Tag: nda

  • 5 ಗ್ಯಾರಂಟಿ ಕೊಡಿ ಅಂತ ಜನ ಕೇಳಿದ್ರಾ? – ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

    5 ಗ್ಯಾರಂಟಿ ಕೊಡಿ ಅಂತ ಜನ ಕೇಳಿದ್ರಾ? – ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

    – ಕುಮಾರಣ್ಣ ಚನ್ನಪಟ್ಟಣಕ್ಕೆ ಒಂದೂವರೆ ಸಾವಿರ ಕೋಟಿ ಅನುದಾನ ತಂದಿದ್ದಾರೆ

    ರಾಮನಗರ: 5 ಗ್ಯಾರಂಟಿ ಕೊಡಿ ಅಂತ ಜನ ಕೇಳಿದ್ರಾ? ಹಾಲಿನ ಬೆಂಬಲ ಬೆಲೆ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದ್ದಾರೆ. ಕೋವಿಡ್‌ 2ನೇ ಹಂತದಲ್ಲಿ ರಾಮನಗರ ಚನ್ನಪಟ್ಟಣದಲ್ಲಿ (Chnnapatna) ಪ್ರತಿ ಕುಟುಂಬಕ್ಕೆ ಕುಮಾರಣ್ಣ ಅವರು ರೇಷನ್ ಕಿಟ್ ಹಂಚಿದ್ರು. ಕಾಂಗ್ರೆಸ್ ನಾಯಕರು ಮಹದೇವಪ್ಪ ನಿಂಗೂ ಫ್ರೀ… ಕಾಕಾ ಪಾಟೀಲ್ ನಿನಗೂ ಫ್ರೀ… ಕಾಂಗ್ರೆಸ್ಸನ್ನು ನಂಬಿದರೆ ಏನಾಗುತ್ತೆ ಅನ್ನೋದಕ್ಕೆ ಜನರಿಗೆ ಇದೊಂದು ಅದ್ಭುತ ಪಾಠ ಎಂದು ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಕಿಡಿಕಾರಿದರು.

    ಒಂದು ಅವಕಾಶ ಕೊಡಿ
    2 ಚುನಾವಣೆಗಳಲ್ಲಿ ನನ್ನನ್ನ ಕುತಂತ್ರದಿಂದ ಸೋಲಿಸಿದ್ರು. ರಾಮನಗರದಲ್ಲಿ ಗಿಫ್ಟ್ ಕೊಟ್ಟಿ ಸೋಲಿಸಿದ್ರು. ಈಗಲೂ ರಾತ್ರಿ 4 ಗಂಟೆಗೆ ಬಂದು ಕೂಪನ್ ಕೊಡಬಹುದು. ರೆಷನ್ ಕಾರ್ಡ್ ಕೂಪನ್ ಕೊಡ್ತಾರೆ, ಇದು ಕಾಂಗ್ರೆಸ್ ನಾಯಕರ ಗಿಫ್ಟಾ? ನನಗೆ ಈಗ ಒಂದು ಅವಕಾಶ ಕೊಡಿ ಎಂದು ನಿಖಿಲ್‌ ಮನವಿ ಮಾಡಿದ್ರು.

    ನೀರಾವರಿ ಯೋಜನೆಗೆ ಭದ್ರಬುನಾದಿ ಹಾಕಿರೋದು ಮಾಜಿ ಪ್ರಧಾನಿ ದೇವೇಗೌಡರು. ಸತ್ಯಗಾಲ‌ ಮಂಚಿನಬೇಲಿ ಸೇರಿದಂತೆ ಹಲವು ಹಳ್ಳಿಗಳಿಗೆ ಶಾಶ್ವತ ನೀರಾವರಿ ಯೋಜನೆ ಮಾಡಬೇಕಂತ ಕುಮಾರಸ್ವಾಮಿ ಅವರನ್ನ ಆಯ್ಕೆ ಮಾಡಿದರು. ಅದಕ್ಕಾಗಿಯೇ ಕುಮಾರಣ್ಣ ಅವರು ರಾಮನಗರಕ್ಕೆ ರಾಜೀನಾಮೆ ಕೊಟ್ಟು ಚನ್ನಪಟ್ಟಣ ಉಳಿಸಿಕೊಂಡರು.

    ಕುಮಾರಣ್ಣ ಚನ್ನಪಟ್ಟಣ ಅಭಿವೃದ್ಧಿಗೆ ಒಂದೂವರೆ ಸಾವಿರ ಕೋಟಿ ಅನುದಾನ ತಂದಿದ್ದಾರೆ. ತಾಲ್ಲೂಕಿನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನ ಮಾಡಿದ್ದಾರೆ. 150 ಕೋಟಿ ವೆಚ್ಚದಲ್ಲಿ ಮೊದಲ ಹಂತದಲ್ಲಿ ರೇಷ್ಮೆ ಮಾರುಕಟ್ಟೆ ಮಾಡೋದಕ್ಕೆ ಕುಮಾರಸ್ವಾಮಿ ಅವರ ಕೊಡುಗೆ ಇದೆ ಎಂದು ತಿಳಿಸಿದರು.

    ಹಾಸನದಲ್ಲಿ ಹುಟ್ಟಿದ್ದಾರೆ ರಾಮನಗರಕ್ಕೆ ಏನ್ ಸಂಬಂದ ಅಂತ ವಿರೋಧಿಗಳು ಹೇಳ್ತಾರೆ. ಅಧಿಕಾರ ಇರಲಿ ಬಿಡಲಿ ಜನರ ಸಂಪರ್ಕ ಹೊಂದಿದ್ದೇವೆ. ರಾಮನಗರ ಜಿಲ್ಲಾದ್ಯಂತ ಅನೇಕ ಕಾಮಾಗಾರಿಗಳು ಕುಮಾರಣ್ಣನ ಕಾಲದಲ್ಲಿ ಆಗಿದೆ ಎಂದು ಸಾಧನೆಗಳನ್ನು ಬಣ್ಣಿಸಿದರು.

