Tag: necklace

  • ಗಿಫ್ಟ್‌ ಆಗಿ ಬಂದ ನೆಕ್ಲೆಸ್‌ನ್ನು 18 ಕೋಟಿಗೆ ಮಾರಿದ್ದಕ್ಕೆ ಇಮ್ರಾನ್‌ ಖಾನ್‌ ವಿರುದ್ಧ ತನಿಖೆ

    ಗಿಫ್ಟ್‌ ಆಗಿ ಬಂದ ನೆಕ್ಲೆಸ್‌ನ್ನು 18 ಕೋಟಿಗೆ ಮಾರಿದ್ದಕ್ಕೆ ಇಮ್ರಾನ್‌ ಖಾನ್‌ ವಿರುದ್ಧ ತನಿಖೆ

    ಇಸ್ಲಾಮಾಬಾದ್‌: ಉಡುಗೊರೆಯಾಗಿ ಪಡೆದ ಕೋಟ್ಯಂತರ ರೂ. ಮೌಲ್ಯದ ನೆಕ್ಲೆಸ್‌ನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡುವ ಬದಲು ಆಭರಣ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿರುವ ಆರೋಪದಡಿ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಪಾಕಿಸ್ತಾನ ಉನ್ನತ ತನಿಖಾ ಸಂಸ್ಥೆ ವಿಚಾರಣೆ ಆರಂಭಿಸಿದೆ.

    ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಅಧಿಕಾರವಧಿಯಲ್ಲಿ ದುಬಾರಿ ಮೌಲ್ಯದ ನೆಕ್ಲೆಸ್‌ ಉಡುಗೊರೆಯಾಗಿ ಬಂದಿತ್ತು. ಆದರೆ ಅವರು ಅದನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡದೇ ವ್ಯಾಪಾರಿಯೊಬ್ಬರಿಗೆ 18 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ಪಾಕ್ ಸೇನಾ ಮುಖ್ಯಸ್ಥರಿಗೆ ಅವಮಾನ – ಇಮ್ರಾನ್ ಖಾನ್ ಸಾಮಾಜಿಕ ಮಾಧ್ಯಮ ತಂಡ ಅರೆಸ್ಟ್

    ಖಾನ್ ಉಡುಗೊರೆಯಾಗಿ ಪಡೆದ ನೆಕ್ಲೆಸ್ ಅನ್ನು ತೋಶಾ-ಖಾನಾ (ರಾಜ್ಯ ಉಡುಗೊರೆ ಭಂಡಾರ)ಕ್ಕೆ ಕಳುಹಿಸಿಲ್ಲ. ಆದರೆ ಮಾಜಿ ವಿಶೇಷ ಸಹಾಯಕ ಜುಲ್ಫಿಕರ್ ಬುಖಾರಿಗೆ ನೀಡಿದ್ದರು. ಜುಲ್ಪಿಕರ್ ಅದನ್ನು ಲಾಹೋರ್‌ನ ಆಭರಣ ವ್ಯಾಪಾರಿಗೆ 18 ಕೋಟಿ ರೂ.ಗೆ ಮಾರಾಟ ಮಾಡಿದ್ದರು ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

    ಕಾನೂನಿನ ಪ್ರಕಾರ, ರಾಜ್ಯದ ಅಧಿಕಾರಿಗಳು ಗಣ್ಯರಿಂದ ಸ್ವೀಕರಿಸುವ ಉಡುಗೊರೆಗಳನ್ನು ತೋಶಾ-ಖಾನಾಗೆ ಸಲ್ಲಿಸಬೇಕಾಗುತ್ತದೆ. ಅವರು ಉಡುಗೊರೆಯನ್ನು ಸಲ್ಲಿಸಲು ವಿಫಲರಾದರೆ ಅಥವಾ ಉಡುಗೊರೆ ಮೌಲ್ಯದ ಅರ್ಧದಷ್ಟು ಮೊತ್ತವನ್ನು ಸಲ್ಲಿಸಿದರೆ, ಅದು ಕಾನೂನುಬಾಹಿರ ಕೃತ್ಯವಾಗಿದೆ. ಇದನ್ನೂ ಓದಿ: ಭಾರೀ ಮಳೆ- ಕೊಚ್ಚಿ ಹೋಯ್ತು ಆಫ್ರಿಕಾದಲ್ಲಿದ್ದ 70 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯ

    ವಿಪಕ್ಷಗಳ ಅವಿಶ್ವಾಸ ಮತದಿಂದಾಗಿ ಇಮ್ರಾನ್‌ ಖಾನ್‌ ಅವರು ಪಾಕಿಸ್ತಾನ ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಈಗ ಶೆಹಬಾಜ್‌ ಶರೀಪ್‌ ಅವರು ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ. ಖಾನ್‌ ರಾಜೀನಾಮೆ ಬೆನ್ನಲ್ಲೇ ಅವರ ವಿರುದ್ಧ ಹಲವು ಆರೋಪಗಳು ವ್ಯಕ್ತವಾಗುತ್ತಿದ್ದು, ತನಿಖೆ ಕೈಗೊಳ್ಳಲಾಗಿದೆ.

