Tag: Neethu

  • ಸಂಗೀತಾ ಬರ್ತ್‌ಡೇಗೆ ವಿಶೇಷ ಉಡುಗೊರೆ ನೀಡಿದ ಡ್ರೋನ್‌ ಪ್ರತಾಪ್

    ಸಂಗೀತಾ ಬರ್ತ್‌ಡೇಗೆ ವಿಶೇಷ ಉಡುಗೊರೆ ನೀಡಿದ ಡ್ರೋನ್‌ ಪ್ರತಾಪ್

    ‘ಬಿಗ್ ಬಾಸ್’ ಖ್ಯಾತಿಯ (Bigg Boss Kannada 10) ಸಂಗೀತಾ ಶೃಂಗೇರಿ (Sangeetha Sringeri) ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.  ಬರ್ತ್‌ಡೇ ಸಂಭ್ರಮದಲ್ಲಿ ಡ್ರೋನ್ ಪ್ರತಾಪ್, ನೀತು ಸೇರಿದಂತೆ ಅನೇಕರು ಭಾಗಿಯಾಗಿ ಸಂಗೀತಾಗೆ ವಿಶ್ ಮಾಡಿದ್ದಾರೆ.‌ ಅಕ್ಕ ಸಂಗೀತಾಗೆ ಪ್ರತಾಪ್‌ ವಿಶೇಷ ಉಡುಗೊರೆ ಕೂಡ ನೀಡಿದ್ದಾರೆ. ಸದ್ಯ ನಟಿಯ ಬರ್ತ್‌ಡೇ ಸೆಲೆಬ್ರೇಶನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ದುನಿಯಾ ಸೂರಿ ನಿರ್ದೇಶನದ ‘ಕಾಗೆ ಬಂಗಾರ’ ಚಿತ್ರಕ್ಕೆ ಮುಹೂರ್ತ ಫಿಕ್ಸ್

    ಇದೀಗ ಡ್ರೋನ್ ಪ್ರತಾಪ್ (Drone Prathap) ಪ್ರೀತಿಯ ಅಕ್ಕ ಸಂಗೀತಾ ಶೃಂಗೇರಿ ಮನೆಗೆ ಭೇಟಿ ಕೊಟ್ಟಿದ್ದಾರೆ. ಇವರ ಜೊತೆಗೆ ನೀತು (Neethu Vanajakshi) ಕೂಡ ಭಾಗಿಯಾಗಿದ್ದರು. ಹುಟ್ಟುಹಬ್ಬದ ನಿಮಿತ್ತ ಪ್ರತಾಪ್ ಮತ್ತು ನೀತು ಅವರು ಕೇಕ್ ತೆಗೆದುಕೊಂಡು ಸಂಗೀತಾ ಶೃಂಗೇರಿ ಅವರ ಮನೆಗೆ ಆಗಮಿಸಿದ್ದಾರೆ.

    ಸಂಗೀತಾ ಮನೆಗೆ ಭೇಟಿ ಕೊಟ್ಟ ವೇಳೆ, ಡ್ರೋನ್ ಪ್ರತಾಪ್ ಅವರಿಗಾಗಿಯೇ ವಿಶೇಷವಾದ ಗಿಫ್ಟ್ ನೀಡಿದ್ದಾರೆ. ಡ್ರೋನ್ ಪ್ರತಾಪ್ ಪ್ರೀತಿಯ ಅಕ್ಕ ಸಂಗೀತಾಗೆ ತಿಳಿ ಹಸಿರು ಬಣ್ಣದ ಚೂಡಿದಾರ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ವೇಳೆ, ಪ್ರತಾಪ್‌ಗೆ ನಟಿ ರಾಕಿ ಕಟ್ಟಿ ಸಂಭ್ರಮಿಸಿದ್ದಾರೆ. ಈ ಸಂದರ್ಭದ ವಿಡಿಯೋ ಶೇರ್‌ ಮಾಡಿ ಪ್ರೀತಿಯ ಅಕ್ಕ ಜೊತೆಗಿರುವೆ ಸದಾ ಅಂತಾ ಪ್ರತಾಪ್ ಬರೆದುಕೊಂಡಿದ್ದಾರೆ. ಅದಷ್ಟೇ ಅಲ್ಲ, ರಕ್ಷಕ್‌ ಕೂಡ ಸಂಗೀತಾರನ್ನು ಭೇಟಿಯಾಗಿದ್ದಾರೆ.  ಇದನ್ನೂ ಓದಿ:‘ಶಿವಶರಣ ಮೋಳಿಗೆ ಮಾರಯ್ಯ’ ಚಿತ್ರಕ್ಕೆ ಚಾಲನೆ ನೀಡಿದ ಗವಿಶ್ರೀ

