Tag: NEET-UG Paper Leak Case

  • NEET-UG ಪ್ರಶ್ನೆಪತ್ರಿಕೆ ಸೋರಿಕೆ ಕೇಸ್‌ – ಮಾಸ್ಟರ್‌ ಮೈಂಡ್‌, ಇಬ್ಬರು ಎಂಬಿಬಿಎಸ್‌ ವಿದ್ಯಾರ್ಥಿಗಳು ಅರೆಸ್ಟ್‌

    NEET-UG ಪ್ರಶ್ನೆಪತ್ರಿಕೆ ಸೋರಿಕೆ ಕೇಸ್‌ – ಮಾಸ್ಟರ್‌ ಮೈಂಡ್‌, ಇಬ್ಬರು ಎಂಬಿಬಿಎಸ್‌ ವಿದ್ಯಾರ್ಥಿಗಳು ಅರೆಸ್ಟ್‌

    ನವದೆಹಲಿ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ NEET-UG Paper Leak Case) ಮಾಸ್ಟರ್‌ ಮೈಂಡ್‌ಗಳಲ್ಲಿ ಒಬ್ಬ ಹಾಗೂ ʻಪರಿಹಾರಕʼರಾಗಿ (Solvers) ಕಾರ್ಯನಿರ್ವಹಿಸಿದ್ದ‌ ಇಬ್ಬರು ಎಂಬಿಬಿಎಸ್‌ ವಿದ್ಯಾರ್ಥಿಗಳನ್ನ ಕೇಂದ್ರೀಯ ತನಿಖಾ ದಳ (CBI) ಶನಿವಾರ ಬಂಧಿಸಿದೆ.

    ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತ ಇಬ್ಬರು ʻಸಾಲ್ವರ್ʼ ಗಳನ್ನು ರಾಜಸ್ಥಾನ ಭರತ್‌ಪುರ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರ್ ಮಂಗಳಂ ಬಿಷ್ಣೋಯ್ ಮತ್ತು ದೀಪೇಂದರ್ ಕುಮಾರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: 24 ಗಂಟೆ ವಿದ್ಯುತ್‌ ಉಚಿತ, ಯುವಕರಿಗೆ ಉದ್ಯೋಗ ಖಚಿತ, ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. – ʻಕೇಜ್ರಿವಾಲ್‌ ಕಿ ಗ್ಯಾರಂಟಿʼ ಘೋಷಣೆ!

    ನೀಟ್‌-ಯುಜಿ ಪರೀಕ್ಷೆ ದಿನದಿಂದ ಇವರಿಬ್ಬರು ಹಜಾರಿಬಾಗ್‌ನಲ್ಲಿ ಹಾಜರಿದ್ದರು ಎಂಬುದನ್ನು ಸಿಸಿಟಿವಿ ದೃಢಪಡಿಸಿದೆ. ಆರೋಪಿತ ಮಾಸ್ಟರ್ ಮೈಂಡ್ ಪಂಕಜ್‌ ಕುಮಾರ್‌ ʻಬಿ.ಟೆಕ್ʼ ಪದವೀಧರ ಎಂದು ಹೇಳಲಾಗಿದೆ. ಪಂಕಜ್‌ ಕುಮಾರ್‌ ಕದ್ದಿದ್ದ ಪ್ರಶ್ನೆ ಪತ್ರಿಕೆಯನ್ನು ಮಂಗಳಂ ಬಿಷ್ಣೋಯ್ ಮತ್ತು ದೀಪೇಂದರ್ ಕುಮಾರ್ ಪರಿಹರಿಸಿದ್ದರು ಎಂದು ಸಿಬಿಐ ಹೇಳಿದೆ. ಸದ್ಯ ಮಾಸ್ಟರ್‌ ಮೈಂಡ್‌ ಹಾಗೂ ಇಬ್ಬರು ಸಾಲ್ವರ್‌ಗಳನ್ನ ಸಿಬಿಐ ಬಂಧಿಸಿದ್ದು, ಬಂಧಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

