Tag: Negative report

  • ತಮಿಳುನಾಡಿನಿಂದ ಬಂದವರಿಗೂ ಕೊರೊನಾ ನೆಗೆಟಿವ್ ವರದಿ ಕಡ್ಡಾಯ: ಡಿಸಿ

    ತಮಿಳುನಾಡಿನಿಂದ ಬಂದವರಿಗೂ ಕೊರೊನಾ ನೆಗೆಟಿವ್ ವರದಿ ಕಡ್ಡಾಯ: ಡಿಸಿ

    ಚಾಮರಾಜನಗರ: ಕೇರಳ ನಂತರ ತಮಿಳುನಾಡಿನಿಂದ ಬರುವವರಿಗೂ ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.

    ನೆರೆ ರಾಜ್ಯಗಳಿಂದ ಬರುವ ಪ್ರತಿಯೊಬ್ಬರಿಗೂ 72 ಗಂಟೆಯೊಳಗಿನ ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದೆ. ಇದೀಗ ಪಾಲಾರ್, ಅರ್ಧನಾರಿಪುರ, ನಾಲ್ ರೋಡ್,ಪುಣಜನೂರು, ಕೆಕ್ಕನಹಳ್ಳ, ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಬಿಗಿ ಕ್ರಮ ಜರುಗಿಸಲಾಗಿದೆ. ಎರಡೂ ಡೋಸ್ ಲಸಿಕೆ ಪಡೆದವರಿಗೂ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

    ಗಡಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ತಿಳಿಸಲಾಗಿದ್ದು, ಪ್ರತಿಯೊಬ್ಬರನ್ನೂ ಪರಿಶೀಲಿಸಿ, ನೆಗೆಟಿವ್ ವರದಿ ಇದ್ದರೆ ಮಾತ್ರ ರಾಜ್ಯದೊಳಗೆ ಬಿಡಿ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಶುಕ್ರವಾರವಷ್ಟೇ ಜಿಲ್ಲೆಗೆ ಆಗಮಿಸಿದ್ದ ಸಚಿವ ಎಸ್.ಟಿ.ಸೋಮಶೇಖರ್, ಟೆಸ್ಟ್ ರಿಪೋರ್ಟ್ ಕಡ್ಡಾಯ ಮಾಡುವಂತೆ ನಿನ್ನೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

  • ಕೊರೊನಾ ಹೆಚ್ಚಳ- ಉತ್ತರ ಕನ್ನಡ ಗಡಿಗಳಲ್ಲಿ ಕಟ್ಟೆಚ್ಚರ

    ಕೊರೊನಾ ಹೆಚ್ಚಳ- ಉತ್ತರ ಕನ್ನಡ ಗಡಿಗಳಲ್ಲಿ ಕಟ್ಟೆಚ್ಚರ

    – ಹೊರ ರಾಜ್ಯಗಳಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯು ಗೋವಾ ಗಡಿಯನ್ನು ಹಂಚಿಕೊಂಡಿದೆ. ಉದ್ಯೋಗ ನಿಮಿತ್ತ ಕರಾವಳಿ ಭಾಗದ ಜನರು ನೆರೆಯ ಗೋವಾ ಹಾಗೂ ಮಹಾರಾಷ್ಟ್ರವನ್ನು ಅವಲಂಬಿಸಿದ್ದಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಕೊರೊನಾ ನಿಯಮವನ್ನು ಕಠಿಣವಾಗಿ ಜಾರಿಗೆ ತರಲಾಗಿದೆ.

    ಗೋವಾ ಗಡಿ ಹಂಚಿಕೊಂಡಿರುವ ಕಾರವಾರದ ಮಾಜಾಳಿಯಲ್ಲಿ ಗೋವಾ, ಮಹಾರಾಷ್ಟ್ರದಿಂದ ಬರುವ ಜನರು ಕಡ್ಡಾಯವಾಗಿ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಇರಬೇಕಿದ್ದು, 24 ಗಂಟೆಯೊಳಗೆ ತಪಾಸಣೆ ಮಾಡಿಸಿಕೊಂಡಿರಬೇಕು. ಈ ಹಿಂದೆ ವ್ಯಾಕ್ಸಿನ್ ತೆಗೆದುಕೊಂಡವರಿಗೆ ಕರ್ನಾಟಕದ ಗಡಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಇದೀಗ ವ್ಯಾಕ್ಸಿನ್ ಪಡೆದವರು ಸಹ ಕೋವಿಡ್ ನೆಗೆಟಿವ್ ವರದಿ ತರಬೇಕಿದೆ. ಇದನ್ನೂ ಓದಿ: ರಾಜ್ಯದ 8 ಜಿಲ್ಲೆಗಳಲ್ಲಿ ಇಂದಿನಿಂದಲೇ ವೀಕೆಂಡ್ ಕರ್ಫ್ಯೂ ಜಾರಿ

