Tag: NDRF team

  • NDRF ತಂಡದಿಂದ ಹರ್ ಘರ್ ತಿರಂಗಾ ಅಭಿಯಾನ ಜಾಗೃತಿ

    NDRF ತಂಡದಿಂದ ಹರ್ ಘರ್ ತಿರಂಗಾ ಅಭಿಯಾನ ಜಾಗೃತಿ

    ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ‘ಹರ್ ಘರ್ ತಿರಂಗಾ’ ಅಭಿಯಾನದ ಜಾಗೃತಿಯನ್ನು ನಗರದ ಎನ್‍ಡಿಆರ್‌ಎಫ್‍ನ 10ನೇ ಬೆಟಾಲಿಯನ್ ತಂಡ ಮಾಡಿತು.

    ಎನ್‍ಡಿಆರ್‌ಎಫ್ 10 ನೇ ಬೆಟಾಲಿಯನ್‍ನ ಸಿ ಕಂಪನಿ, ಯಲಹಂಕದ ಮಾರುತಿ ನಗರದಲ್ಲಿ ರಾಷ್ಟ್ರ ಬಾವುಟದ ಬಗ್ಗೆ ಜಾಗೃತಿ ಮೂಡಿಸಿತು. ಎನ್‍ಡಿಆರ್‌ಎಫ್‍ನ ಅಸಿಸ್ಟೆಂಟ್ ಕಮಂಡೆಂಟ್ ಜೆ ಸೆಂಥಿಲ್ ಕುಮಾರ್ ನೇತೃತ್ವದಲ್ಲಿ ಈ ಜಾಗೃತಿ ಅಭಿಯಾನ ನಡೆಸಲಾಯಿತು. ಇದನ್ನೂ ಓದಿ: ವೆಂಟಿಲೇಟರ್‌ನಲ್ಲಿ ಸಲ್ಮಾನ್ ರಶ್ದಿ – ಆರೋಗ್ಯ ಸ್ಥಿತಿ ಗಂಭೀರ, ಕಣ್ಣು ಕಳೆದುಕೊಳ್ಳುವ ಸಾಧ್ಯತೆ

    ಕೋಗಿಲು ಕ್ರಾಸ್, ಯಲಹಂಕ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಾಷ್ಟ್ರ ಬಾವುಟದ ಬಗ್ಗೆ ಜಾಗೃತಿ ಮೂಡಿಸಿ, ಮನೆ, ಮನೆಯಲ್ಲಿ ಧ್ವಜವನ್ನು ಹಾರಿಸುವಂತೆ ಮನವಿ ಮಾಡಿಕೊಂಡರು. ಇದನ್ನೂ ಓದಿ: ಇಂದಿನಿಂದ ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನ

    Live Tv
    [brid partner=56869869 player=32851 video=960834 autoplay=true]

  • ತಮಿಳುನಾಡಿನಲ್ಲಿ ಮಳೆ ಅವಾಂತರ – 15 ಸಾವು, ಒಂದು ಸಾವಿರಕ್ಕೂ ಹೆಚ್ಚು ಮನೆಗಳು ನಾಶ

    ತಮಿಳುನಾಡಿನಲ್ಲಿ ಮಳೆ ಅವಾಂತರ – 15 ಸಾವು, ಒಂದು ಸಾವಿರಕ್ಕೂ ಹೆಚ್ಚು ಮನೆಗಳು ನಾಶ

    ಚೆನ್ನೈ: ತಮಿಳುನಾಡಿನಲ್ಲಿ ಕುಂಭದ್ರೋಣ ಮಳೆಯು ಅವಾಂತರ ಸೃಷ್ಟಿಸಿದ್ದು, ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ರಾಜ್ಯಾದ್ಯಂತ 1,000ಕ್ಕೂ ಹೆಚ್ಚು ಗುಡಿಸಲು ಹಾಗೂ ಮನೆಗಳು ನಾಶವಾಗಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

