Tag: neethu vanajakshi

  • ನೀತು, ಪವಿ ಮೀಟ್‌ ಆದ ಮೈಕಲ್‌ -‌ ಇಶಾನಿ ಎಲ್ಲಿ ಎಂದು ಕಾಲೆಳೆದ ನೆಟ್ಟಿಗರು

    ನೀತು, ಪವಿ ಮೀಟ್‌ ಆದ ಮೈಕಲ್‌ -‌ ಇಶಾನಿ ಎಲ್ಲಿ ಎಂದು ಕಾಲೆಳೆದ ನೆಟ್ಟಿಗರು

    ಬಿಗ್ ಬಾಸ್ ಮನೆಯ (Bigg Boss Kannada 10) ಆಟ ಇನ್ನೂ 2 ವಾರಗಳ ಕಾಲ ಮುಂದೂಡಲಾಗಿದೆ. ಕಳೆದ ವಾರಾಂತ್ಯ ಮೈಕಲ್ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಬಿಗ್ ಬಾಸ್‌ನಿಂದ ಹೊರಬರುತ್ತಿದ್ದಂತೆ ಮೈಕಲ್ ತಮ್ಮ ಸ್ನೇಹಿತರಾದ ನೀತು ವನಜಾಕ್ಷಿ ಮತ್ತು ಪವಿ ಪೂವಪ್ಪ ಅವರನ್ನು ಭೇಟಿಯಾಗಿದ್ದಾರೆ.

    ದೊಡ್ಮನೆ ಆಟ 90 ದಿನಗಳನ್ನು ಪೂರೈಸಿ ಹೊರಬರುತ್ತಿದ್ದಂತೆ ಮೈಕಲ್ ಅವರು ಪವಿ- ನೀತುರನ್ನು ಭೇಟಿಯಾಗಿ ಕೆಲ ಕಾಲ ಸಮಯ ಕಳೆದಿದ್ದಾರೆ. ಈ ಕುರಿತ ಫೋಟೋವನ್ನು ಮೈಕಲ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಬೆನ್ನಲ್ಲೇ ಇಶಾನಿ ಎಲ್ಲಿ? ಅವರನ್ನು ಭೇಟಿ ಮಾಡಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಸ್ಟೈಲೀಶ್‌ ಆಗಿ ಫೋಟೋಶೂಟ್‌ನಲ್ಲಿ ಕಂಗೊಳಿಸಿದ ಸಾನ್ಯ ಅಯ್ಯರ್

    ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಈಶಾನಿ ತನ್ನ ಗರ್ಲ್‌ಫ್ರೆಂಡ್ ಎಂದು ಅಫಿಷಿಯಲ್ ಆಗಿ ಮೈಕಲ್ ಹೇಳಿದ್ದರು. ಇಶಾನಿ ಕೂಡ ಇದಕ್ಕೆ ಒಪ್ಪಿಗೆ ನೀಡಿದ್ದರು. ಇಬ್ಬರ ಲವ್ ಸ್ಟೋರಿ ಈ ಸೀಸನ್‌ನಲ್ಲಿ ಹೆಚ್ಚು ಹೈಲೆಟ್ ಆಗಿತ್ತು. ಹಾಗಾಗಿಯೇ ಪವಿ, ನೀತುರನ್ನು ಭೇಟಿಯಾಗಿದ್ದೀರಾ ಆದರೆ ಇಶಾನಿ ಎಲ್ಲಿ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ನೆಟ್ಟಿಗರು ಮೈಕಲ್ ಮುಂದಿಟ್ಟಿದ್ದಾರೆ.

    ಕನ್ನಡ ಬರದ ಮೈಕಲ್ ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಮೈಕಲ್ ಅಜಯ್ ದೊಡ್ಮನೆಗೆ ಕಾಲಿಟ್ಟ ಮೇಲೆಯೇ ಕನ್ನಡ ಕಲಿತಿದ್ದರು. ಕನ್ನಡದ ಮಣ್ಣಿನ ಮಗ ಎಂದೇ ಮೈಕಲ್ ಹೈಲೆಟ್‌ ಆಗಿದ್ದರು.