    ಬಸ್ ಪ್ರಯಾಣಿಕರು, ಲಾರಿ ಚಾಲಕರಿಗೂ ಸಹ ಈ ನಿಯಮ ಅನ್ವಯಿಸಲಿದ್ದು, ಬೇರೆ ರಾಜ್ಯದಿಂದ ಬಂದ ಪ್ರತಿಯೊಬ್ಬರಿಗೂ ಕೈಗೆ ಸೀಲ್ ಹಾಕುವ ಮೂಲಕ 14 ದಿನ ಹೋಮ್ ಕ್ವಾರಂಟೈನ್ ಇರಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

    ಪ್ರವಾಸಿ ಸ್ಥಳಗಳಲ್ಲಿ ಜಲಸಾಹಸ ಕ್ರೀಡೆಗೆ ನಿರ್ಬಂಧ ಹೇರಲಾಗಿದೆ. ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ಧಾರ್ಮಿಕ ವಿಧಿ ನಡೆಸಲು ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಐದಕ್ಕಿಂತ ಹೆಚ್ಚು ಪಾಸಿಟಿವ್ ವರದಿ ಇರುವ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗುದ್ದು, ಈಗಾಗಲೇ ಐದು ಕಂಟೈನ್ಮೆಂಟ್ ಝೋನ್ ಗಳಿವೆ. ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ತಪಾಸಣೆ ಕಾರ್ಯವನ್ನು ಜಿಲ್ಲಾಡಳಿತ ಪ್ರಾರಂಭಿಸುತಿದ್ದು, ವೀಕೆಂಡ್ ಕರ್ಫ್ಯೂ ಗೆ ಸಹ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

  • ಬೆಂಗಳೂರಿಗರೇ ಆತಂಕ ಬೇಡ – ಸೋಂಕಿತೆ ಸಂಪರ್ಕದಲ್ಲಿದ್ದವರಿಗೆ ಬ್ರಿಟನ್ ವೈರಸ್ ನೆಗಟಿವ್

    ಬೆಂಗಳೂರಿಗರೇ ಆತಂಕ ಬೇಡ – ಸೋಂಕಿತೆ ಸಂಪರ್ಕದಲ್ಲಿದ್ದವರಿಗೆ ಬ್ರಿಟನ್ ವೈರಸ್ ನೆಗಟಿವ್

    ಬೆಂಗಳೂರು: ಬ್ರಿಟನ್‍ನಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆಯಲ್ಲಿ ಕೊರೊನಾ ಹೊಸ ತಳಿ ಪತ್ತೆಯಾಗಿತ್ತು. ಆಕೆಯ ತಾಯಿಗೂ ಇಂದು ಬೆಳಗ್ಗೆ ಬ್ರಿಟನ್ ವೈರಸ್ ಪಾಸಿಟವ್ ವರದಿ ಬಂದಿದ್ದು, ಎಲ್ಲರಲ್ಲಿಯೂ ಆತಂಕ ಹೆಚ್ಚಾಗಿತ್ತು. ಅಲ್ಲದೆ ಆಕೆಯ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲರಿಗೂ ಪರೀಕ್ಷೆ ನಡೆಸಲಾಯಿತು. ಇದೀಗ ಅವರೆಲ್ಲರ ರಿಪೋರ್ಟ್ ಹೊರಬಿದ್ದಿದ್ದು, ಎಲ್ಲರಿಗೂ ಬ್ರಿಟನ್ ಕೊರೊನಾ ವೈರಸ್ ನೆಗಟಿವ್ ಬಂದಿದೆ.

    ಸೋಂಕಿತೆಯ ಸಂಪರ್ಕಕ್ಕೆ ಬಂದಿದ್ದ ಆಕೆಯ ಅಣ್ಣನಿಗೆ ನೆಗೆಟಿವ್ ರಿಪೋರ್ಟ್ ಬಂದಿದ್ದು, ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆಯನ್ನು ಟೆಸ್ಟ್ ಗೆ ಒಳಪಡಿಸಿದಾಗ ನೆಗೆಟಿವ್ ಬಂದಿದೆ. ಇನ್ನೂ ಆಸ್ಪತ್ರೆ ವಾರ್ಡ್ ಬಾಯ್‍ಗೂ ನೆಗೆಟಿವ್ ಇದ್ದು ಯಾವುದೇ ಆತಂಕ ಪಡುವಂತಹದಿಲ್ಲ. ಸೋಂಕಿತೆ ಮನೆಗೆ ಬಂದ ನಂತರ ಮನೆ ಕೆಲಸ ಮಾಡಿ ಹೋಗಿದ್ದ ಮನೆಕೆಲಸದಾಕೆಗೂ ಟೆಸ್ಟ್ ಮಾಡಿದಾಗ ನೆಗೆಟಿವ್ ಬಂದಿದೆ.