    Chennai rain

    ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಕೆಲವು ದಿನಗಳಿಂದ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಇನ್ನೂ ಗುರುವಾರ ತಡರಾತ್ರಿ ಎಡಬಿಡದೇ ಸುರಿದ ಮಳೆಯಿಂದಾಗಿ ಚೆನ್ನೈನ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, 75,000ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಇತರ ಸರ್ಕಾರಿ ಅಧಿಕಾರಿಗಳು ನಾಗರಿಕರಿಗೆ ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಎಥೆನಾಲ್ ಉತ್ಪಾದನೆಗೆ ಮುಂದಾದ ಕೇಂದ್ರ ಸರ್ಕಾರ

    ಚೆನ್ನೈ ಮಹಾನಗರ ಸಂಪೂರ್ಣ ದ್ವೀಪದಂತಾಗಿದ್ದು, 500ಕ್ಕೂ ಹೆಚ್ಚು ಪ್ರದೇಶಗಳು ಜಲಾವೃತವಾಗಿದೆ. ರಸ್ತೆ, ಮನೆ, ಅಂಗಡಿ, ಕಾರ್ಖಾನೆಗಳಿಗೆ ನೀರು ನುಗ್ಗಿದ್ದು, ಜನ ನೀರನ್ನು ಹೊರ ಹಾಕಲು ಪರದಾಡುತ್ತಿದ್ದಾರೆ. ಅಲ್ಲದೇ ಚೆನ್ನೈನಲ್ಲಿ ಇಂದೂ ಕೂಡ ಶಾಲಾ ಕಾಲೇಜ್‍ಗಳಿಗೆ ರಜೆ ಘೋಷಿಸಲಾಗಿದೆ. ಗುರುವಾರ ಸಂಜೆಯಿಂದ ಏರ್‌ಪೋರ್ಟ್‌ನಲ್ಲಿ ಕಾರ್ಯಾರಂಭಗೊಳಿಸಲಾಗಿದೆ.

    ಚೆನ್ನೈನ ಬಹುತೇಕ ಬಡಾವಣೆಗಳು ಜಲಾವೃತವಾಗಿದ್ದು, ಮನೆಗಳಲ್ಲಿ ಮೊಣಕಾಲುದ್ದ ನೀರು ನುಗ್ಗಿದೆ. ಅಲ್ಲದೇ ಚೆನ್ನೈನ ಚಕ್ರವರ್ತಿ ನಗರ, ಬೆಸೆಂಟ್ ನಗರ, ಕೆಎಂ ಗಾರ್ಡನ್, ವಡಪಳನಿ, ಕೊಯಮತ್ತೂರೂಗೆ ಸಂಪರ್ಕಿಸುವ ರಸ್ತೆ ಧಾರಾಕಾರ ಮಳೆಯಿಂದಾಗಿ ಕೆರೆಯಂತಾಗಿದ್ದು, ರಸೆಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಕಾರಣ ಜನರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಗುಡುಗು ಸಹಿತ ಭಾರೀ ಮಳೆ – 20 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

    ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಳೆಯಿಂದಾಗಿ 100 ಬೆಡ್‍ಗಳು ಜಲಾವೃತವಾಗಿದೆ. ಆಸ್ಪತ್ರೆಯೊಳಗೆ ಮೊಣಕಾಲುದ್ದ ನೀರು ನಿಂತ ಪರಿಣಾಮ ರೋಗಿಗಳು, ಆಸ್ಪತ್ರೆ ಸಿಬ್ಬಂದಿ ಪರದಾಡುವಂತಾಯಿತು ಮತ್ತು 20 ರೋಗಿಗಳನ್ನು ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಮಾಮಲ್ಲಪುರಂ ಬೀಚ್ ಬಳಿ ಇರುವ ದೇವಾಲಯ ಕೂಡ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಚೆನ್ನೈನ ದೊರೈಸ್ವಾಮಿ, ಸೈದಾ ಪೇಟೆಯಲ್ಲಿ ರಸ್ತೆಗಳೆಲ್ಲ ನದಿಯಂತೆ ಕಂಗೊಳಿಸುತ್ತಿದ್ದವು. ಅಂಡರ್ ಪಾಸ್ ಸಂಪೂರ್ಣ ನೀರಿನಿಂದ ಮುಳುಗಡೆಗೊಂಡಿದೆ. ಪೆಟ್ರೋಲ್ ಬಂಕ್‍ಗಳಿಗೂ ಮಳೆ ನೀರು ನುಗ್ಗಿದೆ. ಮಧ್ಯರಾತ್ರಿ ವೇಗವಾಗಿ ಬಂದ ಕಾರ್‍ವೊಂದು ನೀರಿನಲ್ಲಿ ಸಿಲುಕಿಕೊಂಡು ಪರದಾಡುವಂತಾಯಿತು. ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದರು.

