Tag: nedelhi

  • ಲೋಕಸಭೆ ಸೋಲಿಗೆ ನಾನೇ ಕಾರಣ ಅಂತಿದ್ರೆ ನನ್ನನ್ನು ಶೂಟ್ ಮಾಡಿ ಎಂದ ಕಾಂಗ್ರೆಸ್ ನಾಯಕ

    ಲೋಕಸಭೆ ಸೋಲಿಗೆ ನಾನೇ ಕಾರಣ ಅಂತಿದ್ರೆ ನನ್ನನ್ನು ಶೂಟ್ ಮಾಡಿ ಎಂದ ಕಾಂಗ್ರೆಸ್ ನಾಯಕ

    ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹರ್ಯಾಣದಲ್ಲಿ ಸೋಲಲು ನಾನು ಕಾರಣವಾಗಿದ್ದರೆ ನನ್ನನ್ನು ಶೂಟ್ ಮಾಡಿ ಎಂದು ದೆಹಲಿಯಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಅಧ್ಯಕ್ಷ ಅಶೋಕ್ ತನ್ವರ್ ಸಿಡಿದೆದ್ದಿದ್ದಾರೆ.

    ಲೋಕಸಭಾ ಚುನಾವಣಾ ಸೋಲಿನ ಸಂಬಂಧ ದೆಹಲಿಯಲ್ಲಿ ಕಾಂಗ್ರೆಸ್ ಸಭೆ ನಡೆಸಲಾಗಿತ್ತು. ಈ ಸಭೆಯ ನೇತೃತ್ವವನ್ನು ಸೋನಿಯಾ ಗಾಂಧಿ ಆಪ್ತ ಗುಲಾಂ ನಬಿ ಆಜಾದ್ ವಹಿಸಿಕೊಂಡಿದ್ದರು. ಸಭೆ ನಡೆಯುತ್ತಿದ್ದ ವೇಳೆ ಹರ್ಯಾಣದಲ್ಲಿ ಸೋಲಿಗೆ ಅಧ್ಯಕ್ಷ ಅಶೋಕ್ ತನ್ವರ್ ಕಾರಣವೆಂದು ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಬಣದಿಂದ ಆರೋಪಿಸಿಲಾಯಿತು. ಈ ಆರೋಪಕ್ಕೆ ಸಿಟ್ಟಿಗೆದ್ದ ಅಶೋಕ್ ತನ್ವರ್ ಅವರು ಈ ನನ್ನನ್ನ ಮುಗಿಸಬೇಕು ಅಂತಿದ್ದರೆ ನನಗೆ ಶೂಟ್ ಮಾಡಿ, ಹರ್ಯಾಣದಲ್ಲಿ ಕೈ ಸೋಲಿಗೆ ನಾನು ಕಾರಣವಾಗಿದ್ದರೆ ನನ್ನನ್ನು ಶೂಟ್ ಮಾಡಿ ಕೊಂದು ಬಿಡಿ ಎಂದು ಆರ್ಭಟಿಸಿದ್ದಾರೆ.

    ನಾಯಕರ ಈ ಜಟಾಪಟಿಕೆ ಬೇಸತ್ತ ಗುಲಾಂ ನಬಿ ಆಜಾದ್ ಅವರು ಸಭೆಯ ಅರ್ಧದಲ್ಲೇ ಎದ್ದು ಹೋದರು ಎಂದು ವರದಿಯಾಗಿದೆ. ಇದರಿಂದ ಲೋಕಸಭೆಯಲ್ಲಿ ಕೈ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಹೈಕಮಾಂಡ್ ನಿಯಂತ್ರಣ ಕಳೆದುಕೊಳ್ತಿದಿಯಾ ಎಂಬ ಅನುಮಾನ ಹುಟ್ಟುಕೊಂಡಿದೆ.