    ಸೋಂಕಿತೆಯ ಮನೆಯ ಕೆಳಗಡೆ ಪಾರ್ಮಸಿಟಿಕಲ್ ಆಫೀಸ್ ಇದ್ದು ಆಕೆಯ ಸಂಪರ್ಕಕ್ಕೆ ಬಂದಿದ್ದ ಮೂರು ಜನರಿಗೂ ಕೊರೊನಾ ಟೆಸ್ಟ್ ಮಾಡಲಾಗಿದ್ದು ಅವರಿಗೂ ಟೆಸ್ಟ್ ರಿಪೋರ್ಟ್ ನೆಗಟಿವ್ ಬಂದಿದೆ. ಹೀಗೆ ಇವರನ್ನೆಲ್ಲಾ ಹೋಂ ಕ್ವಾರಂಟೈನ್‍ನಲ್ಲಿ ಇರಿಸಲಾಗಿದ್ದು, ಮತ್ತೆ ಏಳು ದಿನದ ನಂತರ ಟೆಸ್ಟ್‍ಗೆ ಒಳಪಡಿಸಬೇಕಾಗುತ್ತದೆ ನಂತರ ಮತ್ತೆ ರಿಪೋರ್ಟ್ ಏನು ಬರುತ್ತದೆ ಎಂದು ಕಾದು ನೋಡಬೇಕಾಗಿದೆ.

  • ರ‍್ಯಾಪಿಡ್ ಟೆಸ್ಟ್‌ನಲ್ಲಿ ಪಾಸಿಟಿವ್, ಮೆಸೇಜ್‍ನಲ್ಲಿ ನೆಗೆಟಿವ್- ಸಹಾಯಕ್ಕಾಗಿ ಯುವಕನ ಕಣ್ಣೀರು

    ರ‍್ಯಾಪಿಡ್ ಟೆಸ್ಟ್‌ನಲ್ಲಿ ಪಾಸಿಟಿವ್, ಮೆಸೇಜ್‍ನಲ್ಲಿ ನೆಗೆಟಿವ್- ಸಹಾಯಕ್ಕಾಗಿ ಯುವಕನ ಕಣ್ಣೀರು

    ಬೆಂಗಳೂರು: ಕೊರೊನಾ ರ‍್ಯಾಪಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದೆ ಎಂದು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಆತನ ಮೊಬೈಲ್‍ಗೆ ನೆಗೆಟಿವ್ ಎಂದು ಸಂದೇಶ ಕಳುಹಿಸಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

    ನೆಲಮಂಗಲದಲ್ಲಿ ಜುಲೈ 24 ರಂದು ನಡೆಸಿದ್ದ ರ‍್ಯಾಪಿಡ್ ಟೆಸ್ಟ್ ನಲ್ಲಿ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮಾಹಿತಿ ನೀಡಿದ್ದರು. ಅಲ್ಲದೆ ಅಂದೇ ಆತನನ್ನು ಬೆಂಗಳೂರಿನ ಜ್ಞಾನ ಭಾರತಿ ಕ್ಯಾಂಪಸ್‍ನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಕ್ವಾರಂಟೈನ್ ಮಾಡಿದ್ದರು. ಆದರೆ ಮರುದಿನ ಜುಲೈ 25 ರಂದು ಆತನ ಮೊಬೈಲ್‍ಗೆ ನಿಮ್ಮ ಟೆಸ್ಟ್ ನೆಗೆಟಿವ್ ಬಂದಿದೆ ಎಂದು ಸಂದೇಶ ಬಂದಿದೆ.

    ಸದ್ಯ ಆಸ್ಪತ್ರೆಯಿಂದಲೇ ವಿಡಿಯೋ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿರುವ ಯುವಕ, ನನಗೆ ಪಾಸಿಟಿವ್ ಬಂದಿದೆ ಎಂದು ಕರೆ ಮಾಡಿ ಮಾಹಿತಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಲು ತಿಳಿಸುತ್ತಾರೆ. ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರೆ ನಿಮ್ಮ ಗ್ರಾಮ ಪಂಚಾಯಿತಿಯ ಅಧಿಕಾರಿಗಳನ್ನು ಸಂಪರ್ಕ ಮಾಡಿ ಎಂದು ಹೇಳುತ್ತಾರೆ.

    ನಾನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿರುವುದರಿಂದ ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕ ಮಾಡಲು ಆಗುತ್ತಿಲ್ಲ. ಕ್ವಾರಂಟೈನ್ ಕೇಂದ್ರದಲ್ಲಿ 1,500ಕ್ಕೂ ಹೆಚ್ಚು ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೊಮ್ಮೆ ನನಗೆ ಸೋಂಕು ಇಲ್ಲದಿದ್ದರೂ ಇಲ್ಲಿ ಒಂದೇ ಬಾತ್ ರೂಂ ಬಳಕೆ ಮಾಡುವುದರಿಂದ ಸೋಂಕು ಹರಡುವ ಭಯವಿದೆ. ಮನೆಯಲ್ಲಿ 6 ತಿಂಗಳ ಗರ್ಭಿಣಿ ಪತ್ನಿ ಇದ್ದು, ಆಕೆಯೂ ಇದರಿಂದ ಸಾಕಷ್ಟು ನೊಂದಿದ್ದಾರೆ. ದಯವಿಟ್ಟು ನನ್ನ ಸಮಸ್ಯೆಯನ್ನ ಬಗೆಹರಿಸಿ ಎಂದು ಯುವಕ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.

  • ಕೋಲಾರ ಸೇಫ್: ಸೋಂಕಿತರ ಜೊತೆ ಸಂಪರ್ಕದಲ್ಲಿದ್ದ 18 ಜನರ ವರದಿ ನೆಗೆಟಿವ್

    ಕೋಲಾರ ಸೇಫ್: ಸೋಂಕಿತರ ಜೊತೆ ಸಂಪರ್ಕದಲ್ಲಿದ್ದ 18 ಜನರ ವರದಿ ನೆಗೆಟಿವ್

    ಕೋಲಾರ: ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ 18 ಜನರ ವರದಿ ನೆಗೆಟಿವ್ ಬಂದಿದ್ದು, ಕೋಲಾರ ಜನತೆ ಹಾಗೂ ಜಿಲ್ಲಾಡಳಿತ ಕೋವಿಡ್-19 ಆತಂಕದಿಂದ ಕೊಂಚ ನಿರಾಳವಾಗಿದೆ.

    ಜಿಲ್ಲೆಯ ಎರಡು ಕುಟುಂಬಗಳೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೈಲ್ ನರಸಾಪುರದ ಸೋಂಕಿತ ವ್ಯಕ್ತಿ ಸಂಪರ್ಕ ಹೊಂದಿದ್ದ ಪರಿಣಾಮ ಜಿಲ್ಲೆಯ ಸುಮಾರು 21 ಜನರನ್ನು ಹೋಮ್ ಕ್ವಾರಂಟೇನ್ ಮಾಡಲಾಗಿತ್ತು. ಅಲ್ಲದೆ 21 ಜನರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ 18 ಜನರ ವರದಿ ನೆಗೆಟಿವ್ ಬಂದಿದೆ. ಉಳಿದ ಮೂವರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಸಧ್ಯಕ್ಕೆ ಕೊರೊನಾ ಆತಂಕದಿಂದ ಕೊಂಚ ನಿರಾಳವಾಗಿದೆ.

    ಕೋಲಾರ ಗಡಿಭಾಗವಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೈಲು ನರಸಾಪುರ ಗ್ರಾಮ ಪಂಚಾಯಿತಿ ಸದಸ್ಯ ಕೊರೊನಾ ಸೋಂಕಿತ ವ್ಯಕ್ತಿ, ಕೋಲಾರ ತಾಲೂಕಿನ ನರಸಾಪುರ ಗ್ರಾಮದ ಎರಡು ಕುಟುಂಬಗಳೊಂದಿಗೆ ಸಂಪರ್ಕ ಹೊಂದಿದ್ದ. ಹೀಗಾಗಿ ನರಸಾಪುರ ಗ್ರಾಮದ ಸುಮಾರು 21 ಜನರನ್ನ ಹೋಮ್ ಕ್ವಾರಂಟೇನ್ ಮಾಡಲಾಗಿತ್ತು. ಈ ಮೂಲಕ ನರಸಾಪುರ, ವೇಮಗಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ಇದೀಗ 18 ಜನರ ವರದಿ ನೆಗೆಟಿವ್ ಬಂದಿರುವ ಹಿನ್ನೆಲೆ ನರಸಾಪುರ ಗ್ರಾಮದ ಜನತೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಸಧ್ಯಕ್ಕೆ ನಿರಾಳವಾಗಿರುವ ಜಿಲ್ಲಾಡಳಿತ ಮೂವರ ವರದಿಗಾಗಿ ಕಾದು ಕುಳಿತಿದೆ.

