Tag: NDPS Act

  • ಮುಂಬೈ | 232 ಕೆಜಿ ಮಾದಕ ವಸ್ತು ಕಳ್ಳಸಾಗಾಣಿಕೆ ಕೇಸ್‌ – 8 ಪಾಕ್‌ ಪ್ರಜೆಗಳಿಗೆ 20 ವರ್ಷ ಜೈಲು

    ಮುಂಬೈ | 232 ಕೆಜಿ ಮಾದಕ ವಸ್ತು ಕಳ್ಳಸಾಗಾಣಿಕೆ ಕೇಸ್‌ – 8 ಪಾಕ್‌ ಪ್ರಜೆಗಳಿಗೆ 20 ವರ್ಷ ಜೈಲು

    ಮುಂಬೈ: ಗುಜರಾತ್‌ ಕರಾವಳಿಯಲ್ಲಿ 7 ಕೋಟಿ ರೂ. ಮೌಲ್ಯದ 232 ಕೆಜಿ ತೂಕದ ಮಾದಕ ವಸ್ತು ಸಾಗಾಣಿಕೆ ವೇಳೆ ಸಿಕ್ಕಿಬಿದ್ದಿದ್ದ 8 ಪಾಕಿಸ್ತಾನಿ (Pakistan) ಪ್ರಜೆಗಳಿಗೆ ಮುಂಬೈನ ವಿಶೇಷ ನ್ಯಾಯಾಲಯ (Mumbai Court) ಬುಧವಾರ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ನ್ಯಾಯಾಲಯವು ಅಪರಾಧಿಗಳಿಗೆ ತಲಾ 2 ಲಕ್ಷ ರೂ. ದಂಡ ವಿಧಿಸಿದೆ.

    ಮಾದಕ ವಸ್ತು ವಿರೋಧಿ ಕಾನೂನಿನಡಿಯಲ್ಲಿ 8 ವ್ಯಕ್ತಿಗಳನ್ನು ದೋಷಿ ಎಂದು ಎನ್‌ಡಿಪಿಎಸ್ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಧೀಶ ಶಶಿಕಾಂತ್ ಬಂಗಾರ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.

    2015ರಲ್ಲಿ ಗುಜರಾತ್ ಕರಾವಳಿಯಲ್ಲಿ 6.96 ಕೋಟಿ ರೂ. ಮೌಲ್ಯದ 232 ಕೆ.ಜಿ ಹೆರಾಯಿನ್ ಸಾಗಿಸುತ್ತಿದ್ದ ಬೋಟ್‌ನಿಂದ ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ 8 ಮಂದಿಯನ್ನು ಬಂಧಿಸಿದ್ದರು. ಅಲ್ಲದೇ ದೋಣಿಯಲ್ಲಿದ್ದ 11 ಬ್ಯಾರಲ್‌ಗಳು, 20 ಪ್ಲಾಸ್ಟಿಕ್ ಪೌಚ್‌ಗಳಲ್ಲಿದ್ದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು. ಪರೀಕ್ಷೆ ವೇಳೆ ಹೆರಾಯಿನ್ ಎಂದು ತಿಳಿದು ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಪರಾಧಿಗಳು ಮೂರು ಸ್ಯಾಟ್‌ಲೈಟ್ ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳ ಜೊತೆಗೆ ಜಿಪಿಎಸ್ ನ್ಯಾವಿಗೇಷನ್ ಚಾರ್ಟ್‌ಗಳನ್ನು ಹೊಂದಿದ್ದರು. ಅವರನ್ನು ಬಂಧಿಸಿದ ಬಳಿಕ ದಕ್ಷಿಣ ಮುಂಬೈನ ಯೆಲ್ಲೋ ಗೇಟ್ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.

  • ಗಾಂಜಾ ಅಪಾಯಕಾರಿ ಮಾದಕ ವಸ್ತುವಲ್ಲ- ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಬೆಂಬಲ

    ಗಾಂಜಾ ಅಪಾಯಕಾರಿ ಮಾದಕ ವಸ್ತುವಲ್ಲ- ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಬೆಂಬಲ

    ನವದೆಹಲಿ: ಗಾಂಜಾ ಹಾಗೂ ಗಾಂಜಾ ಅಂಟನ್ನು ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಹೊರಗಿಡುವ ಸಂಬಂಧ ವಿಶ್ವಸಂಸ್ಥೆ ಮಹತ್ವದ ನಿರ್ಧಾರ ಕೈಗೊಂಡಿದೆ.

    ಮಾದಕ ದ್ರವ್ಯ ವಸ್ತುಗಳಿಗೆ ಸಂಬಂಧಿಸಿದ ಆಯೋಗದ ಅಧಿವೇಶನ ಡಿಸೆಂಬರ್ 2ರಿಂದ 4ರವರೆಗೆ ನಡೆಯಿತು. ಈ ಅಧಿವೇಶನದಲ್ಲಿ ಭಾರತ ಸೇರಿದಂತೆ 27 ದೇಶಗಳು ಪರವಾಗಿ ಮತ ಹಾಕಿದ್ದರಿಂದ ನಿರ್ಣಯ ಅಂಗೀಕಾರವಾಗಿದೆ.

    ಬೆಂಬಲ ನೀಡಿದದವರು ಯಾರು?
    ಮಾದಕ ವಸ್ತುಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಆಯೋಗದ 1961ರ ಒಪ್ಪಂದದ 4ನೇ ಅನುಚ್ಛೇದದಡಿ ಹೆರಾಯಿನ್‌ನಂತಹ ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಲ್ಲಿ ಗಾಂಜಾ ಇತ್ತು. ಈ ಪಟ್ಟಿಯಿಂದ ಗಾಂಜಾವನ್ನು ಹೊರಗಿಡಲು 53 ಸದಸ್ಯ ರಾಷ್ಟ್ರಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವು.

    ಭಾರತ, ಅಮೆರಿಕ, ಯುರೋಪ್‌ ಒಕ್ಕೂಟದ ಬಹುತೇಕ ದೇಶಗಳು ಸೇರಿ 27 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾವಣೆ ಮಾಡಿದ್ದರೆ ಚೀನಾ, ಪಾಕಿಸ್ತಾನ, ರಷ್ಯಾ ಸೇರಿ 25 ದೇಶಗಳು ವಿರುದ್ಧ ಹಾಕಿದವು. ಉಕ್ರೇನ್‌ ತಟಸ್ಥವಾಗಿ ನಿಂತಿತು.

    ಏನು ಲಾಭ?
    ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಲ್ಲಿದ್ದ ಕಾರಣ ಗಾಂಜಾವನ್ನು ಔಷಧಿ ಹಾಗೂ ಚಿಕಿತ್ಸೆಗೆ ಬಳಸಲು ಸಾಧ್ಯವಾಗಿರಲಿಲ್ಲ. ವಿಶ್ವಸಂಸ್ಥೆ ಈ ಪಟ್ಟಿಯಿಂದ ಗಾಂಜಾವನ್ನು ಹೊರಗಡೆ ಇಟ್ಟ ಕಾರಣ ಇನ್ನು ಮುಂದೆ ಬಳಸಬಹುದಾಗಿದೆ.

    ಭಾರತದಲ್ಲಿ ಮುಂದೇನು?
    ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ(ಎನ್‌ಡಿಪಿಎಸ್‌) 1985ರ ಪ್ರಕಾರ ಪ್ರಕಾರ ಗಾಂಜಾ ಉತ್ಪಾದನೆ, ಮಾರಾಟ, ಖರೀದಿ, ವಶದದಲ್ಲಿ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಆರೋಪ ಸಾಬೀತಾದರೆ 6 ತಿಂಗಳು ಜೈಲು ಮತ್ತು ಗರಿಷ್ಟ 10 ಸಾವಿರ ರೂ. ದಂಡ ವಿಧಿಸಬಹುದಾಗಿದೆ.