    ಇದೇ ಅಕ್ಟೋಬರ್ ತಿಂಗಳಲ್ಲಿ ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯವ ಸಾಧ್ಯತೆಯಿದೆ. ಹೀಗಾಗಿ ಕಾಂಗ್ರೆಸ್ ಸಭೆಯಲ್ಲಿ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಮಾತನಾಡುವಾಗ ನಾಯಕರ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಸಭೆಯಲ್ಲಿ ಆಜಾದ್ ಅವರು ಹರ್ಯಾಣದಲ್ಲಿ ನಡೆಯುವ ಚುನಾವಣೆಗೆ ಹೇಗೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂಬ ಚರ್ಚೆ ನಡೆಯುತಿತ್ತು. ಅಲ್ಲದೆ ಹರ್ಯಾಣದ ಪ್ರತಿ ಜಿಲ್ಲೆಯಲ್ಲೂ ಪಕ್ಷದ ಸಭೆ ನಡೆಸಿ ಮತದಾರರನ್ನು ಸೆಳೆಯುವ ಕೆಲಸವಾಗಬೇಕು ಎಂದು ನಿರ್ಧರಿಸಲಾಗಿತ್ತು ಎನ್ನಲಾಗಿದೆ.

    ಈ ವೇಳೆ ಸಭೆ ಮಧ್ಯೆ ಹರ್ಯಾಣ ನಾಯಕರ ನಡುವೆ ಜಗಳ ಆರಂಭವಾಯ್ತು. ಒಬ್ಬರ ಮೇಲೊಬ್ಬರು ಆರೋಪಗಳ ಸುರಿಮಳೆ ಸುರಿಸಿದರು. ಆಗ ಹರ್ಯಾಣದಲ್ಲಿ ಕಾಂಗ್ರೆಸ್ ಸೋಲಲು ತನ್ವರ್ ಅವರೇ ಕಾರಣ ಎಂದು ಹೂಡಾ ಬಣದಿಂದ ಆರೋಪ ಕೇಳಿಬಂದಿದೆ. ಹೀಗಾಗಿ ರೊಚ್ಚಿಗೆದ್ದ ತನ್ವರ್ ಅವರು ನಾನು ಒಬ್ಬಂಟಿಯಾಗಿಯೇ ನಿಮ್ಮೆಲ್ಲರನ್ನು ಎದುರಿಸುತ್ತೇನೆ. ಒಂದುವೇಳೆ ನನ್ನನ್ನು ಸಾಯಿಸಬೇಕಾದರೆ ನನಗೆ ಗುಂಡು ಹೊಡೆಯಿರಿ ಎಂದು ಸಭೆಯಿಂದ ಹೊರನಡೆದರು.

    ಬಳಿಕ ಪಕ್ಷದ ಹಿರಿಯ ನಾಯಕರು ಈ ಬಗ್ಗೆ ಎಲ್ಲರಿಗೂ ಕಿವಿ ಮಾತು ಹೇಳಿದರು. ನೀವು ಈ ರೀತಿ ಒಬ್ಬರ ಮೇಲೋಬ್ಬರು ಆರೋಪ ಮಾಡಿಕೊಂಡು ದ್ವೇಷ ಸಾಧಿಸಿದರೆ ಎನೂ ಲಾಭವಾಗುವುದಿಲ್ಲ. ನಾವು ಚುನಾವಣೆಯನ್ನು ಗೆದ್ದು ಆಡಳಿತಕ್ಕೆ ಬರಬೇಕೆಂದರೆ ಒಗ್ಗಟ್ಟಿನಿಂದ ಇರಬೇಕು ಎಂದರು. ಬಳಿಕ ಎಲ್ಲರೂ ಆಜಾದ್ ಅವರಿಗೆ ಕ್ಷಮೆ ಕೇಳಿ ಮತ್ತೆ ಸಭೆಯನ್ನು ಮುಂದುವರಿಸಿದರು. ಆದರೆ ಅಧಿಕೃತವಾಗಿ ಯಾವುದೇ ತಿರ್ಮಾನಗಳನ್ನು ಕೂಡ ಸಭೆಯಲ್ಲಿ ತೆಗೆದುಕೊಂಡಿಲ್ಲ ಎಂದು ಕೈ ನಾಯಕರು ತಿಳಿಸಿದರು.

  • ಸಿ-ವೋಟರ್ ಸಮೀಕ್ಷೆ: ಬಿಜೆಪಿ ನೇತೃತ್ವದ ಎನ್‍ಡಿಎಗೆ ಕೊಂಚ ಕಹಿಸುದ್ದಿ

    ಸಿ-ವೋಟರ್ ಸಮೀಕ್ಷೆ: ಬಿಜೆಪಿ ನೇತೃತ್ವದ ಎನ್‍ಡಿಎಗೆ ಕೊಂಚ ಕಹಿಸುದ್ದಿ

    ನವದೆಹಲಿ: ಮೊದಲ ಹಂತದ ಲೋಕಸಭಾ ಚುನಾವಣೆಗೆ ಇನ್ನೇನು ಕೆಲ ದಿನ ಬಾಕಿ ಇರುವಂತೆ ಸಿ-ವೋಟರ್ ಜನಾಭಿಪ್ರಾಯ ಸಮೀಕ್ಷೆ ಪ್ರಕಟಗೊಂಡಿದೆ.