    ಕಳೆದ ವಾರಾಂತ್ಯ ಮೈಕಲ್‌ಗೆ ಕಿಚ್ಚ ಸುದೀಪ್ ಕಡೆಯಿಂದ ಖಡಕ್ ಕ್ಲಾಸ್ ಆಗಿತ್ತು. ಕ್ಯಾಪ್ಟನ್‌ಗೆ ಗೌರವ ನೀಡದೇ ರೂಲ್ಸ್ ಫಾಲೋ ಮಾಡದೇ ತನ್ನದೇ ಸರಿ ಎಂದು ಬೀಗುತ್ತಿದ್ದ ಮೈಕಲ್ ಆಟಕ್ಕೆ ಸುದೀಪ್ ತಕ್ಕ ಪಾಠ ಕಲಿಸಿದ್ದರು.  ಭಾನುವಾರದ (ಜ.7) ಎಪಿಸೋಡ್‌ನಲ್ಲಿ ಮೈಕಲ್ ಎಲಿಮಿನೇಟ್ ಆದರು.

  • Bigg Boss: ‘ಗೆಲ್ಲೋ ಕುದುರೆ’ ವಿನಯ್ ಎಂದ ನೀತುಗೆ ಮೈಕಲ್ ಠಕ್ಕರ್

    Bigg Boss: ‘ಗೆಲ್ಲೋ ಕುದುರೆ’ ವಿನಯ್ ಎಂದ ನೀತುಗೆ ಮೈಕಲ್ ಠಕ್ಕರ್

    ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಕಿಚ್ಚನ ಕ್ಲಾಸ್ ಬಳಿಕ ಎಲ್ಲಾ ಸ್ಪರ್ಧಿಗಳು ಎಚ್ಚೆತ್ತು ಆಟವಾಡುತ್ತಿದ್ದಾರೆ. ಇದೀಗ ಗೆಲ್ಲೋ ಕುದುರೆ ವಿನಯ್ ಎಂದು ಬೆಟ್ಟು ತೋರಿಸಿದ ನೀತುಗೆ (Neethu Vanajakshi) ಮೈಕಲ್ ಠಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ:ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಾಂಗ್ ಲೀಕ್: ಕೇಡಿಗಳ ಅರೆಸ್ಟ್

    ಟಾಸ್ಕ್‌ವೊಂದರಲ್ಲಿ ಒಂದಿಷ್ಟು ಪದಗಳನ್ನ ಸ್ಪರ್ಧಿಗಳಿಗೆ ನೀಡಿದ್ದರು. ಆ ಪದದ ಅನುಸಾರ ಸ್ಪರ್ಧಿಗಳನ್ನ ಅತೀ ಹೆಚ್ಚು ಮತ್ತು ಅತೀ ಕಡಿಮೆ ಅದನ್ನ ಹೈಲೆಟ್ ಮಾಡಿ ನಿಲ್ಲಿಸಬೇಕಿತ್ತು. ಅದರಂತೆ ನೀತು ವನಜಾಕ್ಷಿ ಅವರಿಗೆ ‘ಗೆಲ್ಲೋ ಕುದುರೆ’ ಎಂಬ ಪದ ಸಿಕ್ಕಿತ್ತು. ಈ ಅನುಸಾರ ನೀತು, ಮೊದಲ ಸ್ಥಾನದಲ್ಲಿ ವಿನಯ್ (Vinay Gowda) ನಿಲ್ಲಿಸಿದ್ದರೆ, ಕಡೆಯ ಸ್ಥಾನದಲ್ಲಿ ಇಶಾನಿಯನ್ನು ನಿಲ್ಲಿಸಿದ್ದರು.

