Tag: Neetu Kapoor

  • ನೀತು ಕಪೂರ್, ವರುಣ್ ಧವನ್ ಬಳಿಕ ಕೃತಿ ಸನನ್‍ಗೆ ಕೊರೊನಾ

    ನೀತು ಕಪೂರ್, ವರುಣ್ ಧವನ್ ಬಳಿಕ ಕೃತಿ ಸನನ್‍ಗೆ ಕೊರೊನಾ

    ಮುಂಬೈ: ಬಾಲಿವುಡ್ ತಾರೆ ಕೃತಿ ಸನನ್ ಗೆ ಕೊರೊನಾ ಸೋಂಕು ತಗುಲಿದೆ. ಜುಗ್ ಜುಗ್ ಜಿಯೋ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನೀತು ಕಪೂರ್ ಮತ್ತು ವರುಣ್ ಧವನ್ ಸಹ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ನಿರೂಪಕ ಮನೀಷ್ ಪೌಲ್ ಅವರಿಗೂ ಕೊರೊನಾ ಸೋಂಕು ತಗುಲಿದ್ದು, ಎಲ್ಲರೂ ವೈದ್ಯರ ಸಲಹೆ ಮೇರೆಗೆ ಐಸೋಲೇಷನ್ ನಲ್ಲಿದ್ದಾರೆ.

    ಅನ್‍ಲಾಕ್ ಬಳಿಕ ಕೊರೊನಾ ಆತಂಕದ ನಡುವೆ ಸಿನಿಮಾ ಉದ್ಯಮದ ಚಟುವಟಿಕೆಗಳು ಆರಂಭಗೊಂಡಿವೆ. ಕೃತಿ ಸನನ್ ಚಂಡೀಗಢನಲ್ಲಿ ನಟ ರಾಜಕಮಾರ್ ರಾವ್ ಜೊತೆಗಿನ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಚಂಡೀಗಢನಿಂದ ಮುಂಬೈಗೆ ಮರಳಿದ ಬಳಿಕ ಕೃತಿ ಕೊರೊನಾ ವರದಿ ಬಂದಿದ್ದು, ಸೋಂಕು ತಗುಲಿರೋದು ದೃಢಪಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನಟಿ ಅಥವಾ ಕುಟುಂಬಸ್ಥರು ಸೋಂಕು ತಗುಲಿರುವ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.

     

    View this post on Instagram

     

    A post shared by Viral Bhayani (@viralbhayani)

    ಭಾನುವಾರ ಚಂಡೀಗಢನಿಂದ ಮುಂಬೈಗೆ ಬಂದಿಳಿದಿದ್ದ ಕೃತಿ ಸನನ್ ಮಾಧ್ಯಮಗಳ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದರು. ಮಾಧ್ಯಮಗಳಿಂದ ದೂರವಿದ್ದರೂ ಒಂದು ಕ್ಷಣಕ್ಕೂ ಮಾಸ್ಕ್ ತೆಗೆಯಲ್ಲ ಎಂದು ಹೇಳಿ ಕಾರ್ ಹತ್ತಿದ್ದರು.

  • ಟ್ರೋಲ್ ಆಯ್ತು ನೀತು ಕಪೂರ್ ಕೊರೊನಾ ಟೆಸ್ಟ್ ವೀಡಿಯೋ

    ಟ್ರೋಲ್ ಆಯ್ತು ನೀತು ಕಪೂರ್ ಕೊರೊನಾ ಟೆಸ್ಟ್ ವೀಡಿಯೋ

    – ಕೆಲವೇ ಕ್ಷಣಗಳಲ್ಲಿ ವೀಡಿಯೋ ಡಿಲೀಟ್

    ಮುಂಬೈ: ಬಾಲಿವುಡ್ ಹಿರಿಯ ನಟಿ ನೀತು ಕಪೂರ್ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದ ಕೊರೊನಾ ಟೆಸ್ಟ್ ವೀಡಿಯೋ ಡಿಲೀಟ್ ಮಾಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಇದು ಯಾವ ರೀತಿಯ ಕೊರೊನ ಪರೀಕ್ಷೆ ಎಂದು ಪ್ರಶ್ನೆ ಮಾಡಲಾರಂಭಿಸಿದ್ದರು.

