Tag: Nederland

  • ಗೋ ಬ್ಯಾಕ್ ರಿಜ್ವಾನ್ – ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆಯ ಬಿಸಿ

    ಗೋ ಬ್ಯಾಕ್ ರಿಜ್ವಾನ್ – ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆಯ ಬಿಸಿ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ವಿಶ್ವಕಪ್ ( World Cup Cricket) ಪಂದ್ಯಕ್ಕೆ ಪ್ರತಿಭಟನೆ ಬಿಸಿ ತಟ್ಟುವ ಸಾಧ್ಯತೆಯಿದೆ.

    ಆಸ್ಟ್ರೇಲಿಯಾ ಹಾಗೂ ಪಾಕ್ ಮ್ಯಾಚ್ ವಿರೋಧಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಪಾಕ್ ಆಟಗಾರ ರಿಜ್ವಾನ್ (Mohammad Rizwan) ನೆದರ್‌ಲ್ಯಾಂಡ್ಸ್ (Nederland) ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲಿ ನಮಾಜ್‌ (Namaz) ಮಾಡಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ. ಇದನ್ನೇ ಮುಂದಿಟ್ಟುಕೊಂಡು ಗೋ ಬ್ಯಾಕ್ ರಿಜ್ವಾನ್ ಎಂಬ ಫಲಕಗಳನ್ನು ಹಿಡಿದು ಹೋರಾಟಕ್ಕೆ ಮುಂದಾಗಿವೆ.

    ರಿಜ್ವಾನ್, ಶ್ರೀಲಂಕಾ ವಿರುದ್ಧ ಸೆಂಚುರಿ ಸಿಡಿಸಿ ಅದನ್ನು ಪ್ಯಾಲೆಸ್ತಿನ್‍ಗೆ ಇದೀಗ ಆಟಗಾರನ ನಡೆಗೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ನಾಳೆ ನಡೆಯಲಿರುವ ಪಂದ್ಯಕ್ಕೆ ಪ್ರತಿಭಟನೆಯ ಶಾಕ್ ನೀಡಲು ಮುಂದಾಗಿವೆ. ಇದನ್ನೂ ಓದಿ: ಕೋರಮಂಗಲ ಕೆಫೆಯಲ್ಲಿ ಬೆಂಕಿ ಅವಘಡ ಪ್ರಕರಣ – ಮಾಲೀಕ ನಾಪತ್ತೆ

    ಮೈದಾನದಲ್ಲಿ ನಮಾಜ್ ಮಾಡಿದ ವಿಚಾರವಾಗಿ ಅಂದೇ ಪರ ವಿರೋಧ ಚರ್ಚೆಗಳು ಆರಂಭಗೊಂಡಿದ್ದವು. ಈ ವಿಚಾರವಾಗಿ ಐಸಿಸಿಗೆ (ICC) ದೂರು ಸಹ ದಾಖಲಾಗಿದೆ. ಇದನ್ನೂ ಓದಿ: ಜಾರಕಿಹೊಳಿ ಸೇರಿಗೆ ಡಿಕೆಶಿ ಸವ್ವಾ ಸೇರು – ಯಾರಿಗೆ ಸಿಗುತ್ತೆ ಲೋಕಸಭೆ ಟಿಕೆಟ್?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೈದಾನದಲ್ಲಿ ನಮಾಜ್‌ – ರಿಜ್ವಾನ್‌ ವಿರುದ್ಧ ದೂರು ದಾಖಲು

    ಮೈದಾನದಲ್ಲಿ ನಮಾಜ್‌ – ರಿಜ್ವಾನ್‌ ವಿರುದ್ಧ ದೂರು ದಾಖಲು

    ನವದೆಹಲಿ: ವಿಶ್ವಕಪ್‌ ಕ್ರಿಕೆಟ್‌ (World Cup Cricket) ಪಂದ್ಯದ ವೇಳೆಯೇ ಮೈದಾನದಲ್ಲಿ ನಮಾಜ್‌ (Namaz) ಮಾಡಿದ್ದ ಪಾಕಿಸ್ತಾನ ಸ್ಟಾರ್‌ ಬ್ಯಾಟರ್‌ ಮೊಹಮ್ಮದ್‌ ರಿಜ್ವಾನ್‌ (Mohammad Rizwan) ವಿರುದ್ಧ ಐಸಿಸಿಗೆ (ICC) ದೂರು ದಾಖಲಾಗಿದೆ.

    ಪಾಕಿಸ್ತಾನದ ಕ್ರೀಡಾ ನಿರೂಪಕಿ ವಿರುದ್ಧ ದೂರು ನೀಡಿದ್ದ ಸುಪ್ರೀಂ ಕೋರ್ಟ್‌ ವಕೀಲ ವಿನೀತ್‌ ಜಿಂದಾಲ್‌ (Vineet Jindal) ಅವರು ರಿಜ್ವಾನ್‌ ವಿರುದ್ಧ ದೂರು ನೀಡಿದ್ದಾರೆ.

