Tag: neck

  • ಪಾಸ್‍ಪೋರ್ಟ್ ಸುಟ್ಟುಹಾಕಿದ್ದಕ್ಕೆ ಪತ್ನಿ ಕತ್ತು ಸೀಳಿದ – ಆಕೆ ಕೈ ಹಿಡಿದು ಇಷ್ಟವಾದ ಹಾಡು ನುಡಿಸಿದ ಪಾಗಲ್

    ಪಾಸ್‍ಪೋರ್ಟ್ ಸುಟ್ಟುಹಾಕಿದ್ದಕ್ಕೆ ಪತ್ನಿ ಕತ್ತು ಸೀಳಿದ – ಆಕೆ ಕೈ ಹಿಡಿದು ಇಷ್ಟವಾದ ಹಾಡು ನುಡಿಸಿದ ಪಾಗಲ್

    ತಲ್ಲಹಸ್ಸೀ: ಪಾಸ್‍ಪೋರ್ಟ್ ಸುಟ್ಟುಹಾಕಿದ್ದಕ್ಕೆ ಪತ್ನಿ ಕತ್ತು ಸೀಳಿ ಕೊಂದು ಆಕೆ ಕೈ ಹಿಡಿದು ಇಷ್ಟವಾದ ಹಾಡು ನುಡಿಸಿದ ವಿಚಿತ್ರ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.

    ಅಲ್ಟಾಮೊಂಟೆ ಸ್ಪ್ರಿಂಗ್ಸ್ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಕರೆ ಬಂದಿದ್ದು, ನಂತರ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಪಾಗಲ್ ಪತಿಯು ಪತ್ನಿಯ ಕತ್ತು ಸೀಳಿ ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    Man Kills Wife, Holds Hand And Plays Her Favourite Song After: Report

    ನಡೆದಿದ್ದೇನು?
    ಕ್ಸಿಚೆನ್ ಯಾಂಗ್(21) ಆರೋಪಿ. ಯಾಂಗ್‍ನ ಪತ್ನಿ ಆತನ ಪಾಸ್‍ಪೋರ್ಟ್ ಸುಟ್ಟು ಹಾಕಿದ್ದಾಳೆ. ಇದರಿಂದ ಯಂಗ್ ಅವರ ಬಾಸ್‍ನಿಂದ ಚೆನ್ನಾಗಿ ಬೈಯಿಸಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಆತ ಸಿಟ್ಟಿನಿಂದ ಪತ್ನಿಯನ್ನು ಬಾತ್‍ರೂಮ್‌ನಲ್ಲಿ ಗಂಟಲು ಕಟ್ ಮಾಡಿ ಸಾಯಿಸಿದ್ದಾನೆ. ಈ ವೇಳೆ ಆಕೆ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಕ್ಕೆ ಬಾತ್‍ರೂಂ ಟಾಬ್‍ಗೆ ಮುಳುಗಿಸಿದ್ದಾನೆ.

    ನಂತರ ಆಕೆಯ ಕೈ ಹಿಡಿದುಕೊಂಡು ಅವಳಿಗೆ ಇಷ್ಟವಾದ ಹಾಡನ್ನು ನುಡಿಸುತ್ತಿದ್ದ. ಇತ್ತ ಯಂಗ್‍ನ ಬಾಸ್ ಪೊಲೀಸರಿಗೆ, ಯಂಗ್ ಕೆಲಸಕ್ಕೆ ಬರುತ್ತಿಲ್ಲ ಎಂದು ದೂರು ನೀಡಿದ್ದಾರೆ. ನಂತರ ಪೊಲೀಸರು ಯಾಂಗ್ ಅಪಾರ್ಟ್‍ಮೆಂಟ್‍ಗೆ ಹೋಗಿದ್ದು, ದೃಶ್ಯ ನೋಡಿ ಶಾಕ್ ಆಗಿದ್ದಾರೆ.

    ಪೊಲೀಸರು ಯಂಗ್ ಮನೆಗೆ ಪ್ರವೇಶ ಮಾಡುತ್ತಿದ್ದಂತೆ ಬಾತ್‍ರೂಮ್‌ನಲ್ಲಿ ರಕ್ತದ ಮಡುವಿನ ಯಾಂಗ್‌ನ ಪತ್ನಿಯನ್ನು ನೋಡಿ ಶಾಕ್ ಆಗಿದ್ದಾರೆ. ಈ ಕುರಿತು ವಿಚಾರಣೆ ಮಾಡಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv

  • ಕಣ್ಣುಗಳನ್ನು ಕಿತ್ತು, ಗಂಟಲು ಸೀಳಿ ಲಾರಿ ಚಾಲಕನನ್ನು ಫ್ಯಾನಿಗೆ ನೇತಾಕಿದ ಕ್ರೂರಿ

    ಕಣ್ಣುಗಳನ್ನು ಕಿತ್ತು, ಗಂಟಲು ಸೀಳಿ ಲಾರಿ ಚಾಲಕನನ್ನು ಫ್ಯಾನಿಗೆ ನೇತಾಕಿದ ಕ್ರೂರಿ

    – ಚಾಲಕನ ಪತ್ನಿ ಜೊತೆ ಕೊಲೆಗಾರನ ಅಕ್ರಮ ಸಂಬಂಧದ ಶಂಕೆ
    – ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ

    ಭೋಪಾಲ್: ಲಾರಿ ಚಾಲಕನೋರ್ವನ ಕತ್ತು ಸೀಳಿ, ಕಣ್ಣುಗಳನ್ನು ಕಿತ್ತು ಕೊಲೆಗೈದು, ಆತ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲು ಆತನನ್ನು ಫ್ಯಾನಿಗೆ ನೇತಾಕಿದ ಕೊಲೆಗಾರ ಪರಾರಿಯಾದ ಘಟನೆ ಮಧ್ಯಪ್ರದೇಶದ ಮನಪುರ ಪಟ್ಟಣದಲ್ಲಿ ನಡೆದಿದೆ.

    ಮನಪುರದ ಸೊಂದಿಯಾ ಮೊಹಲ್ಲಾದ ನಿವಾಸಿ ಲಾರಿ ಚಾಲಕ ರವಿ(27) ಮೃತ ದುರ್ದೈವಿ. ಆರೋಪಿ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ. ಸೊಂದಿಯಾ ಮೊಹಲ್ಲಾದ ಅಪಾರ್ಟ್‍ಮೆಂಟ್ ಒಂದರಲ್ಲಿ ರವಿ ತನ್ನ ಪತ್ನಿ ಕವಿತಾ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದನು. ಶುಕ್ರವಾರ ಪತ್ನಿ ಹಾಗೂ ಮಕ್ಕಳು ಸಂಬಂಧಿಕರ ಮನೆಗೆ ತೆರೆಳಿದ್ದ ವೇಳೆ ದುಷ್ಕರ್ಮಿ ಮನೆಗೆ ನುಗ್ಗಿ ರವಿಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ.

    ಮೊದಲು ರವಿಯ ಕತ್ತು ಸೀಳಿ ಕೊಲೆಗೈದು, ಬಳಿಕ ಆತನ ಎರಡು ಕಣ್ಣುಗಳನ್ನೂ ಕಿತ್ತು ಆರೋಪಿ ಕ್ರೂರತೆ ಮೆರೆದಿದ್ದಾನೆ. ಅಷ್ಟೇ ಅಲ್ಲದೆ ಇದು ಕೊಲೆಯಲ್ಲ ಆತ್ಮಹತ್ಯೆ ಎಂದು ಬಿಂಬಿಸಲು ರವಿಯ ಮೃತದೇಹವನ್ನು ಫ್ಯಾನಿಗೆ ನೇತಾಕಿ, ನೇಣಿಗೆ ಶರಣಾಗಿರುವ ರೀತಿ ಕಾಣುವಂತೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

    ಇತ್ತ ಅಕ್ಕಪಕ್ಕದ ಮನೆಯವರು ರವಿ ಕುಟುಂಬವೆಲ್ಲ ಸಂಬಂಧಿಕರ ಮನೆಗೆ ತೆರಳಿದ್ದಾರೆ, ಮನೆಯಲ್ಲಿ ಯಾರೂ ಇಲ್ಲ ಎಂದು ಭಾವಿಸಿದ್ದರು. ಆದರೆ ಘಟನೆ ನಡೆದ ಮರುದಿನ ರವಿ ಮನೆ ಬಳಿ ಹೋಗುತ್ತಿದ್ದ ನೆರೆ ಮನೆಯವರು ಅನುಮಾನ ಬಂದು ಕಿಟಕಿಯಲ್ಲಿ ನೋಡಿದಾಗ ರವಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

    ತಕ್ಷಣ ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಅಲ್ಲದೇ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ರವಿ ಪತ್ನಿ ಜೊತೆ ಕೊಲೆಗಾರನ ಅಕ್ರಮ ಸಂಬಂಧವಿರಬಹುದು ಎಂದು ಶಂಕಿಸಿದ್ದಾರೆ. ಜೊತೆಗೆ ಹಣ ಅಥವಾ ಆಸ್ತಿ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂಬ ಮಾತುಗಳು ಕೂಡ ಕೇಳಿಬಂದಿದೆ.

  • ಕಾರ್ಮಿಕನ ಕುತ್ತಿಗೆಗೆ ಸುತ್ತಿಕೊಂಡ 10 ಅಡಿ ಹೆಬ್ಬಾವು – ಸ್ಥಳೀಯರಿಂದ ರಕ್ಷಣೆ

    ಕಾರ್ಮಿಕನ ಕುತ್ತಿಗೆಗೆ ಸುತ್ತಿಕೊಂಡ 10 ಅಡಿ ಹೆಬ್ಬಾವು – ಸ್ಥಳೀಯರಿಂದ ರಕ್ಷಣೆ

    ತಿರುವನಂತಪುರಂ: ಕೆಲಸ ಮಾಡುತ್ತಿದ್ದ ಕಾರ್ಮಿಕನ ಕುತ್ತಿಗೆಗೆ 10 ಅಡಿ ಹೆಬ್ಬಾವು ಸುತ್ತಿಕೊಂಡ ಘಟನೆ ತಿರುವನಂತಪುರಂನ ಕಾಲೇಜು ಆವರಣದಲ್ಲಿ ನಡೆದಿದೆ.

    ಕಾಲೇಜು ಆವರಣದಲ್ಲಿ ಬೆಳೆದಿದ್ದ ಪೊದೆಯನ್ನು ತೆರವುಗೊಳಿಸುತ್ತಿದ್ದ 58 ವರ್ಷದ ಭುವಚಂದ್ರನ್ ನಾಯರ್ ಅವರ ಕುತ್ತಿಗೆಗೆ ಹಾವು ಸುತ್ತಿಕೊಂಡಿದೆ. ಈ ವೇಳೆ ಕುತ್ತಿಗೆಗೆ ಹೆಬ್ಬಾವು ಗಟ್ಟಿಯಾಗಿ ಸುತ್ತಿಕೊಂಡು ಉಸಿರಾಟದ ತೊಂದರೆಯಿಂದ ನರಳುತ್ತಿದ್ದ ನಾಯರ್ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

    ಕಾಲೇಜು ಆವರಣದಲ್ಲಿ ಪೊದೆ ತೆರವುಗೊಳಿಸುತ್ತಿದ್ದ ನಾಯರ್ ಅವರಿಗೆ ಪೊದೆಯೊಳಗೆ ಉದ್ದವಾದ ಬಟ್ಟೆಯ ರೀತಿಯ ವಸ್ತು ಕಂಡು ಬಂದಿದೆ. ನಂತರ ಹತ್ತಿರಕ್ಕೆ ಹೋಗಿ ನೋಡಿದಾಗ ಅದು ಹೆಬ್ಬಾವು ಎಂದು ಗೊತ್ತಾಗಿದೆ. ನಂತರ ಅವರು ತನ್ನ ಜೊತೆ ಕೆಲಸ ಮಾಡುತ್ತಿದ್ದ ಬೇರೆ ಕೆಲಸಗಾರರನ್ನು ಕರೆದು ಹಾವನ್ನು ಹಿಡಿದು ಚೀಲಗೆ ತುಂಬುವ ಸಮಯದಲ್ಲಿ ಕೈಯಿಂದ ಹೆಬ್ಬಾವು ತಪ್ಪಿಸಿಕೊಂಡಿದೆ. ಅದನ್ನು ಮತ್ತೆ ಹಿಡಿಯಲು ಹೋದ ನಾಯರ್ ಅವರ ಕುತ್ತಿಗೆಗೆ ಹಾವು ಸುತ್ತಿಕೊಂಡಿದೆ.

    https://www.youtube.com/watch?v=_UM_PMB6iVI#action=share

    ನಾಯರ್ ಅವರ ಕುತ್ತಿಗೆಗೆ ಹಾವು ಸುತ್ತಿಕೊಂಡಿದ್ದನ್ನು ನೋಡಿದ ಬೇರೆ ಕಾರ್ಮಿಕರು ಭಯಗೊಂಡು ನಾಯರ್ ಅವರ ರಕ್ಷಣೆ ಮಾಡದೇ ನಿಂತು ಬಿಟ್ಟಿದ್ದಾರೆ. ಆದರೆ ಅಲ್ಲಿದ್ದ ಕೆಲ ಸ್ಥಳೀಯರು ನಾಯರ್ ಅವರು ಉಸಿರುಗಟ್ಟಿರುವುದನ್ನು ಕಂಡು ಹಾವನ್ನು ಕುತ್ತಿಗೆಯಿಂದ ಬಿಡಿಸಿ ಅದನ್ನು ಚೀಲಕ್ಕೆ ಹಾಕಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿದ್ದಾರೆ.

    ಅರಣ್ಯ ಅಧಿಕಾರಿಗಳು ಹಾವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವು ಕುತ್ತಿಗೆಗೆ ಗಟ್ಟಿಯಾಗಿ ಸುತ್ತಿಕೊಂಡ ಕಾರಣ ಉಸಿರಾಟದ ತೊಂದರೆಯಿಂದ ಅಸ್ವಸ್ತಗೊಂಡಿದ್ದ ಭುವಚಂದ್ರನ್ ನಾಯರ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಅವರ ಈಗ ಚೇತರಿಸಿಕೊಳ್ಳುತ್ತಿದ್ದಾರೆ.

  • ಮೀಟರ್ ಬಡ್ಡಿ ದಂಧೆ- ಮೂವರು ಮಕ್ಕಳ ಕತ್ತು ಕೊಯ್ದು ತಾಯಿ ಆತ್ಮಹತ್ಯೆಗೆ ಯತ್ನ!

    ಮೀಟರ್ ಬಡ್ಡಿ ದಂಧೆ- ಮೂವರು ಮಕ್ಕಳ ಕತ್ತು ಕೊಯ್ದು ತಾಯಿ ಆತ್ಮಹತ್ಯೆಗೆ ಯತ್ನ!

    ಚಿಕ್ಕಬಳ್ಳಾಪುರ: ಮೀಟರ್ ಬಡ್ಡಿದಂಧೆಕೋರರ ಕಾಟದಿಂದ ಬೇಸತ್ತ ತಾಯಿ, ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

    ತಾಯಿ ರಾಜಮ್ಮ, ತನ್ನ ಮಕ್ಕಳಾದ ಮನೋಜ್, ಅಮೃತ, ಭೂಮಿಕಾಳ ಕತ್ತನ್ನು ಬ್ಲೇಡ್ ನಿಂದ ಕೊಯ್ದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಸದ್ಯ ನಾಲ್ವರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ರಾಜಮ್ಮ ತನ್ನ ಮೂವರು ಮಕ್ಕಳ ಕತ್ತನ್ನು ಬ್ಲೇಡ್ ನಿಂದ ಕೊಯ್ದು ಬಳಿಕ ಜಿರಳೆ ಔಷಧಿ ನುಂಗಿ, ತನ್ನ ಕತ್ತನ್ನು ಕೂಡ ಕೊಯ್ದುಕೊಳ್ಳುವ ಮೂಲಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕತ್ತು ಕೊಯ್ಯುವಾಗ ನೋವಿನಿಂದ ಚೀರಾಡುತ್ತಿರುವ ಮಕ್ಕಳ ಧ್ವನಿ ಅಕ್ಕ-ಪಕ್ಕದ ಮನೆಯವರಿಗೆ ಕೇಳಿಸಿದೆ. ಕೂಡಲೇ ನೆರೆಹೊರೆಯವರು ಸ್ಥಳಕ್ಕೆ ದೌಡಾಯಿಸಿ ಎಲ್ಲರನ್ನು ರಕ್ಷಿಸಿದ್ದಾರೆ. ಸದ್ಯ ತಾಯಿ ಸೇರಿ ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಂತಾಮಣಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಅಕ್ಕ-ಪಕ್ಕದ ಮನೆಯ ಮಹಿಳೆಯರು ಬಡ್ಡಿಗೆ ಹಣ ಕೊಡುತ್ತಿದ್ದರು. ಹೀಗಾಗಿ ನಾನು 1 ಲಕ್ಷದಷ್ಟು ಹಣವನ್ನು ಬಡ್ಡಿಗೆ ಪಡೆದುಕೊಂಡಿದ್ದೆ. ಆದ್ರೆ ಪತಿ ವೆಂಕಟೇಶ್ ಕುಡಿತದ ದಾಸನಾಗಿದ್ದರಿಂದ ಬಡ್ಡಿ ಕಟ್ಟಿಲ್ಲ. ಸದ್ಯ ನನಗೆ ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಬಡ್ಡಿಯವರು ಪದೇ ಪದೇ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದಾರೆ. ಪರಿಣಾಮ ಮನನೊಂದು ಈ ಕೃತ್ಯ ಎಸಗಿರುವುದಾಗಿ ಮಹಿಳೆ ತಿಳಿಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆಯನ್ನು ಹೋಗಲಾಡಿಸಬೇಕು ಅಂತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಪ್ರಯತ್ನ ಮಾಡುತ್ತಿದ್ದರೂ, ಕೆಲವೆಡೆ ದಂಧೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಇದೊಂದು ನೈಜ ಉದಾಹರಣೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮರದ ಕೊಂಬೆಗಳ ಮಧ್ಯೆ ಕುತ್ತಿಗೆ ಸಿಲುಕಿ ಗಂಡು ಜಿರಾಫೆ ಸಾವು

    ಮರದ ಕೊಂಬೆಗಳ ಮಧ್ಯೆ ಕುತ್ತಿಗೆ ಸಿಲುಕಿ ಗಂಡು ಜಿರಾಫೆ ಸಾವು

    ಬೀಜಿಂಗ್: ಮರದ ಕೊಂಬೆಗಳ ಮಧ್ಯೆ ಕುತ್ತಿಗೆ ಸಿಲುಕಿ ಜಿರಾಫೆ ಸಾವನ್ನಪ್ಪಿರೋ ಘಟನೆ ಚೀನಾದ ಪ್ರಾಣಿ ಸಂಗ್ರಹಾಲಯದಲ್ಲಿ ನಡೆದಿದೆ.

    ಮರದ ಕೊಂಬೆಗಳ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದ ಜಿರಾಫೆಯನ್ನು ರಕ್ಷಿಸಲು ಮೃಗಾಲಯದ ಸಿಬ್ಬಂದಿ ಸತತ 5 ಗಂಟೆಗಳ ಕಾಲ ಹರಸಾಹಸಪಟ್ಟಿದ್ದಾರೆ. ಕೊನೆಗೆ ಮರದ ಒಂದು ಕಡೆಯ ಕೊಂಬೆಯನ್ನು ತುಂಡರಿಸಿದ್ದಾರೆ. ಆದ್ರೆ ಜಿರಾಫೆ ಅದಾಗಲೇ ಮೃತಪಟ್ಟಿದೆ ಅಂತ ಸಿಬ್ಬಂದಿ ತಿಳಿಸಿದ್ದಾರೆ.

    ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿರುವ ಕುನ್ನಿಂಗ್ ಪ್ರಾಣಿ ಸಂಗ್ರಹಾಲಯದ 4 ಜಿರಾಫೆಗಳಿವೆ. ಇವುಗಳಲ್ಲಿ ಹಾಯ್ ರಾಂಗ್ ಹಿರಿಯ ಜಿರಾಫೆಯಾಗಿದೆ. ಕಳೆದ 5 ವರ್ಷದಿಂದ ರಾಂಗ್ ಇದೇ ಝೂನಲ್ಲಿ ವಾಸಿಸುತ್ತಿದೆ.

    ಹಾಯ್ ರಾಂಗ್ ಯಾವತ್ತೂ ಉತ್ಸಾಹದಿಂದ ಇರುತ್ತಿದ್ದ. ಝೂ ಆವರಣದಲ್ಲಿ ಮರದ ಸುತ್ತ ಆಟವಾಡುತ್ತಿದ್ದ ಸಂದರ್ಭದಲ್ಲಿ ಆತನ ಕುತ್ತಿಗೆ ಮರದ ಕೊಂಬೆಗಳ ಮಧ್ಯೆ ಸಿಲುಕಿ ಟ್ವಿಸ್ಟ್ ಆಗಿದೆ. ಆತನ ರಕ್ಷಣೆಗೆ ಹರಸಾಹಸಪಟ್ರೂ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಅಂತ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

    ಮೃಗಾಲಯದ 6 ಮಂದಿ ಸಿಬ್ಬಂದಿ ಜಿರಾಫೆಯನ್ನು ರಕ್ಷಿಸಲು ಪ್ರಯತ್ನಿಸುವ ದೃಶ್ಯವನ್ನು ಇತರ ಸಿಬ್ಬಂದಿ ಸೆರೆಹಿಡಿದಿದ್ದು, ಈ ದೃಶ್ಯವನ್ನು ಚೀನಾ ವೆಬ್ ಸೈಟ್ ಗಳು ಪ್ರಕಟಿಸಿದೆ. ವಿಡಿಯೋದಲ್ಲಿ 5 ಗಂಟೆಗಳ ಕಾಲ ಜಿರಾಫೆಯ ಕುತ್ತಿಗೆಯನ್ನು ಕೊಂಬೆಗಳ ಮಧ್ಯದಿಂದ ಯಾವುದೇ ಅಪಾಯವಾಗದಂತೆ ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದ್ರೆ ಇವರ ಪ್ರಯತ್ನ ವಿಫಲವಾಗಿದೆ. ಜಿರಾಫೆಯನ್ನು ರಕ್ಷಿಸಲು ಹೋಗಿ ಸಿಬ್ಬಂದಿಯ ಕೈಗೆ ಗಾಯಗಳಾಗಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

    https://www.youtube.com/watch?v=v4lDvPQR31c

  • ತರಬೇತಿ ವೇಳೆ 14ರ ಬಾಲಕಿಯ ಕುತ್ತಿಗೆಗೆ ಚುಚ್ಚಿಕೊಳ್ತು ಬಾಣ!

    ತರಬೇತಿ ವೇಳೆ 14ರ ಬಾಲಕಿಯ ಕುತ್ತಿಗೆಗೆ ಚುಚ್ಚಿಕೊಳ್ತು ಬಾಣ!

    ಕೋಲ್ಕತ್ತಾ: ತರಬೇತಿ ವೇಳೆ 14 ವರ್ಷ ವಯಸ್ಸಿನ ಬಾಲಕಿಯ ಕುತ್ತಿಗೆಯ ಬಲಭಾಗದಲ್ಲಿ ಬಾಣವೊಂದು ಚುಚ್ಚಿಕೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಈ ಘಟನೆ ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯಲ್ಲಿರೋ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆದಿದೆ. ಬಾಲಕಿ ಫಝಿಲಾ ಖತುನ್‍ಗೆ ಬಾಣ ಚುಚ್ಚಿಕೊಂಡಿತ್ತು. ಸದ್ಯ ಶಸ್ತ್ರ ಚಿಕಿತ್ಸೆಯ ಮೂಲಕ ಬಾಲಕಿಯ ಕುತ್ತಿಗೆಯಲ್ಲಿ ಚುಚ್ಚಿಕೊಂಡಿದ್ದ ಬಾಣವನ್ನು ಹೊರತೆಗೆಯಲಾಗಿದೆ ಅಂತ ಬೊಲ್ಪುರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಏನಿದು ಘಟನೆ?: ನಾವು ನಾಲ್ಕು ಮಂದಿ ತರಬೇತಿ ಪಡೆಯುತ್ತಿದ್ದೆವು. ಇಬ್ಬರು ಅಭ್ಯಾಸ ಮುಗಿಸಿದ್ದರು. ನಾನು ಮತ್ತು ಫಝಿಲಾ ಅಭ್ಯಾಸ ಮಾಡುತ್ತಿದ್ದೆವು. ನಾನು ಬಾಣ ಬಿಟ್ಟ ವೇಳೆ ಫಝಿಲಾ ಅಚಾನಕ್ ಆಗಿ ಎದುರು ಬಂದಳು. ಪರಿಣಾಮ ಚೂಪಾದ ಬಾಣ ಆಕೆಯ ಕುತ್ತಿಗೆ ಹೊಕ್ಕಿತು ಅಂತ ಜ್ಯುವೆಲ್ ಶೇಕ್ ಮಾಧ್ಯಮಕ್ಕೆ ತಿಳಿಸಿದ್ದಾಳೆ.

    ಶಸ್ತ್ರ ಚಿಕಿತ್ಸೆ ಬಳಿಕ ಬಾಲಕಿ ಫಝಿಲಾ ಮಾತನಾಡಿದ್ದು, ಜ್ಯುವೆಲ್ ಅಭ್ಯಾಸ ಮಾಡುತ್ತಿದ್ದುದನ್ನು ನಾನು ಗಮನಿಸಲಿಲ್ಲ. ನಾನು ತುಂಬಾ ಹತ್ತಿರ ಹೋದ ಕಾರಣ ಬಾಣ ಚುಚ್ಚಿಕೊಳ್ತು. ಈ ವೇಳೆ ಸ್ಥಳದಲ್ಲಿ ಯಾವ ತರಬೇತುದಾರರೂ ಇರಲಿಲ್ಲ ಅಂತ ಹೇಳಿದ್ದಾಳೆ.

    ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.