    ಮತ್ತೆ ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಬಿಜೆಪಿ ನೇತೃತ್ವದ ಎನ್‍ಡಿಎಗೆ ಸಮೀಕ್ಷೆಯಲ್ಲಿ ಕೊಂಚ ಕಹಿ ಸುದ್ದಿ ಹೊರಬಿದ್ದಿದ್ದು, ಯಾವುದೇ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆಯುವುದಿಲ್ಲ ಎಂದು ಸರ್ವೆ ಭವಿಷ್ಯ ನುಡಿದಿದೆ.

    ವಿಶೇಷ ಅಂದ್ರೆ ಯುಪಿಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಲಿದೆ. ಆದ್ರೆ ಬಿಹಾರ ಹಾಗೂ ಬಂಗಾಳದಲ್ಲಿ ಕೇಸರಿ ಪಡೆ ಉತ್ತಮ ಸಾಧನೆ ಮಾಡಲಿದೆ ಅಂತ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಮಾರ್ಚ್ ಮೂರನೇ ವಾರದಲ್ಲಿ ನಡೆಸಲಾಗಿದ್ದ ಈ ಸಮೀಕ್ಷೆಯಲ್ಲಿ ಎನ್‍ಡಿಎ ಮೈತ್ರಿಕೂಟ ಹಿನ್ನಡೆ ಅನುಭವಿಸಿದ್ರೂ ಅಧಿಕಾರದ ಸನಿಹಕ್ಕೆ ಬಂದು ನಿಲ್ಲಲಿದೆಯೆಂದು ಸಮೀಕ್ಷೆ ಹೇಳಿದೆ. ಹಾಗಾದ್ರೆ ಸಿ-ವೋಟರ್ ಜನಾಭಿಪ್ರಾಯದಂತೆ ಯಾರ್ಯಾರಿಗೆ ಎಷ್ಟೆಷ್ಟು ಸ್ಥಾನ ಲಭಿಸಲಿದೆ ಎಂಬುದನ್ನು ನೋಡೋಣ..

    ದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ..?
    ಒಟ್ಟು ಸ್ಥಾನ : 543
    ಎನ್‍ಡಿಎ : 261
    ಯುಪಿಎ : 143
    ಎಂಜಿಬಿ+ಇತರೆ: 139

    ದಕ್ಷಿಣ ಭಾರತದಲ್ಲಿ ಯಾರಿಗೆ ಎಷ್ಟು ಸ್ಥಾನ
    ಒಟ್ಟು ಸ್ಥಾನ : 130
    ಎನ್‍ಡಿಎ : 23
    ಯುಪಿಎ : 62
    ಇತರೆ : 45

    ಉ.ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ?
    ಒಟ್ಟು ಸ್ಥಾನ : 80
    ಎನ್‍ಡಿಎ : 28
    ಯುಪಿಎ : 04
    ಮಹಾಘಟಬಂಧನ್ : 48

    ಮಹಾರಾಷ್ಟ್ರದಲ್ಲಿ ಯಾರಿಗೆ ಎಷ್ಟು ಸ್ಥಾನ?
    ಒಟ್ಟು ಸ್ಥಾನ : 48
    ಎನ್‍ಡಿಎ : 34
    ಯುಪಿಎ : 14
    ಇತರೆ : 00

    ಒಟ್ಟಾರೆ ಶೇಕಡಾವಾರು ಮತ ಹಂಚಿಕೆ
    ಎನ್‍ಡಿಎ : 42.7 %
    ಯುಪಿಎ : 30.3 %
    ಇತರೆ : 27 %

    ಪ್ರಧಾನಿ ಹುದ್ದೆಗೆ ಯಾರು ಸೂಕ್ತ?
    ದೇಶದ ಪ್ರಧಾನಮಂತ್ರಿ ಸ್ಥಾನಕ್ಕೆ ಯಾರು ಸೂಕ್ತ ಎಂಬ ಸೀವೋಟರ್ ಜನಾಭಿಪ್ರಾಯದ ಪ್ರಕಾರ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕು ಎಂದು ಶೇ. 59.3ರಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ರೆ, ಶೇ.33.53ರಷ್ಟು ಮಂದಿ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಅಭಿಪ್ರಾಯಿಸಿದ್ದಾರೆ.

