Tag: Neeta Ambani

  • ದೇಶದ ನಂ.1 ಶ್ರೀಮಂತ ಗೌತಮ್ ಅದಾನಿಗೆ Z – VIP  ಭದ್ರತೆ

    ದೇಶದ ನಂ.1 ಶ್ರೀಮಂತ ಗೌತಮ್ ಅದಾನಿಗೆ Z – VIP ಭದ್ರತೆ

    ನವದೆಹಲಿ: ದೇಶದ ನಂ.1 ಶ್ರೀಮಂತ ಉದ್ಯಮಿ ಆಗಿರುವ ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ ಅವರಿಗೆ ಕೇಂದ್ರ ಸರ್ಕಾರ `Z’ ಮಾದರಿಯ ವಿಐಪಿ ಭದ್ರತೆ ಒದಗಿಸಿದೆ.

    ಸಿಆರ್‌ಪಿಎಫ್‌ನ 22 ಕಮಾಂಡೋಗಳು ಅದಾನಿ ಅವರಿಗೆ ಇನ್ನು ಮುಂದೆ ಭದ್ರತೆ ಒದಗಿಸಲಿದ್ದಾರೆ. ಈ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ಶುಲ್ಕ ಆಧಾರಿತವಾಗಿದ್ದು, ತಿಂಗಳಿಗೆ ಸುಮಾರು 15 ರಿಂದ 20 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಲ್ಲಿ ಬದಲಾವಣೆ – ಆಗಸ್ಟ್ ಅಂತ್ಯಕ್ಕೆ ಮತ್ತಷ್ಟು ಶಾಕ್ ಸಾಧ್ಯತೆ

    ಅದಾನಿಗೆ ಜೀವ ಬೆದರಿಕೆ ಇದೆ ಎಂಬ ಗುಪ್ತಚರ ಸಂಸ್ಥೆಗಳ ಮಾಹಿತಿ ಆಧರಿಸಿ ಈ ಭದ್ರತೆ ಒದಗಿಸಲಾಗಿದೆ. ಸಿಆರ್‌ಪಿಎಫ್ ತಂಡ ಈಗಾಗಲೇ ಕೈಗಾರಿಕೋದ್ಯಮಿಯ ಭದ್ರತೆಯನ್ನು ವಹಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ ಮೊದಲ ಎಲೆಕ್ಟ್ರಿಕ್‌ ಡಬ್ಬಲ್ ಡೆಕ್ಕರ್ ಬಸ್‌ ಇಂದಿನಿಂದ ಕಾರ್ಯಾರಂಭ – ಏನಿದರ ವಿಶೇಷತೆ?

    ಈ ಹಿಂದೆ ದೇಶದ 2ನೇ ಶ್ರೀಮಂತರಾಗಿರುವ ಮುಖೇಶ್ ಅಂಬಾನಿಗೆ ಸರ್ಕಾರ ಇದೇ ರೀತಿ ಭದ್ರತೆ ನೀಡಿತ್ತು. ಆರ್‌ಎಲ್ ಅಧ್ಯಕ್ಷರಿಗೆ 2013 ರಲ್ಲಿ ಸಿಆರ್‌ಪಿಎಫ್ ಕಮಾಂಡೋಗಳ `ಝಡ್+’ ವರ್ಗದ ಭದ್ರತೆ ನೀಡಲಾಯಿತು. ಇದಾದ ಕೆಲ ವರ್ಷಗಳ ನಂತರ ಅವರ ಪತ್ನಿ ನೀತಾ ಅಂಬಾನಿಗೆ ಕಡಿಮೆ ವರ್ಗದ ಭದ್ರತೆ ನೀಡಲಾಯಿತು. ಭದ್ರತೆಗಾಗಿ ಇಬ್ಬರೂ ಸಿಆರ್‌ಪಿಎಫ್‌ಗೆ ಮಾಸಿಕ ಪಾವತಿಗಳನ್ನು ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೈರಲ್ ಆಯ್ತು ಮುಂಬೈ ಇಂಡಿಯನ್ಸ್ ‘ಪ್ರೇಯರ್ ಆಂಟಿ’ ಫೋಟೋ-ಯಾರಿವರು?

    ವೈರಲ್ ಆಯ್ತು ಮುಂಬೈ ಇಂಡಿಯನ್ಸ್ ‘ಪ್ರೇಯರ್ ಆಂಟಿ’ ಫೋಟೋ-ಯಾರಿವರು?