  • ಕಿರುಬೆರಳನ್ನೇ ಕತ್ತರಿಸಿ ಪೆಂಡೆಂಟ್ ಮಾಡ್ಕೊಂಡು ನೆಕ್ಲೆಸ್‍ನೊಂದಿಗೆ ಧರಿಸಿದ್ಳು!

    ಕಿರುಬೆರಳನ್ನೇ ಕತ್ತರಿಸಿ ಪೆಂಡೆಂಟ್ ಮಾಡ್ಕೊಂಡು ನೆಕ್ಲೆಸ್‍ನೊಂದಿಗೆ ಧರಿಸಿದ್ಳು!

    ಲಂಡನ್: ಬೆರಳುಗಳ ಮಾಲೆ ಧರಿಸಿದ್ದ ಅಂಗುಲಿಮಾಲನ ಕಥೆಯನ್ನ ನೀವು ಕೇಳಿರ್ತೀರ. ಅದನ್ನೇ ನೆನಪಿಸುವಂತೆ ಇಲ್ಲೊಬ್ಬಳು ಮಹಿಳೆ ತನ್ನ ಕಿರುಬೆರಳನ್ನೇ ಕತ್ತರಿಸಿ ಪೆಂಡೆಂಟ್‍ನಂತೆ ಮಾಡಿಕೊಂಡು ಕುತ್ತಿಗೆಗೆ ನೆಕ್ಲೆಸ್ ಜೊತೆ ಧರಿಸಿದ್ದಾಳೆ.

    ಇಂಗ್ಲೆಂಡಿನ ಎಸ್ಸೆಕ್ಸ್ ನಗರದ ನಿವಾಸಿ ಟಾರ್ಸ್ ರೆನಾಲ್ಡ್ಸ್(30) ತನ್ನ ಎಡಗೈ ಕಿರುಬೆರಳನ್ನ ಮರಗಟ್ಟುವಂತೆ ಮಾಡಿ ನಂತರ ಬೋಲ್ಟ್ ಕಟ್ಟರ್‍ನಿಂದ ಅರ್ಧ ಬೆರಳನ್ನೇ ತುಂಡು ಮಾಡಿದ್ದಾಳೆ.

    ವೃತ್ತಿಯಲ್ಲಿ ಬಾಡಿ ಪಿಯರ್ಸರ್ ಆಗಿರೋ ಈಕೆ ಈ ಬಗ್ಗೆ ಮಾತನಾಡಿ, ನಾನು ಮೊದಲಿಗೆ ಬೆರಳನ್ನ ಫ್ರೀಜರ್‍ನಲ್ಲಿ ಬಟಾಣಿಯ ಜೊತೆ ಇಟ್ಟು ಮರೆತುಬಿಟ್ಟಿದ್ದೆ ಎಂದು ಹೇಳಿದ್ದಾಳೆ. ಆದ್ರೆ ನಂತರ ಆಕೆ ಅದನ್ನ ಆಗಾಗ ನೆಕ್ಲೇಸ್ ಜೊತೆ ಹೇಕಿಕೊಳ್ಳಲು ಮದ್ಯದ ದ್ರಾವಣದ ಜೊತೆ ಹಾಕಿ ಚಿಕ್ಕ ಗಾಜಿನ ಬಾಟಲಿಯಲ್ಲಿ ತುಂಬಿಸಿ ಪೆಂಡೆಂಟ್ ಮಾಡಿಕೊಂಡಿದ್ದಾಳೆ.

    ಈ ಐಡಿಯಾ ತುಂಬಾ ಕ್ಯೂಟ್ ಅನ್ನಿಸ್ತು. ಹಲವಾರು ವರ್ಷಗಳಿಂದ ಇದನ್ನ ಮಾಡಬೇಕೆಂದುಕೊಂಡಿದ್ದೆ ಎಂದು ಟಾರ್ಸ್ ಹೇಳಿದ್ದಾಳೆ. ತುಂಡರಿಸಿದ ಬೆರಳಿಗೆ ವಿಗ್ಗಲ್ಸ್ ಎಂದು ಹೆಸರಿಟ್ಟಿದ್ದಾಳೆ.