    ಎನ್‌ಡಿಪಿಎಸ್‌ ಕಾಯ್ದೆಯ ಅಡಿಯಲ್ಲಿ ಈಗಾಗಲೇ ಸ್ಯಾಂಡಲ್‌ವುಡ್‌, ಬಾಲಿವುಡ್‌ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದ್ದು ಅರೆಸ್ಟ್‌ ಮಾಡಲಾಗಿದೆ. ಈಗ ಭಾರತ ನಿರ್ಣಯದ ಪರವಾಗಿ ಮತದಾನ ಮಾಡಿದ್ದು ಮುಂದಿನ ದಿನಗಳಲ್ಲಿ ಕಠಿಣವಾಗಿರುವ ಎನ್‌ಡಿಪಿಎಸ್‌ ಕಾಯ್ದೆ ಮೃದುವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಈ ವಿಚಾರದದ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಹೇರಾಯಿನ್‌ ಇರುವ ಪಟ್ಟಿಯಲ್ಲಿ ಗಾಂಜಾವನ್ನು ಸೇರಿಸಿದ್ದು ತಪ್ಪು. ಗಾಂಜಾವನ್ನು ಸೇವಿಸಿ ಸಮಸ್ಯೆಯಾಗಿದೆ ಎಂದು ಹೇಳಿಕೊಳ್ಳುವ ಮಂದಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅಫೀಮು ಸೇವನೆಯಿಂದ ಹೆಚ್ಚಿನ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ.

    ಭಾರತದಲ್ಲಿ ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಗಾಂಜಾವನ್ನ ಹೊರಗಡೆ ಇಡಬೇಕಾದರೆ ಡ್ರಗ್‌ ಮತ್ತು ಕಾಸ್ಮೆಟಿಕ್‌ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಯಾವ ನಿರ್ಧಾರವನ್ನು ಪ್ರಕಟಿಸುತ್ತದೆ ಎಂಬ ಕುತೂಹಲ ಮೂಡಿದೆ.

  • ಇಡಿ ಬಳಿಕ ಮತ್ತೊಂದು ಸಂಕಷ್ಟದಲ್ಲಿ ಸುಶಾಂತ್ ಪ್ರೇಯಸಿ ರಿಯಾ

    ಇಡಿ ಬಳಿಕ ಮತ್ತೊಂದು ಸಂಕಷ್ಟದಲ್ಲಿ ಸುಶಾಂತ್ ಪ್ರೇಯಸಿ ರಿಯಾ

    -ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು

    ಮುಂಬೈ: ಬಾಲಿವುಡ್ ನಟಿ ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರ ವಿರುದ್ಧ ಎನ್‍ಡಿಪಿಎಸ್ (ಮಾದಕ ವಸ್ತುಗಳು ಹಾಗೂ ಮತ್ತು ಬರಿಸುವ ವಸ್ತುಗಳ ನಿಯಂತ್ರಣ ಕಾಯ್ದೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

    ಈಗಾಗಲೇ ಇಡಿಯಲ್ಲಿ ರಿಯಾ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ವಿಚಾರಣೆಯನ್ನು ಸಹ ಎದುರಿಸಿದ್ದಾರೆ. ಇಡಿ ಅಧಿಕಾರಿಗಳು ಡ್ರಗ್ಸ್ ಡೀಲರ್ ಜೊತೆ ರಿಯಾ ಸಂಪರ್ಕ ಹೊಂದಿರೋದನ್ನ ಪತ್ತೆ ಮಾಡಿದ್ದರು. ಈ ಹಿನ್ನೆಲೆ ಸುಶಾಂತ್ ಮತ್ತು ರಿಯಾ ನಡೆಸಿದ್ದ ವಾಟ್ಸಪ್ ಸಂದೇಶಗಳ ಸ್ಕ್ರೀನ್ ಶಾಟ್ ಫೋಟೋಗಳನ್ನ ಎನ್‍ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ)ಗೆ ವರ್ಗಾಯಿಸಿದ್ದರು. ಇಡಿ ಕಳುಹಿಸಿದ ದಾಖಲೆಗಳನ್ವಯ ಎನ್‍ಸಿಬಿ ಪ್ರಕರಣ ದಾಖಲಿಸಿಕೊಂಡಿದೆ.

    ರಿಯಾರನ್ನ ವಿಚಾರಣೆಗೆ ಒಳಪಡಿಸಿದ್ದಾಗ ಇಡಿ ಅಧಿಕಾರಿಗಳ ನಾಲ್ಕು ಮೊಬೈಲ್, ಒಂದು ಐಪ್ಯಾಡ್ ಮತ್ತು ಲ್ಯಾಪ್‍ಟಾಪ್ ವಶಕ್ಕೆ ಪಡೆದುಕೊಂಡಿದ್ದರು. ನಾಲ್ಕು ಮೊಬೈಲ್ ಗಳಲ್ಲಿ ರಿಯಾ ಬಳಸುತ್ತಿದ್ದ ಎರಡು ಸೆಟ್ ಗಳಿದ್ದವು. ಮೊಬೈಲ್ ಗಳನ್ನು ಫೊರೆನಿಕ್ಸ್ ಲ್ಯಾಬ್ ಗೆ ಕಳುಹಿಸಿದ್ದಾಗ ರಿಯಾ ಮತ್ತು ಸುಶಾಂತ್ ನಡುವಿನ ಚಾಟ್ ಡ್ರಗ್ಸ್ ಜಾಲದ ಬಗ್ಗೆ ಮಾಹಿತಿ ನೀಡಿದ್ದವು. ಹೀಗಾಗಿ ಎನ್‍ಸಿಗೆ ಇಡಿ ಸುಧೀರ್ಘವಾದ ಪತ್ರ ಬರೆದು ಪ್ರಕರಣದ ಮಾಹಿತಿ ನೀಡಿತ್ತು. ಪತ್ರದಲ್ಲಿ ಎಂಡಿಎಂಎ ಡ್ರಗ್ಸ್, ಗಾಂಜಾ, ಎಲ್‍ಸಿಡಿ ಡ್ರಗ್ ಹೆಸರುಗಳನ್ನು ಇಡಿ ಉಲ್ಲೇಖಿಸಿತ್ತು. ಇದರ ಜೊತೆ ರಿಯಾ ವ್ಯವಹರಿಸುತ್ತಿದ್ದ ಕೆಲ ಡ್ರಗ್ ಡೀಲರ್ ಗಳ ಮೊಬೈಲ್ ನಂಬರ್ ಸಹ ನೀಡಿತ್ತು. ಇದನ್ನೂ ಓದಿ: ಡ್ರಗ್ಸ್ ಸೇವನೆ, ಮಾರಾಟ ಆರೋಪ- ರಿಯಾ ಚಕ್ರವರ್ತಿ ವಕೀಲ ಸ್ಪಷ್ಟನೆ

    ರಿಯಾ ನಡೆಸಿದ ಚಾಟ್ ನಲ್ಲಿ ಚಹಾ ಅಥವಾ ಕಾಫಿ ಅಥವಾ ನೀರಿನಲ್ಲಿ ಒಂದೆರಡು ಹನಿ (ದ್ರವ ರೂಪದ ಡ್ರಗ್) ಸೇರಿಸಿ. 30 ರಿಂದ 40 ನಿಮಿಷದಲ್ಲಿ ಅದು ತನ್ನ ಕೆಲಸ ಆರಂಭಿಸುತ್ತದೆ ಎಂಬ ಸಂದೇಶ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಸುಶಾಂತ್ ಸೇವಿಸುತ್ತಿದ್ದ ಪಾನೀಯಗಳಲ್ಲಿ ರಿಯಾ ಮಾದಕ ವಸ್ತು ಬೆರೆಸುತ್ತಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಸರ್ ನಿಧನದ ಬಳಿಕ ಮನೆಯಲ್ಲಿದ್ದ ಡ್ರಗ್ ಸಿಗರೇಟ್  ರೋಲ್ ಮಾಯವಾಯ್ತು: ಸುಶಾಂತ್ ಮನೆಯ ಕುಕ್