    ನೀಟ್ ಹಗರಣದ ಗದ್ದಲ ಮುಂದುವರಿದ ಹೊತ್ತಿನಲ್ಲೇ ಸುಪ್ರೀಂ ಕೋರ್ಟ್ ಆದೇಶದನ್ವಯ ಕೇಂದ್ರವಾರು ಮತ್ತು ನಗರವಾರು ನಿಟ್-ಯುಜಿ ಫಲಿತಾಂಶವನ್ನು ಎನ್‌ಟಿಎ ಪ್ರಕಟಿಸಿದೆ. ಇದನ್ನೂ ಓದಿ: `Public TV’ ಇಂಪ್ಯಾಕ್ಟ್‌: ಪ್ರವಾಹ ಪೀಡಿತ ಪ್ರದೇಶ ಕರಡಿಗೋಡು ಗ್ರಾಮಕ್ಕೆ ಸಚಿವ ಬೋಸರಾಜು ಭೇಟಿ

    ವಿದ್ಯಾರ್ಥಿಗಳ ಗುರುತು ಪತ್ತೆಯಾಗದಂತೆ ಎನ್‌ಟಿಎ ಮುಂಜಾಗ್ರತೆ ವಹಿಸಿದೆ. ಈ ದತ್ತಾಂಶದ ಪ್ರಕಾರ, ಮೊದಲಿಗೆ ಒಂದು ಪರೀಕ್ಷಾ ಕೇಂದ್ರದಲ್ಲಿ ಆರು ಮಂದಿಗೆ 720ಕ್ಕೆ 720 ಅಂಕ ಬಂದಿದ್ದವು. ಈ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. 1,563 ಮಂದಿಗೆ ಗ್ರೇಸ್ ಮಾರ್ಕ್ಸ್ ನೀಡಿದ್ದು ಇದಕ್ಕೆ ಕಾರಣ ಎಂದು ಗುರುತಿಸಿ ಅವರಿಗೆ ಮರುಪರೀಕ್ಷೆ ನಡೆಸಲಾಗಿತ್ತು. ಈ ಫಲಿತಾಂಶದ ನಂತ್ರ ಆ ಕೇಂದ್ರದಲ್ಲಿ ಬಂದ ಗರಿಷ್ಠ ಅಂಕ 682 ಎಂಬುದು ಗಮನಾರ್ಹ. ಅದು ಕೂಡ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಅಂಕ ಬಂದಿತ್ತು. ಕೇಂದ್ರವಾರು ಫಲಿತಾಂಶದ ವಿಶ್ಲೇಷಣೆ ಮುಂದುವರೆದಿದೆ. ಇದನ್ನೂ ಓದಿ:  NEET ಪರೀಕ್ಷಾ ಅಕ್ರಮ ಕೇಸ್:‌ ʻಸಾಲ್ವರ್‌ ಗ್ಯಾಂಗ್‌ʼ ಕೆಲಸ ಏನಾಗಿತ್ತು? ಮಾಸ್ಟರ್‌ ಮೈಂಡ್‌ ಮಾಫಿಯಾಗೆ ಸಿಲುಕಿದ್ದು ಹೇಗೆ?

  • NEET: ಪರೀಕ್ಷೆ ಸರಿಯಾಗಿ ನಡೆಯದಿದ್ದರೆ ಮಾತ್ರ ಮರುಪರೀಕ್ಷೆ ಮಾಡಬಹುದು: ಸುಪ್ರೀಂ ಕೋರ್ಟ್

    NEET: ಪರೀಕ್ಷೆ ಸರಿಯಾಗಿ ನಡೆಯದಿದ್ದರೆ ಮಾತ್ರ ಮರುಪರೀಕ್ಷೆ ಮಾಡಬಹುದು: ಸುಪ್ರೀಂ ಕೋರ್ಟ್

    ನವದೆಹಲಿ: ನೀಟ್-ಯುಜಿ (NEET-UG) ಮರುಪರೀಕ್ಷೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ಗುರುವಾರ ನಡೆಸಿತು. ಪರೀಕ್ಷೆ ಸರಿಯಾಗಿ ನಡೆಯದಿದ್ದರೆ ಮಾತ್ರ ಮರುಪರೀಕ್ಷೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿತು.