    25,000 ಜನಕ್ಕೆ ಉದ್ಯೋಗ:
    ರಾಮನಗರ ಮತ್ತು ಮಂಡ್ಯದ ಮಧ್ಯ ಭಾಗದಲ್ಲಿ ಕೈಗಾರಿಕಾ ಸ್ಥಾಪನೆಗೆ ಸರಣಿ ಸಭೆ ಮಾಡ್ತಿದ್ದಾರೆ. 25 ಸಾವಿರ ಜನಕ್ಕೆ ಉದ್ಯೋಗವಕಾಶ ಕಲ್ಪಿಸಲಾಗುತ್ತೆ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದ್ರು. ಈ ಭಾಗದಲ್ಲಿ ಕಾರ್ಖಾನೆ ತಂದು ಸ್ಥಾಪನೆ ಮಾಡ್ತಿವಿ ಉದ್ಯೋಗ ಸೃಷ್ಟಿ ಮಾಡ್ತೀವಿ. ನಿಮ್ಮ ಮನೆಯ ಮಗನಾಗಿ ಜೊತೆಯಲ್ಲಿದ್ದು ಕೆಲಸ ಮಾಡ್ತಿನಿ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಮನವಿ ಮಾಡಿದ್ರು.

  • ಚನ್ನಪಟ್ಟಣ ಚುನಾವಣೆ ಅನುಕಂಪದ ಮೇಲೆ ಅಲ್ಲ, ಅಭಿವೃದ್ಧಿ ಮೇಲೆ ನಡೆಯೋ ಚುನಾವಣೆ: ನಿಖಿಲ್

    ಚನ್ನಪಟ್ಟಣ ಚುನಾವಣೆ ಅನುಕಂಪದ ಮೇಲೆ ಅಲ್ಲ, ಅಭಿವೃದ್ಧಿ ಮೇಲೆ ನಡೆಯೋ ಚುನಾವಣೆ: ನಿಖಿಲ್

    ರಾಮನಗರ: ಚನ್ನಪಟ್ಟಣದ ವಕೀಲರ ಸಂಘ ಆಯೋಜಿಸಿದ್ದ ಸಭೆಯಲ್ಲಿ ಎನ್‌ಡಿಎ ಅಭ್ಯರ್ಥಿ ತಾಲ್ಲೂಕಿನ ವಕೀಲರ ಬಳಿ ಮತ ಯಾಚನೆ ಮಾಡಿದರು.

    ಸಭೆಯಲ್ಲಿ ಮಾತನಾಡಿದ ಅವರು, ಇದು ನನ್ನ ಅನಿರೀಕ್ಷಿತ ಚುನಾವಣೆ. ಇನ್ನೂ 3.5 ವರ್ಷ ಮಾತ್ರ ಬಾಕಿ ಇದೆ. ನನಗೆ ಒಂದು ಅವಕಾಶ ಕೊಟ್ಟು ನೋಡಿ. ಪಕ್ಷಾತೀತವಾಗಿ ನಾನು ಮನವಿ ಮಾಡ್ತಿದ್ದೇನೆ.ನಿಮ್ಮ ಸಹಕಾರ ನನ್ನ ಮೇಲೆ ಇರಲಿ. ನಿಮ್ಮ ಜೊತೆಜೊತೆಗೆ ಕೆಲಸ ಮಾಡ್ತೀನಿ. ಇದು ಅನುಕಂಪದ ಮೇಲೆ ನಡೆಯೋ ಚುನಾವಣೆ ಅಲ್ಲ. ಅಭಿವೃದ್ಧಿ ಮೇಲೆ ನಡೆಯುವ ಚುನಾವಣೆ ‌.ರಾಜ್ಯ ಸರ್ಕಾರದಿಂದ ನಾವು ಅನುದಾನ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಕೇಂದ್ರದಿಂದ ಅನುದಾನ ತಂದು ಕೆಲಸ ಮಾಡ್ತೀವಿ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲ್ಲ; ಹೊಸ ಷರತ್ತು ಮುಂದಿಟ್ಟ ಬಿಸಿಸಿಐ

    ಮಂಡ್ಯದಲ್ಲಿ ಉದ್ಯೋಗ ಮಾಡಿದ್ವಿ. ಇಡೀ ರಾಜ್ಯದ ಯುವಕರು ಉದ್ಯೋಗ ಮೇಳಕ್ಕೆ ಬಂದಿದ್ದರು. 1,200 ಜನರಿಗೆ ಕೆಲಸ ಕೊಡಿಸಿದ್ದೇವೆ. ಇದನ್ನ ಮುಂದುವರೆಸುತ್ತೇವೆ. STಗೆ ಮೀಸಲಾತಿ ಕೊಡಿಸಲು ದೇವೇಗೌಡರು ಹೋರಾಟ ಮಾಡ್ತಿದ್ದಾರೆ. ಪ್ರಧಾನಿ ಮೋದಿ ಅವರ ಜೊತೆ ದೇವೇಗೌಡರು ಮಾತಾಡಿದ್ದಾರೆ. ಎಲ್ಲಾ ಸಮುದಾಯಗಳು ಮುಖ್ಯ ವಾಹಿನಿಗೆ ಬರಬೇಕು. ಈ‌ ನಿಟ್ಟಿನಲ್ಲಿ ನಾವು ಕೆಲಸ ಮಾಡ್ತೀವಿ. ಈ ಬಾರಿ ನನ್ನ ಕೆಲಸ ನೋಡಲು ನನಗೆ ಒಂದು ಅವಕಾಶ ಕೊಡಿ ಎಂದು ವಕೀಲರಿಗೆ ನಿಖಿಲ್‌ ಮನವಿ ಮಾಡಿದರು.

