Tag: Neera Drink

  • ವಿಧಾನಸೌಧದಲ್ಲಿ ನೀರಾಗೆ ಫುಲ್ ಡಿಮ್ಯಾಂಡ್

    ವಿಧಾನಸೌಧದಲ್ಲಿ ನೀರಾಗೆ ಫುಲ್ ಡಿಮ್ಯಾಂಡ್

    – ನೀರಾ ಕುಡಿದು ಸೂಪರ್ ಎಂದ ಸಿದ್ದರಾಮಯ್ಯ

    ಬೆಂಗಳೂರು: ಬೇಸಿಗೆಯ ಸುಡು ಬಿಸಿಲು ಸಾರ್ವಜನಿಕರು ತಂಪು ಪಾನೀಯಗಳತ್ತ ಮುಖ ಮಾಡುವಂತೆ ಮಾಡಿದೆ. ಅದರಲ್ಲೂ ಇಂದು ರಾಜ್ಯ ಬಜೆಟ್. ಇದರ ಬೆನ್ನಲ್ಲೇ ವಿಧಾನ ಸೌಧಕ್ಕೆ ನೀರಾ ಎಂಟ್ರಿ ಕೊಟ್ಟಿತು.

    ವಿಧಾನಸೌಧದಲ್ಲಿ ನೀರಾಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ. ಹಾಪ್ ಕಾಮ್ಸ್‍ನ ಮಳಿಗೆಯನ್ನು ಸದನ ಹಿನ್ನೆಲೆಯಲ್ಲಿ ನೂತನವಾಗಿ ಓಪನ್ ಮಾಡಲಾಗಿತು. ತೋಟಗಾರಿಕೆ ಇಲಾಖೆಯಿಂದ ಹಣ್ಣು, ತಂಪು ಪಾನೀಯಗಳ ಮಾರಾಟಕ್ಕೆ ಇಂದು ಅವಕಾಶ ನೀಡಲಾಗಿತ್ತು.

    ಈ ಮಧ್ಯೆ ಎಲ್ಲ ಆಹಾರ ಪದಾರ್ಥಗಳಿಗಿಂತ ನೀರಾಗೆ ಫುಲ್ ಡಿಮ್ಯಾಂಡ್ ಸೃಷ್ಟಿಯಾಗಿದೆ. ಒಂದು ಗ್ಲಾಸ್ ನೀರಾಗೆ 50 ರೂ, ನಂತೆ ಮಾರಾಟ ಮಾಡಲಾಯಿತು. ನೀರಾ ಬಗ್ಗೆ ಅರಿವು ಹಾಗೂ ಅದರ ಸ್ವಾದ ತಿಳಿಸಲು ಕೌಂಟರ್ ಓಪನ್ ಮಾಡಿರುವುದಾಗಿ ಹಾಪ್ ಕಾಮ್ಸ್ ಸಿಬ್ಬಂದಿ ಮಾಹಿತಿ ಹಂಚಿಕೊಂಡರು.

    ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸೇರಿದಂತೆ ಅನೇಕ ಶಾಸಕರು ನೀರಾ ಕುಡಿದರು. ನೀರಾ ಕುಡಿಯುತ್ತ ಮಾತನಾಡಿದ ಸಿದ್ದರಾಮಯ್ಯ ಅವರು ನನ್ನ ಅವಧಿಯ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದೆ ಎಂದು ಹೇಳಿದರು.