  • 70ನೇ ಗಣರಾಜ್ಯೋತ್ಸವ ಸಂಭ್ರಮ- ಸಕಲ ರೀತಿಯಲ್ಲೂ ರಾಜಪಥ್ ರೆಡಿ

    70ನೇ ಗಣರಾಜ್ಯೋತ್ಸವ ಸಂಭ್ರಮ- ಸಕಲ ರೀತಿಯಲ್ಲೂ ರಾಜಪಥ್ ರೆಡಿ

    ನವದೆಹಲಿ: ಇಂದು 70ನೇ ಗಣರಾಜ್ಯೋತ್ಸವದ ಸಂಭ್ರಮ. ರಾಷ್ಟ್ರ ರಾಜಧಾನಿ ನವದೆಹಲಿಯ ರಾಜಪಥ್ ರಸ್ತೆ ಕಾರ್ಯಕ್ರಮಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿದೆ.

    ದಟ್ಟ ಮಂಜು ಹಿನ್ನೆಲೆಯಲ್ಲಿ ಬೆಳಗ್ಗೆ 10ರಿಂದ ಕಾರ್ಯಕ್ರಮಗಳು ಆರಂಭವಾಗಲಿದೆ. ಈ ಬಾರಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ ಗಣರಾಜೋತ್ಸವದ ಅತಿಥಿ ಆಗಿದ್ದಾರೆ. ಇಂಡಿಯಾ ಗೇಟ್‍ನಲ್ಲಿರುವ ಅಮರ್ ಜವಾನ್ ಜ್ಯೋತಿ ಬಳಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ ಬಳಿಕ ಪ್ರಧಾನಿ, ಅತಿಥಿ, ಗಣ್ಯರ ಸಮ್ಮುಖದಲ್ಲಿ ರಾಷ್ಟ್ರಪತಿ ಕೋವಿಂದ್ ಧ್ವಜಾರೋಹಣ ಮಾಡಲಿದ್ದಾರೆ. ಇದನ್ನೂ ಓದಿ: ದೇಶದ ಹಬ್ಬಕ್ಕೆ ಕ್ಷಣಗಣನೆ : ಸಿಂಗಾರಗೊಂಡಿದೆ ರಾಜಪಥ್: ಈ ಬಾರಿಯ ಪರೇಡ್ ವಿಶೇಷತೆ ಏನು?

    ಈ ಬಾರಿ 16 ರಾಜ್ಯಗಳ ಮತ್ತು 6 ಇಲಾಖೆಗಳ ಒಟ್ಟು 22 ಸ್ತಬ್ಧ ಚಿತ್ರಗಳು ಪ್ರದರ್ಶನವಾಗುತ್ತಿದೆ. ಗಾಂಧೀಜಿ 150ನೇ ಜನ್ಮದಿನದ ಹಿನ್ನೆಲೆ ಸ್ತಬ್ಧ ಚಿತ್ರಗಳಲ್ಲಿ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ಬೆಂಗಳೂರಿನ ಗೋಕುಲ್ ಎಕ್ಸ್ ಟೆನ್ಷನ್‍ನ ನಾವ್ಕೀಸ್ ಶಾಲೆಯ ವಿದ್ಯಾರ್ಥಿನಿ ದೇವಿಕಾ ಸಂತೋಷ್‍ಗೆ ಪ್ರ್ರಧಾನ ಮಂತ್ರಿ ಬಾಕ್ಸ್ ನಲ್ಲಿ ಕುಳಿತು ಪರೇಡ್ ವೀಕ್ಷಿಸುವ ಅವಕಾಶ ಸಿಕ್ಕಿದೆ.