    ಇದೇ ಸಂದರ್ಭದಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಎ.ಪಿ.ರಂಗನಾಥ್ ಅವರು, ಚನ್ನಪಟ್ಟಣ ವಕೀಲರ ಸಂಘದ ಅಧ್ಯಕ್ಷರಾದ ಗಿರೀಶ್ ಟಿ.ವಿ ಅವರು, ಉಪಾಧ್ಯಕ್ಷರಾದ ಎಸ್.ಬಿ ಧನಂಜಯ ಅವರು, ಪ್ರಧಾನ ಕಾರ್ಯದರ್ಶಿ ದೇವರಾಜು ಅವರು ಸೇರಿದಂತೆ ಹಿರಿಯ ಮತ್ತು ಕಿರಿಯ ವಕೀಲರು ಉಪಸ್ಥಿತರಿದ್ದರು. ಇದನ್ನೂ ಓದಿ:  ಸಂಡೂರು ಅಖಾಡದಲ್ಲಿ ಪ್ರಚಾರ – 15 ದಿನದಲ್ಲಿ ಸಿದ್ದರಾಮಯ್ಯ ರಾಜೀನಾಮೆ : ಬಿಎಸ್‌ವೈ

  • ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಜಯ ನಿಶ್ಚಿತ: ಎಂಡಿ ಲಕ್ಷ್ಮೀನಾರಾಯಣ

    ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಜಯ ನಿಶ್ಚಿತ: ಎಂಡಿ ಲಕ್ಷ್ಮೀನಾರಾಯಣ

    ತುಮಕೂರು: ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ (By Election) ಎನ್‌ಡಿಎ (NDA) ಮೈತ್ರಿಕೂಟದ ಅಭ್ಯರ್ಥಿಗಳು ಜಯಗಳಿಸುವುದು ನಿಶ್ಚಿತ ಎಂದು ವಿಧಾನಪರಿಷತ್ ಮಾಜಿ ಸದಸ್ಯ, ನೇಕಾರ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಂಡಿ ಲಕ್ಷ್ಮೀನಾರಾಯಣ (MD Lakshminarayana) ತಿಳಿಸಿದರು.

    ತುರುವೇಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನವೆಂಬರ್ 13 ರಂದು ನಡೆಯುವ ಉಪಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಭರತ್ ಬೊಮ್ಮಾಯಿ, ಸಂಡೂರಿನಲ್ಲಿ ಬಂಗಾರು ಹನುಮಂತು ಹಾಗೂ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ ಎಂದರು. ಇದನ್ನೂ ಓದಿ: 3 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

    ಸರ್ಕಾರದ ಜನವಿರೋಧಿ, ಅಭಿವೃದ್ಧಿ ವಿರೋಧಿ ನೀತಿಗೆ ಜನತೆ ಈ ಮೂರು ಉಪಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದು, ಕಾಂಗ್ರೆಸ್ ಸರ್ಕಾರ ಮುಖಭಂಗ ಅನುಭವಿಸಲಿದೆ ಎಂದು ಹೇಳಿದರು. ಇದನ್ನೂ ಓದಿ: ಸ್ಥಳ ಮಹಜರ್‌ ವೇಳೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿ ಬಂಧನ

  • ಕಾಂಗ್ರೆಸ್ ಕುತಂತ್ರದಿಂದ ನಾನು ಎರಡು ಬಾರಿ ಸೋತಿದ್ದೇನೆ: ಭಾಷಣದ ವೇಳೆ ನಿಖಿಲ್ ಕಣ್ಣೀರು

    ಕಾಂಗ್ರೆಸ್ ಕುತಂತ್ರದಿಂದ ನಾನು ಎರಡು ಬಾರಿ ಸೋತಿದ್ದೇನೆ: ಭಾಷಣದ ವೇಳೆ ನಿಖಿಲ್ ಕಣ್ಣೀರು

    ರಾಮನಗರ: ಎರಡು ಬಾರಿ ನಾನು ಚುನಾವಣೆಯಲ್ಲಿ ಸೋತಿದ್ದೇನೆ. ನಾನು ಏನು ತಪ್ಪು ಮಾಡಿದ್ದೇನೆ ಗೊತ್ತಿಲ್ಲ. ಮಾಜಿ ಪ್ರಧಾನಿ ಮತ್ತು ಮಾಜಿ ಮುಖ್ಯಮಂತ್ರಿ ಮಗನಾಗಿ ಹುಟ್ಟಿರುವುದೇ ನನ್ನ ದುರಾದೃಷ್ಟನೋ ಗೊತ್ತಿಲ್ಲ ಎಂದು ಪ್ರಚಾರದ ವೇಳೆ ನಿಖಿಲ್ ಕುಮಾರಸ್ವಾಮಿ (Nikhil Kumaraswamy)  ಕಣ್ಣೀರು ಹಾಕಿದ್ದಾರೆ.

    ತಾಲೂಕಿನ ಕನ್ನಮಂಗಲ ಗ್ರಾಮದ ಪ್ರಚಾರ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಭಾವುಕರಾದರು. ಈ ಚುನಾವಣೆಯಲ್ಲಿ ನಾನು ಕಣ್ಣೀರು ಹಾಕಬಾರದು ಅಂದುಕೊಂಡಿದ್ದೆ. ಆದರೆ ಸಾಕಷ್ಟು ನೋವುಗಳಿವೆ. ನಾನು ಚುನಾವಣೆಯಲ್ಲೂ ಪೆಟ್ಟು ತಿಂದಿದ್ದೇನೆ. ಜನ ನನ್ನ ಪರವಾಗಿ ಮತ ಹಾಕಿದ್ದಾರೆ. ಆದರೆ ರಾಜಕೀಯ ಷಡ್ಯಂತ್ರಕ್ಕೆ ನಾನು ಬಲಿಯಾಗಿದ್ದೇನೆ. ಬಹಳ ನೋವಿನಲ್ಲಿ ಇದ್ದೇನೆ. ಇವತ್ತು ಪಕ್ಷದ ಕಾರ್ಯಕರ್ತರಿಗೆ ಬೆಲೆ ಕೊಡಬೇಕೆಂದು ಈ ಚುನಾವಣೆಯಲ್ಲಿ ನಿಂತಿದ್ದೇನೆ. ದಯವಿಟ್ಟು ಈ ಬಾರಿ ಈ ಯುವಕನನ್ನು ಗೆಲ್ಲಿಸಿ ಎಂದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಸೇನಾ ವಾಪಸಾತಿ ಬಳಿಕ ಗಡಿಯಲ್ಲಿ ದೀಪಾವಳಿ ಸಿಹಿ ಹಂಚಿಕೊಂಡ ಭಾರತ-ಚೀನಾ ಸೈನಿಕರು 