    ಅಂದಹಾಗೆ, ಸಂಗೀತಾ ದೊಡ್ಮನೆಯಿಂದ ಬಂದ್ಮೇಲೆ ‘ಮಾರಿಗೋಲ್ಡ್’ ಎಂಬ ಸಿನಿಮಾ ರಿಲೀಸ್ ಆಗಿತ್ತು. ಇದೀಗ ಹೊಸ ಬಗೆಯ ಕಥೆಗಳನ್ನು ನಟಿ ಕೇಳ್ತಿದ್ದಾರೆ. ಸದ್ಯದಲ್ಲೇ ಹೊಸ ಸಿನಿಮಾ ಅನೌನ್ಸ್ ಆಗಲಿದೆ.

  • Bigg Boss: ಮತ್ತೆ ಮನೆಯ ಕ್ಯಾಪ್ಟನ್‌ ಆದ ನೀತು

    Bigg Boss: ಮತ್ತೆ ಮನೆಯ ಕ್ಯಾಪ್ಟನ್‌ ಆದ ನೀತು

    ಬಿಗ್ ಮನೆಯ (Bigg Boss Kannada 10) ಮಾತಿನ ಮಲ್ಲಿ ನೀತು ವನಜಾಕ್ಷಿ (Neethu Vanajakshi) ಮತ್ತೆ 2ನೇ ಬಾರಿ ಕ್ಯಾಪ್ಟನ್ ಆಗಿ ಗೆದ್ದು ಬೀಗಿದ್ದಾರೆ.  ಮೈಕಲ್‌ಗೆ ಠಕ್ಕರ್ ಕೊಟ್ಟು ಮತ್ತೆ ನೀತು ಮನೆಯ ಕ್ಯಾಪ್ಟನ್ ಆಗಿದ್ದಾರೆ.

    ನೀತು ಈ ಹಿಂದೆಯೂ ಒಂದು ಬಾರಿ ಕ್ಯಾಪ್ಟನ್ ಆಗಿದ್ದರು. ಈ ಮತ್ತೆ ಕ್ಯಾಪ್ಟನ್ ಆಗುವ ಅವಕಾಶ ದಕ್ಕಿದೆ. ಬಿಗ್ ಬಾಸ್ ಈ ಬಾರಿ 2 ತಂಡಗಳಾಗಿ ವಿಂಗಡಿಸಿದ್ದರು. ಇದನ್ನೂ ಓದಿ:‘ಸಲಾರ್‌’ ಮೆರವಣಿಗೆಗೆ ಕೌಂಟ್‌ಡೌನ್‌- ಪ್ರಭಾಸ್‌ ಮತ್ತೆ ಗೆಲ್ಲುತ್ತಾರಾ?

    ಗಜಕೇಸರಿ ಮತ್ತು ಸಂಪತ್ತಿಗೆ ಸವಾಲ್ ಎಂಬ ಮೈಕಲ್ ಮತ್ತು ಸಂಗೀತಾ ಕ್ಯಾಪ್ಟನ್ ಆಗಿದ್ದಾರೆ. ಬಿಗ್ ಬಾಸ್ ನೀಡಿರುವ ಹೆಚ್ಚಿನ ಟಾಸ್ಕ್‌ನಲ್ಲಿ ಸಂಪತ್ತಿಗೆ ಸವಾಲ್ ಅಂದರೆ ಮೈಕಲ್ ಟೀಮ್ ಗೆದ್ದು ಬೀಗಿತ್ತು. ಸಂಗೀತಾ ಟೀಮ್ ಈ ಬಾರಿ ಮಕಾಡೆ ಮಲಗಿತ್ತು.

    ಆ ನಂತರ ಮೈಕಲ್ ಟೀಮ್‌ನಲ್ಲಿಯೇ ಕ್ಯಾಪ್ಟನ್ಸಿಗಾಗಿ ಗುದ್ದಾಟ ನಡೆಯಿತು. ತನಿಷಾ, ನೀತು, ಮೈಕಲ್, ತುಕಾಲಿ ನಾಲ್ವರು ರೇಸ್‌ನಲ್ಲಿದ್ದರು. ಕಡೆಯದಾಗಿ ಟಾಸ್ಕ್‌ನಲ್ಲಿ ಮೈಕಲ್- ನೀತುಗೆ ಕಾಂಪಿಟೇಶನ್ ಶುರುವಾಯಿತು. ಆದರೆ ರಿಂಗ್ ಮಾಸ್ಟರ್ ಮೈಕಲ್‌ಗೆ ಚಮಕ್ ಕೊಟ್ಟು ನೀತು, 7ನೇ ವಾರದ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.