    ಮಳೆಯಿಂದಾಗಿ ಚೆನ್ನೈನಲ್ಲಿರುವ ಮದ್ರಾಸ್ ಹೈಕೋರ್ಟ್‍ನ ಆವರಣ ಕೂಡ ಜಲಾವೃತವಾಗಿದೆ ಮತ್ತು ಶ್ರೀಹರಿಕೋಟಾ-ಸುಲ್ಲೂರ್‍ಪೇಟ್ ರಸ್ತೆಯ ಪುಲಿಕಾಟ್ ನದಿ ಉಕ್ಕಿ ಹರಿದಿದೆ. ಉತ್ತರ ಚೆನ್ನೈನಲ್ಲಿ ಬಂಗಾಳಕೊಲ್ಲಿ ಪ್ರಕ್ಷುಬ್ಧವಾಗಿದ್ದು, ಭಾರೀ ಗಾಳಿಯೊಂದಿಗೆ ಅಲೆಗಳು ರಸ್ತೆಗೆ ಅಪ್ಪಳಿಸುತ್ತಿವೆ. ಎನ್‌ಡಿಆರ್‌ಎಫ್ ತಂಡ ಚೆಂಗಲ್‍ಪೇಟೆಯ ತಿರುಪ್ಪೂರ್‌ನಲ್ಲಿ ರಾತ್ರಿಯೆಲ್ಲಾ ಕಾರ್ಯಾಚರಣೆ ನಡೆಸುವ ಮೂಲಕ ಪ್ರವಾಹದಿಂದ ಹೈಟೆನ್ಷನ್ ಕಂಬ ಏರಿದ್ದ ನಾಲ್ವರನ್ನು ರಕ್ಷಿಸಿದೆ. ಚೆನ್ನೈ ಸೇರಿದಂತೆ ಮಳೆ ಪೀಡಿತ ತಮಿಳುನಾಡಿನ ಬಹುತೇಕ ಭಾಗಗಳಲ್ಲಿ ಎನ್‌ಡಿಆರ್‌ಎಫ್ ತಂಡ ಜನರ ರಕ್ಷಣೆ ಮಾಡುತ್ತಿದೆ. ಮತ್ತೊಂದು ಕಡೆ ತಿರುವಳ್ಳೂರ್‌ನಲ್ಲಿ ಧರೆಗೆ ಉರುಳಿದ್ದ ಮರಗಳನ್ನು ತೆರವುಗೊಳಿಸಿದೆ.

    ಚೆನ್ನೈ ಮಳೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಸುಮಾರು 28 ವರ್ಷದ ವ್ಯಕ್ತಿಯನ್ನು ಟಿಪಿ ಚಾತ್ರಂ ಠಾಣೆ ಇನ್ಸ್‌ಪೆಕ್ಟರ್‌ ರಾಜೇಶ್ವರಿ ಖುದ್ದು ಹೆಗಲ ಮೇಲೆ ಹೊತ್ತುಕೊಂಡು, ಇವನ ಉಸಿರಿದೆ. ಇವನನ್ನು ಉಳಿಸಿಕೊಳ್ಳಬೇಕು ಅಂತ ಆಟೋ ಮೂಲಕ ಆಸ್ಪತ್ರೆಗೆ ಸಾಗಿಸಿದರು. ರಾಜೇಶ್ವರಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಇದನ್ನೂ ಓದಿ: ಯಮುನಾ ನದಿಯಲ್ಲಿ ವಿಷಕಾರಿ ನೊರೆ – ಜನರಲ್ಲಿ ಆತಂಕ