    ಕಳೆದ ಭಾರಿ ಲೋಕಸಭೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಹಿ ಘಟನೆಯನ್ನು ನೆನೆಸಿಕೊಂಡು ನನ್ನ ಮೂಲಕ ಉತ್ತರ ಕೊಡಬೇಕು ಎಂಬುದು ಕಾರ್ಯಕರ್ತರ ಭಾವನೆಯಾಗಿತ್ತು. ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಏನಾಗಿತ್ತು ಎಂದು ಎಲ್ಲರಿಗೂ ಗೊತ್ತು. ಆಗ ನಾನು ದೇವೇಗೌಡರಿಗೆ ಸಾಹೇಬರಿಗೆ ಮನವಿ ಮಾಡಿದೆ. ಪ್ರಾದೇಶಿಕ ಪಕ್ಷ ಕಟ್ಟುವುದೇ ಕಷ್ಟ ಇದೆ, ರೈತ ಪರವಾಗಿ ಕಾಳಜಿ ಇಟ್ಟುಕೊಂಡು ಈ ಪಕ್ಷವನ್ನು ಕಟ್ಟಿದ್ದಾರೆ. ನಂತರ ಕುಮಾರಣ್ಣ ಅವರು ಅಧಿಕಾರ ಇರಲಿ, ಇಲ್ಲದೇ ಇರಲಿ ರೈತರ ಪರವಾಗಿ ನಿರಂತರವಾಗಿ ಸಾಲಮನ್ನಾ ಮಾಡಿದ್ದಾರೆ. ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದರು. ಇದನ್ನೂ ಓದಿ: ಗ್ಯಾರಂಟಿ ಯೋಜನೆ ಕೊಡಲು ಆಗದ ಕಾಂಗ್ರೆಸ್ ಸರ್ಕಾರ ಯೂಟರ್ನ್ ಸರ್ಕಾರ: ಛಲವಾದಿ ನಾರಾಯಣಸ್ವಾಮಿ

  • ಇದು ರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ, ನಿಖಿಲ್ ಗೆಲ್ಲಿಸಿ ಬದಲಾವಣೆಗೆ ಮುಂದಾಗಬೇಕು: ಯದುವೀರ್ ಒಡೆಯರ್

    ಇದು ರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ, ನಿಖಿಲ್ ಗೆಲ್ಲಿಸಿ ಬದಲಾವಣೆಗೆ ಮುಂದಾಗಬೇಕು: ಯದುವೀರ್ ಒಡೆಯರ್

    – ನಿಖಿಲ್ ಪರ ಯದುವೀರ್ ಮತಯಾಚನೆ

    ರಾಮನಗರ: ಇದು ರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ. ಯುವನಾಯಕ ನಿಖಿಲ್ (Nikhil Kumaraswamy) ಭವಿಷ್ಯದ ನಾಯಕನಾಗುವ ಎಲ್ಲಾ ಗುಣಗಳು ಇವೆ. ಅದಕ್ಕೆ ಇಲ್ಲಿಂದ ಗೆಲ್ಲಿಸಿ ಶಕ್ತಿ ತುಂಬಬೇಕು ಎಂದು ಸಂಸದ ಯದುವೀರ್  (Yaduveer Wadiyar) ಹೇಳಿದ್ದಾರೆ.

    ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೂಡ್ಲೂರು ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಜಯಚಾಮರಾಜೇಂದ್ರ ಒಡೆಯರ್ ಈ ಗ್ರಾಮಕ್ಕೆ ಬಂದಿದ್ದರು. ನನಗೂ ಕೂಡ ಇಂದು ಆ ಭಾಗ್ಯ ಸಿಕ್ಕಿದೆ. ಇಲ್ಲಿನ ರಾಮಮಂದಿರಕ್ಕೆ ಭೇಟಿ ನೀಡಿದ್ದು ಖುಷಿ ಆಯಿತು. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಅವರು ಉತ್ತಮ ಆಡಳಿತ ನೋಡುತ್ತಿದ್ದೀರಿ. ಮತ್ತೊಂದೆಡೆ ರಾಜ್ಯದಲ್ಲಿ ಆರ್ಥಿಕತೆ ಅಧೋಗತಿಗೆ ಹೋಗುತ್ತಿರುವುದನ್ನು ಗಮನಿಸಿದ್ದೆ. ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅನೇಕ ಹಗರಣಗಳ ಕುರಿತು ಹೋರಾಟ ಮಾಡಿ ಯುವ ನಾಯಕನಾಗಿ ನಿಖಿಲ್ ಗುರುತಿಸಿಕೊಂಡಿದ್ದಾರೆ. ಅವರಿಗೆ ಒಂದು ಅವಕಾಶ ನೀಡಿ ಎಂದರು. ಇದನ್ನೂ ಓದಿ: ಸಂಡೂರು| ಅಭ್ಯರ್ಥಿ ಪರ ಪ್ರಚಾರದಿಂದ ಕಾಂಗ್ರೆಸ್‌ ಶಾಸಕರು ದೂರ ದೂರ