    ನೀತು ನಿರ್ಣಯಕ್ಕೆ ಮೈಕಲ್, ಕಾರ್ತಿಕ್ (Karthika Mahesh) ಸೇರಿದಂತೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಗೆಲ್ಲೋ ಕುದುರೆ ಪಟ್ಟಿಯಲ್ಲಿ ವಿನಯ್ ಗೌಡ ಒಬ್ಬರೇ ಓಡ್ತಿರೋದು ಅಂತ ಹೇಳಿದ್ದಕ್ಕಾಗಿ ನೀತುಗೆ ಠಕ್ಕರ್ ನೀಡಿದ ಮೈಕೆಲ್, ನೀವೀಗ ಹೇಳಿದ್ದೀರಿ, ಒಂದೇ ಒಂದು ಗೆಲ್ಲೋ ಕುದುರೆ ಆಟ ಆಡ್ತಾ ಇದೆ ಅಂತ. ಹಾಗಾದರೆ, ನೀವು ನಿಮ್ಮನ್ನೇ ಕನ್ಸಿಡರ್ ಮಾಡಿಕೊಂಡಿಲ್ಲ ಅಂತ ಅರ್ಥ. ಅಂದರೆ ನೀವಿಲ್ಲಿ ಸುಮ್ನೇ ಇದ್ದೀರಿ. ಸುಮ್ನೇ ಇರೋದಾದ್ರೆ ನೀವ್ಯಾಕೆ ಬಿಗ್ ಬಾಸ್‌ನಲ್ಲಿ ಯಾಕೆ ಇದ್ದೀರಾ? ಗೊಂದಲದಲ್ಲಿ ಇದ್ದೀರಾ ಅಂತೆಲ್ಲ ಕೇಳಿದರು. ಈ ಮಾತು ಕೇಳಿದ ನೀತು, ಸಮರ್ಥನೆ ಕೊಡೋದ್ರಲ್ಲಿ ಸೋತರು. ಮೈಕೆಲ್ ಮಾತಿಗೆ ಬೆಂಬಲಿಸುತ್ತ ಮನೆಮಂದಿ ನಕ್ಕರು. ಸದಾ ಕನ್ಫೂಷನ್‌ನಲ್ಲಿರೋ ನೀತು, ಮೈಕಲ್ ಈ ಮೂಲಕ ಕ್ಲಾಸ್ ತೆಗೆದುಕೊಂಡರು.

    ಸ್ನೇಕ್ ಶ್ಯಾಮ್, ಗೌರೀಶ್, ರಕ್ಷಕ್ ಬುಲೆಟ್ ಅವರು ಎಲಿಮಿನೇಟ್ ಆಗಿ ಈಗಾಗಲೇ ಬಿಗ್ ಬಾಸ್ ಮನೆಯಿಂದ (Bigg Boss House) ಹೊರಬಂದಿದ್ದಾರೆ. 5ನೇ ವಾರಕ್ಕೆ ಯಾರು ಎಲಿಮಿನೇಟ್ ಆಗುತ್ತಾರೆ ಕಾದುನೋಡಬೇಕಿದೆ.

  • Bigg Boss:‌ ಕಿಚ್ಚನ ಮೊದಲ ಚಪ್ಪಾಳೆ ಗಿಟ್ಟಿಸಿಕೊಂಡ ನೀತೂ

    Bigg Boss:‌ ಕಿಚ್ಚನ ಮೊದಲ ಚಪ್ಪಾಳೆ ಗಿಟ್ಟಿಸಿಕೊಂಡ ನೀತೂ

    ದೊಡ್ಮನೆ ಆಟ ಶುರುವಾಗಿ ಈಗ 4ನೇ ವಾರಕ್ಕೆ ಕಾಲಿಡ್ತಿದೆ. ಆದರೆ ಯಾವೊಬ್ಬ ಸ್ಪರ್ಧಿನೂ ಕಿಚ್ಚನ ಕೈಯಿಂದ ಚಪ್ಪಾಳೆ ಗಿಟ್ಟಿಸಿಕೊಂಡಿರಲಿಲ್ಲ. ಆದರೆ ನೀತೂ ಆಟ, ನಡೆ ನುಡಿ ಎಲ್ಲವೂ ಪ್ರೇಕ್ಷಕರ ಮತ್ತು ಕಿಚ್ಚನ ಗಮನ ಸೆಳೆದಿದೆ. ನೀತೂ (Neethu Vanajakshi) ಪ್ರಯತ್ನಕ್ಕೆ ಪ್ರಶಂಸೆ ನೀಡಿ ಸುದೀಪ್ ಚಪ್ಪಾಳೆ ತಟ್ಟಿದ್ದಾರೆ.

    ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಒಂದು ಸ್ಪೆಷಲ್ ಇದೆ. ಅದುವೇ ಕಿಚ್ಚನ ಚಪ್ಪಾಳೆ. ಸೀಸನ್ ಶುರುವಾದಾಗ ಇಡೀ ವಾರ ಯಾರು ಚೆನ್ನಾಗಿ ಆಟ ಆಡುತ್ತಾರೆ ಅವರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತೆ. ಇದೀಗ ಈ ವಾರ ನೀತೂಗೆ ಚಪ್ಪಾಳೆ ಕೊಟ್ಟ ಕಿಚ್ಚ, ಈ ವಾರದ ಚಪ್ಪಾಳೆ ನೀತೂಗೆ ಸಿಕ್ತಾ ಇದೆ. ಕಳೆದ ವಾರ ನೀತೂಗೆ ಖಾಲಿ ಡಬ್ಬ, ವಿಲನ್ ಅಂತೆಲ್ಲಾ ನಾಲ್ಕೈದು ಬೋರ್ಡ್ ಬಿದ್ದಿತ್ತು.