    ಸದ್ಯ ಇಂದಿನಿಂದ ಬಂಗಾಳಕೊಲ್ಲಿಯ ವಾಯುಭಾರ ಕುಸಿತ ದುರ್ಬಲಗೊಳ್ಳಲಿದ್ದು, ಮಳೆ ಪ್ರಮಾಣ ಇಳಿಮುಖಗೊಳ್ಳಲಿದೆ. ಈಗ ಮಳೆ ಕಡಿಮೆಯಾದರೂ ಮತ್ತೆ ನವೆಂಬರ್ 13ಕ್ಕೆ ಅಂಡಮಾನ್ ದ್ವೀಪಗಳ ಬಳಿ ವಾಯುಭಾರ ಕುಸಿತಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇನ್ನಷ್ಟು ದಿನ ತಮಿಳುನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ.

  • ರಣ ಮಳೆಗೆ ಮಹಾರಾಷ್ಟ್ರದಲ್ಲಿ 100 ಮಂದಿ ಬಲಿ- 1,000ಕ್ಕೂ ಹೆಚ್ಚು ಮಂದಿ ಸ್ಥಳಾಂತರ

    ರಣ ಮಳೆಗೆ ಮಹಾರಾಷ್ಟ್ರದಲ್ಲಿ 100 ಮಂದಿ ಬಲಿ- 1,000ಕ್ಕೂ ಹೆಚ್ಚು ಮಂದಿ ಸ್ಥಳಾಂತರ

    ಮುಂಬೈ: ಮಹಾರಾಷ್ಟ್ರದಲ್ಲಿ ಎಡಬಿಡದೇ ಸುರಿಯುತ್ತಿರುವ ರಣ ಮಳೆಗೆ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ ಮತ್ತು ಹಲವಾರು ಜಿಲ್ಲೆಗಳಲ್ಲಿ ಭೂ ಕುಸಿತ ಮತ್ತು ಪ್ರವಾಹ ಸಂಭವಿಸಿದೆ.

    ಸಶಸ್ತ್ರ ಪಡೆಗಳು ಮತ್ತು ಎನ್‍ಆರ್‍ಎಫ್ ತಂಡ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ತಕ್ಷಣಕ್ಕೆ ಮಳೆ ನಿಲ್ಲುವಂತೆ ಕಾಣಿಸುತ್ತಿಲ್ಲ. ಅಲ್ಲದೇ ಮಹಾರಾಷ್ಟ್ರದ ಕರಾವಳಿ ಕೊಂಕಣ, ಪುಣೆಯ ರಾಯಗಡ, ರತ್ನಾಗಿರಿ, ಸಿಂಧುದುರ್ಗ್, ಪಶ್ಚಿಮ ಮಹಾರಾಷ್ಟ್ರದ ಸತಾರಾ ಮತ್ತು ಕೊಲ್ಹಾಪುರದಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆಗಳಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆ ಈ ಆರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

    ಶನಿವಾರ ಬೆಳಗ್ಗೆ ಸುರಿದ ಭಾರೀ ಮಳೆಯಿಂದಾಗಿ ದಕ್ಷಿಣ ಗೋವಾದ ದೂಧ್ ಸಾಗರ್ ಮತ್ತು ಸೋನೌಲಿಮ್ ನಡುವಿನ ಪ್ಯಾಸೆಂಜರ್ ರೈಲು ಮತ್ತು ವಶಿಷ್ಠಿ ನದಿ ಉಕ್ಕಿ ಹರಿದ ಪರಿಣಾಮ ಮಹಾರಾಷ್ಟ್ರದ ಚಿಪ್ಲುನ್ ಮತ್ತು ಕಾಮಥೆ ನಡುವಿನ ಪ್ಯಾಸೆಂಜರ್ ರೈಲು ಹಳಿ ತಪ್ಪಿದೆ.

    ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಲವೆಡೆ ಭೂಕುಸಿತ ಮತ್ತು ಪ್ರವಾಹ ಉಂಟಾಗಿದ್ದು, ಸುಮಾರು 136 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿಯೂ ರಾಯಗಡ ಹಾಗೂ ಸತಾರಾ ಜಿಲ್ಲೆಯಲ್ಲಿ ಹೆಚ್ಚಿನ ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಶ್ವಾನದ ಸವಿನೆನಪಿಗೆ ಕಂಚಿನ ಪ್ರತಿಮೆ – ಬಿಡಿಸಲಾಗದ ಮಾಲೀಕ, ಶ್ವಾನದ ನಂಟು

  • ಮುಂಗಾರು ಆರಂಭ- ರಾಜ್ಯಕ್ಕೆ ಎನ್‍ಡಿಆರ್‍ಎಫ್ ತಂಡ ಆಗಮನ

    ಮುಂಗಾರು ಆರಂಭ- ರಾಜ್ಯಕ್ಕೆ ಎನ್‍ಡಿಆರ್‍ಎಫ್ ತಂಡ ಆಗಮನ

    – ಮಳೆಗಾಲ ಮುಗಿಯುವವರೆಗೆ ಮಡಿಕೇರಿಯಲ್ಲೇ ಮೊಕ್ಕಾಂ

    ಮಡಿಕೇರಿ: ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಎನ್‍ಡಿಆರ್‍ಎಫ್ ಸಿಬ್ಬಂದಿ ರಾಜ್ಯಕ್ಕೆ ಆಗಮಿಸಿದ್ದಾರೆ.

    ಕೊಡಗು ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಇನ್ನು ಮುಂಗಾರು ಚುರುಕುಗೊಳ್ಳಲಿದೆ. ಭಾರೀ ಮಳೆ ನಿರೀಕ್ಷೆ ಹಿನ್ನೆಲೆ ಎನ್‍ಡಿಆರ್‍ಎಫ್ ತಂಡ ಮಂಗಳವಾರ ಕೊಡಗು ಜಿಲ್ಲೆಗೆ ಆಗಮಿಸಿದೆ. ಆಂಧ್ರ ಪ್ರದೇಶದ ಗುಂಟೂರಿನಿಂದ ತಂಡ ಆಗಮಿಸಿದ್ದು, 23 ಸಿಬ್ಬಂದಿಯನ್ನೊಳಗೊಂಡ ಬೆಟಾನಿಯನ್ ಮಡಿಕೇರಿಯ ಮೈತ್ರಿ ಹಾಲ್‍ನಲ್ಲಿ ವಾಸ್ತವ್ಯ ಹೂಡಿದೆ. ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪ ಸಂಭವಿಸಿದ ಹಿನ್ನೆಲೆ ಈ ಬಾರಿ ಮಳೆ ಅರಂಭaಕ್ಕೂ ಮುನ್ನವೇ ಎನ್‍ಡಿಆರ್‍ಎಫ್ ಟೀಂ ಜಿಲ್ಲೆಗೆ ಬಂದಿದೆ.

    ತಂಡ ಮಳೆಗಾಲ ಮುಗಿಯುವರೆಗೂ ಜಿಲ್ಲೆಯಲ್ಲಿ ಮೊಕ್ಕಾಂ ಹೊಡಲಿದ್ದು, ಮಳೆಗಾಲ ಎದುರಿಸಲು ಜಿಲ್ಲಾಡಳಿತ ಸಹ ಸಕಲ ಸಿದ್ಧತೆ ಮಾಡಿಕೊಂಡಿದೆ. ಮುಂಗಾರು ಇನ್ನೇನು ರಾಜ್ಯ ಪ್ರವೇಶಿಸಲಿದ್ದು, ಇನ್ನೊಂದೆಡೆ ನಿಸರ್ಗ ಚಂಡಮಾರುತ ಸಹ ಕಾಡುತ್ತಿದೆ. ಈಗಾಗಲೇ ರಾಜ್ಯದ ಹಲವೆಡೆ ಭಾರೀ ಮಳೆ ಸುರಿಯುತ್ತಿದೆ.