    ಅರಸು ಸಮುದಾಯ ಧರ್ಮದ ರಕ್ಷಣೆಗೆ ಇರೋ ಸಮುದಾಯ. ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ. ಧರ್ಮದ ರಕ್ಷಣೆ, ದೇಶದ ಪರಂಪರೆ ಉಳಿಸಲು ಎನ್‌ಡಿಎ ಹೋರಾಟ ಮಾಡುತ್ತಿದೆ. ಮೋದಿ ಹತ್ತು ವರ್ಷಗಳಲ್ಲಿ ವಿಕಸಿತ ಭಾರತ ಮಾಡಿ, ಮುಂದುವರಿದ ರಾಷ್ಟ್ರಗಳ ಮಟ್ಟಕ್ಕೆ ಪ್ರಗತಿ ಕಾಣುತ್ತಿದೆ. ನಮ್ಮ ಭಾರತದ ಪರಂಪರೆ ಉಳಿಸಲು ಎನ್‌ಡಿಎ ಹೋರಾಡುತ್ತಿದೆ. ಹಾಗಾಗಿ ನಿಖಿಲ್ ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬದಲಾವಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಅಬ್ಬರದ ಪ್ರಚಾರ – 10,000 ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದ ಭರತ್ ಬೊಮ್ಮಾಯಿ

  • ಚನ್ನಪಟ್ಟಣ ಚಕ್ರವ್ಯೂಹಕ್ಕೆ ಧುಮುಕಿದ ನಿಖಿಲ್ – ಶುಕ್ರವಾರ ಎನ್‌ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

    ಚನ್ನಪಟ್ಟಣ ಚಕ್ರವ್ಯೂಹಕ್ಕೆ ಧುಮುಕಿದ ನಿಖಿಲ್ – ಶುಕ್ರವಾರ ಎನ್‌ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

    ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆ (Channapatna By Election) ರಾಜಕೀಯದಲ್ಲಿ ಎಲ್ಲವೂ ನಿರೀಕ್ಷೆಯಂತೆ ನಡೆದಿದೆ. ಸಾಕಷ್ಟು ಹೈಡ್ರಾಮಾ, ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಡುವೆ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ಅಲ್ಲಿಗೆ ಚನ್ನಪಟ್ಟಣದಲ್ಲಿ ಯೋಗೇಶ್ವರ್-ನಿಖಿಲ್ ಕುಮಾರಸ್ವಾಮಿ ನಡ್ವೆ ನೇರಾನೇರ ಸ್ಟಾರ್‌ವಾರ್ ನಡೆಯಲಿದೆ.

    ಬೆಂಗಳೂರಿನ ಜೆ.ಪಿ ಭವನದಲ್ಲಿ ನಡೆದ ಸರಣಿ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನೇ ಅಭ್ಯರ್ಥಿ ಮಾಡುವಂತೆ ಒತ್ತಾಯ ಕೇಳಿಬಂತು. ಈ ಬೆನ್ನಲ್ಲೇ ಎನ್‌ಡಿಎ ಟಿಕೆಟ್ ಪಾಲಿಟಿಕ್ಸ್ ಯಡಿಯೂರಪ್ಪ ನಿವಾಸಕ್ಕೆ ಶಿಫ್ಟ್ ಆಯ್ತು. ಧವಳಗಿರಿಯಲ್ಲಿ ನಿಖಿಲ್ ಕುಮಾರಸ್ವಾಮಿ, ಯಡಿಯೂರಪ್ಪನವರ ಕಾಲಿಗೆರಗಿ ಆಶೀರ್ವಾದ ಬೇಡಿದ್ರು. ಯಡಿಯೂರಪ್ಪ ಅವರು ಹೂಗುಚ್ಚ ನೀಡಿ, ವಿಕ್ಟರಿ ಸಿಂಬಲ್ ತೊರಿಸುವ ಮೂಲಕ ತಥಾಸ್ತು ಅಂದ್ರು. ನಿಖಿಲ್ ಕುಮಾರಸ್ವಾಮಿ ಹೆಸ್ರನ್ನು ಖುದ್ದು ಯಡಿಯೂರಪ್ಪ ಪ್ರಕಟಿಸಿದ್ರು. ನಿಖಿಲ್ ಗೆಲುವಿಗಾಗಿ ಹೋರಾಡುವ ಭರವಸೆ ಕೊಟ್ರು. ಕಾರ್ಯಕರ್ತರ ಒತ್ತಡ, ಬದಲಾದ ಸನ್ನಿವೇಶದಲ್ಲಿ ನಿಖಿಲ್ ಹೆಸರು ಘೋಷಿಸಿದ್ದೇವೆ ಅಂತಾ ಹೆಚ್‌ಡಿ ದೇವೇಗೌಡರು ಮತ್ತು ಕುಮಾರಸ್ವಾಮಿ ಹೇಳಿದ್ರು. ಇದನ್ನೂ ಓದಿ: Congress MLA; ಬೇಲೆಕೇರಿ ಅದಿರು ನಾಪತ್ತೆ ಕೇಸ್‌ನಲ್ಲಿ ಸತೀಶ್ ಸೈಲ್ ದೋಷಿ – ಏನಿದು ಪ್ರಕರಣ?

    ಕಾಂಗ್ರೆಸ್, ಯೋಗೇಶ್ವರ್ ವಿರುದ್ಧ ಹರಿಹಾಯ್ದರು. ಇನ್ನು, ಇದೇ ಹುಮ್ಮಸ್ಸಿನಲ್ಲಿ 3ನೇ ಪ್ರಯತ್ನದಲ್ಲಿ ಚುನಾವಣಾ ಚಕ್ರವ್ಯೂಹ ಬೇಧಿಸುವ ಮಾತುಗಳನ್ನು ನಿಖಿಲ್ ಕುಮಾರಸ್ವಾಮಿ ಆಡಿದ್ರು. ಆದ್ರೆ, ನಿಖಿಲ್ ಸ್ಪರ್ಧೆ ನಮಗೆ ಮೊದಲೇ ಗೊತ್ತಿತ್ತು ಎಂದು ಸಿಎಂ ಹೇಳಿದ್ದಾರೆ. ನಾಳೆ ಬಿಜೆಪಿ-ಜೆಡಿಎಸ್ ನಾಯಕರ ಜೊತೆಗೂಡಿ ನಿಖಿಲ್ ಕುಮಾರಸ್ವಾಮಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಬಿಹಾರ, ಆಂಧ್ರಕ್ಕೆ ಬಂಪರ್‌ ಗಿಫ್ಟ್‌ – 6,798 ಕೋಟಿ ಮೊತ್ತದ 2 ರೈಲ್ವೇ ಯೋಜನೆಗಳಿಗೆ ಕೇಂದ್ರ ಕ್ಯಾಬಿನೆಟ್ ಅಸ್ತು