    ವಿಶ್ವಕಪ್‌ ಟೂರ್ನಿಯಲ್ಲಿ ನೆದರ್‌ಲ್ಯಾಂಡ್‌ (Nederland) ವಿರುದ್ಧ ಪಾಕಿಸ್ತಾನ ಮೊದಲ ಪಂದ್ಯವನ್ನು ಆಡಿತ್ತು. ಈ ಪಂದ್ಯದ ಡ್ರಿಂಕ್ಸ್‌ ಬ್ರೇಕ್‌ ಸಮಯದಲ್ಲಿ ರಿಜ್ವಾನ್‌ ಮೈದಾನದಲ್ಲಿ ನಮಾಜ್‌ ಮಾಡಿದ್ದರು.

    ಈ ಘಟನೆಯನ್ನು ಪ್ರಸ್ತಾಪ ಮಾಡಿದ ವಿನೀತ್‌ ಜಿಂದಾಲ್‌ , ಅನೇಕ ಭಾರತೀಯರ ನಡುವೆ ಕ್ರಿಕೆಟ್ ಮೈದಾನದಲ್ಲಿ ನಮಾಜ್ ಮಾಡಿರುವುದು ಕ್ರೀಡಾ ಧರ್ಮಕ್ಕೆ ವಿರುದ್ಧವಾಗಿದೆ. ಇದು ಉದ್ದೇಶಪೂರ್ವಕವಾಗಿ ನಾನು ಮುಸ್ಲಿಂ ಎಂದು ಸಂದೇಶ ನೀಡುವ ಪ್ರಯತ್ನ. ಇದು ಐಸಿಸಿ ನಿಯಮದ ಉಲ್ಲಂಘನೆ ಎಂದು ದೂರು ನೀಡಿದ್ದಾರೆ.  ಇದನ್ನೂ ಓದಿ: ರಿಜ್ವಾನ್‌ಗೆ ಸ್ಲೆಡ್ಜಿಂಗ್ – ನಮಾಜ್‌, ಜೈ ಶ್ರೀರಾಮ್‌ ಫುಲ್‌ ಟ್ರೆಂಡ್!‌

    ರಿಜ್ವಾನ್‌ ಅವರು ಮೈದಾನದಲ್ಲಿ ನಮಾಜ್‌ ಮಾಡುವುದು ಹೊಸದೆನಲ್ಲ. ಈ ಹಿಂದೆ ದುಬೈನಲ್ಲಿ ನಡೆದ 2021ರ ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳ ಭರ್ಜರಿ ಜಯಗಳಿಸಿತ್ತು. ಭಾರತದ ಡ್ರಿಂಕ್ಸ್‌ ಬ್ರೇಕ್‌ ಸಮಯದಲ್ಲಿ ರಿಜ್ವಾನ್‌ ಮೈದಾನದಲ್ಲೇ ನಮಾಜ್‌ ಮಾಡಿದ್ದರು.

    ಮೈದಾನದಲ್ಲಿ ನಮಾಜ್‌ ಮಾಡಿದ್ದಕ್ಕೆ ಅಂದೇ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಈ ಪಂದ್ಯದ ನಂತರ ಪಾಕ್‌ ಮಾಜಿ ಆಟಗಾರ ವಾಕರ್ ಯೂನಿಸ್‌ ನೀಡಿದ ಹೇಳಿಕೆ ಸುಂಟರಗಾಳಿ ಎಬ್ಬಿಸಿತ್ತು. ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕ್‌ ಗೆಲ್ಲುವುದರ ಜೊತೆಗೆ ಹಿಂದೂಗಳ ಮುಂದೆ ನಮಾಜ್‌ ಮಾಡಿದ್ದು ವಿಶೇಷವಾಗಿತ್ತು ಎಂದು ಹೇಳಿದ್ದರು.

    ರಿಜ್ವಾನ್‌ ಅವರ ವಿರುದ್ಧ ದೂರು ನೀಡಿರುವ ವಕೀಲ ವಿನೀತ್‌ ಜಿಂದಾಲ್‌ ಅವರು ಪಾಕ್‌ ನಿರೂಪಕಿ, ಕ್ರೀಡಾ ಪತ್ರಕರ್ತೆ ಝೈನಾಬ್ ಅಬ್ಬಾಸ್‌ (Zainab Abbas) ವಿರುದ್ಧ ದೆಹಲಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಭಾರತ ಮತ್ತು ಹಿಂದೂ ಧರ್ಮವನ್ನು ಅವಹೇಳನ ಮಾಡಿದ ಆರೋಪ ಹೊರಿಸಿ ಝೈನಾಬ್ ಅಬ್ಬಾಸ್‌ ವಿರುದ್ಧ ದೂರು ದಾಖಲಾಗಿತ್ತು. ಅಷ್ಟೇ ಅಲ್ಲದೇ ಐಸಿಸಿ ವಿಶ್ವಕಪ್‌ ನಿರೂಪಕಿ ಸ್ಥಾನದಿಂದ ಕೂಡಲೇ ತೆಗೆದುಹಾಕಬೇಕೆಂದು ಐಸಿಸಿ ಮತ್ತು ಬಿಸಿಸಿಐಗೆ (BCCI) ದೂರು ನೀಡಿದ್ದರು. ಈ ದೂರಿನ ಬೆನ್ನಲ್ಲೇ ಜೈನಾಬ್‌ಳನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗಿದೆ ಎಂದು ವರದಿಯಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]