  • ಮಣಿಪಾಲ ವಿವಿಯ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ ಇಲ್ಲ- ವೈದ್ಯಕೀಯ ವರದಿಯಲ್ಲಿ ಧೃಡ

    ಮಣಿಪಾಲ ವಿವಿಯ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ ಇಲ್ಲ- ವೈದ್ಯಕೀಯ ವರದಿಯಲ್ಲಿ ಧೃಡ

    ಉಡುಪಿ: ಅಮೆರಿಕ ಹಾಗೂ ಕುವೈತ್‍ನಿಂದ ಬಂದಿರುವ ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳ ಕೊರೊನಾದ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ. ಆತಂಕದಲ್ಲಿದ್ದ ಮಣಿಪಾಲ ವಿವಿ ಸದ್ಯ ನಿರಾಳವಾಗಿದೆ.

    ಶಂಕಿತ ಕೊರೊನಾ ವೈರಸ್ ಸೋಂಕಿನ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿಯ ಪ್ರತ್ಯೇಕಿತ ವಾರ್ಡ್ ಗೆ ದಾಖಲಾಗಿದ್ದ ಮಣಿಪಾಲ ಕೆಎಂಸಿಯ ಇಬ್ಬರು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದಿಲ್ಲ. ಆ ಇಬ್ಬರು ಆಂಧ್ರ ಪ್ರದೇಶ ಹಾಗೂ ಕೇರಳ ಮೂಲದವರಾಗಿದ್ದು, ಅಮೆರಿಕ ಹಾಗೂ ಕುವೈಟ್ ಪ್ರವಾಸ ಮಾಡಿ ಬಂದಿದ್ದಾಗ ಜ್ವರ, ಶೀತ ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಕೊರೊನಾ ವೈರಸ್‍ಗೆ ದೇಶದಲ್ಲಿ ಎರಡನೇ ಬಲಿ

    ಕೊರೊನಾದ ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಶಿವಮೊಗ್ಗಕ್ಕೆ ಕಳುಹಿಸಲಾದ ಅವರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯ ಪರೀಕ್ಷೆ ಇಂದು ಕೈಸೇರಿದ್ದು, ಅದರಲ್ಲಿ ಸೋಂಕು ಇಲ್ಲ ಎಂದು ಖಚಿತವಾಗಿದೆ ಅಂತ ಡಿಎಚ್‍ಒ ಡಾ.ಸುಧೀರ್‍ಚಂದ್ರ ಸೂಡ ತಿಳಿಸಿದರು. ಇದನ್ನೂ ಓದಿ: ಜಪಾನ್ ಹಡಗಿನಲ್ಲಿದ್ದ ವ್ಯಕ್ತಿಗೆ ಕೊರೊನಾ ಶಂಕೆ- ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲು

    ಇಂದು ದಾಖಲಾದ ಮತ್ತೊಬ್ಬ ಕೆಎಂಸಿಯ ವಿದ್ಯಾರ್ಥಿ ಮೂಲತಃ ದುಬೈನವ. ಆತ ಮಲೇಷ್ಯಾಕ್ಕೆ ಹೋಗಿ ಮಣಿಪಾಲಕ್ಕೆ ಬಂದಿದ್ದ. ಆತನ ಮಾದರಿಗಳನ್ನು ಪರೀಕ್ಷೆಗಾಗಿ ಇಂದು ಕಳುಹಿಸಲಾಗಿದ್ದು ವರದಿ ನಾಳೆ ಬರಲಿದೆ. ವಿವಿಯಲ್ಲಿ 60 ದೇಶದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಸೋಂಕು ಇತರರಿಗೂ ಹರಡುವ ಸಾಧ್ಯತೆ ಬಗ್ಗೆ ವಿವಿಗೆ ಆತಂಕವಾಗಿತ್ತು. ಇಬ್ಬರು ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿರುವುದರಿಂದ ವಿವಿ ವಿದ್ಯಾರ್ಥಿಗಳು, ಆಡಳಿತ ವಿಭಾಗ ನೆಮ್ಮದಿಯಾಗಿದೆ.