    ಇಂದು ನಾವು ಪ್ರಕರಣ ವಿಚಾರಣೆ ನಡೆಸುತ್ತೇವೆ. ಲಕ್ಷಾಂತರ ಯುವ ವಿದ್ಯಾರ್ಥಿಗಳು ಇದಕ್ಕಾಗಿ ಕಾಯುತ್ತಿದ್ದಾರೆ. ಇತರೆ ಪ್ರಕರಣಗಳನ್ನು ಬಳಿಕ ವಿಚಾರಣೆ ನಡೆಸೋಣ ಎಂದು ಸಿಜೆಐ ಚಂದ್ರಚೂಡ್ ಹೇಳಿದರು. ಅದಕ್ಕೆ ಕೇಂದ್ರ ಸರ್ಕಾರ, ನಾಳೆ ಇದನ್ನು ನಾವು ವಿಚಾರಣೆ ನಡೆಸಬಹುದು ಎಂದಿತು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಇಲ್ಲ ಇಂದೇ ವಿಚಾರಣೆ ನಡೆಸೋಣ ಎಂದರು. ಇದನ್ನೂ ಓದಿ: ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮಾಸ್ಟರ್‌ಮೈಂಡ್‌ ಬಂಧನ

    56 ಸಾವಿರ ಸರ್ಕಾರಿ ಮೆಡಿಕಲ್ ಸೀಟುಗಳಿವೆ. ಖಾಸಗಿ ಕಾಲೇಜುಗಳಲ್ಲಿ 53 ಸಾವಿರ ಸೀಟುಗಳಿವೆ. 23 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 22 ಲಕ್ಷ ವಿದ್ಯಾರ್ಥಿಗಳು ಅರ್ಹತೆ ಪಡೆದಿಲ್ಲ. ಮರುಪರೀಕ್ಷೆ ನಡೆದರೆ 22 ಲಕ್ಷ ವಿದ್ಯಾರ್ಥಿಗಳು ಮತ್ತೆ ಭಾಗವಹಿಸಬಹುದು ಎಂದು ಅರ್ಜಿದಾರ ವಿದ್ಯಾರ್ಥಿಗಳ ಪರ ವಕೀಲರ ವಾದ ಮಂಡಿಸಿದರು. ವಾದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ನೇತೃತ್ವದ ಪೀಠ, 22ಲಕ್ಷ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯಬಹುದು ಎಂಬ ಕಾರಣಕ್ಕೆ ಮರು ಪರೀಕ್ಷೆ ಸಾಧ್ಯವಿಲ್ಲ. ಪರೀಕ್ಷೆ ಸರಿಯಾಗಿ ನಡೆಯದಿದ್ದರೆ ಮಾತ್ರ ಮರು ಪರೀಕ್ಷೆ ಮಾಡಬಹುದು. ಅದಕ್ಕೂ ಮೊದಲು ಪರೀಕ್ಷೆಯಲ್ಲಿ ನಡೆದ ಅಕ್ರಮ ಎಂತಹದ್ದು ಎಂದು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿತು.

    61 ವಿದ್ಯಾರ್ಥಿಗಳು 720 ಕ್ಕೆ 720 ಅಂಕ ಪಡೆದಿದ್ದಾರೆ. ಅದರಲ್ಲಿ ಕೆಲವು ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರ ಬದಲಾಯಿಸಿದ್ದಾರೆ. ಅವರಲ್ಲಿ ಎಷ್ಟು ವಿದ್ಯಾರ್ಥಿಗಳು ತಮ್ಮ ಕೇಂದ್ರಗಳನ್ನು ಬದಲಾಯಿಸಿದ್ದಾರೆ? 23.33 ಲಕ್ಷ ವಿದ್ಯಾರ್ಥಿಗಳಲ್ಲಿ ಎಷ್ಟು ವಿದ್ಯಾರ್ಥಿಗಳು ಕೇಂದ್ರ ಬದಲಾಯಿಸಿದ್ದಾರೆ ಎಂದು ಸಿಜೆಐ ಪ್ರಶ್ನಿಸಿದರು. ಅದಕ್ಕೆ ಎನ್‌ಟಿಎ ಪ್ರತಿಕ್ರಿಯಿಸಿ, ಕೇಂದ್ರ ಬದಲಿಸುವುದು ವಿಳಾಸಕ್ಕೆ ಸಂಬಂಧಪಟ್ಟಿರುತ್ತದೆ. ಪ್ರಸ್ತುತ ವಿಳಾಸ ಮತ್ತು ಶಾಶ್ವತ ವಿಳಾಸ ಆಧಾರದ ಮೇಲೆ ಮಾತ್ರ ಕೇಂದ್ರ ಬದಲಾಯಿಸಬಹುದು ಎಂದು ತಿಳಿಸಿತು. ಇದನ್ನೂ ಓದಿ: ನೀಟ್‌-ಪಿಜಿ ಪರೀಕ್ಷೆಗೆ ದಿನಾಂಕ ನಿಗದಿ