    ಅನ್‍ಲಾಕ್ ಬಳಿಕ ಸಿನಿಮಾ ಚಿತ್ರೀಕರಣ ಆರಂಭಗೊಂಡಿದ್ದು, ಚಿತ್ರತಂಡಗಳು ಸರ್ಕಾರ ಸೂಚಿಸಿರುವ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಚಿತ್ರೀಕರಣಕ್ಕೆ ಹಾಜರಾಗುವ ಪ್ರತಿ ಕಲಾವಿದರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

    ಧರ್ಮ ಪ್ರೊಡೆಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ‘ಜುಗ್ ಜುಗ್ ಜಿಯೋ’ ಸಿನಿಮಾದಲ್ಲಿ ನೀತು ಕಪೂರ್ ನಟಿಸುತ್ತಿದ್ದಾರೆ. ಹಾಗಾಗಿ ಚಿತ್ರೀಕರಣಕ್ಕೆ ತೆರಳುವ ಮುನ್ನ ಕೊರೊನಾ ಪರೀಕ್ಷೆಗೆ ಒಳಗಾಗುತ್ತಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಟ್ರೋಲ್ ಆಗುತ್ತಿದ್ದಂತೆ ಎಚ್ಚೆತ್ತ ನೀತು ಕಪೂರ್ ವೀಡಿಯೋ ಡಿಲೀಟ್ ಮಾಡಿಕೊಂಡಿದ್ದಾರೆ.

    ಟ್ರೋಲ್ ಆಗಿದ್ದೇಕೆ?: ಕೊರೊನಾ ಪರೀಕ್ಷೆ ವೇಳೆ ಸ್ವ್ಯಾಬ್ ಸ್ಯಾಂಪಲ್ ತೆಗೆದುಕೊಳ್ಳುವಾಗ ಗಂಟಲಿನ ಆಳಕ್ಕೆ ಕಾಟನ್ ಸ್ಟಿಕ್ ಹಾಕಲಾಗುತ್ತದೆ. ಹಾಗೆ ಮೂಗಿನೊಳಗೆ ಕಡ್ಡಿ ಹಾಕಿ ಸ್ಯಾಂಪಲ್ ತೆಗೆದುಕೊಳ್ಳಲಾಗುತ್ತದೆ. ಆದ್ರೆ ವೀಡಿಯೋದಲ್ಲಿ ಕೊರೊನಾ ವಾರಿಯರ್ ಸ್ಯಾಂಪಲ್ ತೆಗೆದುಕೊಳ್ಳುವಾಗ ಸರಿಯಾಗಿ ಸ್ಯಾಂಪಲ್ ಕಲೆಕ್ಟ್ ಮಾಡಿರಲಿಲ್ಲ.

     

    View this post on Instagram

     

    A post shared by Voompla (@voompla)

    ವೀಡಿಯೋ ನೋಡಿದ ನೆಟ್ಟಿಗರು ಇದೇನಾ ಕೊರೊನಾ ಟೆಸ್ಟ್ ಎಂದು ಪ್ರಶ್ನೆ ಮಾಡಲಾರಂಭಿಸಿದ್ದರು. ಈ ರೀತಿ ಪರೀಕ್ಷೆ ಮಾಡಿಸಿದ್ರೆ ಸೋಂಕಿತನಿಗೂ ಪಾಸಿಟಿವ್ ವರದಿ ಬರಲ್ಲ. ನೀತುಜೀ, ನಿಮ್ಮ ಸ್ವ್ಯಾಬ್ ಸ್ಯಾಂಪಲ್ ಸರಿಯಾಗಿ ಸಿಕ್ಕಿಲ್ಲ. ಹಾಗಾಗಿ ಇನ್ನೊಮ್ಮೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು.