Tag: NDRF

  • Biparjoy ಸೈಕ್ಲೋನ್‌ನಿಂದ ತೊಂದರೆಗೆ ಸಿಲುಕಿದ್ದ ಮಗುವನ್ನು ಸಿಮೆಂಟ್ ಚೀಲದಲ್ಲಿ ಸಾಗಿಸಿದ ಸಿಬ್ಬಂದಿ

    Biparjoy ಸೈಕ್ಲೋನ್‌ನಿಂದ ತೊಂದರೆಗೆ ಸಿಲುಕಿದ್ದ ಮಗುವನ್ನು ಸಿಮೆಂಟ್ ಚೀಲದಲ್ಲಿ ಸಾಗಿಸಿದ ಸಿಬ್ಬಂದಿ

    ಗಾಂಧಿನಗರ: ಗುಜರಾತ್ (Gujarat) ರಾಜ್ಯದಲ್ಲಿ ಬಿಪರ್‌ಜಾಯ್ ಚಂಡಮಾರುತ ರಣಕೇಕೆ ಹಾಕುತ್ತಿದ್ದು, ಸ್ಥಳೀಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆಯ ಹಿನ್ನೆಲೆ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಶಾಲೆಯೊಂದರ 127 ಜನರನ್ನು ರಾಷ್ಟ್ರೀಯ ವಿಪತ್ತು ಪಡೆ (NDRF) ಸ್ಥಳಾಂತರಿಸಿದೆ.

    ಬಿಪರ್‌ಜಾಯ್ ಚಂಡಮಾರುತದ (Biparjoy Cyclone) ಪರಿಣಾಮದಿಂದಾಗಿ ಗುಜರಾತ್ ರಾಜ್ಯ ತತ್ತರಿಸಿ ಹೋಗಿದ್ದು, ಸುಮಾರು 74,000 ಮಂದಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅದೇ ರೀತಿ ಕರಾವಳಿಯ ಸಮೀಪವಿರುವ ಪ್ರದೇಶಗಳ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ದೇವಭೂಮಿ ದ್ವಾರಕ ಜಿಲ್ಲೆಯ ರೂಪನ್ ಬಂದರ್ ಶಾಲೆಯಲ್ಲಿ ಆಶ್ರಯ ನೀಡಲಾಗಿತ್ತು. ಆದರೆ ಅಲ್ಲೂ ನೀರಿನ ಮಟ್ಟ ಏರಿಕೆಯಾಗಲು ಪ್ರಾರಂಭಿಸಿದಾಗ ಅಲ್ಲಿಂದ ಇನ್ನೊಂದು ಶಾಲೆಗೆ ಸ್ಥಳಾಂತರಿಸಲು (Evacuated) ನಿರ್ಧರಿಸಲಾಯಿತು. ಇದನ್ನೂ ಓದಿ: Cyclone Biparjoy: ಗುಜರಾತ್‍ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಸೈಕ್ಲೋನ್

    ಮೊಣಕಾಲಿನವರೆಗೂ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆ ಮಕ್ಕಳನ್ನು ಹಾಗೂ ಆ ಪ್ರದೇಶದ ಜನರನ್ನು ಸ್ಥಳಾಂತರ ಮಾಡಲಾಗಿದೆ. ಈ ವೇಳೆ ನವಜಾತ ಶಿಶುವೊಂದನ್ನು ಮಳೆಯಿಂದ ಯಾವುದೇ ಹಾನಿಯಾಗದ ರೀತಿಯಲ್ಲಿ ಬಟ್ಟೆಯಲ್ಲಿ ಸುತ್ತಿ ಬಳಿಕ ಖಾಲಿ ಸಿಮೆಂಟ್ ಚೀಲದಲ್ಲಿ (Cement Bag) ಇಟ್ಟುಕೊಂಡು ಸ್ಥಳಾಂತರಿಸಲಾಯಿತು. ಇದನ್ನೂ ಓದಿ: ಕಾಶ್ಮೀರ ಗಡಿಯಲ್ಲಿ ಒಳ ನುಸುಳುತ್ತಿದ್ದ ಐವರು ವಿದೇಶಿ ಭಯೋತ್ಪಾದಕರ ಹತ್ಯೆ

    ಶಿಶುವನ್ನು (Infant) ಸಿಮೆಂಟ್ ಚೀಲದಲ್ಲಿ ಹಾಕಿಕೊಂಡು ಸ್ಥಳಾಂತರಿಸುವ ವಿಡಿಯೋ ವೈರಲ್ ಆಗಿದ್ದು, ಎನ್‌ಡಿಆರ್‌ಎಫ್ ಸಿಬ್ಬಂದಿ ಮಗುವನ್ನು ಚೀಲದಲ್ಲಿ ಹಾಕಿಕೊಂಡು ನೀರಿನ ಮಟ್ಟ ಕಡಿಮೆ ಇರುವಲ್ಲಿ ಕುಟುಂಬಸ್ಥರಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ. ಅಲ್ಲದೇ ಉಳಿದ ಮಕ್ಕಳ ಕೈ ಹಿಡಿದುಕೊಂಡು ನೀರಿನಲ್ಲಿ ಕರೆದುಕೊಂಡು ಹೋಗುವ ಹಾಗೂ ಶಾಲೆಯಿಂದ ಸಾಮಗ್ರಿಗಳನ್ನು ಸಾಗಿಸುವ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಮಣಿಪುರ ಹಿಂಸಾಚಾರ – ಕೇಂದ್ರ ಸಚಿವರ ಮನೆಗೆ ಬೆಂಕಿಯಿಟ್ಟ ಕಿಡಿಗೇಡಿಗಳು

    ಒಟ್ಟು 82 ಪುರುಷರು, 27 ಮಹಿಳೆಯರು, 15 ಮಕ್ಕಳು ಹಾಗೂ 3 ನರ್ಸಿಂಗ್ ಸಿಬ್ಬಂದಿಯನ್ನು ಶಾಲೆಯಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಬಿಪರ್‌ಜಾಯ್ ಚಂಡಮಾರುತದ ಪರಿಣಾಮ ಗುಜರಾತ್‌ನ ಜಖೌ ಬಂದರಿನ ಬಳಿ ಶುಕ್ರವಾರ ಸಂಜೆ 125-140 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿದ್ದು, ಭೂಕುಸಿತವುಂಟಾಗಿದೆ. ವಿಪರೀತ ಗಾಳಿ ಮಳೆಯ ಹಿನ್ನೆಲೆ ವಿವಿಧ ಸ್ಥಳಗಳಲ್ಲಿ 524ಕ್ಕೂ ಅಧಿಕ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಸುಮಾರು ಒಂದು ಸಾವಿರ ಹಳ್ಳಿಗಳಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ. ಇದನ್ನೂ ಓದಿ: Cyclone Biparjoy : 140 ಕಿ.ಮೀ ವೇಗದಲ್ಲಿ ಆರ್ಭಟ – ಗುಜರಾತ್‍ ತೀರದಲ್ಲಿಅಲ್ಲೋಲ ಕಲ್ಲೋಲ

    ಬಿಪರ್‌ಜಾಯ್ ಚಂಡಮಾರುತದಿಂದ ಉಂಟಾದ ಭೂಕುಸಿತದಿಂದ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಅತುಲ್ ಕರ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: Biparjoy Cyclone: 100 ಕಿ.ಮೀ ವೇಗದಲ್ಲಿ ತೀರ ತಾಕಿದ ತೂಫಾನ್- ಗುಜರಾತ್ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

  • Turkey, Syria Earthquakeː ವರ್ಲ್ಡ್ ಬ್ಯಾಂಕ್‌ನಿಂದ 1.78 ಬಿಲಿಯನ್ ಡಾಲರ್ ನೆರವು ಘೋಷಣೆ

    Turkey, Syria Earthquakeː ವರ್ಲ್ಡ್ ಬ್ಯಾಂಕ್‌ನಿಂದ 1.78 ಬಿಲಿಯನ್ ಡಾಲರ್ ನೆರವು ಘೋಷಣೆ

    ಅಂಕಾರ: ಸರಣಿ ಭೂಕಂಪಗಳಿಂದ ತತ್ತರಿಸುತ್ತಿರುವ ಟರ್ಕಿ (Turkey) ಹಾಗೂ ಸಿರಿಯಾ (Syria) ದೇಶದ ನೆರವಿಗೆ ವಿಶ್ವಬ್ಯಾಂಕ್ (World Bank) ಧಾವಿಸಿದ್ದು, 1.78 ಬಿಲಿಯನ್ ಡಾಲರ್ ನೆರವು ಘೋಷಣೆ ಮಾಡಿದೆ.

    ಟರ್ಕಿ ಹಾಗೂ ಸಿರಿಯಾ ಮತ್ತೆ ಚೇತರಿಕೆ ಕಾಣಲು ಸಹಾಯ ಮಾಡುವ ಸಲುವಾಗಿ ವಿಶ್ವಬ್ಯಾಂಕ್ (World Bank) ನೆರವು ಘೋಷಣೆ ಮಾಡಿದೆ. ತಕ್ಷಣವೇ ಸಹಾಯ ಒದಗಿಸುತ್ತಿದ್ದೇವೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ತಿಳಿಸಿದ್ದಾರೆ. ಇದನ್ನೂ ಓದಿ: Earthquakeː ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟೆಕ್ಕಿಯಲ್ಲ- ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ

    ಈ ಬೆನ್ನಲ್ಲೇ ಅಮೆರಿಕ (USA) ಸಹ 70.19 ಕೋಟಿ ರೂ. ನೆರವು ಘೋಷಣೆ ಮಾಡಿದೆ. ಲಕ್ಷಾಂತರ ಜನರಿಗೆ ತುರ್ತಾಗಿ ಅಗತ್ಯವಿರುವ ಆಹಾರ, ಆಶ್ರಯ, ಆರೋಗ್ಯ ಸೇವೆಗಳನ್ನು ಪೂರೈಸಲು ನೆರವು ನೀಡಲಾಗುತ್ತಿದೆ ಎಂದು ಹೇಳಿದೆ.

    ಸರಣಿ ಭೂಕಂಪಗಳಿಂದ (Earthquake) ತತ್ತರಿಸುತ್ತಿರುವ ಟರ್ಕಿಯಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನ ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ರಕ್ಷಣಾ ಕಾರ್ಯಚರಣೆಯಲ್ಲಿ ಅಮೆರಿಕ, ರಷ್ಯಾ, ಚೀನಾ ಭಾರತದ ರಕ್ಷಣಾ ತಂಡಗಳು ಭಾಗಿಯಾಗಿವೆ. ಬದುಕುಳಿದರ ಶೋಧಕ್ಕಾಗಿ ಹೊಸ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: Turkey, Syria Earthquakeː ಮೈಕ್ರೋಫೋನ್, ಡ್ರೋನ್, ರೊಬೋಟ್ ತಂತ್ರಜ್ಞಾನ ಬಳಸಿ ಜನರ ರಕ್ಷಣೆ

    ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಥರ್ಮಲ್ ಕ್ಯಾಮೆರಾಗಳನ್ನ ಹೊಂದಿರುವ ಚಿಕ್ಕ ವಾಹನಗಳಿಂದ ಮೈಕ್ರೋಫೋನ್ ಕಳುಹಿಸಿ ಬದುಕಿರುವ ಜನರನ್ನು ಹುಡುಕಲಾಗುತ್ತಿದೆ. ಡ್ರೋನ್ (Drone) ಕ್ಯಾಮೆರಾಗಳು ಮತ್ತು ರೋಬೋಟ್ ಗಳನ್ನು ಬಳಸಲಾಗುತ್ತಿದೆ. ಸಣ್ಣ, ಅತಿಸಣ್ಣ ಪ್ರದೇಶಗಳಲ್ಲಿ ಆಕ್ಸಿಜನ್ ಪೈಪ್‌ಗಳನ್ನ (Oxygen Pipe) ಕಳುಹಿಸಿ ಉಸಿರಾಟದ ಮೂಲಕ ಜನರ ಇರುವಿಕೆಯನ್ನು ಖಚಿತಪಡಿಸಕೊಳ್ಳಲಾಗುತ್ತಿದೆ. ಗುರುವಾರ 44 ಗಂಟೆಗಳಿಂದ ಕಟ್ಟಡದ ಅವಶೇಷಗಳ ಅಡಿಯಲ್ಲಿದ್ದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.

    ಮೃತರ ಸಂಖ್ಯೆ 21 ಸಾವಿರಕ್ಕೆ ಏರಿಕೆ: ಈ ನಡುವೆ ಟರ್ಕಿ ಮತ್ತು ಸಿರಿಯಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 21 ಸಾವಿರಕ್ಕೆ ಏರಿಕೆಯಾಗಿದೆ. ಸದ್ಯದಮಟ್ಟಿಗೆ ಟರ್ಕಿಯಲ್ಲಿ 17,674 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ ಕನಿಷ್ಠ 3,377 ಜನರು ಸಾವನ್ನಪ್ಪಿದ್ದಾರೆ. ಈವರೆಗೆ 70 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಸುಮಾರು 3 ಸಾವಿರಕ್ಕೂ ಹೆಚ್ಚು ಕಟ್ಟಡಗಳು ನೆಲಕಚ್ಚಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Turkey, Syria Earthquakeː ಮೈಕ್ರೋಫೋನ್, ಡ್ರೋನ್, ರೊಬೋಟ್ ತಂತ್ರಜ್ಞಾನ ಬಳಸಿ ಜನರ ರಕ್ಷಣೆ

    Turkey, Syria Earthquakeː ಮೈಕ್ರೋಫೋನ್, ಡ್ರೋನ್, ರೊಬೋಟ್ ತಂತ್ರಜ್ಞಾನ ಬಳಸಿ ಜನರ ರಕ್ಷಣೆ

    ಅಂಕಾರಾ/ನವದೆಹಲಿ: ಸರಣಿ ಭೂಕಂಪಗಳಿಂದ (Earthquake) ತತ್ತರಿಸುತ್ತಿರುವ ಟರ್ಕಿಯಲ್ಲಿ (Turkey) ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನ ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ರಕ್ಷಣಾ ಕಾರ್ಯಚರಣೆಯಲ್ಲಿ ಅಮೆರಿಕ (USA), ರಷ್ಯಾ (Russia), ಚೀನಾ (China) ಭಾರತದ ರಕ್ಷಣಾ ತಂಡಗಳು ಭಾಗಿಯಾಗಿವೆ. ಬದುಕುಳಿದರ ಶೋಧಕ್ಕಾಗಿ ಹೊಸ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ.

    ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಥರ್ಮಲ್ ಕ್ಯಾಮೆರಾಗಳನ್ನ ಹೊಂದಿರುವ ಚಿಕ್ಕ ವಾಹನಗಳಿಂದ ಮೈಕ್ರೋಫೋನ್ (Microphone) ಕಳುಹಿಸಿ ಬದುಕಿರುವ ಜನರನ್ನು ಹುಡುಕಲಾಗುತ್ತಿದೆ. ಡ್ರೋನ್ ಕ್ಯಾಮರಾಗಳು (Drone Camera) ಮತ್ತು ರೊಬೋಟ್ ಗಳನ್ನು ಬಳಸಲಾಗುತ್ತಿದೆ. ಸಣ್ಣ, ಅತಿಸಣ್ಣ ಪ್ರದೇಶಗಳಲ್ಲಿ ಆಕ್ಸಿಜನ್ ಪೈಪ್‌ಗಳನ್ನ (Oxygen Pipe) ಕಳುಹಿಸಿ ಉಸಿರಾಟದ ಮೂಲಕ ಜನರ ಇರುವಿಕೆಯನ್ನು ಖಚಿತಪಡಿಸಕೊಳ್ಳಲಾಗುತ್ತಿದೆ. ಗುರುವಾರ 44 ಗಂಟೆಗಳಿಂದ ಕಟ್ಟಡದ ಅವಶೇಷಗಳ ಅಡಿಯಲ್ಲಿದ್ದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.

    ಈ ನಡುವೆ ಟರ್ಕಿ ಮತ್ತು ಸಿರಿಯಾದಲ್ಲಿ ಸಾವನ್ನಪ್ಪಿದರ ಸಂಖ್ಯೆ 16,000ಕ್ಕೆ ಏರಿದೆ. ಟರ್ಕಿಯಲ್ಲಿ ಕನಿಷ್ಠ 12,873 ಜನರು ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ ಕನಿಷ್ಠ 3,142 ಜನರು ಸಾವನ್ನಪ್ಪಿದ್ದಾರೆ. ಈವರೆಗೆ 60 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿ ಸರ್ಕಾರ ಹೇಳಿದೆ. ಇದನ್ನೂ ಓದಿ: Earthquakeː ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟೆಕ್ಕಿಯಲ್ಲ- ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ

    ಟರ್ಕಿ ತಲುಪಿದ ಭಾರತದ 6ನೇ ವಿಮಾನ: ಟರ್ಕಿಗೆ ಭಾರತದ ನೆರವು ಮುಂದುವರಿದಿದೆ. ಗುರುವಾರ ವಾಯುಸೇನೆಯ 6ನೇ ವಿಮಾನ ಹೆಚ್ಚುವರಿ ವೈದ್ಯಕೀಯ ಸಾಮಾಗ್ರಿಗಳು ಹೊತ್ತು ತೆರಳಿದೆ. ಇದರಲ್ಲಿ 44 ಮಂದಿ ತಂತ್ರಜ್ಞರಿದ್ದು ಟರ್ಕಿಯಲ್ಲಿ ವೈದ್ಯಕೀಯ ನೆರವು ನೀಡಲಿದ್ದಾರೆ. ಇದಕ್ಕೂ ಮುನ್ನ ಎನ್‌ಡಿಆರ್‌ಎಫ್ (NDRF) ತಂಡಗಳು ಹಾಗೂ ವೈದ್ಯರನ್ನ ಭಾರತ ಕಳುಹಿಸಿತ್ತು. ಇದನ್ನೂ ಓದಿ: Turkey, Syria Earthquake: 7,900ಕ್ಕೇರಿದ ಸಾವಿನ ಸಂಖ್ಯೆ – ಅವಶೇಷಗಳಡಿ ಕೇಳುತ್ತಿದೆ ಸಂತ್ರಸ್ತರ ಚೀತ್ಕಾರ

    ಬೆಂಗಳೂರು ಮೂಲದ ಟೆಕ್ಕಿ ಸುಳಿವಿಲ್ಲ: ಟರ್ಕಿಯಲ್ಲಿ ನಾಪತ್ತೆಯಾಗಿರುವ ಬೆಂಗಳೂರು ಮೂಲದ ಟೆಕ್ಕಿ (Bengaluru Techie) ಸುಳಿವು ಸಿಕ್ಕಿಲ್ಲ. ಮಾಹಿತಿಗಳ ಪ್ರಕಾರ ಡೆಹ್ರಾಡೂನ್ ಮೂಲದ ವಿಜಯಕುಮಾರ್ ಎಂದು ತಿಳಿದುಬಂದಿದೆ. ಬೆಂಗಳೂರಿನ ಕಂಪನಿಯೊಂದರಲ್ಲಿ ಪ್ಲ್ಯಾನೆಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ವಿಜಯ್ ಕುಮಾರ್, ಕಳೆದವಾರ ಟರ್ಕಿಯ ಪ್ರಮುಖ ಕೈಗಾರಿಕಾ ಅನಿಲ ಪೂರೈಕೆ ಕಂಪನಿಯಾದ ಕುಲ್ಕು ಗಾಜ್ ಎಂಬ ಕಂಪನಿಗೆ ಕರಗಿದ ಅಸಿಟಿಲೀನ್ ಗ್ಯಾಸ್ ಪ್ಲಾಂಟ್‌ನ ನಿರ್ಮಾಣ ಮತ್ತು ಕಾರ್ಯಾರಂಭ ಹಿನ್ನೆಲೆ ಟರ್ಕಿಗೆ ತೆರಳಿದ್ದರು. ಸದ್ಯ ಅವರ ಹುಡುಕಾಟವೂ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Earthquakeː ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟೆಕ್ಕಿಯಲ್ಲ- ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ

    Earthquakeː ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟೆಕ್ಕಿಯಲ್ಲ- ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ

    ಅಂಕಾರ/ಬೆಂಗಳೂರು: ಭೀಕರ ಭೂಕಂಪದಿಂದಾಗಿ (Earthquake) ನಲುಗಿರುವ ಟರ್ಕಿ (Turkey) ಹಾಗೂ ಸಿರಿಯಾ (Syria) ದೇಶಗಳಲ್ಲಿ ಇಲ್ಲಿಯವರೆಗೆ ಸಾವಿನ ಸಂಖ್ಯೆ 15 ಸಾವಿರಕ್ಕೆ ಏರಿಕೆಯಾದೆ. ಈ ನಡುವೆ ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ (Government Of Karnataka) ಮುಂದಾಗಿದೆ.

    ಟರ್ಕಿ, ಸಿರಿಯಾ ಅವಘಡದಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ನೋಡೆಲ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಟರ್ಕಿ, ಸಿರಿಯಾ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕಿಸಿ ಕನ್ನಡಿಗರ ಮಾಹಿತಿ ಪಡೆಯಲು ಸರ್ಕಾರದಿಂದ ಸೂಚನೆ ನೀಡಿದೆ.

    ಸುಮಾರು 3,000 ಭಾರತೀಯರು ಟರ್ಕಿಯಲ್ಲಿ ವಾಸವಿದ್ದು, ಅವರಲ್ಲಿ 75 ಜನರು ಸಹಾಯವನ್ನು ಕೋರಿ ಕರೆ ಮಾಡಿರುವುದಾಗಿ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಟರ್ಕಿ ಮಾರಣಾಂತಿಕ ಭೂಕಂಪ – ಬೆಂಗಳೂರಿನ ಕಂಪನಿಯ ಉದ್ಯೋಗಿ ನಾಪತ್ತೆ

    ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟಿಕ್ಕಿಯಲ್ಲ: ಟರ್ಕಿಯಲ್ಲಿ ಸಿಲುದ್ದಾರೆ ಎನ್ನಲಾದ ಟೆಕ್ಕಿ ಬೆಂಗಳೂರಿನ (Bengaluru Techie) ವ್ಯಕ್ತಿಯಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆತ ಬೇರೆ ರಾಜ್ಯದಿಂದ ಬಂದು ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ. ಅದೇ ಕಂಪನಿಯಿಂದ ಬ್ಯುಸಿನೆಸ್ ಟ್ರಿಪ್‌ಗಾಗಿ ಟರ್ಕಿಗೆ ತೆರಳಿದ್ದ, ಕಳೆದ ವಾರವಷ್ಟೇ ಬೆಂಗಳೂರು ಕಂಪನಿ ಪರವಾಗಿ ಪ್ರವಾಸ ಕೈಗೊಂಡಿದ್ದ ಎನ್ನಲಾಗಿದೆ.

    ಸದ್ಯ ಭಾರತ ಸರ್ಕಾರ (Government Of India) ಈ ವ್ಯಕ್ತಿ ಪತ್ತೆಗೆ ಮುಂದಾಗಿದೆ. ಇಲ್ಲಿ ತನಕ ವ್ಯಕ್ತಿ ನಾಪತ್ತೆ ಬಗ್ಗೆ ವಿಪತ್ತು ನಿರ್ವಹಣಾ ಸಹಾಯವಾಣಿಗೆ ಯಾವುದೇ ಕರೆಗಳು ಬಂದಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ `ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಪರಸ್ಪರ ಡಿಕ್ಕಿಯಾಗಿ ಆಳವಾದ ಕಂದರಕ್ಕೆ ಉರುಳಿದ ಬಸ್‌, ಕಾರು – 30 ಮಂದಿ ದುರ್ಮರಣ

    ಇದೇ ತಿಂಗಳ ಫೆಬ್ರವರಿ 6ರ ನಸುಕಿನ ಜಾವದಲ್ಲಿ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಕಳೆದ ಮೂರು ದಿನಗಳಲ್ಲಿ 5 ಬಾರಿ ಸತತವಾಗಿ ಭೂಕಂಪ ಸಂಭವಿಸಿದ್ದು ಸಾವಿನ ಸಂಖ್ಯೆ 15 ಸಾವಿರಕ್ಕೆ ತಲುಪಿದೆ. ಈಗಾಗಲೇ ವಿಶ್ವಸಂಸ್ಥೆ ಸಾವಿನ ಸಂಖ್ಯೆ 20 ಸಾವಿರಕ್ಕೆ ಏರಿಕೆಯಾಗಬಹುದು ಎಂದು ಎಚ್ಚರಿಕೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮತ್ತೆ ಪಾಕ್‌ನಿಂದ ದುರ್ಬುದ್ಧಿ – ಟರ್ಕಿಗೆ ಹೊರಟಿದ್ದ NDRF ವಿಮಾನಕ್ಕೆ ನಿರ್ಬಂಧ

    ಮತ್ತೆ ಪಾಕ್‌ನಿಂದ ದುರ್ಬುದ್ಧಿ – ಟರ್ಕಿಗೆ ಹೊರಟಿದ್ದ NDRF ವಿಮಾನಕ್ಕೆ ನಿರ್ಬಂಧ

    ನವದೆಹಲಿ: ಭೂಕಂಪ (Earthquake) ಪೀಡಿತ ಟರ್ಕಿಗೆ (Turkey) ಭಾರತೀಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡವನ್ನು ಕಳುಹಿಸಲು ಭಾರತೀಯ ವಾಯುಪಡೆ ವಿಮಾನಕ್ಕೆ ತನ್ನ ವಾಯು ಪ್ರದೇಶದಲ್ಲಿ ಸಂಚರಿಸಲು ಪಾಕಿಸ್ತಾನ (Pakistan) ನಿರ್ಬಂಧ ಹೇರಿದೆ.

    ಮಂಗಳವಾರ ಮುಂಜಾನೆ ಟರ್ಕಿಗೆ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯು ಪ್ರದೇಶವನ್ನು ನಿರಾಕರಿಸಿದೆ ಎಂದು ವರದಿಗಳು ತಿಳಿಸಿವೆ. ಭಾರತ ಅಗತ್ಯವಿರುವ ದೇಶಗಳಿಗೆ ನೆರವನ್ನು ನೀಡಲು ಮುಂದಾದಾಗ ಅದನ್ನು ತಡೆಯಲು ಪಾಕಿಸ್ತಾನ ಮಾಡಿರುವ 2ನೇ ಪ್ರಯತ್ನ ಇದಾಗಿದೆ.

    ಸೋಮವಾರ ಟರ್ಕಿ ಹಾಗೂ ಸಿರಿಯಾದಲ್ಲಿ 7.9 ತೀವ್ರತೆಯ ಭಾರೀ ಭೂಕಂಪದಿಂದಾದ ದೇಶಗಳು ತತ್ತರಿಸಿ ಹೋಗಿವೆ. ಇದು ಪಶ್ಚಿಮ ಏಷ್ಯಾದ ಇತಿಹಾಸದಲ್ಲಿಯೇ ಅತ್ಯಂತ ವಿನಾಶಕಾರಿ ಭೂಕಂಪ ಎಂದು ಪರಿಗಣಿಸಲಾಗಿದೆ. ಭೀಕರ ಭೂಕಂಪದಿಂದಾಗಿ 5 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇನ್ನೂ ಸಾವಿರಾರು ಜನರು ಶಿಥಿಲಗೊಂಡಿರುವ ಕಟ್ಟಡಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: Turkey – Syria Earthquakeː5 ಸಾವಿರಕ್ಕೇರಿದ ಸಾವಿನ ಸಂಖ್ಯೆ – ಟರ್ಕಿ ತಲುಪಿದ IAF C19 ವಿಮಾನ – ಭಾರತದ ನೆರವಿನ ಹಸ್ತ

    ಎನ್‌ಡಿಆರ್‌ಎಫ್ ತಂಡಗಳು ಈಗಾಗಲೇ ಭೂಕಂಪ ಪೀಡಿತ ದೇಶಗಳಿಗೆ ಸಹಾಯ ಮಾಡಲು ವೈದ್ಯರು ಹಾಗೂ ಇನ್ನಿತರ ಸೌಲಭ್ಯಗಳೊಂದಿಗೆ ಅದಾನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಆದರೆ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಬಳಸಲು ಭಾರತದ ವಿಮಾನಕ್ಕೆ ಅನುಮತಿಯನ್ನು ನಿರಾಕರಿಸಿದೆ.

    ಕಳೆದ ಬಾರಿ 2021 ರಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಭಾರತ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವಿನ ಭಾಗವಾಗಿ 50,000 ಮೆಟ್ರಿಕ್ ಟನ್ ಗೋಧಿಯನ್ನು ಕಳುಹಿಸಲು ನಿರ್ಧರಿಸಿತ್ತು. ಆದರೆ ಪಾಕಿಸ್ತಾನ ಭಾರತಕ್ಕೆ ತನ್ನ ಭೂಪ್ರದೇಶವನ್ನು ಬಳಸದಂತೆ ತಡೆದಿತ್ತು. ಇದನ್ನೂ ಓದಿ: Turkey – Syria Earthquake- ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು

    ಭಾರತದಿಂದ ಅಫ್ಘಾನಿಸ್ತಾನಕ್ಕೆ ಸರಕುಗಳನ್ನು ಕಳುಹಿಸಲು ವಾಘಾ ಗಡಿಯಿಂದ ಪಾಕಿಸ್ತಾನದ ಮಾರ್ಗವಾಗಿ ಟ್ರಕ್‌ಗಳಲ್ಲಿ ಕಳುಹಿಸಲು ಮಾತುಕತೆ ನಡೆಸಿತ್ತು. ಮಾನವೀಯ ನೆರವಿನ ಹಿನ್ನೆಲೆಯಾಗಿ ಬಳಿಕ ಪಾಕಿಸ್ತಾನ ತನ್ನ ಮಾರ್ಗದ ಮೂಲಕ ಟ್ರಕ್‌ಗಳಿಗೆ ನೆರವನ್ನು ಸಾಗಿಸಲು ಅನುಮತಿ ನೀಡಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Turkey – Syria Earthquakeː5 ಸಾವಿರಕ್ಕೇರಿದ ಸಾವಿನ ಸಂಖ್ಯೆ – ಟರ್ಕಿ ತಲುಪಿದ IAF C19 ವಿಮಾನ – ಭಾರತದ ನೆರವಿನ ಹಸ್ತ

    Turkey – Syria Earthquakeː5 ಸಾವಿರಕ್ಕೇರಿದ ಸಾವಿನ ಸಂಖ್ಯೆ – ಟರ್ಕಿ ತಲುಪಿದ IAF C19 ವಿಮಾನ – ಭಾರತದ ನೆರವಿನ ಹಸ್ತ

    ನವದೆಹಲಿ: ಟರ್ಕಿಯಲ್ಲಿ ಸತತವಾಗಿ 5 ಭೂಕಂಪ (Earthquak) ಸಂಭವಿಸಿದ್ದು, ಸರಣಿ ಭೂಕಂಪನದ ಹೊಡೆತಕ್ಕೆ ಸಿಲುಕಿರುವ ಟರ್ಕಿ ಮತ್ತು ಸಿರಿಯಾ (Turkey – Syria) ನಾಮಾವಶೇಷವಾಗುತ್ತಿದೆ. ಜನರು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದು, ಮೃತರ ಸಂಖ್ಯೆ 5,000ಕ್ಕೆ ಏರಿದೆ. ಈ ನಡುವೆ 15 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

    ಮಂಗಳವಾರ ಬೆಳಗ್ಗೆಯೂ 5.6 ಮತ್ತು 5.7 ತೀವ್ರತೆಯಲ್ಲಿ ಭೂಕಂಪನವಾದ ಬಳಿಕ ಟರ್ಕಿ ಮತ್ತು ಸಿರಿಯಾದಲ್ಲಿ ಸಾವಿನ ಸಂಖ್ಯೆ 5 ಸಾವಿರಕ್ಕೆ ಏರಿಕೆಯಾಗಿದೆ. ಗಾಯಾಳುಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಇತ್ತ ಕುಟುಂಬಸ್ಥರು ತಮ್ಮವರನ್ನ ಹುಡುಕಿ ಕೊಡುವಂತೆ ಕಣ್ಣೀರಿಡುತ್ತಿದ್ದಾರೆ. ಮಳೆ ಮತ್ತು ಹಿಮದ ವಾತಾವರಣ ರಕ್ಷಣಾ ಕಾರ್ಯಚರಣೆಗೆ ಭಾರೀ ತೊಂದರೆ ಉಂಟು ಮಾಡುತ್ತಿದ್ದು, ಸವಾಲಿನ ನಡುವೆ ಬದುಕಿಳಿದ ಜನರ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ.

    ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿರುವ ಭೂಕಂಪನದ (Earthquak) ಬಗ್ಗೆ ಆಘಾತ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ (UN) 20,000ಕ್ಕೂ ಅಧಿಕ ಮಂದಿ ಸಾವನ್ನಪ್ಪಬಹುದು ಎಂದು ಅಂದಾಜು ಮಾಡಿದೆ. ಜೊತೆಗೆ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದೆ.

    ಭಾರೀ ಅನಾಹುತ ಸಂಭವಿಸಿರುವ ಹಿನ್ನೆಲೆಯಲ್ಲಿ ಜಾಗತಿಕ ಸಮುದಾಯದ 2 ದೇಶಗಳು ನೆರವಿಗೆ ನಿಂತಿವೆ. ಅಮೆರಿಕ (US), ರಷ್ಯಾ (Russia), ಬ್ರಿಟನ್ ಸೇರಿದಂತೆ 45 ಯುರೋಪಿನ್ ದೇಶಗಳು ನೆರವು ನೀಡಲು ಆರಂಭಿಸಿವೆ. ಟರ್ಕಿಗೆ ಈಗಾಗಲೇ ನೆರವು ಸಿಕ್ಕಿದ್ದು, ಸಿರಿಯಾಗೆ ಇನ್ನಷ್ಟೆ ನೆರವು ತಲುಪಬೇಕಿದೆ. ಇದನ್ನೂ ಓದಿ: Turkey – Syria Earthquakeː ಸಾವಿನ ಸಂಖ್ಯೆ 4 ಸಾವಿರಕ್ಕೆ ಏರಿಕೆ, 15 ಸಾವಿರ ಮಂದಿಗೆ ಗಾಯ- 4,900 ಕಟ್ಟಡಗಳು ಧ್ವಂಸ

    ಭಾರತದಿಂದ ಏನೇನು ನೆರವು?
    ಭಾರತವೂ ಟರ್ಕಿಗೆ ನೆರವು ನೀಡಿದೆ. ಈಗಾಗಲೇ C-19 ವಿಶೇಷ ವಿಮಾನ (C19 Speical Flight) ಟರ್ಕಿ ತಲುಪಿದೆ. ಮೊದಲ ವಿಮಾನದಲ್ಲಿ ದೆಹಲಿ, ಕೋಲ್ಕತ್ತಾ, ಗಾಜಿಯಾಬಾದ್ ಮೂಲದಿಂದ 101 ಸಿಬ್ಬಂದಿಯನ್ನೊಳಗೊಂಡ ಎರಡು ತಂಡಗಳ ಕಳುಹಿಸಿದೆ. ಜೊತೆಗೆ ಭೂಕಂಪನ ಪರಿಹಾರ ಸಾಮಾಗ್ರಿಗಳು ಮತ್ತು ವಿಶೇಷ ತರಬೇತಿ ಹೊಂದಿದ ಶ್ವಾನ ದಳವನ್ನು ಕಳುಹಿಸಿದೆ. ಇದನ್ನೂ ಓದಿ: ಭಾರತದ ಪ್ರತಿಷ್ಠೆ ಹಾಳುಮಾಡಲು ದಿವಾಳಿ ಪಾಕಿಸ್ತಾನ ಸಂಚು- ಇಂಟಲಿಜೆನ್ಸ್ ರಿಪೋರ್ಟ್

    2ನೇ ವಿಮಾನ ಇನ್ನಷ್ಟೆ ಟರ್ಕಿ ತಲುಪಬೇಕಿದ್ದು ವಿಮಾನದಲ್ಲಿ, ಆಗ್ರಾ ಮೂಲದ ಆರ್ಮಿ ಫೀಲ್ಡ್ ಆಸ್ಪತ್ರೆಯು 89 ಸದಸ್ಯರ ವೈದ್ಯಕೀಯ ತಂಡ ಟರ್ಕಿಗೆ ರವಾನೆ ಮಾಡಿದೆ. ತಂಡದಲ್ಲಿ ಆರ್ಥೋಪೆಡಿಕ್ ಸರ್ಜಿಕಲ್ ತಂಡ, ಸಾಮಾನ್ಯ ಶಸ್ತ್ರಚಿಕಿತ್ಸಕ ತಜ್ಞರ ತಂಡ, ವೈದ್ಯಕೀಯ ತಜ್ಞರ ತಂಡಗಳು ಸೇರಿದಂತೆ ಕ್ರಿಟಿಕಲ್ ಕೇರ್ ಸ್ಪೆಷಲಿಸ್ಟ್ ತಂಡಗಳನ್ನು ಒಳಗೊಂಡಿದೆ.

    ಅಲ್ಲದೆ, 30 ಹಾಸಿಗೆಗಳ ವೈದ್ಯಕೀಯ ಸೌಲಭ್ಯವನ್ನು ಸ್ಥಾಪಿಸಲು ಸಿಬ್ಬಂದಿ, ಎಕ್ಸ್-ರೇ ಯಂತ್ರಗಳು, ವೆಂಟಿಲೇಟರ್‌ಗಳು, ಆಮ್ಲಜನಕ ಉತ್ಪಾದನಾ ಘಟಕ, ಕಾರ್ಡಿಯಾಕ್ ಮಾನಿಟರ್‌ಗಳು ಮತ್ತು ಸಂಬಂಧಿತ ಸಾಧನಗಳೊಂದಿಗೆ ಟರ್ಕಿಗೆ ಕಳುಹಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Turkey – Syria Earthquakeː ಸಾವಿನ ಸಂಖ್ಯೆ 4 ಸಾವಿರಕ್ಕೆ ಏರಿಕೆ, 15 ಸಾವಿರ ಮಂದಿಗೆ ಗಾಯ- 4,900 ಕಟ್ಟಡಗಳು ಧ್ವಂಸ

    Turkey – Syria Earthquakeː ಸಾವಿನ ಸಂಖ್ಯೆ 4 ಸಾವಿರಕ್ಕೆ ಏರಿಕೆ, 15 ಸಾವಿರ ಮಂದಿಗೆ ಗಾಯ- 4,900 ಕಟ್ಟಡಗಳು ಧ್ವಂಸ

    ಇಸ್ತಾಂಬುಲ್: ಪ್ರಾಕೃತಿಕ ವಿಕೋಪಕ್ಕೆ ಟರ್ಕಿ (Turkey) – ಸಿರಿಯಾ (Syria) ದೇಶಗಳಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ಒಂದೇ ದಿನ 2 ದೇಶಗಳಲ್ಲಿ 3 ಬಾರಿ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಸಾವಿನ ಸಂಖ್ಯೆ 4 ಸಾವಿರಕ್ಕೆ ಏರಿಕೆಯಾಗಿದೆ. ಸುಮಾರು 15 ಸಾವಿರ ಮಂದಿ ಗಾಯಗೊಂಡಿದ್ದಾರೆ. 4,900 ಕಟ್ಟಡಗಳು ಸಂಪೂರ್ಣ ನೆಲಸಮಗೊಂಡಿವೆ.

    ಟರ್ಕಿಯಲ್ಲಿ ಸೋಮವಾರ ನಸುಕಿನ ಜಾವದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಬೆನ್ನಲ್ಲೇ ಮತ್ತೆರಡು ಬಾರಿ ಭೂಕಂಪ ಸಂಭವಿಸಿದ್ದು, ಕಳೆದ 24 ಗಂಟೆಯಲ್ಲಿ ಸರಿಸುಮಾರು 2,600 ಮಂದಿ ಬಲಿಯಾಗಿದ್ದರು. 8 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದೀಗ ಸಾವಿನ ಸಂಖ್ಯೆ ಹಾಗೂ ಗಾಯಗೊಂಡ ಸಂತ್ರಸ್ತರ ಸಂಖ್ಯೆ ಏರುತ್ತಲೇ ಇದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತದ ಪ್ರತಿಷ್ಠೆ ಹಾಳುಮಾಡಲು ದಿವಾಳಿ ಪಾಕಿಸ್ತಾನ ಸಂಚು- ಇಂಟಲಿಜೆನ್ಸ್ ರಿಪೋರ್ಟ್

    ಟರ್ಕಿಯಲ್ಲಿ 1939ರಲ್ಲಿ 7.8 ತೀವ್ರತೆಯ ಭೂಕಂಪ (1939 Earthquake) ಕಾಣಿಸಿಕೊಂಡಿತ್ತು. ಆಗ ಪೂರ್ವ ಎರ್ಜಿಂಕನ್ ಪ್ರಾಂತ್ಯದಲ್ಲಿ ಸುಮಾರು 33 ಸಾವಿರ ಮಂದಿ ದಾರುಣವಾಗಿ ಸಾವಿಗೀಡಾಗಿದ್ದರು. ಎರ್ಜಿಂಕನ್ ಬಯಲು ಮತ್ತು ಕೆಲ್ಕಿಟ್ ನದಿ ಕಣಿವೆಯಲ್ಲಿ ತೀವ್ರ ಹಾನಿಯನ್ನುಂಟುಮಾಡಿತ್ತು. 360 ಕಿಮೀ ನಷ್ಟು ಭೂಪ್ರದೇಶವನ್ನು ಛಿದ್ರ-ಛಿದ್ರಗೊಳಿಸಿತ್ತು. ಈ ಬಗ್ಗೆ 2003ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯ (Harvard University)  ಅಧ್ಯಯನ ಮಾಡಿತ್ತು. ಆ ನಂತರ ಸಂಭವಿಸಿದ ಅತಿದೊಡ್ಡ ದುರಂತ ಇದಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: 15 ವರ್ಷ ಏರೋಸ್ಪೇಸ್‌ನಲ್ಲಿ ತಯಾರಾಗಿದ್ದ ರಕ್ಷಣಾ ಸಾಮಾಗ್ರಿಗಳ 5 ಪಟ್ಟು ಕಳೆದ 8 ವರ್ಷಗಳಲ್ಲಿ ತಯಾರಾಗಿದೆ: ಮೋದಿ

    ದಕ್ಷಿಣ ಟರ್ಕಿ, ಉತ್ತರ ಸಿರಿಯಾ, ಲೆಬನಾನ್, ಇಸ್ರೇಲ್‌ನಲ್ಲೂ ತೀವ್ರ ಕಂಪನ ಉಂಟಾಗಿದೆ. ಟರ್ಕಿಯ ದಿಯರ್‌ಬಕರ್, ಸಿರಿಯಾದ ಅಲೆಪ್ಪೀ, ಹುಮಾ ನಗರಗಳಲ್ಲಿ ಸಾವಿರಾರು ಕಟ್ಟಡ ನೆಲಸಮವಾಗಿವೆ. 7.8 ರಷ್ಟು ತೀವ್ರತೆಯ ಭೂಕಂಪದ ಬಳಿಕ ಗಂಟೆಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದ್ದು, ಹೆಚ್ಚು ಸಾವು ನೋವಿಗೆ ಕಾರಣವಾಗಿದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

    45 ದೇಶಗಳಿಂದ ನೆರವು: ಈಗಾಗಲೇ ಟರ್ಕಿ, ಸಿರಿಯಾಗೆ ವಿಶ್ವದ 45 ರಾಷ್ಟ್ರಗಳು ನೆರವು ಘೋಷಣೆ ಮಾಡಿವೆ. ಭಾರತ (India) ಸಹ ಎನ್‌ಡಿಆರ್‌ಎಫ್ (NDRF) ಮೊದಲ ತಂಡವನ್ನು ಕಳಿಸಿಕೊಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟರ್ಕಿ, ಸಿರಿಯಾದಲ್ಲಿ ಭಾರೀ ಭೂಕಂಪ – 24 ಗಂಟೆಯಲ್ಲಿ 2,300 ಮಂದಿ ಸಾವು

    ಟರ್ಕಿ, ಸಿರಿಯಾದಲ್ಲಿ ಭಾರೀ ಭೂಕಂಪ – 24 ಗಂಟೆಯಲ್ಲಿ 2,300 ಮಂದಿ ಸಾವು

    ಇಸ್ತಾಂಬುಲ್: ಪ್ರಕೃತಿ ವಿಕೋಪಕ್ಕೆ ಟರ್ಕಿ (Turkey), ಸಿರಿಯಾ (Syria) ದೇಶಗಳಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ಎರಡೂ ದೇಶಗಳಲ್ಲಿ ಕಳೆದ 24 ಗಂಟೆಯಲ್ಲಿ 3 ಬಾರಿ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಭಾರೀ ಸಾವು ನೋವಿಗೆ ಕಾರಣವಾಗಿದೆ.

    ಅನೇಕ ನಗರಗಳು ಸ್ಮಶಾನ ಸದೃಶವಾಗಿ ಮಾರ್ಪಟ್ಟಿವೆ. ಟರ್ಕಿ ಕಾಲಮಾನ ನಸುಕಿನ ಜಾವ 4.17ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ (Earthquake) ತೀವ್ರತೆ 7.8 ದಾಖಲಾಗಿದೆ. ಆಗ್ನೇಯ ಟರ್ಕಿಯ ಗಾಜಿಯಾನ್ ತೆಪ್ ಪ್ರಾಂತ್ಯದಿಂದ 33 ಕಿಲೋಮೀಟರ್ ದೂರದಲ್ಲಿ, 18 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಕಂಡುಬಂದಿದೆ. ಇದನ್ನೂ ಓದಿ: ಸಿರಿಯಾ, ಟರ್ಕಿಯಲ್ಲಿ 7.8 ತೀವ್ರತೆಯಲ್ಲಿ ಭೂಕಂಪನ – 90 ಮಂದಿ ಸಾವು

    ಭೂಕಂಪದ ತೀವ್ರತೆಗೆ ಸಾವಿರಾರು ಕಟ್ಟಡಗಳು ಆಟಿಕೆಗಳ ರೀತಿಯಲ್ಲಿ ನೆಲಸಮಗೊಂಡಿವೆ. ಕಳೆದ 24 ಗಂಟೆಯಲ್ಲಿ ಸರಿಸುಮಾರು 2,300 ಮಂದಿ ಬಲಿಯಾಗಿದ್ದಾರೆ. ಸಾವಿರಾರು ಮಂದಿ ಕಣ್ಮರೆಯಾಗಿದ್ದಾರೆ. 8 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 15 ವರ್ಷ ಏರೋಸ್ಪೇಸ್‌ನಲ್ಲಿ ತಯಾರಾಗಿದ್ದ ರಕ್ಷಣಾ ಸಾಮಾಗ್ರಿಗಳ 5 ಪಟ್ಟು ಕಳೆದ 8 ವರ್ಷಗಳಲ್ಲಿ ತಯಾರಾಗಿದೆ: ಮೋದಿ

    ಟರ್ಕಿಯಲ್ಲಿ 1939ರಲ್ಲಿ 7.8 ತೀವ್ರತೆಯ ಭೂಕಂಪ ಕಾಣಿಸಿಕೊಂಡಿತ್ತು. ಆಗ ಪೂರ್ವ ಎರ್ಜಿಂಕನ್ ಪ್ರಾಂತ್ಯದಲ್ಲಿ ಸುಮಾರು 33 ಸಾವಿರ ಮಂದಿ ದಾರುಣ ಸಾವಿಗೀಡಾಗಿದ್ದರು. ಆ ನಂತರ ಸಂಭವಿಸಿದ ಅತಿದೊಡ್ಡ ದುರಂತ ಇದಾಗಿದೆ ಎಂದು ತಿಳಿದುಬಂದಿದೆ.

    ದಕ್ಷಿಣ ಟರ್ಕಿ, ಉತ್ತರ ಸಿರಿಯಾ, ಲೆಬನಾನ್, ಇಸ್ರೇಲ್‌ನಲ್ಲೂ ತೀವ್ರ ಕಂಪನ ಉಂಟಾಗಿದೆ. ಟರ್ಕಿಯ ದಿಯರ್‌ಬಕರ್, ಸಿರಿಯಾದ ಅಲೆಪ್ಪೀ, ಹುಮಾ ನಗರಗಳಲ್ಲಿ ಸಾವಿರಾರು ಕಟ್ಟಡ ನೆಲಸಮವಾಗಿವೆ. 7.8 ರಷ್ಟು ತೀವ್ರತೆಯ ಭೂಕಂಪದ ಬಳಿಕ ಗಂಟೆಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದ್ದು, ಹೆಚ್ಚು ಸಾವು ನೋವಿಗೆ ಕಾರಣವಾಗಿದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

    45 ದೇಶಗಳಿಂದ ನೆರವು ಘೋಷಣೆ: ಟರ್ಕಿ, ಸಿರಿಯಾದ ಭೂ ಕಂಪನ ಕಂಡು ವಿಶ್ವದ ಹಲವು ರಾಷ್ಟ್ರಗಳು ದಿಗ್ಭ್ರಮೆಗೊಂಡಿವೆ. ಭಾರತದ ಪ್ರಧಾನಿ ಮೋದಿ (Narendra Modi), ಸಂತ್ರಸ್ತ ದೇಶಗಳಿಗೆ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈಗಾಗಲೇ ಎರಡು ಎನ್‌ಡಿಆರ್‌ಎಫ್ (NDRF) ತಂಡ, ವೈದ್ಯಕೀಯ ತಂಡ, ಪರಿಹಾರ ಸಾಮಗ್ರಿಯನ್ನು ಭಾರತ ಸರ್ಕಾರ (Government Of India) ಟರ್ಕಿಗೆ ಕಳಿಸಿಕೊಟ್ಟಿದೆ. ಈ ಬೆನ್ನಲ್ಲೇ ಅಮೆರಿಕ ಜರ್ಮನಿ ಸೇರಿದಂತೆ ವಿಶ್ವದ 45 ರಾಷ್ಟ್ರಗಳು ನೆರವು ಘೋಷಣೆ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟರ್ಕಿಗೆ 100 ಮಂದಿಯ NDRF ತಂಡವನ್ನು ಕಳುಹಿಸಲಿದೆ ಭಾರತ

    ಟರ್ಕಿಗೆ 100 ಮಂದಿಯ NDRF ತಂಡವನ್ನು ಕಳುಹಿಸಲಿದೆ ಭಾರತ

    ನವದೆಹಲಿ: ಭೀಕರ ಭೂಕಂಪಕ್ಕೆ(Earthquake) ತುತ್ತಾಗಿರುವ ಟರ್ಕಿಗೆ ನೆರವು ನೀಡಲು ಭಾರತ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (NDRF) ಮತ್ತು ವೈದ್ಯಕೀಯ ತಂಡ, ಪರಿಹಾರ ಸಾಮಾಗ್ರಿಗಳೊಂದಿಗೆ ಟರ್ಕಿಗೆ (Turkey) ತೆರಳಲಿದೆ.

    ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ನೇತೃತ್ವದಲ್ಲಿ ಪ್ರಧಾನಮಂತ್ರಿಗಳ ಕಚೇರಿಯಲ್ಲಿ (PMO) ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ವಿಶೇಷ ತರಬೇತಿ ಪಡೆದ ಶ್ವಾನದಳ ಮತ್ತು ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಯನ್ನು ಒಳಗೊಂಡ ಎರಡು ಎನ್‌ಡಿಆರ್‌ಎಫ್ (NDRF) ತಂಡಗಳು ಭೂಕಂಪ ಪೀಡಿತ ಪ್ರದೇಶಗಳಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ತೆರಳಲಿವೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    https://twitter.com/_DoguPala/status/1622490169709416452

    “ತರಬೇತಿ ಪಡೆದ ವೈದ್ಯರು ಮತ್ತು ಅರೆವೈದ್ಯರೊಂದಿಗೆ ಅಗತ್ಯ ಔಷಧಿಗಳೊಂದಿಗೆ ವೈದ್ಯಕೀಯ ತಂಡಗಳನ್ನು ಸಹ ಸಿದ್ಧಪಡಿಸಲಾಗುತ್ತಿದೆ. ಟರ್ಕಿ ಸರ್ಕಾರ ಮತ್ತು ಅಂಕಾರಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಇಸ್ತಾನ್‌ಬುಲ್‌ನಲ್ಲಿರುವ ಕಾನ್ಸುಲೇಟ್ ಜನರಲ್ ಕಚೇರಿಯೊಂದಿಗೆ ಸಮನ್ವಯದೊಂದಿಗೆ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗುವುದು” ಎಂದು ಪಿಎಂಒ ಹೇಳಿದೆ. ಇದನ್ನೂ ಓದಿ: ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್‌ನಲ್ಲಿ ಬೈಕ್‌ ಸವಾರನ ಹುಚ್ಚಾಟ

    ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ (Narendra Modi) ಭೂಕಂಪದಲ್ಲಿ ಸಾವನ್ನಪ್ಪಿದ್ದವರಿಗೆ ಸಂತಾಪ ಸೂಚಿಸಿದ್ದರು. ಸಂತ್ರಸ್ತರ ಕುಟುಂಬಗಳಿಗೆ ನನ್ನ ಪ್ರಾಮಾಣಿಕ ಸಂತಾಪ. ಈ ಕಷ್ಟದ ಸಮಯದಲ್ಲಿ ನೆರವು ಮತ್ತು ಬೆಂಬಲವನ್ನು ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿದರು.

    ಮಧ್ಯ ಟರ್ಕಿ ಮತ್ತು ವಾಯುವ್ಯ ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು 1600ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ದೊಡ್ಡ ಕಟ್ಟಡಗಳು ಧರೆಗೆ ಉರುಳಿದ್ದು ಹಲವು ಮಂದಿ ಅವಶೇಷದ ಒಳಗಡೆ ಸಿಲುಕಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಿನ್ಮನೆ ಕಾಯ್ವಾಗ ನಿಂಗೆ NDRF ಯಾವ್ದು, SDRF ಯಾವ್ದು ಗೊತ್ತಿಲ್ಲ – ಅಧಿಕಾರಿ ವಿರುದ್ಧ ಸೋಮಣ್ಣ ಗರಂ

    ನಿನ್ಮನೆ ಕಾಯ್ವಾಗ ನಿಂಗೆ NDRF ಯಾವ್ದು, SDRF ಯಾವ್ದು ಗೊತ್ತಿಲ್ಲ – ಅಧಿಕಾರಿ ವಿರುದ್ಧ ಸೋಮಣ್ಣ ಗರಂ

    ಚಾಮರಾಜನಗರ: ನಿನ್ಮನೆ ಕಾಯ್ವಾಗ ನಿಂಗೆ ಎನ್‍ಡಿಆರ್‌ಎಫ್ (NDRF) ಯಾವುದು, ಎಸ್‍ಡಿಆರ್‌ಎಫ್ (SDRF)ಯಾವುದು ಅಂತ ಗೊತ್ತಿಲ್ಲ ಎಂದು ಅಧಿಕಾರಿಯೊಬ್ಬರ ವಿರುದ್ಧ ಸಚಿವ ವಿ. ಸೋಮಣ್ಣ (V. Somanna) ಕಿಡಿಕಾರಿದ್ದಾರೆ.

    ಚಾಮರಾಜನಗರದಲ್ಲಿ (Chamarajanagara) ಇಂದು ಅಧಿಕಾರಿಗಳ ಸಭೆ ನಡೆಸಿದ ವಿ.ಸೋಮಣ್ಣ ಅವರು, ಮಳೆ ಹಾನಿಗೊಳಗಾದ ತೋಟಗಾರಿಕೆ ಬೆಳೆಗೆ ನೀಡುವ ಪರಿಹಾರದ ಬಗ್ಗೆ ಮಾಹಿತಿ ಕೇಳಿದರು. ಎನ್‍ಡಿಆರ್‌ಎಫ್, ಎಸ್‍ಡಿಆರ್‌ಎಫ್  ಬಗ್ಗೆ ಪ್ರಶ್ನಿಸಿದರು. ಆದರೆ ಇದಕ್ಕೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ನಾಗೇಶ್ವರರಾವ್ ಸಮರ್ಪಕ ಉತ್ತರ ನೀಡಲು ತಡಬಡಾಯಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮೌನವೇಕೆ? – BJPಯಿಂದ ಸೇ-ಸಿದ್ದು ಪೋಸ್ಟರ್ ರಿಲೀಸ್

    ಇದರಿಂದ ಕೋಪಗೊಂಡ ವಿ.ಸೋಮಣ್ಣ, ನಿನ್ಮನೆ ಕಾಯ್ವಾಗ ನಿಂಗೆ ಎನ್‍ಡಿಆರ್‌ಎಫ್ ಯಾವುದು, ಎಸ್‍ಡಿಆರ್‌ಎಫ್ ಯಾವುದು ಅಂತ ಗೊತ್ತಿಲ್ಲ. ನೀನೆಂತಾ ಅಸಿಸ್ಟೆಂಟ್ ಡೈರೆಕ್ಟರ್ ಅಪ್ಪಾ, ರಾಜೀನಾಮೆ ಕೊಟ್ಟು ಮನೆಗೆ ಹೋಗು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಸೀದಿಗಳ ಧ್ವನಿವರ್ಧಕಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ದು ಸರಿಯಲ್ಲ – ಮುತಾಲಿಕ್ ಕಿಡಿ

    Live Tv
    [brid partner=56869869 player=32851 video=960834 autoplay=true]