    ಆದರೆ ಈ ವಾರ ನೀತೂ ಅವರಲ್ಲಿ ತುಂಬಾ ಸ್ಪಿರಿಟ್ ಇತ್ತು. ಮುಂದೆ ಬಂದ್ರಿ, ಆಟ ಆಡಿದ್ರಿ, ನಿಂತ್ರಿ, ಮಾತಾಡೋ ಕಡೆ ಮಾತಾಡಿದ್ರಿ, ಸೈಲೆಂಟ್ ಆಗಿರುವ ಕಡೆ ಸೈಲೆಂಟ್ ಆಗಿದ್ರಿ ಎಂದು ಕಿಚ್ಚ ಸುದೀಪ್ ಹಾಡಿ ಹೊಗಳಿದ್ದಾರೆ. ಅದರಲ್ಲೂ ಸೀಸನ್ 10ರ ಮೊದಲ ಚಪ್ಪಾಳೆಯನ್ನ ನೀತು ಕಿಚ್ಚನ ಕಡೆಯಿಂದ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ಕಿಚ್ಚನ ಮುಂದೆಯೇ ವಿನಯ್‌ಗೆ ಚಾಟಿ ಬೀಸಿದ ಮನೆಮಂದಿ

    ನೀತೂಗೆ ಕಳೆದ ವಾರದವರೆಗೂ ಸಾಕಷ್ಟು ನೆಗೆಟಿವ್ ಪಾಯಿಂಟ್‌ಗಳು ಸಿಕ್ಕಿದ್ದವು. ಅದನ್ನು ಸುದೀಪ್ ಕೂಡ ಹೇಳಿದ್ದಾರೆ. ಕಳೆದ ವಾರ ಅವರ ಮೇಲೆ ಸಾಕಷ್ಟು ಮಾತು ಬರುತ್ತೆ. ಆರೋಪ ಬರುತ್ತೆ. ಆದರೆ, ಆ ವ್ಯಕ್ತಿ ಈ ವಾರ ಸಖತ್ತಾಗಿ ಆಡಿ, ರಾಯಲ್ ಆಗಿ ಮಲಗುತ್ತಾರೆ ಎಂದು ನೀತೂ ಬಗ್ಗೆ ಕಿಚ್ಚ ಹೊಗಳಿದ್ದಾರೆ.

    ಟ್ರ್ಯಾನ್ಸ್ ಜೆಂಡರ್ ನೀತೂ, ಇದೀಗ ಕ್ಯಾಪ್ಟನ್ ಕೂಡ ಆಗಿದ್ದಾರೆ. ತನಿಷಾಗೆ ಠಕ್ಕರ್ ಕೊಟ್ಟು ನೀತೂ ಗೆದ್ದಿದ್ದಾರೆ. ಸ್ನೇಹಿತ್, ರಕ್ಷಕ್ ಬಳಿಕ ನೀತೂ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಯುಐ’ ಸಿನಿಮಾದಲ್ಲಿ ಉಪೇಂದ್ರ ಜೊತೆ ನೀತು ವನಜಾಕ್ಷಿ

    `ಯುಐ’ ಸಿನಿಮಾದಲ್ಲಿ ಉಪೇಂದ್ರ ಜೊತೆ ನೀತು ವನಜಾಕ್ಷಿ

    ಟ್ಯಾಟೂ ಆರ್ಟಿಸ್ಟ್ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನೀತು ವನಜಾಕ್ಷಿ ಇದೀಗ ಉಪೇಂದ್ರ (Upendra) ನಿರ್ದೇಶನದ ನಿರೀಕ್ಷಿತ `UI’ ಸಿನಿಮಾದಲ್ಲಿ ನೀತು ಎಂಟ್ರಿ ಕೊಟ್ಟಿದ್ದಾರೆ.

    ಸದ್ಯ `ಸೂಪರ್ ಕ್ವೀನ್ಸ್’ (Super Queens) ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿರುವ ನಟಿ ನೀತು ವನಜಾಕ್ಷಿ ಅವರು ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ UI ಚಿತ್ರದಲ್ಲಿ ನಟಿಸಿದ್ದಾರೆ. ನೀತು ಅವರ ಪಾತ್ರಕ್ಕೂ ಪ್ರಾಮುಖ್ಯತೆ ಇದ್ದು, ನೀತು ಮೇಜರ್ ರೋಲ್ ಪ್ಲೇ ಮಾಡಿದ್ದಾರೆ.