    ನಾನು ಅದನ್ನ ಮರೆತೇಬಿಟ್ಟಿದ್ದೆ. ಅದನ್ನ ವೇಸ್ಟ್ ಮಾಡುವ ಬದಲು ನೆಕ್ಲೇಸ್ ಮಾಡಿಕೊಂಡರೆ ಹೇಗೆ ಅನ್ನಿಸಿತು. ನೆಕ್ಲೇಸ್ ಮಾಡುವುದು ತುಂಬಾ ಸುಲಭ ಎಂದೆನಿಸಿತು. ವಿಗ್ಗಲ್ಸ್ ನ ಮೊದಲ ಹುಟ್ಟುಹಬ್ಬಕ್ಕೆ ಏನಾದ್ರೂ ಮಾಡಬೇಕು ಎಂದುಕೊಂಡಿದ್ದೆ ಎಂದು ಹೇಳಿದ್ದಾಳೆ.

    ಇತ್ತೀಚೆಗೆ ಟಾರ್ಸ್ ವಿಗ್ಗಲ್ಸ್ ಹುಟ್ಟುಹಬ್ಬಕ್ಕೆ ಅದರ ಜೊತೆ ಫೋಟೋಶೂಟ್ ಕೂಡ ಮಾಡಿಸಿದ್ದಾಳೆ. ಆಕೆಯ ಬಾಯ್‍ಫ್ರೆಂಡ್ ತುಂಡಾದ ಕಿರುಬೆರಳಿಗೆ ತೊಡಿಸಲು ಪುಟಾಣಿ ಟೋಪಿಯನ್ನೂ ತಂದುಕೊಟ್ಟಿದ್ದಾನೆ. ವಿಗ್ಗಲ್ಸ್ ನ ಹುಟ್ಟುಹಬ್ಬಕ್ಕೆ ನನ್ನ ಬಾಯ್‍ಫ್ರೆಂಡ್ ಟೋಪಿಗಳನ್ನ ಉಡುಗೊರೆಯಾಗಿ ಕೊಟ್ಟ. ಇದು ತುಂಬಾ ಅದ್ಭುತ ಉಡುಗೊರೆ ಎಂದು ಟಾರ್ಸ್ ಹೇಳಿದ್ದಾಳೆ.

    ತನ್ನ ಸ್ನೇಹಿತರೊಬ್ಬರು ಕೂಡ ಇದೇ ರೀತಿ ಮಾಡಿದ್ದು ನೋಡಿದ ನಂತರ ಬೆರಳನ್ನ ತುಂಡು ಮಾಡಿದ್ದಾಗಿ ಆಕೆ ಹೇಳಿದ್ದಾಳೆ. ಬೆರಳನ್ನ ಕಟ್ ಮಾಡುವ ಮುನ್ನ, ಎಡಗೈನಲ್ಲಿ ಕೇವಲ ಅರ್ಧ ಕಿರುಬೆರಳಿದ್ದರೆ ಹೇಗಿರುತ್ತದೆ ಎಂದು ತಿಳಿಯಲು ಬೆರಳನ್ನ ಹಿಂದಕ್ಕೆ ಬಗ್ಗಿಸಿ ಪ್ರಾಕ್ಟೀಸ್ ಮಾಡಿದ್ದಳಂತೆ.

    ಟಾರ್ಸ್ ಈ ರೀತಿಯ ವಿಚಿತ್ರ ನಡೆವಳಿಕೆಗಳ ಇತಿಹಾಸ ಹೊಂದಿದ್ದಾಳೆ. ಈ ಹಿಂದೆ ಈಕೆಯ ಬಾಯ್‍ಫ್ರೆಂಡ್ ಮೋಸ ಮಾಡಿದನೆಂದು ಆತನ ಜೊತೆ ಬ್ರೇಕ್ ಅಪ್ ಮಾಡಿಕೊಂಡ ಬಳಿಕ ತನ್ನ ಕೈ ಮೇಲಿನ ಟ್ಯಾಟೂವನ್ನೇ ಕತ್ತರಿಸಿ ಪೋಸ್ಟ್‍ನಲ್ಲಿ ಕಳಿಸಿದ್ದಳು ಎಂದು ವರದಿಯಾಗಿದೆ.

    ಅದು ನಿಜವಾಗ್ಲೂ ಉಡುಗೊರೆಯಂತೆ ಕಾಣುವ ರೀತಿ ಪ್ಯಾಕ್ ಮಾಡಿದ್ದೆ. ಇದನ್ನ ಕಳಿಸುತ್ತಿರೋದು ನಾನೇ ಎಂದು ಗೊತ್ತಾಗಬಾರದೆಂದು ಬೇರೆ ರೀತಿಯ ಬರವಣಿಗೆ ಬಳಸಿದ್ದೆ. ಆತನ ಪ್ರತಿಕ್ರಿಯೆ ಹೇಗಿತ್ತು ಎಂದು ಊಹಿಸಿಕೊಳ್ಳಲು ಕೂಡ ಆಗಲ್ಲ. ಅದನ್ನ ನೋಡಲು ನಾನು ಅಲ್ಲಿರಬೇಕಿತ್ತು ಎಂದಿದ್ದಾಳೆ.