    ನಮ್ರತಾ, ವಿನಯ್, ಕಾರ್ತಿಕ್, ತುಕಾಲಿ, ಸ್ನೇಹಿತ್, ತನಿಷಾ, ಡ್ರೋನ್ ಪ್ರತಾಪ್ ಡೇಂಜರ್ ಝೋನ್‌ನಲ್ಲಿದ್ದಾರೆ. ಈ ವಾರ ಯಾರಿಗೆ ಆಟ ಅಂತ್ಯವಾಗಲಿದೆ ಕಾದುನೋಡಬೇಕಿದೆ.

  • Bigg Boss:’ಕಳ್ಳನಿಗೊಂದು ಪಿಳ್ಳೆ ನೆಪ’ ಅಂತ ಸಂಗೀತಾಗೆ ಟಾಂಗ್‌ ಕೊಟ್ಟ ನೀತು

    Bigg Boss:’ಕಳ್ಳನಿಗೊಂದು ಪಿಳ್ಳೆ ನೆಪ’ ಅಂತ ಸಂಗೀತಾಗೆ ಟಾಂಗ್‌ ಕೊಟ್ಟ ನೀತು

    ಬಿಗ್ ಬಾಸ್ ಮನೆಯ (Bigg Boss Kannada 10) ಆಟ ಇದೀಗ 3ನೇ ವಾರಕ್ಕೆ ಮುನ್ನುಗ್ಗುತ್ತಿದೆ. ಹೀಗಿರುವಾಗ ಕಿಚ್ಚನ ಸಂಡೇ ಪಂಚಾಯಿತಿ ಕೂಡ ಜಬರ್‌ದಸ್ತ್ ಆಗಿ ನಡೆದಿದೆ. ಗಾದೆ ಮಾತುಗಳ ಮೂಲಕ ಸ್ಪರ್ಧಿಗಳು ಎದುರಾಳಿಗೆ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ. ಕಳ್ಳನಿಗೊಂದು ಪಿಳ್ಳೆ ನೆಪ ಅಂತ ಕಿಚ್ಚನ ಮುಂದೆ ಸಂಗೀತಾಗೆ (Sangeetha Sringeri) ನೀತು (Neethu) ಕಾಲೆಳೆದಿದ್ದಾರೆ.

    ದಿನದಿಂದ ದಿನಕ್ಕೆ ಮನೆಯ ಆಟ ಮತ್ತಷ್ಟು ರೋಚಕವಾಗುತ್ತಿದೆ. ಒಬ್ಬರಿಗಿಂತ ಒಬ್ಬರು ಕಿಲಾಡಿಗಳಾಗಿ ಸ್ಪರ್ಧಿಗಳು ಪೈಪೋಟಿ ನೀಡುತ್ತಿದ್ದಾರೆ. ಸೂಪರ್ ಸಂಡೇ ವಿತ್ ಸುದೀಪ್ ಕಾರ್ಯಕ್ರಮದಲ್ಲಿ ಕಿಚ್ಚ, ಸ್ಪರ್ಧಿಗಳಿಗೆ ಪ್ರಶ್ನಾವಳಿ ನಡೆಸಿದ್ದಾರೆ. ಆಗ ಯಾವ ಗಾದೆ ಯಾರಿಗೆ ಹೋಲಿಕೆ ಆಗುತ್ತೆ? ಎಷ್ಟು ಸರಿ ಮತ್ತು ಎಷ್ಟು ತಪ್ಪು ಅನ್ನುವ ಟಾಸ್ಕ್‌ವೊಂದನ್ನ ಮಾಡಿದ್ದಾರೆ. ಇದನ್ನೂ ಓದಿ:ಯುದ್ಧಕ್ಕೆ ನಿಂತ ಮೇಲೆ ಸೋತರೂ ಪರವಾಗಿಲ್ಲ, ಸತ್ತಾದರೂ ಗೆಲ್ಲಿ- ಕಿಚ್ಚನ ಕ್ಲಾಸ್