    ಇನ್ನೂ ನೀತು ಹಿನ್ನೆಲೆ, ಹುಟ್ಟಿದ್ದು ಗದಗದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ. ಎಲ್ಲ ಟ್ರಾನ್ಸ್ ಜೆಂಡರ್‌ಗಳಂತೆ ಇವರು ಗಂಡಾಗಿ ಹುಟ್ಟಿದ್ದು. ಬಾಲ್ಯದ ಹೆಸರು ಮಂಜುನಾಥ್. ಏಳನೇ ಕ್ಲಾಸ್‌ವರೆಗೆ ಎಲ್ಲ ಸರಿ ಇತ್ತು. ಆದರೆ ಏಳನೇ ಕ್ಲಾಸಿಗೆ ಬಂದಾಗ ತಾನು ಉಳಿದ ಹುಡುಗರಂತೆ ಅಲ್ಲ, ತಾನು ಬೇರೆ ಅನಿಸತೊಡಗಿತು. ತನ್ನ ಶರೀರದೊಳಗೆ ತಾನೇ ಬಂಧಿಯಾದಂಥಾ ಭಾವನೆ. ಪ್ರೌಢಾವಸ್ಥೆಯಲ್ಲಿ ಇವರ ಸ್ನೇಹಿತರೆಲ್ಲ ಹುಡುಗಿಯರ ಕನಸು ಕಾಣುತ್ತಿದ್ದರೆ ಇವರಿಗೆ ಹುಡುಗಿಯರಂತೆ ಬದುಕೋದು, ಅವರಂತೆ ಡ್ರೆಸ್, ಮೇಕಪ್ ಮಾಡಿಕೊಳ್ಳೋದು ಇಷ್ಟ ಆಗ್ತಿತ್ತು. ಆದರೆ ಮನೆಯವರಿಂದ ತಿರಸ್ಕೃತನಾಗಬಹುದು, ಸ್ನೇಹಿತರಿಂದ ಅಪಹಾಸ್ಯಕ್ಕೆ ಗುರಿಯಾಗಬಹುದು ಅನ್ನೋ ಭಯದಲ್ಲಿದ್ದರು ನೀತು. ಇದನ್ನೂ ಓದಿ: ಬೆಸ್ಟ್ ಫ್ರೆಂಡ್ ಪತಿಯನ್ನೇ ಪಟಾಯಿಸಿದಳು ಎಂದವರಿಗೆ ನಟಿ ಹನ್ಸಿಕಾ ಸ್ಪಷ್ಟನೆ

    ಸದ್ಯಕ್ಕೀಗ ನೀತು ಟ್ಯಾಟೂ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೊಂದೆಡೆ ಉತ್ತರ ಕರ್ನಾಟಕ ತಿನಿಸುಗಳ `ಗಮ ಗಮ’ ಅನ್ನೋ ಹೊಟೇಲ್ ಶುರು ಮಾಡೋ ಮೂಲಕ ಹೊಟೇಲ್ ಉದ್ಯಮಿ ಆಗಿದ್ದಾರೆ. ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ. ತಾನು ಓದಿ ಒಂದು ಹಂತ ತಲುಪಿದ ಮೇಲೆ ತನ್ನ ನೈಜ ವಿಚಾರವನ್ನು ನೀತು ಕುಟುಂಬದವರಿಗೆ ತಿಳಿಸಿದ್ದಾರೆ. ಇದನ್ನೂ ಓದಿ:ಬೆಸ್ಟ್ ಫ್ರೆಂಡ್ ಪತಿಯನ್ನೇ ಪಟಾಯಿಸಿದಳು ಎಂದವರಿಗೆ ನಟಿ ಹನ್ಸಿಕಾ ಸ್ಪಷ್ಟನೆ

    ಭಾರತದ ಮೊದಲ ಮಂಗಳಮುಖಿ ಮಿಸ್ ಇಂಟರ್‌ನ್ಯಾಷನಲ್ ಆಗಿ ಕಿರೀಟ ಮುಡಿಗೇರಿಸಿಕೊಂಡರುವ ನಟಿ ನೀತು ವನಜಾಕ್ಷಿ ಅವರು `ಯುಐ’, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರ, ನಮಸ್ಕಾರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k