    ಚನ್ನಪಟ್ಟಣದಲ್ಲಿ ಸಿಪಿವೈ ವರ್ಸಸ್ ಹೆಚ್‌ಡಿಕೆ ಕುಟುಂಬ
    * 2013 – ಅನಿತಾ ಕುಮಾರಸ್ವಾಮಿ ಸೋಲಿಸಿದ್ದ ಯೋಗೇಶ್ವರ್
    * 2018 – ಯೋಗೇಶ್ವರ್ ಸೋಲಿಸಿದ್ದ ಹೆಚ್‌.ಡಿ ಕುಮಾರಸ್ವಾಮಿ
    * 2023 – ಯೋಗೇಶ್ವರ್ ಸೋಲಿಸಿದ್ದ ಹೆಚ್‌.ಡಿ ಕುಮಾರಸ್ವಾಮಿ
    * ಮೂರು ಚುನಾವಣೆಗಳಲ್ಲಿ 3ನೇ ಸ್ಥಾನದಲ್ಲಿದ್ದ ಕಾಂಗ್ರೆಸ್
    * 2024 – ಯೋಗೇಶ್ವರ್-ನಿಖಿಲ್ ಕುಮಾರಸ್ವಾಮಿ ಫೈಟ್

    ನಿಖಿಲ್ ಕುಮಾರಸ್ವಾಮಿಗೆ 3ನೇ ಎಲೆಕ್ಷನ್
    * 2019 – ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋಲು (1.28 ಲಕ್ಷ ಮತಗಳ ಅಂತರ)
    * 2023 – ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಸೋಲು (11,000 ಮತಗಳ ಅಂತರ)
    * 2024 – ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ

  • ಎನ್‌ಡಿಎ ಅಭ್ಯರ್ಥಿ ನಿಖಿಲ್‌ಗೆ ಮೋದಿ ಆಶೀರ್ವಾದ ಇದೆ: ಬಿಎಸ್‌ವೈ

    ಎನ್‌ಡಿಎ ಅಭ್ಯರ್ಥಿ ನಿಖಿಲ್‌ಗೆ ಮೋದಿ ಆಶೀರ್ವಾದ ಇದೆ: ಬಿಎಸ್‌ವೈ

    – ನಿಖಿಲ್‌ಗೆ ಜೆಡಿಎಸ್-ಬಿಜೆಪಿ ಶಾಲು ಹೊದಿಸಿದ ಯಡಿಯೂರಪ್ಪ
    – ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ ‘ಮೈತ್ರಿ’ ನಾಯಕರು

    ಬೆಂಗಳೂರು: ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅಂತಾ ಘೋಷಣೆ ಮಾಡಿದ್ದೇವೆ. ಅವರ ಮೇಲೆ ಮೋದಿ ಆಶೀರ್ವಾದ ಇದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (B.S.Yediyurappa) ತಿಳಿಸಿದರು.

    ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿ ಎಂದು ಅಧಿಕೃತವಾಗಿ ಯಡಿಯೂರಪ್ಪ ಘೋಷಿಸಿದರು. ಬಳಿಕ ನಿಖಿಲ್‌ಗೆ ಹೂಗುಚ್ಛ ನೀಡಿ ನೀಡಿದರು. ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳ ಶಾಲನ್ನು ನಿಖಿಲ್‌ಗೆ ಯಡಿಯೂರಪ್ಪ ಹಾಕಿದರು. ಹೂವಿನ ಹಾರ ಹಾಕಿ ಅಭಿನಂದಿಸಿದರು. ಜೊತೆಗೆ ಎಲ್ಲಾ ನಾಯಕರು ವಿಕ್ಟರಿ ಸಿಂಬಲ್ ತೋರಿಸಿ ಪರಸ್ಪರ ಕೈ ಕುಲುಕಿದರು. ಇದನ್ನೂ ಓದಿ: ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ: ಹೆಚ್‌ಡಿಡಿ

    ಈ ವೇಳೆ ಮಾತನಾಡಿದ ಬಿಎಸ್‌ವೈ, ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಅಂತಾ ಘೋಷಣೆ ಮಾಡಿದ್ದೇವೆ. ಮೋದಿ ಆಶೀರ್ವಾದ ಇದೆ. ನಿಖಿಲ್ ಕುಮಾರಸ್ವಾಮಿ ನೂರಕ್ಕೆ ನೂರು ಗೆಲ್ತಾರೆ. ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಆಯ್ಕೆ ಮಾಡಿದ್ದೇವೆ. ಮೋದಿಯವರ ಆಶೀರ್ವಾದ, ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು.

    ನಾವೆಲ್ಲ ಒಟ್ಟಾಗಿ ಸೇರಿದ್ದೇವೆ. ನೂರಕ್ಕೆ ನೂರು ಗೆಲ್ತೇವೆ, ಬಂದು ಭೇಟಿ ಮಾಡ್ತೇವೆ. ಎನ್‌ಡಿಎ ನಾಯಕರು ಪ್ರವಾಸ ಮಾಡ್ತೀವಿ. ಪಕ್ಷಾಂತರ ಮಾಡಿದವರ ಬಗ್ಗೆ ಮಾತಾಡೊಲ್ಲ. ನಾವು ನಮ್ಮ ಅಭ್ಯರ್ಥಿ ಪರ ಕೆಲಸ ಮಾಡ್ತೀವಿ. ನಾವೆಲ್ಲ ಒಟ್ಟಾಗಿ ಕೆಲಸ ಮಾಡ್ತೀವಿ ಎಂದು ಹೇಳಿದರು. ಇದನ್ನೂ ಓದಿ: ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಕೆ

    ದೊಡ್ಡ ಅಂತರದಲ್ಲಿ ನಿಖಿಲ್ ಗೆಲ್ತಾರೆ. ಯೋಗೇಶ್ವರ್ ಬಗ್ಗೆ ನಾನು ಮಾತಾಡೊಲ್ಲ. ನಿಖಿಲ್‌ಗೆ ನಾವು ಬೆಂಬಲ ಕೊಡ್ತೀವಿ ಎಂದು ತಿಳಿಸಿದರು.