    ಆಗ ಕಾರ್ತಿಕ್ ತುಕಾಲಿಗೆ ‘ಉತ್ತರನ ಪೌರುಷ ಓಲೆ ಮುಂದೆ’ ಎಂಬ ಗಾದೆಯ ಹಾರ ಹಾಕಿದ್ದಾರೆ. ಅವರ ಪೌರುಷ ಏನೇ ಇದ್ದರೂ ವರ್ತೂರ್ ಸಂತೋಷ್ ಮತ್ತು ರಕ್ಷಕ್ ಮುಂದೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಬಳಿಕ ‘ಬೆಳ್ಳಗಿರೋದೆಲ್ಲಾ ಹಾಲಲ್ಲ’ ಅಂತ ತನಿಷಾ ಡ್ರೋನ್ ಪ್ರತಾಪ್‌ಗೆ ಹೇಳಿದ್ದಾರೆ. ನೀವು ಮುಗ್ಧರಲ್ಲ ಎಂದಿದ್ದಾರೆ.

    ಬಳಿಕ ‘ಕಳ್ಳನಿಗೊಂದು ಪಿಳ್ಳೆ ನೆಪ’ ಈ ಗಾದೆ ಹೋಲೋದು ಸಂಗೀತಾಗೆ ಎಂದು ನೀತು ಹೇಳಿದ್ದಾರೆ. ಡ್ರೋನ್ ಪ್ರತಾಪ್- ವಿನಯ್ ಜಗಳವಾಡುವಾಗ ಸಂಗೀತಾ ಮಾತಿನ ಮಧ್ಯೆ ಹೋಗಿದ್ದರು. ಆಗ ವಿನಯ್ ನೀವು ಮಾತನಾಡುವ ರೀತಿ ಥ್ರೆಟ್ ಎಂದು ಅನಿಸುತ್ತದೆ ಎಂದಿದ್ದರು. ಈ ವಿಚಾರವಾಗಿ ಮನೆಯಲ್ಲಿ ರಣರಂಗನೇ ಆಗಿತ್ತು. ಇದನ್ನು ನೋಡಿ ಅಟೆಕ್ಷನ್‌ಗಾಗಿ ಮಾಡ್ತಿದ್ದಾರೆ ಎಂದು ನೀತುಗೆ ಸಂಗೀತಾ ಟಾಂಗ್ ಕೊಟ್ಟರು. ನೀತು ಮಾತಿಗೆ ಸಂಗೀತಾ ಬೇಸರ ಹೊರಹಾಕಿದರು. ಕಿಚ್ಚನ ಮುಂದೆಯೇ ಸಂಗೀತಾ- ನೀತು ಮಾತಿನ ಭರಾಟೆ ನೋಡಿ ಇತರೆ ಸ್ಪರ್ಧಿಗಳು ದಂಗಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada: ಬಿಗ್ ಬಾಸ್ ಮನೆಗೆ ಆಗಲೇ ಕಾಲಿಟ್ಟ ಸ್ಪರ್ಧೆಗಳು? ಚಿತ್ರೀಕರಣದಲ್ಲಿ ಸುದೀಪ್

    Bigg Boss Kannada: ಬಿಗ್ ಬಾಸ್ ಮನೆಗೆ ಆಗಲೇ ಕಾಲಿಟ್ಟ ಸ್ಪರ್ಧೆಗಳು? ಚಿತ್ರೀಕರಣದಲ್ಲಿ ಸುದೀಪ್