    ಎರಡು ಅಂಶಗಳ ಮೇಲೆ ಕೇಂದ್ರ ಬದಲಾವಣೆ ಸಾಧ್ಯ ಅಲ್ಲವೇ ಎಂದು ಸಿಜೆಐ ಕೇಳಿದರು, ಕೆಲವು ವಿದ್ಯಾರ್ಥಿಗಳು ಕೇಂದ್ರವನ್ನು ತಿದ್ದುಪಡಿ ಮಾಡಿದ್ದಾರೆ. ಕೇಂದ್ರ ಬದಲಾವಣೆಗೆ ಅವಕಾಶವನ್ನು ವೆಬ್ ಸೈಟ್‌ನಲ್ಲಿ ಕೊಟ್ಟಿರುತ್ತೇವೆ ಎಂದು ಎನ್‌ಟಿಎ ಸ್ಪಷ್ಟಪಡಿಸಿತು. ಅದಕ್ಕೆ ಸಿಜೆಐ ಮಾತನಾಡಿ, ಅಂದರೆ ಮೂಲ ಮತ್ತು ಬದಲಾಯಿಸಿದ ಕೇಂದ್ರಗಳ ವಿವರ ನಿಮ್ಮಲ್ಲಿ ಇಲ್ಲ ಎಂದು ಕೇಳಿದರು. ಪ್ರತಿಕ್ರಿಯಿಸಿದ ಎನ್‌ಟಿಎ, ಆ ರೀತಿಯ ವ್ಯವಸ್ಥೆ ನಮ್ಮ ಬಳಿ ಇಲ್ಲ ಎಂದು ಎನ್‌ಟಿಎ ಸ್ಪಷ್ಟಪಡಿಸಿತು.

    ನಾನು ಟಾಪ್ 100 ವಿದ್ಯಾರ್ಥಿಗಳ ಫಲಿತಾಂಶ ವಿಶ್ಲೇಷಣೆ ಮಾಡಿದ್ದೇನೆ. ಆಂಧ್ರಪ್ರದೇಶದ 7, ಬಿಹಾರ 7, ಹರಿಯಾಣ 4, ದೆಹಲಿ, 6, ಮಹಾರಾಷ್ಟ್ರ 4, ತಮಿಳುನಾಡು 6 ಇತ್ಯಾದಿ ಟಾಪ್ 100 ಅನ್ನು 12 ರಾಜ್ಯಗಳಲ್ಲಿ ವಿತರಿಸಲಾಗಿದೆ ಎಂದು ತೋರಿಸುತ್ತದೆ. ಒಂದು ಕೇಂದ್ರಾಡಳಿತ ಪ್ರದೇಶ ಕೂಡಾ. ಮರುಪರೀಕ್ಷೆ ತೆಗೆದುಕೊಂಡ 1,563 ರಲ್ಲಿ ಎಷ್ಟು ಮಂದಿ ಟಾಪ್ 100 ರಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ನಾವು ನೋಡಬೇಕಾಗಿದೆ ಎನ್‌ಟಿಎ ನಮಗೆ ಅದನ್ನು ಹೇಳುತ್ತದೆ ಎಂದು ಸಿಜೆಐ ತಿಳಿಸಿದ್ದಾರೆ. ಇದನ್ನೂ ಓದಿ: ನೀಟ್‌ ಚರ್ಚೆಗೆ ಅವಕಾಶ ಮಾಡಿಕೊಡಿ – ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಪತ್ರ!

  • ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮಾಸ್ಟರ್‌ಮೈಂಡ್‌ ಬಂಧನ

    ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮಾಸ್ಟರ್‌ಮೈಂಡ್‌ ಬಂಧನ

    ನವದೆಹಲಿ: ನೀಟ್‌-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕಿಂಗ್‌ಪಿನ್ ಎನ್ನಲಾದ ರಾಕೇಶ್ ರಂಜನ್ ಅಲಿಯಾಸ್ ರಾಕಿ ಎಂಬಾತನನ್ನು ಸಿಬಿಐ (CBI) ಬಂಧಿಸಿದೆ.

    ಆರೋಪಿ ರಂಜನ್‌ನನ್ನು 10 ದಿನಗಳ ಕಾಲ ಏಜೆನ್ಸಿ ಕಸ್ಟಡಿಗೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಬಿಹಾರದ ಪಾಟ್ನಾ ಬಳಿ ಎರಡು ಮತ್ತು ಪಶ್ಚಿಮ ಬಂಗಾಳದ ಕೋಲ್ಕತ್ತಾ ಬಳಿ ಎರಡು ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ರಾಕಿಯನ್ನು ಹೊರತುಪಡಿಸಿ ಎಂಟು ಜನರನ್ನು ಬಂಧಿಸಿದೆ. ಇದನ್ನೂ ಓದಿ: Godhra NEET Case | ಅನ್ಯರಾಜ್ಯಗಳ ವಿದ್ಯಾರ್ಥಿಗಳಿಗೆ ಗುಜುರಾತಿಯಲ್ಲಿ ನೀಟ್ ಬರೆಯಲು ಸೂಚನೆ – ಸಿಬಿಐ ಮಹತ್ವದ ಮಾಹಿತಿ

    ಜಾರ್ಖಂಡ್‌ನ ಹಜಾರಿಬಾಗ್‌ನ ಶಾಲೆಯೊಂದರ ಪ್ರಾಂಶುಪಾಲರು ಮತ್ತು ಉಪಪ್ರಾಂಶುಪಾಲರು ಸೇರಿದಂತೆ ಹನ್ನೆರಡು ಜನರನ್ನು ಇದುವರೆಗೆ ಬಂಧಿಸಲಾಗಿದೆ. ವಿವಿಧ ರಾಜ್ಯ ಪೊಲೀಸ್ ಪಡೆಗಳು ಮತ್ತು ಸಿಬಿಐ, NEET ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳ ಸೋರಿಕೆಯಂತಹ ರಾಷ್ಟ್ರೀಯ ದಂಧೆಗಳ ಬಗ್ಗೆ ತನಿಖೆ ನಡೆಸುತ್ತಿವೆ.

    ರಾಷ್ಟ್ರವ್ಯಾಪಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ದಂಧೆಯ ತನಿಖೆಯ ಕಾರ್ಯವನ್ನು ಸಿಬಿಐ ವಹಿಸಿಕೊಂಡಿದ್ದು, ಬಿಹಾರದಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಿಗೆ ಆರು ಎಫ್‌ಐಆರ್‌ಗಳನ್ನು ದಾಖಲಿಸಿದೆ. ನೀಟ್ ಪೇಪರ್ ಸೋರಿಕೆ ಮೂಲ ಹಜಾರಿಬಾಗ್ ಶಾಲೆ. ಅಲ್ಲಿಂದ ಸೋರಿಕೆಯಾದ ಪೇಪರ್‌ಗಳು ಬಿಹಾರಕ್ಕೂ ಬಂದಿವೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ – ಸಚಿವೆ ಶೋಭಾ ಕರಂದ್ಲಾಜೆಗೆ ಮದ್ರಾಸ್ ಹೈಕೋರ್ಟ್ ತರಾಟೆ