  • ಚನ್ನಪಟ್ಟಣಕ್ಕೆ ನಿಖಿಲ್‌ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿ

    ಚನ್ನಪಟ್ಟಣಕ್ಕೆ ನಿಖಿಲ್‌ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿ

    ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ (Channapatna By Election) ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿಯನ್ನು (Nikhil Kumaraswamy) ಜೆಡಿಎಸ್‌ ಕಣಕ್ಕೆ ಇಳಿಸಿದೆ.

    ಪಕ್ಷದ ಕಚೇರಿ ಜೆಪಿ ಭವನದಲ್ಲಿ ಹೆಚ್‌ಡಿ ಕುಮಾರಸ್ವಾಮಿ  ನೇತೃತ್ವದಲ್ಲಿ ಜೆಡಿಎಸ್‌ ನಾಯಕರ ಜೊತೆ ನಡೆಸಿದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ,  ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಿಖಿಲ್ ಸ್ಪರ್ಧೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರಿಗೆ ಕುಮಾರಸ್ವಾಮಿಯನ್ನ ಹೇಗಾದ್ರು ಮುಗಿಸಬೇಕು ಅಂತ ಇದೆ.ಚನ್ನಪಟ್ಟಣದ ಕಾರ್ಯಕರ್ತರು, ಜನರು ಇದಕ್ಕೆ ಉತ್ತರ ಕೊಡಬೇಕು. ನಾನೇ ಚನ್ನಪಟ್ಟಣಕ್ಕೆ ಬಂದು ‌ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಶಾಸಕ ಎ. ಮಂಜು, ಪಕ್ಷಕ್ಕಾಗಿ ನಿಖಿಲ್ ಸ್ಪರ್ಧೆ ಮಾಡುತ್ತಾರೆ. ಎನ್‌ಡಿಎ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

     

    ಯೋಗೇಶ್ವರ್‌ಗೆ (CP Yogeshwar) ಪ್ರಬಲ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಎಂಬ ಒತ್ತಾಯ ಪಕ್ಷದಲ್ಲಿ ಕೇಳಿ ಬಂದಿತ್ತು. ಜಯಮುತ್ತು ನಿಂತರೆ ಯೋಗೇಶ್ವರ್‌ಗೆ ಗೆಲುವು ಸುಲಭ ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು.

    ಕುಮಾರಸ್ವಾಮಿ ತೆರವಾಗಿರುವ ಕ್ಷೇತ್ರಕ್ಕೆ ದೇವೇಗೌಡರ ಕುಟುಂಬದವರೇ ಅಭ್ಯರ್ಥಿ ಆಗಬೇಕು ಎಂದು ಕಾರ್ಯಕರ್ತರ ಒತ್ತಾಸೆಯಾಗಿತ್ತು. ಅಷ್ಟೇ ಅಲ್ಲದೇ ನಿಖಿಲ್ ಅಭ್ಯರ್ಥಿ ಆಗದೇ ಹೋದರೆ ನಾವು ಚುನಾವಣೆ ನಡೆಸುವುದಿಲ್ಲ ಎಂಬ ಸಂದೇಶವನ್ನು ದಳಪತಿಗಳಿಗೆ ಚನ್ನಪಟ್ಟಣ ನಾಯಕರು ರವಾನೆ ಮಾಡಿದ್ದರು. ಈ ಕಾರಣಕ್ಕೆ ಅಂತಿಮವಾಗಿ ಕುಮಾರಸ್ವಾಮಿ ಅವರನ್ನೇ ಜೆಡಿಎಸ್‌ ಕಣಕ್ಕೆ ಇಳಿಸಿದೆ.

  • ಶಿಗ್ಗಾವಿಯಲ್ಲಿ ಭರತ್‌ ಬೊಮ್ಮಾಯಿ, ಸಂಡೂರಿನಲ್ಲಿ ಹನುಮಂತುಗೆ ಬಿಜೆಪಿ ಟಿಕೆಟ್‌

    ಶಿಗ್ಗಾವಿಯಲ್ಲಿ ಭರತ್‌ ಬೊಮ್ಮಾಯಿ, ಸಂಡೂರಿನಲ್ಲಿ ಹನುಮಂತುಗೆ ಬಿಜೆಪಿ ಟಿಕೆಟ್‌

    ನವದೆಹಲಿ: ಉಪಚುನಾವಣೆ (By Election) ಟಿಕೆಟ್ ಘೋಷಣೆ ವಿಚಾರದಲ್ಲಿ ಬಿಜೆಪಿ (BJP) ಮುಂದಿದೆ. ಮೂರು ಕ್ಷೇತ್ರಗಳ ಪೈಕಿ ಇಂದು ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಶಿಗ್ಗಾಂವಿಯಲ್ಲಿ ಬಸವರಾಜ್‌ ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿ (Bharat Bommai), ಬಳ್ಳಾರಿಯ ಸಂಡೂರಿಗೆ ಎಸ್‌ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು  (Bangaru Hanumanthu) ಅವರಿಗೆ ಟಿಕೆಟ್‌ ನೀಡಿದೆ.

    ಚನ್ನಪಟ್ಟಣದಲ್ಲಿ ಎನ್‌ಡಿಎ (NDA) ಅಭ್ಯರ್ಥಿ ಇನ್ನೂ ಘೋಷಣೆಯಾಗದ ಕಾರಣ ಅಭ್ಯರ್ಥಿ ಹೆಸರನ್ನು ಪ್ರಕಟಿಸಿಲ್ಲ. ಬಿಜೆಪಿ ರಾಜ್ಯ ಘಟಕದ ಪಟ್ಟಿ ಬರುವ ಮುನ್ನವೇ ಹೈಕಮಾಂಡ್‌ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಬೆಲ್ಲದ್‌ ಸೇರಿದಂತೆ ಕೆಲ ಬಿಜೆಪಿ ನಾಯಕರು ಬೊಮ್ಮಾಯಿ ಪುತ್ರನ ಪರ ಬ್ಯಾಟಿಂಗ್‌ ಮಾಡಿದ್ದರು.