    ಕಳೆದ ವರ್ಷದ ಸಿಬಿಎಸ್‍ಇ 10ನೇ ತರಗತಿಯಲ್ಲಿ ದೇವಿಕಾ ದೇಶಕ್ಕೇ ಅತೀ ಹೆಚ್ಚು ಅಂಕಗಳನ್ನು ಪಡೆದಿದ್ದರು. ಉಗ್ರರ ಕರಿನೆರಳಿನ ಭೀತಿಯಿಂದ ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದೆ. ಇದನ್ನೂ ಓದಿ: ಫಸ್ಟ್ ಟೈಂ ಆರ್‌ಡಿಯಲ್ಲಿ ಪುರುಷ ದಳವನ್ನು ಮುನ್ನಡೆಸಲಿದ್ದಾರೆ ಮಹಿಳಾ ಅಧಿಕಾರಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯದಲ್ಲಿ ಕಮಲ ಅರಳಿಸಲು ಸರ್ಕಸ್ – ರಾಜ್ಯ ಬಿಜೆಪಿಗರಿಗೆ ದಿಲ್ಲಿಯಲ್ಲೇ ಇರುವಂತೆ ಆರ್ಡರ್

    ರಾಜ್ಯದಲ್ಲಿ ಕಮಲ ಅರಳಿಸಲು ಸರ್ಕಸ್ – ರಾಜ್ಯ ಬಿಜೆಪಿಗರಿಗೆ ದಿಲ್ಲಿಯಲ್ಲೇ ಇರುವಂತೆ ಆರ್ಡರ್

    ನವದೆಹಲಿ: ಸಂಕ್ರಾಂತಿ ಬಳಿಕ ರಾಜ್ಯ ರಾಜಕೀಯದಲ್ಲಿ ಕ್ರಾಂತಿ ಆಗುತ್ತೆ ಅಂತ ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಇದರ ನಡುವೆಯೇ ದೆಹಲಿಯಲ್ಲಿ ಬೀಡು ಬಿಟ್ಟಿರುವ 104 ಬಿಜೆಪಿ ಶಾಸಕರಿಗೆ ಕರ್ನಾಟಕ ಭವನ ಖಾಲಿ ಮಾಡಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡುವಂತೆ ಹೈಕಮಾಂಡ್ ಕಟ್ಟಾಜ್ಞೆ ನೀಡಿದೆ.

    ಇಂದು, ನಾಳೆ ದೆಹಲಿಯಲ್ಲಿಯೇ ಇರುವಂತೆ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಹೈಕಮಾಂಡ್ ಸೂಚನೆ ನೀಡಿದೆ. ಇದು ಆಪರೇಷನ್ ಕಮಲದ ಚರ್ಚೆಗಾ ಅನ್ನೋ ಮಾತು ಜೋರಾಗಿದ್ದು, ಶಾಸಕರಲ್ಲಿ ಕುತೂಹಲ ಮೂಡಿಸಿದೆ. ಈ ನಡುವೆ ಇವತ್ತು ದೆಹಲಿಯ ವೆಸ್ಟರ್ನ್ ಕೋರ್ಟ್ ಗೆಸ್ಟ್ ಹೌಸ್‍ನಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಭೆ ಕರೆದಿದ್ದಾರೆ. ರಾಜ್ಯದ 104 ಶಾಸಕರ ಜತೆ, ಸಂಸದರು, ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.

    ಸಭೆಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್, ರಾಜ್ಯಾಧ್ಯಕ್ಷ ಯಡಿಯೂರಪ್ಪ, ಅಮಿತ್ ಶಾಗೆ ಸಾಥ್ ನೀಡಲಿದ್ದಾರೆ. ಬೆಳಗ್ಗೆ 11 ರಿಂದ ಸಂಜೆ 5ರ ತನಕ ಸಭೆ ನಡೆಯಲಿದೆ. ಲೋಕಸಭಾ ಸಿದ್ಧತೆಯ ಹೆಸರಿನಲ್ಲಿ ಸಭೆ ನಡೆಯುತ್ತಿದ್ದು, ಬಿಜೆಪಿ ಶಾಸಕರು ಕಾದು ಕುಳಿತಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜ್ಯೂಸ್ ಕುಡಿದು ಹಣ ಕೊಡದೇ ತಕರಾರು- ಮಾಲೀಕನ ಸಹಾಯಕ್ಕೆ ಬಂದ ನಾಗರಿಕ ರಕ್ಷಣಾ ಸಿಬ್ಬಂದಿಯೇ ಕೊಲೆಯಾದ್ರು!