    ಅಬುಧಾಬಿ: 2020ರ ಐಪಿಎಲ್ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ತಂಡದ ವಿರುದ್ಧ ಭರ್ಜರಿ ಜಯ ಪಡೆದ ಮುಂಬೈ ಇಂಡಿಯನ್ಸ್ ತಂಡ 6ನೇ ಬಾರಿಗೆ ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದೆ. ಇದರೊಂದಿಗೆ ಪಂದ್ಯದ ಸಂದರ್ಭ ವೇಳೆ ಕ್ರೀಡಾಂಗಣದಲ್ಲಿ ಹಾಜರಿದ್ದ ಪ್ರೇಯರ್ ಆಂಟಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಕ್ರೀಡಾಂಗಣದ ಗ್ಯಾಲರಿಯಲ್ಲಿ ಕಾಣಿಸಿಕೊಂಡ ಪ್ರೇಯರ್ ಆಂಟಿ ಅವರನ್ನು ಅಭಿಮಾನಿಗಳು ಮುಂಬೈ ಇಂಡಿಯನ್ಸ್ ತಂಡದ ಲಕ್ಕಿ ಚಾರ್ಮ್ ಎಂದೇ ಕರೆಯುತ್ತಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಬೆಂಬಲ ನೀಡಲು ಕ್ರೀಡಾಂಗಣಕ್ಕೆ ಆಗಮಿಸುವ ಇವರು ತಂಡ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಕೈಯಲ್ಲಿ ಪುಸ್ತಕವನ್ನು ಹಿಡಿದುಕೊಂಡು ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸುವುದು ಸಾಮಾನ್ಯ ದೃಶ್ಯವಾಗಿದೆ.

    ಕೋವಿಡ್ ಕಾರಣದಿಂದ 2020ರ ಟೂರ್ನಿಯಲ್ಲಿ ಇದುವರೆಗೂ ಅವರು ಕಾಣಿಸಿಕೊಂಡಿರಲಿಲ್ಲ. ಆದರೆ ಡೆಲ್ಲಿ ವಿರುದ್ಧ ಕ್ವಾಲಿಫೈಯರ್ ಪಂದ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. 2017 ರಲ್ಲಿ ಮೊದಲ ಬಾರಿಗೆ ಅಭಿಮಾನಿಗಳು ಇವರನ್ನ ಗುರುತಿಸಿದ್ದರು. ಅಂದು ಪುಣೆ ವಿರುದ್ಧ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಪಂದ್ಯದಲ್ಲಿ ಪುಣೆ ಗೆಲುವಿಗೆ 5 ಎಸೆತಗಳಲ್ಲಿ 7 ರನ್ ಬೇಕಾಗಿತ್ತು. ಈ ವೇಳೆ ಕಣ್ಣು ಮುಚ್ಚಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದರು. ರೋಚಕ ಪಂದ್ಯದಲ್ಲಿ ಮುಂಬೈ ತಂಡ ಗೆಲುವು ಪಡೆದಿತ್ತು. ಆ ಬಳಿಕ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    ವೈರಲ್ ಫೋಟೋ ಹಂಚಿಕೊಂಡು ಮಾಹಿತಿ ನೀಡಿದ್ದ ನಟ ಅಭಿಷೇಕ್ ಬಚ್ಚನ್, ಇವರು ನೀತಾ ಅಂಬಾನಿ ಅವರ ಅಮ್ಮ ಪೂರ್ಣಿಮಾ ದಲಾಲ್, ನೀತಾ ಅಂಬಾನಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾಗಿದ್ದು, ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ತಂಡವನ್ನು ಬೆಂಬಲಿಸಲು ಆಗಮಿಸಿದ್ದರು ಎಂದು ಮಾಹಿತಿ ನೀಡಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಫೋಟೋಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ಫೈನಲ್ ಪಂದ್ಯದಲ್ಲಿ ಕೂಡ ಇವರ ಅಗತ್ಯವಿದೆ. ಪ್ರೇಯರ್ ಆಂಟಿ ಬಂದಿರುವುದರಿಂದ ಪಂದ್ಯದಲ್ಲಿ ಮುಂಬೈ ತಂಡ ಗೆಲುವು ಪಡೆಯಲಿದೆ ಎಂದು ಕಾಮೆಂಟ್ ಮಾಡಿದ್ದಾರೆ.