    ಅಸಲಿಯಾಗಿ ನಾಳೆಯಿಂದ ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾದರೂ, ಇಂದೇ ಆ ಭಾಗದ ಚಿತ್ರೀಕರಣ ಶುರುವಾಗಿದೆ ಅನ್ನುವ ವಿಷಯ ಹರಿದಾಡುತ್ತಿದೆ. ಇಂದು ನಡೆದಿರುವ ಚಿತ್ರೀಕರಣದಲ್ಲಿ ಸುದೀಪ್ ಭಾಗಿಯಾಗಿದ್ದಾರೆ. ಈಗಾಗಲೇ 6ಕ್ಕೂ ಹೆಚ್ಚು  ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಇಂದು ನಡೆದ ಚಿತ್ರೀಕರಣದಲ್ಲಿ ಕಿರುತೆರೆ ನಟಿ ನಮ್ರತಾ ಗೌಡ, ನಟ ವಿನಯ್ ಗೌಡ, ಟ್ರಾನ್ಸ್ ಝಂಡರ್ ನೀತು, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ಉರಗ ತಜ್ಞ ಸ್ನೇಕ್ ಶ್ಯಾಮ್ ದೊಡ್ಮನೆ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ನಾಳೆ ಸಂಜೆಯಿಂದ ಬಿಗ್ ಬಾಸ್ ಆಟ ಶುರುವಾಗಲಿದೆ. ಅದಕ್ಕೂ ಮುನ್ನ ದೊಡ್ಮನೆಗೆ ಎಂಟ್ರಿ ಕೊಡುವವರ ಲಿಸ್ಟ್ ಹೊರ ಬೀಳುತ್ತಲೇ ಇದೆ. ಅಧಿಕೃತವಾದ ಹಾದಿ ಅದಾಗದಿದ್ದರೂ, ನಾನಾ ಮೂಲಗಳಿಂದ ಹೆಕ್ಕಿ ಹೆಸರುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಲೇ ಇದ್ದಾರೆ. ಈವರೆಗೂ ಒಂದಷ್ಟು ಹೆಸರುಗಳು ಕೇಳಿ ಬಂದಿದ್ದವು. ಆದರೆ, ಅವರಾರು ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಈಗ ಸಿಕ್ಕಿರುವ ಹಾದಿಯಲ್ಲಿ ಬಹುತೇಕರು ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಮೈಸೂರಿನ ಹೆಸರಾಂತ ಉರಗತಜ್ಞ ಸ್ನೇಕ್ ಶ್ಯಾಮ್ (Snake Shyam) ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರಂತೆ. 80 ಸಾವಿರಕ್ಕೂ ಅಧಿಕ ಹಾವುಗಳನ್ನು ಸಂರಕ್ಷಣೆ ಮಾಡಿರುವ ಸ್ನೇಕ್ ಶ್ಯಾಮ್, ಆ ಭಾಗದಲ್ಲಿ ಪ್ರಸಿದ್ಧರು. ಅದ್ಭುತವಾಗಿ ಮಾತನಾಡುತ್ತಾರೆ. ಅಲ್ಲದೇ, ರಾಜಕಾರಣದಲ್ಲೂ ಈ ಹಿಂದೆ ಸಕ್ರಿಯರಾಗಿದ್ದವರು.

    ನಾಗಿಣಿ ಧಾರಾವಾಹಿಯ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ನಮ್ರತಾ ಗೌಡ (Namrata Gowda) ಕೂಡ ಈ ಬಾರಿ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಲಿದ್ದಾರಂತೆ. ಚಿಕ್ಕ ವಯಸ್ಸಿನಿಂದಲೇ ಧಾರಾವಾಹಿ ಪ್ರಪಂಚಕ್ಕೆ ಕಾಲಿಟ್ಟ ನಮ್ರತಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ನಾಗಿಣಿ 2 ಧಾರಾವಾಹಿಯ ಮೂಲಕ.

    ರಾಪರ್ ಆಗಿರುವಂತಹ ಇಶಾನಿ  (Ishani) ಕೂಡ ಬಿಗ್ ಬಾಸ್ ಮನೆಯತ್ತ ಹೆಜ್ಜೆ ಹಾಕಿದ್ದಾರೆ. ನಿನ್ನೆಯಿಂದಲೇ ನಡೆದ ವಾಹಿನಿಯ ಹಲವಾರು ಕಾರ್ಯಕ್ರಮಗಳಲ್ಲಿ ಇಶಾನಿ ಭಾಗಿಯಾಗಿದ್ದಾರೆ. ಹಾಗಾಗಿ ಇಶಾನಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

    ಇವರ ಜೊತೆಗೆ ಮಜಾ ಭಾರತ ಮತ್ತು ಇತರ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡಿರುವ ಚಂದ್ರಪ್ರಭ ಕೂಡ ಬಿಗ್ ಬಾಸ್ ಮನೆಯಲ್ಲಿ ಇರುವುದು ಖಚಿತ ಎಂದು ಹೇಳಲಾಗುತ್ತಿದೆ. ಇವರ ಜೊತೆಗೆ ಸುಕ್ರತಾ ನಾಗ್, ಕೋಮಲ್ ಕೂಡ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವುದು ಸದ್ಯಕ್ಕೆ ಸಿಕ್ಕಿರುವ ವರ್ತಮಾನ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]