  • ಸೆಲ್ಫಿಯಿಂದ ಕಾಲು ಜಾರಿ ನದಿಗೆ ಬಿದ್ದ ಮಂಗ್ಳೂರು ಟೆಕ್ಕಿ – 11 ದಿನವಾದ್ರು ಸಿಕ್ಕಿಲ್ಲ ಮೃತದೇಹ

    ಸೆಲ್ಫಿಯಿಂದ ಕಾಲು ಜಾರಿ ನದಿಗೆ ಬಿದ್ದ ಮಂಗ್ಳೂರು ಟೆಕ್ಕಿ – 11 ದಿನವಾದ್ರು ಸಿಕ್ಕಿಲ್ಲ ಮೃತದೇಹ

    ಚಿಕ್ಕಮಗಳೂರು: ನೀರಿನ ಮಧ್ಯೆ ಬಂಡೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿಹೋಗಿದ್ದ ಯುವಕನ ಮೃತದೇಹ 11 ದಿನಗಳಾದರೂ ಪತ್ತೆಯಾಗಿಲ್ಲ.

    ಕಿರಣ್ ನದಿಯಲ್ಲಿ ಕೊಚ್ಚಿ ಹೋಗಿ 9 ದಿನಗಳ ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್ ಎಫ್) ತಂಡ ಬಂದು ಯುವಕನಿಗಾಗಿ ಹುಡುಕಾಟ ನಡೆಸುತ್ತಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸಾ ಸಮೀಪದ ಅಂಬುತೀರ್ಥ ಜಲಪಾತಕ್ಕೆ ಜುಲೈ 26ರಂದು ಮಂಗಳೂರು ಸಮೀಪದ ತುಂಬೆ ನಿವಾಸಿ ಎಂಜಿನಿಯರ್ ಕಿರಣ್ ಕೊಟ್ಯಾನ್ ತನ್ನ 12 ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದನು. ಆಗ ಅಂಬುತೀರ್ಥದ ಜಲಪಾತದ ಬಳಿ ಬಂಡೆ ಮೇಲೆ ಸೆಲ್ಫಿ ತೆಗೆದು ಕೊಳ್ಳುವಾಗ ಕಾಲು ಜಾರಿಗೆ ನದಿಗೆ ಬಿದ್ದು ಕೊಚ್ಚಿ ಹೋಗಿದ್ದನು.

    ಪೊಲೀಸರು, ಸ್ಥಳೀಯರು ಹಾಗೂ ಸಂಬಂಧಿಕರು ಕಿರಣ್ ಮೃತದೇಹಕ್ಕಾಗಿ ಶೋಧ ನಡೆಸಿದ್ದರು ಸಿಕ್ಕಿರಲಿಲ್ಲ. ಕಳೆದ 11 ದಿನಗಳಿಂದಲೂ ಸ್ಥಳೀಯರು ಹಾಗೂ ಪೊಲೀಸರು ನದಿಯ ದಡದಲ್ಲಿ ಮೃತದೇಹ ಸಿಲುಕಿರಬಹುದೆಂದು ಶೋಧ ನಡೆಸುತ್ತಿದ್ದರು. ಆದರೆ ಮೃತದೇಹ ಮಾತ್ರ ಪತ್ತೆಯಾಗಿರಲಿಲ್ಲ. ನಂತರ ಕಿರಣ್ ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಸಂಬಂಧಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

    ಶನಿವಾರ ಎನ್‍ಡಿಆರ್ ಎಫ್ ತಂಡ ಸ್ಥಳಕ್ಕೆ ಭೇಟಿ ನೀಡಿ ನದಿಗೆ ಇಳಿದು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದೆ. ಆದರೆ ನೀರಿನ ರಭಸ ಕೂಡ ಅಷ್ಟೇ ವೇಗವಾಗಿದೆ. ಆದರೂ ಎನ್‍ಡಿಆರ್ ಎಫ್ ತಂಡ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಹಿಂದೆ ಶೃಂಗೇರಿ ತಾಲೂಕಿನ ಮೇಗೂರಿನ ಅಶೋಕ್ ಬಸ್ತಿಮಠ ಹಳ್ಳದಲ್ಲಿ ಕೊಚ್ಚಿಹೋಗಿದ್ದಾಗಲೂ ಎನ್‍ಡಿಆರ್ ಎಫ್ ತಂಡ ನಾಲ್ಕು ದಿನ ಮೃತದೇಹಕ್ಕಾಗಿ ಶೋಧ ನಡೆಸಿ ನೀರಿನ ವೇಗ ಕಂಡು ವಾಪಸ್ಸಾಗಿತ್ತು.