍ಪಿಎಫ್ ಪೊಲೀಸರು ನಿರ್ಲಕ್ಷ್ಯದಿಂದ ಉತ್ತರ ನೀಡಿದ್ದಾರೆ. ಹೀಗಾಗಿ ರಾತ್ರಿಯೀಡಿ ಪ್ರಮೀಳಾ ದೂರು ನೀಡಲು ಪರದಾಡಿದ್ದಾರೆ. ಅಲ್ಲದೇ ಅವರ ಸಂಬಂಧಿಕರೊಬ್ಬರು ಆರ್‍ಪಿಎಫ್ ಸುರಕ್ಷಾ ವಾಣಿಗೆ ಕರೆ ಮಾಡಿ ಮಾಹಿತಿ ನೀಡಿದಾಗ ಅಸಭ್ಯವಾಗಿ ಮಾತನಾಡಿದ್ದಾರೆ.

    ಪ್ರಮೀಳಾರವರ ಸಂಬಂಧಿಕರು ರೈಲ್ವೇ ಸಚಿವರಿಗೆ ಈ ಬಗ್ಗೆ ಟ್ಟೀಟ್ ಮಾಡಿ ಪ್ರಕರಣದ ಬಗ್ಗೆ ವಿವರಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಪ್ರತಿಕ್ರಿಯಿಸಿ ಅಂತ ರೈಲ್ವೆ ಇಲಾಖೆ ಕೂಡ ಟ್ವೀಟ್ ಮಾಡಿದೆ.

    ರೈಲಿನಲ್ಲಿ ಮಹಿಳೆಯರು ಪ್ರಯಾಣಿಸುವಾಗ ರಕ್ಷಣೆ ಇಲ್ಲದಂತಾಗಿದೆ ಎಂದು ಮಾಂಗಲ್ಯ ಸರ ಕಳೆದುಕೊಂಡು ಪ್ರಮೀಳಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬೈಕ್ ಸಮೇತ 5 ಅಡಿ ಆಳದ ಗುಂಡಿಗೆ ಬಿದ್ದ ಇಬ್ಬರು ಫೋಟೋಗ್ರಾಫರ್!

    ಬೈಕ್ ಸಮೇತ 5 ಅಡಿ ಆಳದ ಗುಂಡಿಗೆ ಬಿದ್ದ ಇಬ್ಬರು ಫೋಟೋಗ್ರಾಫರ್!

    ರಾಯಚೂರು: ಪುರಸಭೆಯ ಕಾರ್ಯಕರ್ತರ ನಿರ್ಲಕ್ಷ್ಯದಿಂದ ಪತ್ರಿಕಾ ಛಾಯಾಗ್ರಾಹಕರಿಬ್ಬರು ಬೈಕ್ ಸಮೇತ ನೀರಿನ ಗುಂಡಿಗೆ ಬಿದ್ದು ಗಾಯಗೊಂಡಿರುವ ಘಟನೆ ಜಿಲ್ಲೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ನಡೆದಿದೆ.

    ಛಾಯಾಗ್ರಾಹಕರಾದ ಗಯಾಸ್ ಹಾಗೂ ಶೇಕ್ ಬಾಬಾ ಗಾಯಗೊಂಡಿದ್ದು, ಲಕ್ಷಾಂತರ ರೂ. ಮೌಲ್ಯದ ಕ್ಯಾಮೆರಾ, ಲಾಪ್ ಟಾಪ್, ಪೆನ್‍ಡ್ರೈವ್ ಮತ್ತು ಮೊಬೈಲ್ ಹಾಳಾಗಿವೆ.

    ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಅವಾಂತರಗಳು ಸೃಷ್ಟಿಯಾಗುತ್ತಿವೆ. ಶಾಲಾ ಆವರಣದಲ್ಲಿ ನಿಲ್ಲುತ್ತಿದ್ದ ಮಳೆ ನೀರಿನ ಸಂಗ್ರಹಕ್ಕೆ 5 ಅಡಿ ಆಳದ ಗುಂಡಿ ತೋಡಲಾಗಿತ್ತು. ಆದರೆ ಮಾನ್ವಿ ಪಟ್ಟಣದ ಪುರಸಭೆಯವರು ಅಕ್ಕ ಪಕ್ಕ ಯಾವುದೇ ರೀತಿಯ ಸೂಚನಾ ಫಲಕವನ್ನು ಹಾಕಿಲ್ಲ. ಹೀಗಾಗಿ ಶಾಲಾ ಗೇಟ್ ಪಕ್ಕದಲ್ಲೇ ಇರುವ ಗುಂಡಿಯ ಆಳ ತಿಳಿಯದೇ ಬಂದ ಛಾಯಾಗ್ರಾಹಕರು ಬೈಕ್ ಸಹಿತವಾಗಿ ಗುಂಡಿಯಲ್ಲಿ ಬಿದ್ದಿದ್ದಾರೆ. ವಿದ್ಯಾರ್ಥಿಗಳು ಓಡಾಡುವ ಸ್ಥಳದಲ್ಲೇ ಗುಂಡಿಯನ್ನು ತೋಡಿ ಹಾಗೇ ಬಿಟ್ಟಿರುವುದು ದೊಡ್ಡ ಅನಾಹುತಗಳಿಗೆ ಆಹ್ವಾನದಂತಿವೆ.

    ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಾನ್ವಿ ಪುರಸಭೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಛಾಯಾಗ್ರಾಹಕರು ಮುಂದಾಗಿದ್ದಾರೆ.