    ಬಂಗಾರು ಹನುಮಂತು ಅವರು ಜನಾರ್ದನ ರೆಡ್ಡಿ ಆಪ್ತರಾಗಿದ್ದಾರೆ. ಟಿಕೆಟ್‌ ರೇಸ್‌ನಲ್ಲಿ ಬಂಗಾರು ಹನುಮಂತು ಮತ್ತು ಕೆ ಎಸ್ ದಿವಾಕರ್ ಅವರ ಹೆಸರಿತ್ತು. ಕಳೆದ ಚುನಾವಣೆಯಲ್ಲಿ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧಿಸಿ ದಿವಾಕರ್‌ ಪರಾಭವಗೊಂಡಿದ್ದರು.

    ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರಿಗೆಗೆ ನ.13 ರಂದು ಉಪಚುನಾವಣೆ ನಡೆಯಲಿದ್ದರೆ ನ.23 ರಂದು ಫಲಿತಾಂಶ ಪ್ರಕಟವಾಗಲಿದೆ.

    ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. 2008, 2013, 2018 ಹಾಗೂ 2023ರ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸಿ ಸತತವಾಗಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

    ಸಂಡೂರು ಕಾಂಗ್ರೆಸ್ ಶಾಸಕರಾಗಿದ್ದ ಈ ತುಕಾರಾಂ ಅವರು ಬಳ್ಳಾರಿಯಿಂದ ಗೆದ್ದಿದ್ದರಿಂದ ಸಂಡೂರು ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.

    ಚನ್ನಪಟ್ಟಣದಿಂದ ಜೆಡಿಎಸ್ ಶಾಸಕರಾಗಿದ್ದ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭೆಯಿಂದ ಗೆದ್ದು ಕೇಂದ್ರದಲ್ಲಿ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವರಾಗಿದ್ದಾರೆ.

  • ಅಗತ್ಯ ಪೌಷ್ಟಿಕ ಆಹಾರ ವಿತರಣೆಗೆ ಮಿಲೆಟ್ಸ್ ಖರೀದಿ ಹೆಚ್ಚಳ – ಪ್ರಹ್ಲಾದ್ ಜೋಶಿ

    ಅಗತ್ಯ ಪೌಷ್ಟಿಕ ಆಹಾರ ವಿತರಣೆಗೆ ಮಿಲೆಟ್ಸ್ ಖರೀದಿ ಹೆಚ್ಚಳ – ಪ್ರಹ್ಲಾದ್ ಜೋಶಿ

    -2023-24ರ ಮುಂಗಾರು ಋತುವಿನಲ್ಲಿ 12.49 ಎಲ್‌ಎಂಟಿ ಮಿಲೆಟ್ಸ್ ಖರೀದಿ

    ನವದೆಹಲಿ: ದೇಶವಾಸಿಗಳಿಗೆ ಅಗತ್ಯ ಪೌಷ್ಟಿಕ ಆಹಾರ ವಿತರಣೆಗಾಗಿ ಕೇಂದ್ರ ಸರ್ಕಾರ ಮಿಲೆಟ್ಸ್ (Millets) ಖರೀದಿಯನ್ನು ಹೆಚ್ಚಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರ (Central Government) ಮೂರನೇ ಅವಧಿ ಆಡಳಿತದಲ್ಲಿ ಹಿಂದೆಂದಿಗಿಂತ ಅಧಿಕ ಮಿಲೆಟ್ಸ್ ಖರೀದಿ ಮಾಡುತ್ತಿದೆ ಎಂದಿದ್ದಾರೆ.ಇದನ್ನೂ ಓದಿ: ರಾಯಚೂರು | ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಯಂತ್ರೋಪಕರಣ ಕಳ್ಳತನ

    12.49 ಲಕ್ಷ ಮೆಟ್ರಿಕ್ ಟನ್ ಖರೀದಿ:
    2023-24ರ ಮುಂಗಾರು ಮಾರುಕಟ್ಟೆ ಋತುವಿನಲ್ಲಿ ಕೇಂದ್ರ ಸರ್ಕಾರ 12.49 ಲಕ್ಷ ಮೆಟ್ರಿಕ್ ಟನ್ ಮಿಲೆಟ್ಸ್ ಖರೀದಿ ಮಾಡಿದೆ ಎಂದು ತಿಳಿಸಿದ್ದಾರೆ.

     

    ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.170ರಷ್ಟು ಮಿಲೆಟ್ಸ್ ಖರೀದಿ ಹೆಚ್ಚಳ ಕಂಡಿರುವುದು ಗಮನಾರ್ಹ ಸಂಗತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ (NDA) ಸರ್ಕಾರ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಇತರ ಕಲ್ಯಾಣ ಯೋಜನೆಗಳ ಫಲಾನುಭವಿಗಳಲ್ಲಿ ಪೌಷ್ಟಿಕಾಂಶಕ್ಕೆ ಮಹತ್ವ ನೀಡಿದೆ. ಈ ನಿಟ್ಟಿನಲ್ಲಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಮಿಲೆಟ್ಸ್ ಖರೀದಿಯಲ್ಲಿನ ಹೆಚ್ಚಳ ಪ್ರಮುಖವಾಗಿದೆ ಎಂದರು.ಇದನ್ನೂ ಓದಿ: ನಿರಂತರ ಮಳೆಯಿಂದ ಹೆಚ್ಚಿದ ಒಳಹರಿವು – ತುಮಕೂರಿನ ಮಾರ್ಕೋನಹಳ್ಳಿ ಜಲಾಶಯ ಭರ್ತಿ