    ಜ್ಯೂಸ್ ಕುಡಿದು ಹಣ ಕೊಡದೇ ತಕರಾರು- ಮಾಲೀಕನ ಸಹಾಯಕ್ಕೆ ಬಂದ ನಾಗರಿಕ ರಕ್ಷಣಾ ಸಿಬ್ಬಂದಿಯೇ ಕೊಲೆಯಾದ್ರು!

    ನವದೆಹಲಿ: ಮೂವರು ಗೆಳೆಯರು ಸೇರಿ ನಾಗರಿಕ ರಕ್ಷಣಾ ಸಿಬ್ಬಂದಿಯನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ಭಾನುವಾರ ನಡೆದಿದೆ.

    ಮೃತ ದುರ್ದೈವಿಯನ್ನು ಗೋವಿಂದ್ ಎಂದು ಗುರುತಿಸಲಾಗಿದೆ. ಈ ಘಟನೆ ದೆಹಲಿಯ ಆದರ್ಶನಗರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸತೀಶ್(23), ಸಂದೀಪ್(30) ಹಾಗೂ ಸಾಗರ್(30) ಎಂಬ ಮೂವರನ್ನು ಬಂಧಿಸಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಘಟನೆ?: ಶನಿವಾರ ಮಧ್ಯಾಹ್ನದ ಬಳಿಕ ಇಬ್ಬರು ಜ್ಯೂಸ್ ಕುಡಿಯಲೆಂದು ಇಲ್ಲಿನ ಸಂತೋಷ್ ಎಂಬವರ ಸ್ಟಾಲ್ ಗೆ ಬಂದಿದ್ದರು. ಜ್ಯೂಸ್ ಕುಡಿದ ನಂತರ ಸಂತೋಷ್ ಬಿಲ್ ಪಾವತಿ ಮಾಡುವಂತೆ ತಿಳಿಸಿದ್ರು. ಈ ವೇಳೆ ಜ್ಯೂಸ್ ಕುಡಿದ ಇಬ್ಬರು ಹಣ ಕೊಡಲು ನಿರಾಕರಿಸಿ ಸಂತೋಷ್ ರನ್ನು ನಿಂದಿಸಿದ್ದಲ್ಲದೆ ಜಗಳವಾಡಿದ್ದರು. ಅಲ್ಲದೇ ಅದೇ ದಿನ ಸಂಜೆ ಸಂತೋಷ್‍ಗೆ ಪಾಠ ಕಲಿಸಬೇಕೆಂದು ಸಾಗರ್ ಎಂಬ ಮತ್ತೊಬ್ಬ ಗೆಳೆಯನನ್ನು ಕರೆದುಕೊಂಡು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ವೇಳೆ ಸಂತೋಷ್ ಗೆಳೆಯರಾದ ಮಹೇಶ್ ಹಾಗೂ ಸುಮಿತ್ ಎಂಬವರು ಸ್ಥಳದಲ್ಲಿದ್ದರು. ಅವರು ಕೂಡ ಸಹಾಯಕ್ಕೆಂದು ನಾಗರಿಕ ರಕ್ಷಣಾ ಸಿಬ್ಬಂದಿಯಾಗಿದ್ದ ಗೋವಿಂದ್ ಅವರನ್ನ ಘಟನಾ ಸ್ಥಳಕ್ಕೆ ಕರೆದಿದ್ದರು. ಈ ಸಂದರ್ಭದಲ್ಲಿ ಗಲಾಟೆ ತಾರಕಕ್ಕೇರಿ ಮೂವರು ಆರೋಪಿಗಳು ಮಹೇಶ್ ಹಾಗೂ ಗೋವಿಂದ್‍ಗೆ ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಗೋವಿಂದ್ ಅವರನ್ನು ಬಡಾ ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಗೋವಿಂದ್ ಮೃತಪಟ್ಟಿದ್ದಾರೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಘಟನೆಯ ಮಾಹಿತಿ ಪಡೆದ ಪೊಲಿಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದರು. ಗೋವಿಂದ್ ಅವರ ಎದೆಗೆ ಸಾಕಷ್ಟು ಬಾರಿ ಚಾಕುವಿನಿಂದ ಇರಿದ ಪರಿಣಾಮ ಗಂಭೀರ ಗಾಯವಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ಅವರು ವಿವರಿಸಿದ್ದಾರೆ.