  • ಮಗ 118 ಕೆಜಿ ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನೀತಾ ಅಂಬಾನಿ

    ಮಗ 118 ಕೆಜಿ ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನೀತಾ ಅಂಬಾನಿ

    ಮುಂಬೈ: ಐಪಿಎಎಲ್ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾಗಿರುವ ನೀತಾ ಅಂಬಾನಿ ತಮ್ಮ ಮಗ ಅನಂತ್ ತೂಕ ಕಳೆದುಕೊಂಡ ಬಗೆಗಿನ ಗುಟ್ಟನ್ನು ಖಾಸಗಿ ಮಾಧ್ಯಮ ಸಮಾರಂಭದಲ್ಲಿ ತಿಳಿಸಿದ್ದಾರೆ.

    2013 ರಲ್ಲಿ ತಮ್ಮ ಮಾಲೀಕತ್ವದ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿಯನ್ನು ಗೆದ್ದು ಕೊಂಡಿತ್ತು. ಈ ವೇಳೆ ಅನಂತ್ ಜೊತೆ ಟ್ರೋಫಿ ಸ್ವೀಕರಿಸಲು ಸೂಚಿಸಿದ್ದೆ. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮಗನ ತೂಕವನ್ನು ನೋಡಿ ಜನ ಟ್ರೋಲ್ ಮಾಡಲು ಆರಂಭಿಸಿದರು.

    ಟ್ರೋಲ್ ಆದ ಬಳಿಕ ನಮ್ಮ ಬಳಿ ಬಂದ ಅನಂತ್ ದೇಹದ ತೂಕ ಇಳಿಸಿಕೊಳ್ಳುವ ನಿರ್ಧಾರ ತಿಳಿಸಿದ್ದ. ಆದರೆ ಆತನ ಇಷ್ಟದಂತೆ ಮಾಡಲು ಸಮ್ಮತಿಸಿದೆ. ನಂತರ ಅನಂತ್ ಜಾಮ್ ನಗರದಲ್ಲಿ 500 ದಿನಗಳ ಕಾಲ ಉಳಿದುಕೊಂಡು ಪ್ರತಿನಿತ್ಯ 23 ಕಿಮೀ ನಡೆಯುವ ಮೂಲಕ ನೈಸರ್ಗಿಕವಾಗಿ ತಮ್ಮ ತೂಕವನ್ನು ಇಳಿಸಿಕೊಂಡಿದ್ದಾನೆ ಎಂದು ತಿಳಿಸಿದರು.

    ಇದೇ ವೇಳೆ ತಮ್ಮ ಮಕ್ಕಳಿಗೆ ಅವರ ಬಾಳಸಂಗಾತಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಿರುವುದಾಗಿ ಹೇಳಿದರು.

    ಕಾರ್ಯಕ್ರಮದಲ್ಲಿ ದೇಶದ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಮಾತನಾಡಿದ ಅವರು, ನಮಗೇ ಹೊಸ ಹೊಸ ಅನ್ವೇಷಣೆ ಹಾಗೂ ಕಡಿಮೆ ಖರ್ಚಿನಲ್ಲಿ ಸಕಾರಗೊಳ್ಳುವ ಪರಿಣಾಮಕಾರಿ ವಿಧಾನಗಳ ಅಗತ್ಯವಿದೆ. ದೇಶದ 14-16 ವಯಸ್ಸಿನ ಹಲವು ಮಕ್ಕಳಿಗೆ ತಮ್ಮ ಮಾತೃಭಾಷೆಯಲ್ಲಿ ಸರಳ ವಾಕ್ಯವನ್ನು ಓದಲು ಬರುವುದಿಲ್ಲ. ರಿಲಯನ್ಸ್ ಫೌಂಡೇಶನ್ ಶೈಕ್ಷಣಿಕ ಕಾರ್ಯಕ್ರಮ ಮುಖಾಂತರ ಈಗಾಗಲೇ 1.2 ಕೋಟಿ ಮಕ್ಕಳಿಗೆ ಸಹಾಯ ಮಾಡಲಾಗಿದೆ. ನನ್ನ ಮುಂದಿನ ಜೀವನವನ್ನು ಭಾರತದ 20 ಮಕ್ಕಳಿಗೆ ಮೂಡಿಪಾಗಿಡುತ್ತೇನೆ. ಶಿಕ್ಷಕಿಯಾಗಿ ನನ್ನ ವೃತ್ತಿ ಜೀವನ ಆರಂಭ ಮಾಡಿದ್ದೆ, ಒಂದು ಬಾರಿ ಶಿಕ್ಷಕರಾದರೆ ಜೀವನ ಪರ್ಯಾಂತ ಶಿಕ್ಷಕರಾಗಿಯೇ ಇರುತ್ತಾರೆ. ತಾನು ಇದೇ ಕೆಲಸವನ್ನು ಮಾಡಿರುವುದಾಗಿ ತಿಳಿಸಿದರು.